ಅಸಿಟೋನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಸಿಟೋನ್‌ನ ರಚನಾಸೂತ್ರ

ಅಸಿಟೋನ್'ಒಂದು ಔದ್ಯಮಿಕ ದ್ರಾವಣ. ಇದು ಬಣ್ಣರಹಿತ,ಜ್ವಲನಶೀಲ ದ್ರಾವಣ. ಇದು ನೀರು,ಈಥರ್,ಎಥೆನಾಲ್ ಮುಂತಾದವುಗಳೊಂದಿಗೆ ಚೆನ್ನಾಗಿ ಬೆರೆಯುವುದರಿಂದ ಹಲವಾರು ಉಪಯೋಗಗಳನ್ನು ಹೊಂದಿದೆ. ಇದು ಮುಖ್ಯವಾಗಿ ದ್ರಾವಕವಾಗಿ ಉಪಯೋಗದಲ್ಲಿದೆ. ಪ್ಲಾಸ್ಟಿಕ್ ಉದ್ಯಮ,ಔಷಧ ಉದ್ಯಮಗಳಲ್ಲಿ ವ್ಯಾಪಕ ಬಳಕೆಯಲ್ಲಿದೆ. ದೊಡ್ಡ ಮಟ್ಟದಲ್ಲಿ ಹಿತ್ತಾಳೆ ಅಥವಾ ತಾಮ್ರದ ವೇಗವರಧಕಗಳನ್ನುಬಳಸಿಕೊಂಡು ಐಸೋಪ್ರೊಪೈಲ್ ಮದ್ಯಸಾರದಿಂದ ತಯಾರಿಸುತ್ತಾರೆ. ಮೆಕ್ಕೆ ಜೋಳದಂತಹ ಪಿಷ್ಟ ಇರುವಂತಹ ವಸ್ತುಗಳು ಇದರ ಉತ್ಪಾದನೆಯ ಕಚ್ಛ್ಹಾವಸ್ತುಗಳು. ಇದು ತೈಲ, ಸೆಲ್ಯುಲೋಸ್,ಕೊಬ್ಬು, ಅಂಟುಗಳು ಮುಂತಾದ ಹಲವಾರು ವಸ್ತುಗಳಲ್ಲಿ ಕರಗುತ್ತದೆ. ಇದು ಹಣ್ಣಿನ ವಾಸನೆ ಉಳ್ಳ ,ಜ್ವಲನಶೀಲ,ಸುಡುವ ದ್ರಾವಣವಾಗಿದೆ. ಅಸಿಟೋನ್ ಸಾಮಾನ್ಯ ಚಯಾಪಚಯ ಪ್ರಕ್ರಿಯೆಗಳ ಮೂಲಕ ಮಾನವ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದು ರಕ್ತ ಹಾಗು ಮೂತ್ರದಲ್ಲಿ ಸಾಮಾನ್ಯವಾಗಿ ಇರುತ್ತದೆ. ಮಧುಮೇಹ ಜನ ದೊಡ್ಡ ಪ್ರಮಾಣದ ಅಸಿಟೋನ್ ಹೊಂದಿರಿತ್ತಾರೆ. ಗರ್ಭಿಣಿ ಮಹಿಳೆಯರು, ಬಾಣಂತಿಯರು ಹಾಗೂ ಮಕ್ಕಳು ಅಸಿಟೋನ್ ಹೆಚ್ಚು ಮಟ್ಟದಲ್ಲಿರುತ್ತದೆ.

"https://kn.wikipedia.org/w/index.php?title=ಅಸಿಟೋನ್&oldid=718925" ಇಂದ ಪಡೆಯಲ್ಪಟ್ಟಿದೆ