ವಿಷಯಕ್ಕೆ ಹೋಗು

ಬೇಡನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೇಡನ್
Bedan

ಬೇಡನ್ ಎಂದರೆ ಒಂದು ದೈವದ ಕುಣೀತ ಕರ್ಕಾಟಕ(ಆಟಿ)ತಿಂಗೊಳಿನಲ್ಲಿ ಕೇರಳ ಕಡೆ ಮನೆ ಮನೆಗೆ ಬಂದು ‍ ಜನರ ಕಷ್ಟ ಪರಿಹರಿಸುತ್ತದೆ ಎಂಬ ನಂಬಿಕೆ. ಈ ಬೇಡನ್ ದೈವವನ್ನು ಮಲವೆರ್ ಎನ್ನುವ ಒಂದು ಜನಾಂಗವರು ಕಟ್ಟಿ ಮನೆ ಮನೆಗೆ ಬರುವ ಪದ್ದತಿ.ಮಲಯಾಲದಲ್ಲಿ ವೇಡನ್ ಎಂದು ಕರೆಯುತ್ತಾರೆ []

ವೇಷ,ಕುಣಿತ,ಕ್ರಮ

[ಬದಲಾಯಿಸಿ]

ಈ ದೈವವನ್ನು ಚಿಕ್ಕ ಪ್ರಾಯದ ಮಕ್ಕಳಲ್ಲಿ ಕಟ್ಟಿಸುತ್ತಾರೆ. ಕಿರಾತ (ಬೇಟೆಗಾರ)ನ ರೀತಿಯಲ್ಲಿ ಚಿಕ್ಕ ಪ್ರಾಯದ ಹುಡುಗನಿಗೆ ವೇಷ ಹಾಕಿಸುತ್ತಾರೆ .ಕೆಂಪು ಬಣ್ಣದ ರೇಷ್ಮೆ ಬಟ್ಟೆ ಉಡಿಸಿ ತಲೆಗೆ ನಾಗನ ಚಿತ್ರದ ತಲೆ ಪಟ್ಟಿ ಕಟ್ಟುತ್ತಾರೆ .ಮೋರೆಗೆ ಕೆಂಪು ಮುಖ ವರ್ಣಿಕೆ ಹಾಕಿ ಕಿರಾತನ ರೂಪ ಮಾಡುತ್ತಾರೆ.

ಈ ದೈವ ದೇವಸ್ಥಾನ ,ದೈವಸ್ಥಾನದಲ್ಲಿ ಕಟ್ಟಿ ಕುಣಿಯುವ ಬದಲು ಪ್ರತಿ ಮನೆ ಮನೆಗೆ ಬಂದು ನಲಿಯುತ್ತದೆ.ಚೆಂಡೆ ವಾದ್ಯದವರು ಹೇಳುವ ಬೇಟೆಯ ಹಾಡಿಗೆ ಈ ದೈವ ಕುಣಿಯುತ್ತದೆ ಈ ದೈವ ಮನೆಗೆ ಬಂದರೆ ಐಶ್ವರ್ಯ ಮತ್ತು ಸಂಪತ್ತು ಅಧಿದೇವತೆಯಾದ ಲಕ್ಷ್ಮೀದೇವಿ ನೆಲೆ ಆಗುತ್ತಾಳೆ ಎಂಬುದು ಸಾಮಾನ್ಯ ನಂಬಿಕೆ.ಬೇಡನ್ ದೈವ ಮನೆಗೆ ಬರುವಾಗ ದೀಪ ಉರಿಸಿ ಇಡಬೇಕು ಆಮೇಲೆ ಚೆಂಡೆವಾದಕರು ಮನೆಯವರ ಒಪ್ಪಿಗೆ ಪಡೆದು ಸಂಧಿ ಹೇಳುತ್ತ ಚೆಂಡೆ ಭಾರಿಸಲು ಸುರು ಮಾಡುವಾಗ ಬೇಡನ್ ದೈವ ಮನೆಯ ಎದುರು ಹಿಂದೆ ಮುಂದೆ ಹೋಗುತ್ತ ಕುಣಿಯುತ್ತದೆ .ಕುಣಿದು ಆದನಂತರ ಭಸ್ಮದ ಕುರ್ದಿ ನೀರು ಮಾಡಿ ಒಂದು ಬತ್ತಿ ಉರಿಸಿಕೊಂಡು ಮನೆಯ ಯಜಮಾನಿಯು ಮನೆಯ ಹೊರಗೆ ಬಂದು ಅಂಗಳದ ತೆಂಕು ಭಾಗದಲ್ಲಿ ಬತ್ತಿದೀಪ ಸುತ್ತಲು ಕುರ್ದಿ ನೀರು ಚೆಲ್ಲುತ್ತಾರೆ. ಮನೆ ಮತ್ತು ಸುತ್ತು ಪರಿಸರ ಶುದ್ಧ ಆಗಿ ದುಷ್ಟ ಶಕ್ತಿ ದೂರ ಆಗುತ್ತದೆ ಎನ್ನುವ ನಂಬಿಕೆ. ದೈವ ಕುಣಿದು ಮನೆಯಿಂದ ಹೋಗುವಾಗ ಹಣ, ಅಕ್ಕಿ, ಮಳೆಗಾಲಕ್ಕೆ ಇಟ್ಟ ತೆಂಗಿನಕಾಯಿ ತರಕಾರಿ , ಧಾನ್ಯ, ಉಪ್ಪು ಇತ್ಯಾದಿ ವಸ್ತುಗಳನ್ನು ದಾನ ಕೊಡುವ ಕ್ರಮ.

ಚರಿತ್ರೆ,ನಂಬಿಕೆ

[ಬದಲಾಯಿಸಿ]

ಅರ್ಜುನನು ವನವಾಸದ ಸಮಯದಲ್ಲಿ ಪಾಶುಪತಾಸ್ತ್ರವನ್ನು ಪಡೆಯಲು ಶಿವನನ್ನು ಪೂಜಿಸಲು ಸುರು ಮಾಡುತ್ತಾನೆ.ಶಿವ ಪಾರ್ವತಿಯರು ಭಕ್ತನ ಭಕ್ತಿಯನ್ನು ಪರೀಕ್ಷೆ ಮಾಡಲು ಕಿರಾತನ ವೇಷದಲ್ಲಿ ಕಾಡಿಗೆ ಬರುತ್ತಾರೆ. ಅರ್ಜುನ ತಪಸ್ಸಲ್ಲಿ ಇರುವಾಗ ಕಾಡು ಹಂದಿಯೊಂದು ಬರುತ್ತದೆ ಅವನ ಮನಸ್ಸು ಚಂಚಲ ಆಘಿ ಅದನ್ನು ನೋಡಿ ಅದಕ್ಕೆ ಬಾಣ ಪ್ರಯೋಗಿಸುತ್ತಾನೆ . ಅದೇ ಸಮಯಕ್ಕೆ ಶಿವನೂ ಆ ಹಂದಿಯ ತಲೆಗೆ ಬಾಣ ನಾಟಿಸುತ್ತಾನೆ ಹಂದಿ ಸಾಯುತ್ತದೆ.ಹಂದಿಯ ಮಾಲಿಕತ್ವದದ ಬಗ್ಗೆ ಅರ್ಜುನನಿಗೂ ಕಿರಾತನಿಗೂ ಚರ್ಚೆ ಆಗುತ್ತದೆ ಕೊನೆಗೆ ಯುದ್ದ ಆಗುತ್ತದೆ.ಕಿರಾತನ ಪ್ರಯೋಗಿಸಿದ ಬಾಣ ತಾಗಿ ಅರ್ಜುನೆ ಪ್ರಜ್ಞೆ ತಪ್ಪುತ್ತಾನೆ .ಮರಳಿ ಪ್ರಜ್ಞೆ ಬಂದಾಗ ಅರ್ಜುನೆ ಕಿರಾತನಿಗೆ ಬಾಣ ಪ್ರಯೋಗಿಸುತ್ತಾನೆ ಆದರೆ ಕಿರಾತನನ್ನು ಸೋಲಿಸಲಾಗುವುದಿಲ್ಲ .ಕಿರಾತನ ಸೋಲಿಸುವ ಶಕ್ತಿ (ವರ)ಪಡೆಯಲು ಶಿವಲಿಂಗ ಮಾಡಿ ಪುಷ್ಪ ಅರ್ಚನೆ ಮಾಡುತ್ತಾನೆ.ಶಿವಲಿಂಗದ ಮೇಲೆ ಹಾಕಿದ ಹೂ ಎಲ್ಲವೂ ಕಿರಾತನ ತಲೆ ಮೇಲೆ ಬೀಳುತ್ತದೆ ಆಗ ಶ್ರೀ ಪರಮೇಶ್ವರನೇ ನನ್ನನ್ನು ಪರೀಕ್ಷೆ ಮಾಡಲು ಕಿರಾತ ರೂಪದಲ್ಲಿ ಬಂದಿರುವುದೆಂದು ತಿಳಿದ ಅರ್ಜುನೆ ಉಮಾಮಹೇಶ್ವರನ ಪಾದಕ್ಕೆ ಅಡ್ಡ ಬಿದ್ದು ನಮಸ್ಕರಿಸುತ್ತಾನೆ .ಅರ್ಜುನನ ಭಕ್ತಿಗೆ ಮೆಚ್ಚಿದ ಅರ್ಧನಾರೀಶ್ವರ ಪಾರ್ಥನಿಗೆ ಪಾಶುಪತಾಸ್ತ್ರೊವನ್ನು ದಯಪಾಲಿಸಿ ಕೈಲಾಸಕ್ಕೆ ಹೋಗುತ್ತಾನೆ. ಮಹಾದೇವನ ಈ ರೂಪವೇ ಆಟಿ ತಿಂಗೊಳಲ್ಲಿ ಮನೆ ಮನೆಗೆ ಬಂದು ‍ ಜನರ ಕಷ್ಟ ಪರಿಹರಿಸುತ್ತದೆ ಎಂಬ ನಂಬಿಕೆ

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಬೇಡನ್&oldid=1251613" ಇಂದ ಪಡೆಯಲ್ಪಟ್ಟಿದೆ