ಅಂತೂರಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Anthurium
Anthurium sp.
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಪಂಗಡ:
ಕುಲ:
Anthurium

Species

See List of species

Synonyms[೧]

ಅಂತೂರಿಯಮ್ ಏರೇಸೀ ಕುಟುಂಬಕ್ಕೆ ಸೇರಿದ ಒಂದು ಜನಪ್ರಿಯ ಅಲಂಕಾರಿಕ ಸಸ್ಯ. ಈ ಜಾತಿಯ ಅನೇಕ ಪ್ರಭೇದಗಳು ಸುಂದರವಾದ ಎಲೆ, ಹೂಗೊಂಚಲ ಕವಚ (ಸ್ಪೇತ್) ಇರುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು. ಮಧ್ಯ ಅಮೆರಿಕದ ಮೂಲ ನಿವಾಸಿಗಳು ಅಂತೂರಿಯಮ್ ಸಸ್ಯಗಳನ್ನು ಮನೆಯ ಕೈತೋಟಗಳಲ್ಲಿ ಮತ್ತು ಉದ್ಯಾನವನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಇವುಗಳ ಹೂಗೊಂಚಲುಗಳನ್ನು ಮೇಜಿನ ಅಲಂಕಾರಕ್ಕಾಗಿ ಬಳಸುತ್ತಾರೆ. ಈ ಜಾತಿಯಲ್ಲಿ ಸು. 500 ಪ್ರಭೇದಗಳು ಇವೆ. ಸಾಮಾನ್ಯವಾಗಿ ಇವು 1-2 ಮೀಟರ್ ಎತ್ತರ ಬೆಳೆಯುವ ಮೂಲಿಕೆ ಬಗೆಯ ಸಸ್ಯಗಳು. ತಾಳು ಮೆದುವಾಗಿರುತ್ತದೆ. ಕೆಲವು ಬಗೆಗಳಲ್ಲಿ ದೃಢವಾಗೂ ಇರುತ್ತದೆ. ಬೆಳೆ ಬಹುಕಾಲ ನಿಲ್ಲುತ್ತದೆ. ಈ ಸಸ್ಯಗಳು ಅಡರು ಬಳ್ಳಿಗಳಾಗಿಯೂ ಇರಬಹುದು. ಎಲೆ ಸರಳ ರೀತಿಯದು. ಹೃದಯಾಕಾರ, ಅಂಬಿನಾಕಾರ ಮತ್ತು ಈಟಿಯಾಕಾರದಲ್ಲಿರಬಹುದು. ಸಾಮಾನ್ಯವಾಗಿ ಎಲೆಯ ಬಣ್ಣ ಹಸಿರು. ಅಲಂಕಾರ ಜಾತಿಯ ಬಗೆಗಳಲ್ಲಿ ವಿವಿಧ ಬಣ್ಣಗಳಿರುತ್ತವೆ. ಎಲೆತೊಟ್ಟು ಉದ್ದ ಅಥವಾ ಮೋಟು; ಬಣ್ಣ ಮತ್ತು ಆಕಾರಗಳಲ್ಲಿ ವೈವಿಧ್ಯವುಂಟು. ಬೇರು ಗಡ್ಡೆರೂಪದ್ದು ಹೂಗೊಂಚಲು ಸ್ಪೇಡಿಕ್್ಸ ಮಾದರಿಯದು. ಇವುಗಳ ಕೆಳಭಾಗದಲ್ಲಿ ಬಣ್ಣಬಣ್ಣದ ಹೂಗೊಂಚಲ ಕವಚಗಳು ಇರುತ್ತವೆ. ಹೂಗಳು ಉಪಪುಷ್ಪಪತ್ರಗಳಿಂದ ಕೂಡಿದ್ದು ತೊಟ್ಟಿಲ್ಲದೆ ದಿಂಡಿಗೆ ಸೇರಿಕೊಂಡಿರುತ್ತವೆ. ದ್ವಿಲಿಂಗಪುಷ್ಟಗಳಾದ ಅವುಗಳಲ್ಲಿ 5 ದಳಗಳೂ 5 ಪುಷ್ಪಪತ್ರಗಳೂ ಕೂಡಿಕೊಂಡಿವೆ. 5 ಕೇಸರಗಳೂ 5 ವಿಭಾಗವಾದ ಅಂಡಕೋಶವೂ ಇವೆ.

ಪ್ರಬೇಧಗಳು[ಬದಲಾಯಿಸಿ]

ಅಂತೂರಿಯಮ್ ಆ್ಯಂಡ್ರಸಿನಮ್: ಈ ಪ್ರಭೇದ ಕೊಲಂಬಿಯ ದೇಶದ್ದು. ಈ ಸಸ್ಯವನ್ನು 1876 ರಲ್ಲಿ ಎಡ್ಮಂಡ್ ಆ್ಯಂಡ್ರೆ ಎಂಬುವನು ಮೊದಲು ವಿವರಿಸಿದ ಕಾರಣ ಈ ಹೆಸರು ಬಂದಿದೆ. ಕಾಂಡ ಕುಳ್ಳಾಗಿ ನೇರವಾಗಿ ಬೆಳೆಯುತ್ತದೆ. ಎಲೆಯ ತೊಟ್ಟುಗಳು ತೆಳುವಾಗಿ ಎಲೆಗಳಿಗಿಂತ ಉದ್ದವಾಗಿರುತ್ತವೆ. ದೀರ್ಘಚತುರಸ್ರಾಕಾರದ ಈ ಎಲೆಗಳು ಕರಣೆಯಾಕಾರ ಅಥವಾ ಹೃದಯಾಕಾರವಾಗಿರುತ್ತವೆ; ಬಣ್ಣ ಹಸಿರು. ಕಿತ್ತಳೆಯ ಬಣ್ಣದ ಹೂಗೊಂಚಲ, ಕವಚ ನೆಲಕ್ಕೆ ಸಮಾನಾಂತರವಾಗಿದ್ದು ದಪ್ಪನಾಗಿ ಹೃದಯಾಕಾರದಲ್ಲಿರುತ್ತದೆ. ಹೂಗೊಂಚಲು ಸ್ಪೇಡಿಕ್್ಸ ಮಾದರಿಯದು. ಸು. 152 ಮಿ.ಮೀ. ಉದ್ದವಾಗಿದ್ದು ಹಳದಿ ಬಣ್ಣಕ್ಕಿರುತ್ತದೆ. ಅಂತೂರಿಯಮ್ ಕ್ರಿಸ್ಟಲೈನಮ್ ಎಂಬುದು ಈ ಜಾತಿಯ ಇನ್ನೊಂದು ಪ್ರಭೇದ. ಇದರ ಮೂಲಸ್ಥಾನ ಕೊಲಂಬಿಯ ಅಥವಾ ಪೆರು. ಹಸಿರು ಬಣ್ಣದ ಮೃದುವಾದ ಎಲೆಯ ಬುಡದ ವಿಭಾಗಗಳು ಒಂದರಮೇಲೊಂದು ಇರುತ್ತವೆ. ಹೂಗೊಂಚಲ ಕವಚ ಬಹಳ ಕಿರಿದು. ಆಕಾರ ನೀಳಚತುರಸ್ರ. ತುದಿ ಮೊನಚು. ನೆಲಕ್ಕೆ ಸಮಾನಾಂತರವಾಗಿ ಅಥವಾ ಕೆಳಮುಖವಾಗಿ ಬಾಗಿರುತ್ತದೆ. ಹೂಗೊಂಚಲು ಸ್ಪೇಡಿಕ್ಸ್ ಮಾದರಿಯದು. ಅಂತೂರಿಯಮ್ ಮೆಗಸ್ಪಿಕಮ್ ಎಂಬುದು ಈ ಜಾತಿಯ ಮತ್ತೊಂದು ಪ್ರಭೇದ. ಇದು ಕೂಡ ಕೊಲಂಬಿಯ ಮೂಲದ್ದು. ಇದರ ಎಲೆಗಳ ತೊಟ್ಟುಗಳ ಮೇಲುಭಾಗದಲ್ಲಿ ರೆಕ್ಕೆಗಳು ಇರುತ್ತವೆ. ಚತುರ್ಮುಖಿ ಎಲೆಗಳು ಹೃದಯಾಕಾರ ಅಥವಾ ಕರಣೆಯಾಕಾರವಾಗಿ 0.5-1ಮೀ. ಮೀಟರ್ ಉದ್ದವಾಗಿರುತ್ತವೆ. ಬಿಳಿಯ ನಾಳಗಳು ಪರಮುಖವಾಗಿ ಎದ್ದುಕಾಣುತ್ತ ಅಂಚಿನಲ್ಲಿ ಸೇರಿಕೊಂಡಿರುತ್ತವೆ. ಹಸಿರುಬಣ್ಣದ ಹೂಗೊಂಚಲು ಸ್ಪೇಡಿಕ್ಸ್ ಮಾದರಿಯದು. ಅಂತೂರಿಯಮ್ ವಾರೊಕ್ಯೂಯೆನಮ್ ಎಂಬ ಇನ್ನೊಂದು ಪ್ರಭೇದ ಮೂಲತಃ ಮೆಕ್ಸಿಕೋದೇಶದ್ದು. ಇದಕ್ಕೆ ವಾರೊಕ್ಯೂ ಎಂಬ ಪ್ರಸಿದ್ದ ಅಂತೂರಿಯಮ್ ಬೇಸಾಯಗಾರನ ಹೆಸರನ್ನೇ ಇಟ್ಟಿದೆ. ಇದರ ಎಲೆಗಳ ತೊಟ್ಟುಗಳು ಗುಂಡಾಗಿರುತ್ತವೆ. ಎಲೆ 1.2 ಮೀಟರ್ ಉದ್ದವಾಗಿ ನೀಳಾಕಾರ, ದೀರ್ಘಚತುರಸ್ರಾಕಾರ ಅಥವಾ ಹೃದಯಾಕಾರವಾಗಿರುತ್ತವೆ. ಲಂಬಾಗ್ರ ತುದಿಯುಳ್ಳ ಎಲೆಗಳ ಮೇಲುಭಾಗ ಮೃದುವಾಗಿರುತ್ತದೆ. ಅದರ ಎರಡುಪಕ್ಕದ ನಾಳಗಳು ಅಂಚಿಗೆ ಸಮಾನಾಂತರವಾಗಿ ಮುಖ್ಯನಾಳದಿಂದ ಹೊರಡುತ್ತವೆ. ಸ್ಪೇಡಿಕ್್ಸ ಮಾದರಿಯ ಹೂಗೊಂಚಲು 0.3ಮೀಟರ್ ಉದ್ದವಾಗಿರುತ್ತದೆ. ಹೂಗೊಂಚಲಕವಚ ಗೊಂಚಲ ತಳಭಾಗದಲ್ಲಿ ಸರಿಯಾಗಿ ಹೊಂದಿಕೊಳ್ಳುತ್ತದೆ. ಅಂತೂರಿಯಮ್ ವಿಚ್ಚೈ ಈ ಜಾತಿಯ ಇನ್ನೊಂದು ಪ್ರಭೇದ. ಇಂಗ್ಲೆಂಡಿನ ವಿಚ್್ಚ ಎಂಬ ಸಸ್ಯ ಮಾರಾಟಗಾರನ ಜ್ಞಾಪಕಾರ್ಥವಾಗಿ ಈ ಹೆಸರು ಬಂದಿದೆ. ಈ ಪ್ರಭೇದದ ಮೂಲಸ್ಥಾನ ಕೊಲಂಬಿಯ. ಈ ಬಗೆ ಎತ್ತರವಾಗಿ ಬೆಳೆಯುವಂಥದ್ದು. ಇದರ ಕಾಂಡ ಸು. 1 ಮೀ. ಎತ್ತರವಾಗಿರುತ್ತದೆ. ಎಲೆಯ ತೊಟ್ಟು ಕೋನಾಕಾರವಾಗಿರುತ್ತದೆ. ಎಲೆ ತೆಳ್ಳಗೆ ಕೋಲುಕೋಲಾಗಿ ದೀರ್ಘಚತುರಸ್ರಾಕಾರದಲ್ಲಿ 1.2 ಮೀ. ಉದ್ದವಾಗಿರುತ್ತದೆ. ಅದರ ತುದಿ ಮೊನಚಾಗಿದ್ದು ಲೋಹದ ಹಸುರು ಬಣ್ಣದಿಂದ ಕೂಡಿರುತ್ತದೆ. ಬಿಳಿಯನಾಳಗಳು ಎಲೆಯ ಮೇಲೆ ಪ್ರಧಾನವಾಗಿ ಎದ್ದು ಕಾಣುತ್ತವೆ. ಹೂಗೊಂಚಲು ಸ್ಪೇಡಿಕ್ಸ್ ಮಾದರಿಯದು; 0.75 ಮೀ. ತೊಟ್ಟಿನ ಮೇಲಿರುತ್ತದೆ. ಅಂತೂರಿಯಮ್ ಸ್ಕರ್ಜೆರಿಯಾನಮ್ ಎಂಬುದು ಈ ಜಾತಿಯ ಮತ್ತೊಂದು ಪ್ರಭೇದ. ಇದು ಗ್ವಾಟೆಮಾಲದ ಮೂಲವಾಸಿ. ಇದರ ಕಾಂಡ ಕುಳ್ಳು. ಎಲೆಯ ತೊಟ್ಟುಗಳು ಎಲೆಗಳಷ್ಟೇ ಅಥವಾ ಎಲೆಗಳಿಗಿಂತ ಸ್ವಲ್ಪ ಹೆಚ್ಚು ಉದ್ದವಾಗಿರುತ್ತವೆ. ಎಲೆ ದೀರ್ಘಚತುರಸ್ರಾಕಾರ, ಕರಣೆಯಾಕಾರದ ಅಥವಾ ಹೃದಯಾಕಾರದಲ್ಲಿರುತ್ತದೆ. ಬಣ್ಣ ಹಸಿರು. ಹೂಗೊಂಚಲಿಗೆ ಕವಚವೂ ಉದ್ದವಾದ ತೊಟ್ಟೂ ಇರುತ್ತವೆ. ಇದರ ಹೂಗೊಂಚಲು ಅತಿ ಕೆಂಪುಬಣ್ಣದ್ದಾಗಿದ್ದು ಬಾಗಿರುತ್ತದೆ. ಅಥವಾ ಸುರುಟಿಕೊಂಡಿರುತ್ತದೆ.

ವ್ಯವಸಾಯ[ಬದಲಾಯಿಸಿ]

ಬೀಜಗಳಿಂದ ಗಿಡ ಪಡೆಯಲು ಹೆಚ್ಚುಕಾಲ ಹಿಡಿಯುವುದಲ್ಲದೆ, ಈ ವಿಧಾನದಲ್ಲಿ ಬೆಳೆಸಿದ ಪೀಳಿಗೆ ಅನೇಕಸಾರಿ ತನ್ನ ತಾಯಿಸಸ್ಯದ ಗುಣಗಳನ್ನು ಹೋಲುವುದಿಲ್ಲ. ಆದ್ದರಿಂದ ನಿರ್ಲಿಂಗರೀತಿಯ ವೃದ್ಧಿಕಾರ್ಯ ಹೆಚ್ಚು ಬಳಕೆಯಲ್ಲಿದೆ. ಅಂತೂರಿಯಮ್ ಸಸ್ಯಗಳನ್ನು ಬೇರು ತುಂಡುಗಳಿಂದ ಸುಲಭವಾಗಿಯೂ ಶೀಘ್ರವಾಗಿಯೂ ವೃದ್ಧಿಮಾಡ ಬಹುದು. ಅಂಥ ಬೇರಿನ ತುಂಡುಗಳಲ್ಲಿ ಮೋಸುಗಳು ಅಗತ್ಯವಾಗಿ ಇರಬೇಕು. ಸಾಮಾನ್ಯವಾಗಿ ಈ ಸಸ್ಯಗಳನ್ನು ಕುಂಡಗಳಲ್ಲಿ ಬೆಳೆಸುತ್ತಾರೆ. ಇವುಗಳಿಗೆ ಧಾರಾಳವಾಗಿ ಗಾಳಿ ಮತ್ತು ಬೆಳಕು ಅಗತ್ಯ. ನೆರಳಿನಲ್ಲಿ ಇವು ಚೆನ್ನಾಗಿ ಬೆಳೆಯುತ್ತವೆ. ಹೆಚ್ಚಿನ ಬಿಸಿಲಿನಲ್ಲಿ ಇಟ್ಟಾಗ ಎಲೆ ಮತ್ತು ಹೂಗಳ ಬಣ್ಣ ಕಂದಿಹೋಗುತ್ತದೆ. ಈ ಸಸ್ಯಗಳಿಗೆ ಹೆಚ್ಚಿನ ರೋಗ ಮತ್ತು ಕೀಟಗಳ ಹಾವಳಿ ಇಲ್ಲ. ಆದರೆ ಕೆಲವುಸಾರಿ ಹೂಗೊಂಚಲು ಮತ್ತು ಬೇರುಗಳಲ್ಲಿ ಕೊಳೆತ ಕಾಣಿಸಿಕೊಳ್ಳುತ್ತದೆ. ಇದನ್ನು ಬೋರ್ಡೊ ದ್ರಾವಣ, ಬ್ಲೈಟೆಕ್ಸ್ ಮುಂತಾದುವುಗಳಿಂದ ತಡೆಗಟ್ಟಬಹುದು. ನುಸಿ, ಹೇನು, ಥ್ರಿಪ್ಸ್, ಮಿಡತೆ ಮುಂತಾದ ಕೀಟಗಳು ಈ ಕುಲದ ಸಸ್ಯಗಳನ್ನು ಪೀಡಿಸುತ್ತವೆ. ಇವುಗಳನ್ನು ಫಾಲಿಡಾಲ್, ಬಿ. ಎಚ್. ಸಿ., ಥೈಯಮೇಟ್ ಮುಂತಾದುವುಗಳಿಂದ ತಡೆಯಬಹುದು.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]