ಅರ್ನ್ಸ್ಟ್
ಸಂಸ್ಥೆಯ ಪ್ರಕಾರ | Member firms have different legal structures, USA and UK: Limited Liability Partnership |
---|---|
ಸ್ಥಾಪನೆ | 1989; individual components from 1849 |
ಮುಖ್ಯ ಕಾರ್ಯಾಲಯ | ಲಂಡನ್, United Kingdom |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Jim Turley (Chairman & CEO)[೧] |
ಉದ್ಯಮ | Professional services |
ಸೇವೆಗಳು | Audit Tax Financial advisory Business Advisory |
ಆದಾಯ | US$21.4 billion (2009)[೨] |
ಉದ್ಯೋಗಿಗಳು | 144,000 (Global) |
ವಿಭಾಗಗಳು | Assurance, Advisory, Tax, Transaction |
ಜಾಲತಾಣ | EY.com |
ಟೆಂಪ್ಲೇಟು:Fix bunching ಟೆಂಪ್ಲೇಟು:Fix bunching
ಟೆಂಪ್ಲೇಟು:Fix bunching ಅರ್ನ್ಸ್ಟ್ & ಯಂಗ್ (EY) ಜಗತ್ತಿನ ಬಹು ದೊಡ್ಡ ವೃತ್ತಿನಿರತ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ ಹಾಗೂ ಬಿಗ್ ಫೋರ್ ಆಡಿಟರ್ಸ್ ಗಳ ಪೈಕಿ ಒಂದಾಗಿದೆ; ಇತರ ಮೂರು ಶ್ರೇಷ್ಠ ವಿತ್ತಪರಿವೀಕ್ಷಣ ಸಂಸ್ಥೆಗಳೆಂದರೆ ಪ್ರೈಸ್ ವಾಟರ್ ಹೌಸ್ ಕೂಪರ್ಸ್ (PwC), ಡಿಲೋಯಿಟೆ ಮತ್ತು KPMG. ಅರ್ನ್ಸ್ಟ್ & ಯಂಗ್ ವಿಶ್ವದಾದ್ಯಂತ 140ಕ್ಕೂ ಹೆಚ್ಚು ಸದಸ್ಯ ವಾಣಿಜ್ಯ ಸಂಸ್ಥೆಗಳನ್ನು ಹೊಂದಿರುವ ವಿಶ್ವವ್ಯಾಪಿ ಸಂಸ್ಥೆ. ಅದರ ಭೌಗೋಳಿಕ ಕೇಂದ್ರ ಕಚೇರಿಯು ಯುಕೆಯ ಲಂಡನ್ ನಲ್ಲಿದೆ ಮತ್ತು ಯು.ಎಸ್.ನ ಕೇಂದ್ರ ಕಚೇರಿಯು 5, ಟೈಮ್ಸ್ ಸ್ಕ್ವೇರ್, ನ್ಯೂ ಯಾರ್ಕ್, ನ್ಯೂ ಯಾರ್ಕ್ ನಲ್ಲಿದೆ.[೩] As of 2009[update][[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]],ಫೋರ್ಬ್ಸ್ ಪತ್ರಿಕೆಯ ಶ್ರೇಣೀಕರಣದ ಪ್ರಕಾರ ಇದು ಯುನೈಟೆಡ್ ಸ್ಟೇಟ್ಸ್ ನ 10ನೆಯ ಅತಿ ದೊಡ್ಡ ಖಾಸಗಿ ಕಂಪನಿಯಾಗಿದೆ.[೪]
ಇತಿಹಾಸ
[ಬದಲಾಯಿಸಿ]ಪೂರ್ವ ಇತಿಹಾಸ
[ಬದಲಾಯಿಸಿ]ಅರ್ನ್ಸ್ಟ್ & ಯಂಗ್ ಹಲವಾರು ಹಳೆಯ ಸಂಸ್ಥೆಗಳ ವಿಲೀನತೆಗಳ ಸರಣಿಯ ಫಲಶೃತಿಯಾಗಿ ಜನ್ಮತಳೆದ ಸಂಸ್ಥೆ. ಇವೆಲ್ಲವುಗಳಲ್ಲಿ ಅತಿ ಪುರಾತನವಾದ ಹಾರ್ಡಿಂಗ್ ಮತ್ತು ಪುಲ್ಲೀನ್ ಸಂಸ್ಥೆಯು 1849ರಲ್ಲಿ ಜನ್ಮತಾಳಿದ ಒಂದು ಸಹಭಾಗಿತ್ವ ಸಂಸ್ಥೆಯಾಗಿತ್ತು.[೫] ಆ ವರ್ಷ ಆ ಸಂಸ್ಥೆಗೆ ಫ್ರೆಡೆರಿಕ್ ವ್ಹಿಟ್ನಿಯ ಸೇರ್ಪಡೆಯಾಯಿತು. ಅವರು 1859ರಲ್ಲಿ ಸಂಸ್ಥೆಯ ಪಾಲುದಾರರಾದರು ಹಾಗೂ ಅವರ ಮಕ್ಕಳೂ ಇದೇ ವ್ಯಾಪಾರಕ್ಕಿಳಿದಾಗ ಸಂಸ್ಥೆಯನ್ನು ವ್ಹಿಟ್ನಿ, ಸ್ಮಿತ್ ಮತ್ತು ವ್ಹಿಟ್ನಿ ಎಂಬುದಾಗಿ 1894ರಲ್ಲಿ ಮರುನಾಮಕರಣ ಮಾಡಲಾಯಿತು.[೫] 1903ರಲ್ಲಿ ಅರ್ನ್ಸ್ಟ್ & ಅರ್ನ್ಸ್ಟ್ ಸಂಸ್ಥೆಯು ಕ್ಲೀವ್ ಲ್ಯಾಂಡ್ ನಲ್ಲಿ ಆಲ್ವಿನ್ ಸಿ. ಅರ್ನ್ಸ್ಟ್ ಮತ್ತು ಅವರ ಸಹೋದರ ಥಿಯೋಡೋರ್ ರಿಂದ ಸ್ಥಾಪನೆಗೊಂಡಿತು ಮತ್ತು 1906ರಲ್ಲಿ ಆರ್ಥರ್ ಯಂಗ್ ಎಂಬ ಸ್ಕಾಟ್ಸ್ ಮನ್ ಚಿಕಾಗೋದಲ್ಲಿ ಆರ್ಥರ್ ಯಂಗ್ ಎಂಡ್ ಕಂಪನಿ ಯನ್ನು ಹುಟ್ಟುಹಾಕಿದರು.[೫] 1924ರಲ್ಲೇ ಈ ಅಮೆರಿಕನ್ ಸಂಸ್ಥೆಗಳು ಪ್ರಮುಖ ಬ್ರಿಟಿಷ್ ಸಂಸ್ಥೆಗಳೊಡನೆ ಸಖ್ಯ ಹೊಂದಿದವು; ಬ್ರಾಡ್ಸ್ ಪ್ಯಾಟರ್ಸನ್ & ಕೋ. ದೊಡನೆ ಯಂಗ್ ಹಾಗೂ ವ್ಹಿಟ್ನಿ, ಸ್ಮಿತ್ ಮತ್ತು ವ್ಹಿಟ್ನಿ ಯೊಡನೆ ಅರ್ನ್ಸ್ಟ್ ಕೈಜೋಡಿಸಿದವು.[೫] 1979ರಲ್ಲಿ ಈ ಸಖ್ಯವು ಆಂಗ್ಲೋ-ಅಮೆರಿಕನ್ ಸಂಸ್ಥೆಯಾದ ಅರ್ನ್ಸ್ಟ್ & ವ್ಹಿಟ್ನಿಯ ಉಗಮಕ್ಕೆ ನಾಂದಿ ಹಾಡಿತು; ಇದು ಜಗತ್ತಿನ ನಾಲ್ಕನೆಯ ಬೃಹತ್ ಲೆಕ್ಕಶೋಧಕ ಸಂಸ್ಥೆಯೆಂದು ಹೆಸರಾಯಿತು.[೫] 1979ರಲ್ಲಿಯೇ ಆರ್ಥರ್ ಯಂಗ್ ನ ಯೂರೋಪ್ ನ ಕಚೇರಿಗಳು ಹಲವಾರು ಸ್ಥಳೀಯ ಸಂಸ್ಥೆಗಳಲ್ಲಿ ವಿಲೀನವಾದವು ಮತ್ತು ಆ ಸಂಸ್ಥೆಗಳು ಆರ್ಥರ್ ಯಂಗ್ ಇಂಟರ್ನ್ಯಾಷನಲ್ ನ ಸದಸ್ಯ ಸಂಸ್ಥೆಗಳಾದವು.
ವಿಲೀನಗಳು
[ಬದಲಾಯಿಸಿ]1989ರಲ್ಲಿ ನಾಲ್ಕನೆಯ ಸ್ಥಾನದಲ್ಲಿದ್ದ ಅರ್ನ್ಸ್ಟ್ & ವ್ಹಿಟ್ನಿ ಸಂಸ್ಥೆಯು ಆಗ ಐದನೆಯ ಸ್ಥಾನದಲ್ಲಿದ್ದ ಆರ್ಥರ್ ಯಂಗ್ ನೊಡನೆ ಜಾಗತಿಕ ಮಟ್ಟದಲ್ಲಿ ವಿಲೀನಗೊಂಡು ಅರ್ನ್ಸ್ಟ್ & ಯಂಗ್ ಸಂಸ್ಥೆಯ ಉದಯವಾಯಿತು.[೬] ಅಕ್ಟೋಬರ್ 1997ರಲ್ಲಿ EY ತನ್ನ ಜಾಗತಿಕ ವಹಿವಾಟುಗಳನ್ನು KPMGಯೊಂದಿಗೆ ವಿಲೀನಗೊಳಿಸಿ ಜಗತ್ತಿನ ಅತಿ ದೊಡ್ಡ ವೃತ್ತಿನಿರತ ಸೇವಾ ಸಂಸ್ಥೆಯನ್ನು ಸೃಷ್ಟಿಸುವ ಆಲೋಚನೆ ಹೊಂದಿರುವುದಾಗಿ ಘೋಷಿಸಿತು; ಸರಿಸುಮಾರು ಇದೇ ವೇಳೆಯಲ್ಲಿ, ಸೆಪ್ಟೆಂಬರ್ 1997ರಲ್ಲಿ, ಪ್ರೈಸ್ ವಾಟರ್ ಹೌಸ್ ಮತ್ತು ಕೂಪರ್ಸ್ & ಲೈಬ್ರ್ಯಾಂಡ್ ಸಹ ತಮ್ಮ ವಿಲೀನಗೊಳ್ಳುವ ಯೋಜನೆಯನ್ನು ಘೋಷಿಸಿದ್ದವು. ಕಕ್ಷಿದಾರರ ವಿರೋಧ, ಅಪನಂಬಿಕೆಯ ವಿಷಯಗಳು, ವೆಚ್ಚದ ತೊಡಕುಗಳು ಮತ್ತು ಎರಡು ಪ್ರತ್ಯೇಕ ವಿಧದ ಕಂಪನಿಗಳ ಮತ್ತು ಅವುಗಳ ಸಂಸ್ಕೃತಿಗಳಲ್ಲಿ ಒದಗುವ ಭಿನ್ನತೆಗಳನ್ನು ಸರಿದೂಗಿಸುವ ತೊಂದರೆಗಳನ್ನು ಮನಗಂಡು ಫೆಬ್ರವರಿ 1998ರಲ್ಲಿ ಈ ವಿಲೀನತಾ ಯೋಜನೆಯನ್ನು ಕೈಬಿಡಲಾಯಿತು.[೭] 1980 ಮತ್ತು 90ರ ದಶಕದಲ್ಲಿ EY ತನ್ನ ಸಲಹಾ ವಿಭಾಗವನ್ನು ಮಜಬೂತಾಗಿ ನಿರ್ಮಿಸಿತ್ತು. ಯು.ಎಸ್. ಸೆಕ್ಯುರಿಟೀಸ್ ಮತ್ತು ಎಕ್ಷ್ ಚೇಂಜ್ ಕಮಿಷನ್ ಹಾಗೂ ಬಂಡವಾಳ ಹೂಡುವ ಸಮುದಾಯದ ಸದಸ್ಯರು ಮೊದಲ ಐದಯ ಶ್ರೇಷ್ಠ ಸಂಸ್ಥೆಗಳ ನಡುವೆ ಸಲಹಾ ಸೇವೆ ಮತ್ತು ಲೆಕ್ಕಶೋಧನೆಯ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆಗಳು ಉಂಟಾಗಬುದೆಂಬ ಆತಂಕವನ್ನು ವ್ಯಕ್ತಪಡಿಸಲಾರಂಭಿಸಿದವು ಹಾಗೂ ಮೇ 2000ದಲ್ಲಿ ಫ್ರೆಂಚ್ ಐಟಿ ಸೇವಾ ಕಂಪನಿಯಾದ ಕ್ಯಾಪ್ ಜೆಮಿನಿಗೆ $೧೧ ಮಿಲಿಯನ್ ಗೆ, ಅದರಲ್ಲೂ ಹೆಚ್ಚಿನಂಶ ಸ್ಟಾಕ್ ಮೂಲಕ,ತನ್ನ ಸಲಹಾ ವಿಭಾಗವನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿದ ಮೊದಲ ಸಂಸ್ಥೆ EY ಆಯಿತು; ಹಾಗೆ ಪ್ರತ್ಯೇಕಿಸಲ್ಪಟ್ಟ ಸಂಸ್ಥೆಯನ್ನು ಕ್ಯಾಪ್ ಜೆಮಿನಿ ಅರ್ನ್ಸ್ಟ್ & ಯಂಗ್ ಎಂಬ ಹೆಸರಿನಿಂದ ಆರಂಭಿಸಿ, ನಂತರ ಹೆಸರನ್ನು ಕ್ಯಾಪ್ ಜೆಮಿನಿ ಎಂದು ಬದಲಾಯಿಸಲಾಯಿತು.[೮]
ಇತ್ತೀಚಿನ ಇತಿಹಾಸ
[ಬದಲಾಯಿಸಿ]2002ರಲ್ಲಿ. EY ಮಾಜಿ-ಆರ್ಥರ್ ಆಂಡರ್ಸನ್ ವೃತ್ತಿನಿರತ ಕಂಪನಿಗಳೊಂದಿಗೆ ಜಗದಾದ್ಯಂತ ವಿಲೀನಗೊಂಡಿತು; ಯುಎಸ್ಎ, ಯುಕೆ, ಚೀನಾ ಮತ್ತು ನೆದರ್ಲ್ಯಾಂಡ್ಸ್ ಗಳ ಕಂಪನಿಗಳು ಮಾತ್ರ ಇದಕ್ಕೆ ಹೊರತಾಗಿದ್ದವು.[೯]
ಜಾಗತಿಕ ರೂಪರೇಷೆ
[ಬದಲಾಯಿಸಿ]ನಾಲ್ಕು ಶ್ರೇಷ್ಠ ಸಂಸ್ಥೆಗಳ ಪೈಕಿ EY ಜಾಗತಿಕ ಮಟ್ಟದಲ್ಲಿ ಬಹಳ ಉತ್ತಮ ರೀತಿಯಲ್ಲಿ ವ್ಯವಸ್ಥಾಪಿತವಾದ ಸಂಸ್ಥೆಯಾಗಿದೆ. EY ಗ್ಲೋಬಲ್ ಜಾಗತಿಕ ಮಟ್ಟದ ಗುಣಮಟ್ಟವನ್ನು ಹೊಂದಿರುತ್ತದೆ ಮತ್ತು ಜಾಗತಿಕ ನಿಯಮಗಳನ್ನು ಪಾಲಿಸುವ ಮೇಲ್ವಿಚಾರಣೆ ಹೊಂದಿರುತ್ತದೆ ಹಾಗೂ ಸೇವೆಯನ್ನು ನಿಯಮಿತ ಕಾಲಕ್ಕೆ ಒಡಗಿಸುತ್ತದೆ; ಕಕ್ಷಿದಾರರ ಕಾರ್ಯಗಳನ್ನು ಇದರ ಸದಸ್ಯ ಸಂಸ್ಥೆಗಳು ನೆರವೇರಿಸುತ್ತವೆ. EY ಸದಸ್ಯ ದೇಶವೂ ಈ ಕೆಳಕಂಡ ನಾಲ್ಕು ವಿಸ್ತಾರಗಳಲ್ಲಿ ಒಂದಾಗಿ ವ್ಯವಸ್ಥೆಗೊಳಿಸಲಾಗುತ್ತದೆ:[೧೦]
- EMEIA: ಯೂರೋಪ್, ಮಧ್ಯ ಪೂರ್ವ, ಭಾರತ, ಆಫ್ರಿಕ
- ಅಮೆರಿಕಾಸ್
- ಏಷ್ಯಾ ಪೆಸಿಫಿಕ್
- ಜಪಾನ್
ಪ್ರತಿ ಪ್ರದೇಶದಲ್ಲೂ ಒಂದೇ ರೀತಿಯಾದ ವ್ಯವಹಾರಿಕ ಕ್ರಮ ಹಾಗೂ ವ್ಯವಸ್ಥಾಪಕ ತಂಡವಿದ್ದು ಅಂತಹ ತಂಡಗಳು ಜಾಗತಿಕ ನಿರ್ದೇಶಕ ಮಂಡಳಿಯ ಸದಸ್ಯರಾದ ಒಬ್ಬ ಪ್ರಾದೇಶಿಕ ವ್ಯವಸ್ಥಾಪಕ ಪಾಲುದಾರರ ನೇತೃತ್ವದಲ್ಲಿ ಕಾರ್ಯವೆಸಗುತ್ತವೆ.
ಸೇವೆಗಳು
[ಬದಲಾಯಿಸಿ]EY 2007ರಲ್ಲಿ ನಾಲ್ಕು ಪ್ರಮುಖ ಸೇವಾ ವಿಧಾನಗಳನ್ನೂ ಮತ್ತು ಆದಾಯದ ಪಾಲುದಾರಿಕೆಗಳನ್ನು ಹೊಂದಿದ್ದಿತು:[೧೧]
- ಜೀವವಿಮೆ (54%): ಪ್ರಮುಖವಾಗಿ ಆರ್ಥಿಕ ಲೆಕ್ಕಶೋಧನೆ (ಮೂಲ ಜೀವವಿಮೆ).
- ಸಲಹಾ ಸೇವೆಗಳು (12%): ಇದು ಮೂರು ಉಪಸೇವಾ ವಿಭಾಗಗಳನ್ನು ಒಳಗೊಂಡಿದೆ: ಆದಾಯ ತೆರಿಗೆಯ ಲಾಭಾಲಾಭ ಮತ್ತು ವಿಮೆ, ನಷ್ಟದ ಅರಿವು, ಮತ್ತು ಕಾರ್ಯನಿರ್ವಹಣೆಯ ಉತ್ತಮತೆ.
- ತೆರಿಗೆ ಸೇವೆಗಳು (22%): includes ವಾಣಿಜ್ಯ ತೆರಿಗೆಗೆ ಹೊಂದುವಿಕೆ, ಮಾನವ ಹೂಡಿಕೆ, ಪರೋಕ್ಷ ತೆರಿಗೆ, ಅಂತರರಾಷ್ಟ್ರೀಯ ತೆರಿಗೆ ಸೇವೆಗಳು, ತೆರಿಗೆ ಪರಿವೀಕ್ಷಣೆ ಮತ್ತು ಹೊಣೆಯ ಸಲಹಾ ಸೇವೆಗಳು, ವಿನಿಮಯ ತೆರಿಗೆ.
- ವ್ಯಾಪಾರ ಸಲಹಾ ಸೇವೆಗಳು (TAS) (12%): ಈ ಸೇವೆಯಡಿಯಲ್ಲಿ ವಾಣಿಜ್ಯ, ಆರ್ಥಿಕ, ಭೂವ್ಯವಹಾರ ಮತ್ತು ತೆರಿಗೆ ಬಾಕಿಯ ವ್ಯಾಸಂಗ, ಸೇರ್ಪಡೆ ಮತ್ತು ಹೊಂದುವಿಕೆಗಳು, ಮೌಲ್ಯಮಾಪನ ಮತ್ತು ವ್ಯಾಪಾರ ಕ್ರಮರಚನೆ, ಸಮುದಾಯಿಕ ಪುನರ್ರಚನೆ ಮತ್ತು ಸಂಯೋಜನಾ ಸೇವೆಗಳನ್ನು ಒಳಗೊಂಡಿದೆ.
ಪ್ರಮುಖ ಕಕ್ಷಿದಾರರು
[ಬದಲಾಯಿಸಿ]EY ಜಗತ್ತಿನ ಹಲವಾರು ಪ್ರಮುಖ ನಿಗಮಗಳಿಗೆ ಲೆಕ್ಕಪರೀಕ್ಷಕ ಸೇವಾಸೌಲಭ್ಯಗಳನ್ನು ಒದಗಿಸುತ್ತಿದ್ದು, ಕೆಳಕಂಡಂತವು ಆ ಪಟ್ಟಿಯ ಕೆಲವು ಸಂಸ್ಥೆಗಳಾಗಿವೆ (ಆ ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಸ್ಪಷ್ಟಗೊಳಿಸಿದಂತೆ):
- ಏರೋಸ್ಪೇಸ್/ಭದ್ರತೆ: ಲಾಕ್ ಹೀಡ್ ಮಾರ್ಟಿನ್, ಟಕ್ಸ್ ಟ್ರಾನ್
- ಶಕ್ತಿ: BP, CNOOC, ಕೊನೋಕೋಫಿಲಿಪ್ಸ್, ಫೆರ್ ಎಕ್ಸ್ ಪೋ, ಕಝಖ್ಮಿಸ್, ಟೋಟಲ್, ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕಾರ್ಪೊರೇಷನ್, ಎಕ್ಸ್ ಸ್ಟ್ರಾಟಾ, ತಾಲಿಸ್ಮನ್ ಎನರ್ಜಿy, ರಾಸ್ನೆಫ್ಟ್, AMEC
- ಮನರಂಜನೆ: ಟ್ರಂಪ್ ಎಂಟರ್ಟೈನ್ಮೆಂಟ್ ರೆಸಾರ್ಟ್ಸ್, ಮ್ಯಾಗ್ನ ಎಂಟರ್ಟೈನ್ಮೆಂಟ್ ಕಾರ್ಪ್.
- ಆರ್ಥಿಕ ಸೇವೆಗಳು: ಸ್ಟೇಟ್ ಸ್ಟ್ರೀಟ್ ಕಾರ್ಪೊರೇಷನ್, 3i, ಅವೀವಾ, ಎಓಎನ್ ಕಾರ್ಪೊರೇಷನ್, AEGON, ರ್ಯಬೋಬ್ಯಾಂಕ್, ಐಸಿಬಿಸಿ, ಐಎನ್ ಜಿ ಗ್ರೂಪ್, ಪೈಪರ್ ಜಾಫ್ರೇ, ಸಿಐಬಿಸಿ, ಮ್ಯಾನುಲೈಫ್, ಮ್ಯಾನ್ ಗ್ರೂಪ್, ವಿಟಿಬಿ, ಟಿಡಿ, ಯುಬಿಎಸ್, ಯುಎಸ್ ಬ್ಯಾಂಕ್, ಸನ್ ಟ್ರಸ್ಟ್ ಬ್ಯಾಂಕ್, ರೀಜನ್ಸ್ ಫೈನ್ಯಾನ್ಸ್ ಕಾರ್ಪೊರೇಷನ್, ನ್ಯಾಷನಲ್ ಆಸ್ಟ್ರೇಲಿಯಾ ಬ್ಯಾಂಕ್, ಎಎಂಪಿ ಲಿಮಿಟೆಡ್, ಬಾಬ್ಕಾಕ್ ಮತ್ತು ಬ್ರೌನ್, ಕೀ ಬ್ಯಾಂಕ್, ಚಬ್ ಕಾರ್ಪೊರೇಷನ್, ರೆನೈಸ್ಯಾನ್ಸ್ ಕ್ಯಾಪಿಟಲ್, ಬ್ಯಾಂಕ್ ಆಫ್ ಸೈಪ್ರಸ್, ಕ್ಯಾಪಿಟಲ್ ಒನ್, ಕೊಮೆರಿಕ ಇನ್ಕಾರ್ಪೊರೇಟೆಡ್, ಡೆಲ್ಟಾ ಲಾಯ್ಡ್
- ಸರ್ಕಾರಿ: ಯುನೈಟೆಡ್ ಸ್ಟೇಟ್ಸ್ ಅಂಚೆ ಸೇವೆ, ಆಂತರಿಕ ಹಣಕಾಸು ಸೇವೆ, ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಪ್ ವೆಟೆರನ್ಸ್ ಅಫೇಯ್ರ್ಸ್, ಯುನೈಟೆಡ್ ಸ್ಟೇಟ್ಸ್ ಕಾನೂನು ಇಲಾಖೆ, ರಾಷ್ಟ್ರೀಯ ವೈಮಾನಿಕ ಹಾಗೂ ಬಾಹ್ಯಾಕಾಶ ಆಡಳಿತವಿಭಾಗ, [[ಯುನೈಟೆಡ್ ಸ್ಟೇಟ್ಸ್
ಅರೋಗ್ಯ ಮತ್ತು ಮಾನವಸೇವಾ ಇಲಾಖೆ]], ಯುನೈಟೆಡ್ ಸ್ಟೇಟ್ಸ್ ಬೊಕ್ಕಸದ ಇಲಾಖೆ, ರಾಯಲ್ ಮೇಯ್ಲ್, ವಿದೇಶಾಂಗ ಮತ್ತು ನಾಗರಿಕ ಇಲಾಖೆ, ರಾಯಲ್ ಆಸ್ಟ್ರಿಯನ್ ಮಿಂಟ್
- ಆರೋಗ್ಯ ಸೇವಾ ಕೇಂದ್ರಗಳು: ಸಿವಿಎಸ್ ಕೇರ್ ಮಾರ್ಕ್, ಕ್ಲೀವ್ ಲ್ಯಾಂಡ್ ಕ್ಲಿನಿಕ್, ಸಿಎಸ್ಎಲ್ ನಿಯಮಿತ, ಕಾರ್ಡಿನಲ್ ಹೆಲ್ತ್, ಸ್ಮಿತ್ & ನೆವ್ಯೂ, ವೆಲ್ ಪಾಯಿಂಟ್, ಅಮೆರಿಸೋರ್ಸ್ ಬರ್ಜೆನ್
- ಕೈಗಾರಿಕಾ ಉತ್ಪನ್ನಗಳು: ABB, ಡೆಲ್ಫಿ ಕಾರ್ಪೊರೇಷನ್, ಈಟನ್ ಕಾರ್ಪೊರೇಷನ್, ಎಲಿ ಲಿಲ್ಲಿ, ಸಿಂಜೆಂತ, ಟೆಟ್ರಾಪಾರ್ಕ್, ಹ್ಯಾನ್ಸನ್, ಹ್ಯಾರಿಸ್ ಕಾರ್ಪೊರೇಷನ್, ಲಾಫಾರ್ಗ್, LVMH, ಪೋರ್ಷ್, ಥಾಲೆಸ್ ಗ್ರೂಪ್, ಅಲೆಘೆನಿ ಟೆಕ್ನಾಲಜೀಸ್, ಸೀಮನ್ಸ್ AG, ಶೆರ್ವಿನ್-ವಿಲಿಯಮ್ಸ್, ಬೊಂಬಾರ್ಡಿಯರ್, ಮ್ಯಾಗ್ನಾ ಇಂಟರ್ನ್ಯಾಷನಲ್, ಆರ್ಚರ್ ಡೇನಿಯಲ್ಸ್ ಮಿಡ್ ಲ್ಯಾಂಡ್, ಮೆಷೆಲ್
- ಮಾಧ್ಯಮಗಳು: ಟೈಂ ವಾರ್ನರ್, ವರ್ಜಿನ್ ಮೀಡಿಯಾ, ವಿವೆಂಡಿ, ಅಸೋಸಿಯೇಟೆಡ್ ಪ್ರೆಸ್, ಆಸ್ಟ್ರಲ್ ಮೀಡಿಯಾ, ವಾರ್ನರ್ ಬ್ರದರ್ಸ್ ರೆಕಾರ್ಡ್ಸ್, ಎಂಡೆಮಾಲ್, ಗಾರ್ನೆಟ್, ನ್ಯೂಸ್ ಕಾರ್ಪೊರೇಷನ್, ಕಾಂಕ್ಯಾಸ್ಟ್, ಕೋರಸ್ ಎಂಟರ್ಟೈನ್ಮೆಂಟ್ , ಷಾ ಕಮ್ಯುನಿಕೇಷನ್ಸ್ ಇಂಕ್
- ಭೂ ವ್ಯವಹಾರ: ಕುಷ್ಮನ್ & ವೇಕ್ ಫೀಲ್ಡ್, ಎಮಾರ್, ಹೆರಾನ್, ಮ್ಯಾಪೆಲೀ, ನಖೀಲ್, ಸೈಮನ್ ಪ್ರಾಪರ್ಟಿ ಗ್ರೂಪ್, ವೆಸ್ಟ್ ಫೀಲ್ಡ್ ಗ್ರೂಪ್, ಟಿಷ್ಮನ್ ಸ್ಪೆಯರ್ ಪ್ರಾಪರ್ಟೀಸ್, ಫೋರ್ಟ್ರೆಸ್ ಇನ್ವೆಸ್ಟ್ ಮೆಂಟ್ ಗ್ರೂಪ್, ಮೇಟಾಸ್, ಯೂನಿಬೇಯ್ಲ್-ರಾಡಾನ್ಕೋ, ING ರಿಯಲ್ ಎಸ್ಟೇಟ್, WP ಕ್ಯಾರೀ
- ಚುಂಗಡಿ & ಬಳಕೆದಾರರ ಪದಾರ್ಥಗಳು: ಅಮೆಝಾನ್.ಕಾಂ, ಹಿಲ್ಟನ್, ಇಂಟರ್ಕಾಂಟಿನೆಂಟಲ್ ಹೊಟೆಲ್ಸ್, ಮೇರಿಯಾಟ್, ಮ್ಯಾಕ್ ಡೊನಾಲ್ಡ್ಸ್, ನೆಕ್ಸ್ಟ್, ಸ್ಟಾರ್ವುಡ್, ಟಾರ್ಗೆಟ್, ಕೋಕಾ-ಕೋಲಾ, ವಾಲ್-ಮಾರ್ಟ್, ಟೈಸನ್ ಫುಡ್ಸ್, ಹೋಲ್ ಫುಡ್ಸ್ ಮಾರ್ಕೆಟ್, ಆಟೋಝೋನ್, ಚಿಕೋಸ್, ಕ್ಯಾನನ್ ಇಂಕ್., ಸ್ಟೇಪಲ್ಸ್ ಇಂಕ್., ದ ಜೆ,ಎಂ, ಸ್ಮಕರ್ ಕಂಪನಿ, ಹಾರ್ಲೆ-ಡೇವಿಡ್ಸನ್, ಡೈನ್ ಈಕ್ವಿಟಿ, ನಿಸ್ಸಾನ್ ಮೋಟಾರ್ಸ್, ಪಿಯರ್ 1 ಇಂಪೋರ್ಟ್ಸ್, ಬೋಸ್ಟನ್ ಬೀರ್ ಕಂಪನಿ, ಫ್ರೆಷ್ ಡೆಲ್ ಮಾಂಟೆ ಪ್ರೊಡ್ಯೂಸ್, ಝೇಲ್ ಕಾರ್ಪೊರೇಷನ್
- ತಂತ್ರಜ್ಞಾನ: AMD, ಾಪಲ್ ಇಂಕ್., ASUS, ಬೈಡು, ಫೇಸ್ ಬುಕ್, ಗೂಗಲ್, ಹ್ಯೂಲಿಟ್-ಪ್ಯಾಕಾರ್ಡ್, ಇಂಟೆಲ್, ಒರಾಕಲ್, ಫಿಲಿಪ್ಸ್ ಎಲೆಕ್ಟ್ರಾನಿಕ್ಸ್, ಸನ್ ಮೈಕ್ರೋಸಿಸ್ಟಮ್ಸ್, ರಿಸರ್ಚ್ ಇನ್ ಮೋಷನ್, ಟೆಕ್ಸಾಸ್ ಇಂಸ್ಟ್ರುಮೆಂಟ್ಸ್, ತೋಷಿಬಾ, ಯೂನಿಸಿಸ್, UMC, ಟಾಟಂಗ್ ಕಂಪನಿ, ಇಂಟ್ಯೂಟ್
- ಟೆಲಿಸಂಪರ್ಕಗಳು: AT&T, ಫ್ರ್ಯಾನ್ಸ್ ಟೆಲಿಕಾಂ, ಡ್ಯೂತ್ಷೆ ಟೆಲಿಕಾಂ, ಗ್ಲೋಬಲ್ ಕ್ರಾಸಿಂಗ್, ಆರೆಂಜ್, ಟೆಲಿಫೋನಿಕಾ, ಟೆಲಿನಾರ್, ಟೆಲಿಸ್ಟ್ರಾ, ವೆರಿಝಾನ್, ಟರ್ಕ್ ಟೆಲಿಕಾಂ, ಭಾರ್ತಿ ಏರ್ ಟೆಲ್, ವಿಂಪೆಲ್ ಕಾಂ, ಮೆಗಾಫೋನ್
- ಪ್ರವಾಸ/ಸಾರಿಗೆ: ಅಮೆರಿಕನ್ ಏರ್ ಲೈನ್ಸ್, ಬ್ರಿಟಿಷ್ ಏರ್ವೇಸ್, ಕಾಂಟಿನೆಂಟಲ್ ಏರ್ಲೈನ್ಸ್, ಡೆಲ್ಟಾ ಏರ್ಲೈನ್ಸ್, ಫೆಡೆಕ್ಸ್, ಜೆಟ್ ಬ್ಲೂ ಏರ್ವೇಸ್, ನೆಪ್ಚ್ಯೂನ್ ಓರಿಯೆಂಟ್ ಲೈನ್ಸ್, ನಾರ್ತ್ ವೆಸ್ಟ್ ಏರ್ಲೈನ್ಸ್, ಸ್ಕ್ಯಾನಿಯಾ AB, ಸಿಂಗಪುರ್ ಏರ್ಲೈನ್ಸ್, ಸೌತ್ ವೆಸ್ಟ್ ಏರ್ಲೈನ್ಸ್, RZD, ಯುನೈಟೆಡ್ ಏರ್ಲೈನ್ಸ್
ಹೆಸರು ಮತ್ತು ಸಂಸ್ಥಾಚಿಹ್ನೆ
[ಬದಲಾಯಿಸಿ]1989ರಲ್ಲಿ ಅರ್ನ್ಸ್ಟ್ & ವ್ಹಿಟ್ನಿ ಹಾಗೂ ಆರ್ಥರ್ ಯಂಗ್ ಕಂಪನಿಗಳ ಜಾಗತಿಕ ಮಟ್ಟದ ವಿಲೀನವಾದಾಗ ಈ ಹೆಸರು ಮೂಡಿತು.[೧೨]
ಸಿಬ್ಬಂದಿ
[ಬದಲಾಯಿಸಿ]ಬಿಸಿಬೆಸ್ ವೀಕ್ ' ನ 2008ರ ಸಾಲಿನ ವೃತ್ತಿಯನ್ನು ಆರಂಭಿಸಲು ಅತ್ಯುತ್ತಮ ಸ್ಥಳಗಳು ಎಂಬ ವಾರ್ಷಿಕ ಪಟ್ಟಿಯಲ್ಲಿ ಈ ಸಂಸ್ಥೆಯು ಪ್ರಥಮ ಸ್ಥಾಬವನ್ನು ಗಳಿಸಿತ್ತು.[೧೩] 2009ರಲ್ಲಿ ಫಾರ್ಚ್ಯೂನ್ ಹೊರತಂದ ಉದ್ಯೋಗ ಮಾಡಲು ಅರ್ಹವಾದ ನೂರು ಶ್ರೇಷ್ಠ ಕಂಪನಿಗಳು ಎಂಬ ಪಟ್ಟಯಲ್ಲಿ, ನಾಲ್ಕು ಬೃಹತ್ ಸಂಸ್ಥೆಗಳ ಪೈಕಿ ಅತ್ಯುಚ್ಚ ಸ್ಥಾನವಾದ 44ನೆಯ ಕ್ರಮಾಂಕವನ್ನು ಈ ಸಂಸ್ಥೆಯು ಅಲಂಕರಿಸಿತು.[೧೪] ಕಂಪ್ಯೂಟರ್ ವರ್ಲ್ಡ್ 'ನ 2008ರಲ್ಲಿ ಮಾಹಿತಿತಂತ್ರಜ್ಞಾನ ಕಂಪನಿಗಳ ಪೈಕಿ ಉದ್ಯೋಗ ಮಾಡಲು ಅರ್ಹವಾದ 100 ಶ್ರೇಷ್ಠ ಸಂಸ್ಥೆಗಳು ಪೈಕಿ ಈ ಸಂಸ್ಥೆಯು 36ನೆಯ ಸ್ಥಾನದಲ್ಲಿ ಶೋಭಿಸಿತು.[೧೫] 2007ರ ವೇರ್ ವುಮೆನ್ ವಾಂಟ್ ಟು ವರ್ಕ್ ಪ್ರಶಸ್ತಿಯ ಪಟ್ಟಿಯಲ್ಲಿ ಈ ಸಂಸ್ಥೆಯು ಮೊದಲ 50 ಶ್ರೇಷ್ಠ ಸಂಸ್ಥೆಗಳಲ್ಲಿ ಒಂದೆಂದು ನಮೂದಿಸಲ್ಪಟ್ಟಿತು.[೧೬] ವರ್ಕಿಂಗ್ ಮದರ್ಸ್ ಪತ್ರಿಕೆಯು 2006ರಲ್ಲಿ ಈ ಸಂಸ್ಥೆಯು ಉದ್ಯೋಗನಿರತ ತಾಯಂದಿರಿಗೆ ಕೆಲಸ ಮಾಡಲು ಅನುಗುಣವಾದ ಮೊದಲ 10 ಶ್ರೇಷ್ಠ ಕಂಪನಿಗಳಲ್ಲಿ ಒಂದೆಂದು ಪ್ರಕಟಿಸಿತು.[೧೭]
ಟೀಕೆಗಳು
[ಬದಲಾಯಿಸಿ]ಈಕ್ವಿಟೆಬಲ್ ಲೈಫ್
[ಬದಲಾಯಿಸಿ]ಏಪ್ರಿಲ್ 2004ರಲ್ಲಿ, ಈಕ್ವಿಟೆಬಲ್ ಲೈಫ್ ಎಂಬ ಯುಕೆ ವಿಮಾ ಕಂಪನಿಯು, ತನ್ನ ಪಾಲಿಸಿಗಳನ್ನು ಹೊಂದಿರುವವರಿಗೆ ಕಡ್ಡಾಯವಾಗಿ ವಾರ್ಷಿಕ ವೇತನ ನೀಡಬೇಕೆಂದು ಹೌಸ್ ಆಫ್ ಲಾರ್ಡ್ಸ್ ನವರು ನೀಡಿದ ತೀರ್ಪಿನಿಂದ ನೆಲಕಚ್ಚುವ ಮಟ್ಟಕ್ಕೆ ಬಂದುದರಿಂದ EY ಮೇಲೆ ದಾವೆ ಹೂಡಿತು. EY ತನ್ನ ಲೆಕ್ಕಪರಿವೀಕ್ಷಣ ಜವಾಬ್ದಾರಿಯನ್ನು ಅಲಕ್ಷ್ಯ ಮಾಡಿತು ಎಂದ ಈಕ್ವಿಟೆಬಲ್ £2.6ಬಿಲಿಯನ್ ಮೊತ್ತವನ್ನು ಪರಿಹಾರಧನವಾಗಿ ನೀಡಬೇಕೆಂಬ ಬೇಡಿಕೆ ಮುಂದೊಡ್ಡಿತು. ಈಕ್ವಿಟೆಬಲ್ 2005ರಲ್ಲಿ ದಾವೆಯನ್ನು ಕೈಬಿಟ್ಟಿತು ಮತ್ತು ಎರಡೂ ಪಕ್ಷಗಳು ತಮ್ಮ ದಾವೆಯ ವೆಚ್ಚವನ್ನು ತಾವೇ ಭರಿಸುವುದೆಂಬ ತೀರ್ಮಾನ ಕೈಗೊಳ್ಳಲಾಯಿತು. EY ಈ ಮೊಕದ್ದಮೆಯನ್ನು "ಸಂಬಂಧಿಸಿದ ಎಲ್ಲರ ಸಮಯ, ದುಡ್ಡು ಮತ್ತು ಸಂಪನ್ಮೂಲಗಳು ವೃಥಾ ಹಾಳಾಗಲು ಕಾರಣವಾದುದಷ್ಟೆ" ಎಂದು ಬಣ್ಣಿಸಿತು."[೧೮]
ಆಂಗ್ಲೋ ಐರಿಷ್ ಬ್ಯಾಂಕ್
[ಬದಲಾಯಿಸಿ]ಜನವರಿ 2009ರಲ್ಲಿ, ಆಂಗ್ಲೋ ಐರಿಷ್ ಬ್ಯಾಂಕ್ ಗೋಪ್ಯ ಸಾಲ ವಿವಾದದಲ್ಲಿ, ಆ ಕಂಪನಿಯ ಅಧ್ಯಕ್ಷರಾದ ಸೀನ್ ಫಿಟ್ಝ್ ಪ್ಯಾಟ್ರಿಕ್ ಗೆ ನೀಡಿದಂತಹ ಬೃಹತ್ ಮೊತ್ತದ ಸಾಲಗಳನ್ನು ಲೆಕ್ಕಶೋಧನಾ ಸಮಯದಲ್ಲಿ ಪತ್ತೆ ಹಚ್ಚಲಾಗದುದಕ್ಕೆ EY ರಾಜಕಾರಣಿಗಳು[೧೯] ಹಾಗೂ ಆಂಗ್ಲೋ ಐರಿಷ್ ಕಂಪನಿಯ ಪಾಲುದಾರರಿಂದ ಟೀಕೆಗೆ ಒಳಗಾಯಿತು. ಆ ಕಂಪನಿಯ ಷೇರುಗಳು ಸುಮಾರು 99%ದಷ್ಟು ಇಳಿದುಬಿಟ್ಟವು; ಕಡೆಗೆ ಐರಿಷ್ ಸರ್ಕಾರವೇ ಆ ಬ್ಯಾಂಕ್ ನ ಸಂಪೂರ್ಣ ಸ್ವಾಮ್ಯವನ್ನು ವಹಿಸಬೇಕಾಯಿತು.[೨೦] ಆಗಿನ ಫೈನಾನ್ಷಿಯಲ್ ರೆಗ್ಯುಲೇಟರ್ ನ ಪ್ರಧಾನ ಕಾರ್ಯಕಾರಿ ನಿರ್ದೇಶಕರು ಒಂದು ಪಾರ್ಲಿಮೆಂಟರಿ ಸಭಯನ್ನುದ್ದೇಶಿಸಿ ಮಾತನಾಡುತ್ತಾ "ಈ ವಿಧದ ಹಾಗೂ ಈ ಪ್ರಮಾಣದ ವಿಷಯಗಳು ಬಾಹ್ಯದ ಲೆಕ್ಕಶೋಧಕರ ಕಣ್ಣಿಗೆ ಬಿದ್ದೇ ಬೀಳುತ್ತವೆ ಎಂದು ಯಾವ ದಡ್ಡನೂ ಸಹ ಹೇಳಬಲ್ಲ" ಎಂದು ಹೇಳಿಕೆ ನೀಡಿದರು.[೨೧] EY, ವಕೀಲರ ಸಲಹೆಯ ಮೇರೆಗೆ, ಈ ಸಮಿತಿಯ ಮುಂದೆ ಹಾಜರಾಗಲು ನಿರಾಕರಿಸಿತು.[೨೨][೨೩] ತಾವು ಮಾಧ್ಯಮದ ಚರ್ಚಾ ವಸ್ತುವಾಗಿ ಎಲ್ಲೆಡೆ ಪಸರಿಸುವುದನ್ನು ಬಯಸದ ಕಾರಣ ಸಮಿತಿಯ ಮುಂದೆ ಹಾಜರಾಗಲಿಲ್ಲವೆಂದು EY ನಂತರದ ದಿನಗಳಲ್ಲಿ ಹೇಳಿಕೆ ನೀಡಿತು.[೨೪] "ಆಂಗ್ಲೋ-ಐರಿಷ್ ನಲ್ಲಿ ನಿರ್ದೇಶಕರಿಗೆ ನೀಡಲಾದ ಸಾಲವನ್ನು ಯಾವ ಪರಿಸ್ಥಿತಿಗೆ ಸಿಲುಕಿ ನೀಡಲಾಯಿತು" [೨೫] ಹಾಗೂ ಅದರ ಲೆಕ್ಕ ಶೋಧಕರಾದ EYನವರ ಪಾತ್ರ ತತ್ಸಂಬಂಧಿತವಾಗಿ ಎಂತಹುದು ಎಂಬುದನ್ನು ತನಿಖೆ ಮಾಡಲು ಮಾಜಿ ಕಂಪ್ರ್ಟೋಲರ್ ಆಗೂ ಆಡಿಟರ್ ಜನರಲ್ ಆದ ಜಾನ್ ಪರ್ಸೆಲ್ ರವರನ್ನು ದ ಚಾರ್ಟರ್ಡ್ ಅಕೌಂಟೆಂಟ್ಸ್ ರೆಗ್ಯುಲೇಟರಿ ಬೋರ್ಡ್ ನೇಮಿಸಿತು.[೨೬][೨೭]
ಸನ್ಸ್ ಆಫ್ ಗ್ವಾಲಿಯಾ
[ಬದಲಾಯಿಸಿ]ಸೆಪ್ಟೆಂಬರ್ 4, 2009ರಂದು ಸನ್ಸ್ ಆಫ್ ಗ್ವಾಲಿಯಾದ ಮಾಜಿ ಆಡಿಟರ್ ಗಳಾದ EY ಚಿನ್ನದ ಗಣಿಯವರ ಕುಸಿತದಲ್ಲಿ ತಮ್ಮ ಪಾತ್ರದ ಬಗ್ಗೆ AU$125ಮಿಲಿಯನ್ ಗೆ ರಾಜಿಯಾಗಲು ಸಮ್ಮತಿಸಿದರು. ಕಂಪನಿಯ ಆಡಳಿತಾಧಿಕಾರಿಯಾದ ಫೆರಿಯರ್ ಹಾಡ್ಜ್ ಸನ್ ಚಿನ್ನ ಹಾಗೂ ಡಾಲರ್ ಗಳನ್ನಾವರಿಸಿದ ಗುತ್ತಿಗೆಗಳ ಲೆಕ್ಕಶೋಧನೆಯ ಬಗ್ಗೆ EY ಬೇಜವಬ್ದಾರಿಯಿಂದ ನಡೆದುಕೊಂಡಿತು ಎಂದು ಘೋಷಿಸಿದರು. ಆದರೆ EY ತಾವು ರಾಜಿಯಾಗಲು ಸಮ್ಮತಿಸಿದುದು ತಮ್ಮ ಯಾವುದೇ ಜವಾಬ್ದಾರಿಯ ಅವಗಣನೆಯ ದ್ಯೋತಕವಲ್ಲ ಎಂದು ಸಾರಿದರು.[೨೮]
ಅಕಾಯ್ ಹೋಲ್ಡಿಂಗ್ಸ್
[ಬದಲಾಯಿಸಿ]ಅಕ್ಟೋಬರ್ 11, 2009ರಂದು EY ಅಕಾಯ್ ಹೋಲ್ಡಿಂಗ್ಸ್ ನ ತೀರುವಳಿ ಅಧಿಕಾರಿಗಳಿಗೆ US$200 ಮಿಲಿಯನ್ ನೀಡಲು ಕಾನೂನುರೀತ್ಯಾ ಒಪ್ಪಂದಕ್ಕೆ ಸಹಿ ಹಾಕಿತು. ತಮ್ಮ ಮೇಲೆ ಬರಬಹುದಾದ ಬೇಜವಾಬ್ದಾರಿಯ ಆರೋಪವನ್ನು ಹತ್ತಿಕ್ಕಲು EY ನ್ಯಾಯಾಲಯದ ಕಾಗದಪತ್ರಗಳನ್ನು ನಕಲಿಸಲು ಯತ್ನಿಸಿತು ಎಂಬ ಆರೋಪ ಹೊರಿದಲಾದ ಕಾರಣ ಅದರ ಹಾಂಗ್ ಕಾಂಗ್ ಕಚೇರಿಯನ್ನು ಪೊಲೀಸರು ರೈಡ್ ಮಾಡಿದರು ಎಂದು ಹೇಳಲಾಗಿದೆ.[೨೯]
ಲೆಹ್ಮನ್ ಬ್ರದರ್ಸ್
[ಬದಲಾಯಿಸಿ]ಪಾಪರ್ ನ್ಯಾಯಾಲಯದ ತನಿಖೆದಾರರಾದ ಆಂಟನ್ ಆರ್. ವ್ಯಾಲ್ಯುಕಾಸ್ ರವರು ಮಾರ್ಚ್ 11, 2010[೩೦] ರಂದು ನೀಡಿದ ವ್ಯಾಲ್ಯುಕಾಸ್ ವರದಿಯು ಲೆಹ್ಮನ್ ಬ್ರದರ್ಸ್ ರೆಪೋ 105 ಎಂಬ ಒಂದು ವೃತ್ತಿಯಲ್ಲಿ ತೊಡಗಿದ್ದರೆಂದೂ ಹಾಗೂ ಲೆಹ್ಮನ್ ನ ಲೆಕ್ಕಶೋಧಕರಾದ EYಗೆ ಅದರ ಅರಿವಿತ್ತೆಂದೂ ಸಾರುತ್ತದೆ. EYನ ವಕ್ತಾರರಾದ ಚಾರ್ಲ್ಸ್ ಪರ್ಕಿನ್ಸ್ ಲೆಹ್ಮನ್ ಬ್ರದರ್ಸ್ ಕಂಪನಿಯ ವಿಸಯದಲ್ಲಿ ತಾವು ನಡೆಸಿದ ಕಡೆಯ ಲೆಕ್ಕಶೋಧನೆಯು ನವೆಂಬರ್ ೩೦, 2007ರಂದು ಮುಗಿಯುವ ಆರ್ಥಿಕ ವರ್ಷದ್ದೆಂದೂ, ಹಾಗೂ, EYನ ಅಭಿಪ್ರಾಯದಂತೆ, ಲೆಹ್ಮನ್ ನ ಆ ವರ್ಷದ ಲೆಕ್ಕಪತ್ರಗಳ ವರದಿಯನ್ನು ಸಾಮಾನ್ಯವಾಗಿ ಒಪ್ಪತಕ್ಕ ಲೆಕ್ಕಶೋಧನ ನಿಯಮಗಳ (GAAP)ಪ್ರಕಾರವೇ ಮಂಡಿಸಲಾಯಿತೆಂದೂ ಹೇಳಿದರು.[೩೧][೩೨][೩೩] AADBಯು 16 ಜೂನ್ 2010ರಂದು ಒಂದು ತನಿಖೆಗೆ ಆದೇಶ ನೀಡಿತು.[೩೪]
ಪ್ರಾಯೋಜಕತ್ವ
[ಬದಲಾಯಿಸಿ]ಅರ್ನ್ಸ್ಟ್ & ಯಂಗ್ ನ ಪ್ರಚಾರ ಕಾರ್ಯವು 50 ದೇಶಗಳಲ್ಲಿ ನಡೆಸಲ್ಪಡುವ ಜಾಗತಿಕ ವರ್ಷದ ಉದ್ಯಮಿ ಕಾರ್ಯಕ್ರಮ ವನ್ನೂ ಒಳಗೊಂಡಿದೆ.[೩೫] ಪ್ರಸಿದ್ಧ ಕಲಾವಿದರಾದ ಸೆಝಾನ್ನೆ, ಪಿಕಾಸೋ, ಬೊನಾರ್ಡ್, ಮಾನೆಟ್, ರಾಡಿನ್ ಮತ್ತು ರೆನಾಯ್ರ್ ರ ಚಿತ್ರಗಳ ಪ್ರದರ್ಶನವನ್ನು ಪ್ರಾಯೋಜಿಸುವ ಮೂಲಕವೂ ಯುಕೆಯ EY ಪ್ರಚಾರ ಗಿಟ್ಟಿಸುತ್ತದೆ. ಅದರಲ್ಲಿ ಇತ್ತೀಚಿನದೆಂದರೆ ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯದಲ್ಲಿನ ಮಹಾರಾಜ: ದ ಸ್ಪ್ಲೆಂಡರ್ ಆಫ್ ಇಂಡಿಯಾಸ್ ರಾಯಲ್ ಕೋರ್ಟ್ಸ್ ಎಂಬುದು.[೩೬] ಅಲ್ಲದೆ,PBS ಕಿಡ್ಸ್ ಗೋ! ಶೀರ್ಷಿಕೆಯ ಅಡಿಯಲ್ಲಿನ PBS ಕಿಡ್ಸ್ ನ ಸೈಬರ್ ಚೇಸ್ ಎಂಬ ಶಿಕ್ಷಣಪ್ರಧಾನವಾದ ಮಕ್ಕಳ ಪ್ರದರ್ಶನವನ್ನು ಪ್ರಾಯೋಜಿಸುವ ಮೂಲಕವೂ EY ಪ್ರಚಾರ ಪಡೆಯುತ್ತದೆ.
ಈ ಕಾರ್ಯಕ್ರಮವು ಆ ಟೆಲಿವಿಷನ್ ಬ್ರ್ಯಾಂಡ್ ಮೂಲಕ ಮಕ್ಕಳಲ್ಲಿನ ಗಣಿತದ ಅರಿವನ್ನು ಹೆಚ್ಚಿಸಲೆಂದು ನಡೆಸಲ್ಪಡುತ್ತದೆ.[೩೭]
EY ITEM ಕ್ಲಬ್ ನ ಪ್ರಾಯೋಜಕರು.[೩೮]
ಪ್ರಮುಖ ಸದರಿ ಮತ್ತು ಮಾಜಿ ನೌಕರರು
[ಬದಲಾಯಿಸಿ]ವ್ಯವಹಾರ
[ಬದಲಾಯಿಸಿ]- ಕರಣ್ ಬಿಲ್ಲಿಮೋರಿಯಾ, ಬ್ಯಾರನ್ ಬಿಲ್ಲಿಮೋರಿಯಾ - ಕೋಬ್ರಾ ಬೀರ್ ನ ಸ್ಥಾಪಕ
- ಆಂಡ್ರೂ ಗೌಲ್ಡ್ - ಸ್ಕ್ಲಂಬರ್ಗರ್ ನ ಚೇರ್ಮನ್ ಮತ್ತು CEO (2003–ಇಂದಿನವರೆಗೆ)
- ಎಡ್ ಗ್ರೈಯರ್ - ಡಿಸ್ನೀಲ್ಯಾಂಡ್ ರೆಸಾರ್ಟ್ ನ ಅಧ್ಯಕ್ಷರು(2006–ಇಂದಿನವರೆಗೆ)
- ಕ್ರಿಸ್ ಕುಬಾಸಿಕ್ - CFO of ಲಾಕ್ ಹೀಡ್ ಮಾರ್ಟಿನ್ ನ CFO (2001–ಇಂದಿನವರೆಗೆ)
- ಸೀನ್ ವೈಸ್ - ವೆಂಚರ್ ಕ್ಯಾಪಿಟಲ್ ವಿವರಣಕಾರ
- ಪ್ಯಾಟ್ರೀಷಿಯಾ ಎ. ವೊಯೆರ್ಟ್ಝ್ - ಆರ್ಚರ್ ಡೇನಿಯಲ್ಸ್ ಮಿಡ್ ಲ್ಯಾಂಡ್ ನ CEO (2006–ಇಂದಿನವರೆಗೆ)
- ಆರ್ಥರ್ ಬ್ಲ್ಯಾಂಕ್ - ಸಹ-ಸಂಸ್ಥಾಪಕರು - ಹೋಂ ಡಿಪೋ, ಮಾಲಿಕರು - ಅಟ್ಲಾಂಟಾ ಫಾಲ್ಕನ್ಸ್
- ಜಿಮ್ ಬಾಲ್ಸಿಲ್ಲೀ - ರಿಸರ್ಚ್ ಇನ್ ಮೋಷನ್ ನ ಸಹ-CEO (1992–ಇಂದಿನವರೆಗೆ)
- ಮಿಖೈಲ್ ಟಿ. ಸ್ಟ್ರಿಯಾನೀಸ್ - L-3 ಕಮ್ಯುನಿಕೇಷನ್ಸ್ ನ CEO (2006–ಇಂದಿನವರೆಗೆ)
ರಾಜಕಾರಣ ಮತ್ತು ಸಾರ್ವಜನಿಕ ಸೇವೆ
[ಬದಲಾಯಿಸಿ]- ಜಾನ್ ಕ್ಯಾಂಪ್ ಬೆಲ್ - ಯು.ಎಸ್. ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್ ನ ಸದಸ್ಯ (2005–ಇದುವರೆಗೆ)
- ಜುನ್ ಚೋಯ್ - ಎಡಿಸನ್, ನ್ಯೂ ಜೆರ್ಸಿಯ ಮೇಯರ್ (2006–ಇಂದಿನವರೆಗೆ)
- ಕ್ರಿಸ್ತೋಫರ್ ಚೋಪ್ - ಬ್ರಿಟಿಷ್ ಪಾರ್ಲಿಮೆಂಟ್ ನ ಸದಸ್ಯರು (1983–92; 1997–ಇಂದಿನವರೆಗೆ)
- ಶೈಲಾ ಫ್ರೇಸರ್ - ಕೆನಡಾದ ಆಡಿಟರ್ ಜನರಲ್ (2001–ಇಂದಿನವರೆಗೆ)
- ಚೆರಿಲ್ ಗಿಲಾನ್ - ಬ್ರಿಟಿಷ್ ಪಾರ್ಲಿಮೆಂಟ್ ನ ಸದಸ್ಯ (1992–ಇಂದಿನವರೆಗೆ)
- ಎಡ್ವರ್ಡ್ ಹೆಚ್ ಎಂಟಲಾಮಿ - ಕೆನ್ಯನ್ ಕ್ಯಾಪಿಟಲ್ ಮಾರ್ಕೆಟ್ಸ್ ಅಥಾರಿಟಿಯ CEO (2002–ಇಂದಿನವರೆಗೆ)
- ಜಾನ್ ಹೊವೆಲ್ - ಬ್ರಿಟಿಷ್ ಪಾರ್ಲಿಮೆಂಟ್ ನ ಸದಸ್ಯರು (2008–ಇಂದಿನವರೆಗೆ)
- ಹ್ಯೂಗೋ ಸ್ಕಿಲ್ಟ್ಝ್ - ಬೆಲ್ಜಿಯಂನ ಸೆನೇಟರ್ (1992–1995)
- ಜೆಫ್ ಮ್ಯಾಕ್ವಾಟರ್ಸ್ - ವರ್ಜೀನಿಯಾ ರಾಜ್ಯ ಸೆನೇಟ್ ನ ಸದಸ್ಯರು (2010–ಈಗಿನವರೆಗೆ)
ಇತರೆ
[ಬದಲಾಯಿಸಿ]- ಕಿಂಬರ್ಲಿ ಕ್ಲಾರಿಸ್ ಐಕೆನ್ - ಮಿಸ್ ಅಮೆರಿಕ 1994
- ಜೆನೇವೀಯ್ವೆ ಬ್ರಾಮೆ - ಲೇಖಕ
- ಜೆಫ್ ಮಾಸ್ (ಜನನ c. 1975) DEF CONನ ಸಂಸ್ಥಾಪಕರು ಮತ್ತು ಬ್ಲ್ಯಾಕ್ ಹ್ಯಾಟ್ ಟೆಕ್ನಾಲಜಿ ಕಾಂಪೆರೆನ್ಸ್ ಗಳ ಸಂಸ್ಥಾಪಕರು ಹಾಗೂ ಹೋಂ ಎಂಡ್ ಸೆಕ್ಯುರಿಟಿ ಅಡ್ವೈಸರಿ ಕೌನ್ಸಿಲ್ ನ ಸದಸ್ಯರು.
ಆಕರಗಳು
[ಬದಲಾಯಿಸಿ]- ↑ "Ernst & Young: Jim Turley". Archived from the original on 2010-06-04. Retrieved 2010-07-23.
- ↑ Ernst & Young Global Limited Company Profile
- ↑ ಹೂವರ್ಸ್. 13 ನವೆಂಬರ್ 2006ರಂದು ಮರುಸಂಪಾದಿಸಲಾಗಿದೆ.
- ↑ "America's Largest Private Companies". Forbes. 2009-10-28. Retrieved 2010-02-28.
- ↑ ೫.೦ ೫.೧ ೫.೨ ೫.೩ ೫.೪ "ಅರ್ನ್ಸ್ಟ್ & ಯಂಗ್ - ಇತಿಹಾಸ". Archived from the original on 2009-02-24. Retrieved 2010-07-23.
- ↑ ಆರ್ಥರ್ ಯಂಗ್ ಮತ್ತು ಅರ್ನ್ಸ್ಟ್ ಜೊತೆಗೂಡಬಹುದೆಂದು ವರದಿಗಳು ಹೇಳುತ್ತವೆ ನ್ಯೂ ಯಾರ್ಕ್ ಟೈಮ್ಸ್ , ಮೇ 1989
- ↑ ಅಕೌಂಟೆನ್ಸಿ ಕೈಜೋಡಿಸುವಿಕೆ ರದ್ದು
- ↑ ಕ್ಯಾಪ್ ಜಿಮಿನಿಯು ಅರ್ನ್ಸ್ಟ್ & ಯಂಗ್ ಸಲಹಾ ವ್ಯವಹಾರವನ್ನು ತನ್ನದಾಗಿಸಿಕೊಳ್ಳಲು ಸನ್ನದ್ಧ ನ್ಯೂ ಯಾರ್ಕ್ ಟೈಮ್ಸ್, ಮಾರ್ಚ್ 2000
- ↑ ಅರ್ನ್ಸ್ಟ್ & ಯಂಗ್ ಆಂಡರ್ಸನ್ ಇಂಡಿಯಾ Archived 2009-06-08 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನು ತನ್ನದಾಗಿಸಿಕೊಂಡಿತು
- ↑ ಜಾಗತಿಕ ರಚನೆಯನ್ನು ದೃಢೀಕರಿಸಿದ ಅರ್ನ್ಸ್ಟ್ & ಯಂಗ್
- ↑ "ಅರ್ನ್ಸ್ಟ್ & ಯಂಗ್ ಸೇವಾ ಸಾಲುಗಳ ಕರಪತ್ರ" (PDF). Archived from the original (PDF) on 2010-04-01. Retrieved 2010-07-23.
- ↑ www.ey.com ನಮ್ಮ ಇತಿಹಾಸ
- ↑ "ಬಿಸಿನೆಸ್ ವೀಕ್: ದ ಬೆಸ್ಟ್ ಪ್ಲೇಸಸ್ ಟು ಲಾಂಚ್ ಎ ಕೆರಿಯರ್". Archived from the original on 2010-02-26. Retrieved 2010-07-23.
- ↑ "ಅರ್ನ್ಸ್ಟ್ & ಯಂಗ್ ಎಲ್ಎಲ್ ಪಿ named to ಫಾರ್ಚ್ಯೂನ್ ನ "ಉದ್ಯೋಗ ಮಾಡಲು ಅರ್ಹವಾದ 100 ಶ್ರೇಷ್ಠ ಕಂಪನಿಗಳು" ಪಟ್ಟಿಯಲ್ಲಿ ಸತತವಾಗಿ 12ನೆಯ ವರ್ಷಗಳ ಕಾಲ ದಾಖಲಾಗಿದೆ". Archived from the original on 2010-02-10. Retrieved 2010-07-23.
- ↑ "ಕಂಪ್ಯೂಟರ್ ವರ್ಲ್ಡ್: ITಯಲ್ಲಿ ಉದ್ಯೋಗ ಮಾಡಲು ಅರ್ಹವಾದ 100 ಶ್ರೇಷ್ಠ ಸ್ಥಳಗಳು". Archived from the original on 2007-03-02. Retrieved 2021-08-24.
- ↑ "ಟೈಮ್ಸ್-ಆನ್-ಲೈನ್: ವೇರ್ ವುಮೆನ್ ವಾಂಟ್ ಟು ವರ್ಕ್". Archived from the original on 2008-09-05. Retrieved 2010-07-23.
- ↑ ವರ್ಕಿಂಗ್ ಮದರ್
- ↑ ಬಿಬಿಸಿ ನ್ಯೂಸ್ (2005). ಈಕ್ವಿಟೆಬಲ್ ಡ್ರಾಪ್ಸ್ ಹೈಕೋರ್ಟ್ ಆಕ್ಷನ್. 26 ಆಗಷ್ಟ್ 2006ರಂದು ಪುನಶ್ಚೇತನಗೊಳಿಸಲಾಗಿದೆ.
- ↑ "ವೇರ್ ಆರ್ ದ ಆಡಿಟರ್ಸ್?". Archived from the original on 2012-02-13. Retrieved 2010-07-23.
- ↑ "egmನಲ್ಲಿ ಆಂಗ್ಲೋನ ಮಂಡಳಿ ಮತ್ತು ಲೆಕ್ಕಶೋಧಕರನ್ನು ಟೀಕೆ ಮಾಡಲಾಯಿತು ಮತ್ತು ಪಾಲುದಾರರಿಗೆ ಫಿಟ್ಝ್ ಪ್ಯಾಟ್ರಿಕ್ ಬ್ಯಾಂಕಿಗೆ 2007ರಲ್ಲಿಯೇ ಒಟ್ಟಾರೆ €129ಮಿಲಿಯನ್ ನೀಡಬೇಕೆಂಬುದನ್ನು ಹೇಳಲಾಯಿತು". Archived from the original on 2011-05-22. Retrieved 2010-07-23.
- ↑ "ಫಿಟ್ಝ್ ಪ್ಯಾಟ್ರಿಕ್ ರ ಆಂಗ್ಲೋ ಸಾಲವು €87ಮಿಲಿಯನ್ ಗಿಂತಲೂ ಹೆಚ್ಚಿನದಾಗಿತ್ತು". Archived from the original on 2011-05-22. Retrieved 2010-07-23.
- ↑ ಆಂಗ್ಲೋದ ಬಾಹ್ಯ ಲೆಕ್ಕಶೋಧಕರಿಂದ ಆಯಿರೀಕ್ಟಾಸ್ ಸಮಿತಿಯ ಮುಂದೆ ಬರಲು ನಿರಾಕರಣೆ
- ↑ RTE ನ್ಯೂಸ್
- ↑ ಆಂಗ್ಲೋ ಜೊತೆ ಕೆಲಸ ಮಾಡಲು ತಮಗೆ 'ಹೆಮ್ಮೆ' ಎಂದ ಅರ್ನ್ಸ್ಟ್ & ಯಂಗ್
- ↑ "ಆಂಗ್ಲೋ ಐರಿಷ್ ನ ಪ್ರಧಾನ ನಿರ್ದೇಶಕ ಹುದ್ದೆಗೆ ರಾಜೀನಾಮೆ ಇತ್ತ ಡ್ರಂ". Archived from the original on 2012-09-19. Retrieved 2010-07-23.
- ↑ "Press Release Further appointments for Purcell". Chartered Accountants Regulatory Board. 2009-03-25.
- ↑ "Accountancy watchdog seeks to widen inquiry into Anglo Irish". 2009-03-26. Retrieved 2010-03-01.
- ↑ ಸನ್ಸ್ ಆಫ್ ಗ್ವಾಲಿಯ ದಾವೆಯ ಇತ್ಯರ್ಥಕ್ಕಾಗಿ $125ಮಿಲಿಯನ್ ನೀಡಲು ಅರ್ನ್ಸ್ಟ್ & ಯಂಗ್ ಅಂಗೀಕಾರ Archived 2011-02-05 ವೇಬ್ಯಾಕ್ ಮೆಷಿನ್ ನಲ್ಲಿ. ದ ವೆಸ್ಟ್ ಆಸ್ಟ್ರೇಲಿಯನ್, ಪ್ರಕಟಣೆ: 4 ಸೆಪ್ಟೆಂಬರ್ 2009, ಪಡೆದದ್ದು: 4 ಸೆಪ್ಟೆಂಬರ್ 2009
- ↑ "Ernst & Youngs US$200m snag". South China Morning Post. 12 October 2009. Retrieved 12 October 2009.
- ↑ ಲೆಹ್ಮನ್ ನ ನಿರ್ದೇಶಕರು ತಮ್ಮ ಜವಾಬ್ದಾರಿಯನ್ನು ತಳ್ಳಿಹಾಕಿಲ್ಲವೆಂದು ಮನಗಂಡ ತನಿಖೆದಾರ
- ↑ ಲೆಹ್ಮನ್ ಪುಸ್ತಕಗಳನ್ನು ಕುಸಿತಕ್ಕೆ ಮುನ್ನ ತಿದ್ದಿದರು, ತನಿಖಾ ವರದಿ
- ↑ ನ್ಯಾಯಾಲಯ-ನಿಯಮಿತ ತನಿಖಾದಾರನು ವರದಿಯನ್ನು ಬಹಿರಂಗಗೊಳಿಸಿದನು
- ↑ "ಲೆಹ್ಮನ್ ನ ಹೊಗೆಕಾರುತ್ತಿರುವ ಪಿಸ್ತೂಲು E&Y ಹಲವಾರು ಪ್ರಶ್ನೆಗಳನ್ನು ಎದುರಿಸುವಂತೆ ಮಾಡಿದೆ". Archived from the original on 2010-05-02. Retrieved 2010-07-23.
- ↑ ಲೆಹ್ಮನ್ ಲೆಕ್ಕಶೋಧನೆಯ ವಿಚಾರದಲ್ಲಿ ತನಿಖೆಗೆ ಗುರಿಯಾದ ಅರ್ನ್ಸ್ಟ್ & ಯಂಗ್, ಡೈಲಿ ಟೆಲಿಗ್ರಾಫ್ , 16 ಜೂನ್ 2010
- ↑ "ಅರ್ನ್ಸ್ಟ್ & ಯಂಗ್ ವರ್ಷದ ಉದ್ಯೋಗಿ ಪ್ರಶಸ್ತಿಗಳು". Archived from the original on 2010-06-04. Retrieved 2010-07-23.
- ↑ "ಮಹಾರಾಜ: ದ ಸ್ಪ್ಲೆಂಡರ್ ಆಫ್ ಇಂಡಿಯಾಸ್ ರಾಯಲ್ ಕೋರ್ಟ್ಸ್". Archived from the original on 2010-05-10. Retrieved 2010-07-23.
- ↑ ಸೈಬರ್ ಚೇಸ್ - PBS ಕಿಡ್ಸ್ ಅಧಿಕೃತ PBS ಕಿಡ್ಸ್ ಜಾಲತಾಣ, ಸಾಂಘಿಕ ಪ್ರಾಯೋಜಕತ್ವಗಳೊಂದಿಗೆ.
- ↑ "ಅರ್ನ್ಸ್ಟ್ & ಯಂಗ್ ಐಟಮ್ ಕ್ಲಬ್ ನಿಂದ ನೂತನ ಪ್ರಧಾನ ವಿತ್ತತಜ್ಞರ ನೇಮಕ". Archived from the original on 2011-06-08. Retrieved 2010-07-23.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Orphaned articles from ಮಾರ್ಚ್ ೨೦೧೯
- All orphaned articles
- Articles with invalid date parameter in template
- All articles containing potentially dated statements
- ನ್ಯೂ ಯಾರ್ಕ್ ನಲ್ಲಿ ತಳವೂರಿರುವ ಕಂಪನಿಗಳು
- ಲಂಡನ್ ಮೂಲದ ಕಂಪೆನಿಗಳು
- ಯುನೈಟೆಡ್ ಸ್ಟೇಟ್ಸ್ ನ ಖಾಸಗಿ ಕಂಪನಿಗಳು
- ಯುನೈಟೆಡ್ ಕಿಂಗ್ಡಂನ ಖಾಸಗಿ ಕಂಪನಿಗಳು
- 1927ರಲ್ಲಿ ಸ್ಥಾಪನೆಯಾದ ಕಂಪನಿಗಳು
- ಲೆಕ್ಕಶೋಧಕ ಸಂಸ್ಥೆಗಳು
- ಯುನೈಟೆಡ್ ಸ್ಟೇಟ್ಸ್ ನ ಲೆಕ್ಕಶೋಧಕ ಸಂಸ್ಥೆಗಳು
- ಅಂತರರಾಷ್ಟ್ರೀಯ ವ್ಯವಸ್ಥಾಪನ ಸಲಹಾ ಸಂಸ್ಥೆಗಳು
- ಉದ್ಯಮ
- ಅರ್ಥಶಾಸ್ತ್ರ