ವಿಷಯಕ್ಕೆ ಹೋಗು

ಅಲ್ಲಮಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲ್ಲಮಂಡ
Allamanda cathartica
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Allamanda

Species

See text.

Synonyms[]
  • Orelia Aubl.

ಅಪೊಸೈನೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯಜಾತಿ. ಇದು ಬಹುವಾರ್ಷಿಕ ಪೊದೆಸಸ್ಯವಾಗಿರುವುದರಿಂದ ತೋಟಗಾರಿಕೆಯಲ್ಲಿ ಉಪಯುಕ್ತವೆನಿಸಿದೆ. ಬಳ್ಳಿಯಾಗಿಯೂ ಬೆಳೆಯುವುದುಂಟು.

ಸಸ್ಯ ಲಕ್ಷಣ

[ಬದಲಾಯಿಸಿ]

ವರ್ಷವಿಡೀ ಗಂಟೆಯಾಕಾರದ ಸುಂದರ ಹೂ ಬಿಡುತ್ತದೆ. ಹಳದಿ ಬಣ್ಣವಲ್ಲದೆ ಬಿಳಿ, ನೇರಳೆ, ಗುಲಾಬಿ, ಕೇಸರಿ ಬಣ್ಣದ ಹೂವುಗಳನ್ನು ಕಾಣಬಹುದು. ಅಲ್ಲಮಂಡ ಸಸ್ಯಗಳ ಕಾಂಡ ಆಕಾರದಲ್ಲಿ ಗುಂಡು. ಎಳೆಯ ಬಳ್ಳಿಯ ಬಣ್ಣ ಹಸಿರು. ಬಲಿತ ಮೇಲೆ ಬೂದಿ ಬಣ್ಣ ತಳೆಯುತ್ತದೆ. ಅಲ್ಲಮಂಡದ ವಿವಿಧ ಪ್ರಭೇದಗಳನ್ನು ಅನುಸರಿಸಿ ಎಲೆಗಳು ಆಕಾರಗಳು ವಿಧವಿಧವಾಗಿರುತ್ತವೆ. ಗಿಣ್ಣಿನಲ್ಲಿ ಎಲೆಗಳು ವೃತ್ತಾಕಾರದಲ್ಲಿ ಜೋಡಣೆಗೊಂಡಿರುತ್ತವೆ. ಕೆಲವು ಸಸ್ಯಗಳಲ್ಲಿ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಎಲೆಗಳ ಅಂಚು ನಯ. ಹೂಗಳು ಸಾಮಾನ್ಯವಾಗಿ ದ್ವಿತೀಯ ಹಂಬುಗಳ (ಸೈಡ್ ಷಾಟ್ಸ್‌) ತುದಿಯಲ್ಲಿರುತ್ತವೆ. ಮೊಗ್ಗು ಕಳಸದಾಕಾರ.

ಪ್ರಭೇದಗಳು

[ಬದಲಾಯಿಸಿ]

ಅಲ್ಲಮಂಡದ ಕೆಲವು ಪ್ರಭೇದಗಳು :

  1. ಅಲ್ಲಮಂಡ ನಿರಿಫೋಲಿಯ-ತವರೂರು ದಕ್ಷಿಣ ಅಮೆರಿಕ ಖಂಡದ ಬ್ರೆಜಿಲ್.
  2. ಅಲ್ಲಮಂಡ ನೊಬಿಲಿಸ್ ಅತ್ಯುತ್ತಮ ಪ್ರಭೇದ ಎಂದು ಪರಿಗಣಿಸಲಾಗಿದೆ.
  3. ಅಲ್ಲಮಂಡ ಗ್ರಾಂಡಿಫ್ಲೋರ-ತವರೂರು ಬ್ರೆಜಿಲ್.
  4. ಅಲ್ಲಮಂಡ ಕ್ಯಾಥರ್ಟಿಕ.

ಔಷಧೀಯ ಸಸ್ಯ

[ಬದಲಾಯಿಸಿ]

ಕನ್ನಡದಲ್ಲಿ ಅಲ್ಲಮಂಡದ ಹೆಸರು ಅರಸಿನ್ಹು. ಲಂಬ ಪುಷ್ಪ, ಲಂಬಾಸ್, ದೇವಕುಸುಮ, ಆಭರಣ ಪುಷ್ಪ, ಮಿಠಾಯಿ ಹೂ, ಗೋಲ್ಡನ್ ಟ್ರಂಫೆಟ್ ಎಂದೂ ಇದನ್ನು ಕರೆಯುತ್ತಾರೆ. ಈ ಜಾತಿ ಪೊದರಾಗಿಯೊ ಅಥವಾ ಸಣ್ಣ ಮರವಾಗಿಯೊ ಬೆಳೆಯುತ್ತದೆ. ಮೂರು ನಾಲ್ಕು ಗಿಣ್ಣುಗಳಿರುವಂತೆ ಕೊಂಬೆಗಳನ್ನು ಕತ್ತರಿಸಿ ಮೊದಲು ಕುಂಡಗಳಲ್ಲಿ ನೆಟ್ಟು ಬೆಳೆಸುತ್ತಾರೆ. ಇದರ ತೊಗಟೆ ಜಲೋದರ ಬೇನೆಯಲ್ಲಿ ಉಪಯುಕ್ತವೆನಿಸಿದೆ. ಮುಂಡ ಜನಾಂಗದವರು ಹಾವು ಕಚ್ಚಿದಾಗ ಬೇರನ್ನು ಔಷಧಿಯಾಗಿ ಬಳಸುತ್ತಾರೆ. ಈ ಹೂವಿನಲ್ಲಿ ಇರಿಡೋಯ್ಡ್ ಲ್ಯಾಕ್ಟೋನ್, ಫ್ಲುಮೆರೆಸಿನ್ ಎನ್ನುವ ರಾಸಾಯನಿಕ ಅಂಶವಿದೆ. ಲಿವರ್ ಟ್ಯುಮರ್, ಜಾಂಡೀಸ್, ಸ್ಪ್ಲೆನೋಮೆಗಾಲಿ ಮತ್ತು ಮಲೇರಿಯಾ ಕಾಯಿಲೆಯ ಚಿಕಿತ್ಸೆಯಲ್ಲಿ ಬಳಕೆಯಾಗುತ್ತದೆ. ಹೂವುಗಳು ಕ್ಯಾರ್ಸಿನೋಮೋ ಕೋಶಗಳು ದ್ವಿಗುಣಗೊಳ್ಳದಂತೆ ತಡೆಯುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • Allamanda cathartica. In: Francis, J. K. Wildland Shrubs of the United States and its Territories. USDA Forest Service, IITF, Shrub Sciences Laboratory.
  • (Portuguese) Allamanda. Flora Brasiliensis.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  1. "World Checklist of Selected Plant Families". Retrieved May 22, 2014.
"https://kn.wikipedia.org/w/index.php?title=ಅಲ್ಲಮಂಡ&oldid=732093" ಇಂದ ಪಡೆಯಲ್ಪಟ್ಟಿದೆ