ಅನ್ನಾ ಲೇಟಿಟಿಯ ಬಾರ್ಬೌಲ್ಡ್
ಅನ್ನಾ ಲೇಟಿಟಿಯ ಬಾರ್ಬೌಲ್ಡ್ ರವರು ಹೆಸರಾಂತ ಆಂಗ್ಲ ಕವಿಯತ್ರಿ, ಪ್ರಬಂಧಕಾರರು, ವಿಮರ್ಶಕಾರರು, ಸಂಪಾದಕಾರರು ಮತ್ತು ಮಕ್ಕಳ ಸಾಹಿತ್ಯ ಬರಹಗಾರರಾಗಿದ್ದರು.[೧] ಇವರು ೨೦ನೇ ಜೂನ್, ೧೭೪೩ರಲ್ಲಿ ಲೈಸೆಸ್ಟರ್‌ಶೈರ್‌ನಲ್ಲಿರುವ ಕಿಬ್ವರ್ತ್ ಹಾರ್ಕೋರ್ಟನಲ್ಲಿ ಜನಿಸಿದರು. ಇವರ ತಂದೆ ತಾಯಿಯ ಹೆಸರು ಜಾನ್ ಐಕ್ಟಿನ್ ಮತ್ತು ಜೇನ್. ಅವರ ತಂದೆ ಡಿಸೆಂಟಿಂಗ್ ಅಕಾಡೆಮಿ, ಕಿಬ್ವರ್ತ್ ಹಾರ್ಕೋರ್ಟನಲ್ಲಿ ಪ್ರಾಂಶುಪಾಲಾರಾಗಿ ಮತ್ತು ಪ್ರೆಸ್ಟಿಟೇರಿಯನ್ ಚರ್ಚಿನಲ್ಲಿ ಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಕುಟುಂಬವು ಅವರ ತಂದೆಯ ಶಾಲೆಯ ಬಳಿಯಲ್ಲಿಯೇ ವಾಸವಾಗಿದ್ದರು. ಇದರಿಂದ ಅವಳಿಗೆ ಲ್ಯಾಟಿನ್, ಗ್ರೀಕ್, ಫ್ರೆಂಚ್, ಇಟಾಲಿಯನ್ ಮತ್ತು ಇತರ ಭಾಷೆಗಳನ್ನು ಕಲಿಯುವ ಅವಕಾಶ ದೊರೆಯಿತು. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಇದು ಸೂಕ್ತವಲ್ಲ ಎಂದು ಪರಿಗಣಿಸಲಾಗುತ್ತಿತ್ತು. ಅವರಿಗೆ ಓದಿನ ಬಗ್ಗೆ ತುಂಬ ಒಲವು ಮತ್ತು ಬೌಧ್ದಿಕತೆಯನ್ನು ನೋಡಿ ಅವರ ತಾಯಿಗೆ ಮಗಳು ಎಲ್ಲಿ ಜೀವನ ಪರಿಯಂತ ಅವಿವಾಹಿತೆಯಾಗಿ ಉಳಿಯುತ್ತಾಳೋ ಎಂಬ ಚಿಂತೆ ಕಾಡುತ್ತಿತ್ತು. ತಾಯಿ ಮಗಳ ಭಾಂದವ್ಯ ತಂದೆ ಮಗಳಿಗೆ ಇದ್ದಷ್ಟು ಇರಲಿಲ್ಲ. ೧೭೫೮ರಲ್ಲಿ ಅವರ ತಂದೆಗೆ ಇಂಗ್ಲೆಂಡಿನ ವಾರಿಂಗ್ಟನಲ್ಲಿ ಇದ್ದ ಪ್ರಸಿದ್ಧವಾದ ವಾರಿಂಗ್ಟನ್ ಅಕಾಡೆಮಿಯಲ್ಲಿ ಒಳ್ಳೆಯ ಅವಕಾಶ ಸಿಕ್ಕಿತು. ಇದರಿಂದ ಅವರ ಕುಟುಂಬವು ಅಲ್ಲಿಗೆ ಬಂದು ನೆಲೆಸಿತು.
ಬಾರ್ಬೌಲ್ಡ್‌ರವರು ಬರೆದ ಪ್ರಥಮ ಕವಿತೆಗಳ ಪುಸ್ತಕವನ್ನು ಸ್ನೇಹಿತರಿಂದ ಸ್ನೇಹಿತರಿಗೆ ತಲುಪಿ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅದನ್ನು ಪ್ರಕಟಿಸಲು ಮನವರಿಕೆ ಮಾಡಿದರು. ಆದ್ದರಿಂದ ೧೭೭೩ರಲ್ಲಿ ಅದನ್ನು ಪ್ರಕಟಿಸಲಾಯಿತು. ವಿಸ್ಮಯಕರ ವಿಷಯವೇನೆಂದರೆ ಈ ಕವನಗಳು ಹನ್ನೆರಡು ತಿಂಗಳಲ್ಲಿ ನಾಲ್ಕು ಆವೃತ್ತಿಗಳು ಬಿಡುಗಡೆಯಾಗಿ ಯಶಸ್ಸು ಕಂಡಿತು. ಇದು ಪ್ರಕಟವಾದ ನಂತರ ಬಾರ್ಬೌಲ್ಡ್ ಇಂಗ್ಲೆಂಡ್ನಲ್ಲಿ ಪ್ರಸಿದ್ಧ ಸಾಹಿತಿಯಾಗಿ ಗುರುತಿಸಲ್ಪಟ್ಟರು. ಅದೇ ವರ್ಷ ಬಾರ್ಬೌಲ್ಡ್ ಮತ್ತು ಅವರ ಸೋದರ, ಜಾನ್ ಐಕಿನ್ ಒಟ್ಟಾಗಿ 'ಮಿಸ್ಸಲೇನಿಯಸ್ ಪೀಸಸ್ ಇನ್ ಪ್ರೋಸ್' ಎಂಬದನ್ನು ಪ್ರಕಟಿಸಿದರು. ಅದರಲ್ಲಿ ಹೆಚ್ಚಿನ ಪ್ರಬಂಧಗಳು ಬಾರ್ಬೌಲ್ಡ್ ಅವರದೇ ಆಗಿತ್ತು.
ಮೇ ೧೭೭೪ರಲ್ಲಿ ಬಾರ್ಬೌಲ್ಡ್ ವಾರಿಂಗ್ಟನ್ನಲ್ಲಿ ನೆಲಸಿದ ಫ್ರೆಂಚ್ ಹಗೆನಾಟ್ನ ಮೊಮ್ಮಗನಾದ ರೊಚೆಮಾಂಟ್ ಬಾರ್ಬೌಲ್ಡ್ ರವರನ್ನು ವಿವಾಹವಾದರು. ಅವರ ಗಂಡ ಹುಡುಗರಿಗಾಗಿ ಶಾಲೆಯನ್ನು ನೀಡಿದ್ದ ಜಾಗಕ್ಕೆ ಸ್ಥಳಾಂತರಗೊಂಡರು. ಅವರು ಮದುವೆಯ ನಂತರ ೧೮ನೇ ಶತಮಾನದಲ್ಲಿ ಸಾಮನ್ಯವಾದ ಕಾಲಕ್ಷೇಪವನ್ನು ಅಳವಡಿಸಿಕೊಂಡರು. ಇದನ್ನು 'ಡಿವೋಶ್ನಲ್ ಪೀಸಸ್ ಕಂಪೈಳ್ಡ್ ಫ್ರಂ ದಿ ಪ್ಸಾಮ್ಸ್ ಆಂಡ್ ದಿ ಬುಕ್ ಆಫ್ ಜಾಬ್' ಎಂಬುದರಲ್ಲಿ ಪ್ರಕಟಿಸಿದರು. ಈ ಕೆಲಸಕ್ಕೆ ಲಗತ್ತಿಸಲಾಗಿ 'ಥಾಟ್ಸ್ ಆನ್ ದಿ ಡಿವೋಶ್ನಲ್ ಟೇಸ್ಟ್, ಆನ್ ಸೆಕ್ಟ್ಸ್ ಆಂಡ್ ಆನ್ ಎಸ್ಟಾಬ್ಲಿಶ್‌ಮೆಂಟ್ಸ್' ಎಂಬ ಪ್ರಬಂಧವನ್ನು ಬರೆದರು. ಅದಾದ ನಂತರ ೧೭೭೫ರಲ್ಲಿ, ಅವರಿಗೆ ಮಕ್ಕಳಾಗದ ಕಾರಣ ಬಾರ್ಬೌಲ್ಡ್ ಅವರ ಅಣ್ಣನ ಮಗ ಚಾರ್ಲ್ಸ್ ಅನ್ನು ದತ್ತುವಾಗಿ ಪಡೆದುಕೊಂಡರು.
ಪಾಲ್ಗ್ರೇವ್ (Palgrave) ಆಕಾಡೆಮಿ
[ಬದಲಾಯಿಸಿ]ಬಾರ್ಬೌಲ್ಡ್ ಮತ್ತು ಅವರ ಗಂಡ ೧೧ ವರ್ಷ ಪಾಲ್ಗ್ರೇವ್ ಆಕಾಡೆಮಿಯಲ್ಲಿ ಅವರ ಕೆಲಸ ನಿರ್ವಹಿಸಿ ಮತ್ತು ಭೋಧನೆ ಮಾಡಿದರು. ಅವರು ಮನೆ ಕೆಲಸ ಹಾಗು ಶಾಲೆಯ ಕೆಲಸವು ಮಾಡುತ್ತಿದ್ದರು. ಕೆವಲ ೮ ಹುಡುಗರಿಂದ ಶುರುವಾಗಿದ್ದ ಶಾಲೆ, ಬಾರ್ಬೌಲ್ಡ್ ೧೭೮೫ರಲ್ಲಿ ಬಿಡುವಾಗ ೪೦ ಹುಡುಗರು ಇದ್ದರು. ಶಾಲೆಯಲ್ಲಿ ವಿಜ್ಞಾನವು ಪ್ರಾಯೋಗಿಕ ಜ್ಞಾನ ನೀಡುತ್ತ ಆಧುನಿಕ ಭಾಷೆ ಒತ್ತಿಹೇಳಿತು. ಅವರು ಮೀಸಲಿಟ್ಟ ಶಿಕ್ಷಕರಾಗಿದ್ದರು. ಶಾಲೆಗೆ "ಸಾಪ್ತಾಹಿಕ ಕ್ರಾನಿಕಲ್"ಅನ್ನು ತಯಾರಿಸಿದರು ಮತ್ತು ವಿದ್ಯಾರ್ಥಿಗಳಿಗೆ ಪ್ರದರ್ಶನ ನೀಡಲು ನಾಟಕೀಯ ತುಣುಕುಗಳನ್ನು ಬರೆದರು. ಬಾರ್ಬೌಲ್ಡ್ ತನ್ನ ಅನೇಕ ವಿದ್ಯಾರ್ಥಿಗಳ ಮೇಲೆ ಆಳವಾದ ಪರಿಣಾಮವನ್ನು ಬೀರಿದರು, ಅದರಲ್ಲಿ ಜರ್ಮನ್ ಸಾಹಿತ್ಯದ ಒಬ್ಬ ಪ್ರಖ್ಯಾತ ವಿದ್ವಾಂಸ ವಿಲಿಯಂ ಟೇಲರ್ ಬಾರ್ಬೌಲ್ಡ್ನನ್ನು "ಅವನ ಮನಸ್ಸಿನ ತಾಯಿ"ಎಂದು ಉಲ್ಲೇಖಿಸಿದ್ದಾರೆ.[೨]
ರಾಜಕೀಯ ಮತ್ತು ಹ್ಯಾಂಪ್ಸ್ಟೆಡ್ಗೆ
[ಬದಲಾಯಿಸಿ]ಸೆಪ್ಟೆಂಬರ್ ೧೭೮೫ ರಲ್ಲಿ, ಬಾರ್ಬೌಲ್ಡ್ ಫ್ರಾನ್ಸ್ನ ಪ್ರವಾಸಕ್ಕಾಗಿ ಪಾಲ್ಗ್ರೇವ್ ಅನ್ನು ತೊರೆದರು; ರೊಚೆಮೋಂಟ್ ಅವರ ಮಾನಸಿಕ ಆರೋಗ್ಯವು ಕ್ಷೀಣಿಸುತ್ತಿತ್ತು ಮತ್ತು ಅವರು ತಮ್ಮ ಬೋಧನಾ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ೧೭೮೭ ರಲ್ಲಿ ಅವರು ಹ್ಯಾಂಪ್ಸ್ಟೆಡ್‌ಗೆ ಸ್ಥಳಾಂತರಗೊಂಡರು. ಇಲ್ಲಿಯೇ ಬಾರ್ಬೌಲ್ಡ್ ನಾಟಕಕಾರರಾದ ಜೊವಾನ್ನಾ ಬೈಲ್ಲಿಯೊಂದಿಗೆ ನಿಕಟ ಸ್ನೇಹಿತರಾದರು.ಅದಾದ ನಂತರ ಮುಂದೆ ಶಾಲೆಯ ಉಸ್ತುವಾರಿ ಇಲ್ಲದಿದ್ದರು, ಬಾರ್ಬೌಲ್ಡ್ ಅವರು ತಮ್ಮ ಶಿಕ್ಷಣದ ಬದ್ದತೆಯನ್ನು ತ್ಯಜಿಸಲಿಲ್ಲ. ಅವರ ಸ್ನೇಹಿತರು ಶಿಫಾರಸು ಮಾಡಿದ್ದುದರಿಂದ ಒಬ್ಬ ಅಥವ ಇಬ್ಬರು ವಿದ್ಯಾರ್ಥಿಗಳನ್ನು ಹೊಂದಿದ್ದರು.
ಈ ಸಮಯದಲ್ಲಿ ಫ್ರೆಂಚ್ ಕ್ರಾಂತಿಯು ಪ್ರಾರಂಭವಾಯಿತು, ಆಗ ಬಾರ್ಬೌಲ್ಡ್ ಅವರು ಕೆಲವು ಮೂಲಭೂತ ರಾಜಕೀಯ ತುಣುಕುಗಳನ್ನು ಪ್ರಕಟಿಸಿದರು. ೧೭೮೭ ರಿಂದ ೧೭೯೦ ರವರೆಗೆ 'ಚಾರ್ಲ್ಸ್ ಜೇಮ್ಸ್ ಫಾಕ್ಸ್ ಹೌಸ್ ಆಫ್ ಕಾಮನ್ಸ್ಗೆ' ಮನವೊಲಿಸಲು ಯತ್ನಿಸಿದರು. ಈ ಮಸೂದೆಯನ್ನು ಮೂರನೆಯ ಬಾರಿಗೆ ಸೋಲಿಸಿದಾಗ, ಬಾರ್ಬೌಲ್ಡ್ 'ಆನ್ ಅಡ್ರೆಸ್ ಟು ದಿ ಅಪೋಸರ್ಸ್ ಆಫ್ ದಿ ರಿಪೆಲ್ ಆಫ್ ದಿ ಕಾರ್ಪೋರೆಷನ್ ಆಂಡ್ ಟೆಸ್ಟ್ ಆಕ್ಟ್ಸ್' ಎಂಬ ತನ್ನ ಭಾವೋದ್ರಿಕ್ತ ಕರಪತ್ರಗಳಲ್ಲಿ ಬರೆದಿದ್ದಾರೆ. ಒಂದು ಮಹಿಳೆಯ ಬರಹಗಾರರಿಂದ ಈರೀತಿ ಪ್ರತಿಕ್ರೀಯೆಯನ್ನು ಕಂಡು ಕೆಲವು ಓದುಗರಿಗೆ ಆಘಾತವಾಯಿತು.
೧೭೯೧ರಲ್ಲಿ ಗುಲಾಮರ ವ್ಯಾಪಾರವನ್ನು ನಿಷೇಧಿಸುವ ವಿಲಿಯಮ್ ವಿಲ್ಬರ್ಫೋರ್ಸ್‌ನ ಪ್ರಯತ್ನ ವಿಫಲವಾದ ನಂತರ, ಬಾರ್ಬೌಲ್ಡ್ "ಇಪಿಸಲ್ ಟು ವಿಲಿಯಮ್ ವಿಲ್ಬರ್ಫೋರ್ಸ್ನ ಇಸ್ಕ್ವಾರ್ ಆನ್ ದಿ ರಿಜೆಕ್ಷಣ್ ಆಫ್ ದಿ ಬಿಲ್ ಫಾರ್ ಅಬೊಲಿಶಿಂಗ್ ದಿ ಸ್ಲೇವ್ ಟ್ರೇಡ್" ಎಂಬುದನ್ನು ಪ್ರಕಟಿಸಿದರು. ಇದು ಗುಲಾಮರ ಭವಿಷ್ಯವನ್ನು ಮಾತ್ರ ವಿಷಾದಿಸುತ್ತಿಲ್ಲ, ಗುಲಾಮಗಿರಿಯನ್ನು ತ್ಯಜಿಸದಿದ್ದಲ್ಲಿ ಬ್ರಿಟಿಷರು ಸಾಂಸ್ಕೃತಿಕ ಮತ್ತು ಸಾಮಾಜಿಕ ಅವನತಿಗೆ ನಿರೀಕ್ಷಿಸಬಹುದೆಂದು ಎಚ್ಚರಿಸಿದಳು. ೧೭೯೨ ರಲ್ಲಿ 'ಸಿನ್ಸ್ ಆಫ್ ಗವರ್ಮನ್ಟ, ಸಿನ್ಸ್ ಆಪ್ ದಿ ನೇಶನ್' ಎಂಬ ಯುದ್ಧ ವಿರೋಧಿ ಧರ್ಮೋಪದೇಶದ ಪ್ರತಿ ದೇಶದ ರಾಷ್ಟದ ಕ್ರಮಗಳು ಜವಾಬ್ದಾರಿ ಎಂದು ವಾದಿಸಿದರು.
ಸ್ಟೋಕ್ ನ್ಯೂವಿಂಗ್ಟನ್ ಮತ್ತು ಸಾಹಿತ್ಯಕ ವೃತ್ತಿಜೀವನದ ಅಂತ್ಯ
[ಬದಲಾಯಿಸಿ]೧೮೦೨ ರಲ್ಲಿ,ಬಾರ್ಬೌಲ್ಡ್ಗಳು ಸ್ಟೋಕ್ ನ್ಯೂವಿಂಗ್ಟನ್ಗೆ ಸ್ಥಳಾಂತರಗೊಂಡರು. ಅವರ ಗಂಡನ ಮನಸ್ಸು ಶೀಘ್ರವಾಗಿ ವಿಫಲವಾದ ಕಾರಣ ಬಾರ್ಬೌಲ್ಡ್ ತನ್ನ ಸಹೋದರನಾದ ಜಾನ್ ಹತ್ತಿರ ಸಂತೋಷವಾಗಿ ಇದ್ದಳು. ಅವರ ಗಂಡ ಒಂದು ದಿನ ಭೋಜನಕೂಟದಲ್ಲಿ ಚಾಕುವಿನಿಂದ ಅವಳನ್ನು ದಾಳಿ ಮಾಡಲು ಪ್ರಯತ್ನಿಸಿದ, ಅದ್ದರಿಂದ ಅವಳು ಕಿಟಕಿಯಿಂದ ಹೊರಗೆ ಹಾರಿ ತನ್ನನ್ನು ತಾನೇ ರಕ್ಷಿಸಿಕೊಂಡಳು. ೧೮೦೮ ರಲ್ಲಿ ರೋಚೆಮೊಂಟ್ ಮುಳುಗಿದನು(ಅಸುನೀಗಿದನು). ಕೆಲವು ದಿನಗಳ ನಂತರ ಈ ದುಃಖದಿಂದ ಬಾರ್ಬೌಲ್ಡ್ ಚೇತರಿಸಿಕೊಂಡರು. ಮತ್ತೆ ಬಾರ್ಬೌಲ್ಡ್ ಬರೆಯಲು ಶುರುಮಾಡಿದರು. "ಏಟೀನ್ ಹನ್ಡ್ರೆಡ್ ಆಂಡ್ ಇಲೆವೆನ್" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಕವಿತೆಗಳಲ್ಲಿ ಇಂಗ್ಲೆಂಡಿಗೆ ದಕ್ಕೆ ಬರುವಂತೆ ಚಿತ್ರಿಸಲಾಗಿತ್ತು. ಇದರ ಪ್ರತಿಕ್ರಿಯೆ ಬಹಳ ಕೆಟ್ಟದಾಗಿದ್ದ ಕಾರಣ ಅವರು ಮತ್ತೊಮ್ಮೆ ತನ್ನ ಜೀವಿತಾವಧಿಯಲ್ಲಿ ಕವಿತೆಗಳನ್ನು ಎಂದಿಗೂ ಪ್ರಕಟಿಸಲಿಲ್ಲ. ಆದರೆ ಈಗ ಇದನ್ನು ವಿದ್ವಾಂಸರು ಇದು ಅವರ ಶ್ರೇಷ್ಠ ಕಾವ್ಯಾತ್ಮಕ ಸಾಧನೆ ಎಂದು ಪರಿಗಣಿಸಿದ್ದಾರೆ.
ಅವರ ಮರಣ ಮತ್ತು ಅಂತ್ಯ ಸಂಸ್ಕಾರ
[ಬದಲಾಯಿಸಿ]ಬಾರ್ಬೌಲ್ಡ್ ೧೮೨೫ ರಲ್ಲಿ ಖ್ಯಾತ ಬರಹಗಾರರಾಗಿ ಮರಣಹೊಂದಿದರು. ಅವರ ಪಾರ್ಥಿವ ಶರೀರವನ್ನು ಸ್ಟೋಕ್ ನ್ಯೂವಿಂಗ್ಟನ್ ನಲ್ಲಿ ಕುಟುಂಬ ಚಾವಣಿಯಲ್ಲಿ ಸಮಾಧಿ ಮಾಡಲಾಯಿತು. ಬಾರ್ಬೌಲ್ಡ್ ಮರಣದ ನಂತರ, ಅವರು ಮೊದಲ, ಉತ್ತಮ ಸ್ತ್ರೀ ಕವಿತೆ ಮತ್ತು ಅವರ ಅತ್ಯಂತ ನಿರರ್ಗಳವಾಗಿ, ಶಕ್ತಿಯುತವಾದ ಗದ್ಯಗಳನ್ನು ಬರೆಯುತ್ತಿದ್ದರು ಎಂದು ನ್ಯೂಕ್ಯಾಸಲ್ ಮ್ಯಾಗಝೀನ್ನಲ್ಲಿ ಅವರನ್ನು ಶ್ಲಾಘಿಸಲ್ಪಾಟ್ಟರು.
ಇತರ ಪ್ರಸಿದ್ಧ ಬರಹಗಳು
[ಬದಲಾಯಿಸಿ]- ಏಟೀನ್ ಹನ್ಡ್ರೆಡ್ ಆಂಡ್ ಇಲೆವೆನ್
- ಸಿನ್ಸ್ ಆಫ್ ಗವರ್ಮನ್ಟ, ಸಿನ್ಸ್ ಆಪ್ ದಿ ನೇಶನ್
- ಲೆಸ್ಸನ್ಸ್ ಫಾರ್ ಚಿಲ್ಡ್ರನ್
- ಏನ್ಕ್ವೈರಿ ಇನ್ಟು ಪಬ್ಲಿಕ್ ಆರ್ ಸೋಷಿಯಲ ವರ್ಕ್-ಶಾಪ್
- ದಿ ಫಿಮೇಲ್ ಸ್ಪೀಕರ್
ಉಲ್ಲೇಖಗಳು
[ಬದಲಾಯಿಸಿ]