ವಿಷಯಕ್ಕೆ ಹೋಗು

ಅಭ್ರಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಂಡೆಯ ಜೊತೆ ಅಭ್ರಕ
ಅಭ್ರಕದ ಹಾಳೆ
ಅಭ್ರಕ ನಿಲುಕಟ್ಟುಗಳು

ಅಭ್ರಕ ಗುಂಪಿನ ಹಾಳೆಗಳು ಸಿಲಿಕೇಟ್ (ಫಿಲ್ಲೋಸಿಲಿಕೇಟ್) ಖನಿಜಗಳು ಮತ್ತು ಹಲವಾರು ನಿಕಟವರ್ತಿ ವಸ್ತುಗಳನ್ನು ಹೊಂದಿದ್ದು ಅತ್ಯಂತ ನಿರ್ಧಿಷ್ಟವಾದ ಮೂಲ ವಿಭಜನೆಯನ್ನು ಹೊಂದಿವೆ. ಈ ಎಲ್ಲವೂ ಮಾನೊಕ್ಲಿನಿಕ್ ಗುಂಪಿಗೆ ಸೇರಿದ್ದು ಸುಳ್ಳು-ಷಟ್ಬುಜಾಕೃತಿ ಹರಳುಗಳ ಕಡೆಗೆ ಹೆಚ್ಚು ಒಲವು ತೋರಿಸುತ್ತವೆ ಮತ್ತು ಇವೆಲ್ಲವೂ ಒಂದೇ ರಾಸಾಯನಿಕ ಸಂಯೋಜನೆಯನ್ನು ಹೊಂದಿವೆ. ಅಭ್ರಕದ ಪರಮಾಣುಗಳ ಷಟ್ಬುಜಾಕೃತಿಯಂತಹ ಜೋಡಣೆಯು ಅದರ ಅತಿ ಹೆಚ್ಚಿನ ನಿರ್ಧಿಷ್ಟ ವಿಭಜನಾಗುಣವನ್ನು ವಿವರಿಸುತ್ತದೆ.

"ಮೈಕಾ" ಎಂಬ ಪದವು ಮೂಲತಃ ಲ್ಯಾಟಿನ್ ಪದದಿಂದmicare , ಬಂದಿದೆ. ಇದರ ಅರ್ಥ "ಹೊಳೆಯುವುದು" ಎಂದಾಗಿದೆ. ಎಕೆಂದರೆ ಅಭ್ರಕದ ಮಿಂಚುವ (ವಿಶೇಷವಾಗಿ ಪದರುಗಳ ರೂಪದಲ್ಲಿದ್ದಾಗ) ಗುಣದಿಂದ ಈ ಹೆಸರು ಕೊಡಲಾಗಿದೆ. ಅಬ್ರಕ ಉತ್ಪಾದನೆಯಲ್ಲಿ ಬಾರತ 6 ನೇ ಸ್ಥಾನದಲಿದೆ.

ಅಭ್ರಕದ ವರ್ಗೀಕರಣ[ಬದಲಾಯಿಸಿ]

ರಾಸಾಯನಿಕವಾಗಿ, ಅಭ್ರಕಗಳ ಸಾಮಾನ್ಯ ಸೂತ್ರವು[೧]

X 2Y 4–6Z 8O20(OH,F)4
ಅದರಲ್ಲಿ X is K, Na, ಅಥವಾ Ca ಅಥವಾ ಕೆಲವು ಬಾರಿ Ba, Rb, ಅಥವಾ Cs;
Y ಯು Al, Mg, ಅಥವಾ Fe ಅಥವಾ ವಿರಳವಾಗಿ Mn, Cr, Ti, Li, ಇತ್ಯಾದಿ;
Z ಮುಖ್ಯವಾಗಿ Si ಅಥವಾ Al ಆದರೆ ಇದು Fe3+ ಅಥವಾ Ti ಒಳಗೊಂಡಿದೆ

ರಚನಾತ್ಮಕವಾಗಿ, ಅಭ್ರಕಗಳನ್ನು ಡೈಯೊಕ್ಟಹೆಡ್ರಲ್ (Y = 4) ಮತ್ತು ಟ್ರೈಯೊಕ್ಟಾಹೆಡ್ರಲ್ (Y = 6) ಎಂದು ವರ್ಗೀಕರಿಸಲಾಗಿದೆ. ಒಂದು ವೇಳೆ X ಐಯಾನ್ K ಅಥವಾ Na ಆದರೆ ಅಭ್ರಕವು ಸಾಮಾನ್ಯ ಅಭ್ರಕ ಹಾಗೂ X ಐಯಾನ್ Ca ಆದರೆ ಅಭ್ರಕವನ್ನು ಸುಲಭವಾಗಿ ಒಡೆದುಹೋಗಬಲ್ಲ ಅಭ್ರಕ ಎಂದು ವರ್ಗೀಕರಿಸಲಾಗುತ್ತದೆ.

ಟ್ರೈಯೊಕ್ಟಾಹೆಡ್ರಲ್ ಅಭ್ರಕಗಳು[ಬದಲಾಯಿಸಿ]

ಸಾಮಾನ್ಯ ಅಭ್ರಕಗಳು:

ಸುಲಭವಾಗಿ ಒಡೆದು ಹೋಗುವ ಅಭ್ರಕಗಳು:

ಮಧ್ಯಪದರದಲ್ಲಿ ನ್ಯೂನತೆಯಿರುವ ಅಭ್ರಕಗಳು[ಬದಲಾಯಿಸಿ]

ಅಯಾನು ರೂಪದಲ್ಲಿನ ಮತ್ತು ನೀರಿನ ಅಂಶವಿರುವ ಅತ್ಯಂತ ಚಿಕ್ಕ ಅಭ್ರಕದ ಹರಳುಗಳನ್ನು ಅನೌಪಚಾರಿಕವಾಗಿ ಜೇಡಿ ಅಭ್ರಕ ಎನ್ನುವರು. ಅವು ಈ ಕೆಳಗಿನವುಗಳನ್ನು ಒಳಗೊಂಡಿವೆ -

 • K ನಲ್ಲಿರುವ X ನೊಂದಿಗೆ H3O+ ಹೈಡ್ರೋ-ಮ್ಯುಸ್ಕುವೈಟ್
 • Kಕೊರತೆಯಿರುವ X ನಲ್ಲಿ ಇಲ್ಲೈಟ್‌ನೊಂದಿಗೆ ಮತ್ತು ಹೆಚ್ಚು Z ನಲ್ಲಿ Si ನೊಂದಿಗೆ.
 • Y ಬಿಂದುವಿನಲ್ಲಿರುವ Al ಗೆ ಬದಲಾಗಿ Mg ಅಥವಾ Fe2+ ಫೆಂಗೈಟ್ನೊಂದಿಗೆ ಸೇರಿದಾಗ Z ಬಿಂದುವಿನ Si ನಲ್ಲಿ ಗಣನೀಯ ಹೆಚ್ಚಳ ಉಂಟಾಗುತ್ತದೆ.

ದೊರಕುವಿಕೆ[ಬದಲಾಯಿಸಿ]

ಚಿತ್ರ:Mica output2.PNG
2005ರ ಅಭ್ರಕ ಉತ್ಪಾದನೆ

ಅಭ್ರಕವು ಯಥೇಚ್ಛವಾಗಿ ಹರಡಿಕೊಂಡಿದ್ದು, ಅಗ್ನಿಶಿಲೆ, ರೂಪಾಂತರ ಶಿಲೆ ಮತ್ತು ಪದರುಶಿಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಪದರಿನಂತಹ ಮತ್ತು ಹರಳುರೂಪದ ಅಭ್ರಕದ ದೊಡ್ಡ ಹರಳುಗಳನ್ನು ಅನೇಕ ಉಪಯೋಗಗಳಿಗಾಗಿ ಬಳಸುತ್ತಾರೆ. ಯೂರೋಪ್‌ನಲ್ಲಿ ಸರಬರಾಜು ಕಡಿಮೆ ಇದ್ದದರಿಂದ 19ನೇ ಶತಮಾನದವರೆಗೆ ಅಭ್ರಕದ ಬೆಲೆ ಹೆಚ್ಚಿದ್ದು, ಇದರ ದೊಡ್ಡ ಹರಳುಗಳು ವಿರಳವಾಗಿದ್ದವು. ಆದರೆ 1800ರ ಪ್ರಾರಂಭದಲ್ಲಿ ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಇದರ ನಿಕ್ಷೇಪಗಳು ಹೆಚ್ಚಾಗಿ ಕಂಡುಬಂದಾಗ ಅಭ್ರಕದ ಬೆಲೆಯಲ್ಲಿ ನಾಟಕೀಯ ಕುಸಿತ ಕಂಡು ಬಂದಿತು. (ಫ್ಲೋಗೋಪೈಟ್) ಅಭ್ರಕದ ಅತಿ ದೊಡ್ಡ ಹರಳನ್ನು ಲೇಸಿ ಮೈನ್, ಒಂಟೋರಿಯೊ, ಕೆನಡದಲ್ಲಿ; ಪತ್ತೆ ಹಚ್ಚಲಾಯಿತು.ಇದು 10×4.3×4.3 m ನಷ್ಟು ಇದ್ದು, 330 ಮೆಟ್ರಿಕ್ ಟನ್ ತೂಕವಿತ್ತು.[೨] ಚಿಕ್ಕ ಹರಳುಗಳು ಕ್ಯರೇಲಿಯಾ, ಮತ್ತು ರಷ್ಯಾದಲ್ಲಿಯೂ ಸಹ ಕಂಡು ಬಂದವು.[೩] 2005ರ ಬ್ರಿಟಿಷ್ ಭೂ ಮಾಪನಾ ವರದಿಗಳ ಪ್ರಕಾರ, ಭಾರತದ ಜಾರ್ಕಂಡ್ ರಾಜ್ಯದ ಕೊಡರ್ಮಾ ಜಿಲ್ಲೆಯಲ್ಲಿ ಪ್ರಪಂಚದಲ್ಲೇ ಅತಿ ದೊಡ್ಡ ಅಭ್ರಕದ ನಿಕ್ಷೇಪ ಇತ್ತು. ಚೀನಾ ಅತ್ಯಂತ ಹೆಚ್ಚು ಅಭ್ರಕವನ್ನು ಉತ್ಪತ್ತಿ ಮಾಡುವ ದೇಶವಾಗಿದ್ದು ಪ್ರಪಂಚದ ಮೂರರಷ್ಟು ಭಾಗವನ್ನು ಇದೊಂದೇ ತಯಾರಿಸುತ್ತಿತ್ತು. ಇದರ ನಂತರದ ರಾಷ್ಟ್ರಗಳೆಂದರೆ ಯು.ಎಸ್.ಎ, ದಕ್ಷಿಣ ಕೊರಿಯಾ ಮತ್ತು ಕೆನಡಾ. 19ನೇ ಶತಮಾನದಿಂದ 1960ರ ವರೆಗೆ ಹೆಚ್ಚಿನ ಪ್ರಮಾಣದ ಅಭ್ರಕ ಫಲಕಗಳನ್ನು ನ್ಯೂ ಇಂಗ್ಲೆಂಡ್‌ನಲ್ಲಿ ಗಣಿಗಾರಿಕೆ ಮಾಡಲಾಗುತ್ತಿತ್ತು. ಅತಿ ದೊಡ್ಡ ನಿಕ್ಷೇಪಗಳು ಕೊನೆಕ್ಟಿಕಟ್, ನ್ಯೂ ಹ್ಯಾಂಪ್‌ಶೈರ್, ಮತ್ತು ಮೆಯಿನ್ ಗಳಲ್ಲಿ ಇದೆ. ಮುರುಕು ಮತ್ತು ಪದರಿನ ರೂಪದ ಅಭ್ರಕವನ್ನು ಪ್ರಪಂಚದ ಎಲ್ಲಾ ಭಾಗಗಳಲ್ಲಿ ಉತ್ಪತ್ತಿ ಮಾಡಲಾಗುತ್ತದೆ. ಪದರು ಅಭ್ರಕವು ಹಲವಾರು ಮೂಲಗಳಿಂದ ದೊರೆಯುತ್ತದೆ : ಫೆಲ್ಡ್‌ಸ್ಪಾರ್ ಮತ್ತು ಕಾಯೋಲಿನ್ ಸಂಸ್ಕರಣೆಯ ಉಪ ಉತ್ಪನ್ನವಾದ ಶಿಸ್ಟ್ ಎಂಬ ರೂಪಾಂತರ ಶಿಲೆ, ಗರಸುಗಳ ಸಂಗ್ರಹಗಳು ಮತ್ತು ಪೆಗ್ಮಾಟೈಟ್‌ಗಳು. ಹಾಳೆ ರೂಪದ ಅಭ್ರಕವು ಮುರುಕು ಮತ್ತು ಪದರ ರೂಪಕ್ಕಿಂತ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ. ಕೆಲವು ಸಮಯಗಳಲ್ಲಿ ಹಾಳೆ ಅಭ್ರಕವನ್ನು ಮುರುಕು ಮತ್ತು ಪದರು ರೂಪದಿಂದ ಪಡೆಯಲಾಗುತ್ತದೆ. ಹಾಳೆ ರೂಪದ ಅಭ್ರಕದ ಮುಖ್ಯ ಮೂಲಗಳೆಂದರೆ ಪೆಗ್ಮಾಟೈಟ್ ಸಂಗ್ರಹಗಳು.

ಗುಣಲಕ್ಷಣಗಳು ಮತ್ತು ಉಪಯೋಗಗಳು[ಬದಲಾಯಿಸಿ]

ಎಲೆಕ್ಟ್ರಾನಿಕ್ಸ್‌ /ವಿದ್ಯುತ್ಕಾಂತ[ಬದಲಾಯಿಸಿ]

ಚಿತ್ರ:Mica insulators.jpg
TO-3 ಮತ್ತು TO-264 ಪ್ಯಾಕೇಜಸ್‌ಗಾಗಿ ಅಭ್ರಕ ಅವಾಹಕ ಬಿಲ್ಲೆಗಳು.

ಅಭ್ರಕವು ಅತಿಹೆಚ್ಚು ಡೈಎಲೆಕ್ಟ್ರಿಕ್ ಬಲ ಮತ್ತು ಉತ್ತಮ ರಾಸಾಯನಿಕ ಸ್ಥಿರತೆಯನ್ನು ಹೊಂದಿದ್ದು, ಕೆಪಾಸಿಟರ್ ಗಳು ಮತ್ತು ರೇಡಿಯೋ ಆವೃತ್ತಿ ಬಳಕೆಗಳಲ್ಲಿ ಉತ್ತಮ ವಸ್ತುವಾಗಿ ಬಳಸುತ್ತಾರೆ. ಇದನ್ನು ನಿರೋಧಕವಾಗಿ ಸಹ ಅತಿ ಹೆಚ್ಚು ವಿಭವ ವಿದ್ಯುತ್ ಉಪಕಣಗಳಲ್ಲಿ, ಮತ್ತು ಕಮ್ಯುಟೇಟರ್ ಗಳ ಮಧ್ಯದಲ್ಲಿ ನೇರ ಪ್ರವಾಹ ವಿದ್ಯುತ್ ಮೋಟಾರ್ ಗಳಲ್ಲಿಮತ್ತು ವಿದ್ಯುತ್ ಜನಕಗಳಲ್ಲಿಬಳಸುವರು. ಅಭ್ರಕವನ್ನು ಬಳಸಲು ಕಾರಣ ಇದನ್ನು ತೆಳುವಾದ ಹೋಳುಗಳಾಗಿ ಸೀಳಬಹುದು ಮತ್ತು ಇದು ಹೆಚ್ಚು ಉಷ್ಣ ನಿರೋಧಕ ಸಾಕಷ್ಟು ಪಡೆದಾಗ ಕಡಿಮೆ ರೋಧಕ ಡೈಎಲೆಕ್ಟ್ರಿಕ್ ಬಲ ಹೊಂದಿದ್ದು ಸಾಧರಣ ವಿಭವಗಳಲ್ಲೂ ಸಹ ವಿದ್ಯುತ್ ಪ್ರವಾಹವನ್ನು ತಡೆಯುತ್ತದೆ. ಎಲೆಕ್ಟ್ರಾನಿಕ್ ಸಾಧನಗಳನ್ನು ವಿದ್ಯುತ್ ಪ್ರವಾಹ ಅಥವಾ ಏಕ ತಂತಿ ಪ್ರವಾಹಕ್ಕೆ ಸಂಪರ್ಕಿಸಿದಾಗ ಅದರ ಲೋಹಿಯ ಭಾಗಗಳು ನೆಲದೊಂದಿಗೆ ಸಂಪರ್ಕಿಸಿ ವಿದ್ಯುತ್ ಆಘಾತ ಆಗುವ ಸಾಧ್ಯತೆಗಳಿರುವದರಿಂದ ಉಷ್ಣ ಇಂಗುವಿಕೆ ಸೌಲಭ್ಯ ಅಗತ್ಯವಾಗಿರುತ್ತದೆ. ಅವು ನೇರ ಸಂಪರ್ಕಕ್ಕೆ ಬಂದಾಗ ಶಾರ್ಟ್ ಸರ್ಕ್ಯೂಟ್ ಆಗುವ ಸಂಭವ ಇರುತ್ತದೆ. ಉಷ್ಣ ಹೀರುವಿಕೆ ನಿರೋಧತೆ ಅತ್ಯಗತ್ಯ ಏಕೆಂದರೆ ಯಾವುದೇ ಸಾಧನವನ್ನು ಹೆಚ್ಚಾಗಿ ಬದಲಾಗುವ ಸಂಜ್ನೆಗೆ ಸಂಪರ್ಕಿಸಿದಾಗ ಅದು ಉಷ್ಣಹೀರುವಿಕೆಯಆಂಟೆನಾದಂತೆ ಕಾರ್ಯ ನಿರ್ವಹಿಸುತ್ತದೆ.

ಐಸಿಂಗ್ ಗಾಜು[ಬದಲಾಯಿಸಿ]

ಅಭ್ರಕದ ಪಾರದರ್ಶಕ ಹಾಳೆಗಳನ್ನು "ಐಸಿಂಗ್ ಗಾಜು" ಎನ್ನುವರು. ಇದನ್ನು ಬಾಯ್ಲರ್ ಗಳಲ್ಲಿ ಮತ್ತು ಲಾಟೀನುಗಳಲ್ಲಿ ಬಳಸಲಾಗುತ್ತಿತ್ತು,ಎಕೆಂದರೆ ಗಾಜಿನಂತೆ ಉಚ್ಚ ಉಷ್ಣತೆಗಳಲ್ಲಿ ಒಡೆಯುವುದಿಲ್ಲ. ಅಂತಹ ಸಣ್ಣ ರಂದ್ರಗಳನ್ನು ಕುದುರೆ ಗಾಡಿಯ[೪] "ಐಸಿಂಗ್ ಗಾಜು ಪರದೆ" ಗಳಲ್ಲಿ ಮತ್ತು 20ನೇ ಶತಮಾನದ ಮೊದಲ ಕಾರುಗಳಲ್ಲಿ ಬಳಸಲಾಗುತ್ತಿತ್ತು. ಮಾಡೆಲ್ ಟಿ ಫೋರ್ಡ್‌ನಲ್ಲಿ ಪ್ರಯಾಣ ಎಂಬ ಒಂದು ಪುಸ್ತಕವು ಐಸಿಂಗ್ ಗಾಜು ಪರದೆಗಳ ಬಗ್ಗೆ ಹೀಗೆ ವಿವರಿಸುತ್ತದೆ: "ಕ್ಯಾನ್ ವಾಸ್ ಬಟ್ಟೆಯ ಪಕ್ಕ ಪರದೆಗಳು ಗಾಳಿ, ಬೆಳಕು ಮತ್ತು ಚಳಿಗೋಸ್ಕರ ಕಿಟಕಿಗಳಿಗೆ ಹಾಕಿದ್ದು, ಅವುಗಳನ್ನು ಬಾಗಿಲಿನ ಸರಳುಗಳಿಗೆ ಸುತ್ತಲೂ ಬಂಧಿಸಲಾಗಿತ್ತು. ಪರದೆಯಲ್ಲಿ ಐಸಿಂಗ್ ಗಾಜಿನ ಸಣ್ಣ ರಂದ್ರಗಳು ಮಿತ ದರ್ಶನಕ್ಕೆ ಅನುಕೂಲ ಮಾಡಿಕೊಡುತ್ತವೆ. ಐಸಿಂಗ್ ಗಾಜನ್ನು ಒಡೆದ ಅಭ್ರಕದ ತೆಳುವಾದ ಹಾಳೆಗಳಿಂದ ಮಾಡುತ್ತಾರೆ."[೫]

ಇತರ[ಬದಲಾಯಿಸಿ]

ರೆಸಿನ್ ಬಂಧಿತ ಅಭ್ರಕ ಅಥವಾ ಮಿಕಾನೈಟ್ ಅಥವಾ ಸೀಳಿಕೆಗಳಿಂದ ಪಡೆದ ಮಿಕಾನೈಟ್ ಅಥವಾ ಅಭ್ರಕದ ಪುಡಿಯಿಂದ ಪಡೆದ ಹೊಳಪುಳ್ಳ ಮಿಕಾನೈಟ್ ನ್ನು ಮಿಕಾನೈಟ್ ಗಳು ಎನ್ನುವರು. ಈ ಎಲ್ಲಾ ಉತ್ಪನ್ನಗಳು ರೆಸಿನ್ ಗಳಂತಹ ಅಡಿಟಿವ್ ಗಳನ್ನು ಮತ್ತು ಫಲಿತ ಉತ್ಪನ್ನಗಳು ಕಡಿಮೆ ರೋಧ ಲಕ್ಷಣಗಳನ್ನು ಹೊಂದಿದ್ದು, ಇವುಗಳನ್ನು "ಮೈಕಾ ನಿರೋಧಕಗಳು" ಅಥವಾ ಮಿಕಾನೈಟ್ ಗಳು, ಮಿಕಾಫೋಲಿಯಂಗಳು ಎನ್ನುವರು. ಅಭ್ರಕವು ಬೈರ್ ಫ್ರಿಂಜೆಂಟ್ ಆಗಿದ್ದು ಇದನ್ನು ಸಾಮಾನ್ಯವಾಗಿ ಅರ್ಧ ತರಂಗ ಫಲಕಗಳಲ್ಲಿ ಬಳಸುವರು. 2:1 ಅನುಪಾತದ ಜೇಡಿಯಲ್ಲಿ ಇಲ್ಲೈಟ್ ಅಥವಾ ಜೇಡಿ ಅಭ್ರಕ ಅತಿ ಕಡಿಮೆ ಧನ ಅಯಾನು ವಿನಿಮಯ ಸಾಮರ್ಥ್ಯ ಹೊಂದಿರುತ್ತದೆ. ಪದರುಗಳ ಮಧ್ಯೆ ಇರುವ K+ ಅಯಾನುಗಳು ನಿರಿನ ಅಣುಗಳ ಚಲನೆಯನ್ನು ತಡೆಯುವುದರಿಂದ ಅಭ್ರಕ ಉಬ್ಬುವುದನ್ನು ತಡೆಯುತ್ತದೆ. ಅಭ್ರಕವನ್ನು ತೆಳುವಾದ ಹಾಳೆಯಾಗಿ ಮಾಡಲು ಸಾಧ್ಯವಿರುವುದರಿಂದ ಇದನ್ನು ಅತಿ ಕಡಿಮೆ ಹಾಯುವ ಆಲ್ಫಾ ಕಣಗಳ ಪತ್ತೆ ಹಚ್ಚುವಿಗೆ ಬಳಸುವ ಗೀಗರ್ -ಮುಲ್ಲರ್ ಕೊಳವೆತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಕೆಲವು ಟೂತ್‍ಪೇಸ್ಟ್ ಗಳಲ್ಲಿ ಪುಡಿಮಾಡಿದ ಬಿಳಿ ಅಭ್ರಕವನ್ನು ಬಳಸುತ್ತಾರೆ. ಇದು ಹಲ್ಲುಗಳ ಮೇಲ್ಮೈಗೆ ಹೊಳಪನ್ನು ನೀಡುವುದಕ್ಕೆ ಸಹಾಯ ಮಾಡುವುದಲ್ಲದೇ, ಪೇಸ್ಟ್‌ಗೆ ಕಾಂತಿವರ್ದಕ ಹೊಳಪನ್ನು ನೀಡುತ್ತದೆ. ಅಭ್ರಕದ ಹೊಳಪು ವೇಷ ಭೂಷಣಗಳಲ್ಲಿ ಬಳಕೆಯಾಗುವುದರ ಮೂಲಕ, ಚರ್ಮಕ್ಕೆ ಪಾರದರ್ಶಕ ಹೊಳಪನ್ನು ನೀಡಿ, ನೈಜ್ಯತೆಯನ್ನು ಮಸುಕು ಮಾಡುತ್ತದೆ. ಅಭ್ರಕವನ್ನು ಮುತ್ತುಗಳ ವಾಸನೆಯ ವರ್ಣದ್ರವ್ಯಗಳಲ್ಲಿ ಬಳಸುವರು. ಲೌಹಿಕ ನೋಟವನ್ನು ಹೊಂದಿರುವ ಅನೇಕ ವರ್ಣದ್ರವ್ಯಗಳು, ಬೇರೆ ಖನಿಜಗಳ ಲೇಪನವಿರುವ ಅಭ್ರಕವನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಟೈಟಾನಿಯಂ ಡೈ ಆಕ್ಸೈಡ್ (TiO2). ಈ ರಿತಿಯಲ್ಲಿ ದೊರೆತ ವರ್ಣದ್ರವ್ಯಗಳು ಪ್ರತಿಫಲಿತ ಬಣ್ಣವನ್ನು ಹೊಂದಿದ್ದು, ಲೇಪನದ ದಪ್ಪವನ್ನು ಅವಲಂಬಿಸಿದೆ. ಈ ಉತ್ಪನ್ನಗಳನ್ನು ಆಟೊಮೊಬೈಲ್ ಬಣ್ಣಗಳಲ್ಲಿ, ಹೊಳೆಯುವ ಪಾತ್ರೆಗಳಲ್ಲಿ, ಜಾಹಿರಾತಿನಲ್ಲಿ ಬಳಸುವ ಉಚ್ಚ ಗುಣಮಟ್ಟದ ಮಸಿಯಲ್ಲಿ ಮತ್ತು ರಕ್ಷಣಾ ವ್ಯವಸ್ಥೆಗಳಲ್ಲಿ ಬಳಸುವರು. ಅಭ್ರಕ ಹಾಳೆಗಳನ್ನು ವಾಹಕ ತಂತಿಯ ಉಷ್ಣತೆಯನ್ನು ಹೆಚ್ಚಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ (ಕೆಂಥಾಲ್ ಅಥವಾ ನೈಕ್ರೋಮ್ ನಂತಹ ಉಷ್ಣವಾಹಕ ಧಾತುಗಳು ಹೆಚ್ಚು ಉಷ್ಣತೆಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಅಭ್ರಕ ಹೆಚ್ಚು ಉಷ್ಣ, ನಿರೋಧತೆಯನ್ನು ಹೊಂದಿರುವುದರಿಂದ, ಸ್ಟವ್ ಗಳಲ್ಲಿ ಮತ್ತು ಸೀಮೆ ಎಣ್ಣೆ ತಾಪಕಗಳಲ್ಲಿ ಗಾಜಿಗೆ ಬದಲಾಗಿ ಅಭ್ರವನ್ನು ಬಳಸುತ್ತಾರೆ. ಅಭ್ರಕದ ಮತ್ತೊಂದು ಉಪಯೋಗವೆಂದರೆ, ಇದನ್ನು ಅತಿ ತೆಳುವಾದ ಹಾಳೆಗಳ ತಯಾರಿಕೆಯಲ್ಲಿ (ಉದಾ;ಚಿನ್ನದ ಹಾಳೆ) ಬಳಸುತ್ತಾರೆ. ಪದರದ ಮೇಲ್ಮೈ ಸಂಗ್ರಹದಿಂದ ಒರಟಾಗಿ ಕಂಡುಬಂದರು ಅಬ್ರಕದ ಕಳಭಾಗದ ಪದರವು ಮೇಲ್ಭಾಗದ ಪದರಕ್ಕೆ ಸಮತಟ್ಟಾದ ಲಕ್ಷಣವನ್ನು ಮೇಲಿನ ಪದರವನ್ನು ತೆಗೆದಾಗ ನೀಡುತ್ತದೆ. ಇದನ್ನು ನಿರೋಧಕವಾಗಿ ಕಾಂಕ್ರೀಟ್ ಇಟ್ಟಿಗೆಗಳಲ್ಲಿ, ಮನೆಯ ಉಪ್ಪರಿಗೆಗಳಲ್ಲಿ ಮತ್ತು ಗೋಡೆಗಳಾಗಿ ಬಳಸುವರು.

ಇದನ್ನು ಮಣ್ಣಿನ ಬಂಧಕವಾಗಿಯೂ ಬಳಸಬಹುದು. ವಿಶೇಷವಾಗಿ ಮಡಿಕೆಯಲ್ಲಿ ಬಳಸುವ ಮಿಶ್ರಣಗಳು ಮತ್ತು ತೋಟಗಾರಿಕೆ ನೆಲಗಳಲ್ಲಿ ಬಳಸಲಾಗುವುದು. ಮ್ಯುಸ್ಕೊವೈಟ್ ಅಭ್ರಕವು ಅಣು ಬಲ ಸೂಕ್ಷ್ಮ ದರ್ಶಕಗಳಲ್ಲಿಪ್ರತಿಚಯವಾಗಿ ಬಳಸುವ ಅತ್ಯಂತ ಸಾಮಾನ್ಯ ವಸ್ತುವಾಗಿದೆ. ಹೊಸದಾಗಿ ವಿಭಜಿಸಿದ ಅಭ್ರಕವನ್ನು ಅಣು ಬಲ ಸೂಕ್ಷ್ಮ ದರ್ಶಕಗಳಲ್ಲಿ, ಸ್ವಚ್ಛವಾದ ಪ್ರತಿಬಿಂಬ ಪಡೆಯಲು ಬಳಸುತ್ತಾರೆ. ಇದನ್ನುಬಿಸ್ಮತ್ ಫಿಲ್ಮ್‌ಗಳು,[೬] ಪ್ಲಾಸ್ಮಾ ಗ್ಲೈಕೊ ಪ್ರೋಟೀನ್ಗಳು,[೭] ಇಪ್ಪದರಗಳು,[೮] ಮತ್ತು ಡಿ.ಎನ್.ಎ ಅಣುಗಳ[೯] ಪ್ರತಿಬಿಂಬಗಳ ಉದಾಹರಣೆಗಾಗಿ ಬಳಸಲಾಗುವುದು.

ಚಕ್ರಗಳ ಅಚ್ಚುಗಳಲ್ಲಿ ಬಳಸುವ ಕೀಲೆಣ್ಣೆ ಯಲ್ಲಿರುವ ಕೊಬ್ಬಿನ ಎಣ್ಣೆಗಳು ಅಬ್ರಕ, ಟಾರ್ ಅಥವಾ ಗ್ರಾಫೈಟ್ ನ್ನು ಸೇರಿಸಿ ಅದರ ಬಾಳಿಕೆ ಮತ್ತು ಉತ್ತಮ ಮೇಲ್ಮೈ ಯನ್ನು ಪಡೆಯಲಾಗುತ್ತದೆ.

ಹೋಪ್‌ವೆಲ್ ಸಂಪ್ರದಾಯದಲ್ಲಿ ಕೈಯಿಂದ ಕೆತ್ತನೆ ಮಾಡಿದ ಅಭ್ರಕ

ಪುರಾತನ ಕಾಲದಲ್ಲಿ ಅಭ್ರಕ[ಬದಲಾಯಿಸಿ]

ಇತಿಹಾಸ ಪೂರ್ವ ಕಾಲದಿಂದ ಅಭ್ರಕದ ಬಳಕೆ ಮಾನವನಿಗೆ ಗೊತ್ತಿದೆ ಎನ್ನಲಾಗಿದೆ. ಪುರಾತನ ಈಜಿಪ್ಟ್, ಗ್ರೀಕ್ ಮತ್ತು ರೋಮನ್ ನಾಗರೀಕತೆಗಳು, ಚೀನಾನಾಗರಿಕತೆ, ಅಷ್ಟೇ ಅಲ್ಲದೆ ಹೊಸ ಪ್ರಪಂಚದ ಅಜ್ಟೆಕ್ ನಾಗರೀಕತೆಗೆ ಅಭ್ರಕದ ಉಅಪಯೋಗ ಗೊತ್ತಿತ್ತು ಎಂದು ತಿಳಿದು ಬಂದಿದೆ. ಪೂರ್ವ ಶಿಲಾಯುಗದ ಪ್ರಾರಂಭದ ಕಾಲದಲ್ಲಿ (40,000 BC to 10,000 BC). ಬರೆದ ಗುಹೆಯ ಚಿತ್ರಗಳಲ್ಲಿ ಅಭ್ರಕವನ್ನು ಆರಂಭದ ದಿನಗಳಲ್ಲಿ ಬಳಸಿದ್ದನ್ನು ಕಾಣಬಹುದು. ಮೊದಲ ಬಣ್ಣಗಳು ಯಾವುವೆಂದರೆ, ಕೆಂಪು (ಕಬ್ಬಿಣದ ಆಕ್ಸೈಡ್, ಹೆಮಟೈಟ್, ಅಥವಾ ಕೆಂಪು ಓಕರ್) ಮತ್ತು ಕಪ್ಪು (ಮ್ಯಾಂಗನೀಸ್ ಡೈ ಆಕ್ಸೈಡ್, ಪೈರೋಲುಸೈಟ್), ಜುನಿಪರ್ ಮತ್ತು ಪೈನ್ ಕಾರ್ಬನ್ ಗಳು ಕಪ್ಪು ಬಣ್ಣದವಾಗಿದ್ದರೂ,ಅವುಗಳನ್ನು ಬಳಸಿದ್ದನ್ನು ಕಾಣಬಹುದು. ಕೆಲವು ಬಾರಿ ಬಿಳಿ ಬಣ್ಣವನ್ನು ಕಾಯೋಲಿನ್ ಅಥವಾ ಅಭ್ರಕದಿಂದ ಪಡೆಯಲಾಗುತ್ತದೆ. ಮೆಕ್ಸಿಕೋ ನಗರದ ಆಗ್ನೇಯ ದಿಕ್ಕಿನಲ್ಲಿ ಕೆಲವು ಕಿಲೋಮೀಟರ್ ಗಳ ದೂರದಲ್ಲಿ ಟಿಯೋಟಿಹುಹಾಕನ್ಪುರಾತನ ಸ್ಥಳವಿದೆ. ಅತ್ಯಂತ ಹೆಚ್ಚು ಅದ್ಬುತವಾದ ಮತ್ತು ಎದ್ದು ಕಾಣುವ ರಚನೆಯಂದರೆ ಟಿಯೋಟಿಹುಹಾಕನ್‌ನ ಗೋಪುರವಾದ ಪಿರಮಿಡ್ ಆಫ್ ಸನ್. ಈ ಪಿರಮಿಡ್ ಗಣನೀಯ ಪ್ರಮಾಣದಲ್ಲಿ 30 cm (12 in) ದಪ್ಪ ಪದರುಗಳ ರೂಪದ ಅಭ್ರಕವನ್ನು ಹೊಂದಿತ್ತು.[೧೦] ಬಹಳಕಾಲದಿಂದ, ಚೆನ್ನಾಗಿ ಪುಡಿ ಮಾಡಿದ ಅಭ್ರಕವನ್ನು ಅಲಂಕಾರಿಕ ವಸ್ತುವಾಗಿ ಬಳಸುವುದರೊಂದಿಗೆ, ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಉತ್ತರ ಭಾರತದಲ್ಲಿ ಹೋಲಿ ಹಬ್ಬದ ಸಮಯದಲ್ಲಿ ಹಿಂದುಗಳು ಬಳಸುವ ಬಣ್ಣದ ಗುಲಾಲ್ ಮತ್ತು ಅಬೀರ್ ಸಣ್ಣ ಸಣ್ಣ ಅಭ್ರಕದ ಹರಳುಗಳನ್ನು ಹೊಂದಿದೆ. ಭಾರತದ 65 km (40 mi) ತಿರುವನಂತಪುರದಲ್ಲಿರುವ ಭವ್ಯವಾದ ಪದ್ಮನಾಭಪುರಂ ಅರಮನೆ , ಬಣ್ಣ ಬಣ್ಣದ ಅಭ್ರಕ ಕಿಟಕಿಗಳಿಂದ ಮಾಡಲ್ಪಟ್ಟಿದೆ.

ಪರಾಮರ್ಶನಗಳು[ಬದಲಾಯಿಸಿ]

 1. ಡೀರ್, ಡಬ್ಲು. ಎ., ಆರ್. ಎ. ಹೊವೀ ಮತ್ತು ಜೆ. ಝುಸ್ಮನ್ (1966) ಅನ್ ಇಂಟ್ರೊಡಕ್ಷನ್ ಟು ದಿ ರಾಕ್ ಫಾರ್ಮಿಂಗ್ ಮಿನರಲ್ಸ್ , ಲಾಂಗ್ಮನ್, ISBN 0-582-44210-9
 2. P. C. Rickwood (1981). "The largest crystals" (PDF). American Mineralogist. 66: 885–907.
 3. "The giant crystal project site". Archived from the original on 2009-06-04. Retrieved 2009-06-06.
 4. 1955ರ ಒಕ್ಲಹೋಮಾ ಹಾಡು ದಿ ಸರ್ವೇ ವಿತ್ ದಿ ಫ್ರಿಂಜ್ ಆನ್ ಟಾಪ್ ಸಂಗೀತವನ್ನು ಸೂಚಿಸುವ ಐಸಿಂಗ್ಲಾಸ್ ಕರ್ಟೆನ್‌ಗಳು.
 5. Wilke, Joanne (2007). Eight Women, Two Model Ts and the American West. University of Nebraska Press. ISBN 0803260199.
 6. Weisenhorn, A. L. (1991). "Atomically resolved images of bismuth films on mica with an atomic force microscope". Journal of Vacuum Science & Technology, B: Microelectronics and Nanometer Structures. 9 (2): 1333–1335. doi:10.1116/1.585190. {{cite journal}}: Unknown parameter |coauthors= ignored (|author= suggested) (help)
 7. Marchant, Roger E. (1992). "Interactions of von Willebrand factor on mica studied by atomic force microscopy". Journal of Colloid and Interface Science. 148 (1): 261–272. doi:10.1016/0021-9797(92)90135-9. {{cite journal}}: Unknown parameter |coauthors= ignored (|author= suggested) (help)
 8. Singh, Seema (1991). "Atomic force microscopy of supported planar membrane bilayers". Biophysical Journal. 60 (6): 1401–1410. doi:10.1016/S0006-3495(91)82177-4. PMC 1260200. PMID 1777565. {{cite journal}}: Unknown parameter |coauthors= ignored (|author= suggested) (help)
 9. Thundat, T.; Allison, D. P.; Warmack, R. J.; Brown, G. M.; Jacobson, K. B.; Schrick, J. J.; Ferrell, T. L. (1992). "Atomic force microscopy of DNA on mica and chemically modified mica". Scanning Microscopy. 6 (4): 911. PMID 1295085.{{cite journal}}: CS1 maint: multiple names: authors list (link)
 10. Fagan, Garrett G. (2006). Archaeological Fantasies: How Pseudoarchaeology Misrepresents the Past and Misleads the Public. New York: Routledge. p. 102. ISBN 0415305934.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಅಭ್ರಕ&oldid=1164104" ಇಂದ ಪಡೆಯಲ್ಪಟ್ಟಿದೆ