ಅಲಂಕಾರದ ಎಲೆಸಸ್ಯಗಳು ಮತ್ತು ಬೇಲಿಗಳು

ವಿಕಿಪೀಡಿಯ ಇಂದ
Jump to navigation Jump to search

ಉದ್ಯಾನವನದಲ್ಲಿ ವಿವಿಧ ಆಕಾರ, ಬಣ್ಣಗಳಲ್ಲಿ ಆಕರ್ಷಕವಾಗಿ ಎಲೆ ಬಿಡುವ ಸಸ್ಯಗಳ ಹೆಸರು ಅಲಂಕಾರದ ಎಲೆ ಸಸ್ಯಗಳು (ಆರ್ನಮೆಂಟಲ್ ಫೋಲಿಯೇಜ್ ಪ್ಲಾಂಟ್ಸ್). ಮನೆಗಳ ಸುತ್ತ ಮತ್ತು ಉದ್ಯಾನದಲ್ಲಿ ಹುಲ್ಲು ವಿವಿಧ ಭಾಗಗಳು ಮುಂತಾದುವನ್ನು ಬೇರ್ಪಡಿಸಲು ಬೆಳೆಸುವ ಸಸ್ಯಗಳ ಸಾಲುಗಳಿಗೆ ಅಲಂಕಾರದ ಬೇಲಿಗಳೆಂದು ಹೆಸರು (ಹೆಜ್ ಪ್ಲಾಂಟ್ಸ್). ಜನಪ್ರಿಯವಾಗಿರುವ ಕೆಲವು ಅಲಂಕಾರ ಸಸ್ಯಗಳು ಹೀಗಿವೆ: ಅಗ್ಲೊನಿಮ ಅಲೋಕೇಷಿಯ, ಅಲೊಪಿಕ್ಟಸ್, ಅಲ್ಪಿನಿಯ, ಅಂತೂರಿಯಮ್ ಅಸ್ಪರ್ಯಾಗಸ್, ಕಾರ್ಡುಲೋವಿಕ, ಕ್ರೋಟನ್, ಡ್ರೆಸೀನ, ಕೇದಗೆ (ಪೆಂಡನಸ್), ಕ್ರಿಸ್ಟ್ಯಾಂತಸ್, ಸೈಪೆರಸ್, ಅಂತೆರಿಕಮ್ ಇತ್ಯಾದಿ. ಅಲಂಕಾರದ ಬೇಲಿಗಳು ಸೌಂದರ್ಯ ಸಾಧನಗಳಾಗಿರುವುದರ ಜೊತೆಗೆ ಉದ್ಯಾನ ರಕ್ಷಕಗಳೂ ಆಗಿರಬೇಕು. ಮುಳ್ಳು ಪೊದೆಗಳು, ದಟ್ಟವಾಗಿ ಹರಡಿ ಬೆಳೆಯುವ ಕುರುಚಲು ಗಿಡಗಳು ಈ ಸಾಲಿಗೆ ಸೇರಿವೆ. ಇಂಥ ಸಸ್ಯಗಳನ್ನು ಸರಿಯಾಗಿ ಕತ್ತರಿಸಿ ಆಕಾರದಲ್ಲಿಟ್ಟರೆ ಬೇಲಿ ಸುಂದರವಾಗಿ ಕಾಣುವುದು. ಜನಪ್ರಿಯವಾಗಿರುವ ಕೆಲವು ಅಲಂಕಾರದ ಬೇಲಿ ಸಸ್ಯಗಳ ಹೆಸರು ಹೀಗಿವೆ : ಕ್ಲೀರೊಡೆಂಡ್ರಾನ್, ಅಕ್ಯಾಲಿಫ, ದಾಸವಾಳ, ಅಲ್ಲಮಂಡ. ಗುಲಾಬಿ, ಬೊಗನ್ವಿಲ್ಲ, ಟೆಕೊಮ ಇತ್ಯಾದಿ ತೋಟಗಾರಿಕೆ

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: