ಅಕ್ರೋಪೊಲಿಸ್
ಅಕ್ರೋಪೊಲಿಸ್ | |
---|---|
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು | |
ಪ್ರಕಾರ | ಸಾಂಸ್ಕೃತಿಕ |
ಮಾನದಂಡಗಳು | i, ii, iii, iv, vi |
ಉಲ್ಲೇಖ | 404 |
ಯುನೆಸ್ಕೊ ಪ್ರದೇಶ | ಯುರೋಪ್ |
Coordinates | 37°58′17″N 23°43′34″E / 37.971421°N 23.726166°E |
ದಾಖಲೆಯ ಇತಿಹಾಸ | |
Inscription | ೧೯೮೭ (೧೧ನೆಯ ಸಮಾವೇಶ) |
ಅಕ್ರೋಪೊಲಿಸ್ ಅಥೆನ್ಸ್ ಪಟ್ಟಣದಲ್ಲಿ ಸುಂದರ ಮಂದಿರಗಳಿರುವ ನಗರ ಭಾಗ. ಗ್ರೀಕ್ ಭಾಷೆಯಲ್ಲಿ ಇದಕ್ಕೆ ಎತ್ತರದಲ್ಲಿಯ ಪಟ್ಟಣ ಎಂಬರ್ಥವಿದೆ. ಸುತ್ತಲೂ ಕಡಿದಾದ ಇಳಿಜಾರಿರುವ ಬೆಟ್ಟದ ಮೇಲೆ ಕಟ್ಟಿದ ಅಥೆನ್ಸ್ ಪಟ್ಟಣದ ಕೇಂದ್ರಬಿಂದುವಿದು. ಸು. 2,300 ವರ್ಷಗಳ ಹಿಂದೆ ಪೆರಿಕ್ಲೀಸನ ಕಾಲದಲ್ಲಿ ಗ್ರೀಕರು ಕಟ್ಟಿದ ಸುಂದರ ಶುಭ್ರಸಂಗಮವರಿ ಕಲ್ಲಿನ ಮಂದಿರಗಳೂ ಇಲ್ಲಿವೆ. ಅವುಗಳಲ್ಲಿ ಪಾರ್ಥೆನಾನ್ ದೇವಾಲಯವೂ ಒಂದು. ಇದು ಅಥೆನ್ಸ್ ನಗರದ ಮಧ್ಯದಲ್ಲಿ ಎತ್ತರವಾದ ಪ್ರದೇಶದಲ್ಲಿ ನಿಂತಿದೆ. ಪಟ್ಟಣದ ಬುಡದಿಂದ 78ಮೀ ಎತ್ತರ, 304ಮೀ ಉದ್ದ ಮತ್ತು 140ಮೀ ಅಗಲವುಳ್ಳ ಈ ಪ್ರದೇಶ 3 ಹೆಕ್ಟೇರ್ ಕ್ಷೇತ್ರವನ್ನೊಳಗೊಂಡಿದೆ. ಸಂಗಮವರಿ ಕಲ್ಲನ್ನು 16 ಕಿಮೀ ದೂರದಲ್ಲಿರುವ ಪೆಂಟೆಲಿಕಸ್ ಗುಡ್ಡದಿಂದ ಹೊತ್ತು ತರಲಾಗಿದೆ. ಪ್ರ.ಶ.ಪು. 600 ವರ್ಷಗಳ ಹಿಂದೆ ಲೆಕೆಡೆಮಾನಿಯನ್ಸ್ ಮತ್ತು ಪರ್ಷಿಯನ್ನರು ಈ ಸುಂದರ ಮಂದಿರಗಳನ್ನು ಹಾಳುಗೆಡವಿದರು. ರೋಮನ್ನರ ಆಳ್ವಿಕೆಯ ಕಾಲದಲ್ಲಿ ಇವು ಮತ್ತೆ ಊರ್ಜಿತಗೊಂಡುವು. ಈ ಕಾಲವೇ ಅದರ ಸುವರ್ಣಯುಗವೆಂದು ಹೇಳಬಹುದು. 5ನೆಯ ಶತಮಾನದ ಅನಂತರ ಇದನ್ನು ಚರ್ಚನ್ನಾಗಿಯೂ 15ನೆಯ ಶತಮಾನದಲ್ಲಿ ಮಸೀದಿಯಾಗಿಯೂ ಮಾರ್ಪಡಿಸಲಾಯಿತು. ವೆನಿಸ್ ದೇಶದೊಡನೆ ನಡೆದ ಯುದ್ಧಕಾಲದಲ್ಲಿ ಇದು ಮದ್ದುಗುಂಡುಗಳ ಸಂಗ್ರಹಾಲಯವಾಗಿ ಸಂಪುರ್ಣ ಹಾಳಾಯಿತು. 18 ಮತ್ತು 19ನೆಯ ಶತಮಾನದಲ್ಲಿ ಅಳಿದುಳಿದ ಮಂದಿರಗಳು ವಿದೇಶೀ ಪ್ರಾಚ್ಯಕಲಾ ವಸ್ತುಸಂಗ್ರಹಕಾರರ ದಾಳಿಗೆ ಬಲಿಯಾದುವು. ಇಲ್ಲಿನ ದೇವಾಲಯಗಳ ಆಕರ್ಷಕ ಭಾಗಗಳು ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಈಗಲೂ ಇವೆ. 1835ರಲ್ಲಿ ಕೆಲವನ್ನು ಗ್ರೀಕರು ಪುನಃ ಕಟ್ಟಿದರು. ಈ ಅವಶೇಷಗಳನ್ನು ಕಾಯ್ದು ಪ್ರದರ್ಶಿಸುವುದಕ್ಕಾಗಿಯೇ ಒಂದು ಪ್ರಾಚ್ಯ ವಸ್ತುಸಂಗ್ರಹಾಲಯವನ್ನು ಈಗ ನಿರ್ಮಿಸಿದ್ದಾರೆ. ಗ್ರೀಕರು ಅಥೆನ್ಸ್ ನಗರದ ಹೆಮ್ಮೆಯ ಸವಿನೆನಪಿಗಾಗಿ ರಚಿಸಿದ ಸುಂದರ ಕಲಾಕೃತಿಗಳನ್ನು ಯುದ್ಧಗಳಾಗಲೀ ಕಾಲಚಕ್ರವಾಗಲೀ ನಿರ್ನಾಮ ಮಾಡಲಾರದೆಂಬ ಸತ್ಯವನ್ನು ಇಂದಿನ ಈ ಸುಂದರ ಅವಶೇಷಗಳು ಎತ್ತಿ ತೋರಿಸುತ್ತಿವೆ.
ಛಾಯಾಂಕಣ
[ಬದಲಾಯಿಸಿ]-
Acropolis from Areopagus.
-
Reconstruction of the Acropolis and Areios Pagos in Athens, Leo von Klenze, 1846.
-
Present-day remains of the Theatre of Dionysus.
-
The Propylaea
-
The Erechtheum
-
View of the Acropolis from the Agora.
-
Depiction of the Venetian siege of the Acropolis of Athens in 1687.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The Acropolis of Athens Archived 2019-10-24 ವೇಬ್ಯಾಕ್ ಮೆಷಿನ್ ನಲ್ಲಿ. (Greek Government website)
- The Acropolis Restoration Project (Greek Government website)
- The Acropolis of Athens Virtual Tour
- The Acropolis Museum and the Goddess Athena
- The Glafka Project Archived 2018-11-16 ವೇಬ್ಯಾಕ್ ಮೆಷಿನ್ ನಲ್ಲಿ.
- UNESCO World Heritage Centre — Acropolis, Athens
- Ancient Athens 3D Archived 2011-04-19 ವೇಬ್ಯಾಕ್ ಮೆಷಿನ್ ನಲ್ಲಿ.
- Excerpt on the geology of Athens from: A Geological Companion to Greece and the Aegean by Michael and Reynold Higgins, Cornell University Press, 1996 Archived 2007-05-20 ವೇಬ್ಯಾಕ್ ಮೆಷಿನ್ ನಲ್ಲಿ.
- The Acropolis of Athens-Athensguide
- Tour of Acropolis of Athens, Site of the Parthenon-About.com Archived 2013-05-18 ವೇಬ್ಯಾಕ್ ಮೆಷಿನ್ ನಲ್ಲಿ.
- Athenian Acropolis
Videos
[ಬದಲಾಯಿಸಿ]- Acropolis of Athens, Full Reconstruction, animation by the Technological Research Institute, University of Santiago de Compostela, on YouTube
- Timelapse video of Acropolis during Earth Hour 2010 Timelapse showing how the Acropolis of Athens switched off & on the lights during Earth Hour 2010
- The Acropolis in 1955
- The Acropolis in 1969
- Greek Glory A tour of ancient Greek buildings and monuments in Athens in the 1940s
- Acropolis of Athens from the old Greek TV show "Ελλάδος Περιήγησις..." (Greece Tours), 1998 (Greek)
- Athens, Greece: Ancient Acropolis and Agora by Rick Steves