ವಿಷಯಕ್ಕೆ ಹೋಗು

ಅಲ್ ಫಾತಿಹಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.

ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಶ್ವಕೋಶಕ್ಕೆ ಸೂಕ್ತವಾಘಿಲ್ಲ. ವಿಕಿಸೋರ್ಸ್‍ಗೆ ಸೇರಿಸಬಹುದು

ಅಲ್-ಫಾತೀಹಾ(Arabic: ٱلۡفَاتِحَةِ, romanized: al-Fātiḥa, lit. 'ಆರಂಭ') ಕುರಾನ್ನ ಮೊದಲ ಅಧ್ಯಾಯವಾಗಿದೆ. ಇದರಲ್ಲಿ ಏಳು ಶ್ಲೋಕಗಳು ಒಳಗೊಂಡಿವೆ. ಇದರಲ್ಲಿ ಮಾರ್ಗದರ್ಶನ ಮತ್ತು ಕರುಣೆಗಾಗಿ ಪ್ರಾರ್ಥನೆ ಒಳಗೊಂಡಿದೆ.

ಅಲ್-ಫಾತಿಹಾ ಅನ್ನು ಮುಸ್ಲಿಂಮರು ಕಡ್ಡಾಯ ಮತ್ತು ಸ್ವಯಂಪ್ರೇರಿತ ಪ್ರಾರ್ಥನೆಯಲ್ಲಿ(ಸಲಾಹ್) ಪಠಿಸಲಾಗುತ್ತದೆ.

ಶ್ಲೋಕಗಳ ಅರ್ಥ

[ಬದಲಾಯಿಸಿ]

ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.

1 ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.

2 ಪ್ರಶಂಸೆಗಳೆಲ್ಲಾ ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ.

3 ಅವನು ಅಪಾರ ದಯಾಳು, ಕರುಣಾಮಯಿ.

4 ಪ್ರತಿಫಲದ ದಿನದ ಮಾಲಕ.

5 (ಓ ಅಲ್ಲಾಹ್) ನಾವು ನಿನ್ನನ್ನು ಮಾತ್ರ ಪೂಜಿಸುತ್ತೇವೆ ಮತ್ತು ನಿನ್ನಿಂದ ಮಾತ್ರ ನೆರವನ್ನು ಬೇಡುತ್ತೇವೆ.

6 ನಮ್ಮನ್ನು ನೇರ ಮಾರ್ಗದಲ್ಲಿ ನಡೆಸು.

7. ನೀನು ಬಹುಮಾನಿಸಿದವರ ಮಾರ್ಗದಲ್ಲಿ (ನಡೆಸು); ನಿನ್ನ ಕೋಪಕ್ಕೆ ತುತ್ತಾದವರ ಮತ್ತು ದಾರಿ ತಪ್ಪಿದವರ ಮಾರ್ಗದಲ್ಲಿ ಅಲ್ಲ.