ವಿಷಯಕ್ಕೆ ಹೋಗು

ಅಗರ ಶಿಲಾಶಾಸನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರಿನ ಅಗರ ಪ್ರದೇಶದಲ್ಲಿ ನಾಲ್ಕು ಶಿಲಾಶಾಸನಗಳು ದಾಖಲಾಗಿವೆ.[] ಅವೆಲ್ಲವೂ ಕೂಡ ಹಳೆಗನ್ನಡ ಲಿಪಿಯಲ್ಲಿರುವ ಶಾಸನಗಳಾಗಿವೆ. ಈ ನಾಲ್ಕರಲ್ಲಿ ಒಂದು ಶಾಸನವನ್ನು ಬೆಂಗಳೂರಿನ ಮ್ಯೂಸಿಯಂನಲ್ಲಿ ಇಡಲಾಗಿವೆ. ಎಪಿಗ್ರಾಫಿಯ ಕರ್ನಾಟಿಕ ಗ್ರಂಥದಲ್ಲಿ BN 79, 80, 81 ಕ್ರಮಸಂಖ್ಯೆಯಡಿ ದಾಖಲಾಗಿರುವ ಇವುಗಳಲ್ಲಿ 79 ಮತ್ತು 80 ಸಂಖ್ಯೆಯ ಶಾಸನಗಳು ಪ್ರಸ್ತುತ ಪತ್ತೆಯಾಗಿಲ್ಲ.

ಶಾಸನ ೧: ಅಗರ ಕೆರೆ ಶಿಲಾಶಾಸನ

[ಬದಲಾಯಿಸಿ]
ಅಗರ ಕೆರೆ ಶಾಸನ
ಸ್ಥಳಅಗರ, ಬೆಂಗಳೂರು (ಪ್ರಸಕ್ತ ಕರ್ನಾಟಕ ಸರ್ಕಾರಿ ವಸ್ತುಸಂಗ್ರಹಾಲಯ (ಬೆಂಗಳೂರು))
Coordinates12°55′05″N 77°38′37″E / 12.9180101°N 77.6435162°E / 12.9180101; 77.6435162
ಎತ್ತರ4.3 feet (1.3 m)
ನಿರ್ಮಾಣ1363 ಕ್ರಿಸ್ತಶಕೆ
ಅಗರ ಶಿಲಾಶಾಸನಗಳು is located in Karnataka
ಅಗರ ಶಿಲಾಶಾಸನಗಳು
Location of ಅಗರ ಕೆರೆ ಶಾಸನ in Karnataka

ಇದು ೧೩೬೩ನೇ ಇಸವಿಯ ವಿಜಯನಗರ ಸಾಮ್ರಾಜ್ಯದ ಕೆಂಪಣ್ಣ ಒಡೆಯರ್ ಆಳ್ವಿಕೆಯ ಕಾಲದ ಶಿಲಾಶಾಸನವಾಗಿದೆ. ಈ ಶಾಸನದ ಕಲ್ಲಿನ ಗಾತ್ರ 4’3” x 3’ 4”. ಇದು ಸುಸ್ಥಿತಿಯಲ್ಲಿದ್ದು ಬೆಂಗಳೂರಿನ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿಡಲಾಗಿದೆ. ಬಿ. ಎಲ್. ರೈಸ್ ಅವರು ಸಂಪಾದಿಸಿರುವ "ಎಪಿಗ್ರಾಫಿಯ ಕರ್ನಾಟಿಕ" ಗ್ರಂಥದ ೯ನೇ ಸಂಪುಟದಲ್ಲಿ BN81 ಸಂಖ್ಯೆಯಡಿ ದಾಖಲಾದ ಈ ಶಾಸನದ ಪಠ್ಯ ಈ ಕೆಳಕಂಡಂತಿದೆ.[]

1 ಸ್ವಸ್ತಿಶ್ರೀಶಕಾಬ್ದ೧೨v೬
2 ನೆಯಶೋಭಕೃತುನಂ|ಜ್ಯೇಷ್ಟಕು11
3 ಬು|ಶ್ರೀಮನುಮಹಾಮಂಡಳೇಶ್ವರಂಅರಿರಾ
4 ಯವಿಭಾಡಭಾವೆಗೆತಪ್ಪುವರಾಯರಗಂಡ
5 ಶ್ರೀವೀರಬುಕ್ಕಣ್ಣವೊಡೆಯರಕುಮಾರಕಂಪ
6 ವೊಡೆಯರುಮುಳುಬಾಗಿಲಪಟ್ಟಣದಲುಪ್ರು
7 ಥ್ಯೀರಾಜ್ಯಂಗೆಯುತ್ತಿರೆಅಕಂಪ, ವೊಡೆಯರ
8 ಕುಮಾರಕಾಮೈಯನಾಯ್ಕರುಯೀರಾಜ್ಯದಗವು
9 ಂಡುಗಳಮುಂದಿಟುಎಲಹಕನಾಡಅಲ್ಲಾ
10 ಳಜೀಯನಮಗತಣ್ಣಿಯಪ್ಪಂಗೆಶಿಲಾಶಾಸನವ
11 ಮಾಡಿಕೊಟ್ಟಕ್ರಮವೆಂತೆಂದಡೆ. . ಸ್ತಿನಾಡತೆ
12 ಂಕಣಬಾಗೆಯತೋಹವಳಿನಾಡಬೆಳತ್ರ್ತ
13 ಐಮೂಳಗದ್ದೆಬೆದ್ದಲುಚತುಸ್ಸೀಮೆಯನು
14 ಳ್ಳದನುಸರ್ವಮಾನ್ಯದಕೊಡೆಗೆಯಾಗಿ
15 ಚಂದ್ರಾದಿತ್ಯರುಳ್ಳಂನಬರಸಲುವಂ
16 ತಾ ಗಿಶಿಲಾಶಾಸನವಮಾಡಿಕೊ
17 ಟ್ಟೆವುಮಂಗಳಮಹಾಶ್ರೀ||

ಅರ್ಥ ವಿವರಣೆ

[ಬದಲಾಯಿಸಿ]

Be it well. (On the date specified), when (with usual titles) vira Bukkana- Vodeyar’s son Kampanna-Vodeyar was in the city of Mulubagil, ruling the kingdom of the world:- that Kampanna-Vodeyar’s son Kamiya-Nayaka, in the presence of the farmers this kingdom, granted to Elahaka-nad Allala-jiya’s son Tanniyappa, lands in Belartta of the Torevali-nad of the south of the ……………nti-nad, as a sarvamany- kodage.3

ಶಾಸನ ೨

[ಬದಲಾಯಿಸಿ]

ಇದರ ಕಾಲ ಕ್ರಿ.ಶ. ೮೭೦. ಗಂಗರ ಕಾಲದ 'ಸತ್ಯವಾಕ್ಯ ಪೆರ್ಮಡಿ' ಎಂಬ ಅರಸನ ಆಳ್ವಿಕೆಯ ಅವಧಿಯದ್ದಾಗಿದೆ. ಗಾತ್ರ 3’ x 2’6” ಎಪಿಗ್ರಾಫಿಯ ಕರ್ನಾಟಿಕ ಗ್ರಂಥದ BN79 ಸಂಖ್ಯೆಯಡಿ ದಾಖಲಾಗಿರುವ ಪಠ್ಯ:[]

ಅಗರದ ಕೆರೆ ಕಟ್ಟೇ ಕೆಳಗೆ ಪಶ್ಚಿಮ ತೂಬಿನ ಬಳಿ ಗದ್ದೇಲಿ ಬಿದ್ದಿರುವದು.

1 ಸ್ವಸ್ತಿಶ್ರೀರಾಜ್ಯವಿಜಯಸಂವ
2 ತ್ಸರಸತ್ಯವಾಖ್ಯಪೆಮ್ರ್ಮಡಿಯಕ
3 ಲಿಯುಗದಣುವನಾಗತರನೊಳ್
4 ಇವ್ಯುಲಿಯೂರೊಡೆಇರುಗ
5 ಮಯ್ಯನಮಗಂಸಿರಿಯಮ
6 ಯ್ಯನೆರಡುಕೆಲಿಯಂತೂಂಬನಿ
7 ಕ್ಕಿಮೂಡಣಕೆಱೆಯಂಕಟ್ಟಿಸಿ
8 ಮೂಱುಕೆಱೆಯಯಬಿತ್ತುಪಟ್ಟವಂ
9 ಪಡೆದಂಬಿತ್ತುವಟವಂಸಲಿ
10 ಸದನುನಿಕ್ಕದುಣ್ಬನುಕವಿಲೆ
11 ಯನೞುದಂ

ಅರ್ಥ ವಿವರಣೆ

[ಬದಲಾಯಿಸಿ]

Be it well. In the victorious year of the Srirajya, under Satyavakya-Permmadi’s Kali-yugs Hanuman, Nagattara, - the Iruvvuliyur odeya, Irugamayya’s son Sriyamayya, fixed sluices to the two tanks, had the eastern tank built, and obtained the bittuvatta of the three tanks. Imprecation.

ಶಾಸನ ೩

[ಬದಲಾಯಿಸಿ]

ಈ ಶಾಸನದ ಕಾಲ ಕ್ರಿ.ಶ. ೧೫೧೫. ಇದು ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಳ್ವಿಕೆಯ ಕಾಲದ್ದಾಗಿದೆ. 'ಎಪಿಗ್ರಾಫಿಯ ಕರ್ನಾಟಿಕ' ಗ್ರಂಥದ BN80 ಸಂಖ್ಯೆಯಡಿ ದಾಖಲಾಗಿರುವ ಪಠ್ಯ:[]

ಅದೇ ಗ್ರಾಮದ ಊರು ಮುಂದೆ ಬಾಗಲು ಬಳಿ ದಕ್ಷಿಣ ಕಡೆ ಇರುವದು. ಪ್ರಮಾಣ 2’6” x 3’

1ಶುಭಮಸ್ತುಸ್ವಸ್ತಿಶ್ರೀಜಯಾಭ್ಯುದಯಶಾಲಿವಾ
2ಹನಶಕ(ವ)ರುಪಸಾವಿರದನಾನೂಹಯಿಪ್ಪತ್ತುಏ
3ಳನೆಯಯುವಸಂವತ್ಸರದಭಾದ್ರಪದಕು
4ಧ15ಲೂಸೋಮೋಪರಾಗಪುಂಣ್ಯಕಾಲದಲ್ಲುಕ್ರುಷ್ಣ
5ರಾಯಮಹಾರಾಯರುಪೃತ್ವೀಗೈಉತಯಿರಲು
6ಸಿವಂಣಪನಾಯಕರುತಂಮತಂದೆಗೆಧರ್ಮವಾಗಬೇಕೆಂ
7ದುಅಗರದಕೆಱೆಗೆಭಂಡಿನಡಉದಕ್ಕೆಕೊಟ್ಟಹೊಲ

ಅರ್ಥ ವಿವರಣೆ

[ಬದಲಾಯಿಸಿ]

May it be prosperous. Be it well (On the date specified), at the time of and eclipse of the moon, - when Krishna-Raya-maharaya was ruling the kingdom of the world :- Sivannappa-Nayaka, in order that dharma might be to his father, granted a field to provide for keeping up a cart for the Agara tank.

ಶಾಸನ ೪: ಅಗರ ಛತ್ರ ಶಿಲಾಶಾಸನ

[ಬದಲಾಯಿಸಿ]

ಆಕರಗಳು/ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ Rice, B. Lewis. ಎಪಿಗ್ರಾಫಿಯಾ ಕಾರ್ನಾಟಿಕಾ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)


ಹೊರಕೊಂಡಿಗಳು

[ಬದಲಾಯಿಸಿ]