ಅರಿಹಂತ-ಪ್ರಥಮವರ್ಗದ ಜಲಾಂತರ್ಗಾಮಿ
ಗೋಚರ
ಅರಿಹಂತ್ - ಪ್ರಥಮವರ್ಗದ ಜಲಾಂತರ್ಗಾಮಿ
@@@@@@@@@@@@@@@@@@@@
- ಸಾಮಾನ್ಯ ಗುಣಲಕ್ಷಣಗಳು
- ವಿಧ: ಅಣುಶಕ್ತಿ ಚಾಲಿತ ಕ್ಷಿಪಣಿ ಜಲಾಂತರ್ಗಾಮಿ
- ಸ್ಥಳಾಅಕ್ರಮಣ: 6000 ಟನ್ (5,900:ದೀರ್ಘ ಟನ್; 6,600 ಕಿರು ಟನ್ನುಗಳು)
- ಉದ್ದ: 112 ಮೀ (367 ಅಡಿ)
- ಬೀಮ್: 11 ಮೀ (36 ಅಡಿ)
- ಡ್ರಾಫ್ಟ್ : 10 ಮೀಟರ್ (33 ಅಡಿ)
- ಸ್ಥಾಪಿತ ವಿದ್ಯುತ್: 1×ಒತ್ತಡದ ನೀರಿನ ರಿಯಾಕ್ಟರ್]; 83 ಮೆವ್ಯಾ (1,11,000 ಎಚ್ಪಿ)
- ಪ್ರೊಪಲ್ಷನ್: 1×ಪ್ರೊಪೆಲ್ಲರ್ ಶಾಫ್ಟ್
- ಪರಮಾಣುವಿನದು
- * ವೇಗ:
- ಮೇಲೆ: 12-15 ನಾಟ್‍ಗಳು (22-28 ಕಿಮೀ / ಗಂ)
- ಮುಳುಗಿದಾಗ: 24 ನಾಟ್‍ಗಳು (44 ಕಿಮೀ / ಗಂ)
- ವ್ಯಾಪ್ತಿ: ಆಹಾರ ಹೊರತುಪಡಿಸಿ ಅನಿಯಮಿತ
- ಟೆಸ್ಟ್ ಆಳ: 300 ಮೀ (980 ಅಡಿ)
- ಪೂರಕವಾಗಿ: 95
- *ಸಂವೇದಕಗಳು ಮತ್ತು ಸಂಸ್ಕರಣಾ ವ್ಯವಸ್ಥೆಗಳು :ಯು.ಎಸ್.ಎಚ್.ಯು.ಎಸ್ (USHUS) ಸೋನಾರ್
- •*ಶಸ್ತ್ರಾಸ್ತ್ರ:
- ಕ್ಷಿಪಣಿಗಳು: 12 × ಕೆ 15 ಎಸೆಲಬಿಎಮ್ (750-1900 ಕಿ.ಮೀ ಅಥವಾ 405-1026 ಮೈಲಿ ವ್ಯಾಪ್ತಿ) ಅಥವಾ 4 × ಕೆ 4 ಎಸೆಲಬಿಎಮ್ (3500 ಕಿ.ಮೀ. ಅಥವಾ 1890 ಮೈಲಿ ವ್ಯಾಪ್ತಿಯಲ್ಲಿ)
- ಟಾರ್ಪೆಡೊ: 6 ×21 "(533 ಮಿಮೀ) ನೌಕಾಸ್ಫೋಟಕ ಟ್ಯೂಬ್ಗಳು - ಎಸ್ಟ್ 30 ಛಾರ್ಜ್‍ಗಳು (ನೌಕಾ, ಕ್ರೂಸ್ ಮಿಸೈಲುಗಳನ್ನು ಅಥವಾ ಮೈನ್‍ಸ್ಪೋಟಕಗಳು)
ಅಣು ಚಾಲಿತ ಜಲಾಂತರ್ಗಾಮಿ
[ಬದಲಾಯಿಸಿ]- Arihant-class submarine
- ಅರಿಹಂತ್ ಪ್ರಥಮವರ್ಗದ (ಆರ್ಥ:ಶತ್ರುನಾಶಕ:ಸಂಸ್ಕೃತ) ಪರಮಾಣು ಚಾಲಿತ ಕ್ಷಿಪಣಿ ಜಲಾಂತರ್ಗಾಮಿ. ಇದನ್ನು ಭಾರತೀಯ ನೌಕಾಪಡೆಗಾಗಿ ನಿರ್ಮಿಸಲಾಗಿದೆ. ಒಂದು ಉತ್ತಮ ವರ್ಗದ್ದಾಗಿದೆ. $ 2.9 ಶತಕೋಟಿಯ ಪರಮಾಣು ಚಾಲಿತ ಜಲಾಂತರ್ಗಾಮಿ ನಿರ್ಮಿಸುವ ಯೋಜನೆ 'ಅಮೇರಿಕಾದ ಅಡ್ವಾನ್ಸ್ಡ್ ಟೆಕ್ನಾಲಜಿ ಹಡಗು ನಿರ್ಮಾಣ'ದ ಯೋಜನೆಯ ಅಡಿಯಲ್ಲಿ ಅಭಿವೃದ್ಧಿಪಡಿಸಿ (ಎಟಿವಿ) ವಿನ್ಯಾಸಗೋಳಿಸಿದೆ.
ನೌಕಾಪಡೆಗೆ ‘ಅರಿಹಂತ್’ ಸೇರ್ಪಡೆ
[ಬದಲಾಯಿಸಿ]- 19 Oct, 2016;
- ದೇಶೀಯವಾಗಿ ನಿರ್ಮಿಸಲಾದ ಮೊದಲ ಅಣ್ವಸ್ತ್ರ ಜಲಾಂತರ್ಗಾಮಿ ‘ಐಎನ್‌ಎಸ್ ಅರಿಹಂತ್’ ರಹಸ್ಯವಾಗಿ ತನ್ನ ಕಾರ್ಯಾಚರಣೆ ಆರಂಭಿಸಿದೆ. ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿರುವ ಈ ಜಲಾಂತರ್ಗಾಮಿ ಅಣ್ವಸ್ತ್ರಗಳನ್ನು ಸಿಡಿಸುವ ಸಾಮರ್ಥ್ಯ ಹೊಂದಿದೆ. ಆಗಸ್ಟ್ 25ರಂದು ವಿಶಾಖಪಟ್ಟಣದಲ್ಲಿ ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ, ಈ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಿರುವ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ರಕ್ಷಣಾ ಸಚಿವಾಲಯ ಮತ್ತು ನೌಕಾಪಡೆ ಈ ಕುರಿತ ವರದಿಗಳನ್ನು ದೃಢಪಡಿಸಿಲ್ಲ ಅಥವಾ ತಳ್ಳಿ ಹಾಕಿಲ್ಲ. ‘ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ವೈಸ್ ಆಡ್ಮಿರಲ್ ಜಿ.ಎಸ್. ಪಬ್ಬಿ ತಿಳಿಸಿದ್ದಾರೆ. ‘ಐಎನ್‌ಎಸ್ ಅರಿಹಂತ್’ ಸೇರ್ಪಡೆಯಿಂದ ಭೂಮಿ, ಆಕಾಶ ಮತ್ತು ಸಮುದ್ರದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯವನ್ನು ಭಾರತ ಹೊಂದಿದಂತಾಗಿದೆ.
- ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರು ಇರಿಸಲಾಗಿರುವ ‘ಕೆ’ ಸರಣಿಯ ಕ್ಷಿಪಣಿಗಳನ್ನು ಈ ಜಲಾಂತರ್ಗಾಮಿ ಹೊಂದಿದೆ. ‘ಕೆ–15’ ಕ್ಷಿಪಣಿಗಳು 750 ಕಿಲೋ ಮೀಟರ್ ಮತ್ತು ‘ಕೆ–4’ ಕ್ಷಿಪಣಿಗಳು 3,500 ಕಿಲೋ ಮೀಟರ್ ದೂರವರೆಗೆ ಸಾಗಬಲ್ಲವು. ‘ಕೆ–5’ ಕ್ಷಿಪಣಿಗಳು ಇನ್ನೂ ಹೆಚ್ಚಿನ ಸಾಮರ್ಥ್ಯ ಹೊಂದಿವೆ. ಆದರೆ, ಈ ವಿವಿಧ ಮಾದರಿಯ ಕ್ಷಿಪಣಿಗಳನ್ನು ಅಳವಡಿಸಿರುವುದನ್ನು ನೌಕಾಪಡೆ ದೃಢಪಡಿಸಿಲ್ಲ. 2013ರ ಜನವರಿಯಲ್ಲಿ ಈ ಕ್ಷಿಪಣಿಗಳ ಸಾಮರ್ಥ್ಯದ ಬಗ್ಗೆ ನೀರಿನ ಒಳಗೆ ಪರೀಕ್ಷೆ ಕೈಗೊಳ್ಳಲಾಗಿತ್ತು. ಜಲಾಂತರ್ಗಾಮಿಯಿಂದ ಕನಿಷ್ಠ ಮೂರು ಬಾರಿ ಕ್ಷಿಪಣಿಗಳನ್ನು ಸಿಡಿಸುವ ಪರೀಕ್ಷೆ ಕೈಗೊಳ್ಳುವುದು ಕಡ್ಡಾಯವಾಗಿದೆ. ಕಳೆದ ವರ್ಷ ಪರಿಸರ ಖಾತೆ ಹೊಂದಿದ್ದ ಪ್ರಕಾಶ್ ಜಾವಡೇಕರ್ ಅವರು ನಿಕೋಬಾರ್‌ನ ತಿಲಾಂಚಂಗ್ ದ್ವೀಪದಲ್ಲಿ ನೀರಿನ ಒಳಗೆ ಕ್ಷಿಪಣಿಗಳನ್ನು ಸಿಡಿಸುವ ಪರೀಕ್ಷೆಗೆ ನೌಕಾಪಡೆಗೆ ಅನುಮತಿ ನೀಡಿದ್ದರು. ಈ ಪರೀಕ್ಷೆ ಬಳಿಕ ಸರ್ಕಾರ ಮೌನವಹಿಸಿತ್ತು. ಆದರೆ, ಜಲಾಂತರ್ಗಾಮಿಯ ಖಂಡಾಂತರ ಕ್ಷಿಪಣಿಗಳ ಕಡ್ಡಾಯ ಪ್ರಯೋಗ ಇನ್ನೂ ಪೂರ್ಣಗೊಳ್ಳದ ಕಾರಣ ‘ಅರಿಹಂತ್’ ಇನ್ನೂ ಕಾರ್ಯಾಚರಣೆಗೆ ನಿಯೋಜಿಸಲು ಸಿದ್ಧವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅಣು ಸಾಮರ್ಥ್ಯದ ಎರಡನೇ ಜಲಾಂತರ್ಗಾಮಿ ‘ಐಎನ್‌ಎಸ್ ಅರಿಧಾನ್’ ಇನ್ನೂ ನಿರ್ಮಾಣ ಹಂತದಲ್ಲಿದೆ. ಅಮೆರಿಕ, ಬ್ರಿಟನ್, ರಷ್ಯಾ, ಫ್ರಾನ್ಸ್ ಮತ್ತು ಚೀನಾ ಮಾತ್ರ ಅಣು ಸಾಮರ್ಥ್ಯದ ಜಲಾಂತರ್ಗಾಮಿಗಳನ್ನು ಹೊಂದಿವೆ.
ವಸ್ತುವಿನ್ಯಾಸ ದತ್ತಾಂಶಗಳು
[ಬದಲಾಯಿಸಿ]- ೧೯೯೦ ರಲ್ಲಿ ಜಲಾಂತರ್ಗಾಮಿ ನಿರ್ಮಿಸಲು ತೀರ್ಮಾನ.
- ಆಧುನಿಕ ಜಲತಂತ್ರಜ್ಞಾನದ ಹಡಗು ನಿರ್ಮಾಣದ ಹೆಸರಿನಲ್ಲಿ ರಹಸ್ಯವಾಗಿ ಜಲಾಂತರ್ಗಾಮಿ ಯೋಜನೆಗೆ ಚಾಲನೆ.
- ಮೂರು ಜಲಾಂತರ್ಗಾಮಿಗಳನ್ನು ನಿರ್ಮಿಸುವ ಉದ್ದೇಶ
- 2009ರಲ್ಲಿ ವಿಶಾಖಪಟ್ಟಣದಲ್ಲಿ ಅಂದಿನ ಪ್ರಧಾನಿ ಮನಮೋಹನಸಿಂಗ್ ಅವರಿಂದ ಅರಿಹಂತ್ ದೇಶಕ್ಕೆ ಸಮರ್ಪಣೆ.
2013 ರಲ್ಲಿ ಈ ಜಲಾಂರ್‍ಗಾಮಿಯಲ್ಲಿ ಅಣುಸ್ಥಾವರ ಕಾರ್ಯಾರಂಭ.
- 2013 ರಿಂದ ಕ್ಷಿಪಣಿ ಧಾಳಿ ಸೇರಿದಂತೆ ವಿವಿಧ ರೀತಿಯ ಪರೀಕ್ಷೆಗೆ ಒಳಗಾದ ಅರಿಹಂತ್.
- 6000 ಟನ್ ತೂಕ.
- 104 ಮೀಟರ್ ಉದ್ದ.
- ಅಣ್ವಸ್ತ್ರ ಸಿಡಿತಲೆಗಳಿರುವ ಕ್ಷಿಪಣಿಗಳನ್ನು ಕೊಂಡೊಯ್ಯುವ ಸಾಮಥ್ರ್ಯ.
- ಅಣ್ವಸ್ತ್ರ ಧಾಳಿಗೆ ಪ್ರತಿ ಧಾಳಿ ನಡೆಸುವ ಶಕ್ತಿ.
- ’ಕೆ’ ಸರಣಿಯ ಕ್ಷಿಪಣಿಗಳ ಅಳವಡಿಕೆ.
- ರೂ.7000 ಕೋಟಿ ವೆಚ್ಚ.
- ಚಿತ್ರ:[೧][ಶಾಶ್ವತವಾಗಿ ಮಡಿದ ಕೊಂಡಿ]
- (ಸರ್ಕಾರ ಅಥವಾ ಸಂಸ್ಥೆ ಒದಗಿಸಿದ ಮಾಹಿತಿಗಳಿಗೆ ಕಾಪಿ ರೈಟ್ ಇರುವುದಿಲ್ಲ)
ಪಾಕಿಸ್ತಾನಕ್ಕೆ ಚೀನಾದ ಜಲಾಂತರ್ಗಾಮಿ
[ಬದಲಾಯಿಸಿ]- ಚೀನಾ ತನ್ನ ಆಪ್ತ ಮಿತ್ರ ಪಾಕಿಸ್ತಾನಕ್ಕೆ ಎಂಟು ದಾಳಿ ಜಲಾಂತರ್ಗಾಮಿಗಳನ್ನು ಮಾರಾಟ ಮಾಡುವುದಾಗಿ ಹೇಳಿದೆ. ಸುಮಾರು $ 5 ಬಿಲಿಯನ್ ಅಂದಾಜು ಮೌಲ್ಯದ (5ನೂರು ಕೋಟಿ ಡಾಲರ್) ಬೀಜಿಂಗ್‍ನ ದೊಡ್ಡ ಮಿಲಿಟರಿ ಒಪ್ಪಂದ ಎಂದು ಪರಿಗಣಿಸಲಾಗಿದೆ.[೨]
ನೋಡಿ
[ಬದಲಾಯಿಸಿ]- ಐ.ಎನ್.ಎಸ್ ಅರಿಹಂತ್
- ಭಾರತ
- ಭಾರತೀಯ ಸೈನ್ಯ
- ಭಾರತೀಯ ಭೂಸೇನೆ
- ಭಾರತೀಯ ವಾಯುಸೇನೆ
- ಭಾರತೀಯ ನೌಕಾಸೇನೆ
- ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ
- 2008ರ ಮುಂಬಯಿ ದಾಳಿ
- ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ
- ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬
ಉಲ್ಲೇಖ
[ಬದಲಾಯಿಸಿ]- ↑ ನೌಕಾಪಡೆಗೆ ‘ಅರಿಹಂತ್’ ಸೇರ್ಪಡೆ[ಶಾಶ್ವತವಾಗಿ ಮಡಿದ ಕೊಂಡಿ]
- ↑ China confirms sale of 8 attack submarines to Pak