ಅಗ್ರೋಹಾ ದಿಬ್ಬ
ಅಗ್ರೋಹಾ ದಿಬ್ಬ | |
---|---|
ಪೂರ್ವ ಹೆಸರುಗಳು | ಹರಿಯಾಣ ರಾಜ್ಯದಲ್ಲಿ ಉತ್ಖನನ ಮಾಡಿದ ಸ್ಥಳ |
ಸ್ಥಳ | ಅಗ್ರೋಹ, ಹರಿಯಾಣ, ಭಾರತ |
ಪ್ರಕಾರ | ವಸಾಹತು |
ಇತಿಹಾಸ | |
ಸ್ಥಾಪಿತ | ಕ್ರಿ.ಪೂ. ೩ ರಿಂದ ೪ನೇ ಶತಮಾನ |
ತ್ಯಜಿಸಿದ್ದು | ಕ್ರಿ.ಶ. ೧೩ ರಿಂದ ೧೪ನೇ ಶತಮಾನ |
ಸ್ಥಳ ಟಿಪ್ಪಣಿಗಳು | |
ಉತ್ಖನನ ದಿನಾಂಕಗಳು | ೧೮೮೮–೧೮೮೯, ೧೯೭೮–೧೯೭೯ |
ಪುರಾತತ್ವಶಾಸ್ತ್ರಜ್ಞರು | ಸಿ. ಟಿ. ರೋಜರ್ಸ್, ಜೆ. ಎಸ್. ಖತ್ರಿ, ಆಚಾರ್ಯ |
ಸ್ಥಳೀಯವಾಗಿ ಥೇರ್ ಎಂದು ಕರೆಯಲ್ಪಡುವ ಅಗ್ರೋಹಾ ಒಂದು ಪುರಾತತ್ತ್ವ ತಾಣವಾಗಿದ್ದು ಇದು ಭಾರತದ ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಅಗ್ರೋಹಾದಲ್ಲಿದೆ.
ಐತಿಹಾಸಿಕ ಮಹತ್ವ
[ಬದಲಾಯಿಸಿ]ಹಿಸಾರ್‌ನ ಅಧಿಕೃತ ಜಾಲತಾಣದ ಪ್ರಕಾರ, ಅಗ್ರೊಹಾದಲ್ಲಿನ ಉತ್ಖನನಗಳು ಕ್ರಿ.ಪೂ 3 ರಿಂದ 4 ನೇ ಶತಮಾನದಿಂದ ಕ್ರಿ.ಶ 13 ರಿಂದ 14 ನೇ ಶತಮಾನದವರೆಗಿನ ಅವಧಿಗೆ ಸೇರಿವೆ. ರಕ್ಷಣಾ ಗೋಡೆ, ದೇಗುಲ ಕೋಶಗಳು ಮತ್ತು ವಸತಿ ಮನೆಗಳನ್ನು ದಿಬ್ಬದಲ್ಲಿ ವೀಕ್ಷಿಸಬಹುದು.[೧]
ಗಮನಾರ್ಹ ಪ್ರಾಕ್ತನ ಕೃತಿಗಳು
[ಬದಲಾಯಿಸಿ]ಉತ್ಖನನದ ಅವಧಿಯಲ್ಲಿ ಸುಮಾರು ಏಳು ಸಾವಿರ ಪ್ರಾಕ್ತನ ಕೃತಿಗಳನ್ನು ಪಡೆಯಲಾಗಿದೆ.
ನಾಣ್ಯಗಳು
[ಬದಲಾಯಿಸಿ]ತಾಣದಲ್ಲಿ ವಿವಿಧ ಅವಧಿಗಳಿಗೆ ಸೇರಿದ ಬೆಳ್ಳಿ ಮತ್ತು ಕಂಚಿನ ನಾಣ್ಯಗಳು ಪತ್ತೆಯಾಗಿವೆ. ಇವು ರೋಮನ್, ಕುಶಾನ, ಯೌಧೇಯ ಮತ್ತು ಗುಪ್ತ ಸಾಮ್ರಾಜ್ಯಕ್ಕೆ ಸೇರಿವೆ. ಬಳಸಲಾದ ಭಾಷೆ ಪ್ರಾಕೃತವಾಗಿದೆ.[೨]
ಮುದ್ರೆಗಳು
[ಬದಲಾಯಿಸಿ]ಅನೇಕ ಮುದ್ರೆಗಳು ಸಹ ಸಿಕ್ಕಿವೆ. ಇವುಗಳ ಮೇಲೆ ಪಿತ್ರದತ್, "ಸಾಧು ವೃಧಸ್ಯ", "ಶಾಮ್ಕರ್ ಮಲಸ್ಯ", "ಮದ್ರಸ್ಯ" ಮುಂತಾದ ಪದಗಳಿಂದ ಕೆತ್ತಲಾಗಿದೆ.[೩]
ಇತರೆ
[ಬದಲಾಯಿಸಿ]ಅಸಂಖ್ಯಾತ ಕಲ್ಲಿನ ಶಿಲ್ಪಗಳಲ್ಲದೆ, ಕಬ್ಬಿಣ ಮತ್ತು ತಾಮ್ರದ ಉಪಕರಣಗಳು ಮತ್ತು ಅರೆ-ಅಮೂಲ್ಯ ಕಲ್ಲುಗಳ ಮಣಿಗಳು ಸಹ ಸಿಕ್ಕಿವೆ.[೪]
ಉಲ್ಲೇಖಗಳು
[ಬದಲಾಯಿಸಿ]- ↑ "Archived copy". Archived from the original on 4 February 2012. Retrieved 22 May 2012.
{{cite web}}
: CS1 maint: archived copy as title (link) - ↑ http://www.agroha.com/introduction.html#maharaj
- ↑ http://www.agroha.com/introduction.html#maharaj
- ↑ "Archived copy". Archived from the original on 4 February 2012. Retrieved 22 May 2012.
{{cite web}}
: CS1 maint: archived copy as title (link)
ಗ್ರಂಥಸೂಚಿ
[ಬದಲಾಯಿಸಿ]Babb, Lawrence A (2004). Alchemies of Violence: Myths of Identity and the Life of Trade in Western India. Sage. ISBN 978-0-7619-3223-9.