ಅದೀಬ್ ಅಖ್ತರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಅದೀಬ್ ಅಖ್ತರ ಇವರು ಮೈಸೂರು ಜಿಲ್ಲೆಯ ಬನ್ನೂರಿನವರು.ಇವರು ಕಾದಂಬರಿ, ಸಣ್ಣ ಕತೆ ಹಾಗು ನಗೆ ಬರಹಗಳನ್ನಲ್ಲದೆ,ಪತ್ರಿಕೆಗಳಿಗೆ ಅಂಕಣ ಬರಹಗಳನ್ನು ಮತ್ತು ಸಚಿತ್ರ ಲೇಖನಗಳನ್ನು ಸಹ ಬರೆದಿದ್ದಾರೆ.ಸ್ವವಸ್ತುವನ್ನು ಆಧರಿಸಿದ ದೂರದರ್ಶನ ಧಾರಾವಾಹಿಗೆ ಚಿತ್ರಕತೆ ಹಾಗು ಸಂಭಾಷಣೆ ಸಹ ರಚಿಸಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ:

  • ಬಹುರೂಪಿ
  • ಯಾರೇ ಕೂಗಾಡಲಿ

ಇವರು ವೃತ್ತಿಯಿಂದ ವ್ಯಾಪಾರಿಗಳು. ವೈಶಿಷ್ಟ್ಯ :ಅದೀಬ್ ಅಖ್ತರ ಇವರು ಮೊದಲು ಉರ್ದು ಸಾಹಿತಿಯಾಗಿದ್ದು, ತಮ್ಮ ನಲವತ್ತೆರಡನೆಯ ವಯಸ್ಸಿನಲ್ಲಿ ಕನ್ನಡದಲ್ಲಿ ಬರೆಯಲು ಕಲಿತು ಕನ್ನಡ ಸಾಹಿತ್ಯ ರಚಿಸುತ್ತಿರುವರು.