ಅನುಪಮಾ ಪುಚಿಮಂಡ
ಅನುಪಮಾ ಪುಚಿಮಂಡ (8 ಜುಲೈ 1980 - 18 ಏಪ್ರಿಲ್ 2021) ಇವರು ಹಾಕಿ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ಭಾರತೀಯ ಕ್ರೀಡಾಪಟು. ಅನುಪಮಾ ಪುಚಿಮಂಡ ಅವರು ೨೦೦೬ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ಮೊದಲ ಭಾರತೀಯ ಮಹಿಳೆ. ಇವರು ಏಷ್ಯನ್ ಗೇಮ್ಸ್, ಸೆಂಟ್ರಲ್ ಅಮೇರಿಕನ್ ಮತ್ತು ಕೆರಿಬಿಯನ್ ಗೇಮ್ಸ್, ಎಫ್ಐಹೆಚ್ ಜೂನಿಯರ್ ವರ್ಲ್ಡ್ ಕಪ್, ಮತ್ತು ಈಸ್ಟ್ ಏಷ್ಯನ್ ಗೇಮ್ಸ್ ಸೇರಿದಂತೆ 90 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 100 ಕ್ಕೂ ಹೆಚ್ಚು ಭಾರತೀಯ ಹಾಕಿ ಪಂದ್ಯಗಳನ್ನು ನಿರ್ವಹಿಸಿದ್ದಾರೆ.
ಜೀವನಚರಿತ್ರೆ
[ಬದಲಾಯಿಸಿ]ಪುಚ್ಚಿಮಂಡ ಅವರು ಕರ್ನಾಟಕದ ವಿರಾಜಪೇಟೆಯವರು. ಕಾನೂನಿನಲ್ಲಿ ಪದವಿ ಪಡೆದಿದ್ದರು. ಇವರು ಮಿಥುನ್ ಮಂದಣ್ಣ ಅವರನ್ನು ವಿವಾಹವಾಗಿದ್ದರು. [೧] ಏಪ್ರಿಲ್ 2021 ರಲ್ಲಿ ಪುಚಿಮಂಡ ಅವರು ತಮ್ಮ 41 ನೇ ವಯಸ್ಸಿನಲ್ಲಿ COVID-19 ನಿಂದ ನಿಧನರಾದರು.
ವೃತ್ತಿ
[ಬದಲಾಯಿಸಿ]ಪುಚಿಮಂಡ ಅವರು 1995 ರಲ್ಲಿ ತಮ್ಮ ಹಾಕಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿ, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು. ನಂತರ ಅವರು ಅದೇ ಚಾಂಪಿಯನ್‌ಶಿಪ್‌ನಲ್ಲಿ ಹಿರಿಯ ತಂಡವನ್ನು ಕೂಡ ಪ್ರತಿನಿಧಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಹಾಕಿ ತಂಡಕ್ಕಾಗಿ ಆಡಿದರು. 2004 ರಲ್ಲಿ ಕರ್ನಾಟಕ ರಾಜ್ಯಕ್ಕೆ ಹಾಕಿ ಅಂಪೈರ್ ನೇಮಕಗೊಂಡರು. [೨] [೩] ಇವರು ಮೈದಾನದ ಮಧ್ಯ ಮತ್ತು ಬಲ ಪಾರ್ಶ್ವದಲ್ಲಿ ಆಡುತ್ತಿದ್ದರು. [೩]
ಇವರು ಕರ್ನಾಟಕದಲ್ಲಿ ಹಾಕಿಯನ್ನು ಕ್ರೀಡೆಯಾಗಿ ಅಭಿವೃದ್ಧಿಪಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕರ್ನಾಟಕ ರಾಜ್ಯ ಹಾಕಿ ಅಸೋಸಿಯೇಷನ್‌ನ ಕಾರ್ಯಕಾರಿ ಸದಸ್ಯರಾಗಿ ಸೇವೆ ಸಲ್ಲಿಸಿದರು. [೨] 2004 ರಲ್ಲಿ ಪುಚಿಮಂಡ ಅವರನ್ನು ಹಿಂದಿನ ಭಾರತೀಯ ಹಾಕಿ ಫೆಡರೇಶನ್ ಮಹಿಳಾ ಹಾಕಿ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಆಯ್ಕೆ ಮಾಡಿತು. [೩]
2006 ರಲ್ಲಿ ಪುಚಿಮಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳಾ ಹಾಕಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಭಾರತದ ಮೊದಲ ಮಹಿಳಾ ಅಂಪೈರ್. ನಂತರ ಇವರು 2006 ರ ಸೆಂಟ್ರಲ್ ಅಮೇರಿಕನ್ ಮತ್ತು ಕೆರಿಬಿಯನ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್, FIH ಜೂನಿಯರ್ ವರ್ಲ್ಡ್ ಕಪ್ ಮತ್ತು ಈಸ್ಟ್ ಏಷ್ಯನ್ ಗೇಮ್ಸ್‌ಗಳಲ್ಲಿ ಕಾರ್ಯ ನಿರ್ವಹಿಸಿದರು . [೨] [೪] ಅವರು BDO ಜೂನಿಯರ್ ವಿಶ್ವಕಪ್ (ಮಹಿಳೆಯರು) (2005, ಸ್ಯಾಂಟಿಯಾಗೊ ), ಹೀರೋ ಹಾಕಿ ವರ್ಲ್ಡ್ ಲೀಗ್ ರೌಂಡ್-2 (ಮಹಿಳೆಯರು) (2013, ದೆಹಲಿ) ಮತ್ತು 2013 ರ ಮಹಿಳಾ ಏಷ್ಯಾ ಕಪ್ (ಕೌಲಾಲಂಪುರ್) ನಲ್ಲಿ ಸಹ ಕಾರ್ಯ ನಿರ್ವಹಿಸಿದರು. [೫] [೬] [೭] 2012 ರಲ್ಲಿ ಇವರು ನಾಲ್ಕು ರಾಷ್ಟ್ರಗಳ ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಅಧಿಕೃತವಾಗಿ ಕಾರ್ಯ ನಿರ್ವಹಿಸಿದರು. [೮] ತಮ್ಮ ವೃತ್ತಿಜೀವನದ ಅವಧಿಯಲ್ಲಿ ಅವರು 90 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳನ್ನು ಮತ್ತು ಅದಕ್ಕೆ ಸಮಾನವಾಗಿ ರಾಷ್ಟ್ರೀಯ ಮತ್ತು ರಾಜ್ಯ ಪಂದ್ಯಗಳಿಗೆ ಸೇವೆಯನ್ನು ಸಲ್ಲಿಸಿದ್ದಾರೆ. [೨] [೩]
2011 ರಲ್ಲಿ, ಕ್ರೀಡೆಯಲ್ಲಿನ ತನ್ನ ಸಾಧನೆಗಳಿಗಾಗಿ ಬೆಂಗಳೂರು ನಗರದಿಂದ ನಮ್ಮ ಬೆಂಗಳೂರು ಪ್ರಶಸ್ತಿಯನ್ನು ಪಡೆದ ಹಲವಾರು ಜನರಲ್ಲಿ ಇವರೂ ಒಬ್ಬರು. [೯] [೧೦]
ಉಲ್ಲೇಖಗಳು
[ಬದಲಾಯಿಸಿ]- ↑ "International hockey umpire Mundanda Anupama passes away". Star of Mysore (in ಅಮೆರಿಕನ್ ಇಂಗ್ಲಿಷ್). 2021-04-18. Retrieved 2021-12-02.
- ↑ ೨.೦ ೨.೧ ೨.೨ ೨.೩ Reporter, Sports (2021-04-18). "Player-turned-umpire Anupama passes away". The Hindu (in Indian English). ISSN 0971-751X. Retrieved 2021-12-02.
- ↑ ೩.೦ ೩.೧ ೩.೨ ೩.೩ Apr 18, Manuja; Veerappa (18 April 2021). "Former international female hockey umpire Anupama dies of Covid-19". The Times of India (in ಇಂಗ್ಲಿಷ್). Retrieved 2021-12-02.
{{cite web}}
: CS1 maint: numeric names: authors list (link) - ↑ "Covid-19 claims international hockey umpire Anupama". The New Indian Express. Retrieved 2021-12-02.
- ↑ "The Asian Hockey Federation condoles the death of Anupama Puchimanda". Asian Hockey Federation (in ಅಮೆರಿಕನ್ ಇಂಗ್ಲಿಷ್). Retrieved 2021-12-02.
- ↑ "OCA » Asian hockey pays tribute to international umpire Anupama, 40". ocasia.org. Archived from the original on 2021-12-02. Retrieved 2021-12-02.
- ↑ "Hockey India mourns the death of former international umpire Anupama Punchimanda". Hockey India (in ಇಂಗ್ಲಿಷ್). 2021-04-18. Retrieved 2021-12-02.
- ↑ "International Hockey Federation: Outdoor Appointments" (PDF).
- ↑ "Miss. Anupama Puchimanda – Namma Bengaluru Awards" (in ಅಮೆರಿಕನ್ ಇಂಗ್ಲಿಷ್). Retrieved 2021-12-02.
- ↑ Desk, News (2011-02-01). "21 finalists line up for 2011 Namma Bengaluru Awards". Citizen Matters, Bengaluru (in ಬ್ರಿಟಿಷ್ ಇಂಗ್ಲಿಷ್). Retrieved 2021-12-02.
{{cite web}}
:|last=
has generic name (help)