ಅನಂತ್ ಕುಮಾರ್ ಹೆಗಡೆ
ಅನಂತ್ ಕುಮಾರ್ ಹೆಗಡೆಯವರು ಭಾರತೀಯ ರಾಜಕಾರಣಿ ಮತ್ತು ಉತ್ತರ ಕನ್ನಡ ಕ್ಷೇತ್ರದ ಸಂಸತ್ ಸದಸ್ಯರು. ಭಾರತೀಯ ಜನತಾ ಪಾರ್ಟಿಯ ಸದಸ್ಯರು ಮತ್ತು ಮಾಜಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವರಾಗಿದ್ದರು.
ಆರಂಭಿಕ ಜೀವನ
[ಬದಲಾಯಿಸಿ]ಅನಂತ್ ಕುಮಾರ್ ಹೆಗಡೆಯವರು ೧೯೬೮ರ ಮೇ ೨೦ರಂದು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲ್ಲೂಕಿನಲ್ಲಿ ಜನಿಸಿದರು. ಇವರ ತಂದೆ ದತ್ತಾತ್ರೇಯ ಹೆಗಡೆ ಮತ್ತು ತಾಯಿ ಲಲಿತಾ.
ವಿದ್ಯಾಭ್ಯಾಸ
[ಬದಲಾಯಿಸಿ]ಇವರು ತಮ್ಮ ಪದವಿಯನ್ನು ಶಿರಸಿಯ ಎಂಎಂ ಆರ್ಟ್ಸ್ ಮತ್ತು ಸೈನ್ಸ್ ಪದವಿ ಕಾಲೆಜಿನಲ್ಲಿ ಪಡೆದರು. ಇವರ ಕಾಲೇಜು ದಿನಗಳಲ್ಲಿ, ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದರು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದರು.[೧]
ವಯಕ್ತಿಕ ಜೀವನ
[ಬದಲಾಯಿಸಿ]ಅನಂತ್ ಕುಮಾರ್ ಹೆಗಡೆಯವರು ೧೯೯೮ರಲ್ಲಿ ಶ್ರೀರೂಪ ಹೆಗಡೆವರನ್ನು ವಿವಾಹವಾದರು. ಈ ದಂಪತಿಗಳಿಗೆ ಒಬ್ಬಳು ಪುತ್ರಿ ಮತ್ತು ಒಬ್ಬ ಪುತ್ರನಿದ್ದಾನೆ.
ವೃತ್ತಿ
[ಬದಲಾಯಿಸಿ]೧೯೯೬ರಲ್ಲಿ ನೆಡೆದ ೧೧ನೇ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದರು. ನಂತರ ಐದು ಬಾರಿ ಉತ್ತರ ಕನ್ನಡ ಕ್ಷೇತ್ರದ ಸಂಸದರಾಗಿ ಚುನಾಯಿತರಾದರು. ೨೦೧೬ರ ಪ್ರಧಾನಿ ನರೇಂದ್ರ ಮೋದಿಯವರ ಕ್ಯಾಬಿನೆಟ್‌ನಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾಗಿದ್ದರು.[೨]
ಸಾಮಾಜಿಕ ಚಟುವಟಿಕೆಗಳು
[ಬದಲಾಯಿಸಿ]ಅನಂತ್ ಕುಮಾರ್ ಹೆಗಡೆಯವರು ಕದಂಬ ಸಂಸ್ಥೆಗಳ ಸಂಘಟನೆಯನ್ನು ಸ್ಥಾಪಿಸಿದರು. ಈ ಸಂಘಟನೆಗಳು ಸಾಮಾಜಿಕ ಆರ್ಥಿಕ ಚಟುವಟಿಕೆಗಳ ಕ್ಷೇತ್ರದ ಕಾರ್ಯದಲ್ಲಿ ಭಾಗಿಯಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತದೆ.
ವಿವಾದಗಳು
[ಬದಲಾಯಿಸಿ]- ಬಿಜೆಪಿ ಆಡಳಿತಕ್ಕೆ ಬಂದಿರುವುದು ಸಂವಿಧಾನದ ಬದಲಾವಣೆ ಮಾಡಲು ಎನ್ನುವ ಹೇಳಿಕೆ ನೀಡಿದ್ದಾರೆ[೩]
- ಇತಿಹಾಸದ ಪ್ರಕಾರ ಉಪವಾಸಕ್ಕೆ ಬ್ರಿಟಿಷರು ಹೆದರಿ, ಸ್ವಾತಂತ್ರ್ಯ ಕೊಟ್ಟು ಓಡಿ ಹೋದರು. ಇದನ್ನು ಕೇಳಿದರೆ ತಣ್ಣಗಿರುವ ರಕ್ತ ಹೆಪ್ಪುಗಟ್ಟಿ ಹೋಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಬಳಿಯೇ ಹೇಗೆ ಹೋರಾಟ ಮಾಡಬೇಕು ಎಂದು ಕೇಳಿ, ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು;ಹೋರಾಟ ನಡೆದಿತ್ತು. ಮಹಾತ್ಮ ಗಾಂಧೀಜಿ ನಡೆಸಿದ ಹೋರಾಟ, ಉಪವಾಸ ಸತ್ಯಾಗ್ರಹ ಸಹ ಒಂದು ನಾಟಕ’ ಎಂದು ಹೆಗಡೆ ಇತ್ತೀಚೆಗೆ ಹೇಳಿದ್ದರು;[೪][೫]
ಉಲ್ಲೇಖಗಳು
[ಬದಲಾಯಿಸಿ]- ↑ https://indianexpress.com/article/who-is/who-is-anant-kumar-hegde-4826135/
- ↑ https://www.ndtv.com/india-news/cabinet-reshuffle-karnataka-lawmaker-and-taekwondo-expert-ananthkumar-hegde-becomes-minister-of-stat-1745491
- ↑ List of BJP leaders who made controversial remarks - Anant Kumar Hegde's controversial comments on secularism | The Economic Times
- ↑ ‘ಉಪವಾಸಕ್ಕೆ ಹೆದರಿ ಬ್ರಿಟಿಷರು ಓಡಿಹೋಗಿದ್ದಲ್ಲ: ಸಂಸದ ಅನಂತಕುಮಾರ ಹೆಗಡೆ, ಪ್ರಜಾವಾಣಿ; 01 ಫೆಬ್ರವರಿ 2020
- ↑ https://www.prajavani.net/stories/stateregional/congress-attacks-anant-kumar-hegde-on-independent-movement-statement-702820.html