ಅಬ್ದುಲ್ ಹಕೀಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಅಬ್ದುಲ್ ಹಕೀಮ್‌ ಅವರು ಮೂಲತಃ ಪತ್ರಕರ್ತ.ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಪತ್ರಿಕೋದ್ಯಮ ಹಾಗೂ ಕಾನೂನು ಪದವೀಧರ. ೧೯೮೨ ರಲ್ಲಿ ಗೋಕಾಕ್ ಚಳವಳಿ ಹೋರಾಟಗಾರ. ೧೯೮೩ ರಶ್ಟು ಹಿಂದೆಯೇ ಇಂದಿನ ಭಾರತ ಹಾಗೂ ಕ್ರಾಂತಿವಾಣಿ ಪತ್ರಿಕೆಗಳ ಸಂಸ್ಥಾಪಕ ಸಂಪಾದಕ . ತನ್ಮೂಲಕ ಕನ್ನಡ ಪತ್ರಿಕಾರಂಗಕ್ಕೆ ಪರಿಚಿತ. ಪ್ರಪಂಚ, ವಿಶ್ವ ವಾಣಿ ಪತ್ರಿಕೆಗಳ ಬೆಂಗಳೂರಿನ ಹಿರಿಯ ಬಾತ್ಮೀದಾರ ಜೊತೆಗೆ ಈ ಸಂಜೆ ದಿನಪತ್ರಿಕೆ, ಅಭಿಮಾನಿ ವಾರಪತ್ರಿಕೆ, ಅರಗಿಣಿ (ಚಲನಚಿತ್ರ ಪತ್ರಿಕೆ)ಗಳ ಸಂಸ್ಥಾಪಕ ಮುಖ್ಯಸ್ಥ. ಇದೀಗ ಕನ್ನಡದ ಅತ್ಯಂತ ಜನಪ್ರಿಯ ಪತ್ರಿಕೆಗಳಾದ ಸ್ಪರ್ಧಾ ಪ್ರಪಂಚ ಹಾಗೂ ಆಲ್ ರೌಂಡರ್ ನ್ಯೂಸ್‌ನ ಸಂಪಾದಕ. ಸಹಸ್ರಾರು ಲೇಖನಗಳು ಪ್ರಕಟ, ನಾಡಿನ ನಾಡೋಜರು, ಭಾರತದ ಪ್ರಮುಖ ಹುದ್ದೆಗಳು, ಜ್ಞಾನ ಮಂಜರಿ,ಪದ್ಮ ಪ್ರಶಸ್ತಿಗಳು, ಭಾರತದ ಸಂವಿಧಾನ ಒಂದು ವಿಮರ್ಶೆ, ಪಂಚಾಯ್ತ ಅಭಿವೃದ್ದಿ ಅಧಿಕಾರಿ.ದೇಶ -ವಿದೇಶ ಮುಂತಾದ ಪುಸ್ತಕಗಳ ಬರಹಗಾರ. ಹತ್ತು ಹಲವು ತನಿಖಾ ವರದಿಗಳ ಜನಕ. ೨೦೦೧ ರಲ್ಲಿ ಮುಂಬೈಯ ಟಾಟಾ ಪೌಂಡೇಶನ್ ನವರು ಕೊಡಮಾಡಿದ'ಭವಿಷ್ಯದ ನಾಯಕ ಪ್ರಶಸ್ತಿ ವಿಜೇತ. ಹಲವಾರು ಕನ್ನಡ ಪತ್ರಿಕೆಗಳ ಪ್ರಸಿದ್ದ ಅಂಕಣಕಾರ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಸ್ಥೆಯ ಆಡಳಿತ ಮಂಡಳಿ, ಭಾರತೀಯ ಕಾರ್ಯನಿರತ ಪತ್ರಕರ್ತರ ರಾಷ್ತ್ರ್ರೀಯ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಕೆ. ತಮ್ಮೂರಲ್ಲಿ ಶಾಲೆ -ಕಾಲೇಜು ಹಾಗೂ ಸಹಕಾರಿ ತತ್ವದ ಮೆಲೆ ಹಣಕಾಸು ಸಂಸ್ಥೆ ಕಟ್ಟಿದವರು. ಅತ್ಯುತ್ತಮ ಕ್ರಿಕೆಟ್ ಆಡಳಿತಗಾರ ಎಂಬ ಮಾತಿಗೆ ಉತ್ತರ ಕರ್ನಾಟಕದಲ್ಲೆಲ್ಲ ಜನ ಜನಿತರಿವರು. ಇದಕ್ಕೆ ಸಾಕ್ಢಿ ರಾಯಚೂರುನಲ್ಲಿ ಇವರ ನೆತೃತ್ವದಲ್ಲಿ ನಿರ್ಮಿಸಿದ ಅಂತಾರಾಷ್ತ್ರ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ. ಕರ್ನಾಟಕ ಪರಿಪೂರ್ಣ ಸಾಮಾಜಿಕ ಸಂಸ್ಥೆಯ ಸಂಚಾಲಕ. ಸ್ಪರ್ಧಾತ್ಮಕ ಪರೀ‌‌‌ಕ್ಷೆಯಲ್ಲಿ ಯಶಸ್ಸು ಗಳಿಸಿ ಉದ್ಯೋಗ ಪಡೆಯುವಲ್ಲಿ ಅರ್ಥಪೂರ್ಣ ಸಲಹೆ ಇವರಿಂದ.ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಇವರ ಜನ್ನತ್ ಬಾಗ್ ತೋಟ ವೀಕ್ಷಿಸಿದರೆ ಇವರಿಗಿರುವ ಕೃಷಿಯ ಜ್ಣಾನದ ಬಗ್ಗೆ ತಿಳಿದುಕೊಳ್ಲಬಹುದು.

೧೯೯೨ರ ಅಂತಾರಾಷ್ತ್ರ್ರೀಯ ಚಲನ ಚಿತ್ರೋತ್ಸವ ಸಮಿತಿಯ ಸಹ ಕಾರ್ಯದರ್ಶಿಯಾಗಿ ಹಾಗೂ ಕರ್ನಾಟಕ ಚಲನಚಿತ್ರ ಪತ್ರಕರ್ತರ್ ಪರಿಷತ್ ಕಾರ್ಯದರ್ಶಿಯಾಗಿ ದುಡಿತ. ಕರ್ನಾಟಕ ರಾಜ್ಯ ಸರ್ಕಾರದ  ಚಲನಚಿತ್ರ ಪ್ರಶಸ್ತಿ ಆಯ್ಕೆ ಮಂಡಳಿಯ ಸದಸ್ಯರಾಗಿ ಹಾಗೂ ಸೆನ್ಸಾರ್ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಕೆ. ಪ್ರತಿಷ್ಥಿತ ಕರ್ನಾಟಕ ವಿಶ್ವವಿದ್ಯಾಲಯದ ನೇಮಕಾತಿ ಮಂಡಳಿಯ  ಸದಸ್ಯರಾಗಿ ದುಡಿದಿದ್ದು ಹೌದು. ಕಳೆದ ಹನ್ನೆರಡು ವರ್ಷಗಳಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಆಡಳಿತ ಮಂಡಳಿಯ ಸದಸ್ಯ ಸ್ಥಾನವೂ ಇವರ ಮಡಿಲಿಗೆ. ಪ್ರಧಾನಮಂತ್ರಿಗಳ ಹದಿನೈದು ಅಂಶಗಳ ಕಾರ್ಯಕ್ರಮದ ರಾಜ್ಯ ಸಮಿತಿ ಸದಸ್ಯರಾಗಿ ಈಗ ಕೆಲಸ.