ಅಶ್ವಗಂಧಿ
ಗೋಚರ
ಅಶ್ವಗಂಧಿ ಸೊಲನೇಸೀ (ಬದನೆ) ಕುಟುಂಬಕ್ಕೆ ಸೇರಿದ ಸಸ್ಯ. ವೈಜ್ಞಾನಿಕ ಹೆಸರು ವಿತಾನಿಯ ಸಾಮ್ನಿಫೆರ. ಇದಕ್ಕೆ ಹಿರೇಮದ್ದಿನ ಗಿಡ ಎಂಬ ಹೆಸರೂ ಇದೆ. ಈ ಮರ ಭಾರತದ ಎಲ್ಲೆಡೆ ವಿಶೇಷವಾಗಿ ಬೆಳೆಯುತ್ತದೆ. ಉದ್ಯಾನವನಗಳಲ್ಲೂ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಇದರ ಎಲ್ಲ ಭಾಗಗಳೂ ಪ್ರಯೋಜನಕಾರಿಯಾಗಿವೆ. ಕೆಲವು ಪ್ರದೇಶಗಳಲ್ಲಿ ಬೇರುಗಳನ್ನು ಕುದಿಸಿ ತಯಾರಿಸಿದ ಕಷಾಯವನ್ನು ನೆಗಡಿ ಜ್ವರಗಳಿಗೆ ಮದ್ದಾಗಿ ಉಪಯೋಗಿಸುತ್ತಾರೆ. ತೊಗಟೆಯ ರಸ ಒಳ್ಳೆಯದು. ಈ ಎಲೆಗಳಿಂದ ತಯಾರಿಸಿದ ಮುಲಾಮನ್ನು ಗಾಯಗಳಿಗೆ ಹಚ್ಚಲು ಉಪಯೋಗಿಸುತ್ತಾರೆ. ಕಾಯಿಗಳನ್ನು ಜಜ್ಜಿ ಹುಳುಕಡ್ಡಿಯಾದ ಜಾಗಗಳಿಗೆ ಉಜ್ಜುವುದರಿಂದ ಗುಣವಾಗುತ್ತದೆ. ದಕ್ಷಿಣ, ಪೂರ್ವ ಆಫ್ರಿಕಗಳಲ್ಲಿ ಬೇರುಗಳನ್ನು ಅತಿಸಾರರೋಗಕ್ಕೂ ಎಲೆಗಳನ್ನು ಕೀಲುನೋವಿನ ರೋಗಕ್ಕೂ ಉಪಯೋಗಿಸುತ್ತಾರೆ.
ಉಪಯೋಗಗಳು
[ಬದಲಾಯಿಸಿ]ಟಾಂಜಾನಿಯದ ಕೆಲವು ಜನಾಂಗದವರು ಈ ಗಿಡದಿಂದ ತಯಾರಿಸಿದ ಕಷಾಯನ್ನು ವೀರ್ಯವರ್ಧಕ ಮದ್ದಾಗಿ ಉಪಯೋಗಿಸುವರು. ಈ ಬೇರಿನ ಕಷಾಯವನ್ನು ಗರ್ಭಪಾತಕ್ಕಾಗಿ ಪಂಜಾಬಿನಲ್ಲಿ ಉಪಯೋಗಿಸುವರೆಂದು ತಿಳಿದು ಬಂದಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-12-19. Retrieved 2016-10-20.
- ↑ "ಆರ್ಕೈವ್ ನಕಲು". Archived from the original on 2016-12-19. Retrieved 2016-10-20.