ವಿಷಯಕ್ಕೆ ಹೋಗು

ಮನಸ್ಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆಂತರ್ಯ ಇಂದ ಪುನರ್ನಿರ್ದೇಶಿತ)

ಪೀಠಿಕೆ

[ಬದಲಾಯಿಸಿ]
ಮಿದುಳಿನ ಕಪಾಲ ಸಾಮುದ್ರಿಕ ಪ್ರತಿಚಿತ್ರಣ

ಮನಸ್ಸು ಎಂದರೆ ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ, ಮತ್ತು ನೆನಪು ಸೇರಿದಂತೆ ಗ್ರಹಣ ಶಕ್ತಿಗಳ ಸಮೂಹ. ಇದನ್ನು ಸಾಮಾನ್ಯವಾಗಿ ಒಂದು ಜೀವಿಯ ಯೋಚನೆಗಳು ಮತ್ತು ಪ್ರಜ್ಞೆಯ ಸಾಮರ್ಥ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ.

ಇದು ಕಲ್ಪನೆ, ಗುರುತಿಸುವಿಕೆ, ಹಾಗೂ ಮೆಚ್ಚುಗೆಯ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಮನೋಭಾವಗಳು ಹಾಗೂ ಕ್ರಿಯೆಗಳಾಗಿ ಪರಿಣಮಿಸುವ ಅನಿಸಿಕೆಗಳು ಹಾಗೂ ಭಾವನೆಗಳನ್ನು ಸಂಸ್ಕರಿಸುವುದಕ್ಕೆ ಜವಾಬ್ದಾರವಾಗಿದೆ.

ಯಾವುದು ಮನಸ್ಸಿನ ಘಟಕವಾಗಿರುತ್ತದೆ ಮತ್ತು ಅದರ ವಿಶಿಷ್ಟವಾಗಿರುವ ಗುಣಲಕ್ಷಣಗಳೇನು ಎಂಬ ಬಗ್ಗೆ ತತ್ವಶಾಸ್ತ್ರ, ಧರ್ಮ, ಮನೋವಿಜ್ಞಾನ ಮತ್ತು ಜ್ಞಾನಗ್ರಹಣ ವಿಜ್ಞಾನದಲ್ಲಿ ಸುದೀರ್ಘ ಪರಂಪರೆಯಿದೆ.

ಮನಸ್ಸಿನ ಸ್ವರೂಪಕ್ಕೆ ಸಂಬಂಧಿಸಿದಂತೆ ಒಂದು ತೆರೆದ ಪ್ರಶ್ನೆಯೆಂದರೆ ಮನಸ್ಸು-ಶರೀರ ಸಮಸ್ಯೆ. ಇದು ಭೌತಿಕ ಮಿದುಳು ಮತ್ತು ನರವ್ಯವಸ್ಥೆಗೆ ಮನಸ್ಸಿನ ಸಂಬಂಧವನ್ನು ತನಿಖೆ ಮಾಡುತ್ತದೆ. ವಿಜ್ಞಾನಪೂರ್ವ ದೃಷ್ಟಿಕೋನಗಳು ದ್ವಿತ್ವ ಮತ್ತು ಆದರ್ಶವಾದವನ್ನು ಒಳಗೊಂಡಿದ್ದವು. ಇವು ಮನಸ್ಸನ್ನು ಯಾವುದೋ ರೀತಿಯಲ್ಲಿ ಅಭೌತಿಕವೆಂದು ಪರಿಗಣಿಸಿದ್ದವು.[]

ಆಧುನಿಕ ದೃಷ್ಟಿಕೋನಗಳು ಭೌತವಾದ ಮತ್ತು ಕ್ರಿಯಾತ್ಮಕತೆ ಸುತ್ತ ಕೇಂದ್ರೀಕರಿಸುತ್ತವೆ. ಮನಸ್ಸು ಸ್ಥೂಲವಾಗಿ ಮಿದುಳಿಗೆ ಅಭಿನ್ನವಾಗಿದೆ ಅಥವಾ ನರಕೋಶೀಯ ಚಟುವಟಿಕೆಯಂತಹ ಭೌತಿಕ ವಿದ್ಯಮಾನಗಳಿಗೆ ಸರಳೀಕರಿಸಬಲ್ಲದ್ದಾಗಿದೆ ಎಂದು ಇವು ಅಭಿಪ್ರಾಯಪಡುತ್ತವೆ. ಮತ್ತೊಂದು ಪ್ರಶ್ನೆಯು ಯಾವ ಬಗೆಯ ಜೀವಿಗಳು ಮನಸ್ಸುಗಳನ್ನು ಹೊಂದಿರುವುದಕ್ಕೆ ಸಮರ್ಥವಾಗಿವೆ ಎಂಬುವುದಕ್ಕೆ ಸಂಬಂಧಿಸಿದೆ.

ಉದಾಹರಣೆಗೆ, ಮನಸ್ಸು ಮಾನವರಿಗೆ ಅನನ್ಯವಾಗಿದೆಯೇ, ಕೆಲವು ಅಥವಾ ಎಲ್ಲ ಪ್ರಾಣಿಗಳಿಂದಲೂ ಹೊಂದಿದ್ದಂಥದ್ದಾಗಿದೆಯೇ, ಎಲ್ಲ ಜೀವಿಗಳಿಂದ ಹೊಂದಿದ್ದಂಥದ್ದಾಗಿದೆಯೇ, ಯಾವುದೇ ರೀತಿಯಲ್ಲಿ ಅದು ಕಟ್ಟುನಿಟ್ಟಾಗಿ ವ್ಯಾಖ್ಯಾನಿಸಬಲ್ಲ ಲಕ್ಷಣವಾಗಿದೆಯೇ, ಅಥವಾ ಮನಸ್ಸು ಕೆಲವು ಪ್ರಕಾರದ ಮಾನವನಿರ್ಮಿತ ಯಂತ್ರಗಳ ಗುಣಲಕ್ಷಣವೂ ಆಗಬಲ್ಲದೆ ಎಂದು.

ಅದರ ಸ್ವರೂಪ ಏನೇ ಆಗಿದ್ದರೂ, ಮನಸ್ಸೆಂದರೆ ಒಂದು ಜೀವಿಗೆ ತನ್ನ ಪರಿಸರದ ಕಡೆಗೆ ವ್ಯಕ್ತಿನಿಷ್ಠ ಜಾಗೃತಿ ಹಾಗೂ ಉದ್ದೇಶಪೂರ್ವಕತೆ ಹೊಂದಿರುವುದನ್ನು, ಯಾವುದೋ ರೀತಿಯ ಸಾಧನದಿಂದ ಉದ್ದೀಪಕಗಳನ್ನು ಗ್ರಹಿಸುವುದನ್ನು ಮತ್ತು ಅವಕ್ಕೆ ಪ್ರತಿಕ್ರಿಯಿಸುವುದನ್ನು, ಮತ್ತು ವಿಚಾರ ಹಾಗೂ ಅನಿಸಿಕೆ ಸೇರಿದಂತೆ ಪ್ರಜ್ಞೆ ಹೊಂದಿರುವುದನ್ನು ಸಾಧ್ಯವಾಗಿಸುವಂಥದ್ದು ಎಂದು ಸಾಮಾನ್ಯವಾಗಿ ಒಪ್ಪಲಾಗಿದೆ.

ಮನಸ್ಸಿನ ಪರಿಕಲ್ಪನೆಯನ್ನು ಅನೇಕ ಭಿನ್ನ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳು ಅನೇಕ ಭಿನ್ನ ರೀತಿಗಳಲ್ಲಿ ತಿಳಿದುಕೊಂಡಿವೆ. ಕೆಲವು ಮನಸ್ಸು ಮಾನವರಿಗೆ ಅನನ್ಯವಾದ ಗುಣಲಕ್ಷಣವೆಂದು ನೋಡಿದರೆ, ಬೇರೆಯವು ಮನಸ್ಸಿನ ಲಕ್ಷಣಗಳನ್ನು ಜೀವಂತವಲ್ಲದ ವಸ್ತುಗಳಿಗೆ, ಪ್ರಾಣಿಗಳಿಗೆ ಮತ್ತು ದೇವತೆಗಳಿಗೆ ಹೊರಿಸುತ್ತವೆ.

ಮನಸ್ಸನ್ನು ಆಳವಾಗಿ ಅರ್ಥೈಸುವಿಕೆ

[ಬದಲಾಯಿಸಿ]

ಕಣ್ಣಿಗೆ ಕಾಣದ, ಕೈಯಲ್ಲಿ ಮುಟ್ಟಲು ಸಾಧ್ಯವಿಲ್ಲದ, ಆದರೂ ನಿತ್ಯ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಮನಸ್ಸನ್ನು ಆಳವಾಗಿ ಅರಿಯುವುದು ಅನಿವಾರ್ಯವೇ ಎಂದು ಕೇಳಿದರೆ ಅದಕ್ಕೆ ಹೌದು ಅಥವಾ ಇಲ್ಲ ಎಂಬ ನೇರ ಉತ್ತರವಿಲ್ಲ.

ಏಕೆಂದರೆ ಅದಕ್ಕಾಗಿ ಎಲ್ಲರೂ ಬಲವಾದ ಕಾರಣಗಳನ್ನು ಹೊಂದಿರುವುದಿಲ್ಲ.

ಒಳಿತು ಮತ್ತು ಕೆಡುಕುಗಳು

[ಬದಲಾಯಿಸಿ]

ಮನವನ್ನು ಆಳವಾಗಿ ಅರಿಯಲು ಯತ್ನಿಸುವುದರಿಂದ ಈ ಕೆಳಗಿನ ಉಪಯೋಗಗಳನ್ನು ಪಡೆಯಬಹುದು.

  • ನಮ್ಮನ್ನು ನಾವು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುವುದರ ಜೊತೆಗೆ ಇತರರನ್ನೂ ಅರಿಯಲು ಸುಲಭವಾಗುತ್ತದೆ.
  • ಸೂಕ್ತವಾದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರವನ್ನು ಆಯ್ದುಕೊಳ್ಳಲು ಸಹಕಾರಿ.
  • ಪ್ರಪಂಚದ 8 ದಿಕ್ಕುಗಳಿಂದಲೂ ನಡೆಸಲಾಗುವ ಮಾರ್ಕೆಟಿಂಗ್ ಮತ್ತು ಅದರ ದುಷ್ಪರಿಣಾಮಗಳಿಂದ ಪಾರಾಗಲು ಸಾಧ್ಯ.
  • ಉತ್ತಮ ಸಂವಹನ, ಸ್ವಯಂ ಪ್ರೇರಣೆಯಂತಹಾ ಉಪಯೋಗಿ ಕೌಶಲ್ಯಗಳನ್ನೂ ಬೆಳೆಸಿಕೊಳ್ಳಲು ಇದು ನೇರ ದಾರಿ.

ಇಂತಹಾ ಉಪಯೋಗಗಳ ಹೊರತಾಗಿಯೂ ಮನವನ್ನು ಅರಿಯಲು ಹೊರಟರೆ ಕೆಲವು ಸವಾಲುಗಳ ಜೊತೆಗೆ ಸಮಾಜ ಅಂತಹವರನ್ನು ‘ಬೇರೆ ಅರ್ಥದಲ್ಲಿ’ ಪರಿಗಣಿಸುತ್ತದೆ.

ಆಸಕ್ತಿ, ಅಪಾರ ತಾಳ್ಮೆಯನ್ನು ಬಯಸುವ ಈ ಪ್ರಕ್ರಿಯೆ ಈಗಾಗಲೇ ಹೊಂದಿರುವ ಕೆಲವು ನಂಬಿಕೆಗಳನ್ನೂ ಪ್ರಶ್ನಿಸುವಂತೆ ಮಾಡಬಹುದು. ಅಲ್ಲದೆ, ಪ್ರಾರಂಭದಲ್ಲಿ ಇದೊಂದು ಹಿಂಸೆಯಾಗಿ ತೋರಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Clark, Andy (2014). Mindware. 198 Madison Avenue, New York, 10016: Oxford University Press. pp. 14, 254–256. ISBN 978-0-19-982815-9.{{cite book}}: CS1 maint: location (link)
"https://kn.wikipedia.org/w/index.php?title=ಮನಸ್ಸು&oldid=1260903" ಇಂದ ಪಡೆಯಲ್ಪಟ್ಟಿದೆ