ಅಲೆನ್ ಜೆ. ಬಾರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೆನ್ ಜೆ. ಬಾರ್ಡ್
ಜನನ (1933-12-18) ಡಿಸೆಂಬರ್ ೧೮, ೧೯೩೩ (ವಯಸ್ಸು ೯೦)
ನ್ಯೂ ಯಾರ್ಕ್ ನಗರ
ರಾಷ್ಟ್ರೀಯತೆAmerican
ಕಾರ್ಯಕ್ಷೇತ್ರChemistry
Electrochemistry
ಸಂಸ್ಥೆಗಳುUniversity of Texas at Austin
ಅಭ್ಯಸಿಸಿದ ವಿದ್ಯಾಪೀಠCity College of New York (B.S., 1955)
Harvard University (M.S., 1956) (Ph.D., 1958)
ಗಮನಾರ್ಹ ಪ್ರಶಸ್ತಿಗಳು
 1. REDIRECT ಟೆಂಪ್ಲೇಟು:No wrap

ಅಲೆನ್ ಜೋಸೆಫ್ ಬಾರ್ಡ್ (ಜನನ ಡಿಸೆಂಬರ್ ೧೮,೧೯೩೩) ಅಮೆರಿಕದ ದ ರಸಾಯನಶಾಸ್ತ್ರಜ್ಞ. ಅವರು ಆಸ್ಟಿನ್ ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಹ್ಯಾಕರ್ಮ್ಯಾನ್-ವೆಲ್ಚ್ ರೀಜೆಂಟ್ಸ್ ಚೇರ್ ಪ್ರೊಫೆಸರ್ ಮತ್ತು ಎಲೆಕ್ಟ್ರೋಕೆಮಿಸ್ಟ್ರಿ ಕೇಂದ್ರದ ನಿರ್ದೇಶಕರಾಗಿದ್ದಾರೆ. ಸ್ಕ್ಯಾನಿಂಗ್ ಎಲೆಕ್ಟ್ರೋಕೆಮಿಕಲ್ ಸೂಕ್ಷ್ಮದರ್ಶಕ, ಅರೆವಾಹಕ ವಿದ್ಯುದ್ವಾರಗಳ ದ್ಯುತಿವಿದ್ಯುಜ್ಜನಕಶಾಸ್ತ್ರಕ್ಕೆ ಅವರು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಮತ್ತು ಸಹ-ರಚನೆಯ ಮೂಲ ಪಠ್ಯಪುಸ್ತಕವನ್ನು ಅಭಿವೃದ್ಧಿಪಡಿಸುವ ತನ್ನ ನವೀನ ಕೆಲಸಕ್ಕಾಗಿ "ಆಧುನಿಕ ವಿದ್ಯುದ್ರಾಸಾಯನಿಕ ವಿಜ್ಞಾನ ದ ತಂದೆ" ಎಂದು ಬಾರ್ಡ್ ಪರಿಗಣಿಸಲಾಗಿದೆ. [೧]

ಜೀವನ[ಬದಲಾಯಿಸಿ]

ಅಲೆನ್ ಜೆ. ಬಾರ್ಡ್ ನ್ಯೂಯಾರ್ಕ್ ನಗರದಲ್ಲಿ ಡಿಸೆಂಬರ್ ೧೮,೧೯೩೩ ರಂದು ಜನಿಸಿದರು. ಅವರು ಬ್ರಾಂಕ್ಸ್ ಹೈಸ್ಕೂಲ್ ಆಫ್ ಸೈನ್ಸ್ಗೆ ವಿದ್ಯಾಭ್ಯಾಸ ನಡೆಸಿದರು. ಮತ್ತು ೧೯೫೫ ರಲ್ಲಿ ನ್ಯೂಯಾರ್ಕ್ ನಗರದ ಕಾಲೇಜ್ನಿಂದ ಪದವಿ ಪಡೆದರು. ನಂತರ ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅವರು ಮಾಸ್ಟರ್ಸ್ ಮತ್ತು ೧೯೫೮ ರಲ್ಲಿ ಪಿ.ಹೆಚ್ಡಿ ಪದವಿ ಪಡೆದರು. ೧೯೫೮ ರಲ್ಲಿ ಆಸ್ಟಿನ್ ನಲ್ಲಿ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಅವರ ಸಂಪೂರ್ಣ ವೃತ್ತಿಜೀವನಕ್ಕಾಗಿ ಅಲ್ಲಿಯೇ ವೃತ್ತಿ ಮಾಡುತ್ತಿದ್ದರು. ಮತ್ತು ಜೀನ್-ಮೈಕೆಲ್ ಸವೆಂಟ್ನ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಅವರು ೧೯೮೭ ರಲ್ಲಿ ಬೇಕರ್ ಲೆಕ್ಚರರ್ ಆಗಿ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದರು. ೧೯೮೮ ರಲ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ರಾಬರ್ಟ್ ಬರ್ನ್ಸ್ ವುಡ್ವರ್ಡ್ ಭೇಟಿ ಪ್ರಾಧ್ಯಾಪಕರಾಗಿದ್ದರು.[೨]

ಪ್ರಕಟನೆಗಳು[ಬದಲಾಯಿಸಿ]

ಬಾರ್ಡ್ ೯೦೦ ಕ್ಕಿಂತ ಹೆಚ್ಚು ಪೀರ್-ರಿವ್ಯೂಡ್ ಸಂಶೋಧನಾ ಪೇಪರ್ಗಳನ್ನು ಪ್ರಕಟಿಸಿದ್ದಾರೆ. ೭೫ ಪ್ರಕಾಶನಗಳನ್ನು ಪ್ರಕಟಿಸಿದ್ದಾರೆ ಮತ್ತು ೨೩ ಕ್ಕೂ ಹೆಚ್ಚಿನ ಪೇಟೆಂಟ್ಗಳನ್ನು ಪ್ರಕಟಿಸಿದ್ದಾರೆ. ಅವರು ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಕೆಮಿಕಲ್ ಈಕ್ವಿಲಿಬ್ರಿಯಂ, ಎಲೆಕ್ಟ್ರೋಕೆಮಿಕಲ್ ಮೆಥಡ್ಸ್ - ಫಂಡಮೆಂಟಲ್ಸ್ ಅಂಡ್ ಅಪ್ಲಿಕೇಷನ್ಸ್, ಮತ್ತು ಇಂಟಿಗ್ರೇಟೆಡ್ ಕೆಮಿಕಲ್ ಸಿಸ್ಟಮ್ಸ್, ಎ ಕೆಮಿಕಲ್ ಅಪ್ರೋಚ್ ಟು ನ್ಯಾನೊಟೆಕ್ನಾಲಜಿ ಎಂಬ ಪುಸ್ತಕವನ್ನು ಬರೆದಿದ್ದಾರೆ. "ಎಲೆಕ್ಟ್ರೋಕೆಮಿಕಲ್ ಮೆಥಡ್ಸ್ - ಫಂಡಮೆಂಟಲ್ಸ್ ಅಂಡ್ ಅಪ್ಲಿಕೇಷನ್ಸ್," ಎಂಬುದು ಇಂಗ್ಲಿಷ್ನಲ್ಲಿ ಎಲೆಕ್ಟ್ರೋಕೆಮಿಸ್ಟ್ರಿ ಕುರಿತು ವ್ಯಾಖ್ಯಾನಿಸುವ ಪಠ್ಯ, ಮತ್ತು ಇದನ್ನು ಸಾಮಾನ್ಯವಾಗಿ "ಬಾರ್ಡ್" ಎಂದು ಕರೆಯಲಾಗುತ್ತದೆ. ಎಲೆಕ್ಟ್ರೋಕೆಮಿಸ್ಟ್ರಿ ವಿವಿಧ ಸಾಂದ್ರತೆಗಳ ನಡುವೆ ಸಹಕಾರ ಮತ್ತು ಸಹಕಾರ ಗುಂಪು ರಚಿಸಲು ೨೦೦೬ರಲ್ಲಿ ಎಲೆಕ್ಟ್ರೋಕೆಮಿಸ್ಟ್ರಿ ಕೇಂದ್ರವನ್ನು ಸ್ಥಾಪಿಸಲಾಯಿತು. ಬೆಳಕನ್ನು ಸೃಷ್ಟಿಸಲು ಎಲೆಕ್ಟ್ರೋಕೆಮಿಸ್ಟ್ರಿ ಲಾಭ ಪಡೆಯಲು ಮೂಲ ಸಂಶೋಧಕರಲ್ಲಿ ಬಾರ್ಡ್ ಮತ್ತು ಅವರ ಗುಂಪು ಒಂದು. ಒಬ್ಬ ವ್ಯಕ್ತಿಯು ಎಚ್ಐವಿ ಮತ್ತು ಡಿಎನ್ಎ ಯನ್ನು ವಿಶ್ಲೇಷಿಸುವುದನ್ನು ನಿರ್ಧರಿಸುವುದು ಸೇರಿದಂತೆ ಬಾರ್ಡ್ ಗುಂಪು ಸಹ "ರಾಸಾಯನಿಕ ಸಮಸ್ಯೆಗಳ ಅಧ್ಯಯನಕ್ಕೆ ಎಲೆಕ್ಟ್ರೋಕೆಮಿಕಲ್ ವಿಧಾನಗಳನ್ನು ತಿಳಿಸಿದ್ದಾರೆ. ಎಲೆಕ್ಟ್ರೋ-ಆರ್ಗ್ಯಾನಿಕ್ ರಸಾಯನಶಾಸ್ತ್ರ, ಫೋಟೋ ಎಲೆಕ್ಟ್ರೋಕೆಮಿಸ್ಟ್ರಿ, ಎಲೆಕ್ಟ್ರೊಜೆನೆರೇಟೆಡ್ ಕೆಮಿಲಮೈನೈಸೆನ್ಸ್, ಮತ್ತು ಎಲೆಕ್ಟ್ರೋನಾಲೈಟಿಕಲ್ ರಸಾಯನಶಾಸ್ತ್ರದಲ್ಲಿ ತನಿಖೆಗಳನ್ನು ನಡೆಸಿದ್ದಾರೆ.[೩]

ವೈಯಕ್ತಿಕ ಜೀವನ[ಬದಲಾಯಿಸಿ]

ಬಾರ್ಡ್ ಅವರು ಫ್ರಾನ್ ಬಾರ್ಡ್ ಅವರನ್ನು ಮದುವೆಯಾದರು. ಅವರಿಗೆ ಇಬ್ಬರು ಮಕ್ಕಳು ಎಡ್ ಮತ್ತು ಸಾರಾ, ಮತ್ತು ನಾಲ್ಕು ಮೊಮ್ಮಕ್ಕಳು ಅಲೆಕ್ಸ್, ಮಾರ್ಲೀ, ರಾಚೆಲ್, ಮತ್ತು ಡೈಲನ್ ಎಂಬ ನಾಲ್ಕು ಜನ ಮೊಮ್ಮಕ್ಕಳನ್ನು ಹೊಂದಿದ್ದರು. [೪]

ಪ್ರಶಸ್ತಿಗಳು[ಬದಲಾಯಿಸಿ]

 • ಅನಾಲಿಟಿಕ್ಸ್ ಕೆಮಿಸ್ಟ್ರಿಯ ಅವಾರ್ಡ್ಎಸಿಎಸ್ ಫಿಶರ್ ಪ್ರಶಸ್ತಿ (೧೯೮೪)
 • ಚಾರ್ಲ್ಸ್ ಎನ್. ರೀಲ್ಲೆ ಪ್ರಶಸ್ತಿ (೧೯೮೭)
 • ಓಲಿನ್-ಪಲ್ಲಾಡಿಯಮ್ ಪದಕ (೧೯೮೭)
 • ಪೂರ್ವ ವಿಶ್ಲೇಷಣಾತ್ಮಕ ಸಿಂಪೋಸಿಯಮ್ ಪ್ರಶಸ್ತಿ (೧೯೯೦)
 • ಲೈನಸ್ ಪಾಲಿಂಗ್ ಪ್ರಶಸ್ತಿ (೧೯೯೮)
 • ಕೆಮಿಕಲ್ ಸೈನ್ಸಸ್ನಲ್ಲಿ ಎನ್ಎಎಸ್ ಪ್ರಶಸ್ತಿ (೧೯೯೮)
 • ಪ್ರೀಸ್ಟ್ಲಿ ಮೆಡಲ್ (೨೦೦೮)
 • ವೋಲ್ಫ್ ಪ್ರಶಸ್ತಿ (೨೦೦೮)
 • ನ್ಯಾಷನಲ್ ಮೆಡಲ್ ಆಫ್ ಸೈನ್ಸ್ (೨೦೧೧)
 • ಎನ್ರಿಕೊ ಫೆರ್ಮಿ ಪ್ರಶಸ್ತಿ (೨೦೧೩)

೧೯೯೦ರಲ್ಲಿ ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ನ ಫೆಲೋ ಆಗಿ ಆಯ್ಕೆಯಾದರು. ಬಾರ್ಡ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ಗೆ ಆಯ್ಕೆಯಾದರು. ಫೆಬ್ರವರಿ ೧,೨೦೧೩ ರಂದು, ಅಧ್ಯಕ್ಷ ಬರಾಕ್ ಒಬಾಮಾ ಅವರು ಅಲೆನ್ ಬಾರ್ಡ್ ಮತ್ತು ಜಾನ್ ಗುಡ್ನೌಗ್ ಅವರನ್ನು ರಾಷ್ಟ್ರೀಯ ಪದಕಗಳ ವಿಜ್ಞಾನದೊಂದಿಗೆ ಪ್ರಸ್ತುತಪಡಿಸಿದರು. "ಈ ಸ್ಪೂರ್ತಿದಾಯಕ ಅಮೆರಿಕನ್ ನಾವೀನ್ಯತೆಯನ್ನು ಗೌರವಿಸಲು ನಾನು ಹೆಮ್ಮೆಪಡುತ್ತೇನೆ" ಎಂದು ಒಬಾಮಾ ಹೇಳಿಕೆಯನ್ನು ನೀಡಿದ್ದಾರೆ. [೫]

ಉಲ್ಲೇಖಗಳು[ಬದಲಾಯಿಸಿ]