ವಿಷಯಕ್ಕೆ ಹೋಗು

ಅಕ್ರೋಪೊಲಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯುನೆಸ್ಕೊ ವಿಶ್ವ ಪರಂಪರೆಯ ತಾಣ
ಅಕ್ರೋಪೊಲಿಸ್
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು
The Acropolis of Athens, seen from Philopappou hill
ಪ್ರಕಾರಸಾಂಸ್ಕೃತಿಕ
ಮಾನದಂಡಗಳುi, ii, iii, iv, vi
ಉಲ್ಲೇಖ404
ಯುನೆಸ್ಕೊ ಪ್ರದೇಶಯುರೋಪ್
Coordinates37°58′17″N 23°43′34″E / 37.971421°N 23.726166°E / 37.971421; 23.726166
ದಾಖಲೆಯ ಇತಿಹಾಸ
Inscription೧೯೮೭ (೧೧ನೆಯ ಸಮಾವೇಶ)
ಅಕ್ರೋಪೊಲಿಸ್ is located in Greece
ಅಕ್ರೋಪೊಲಿಸ್
Location of Athens in Greece

ಅಕ್ರೋಪೊಲಿಸ್ ಅಥೆನ್ಸ್ ಪಟ್ಟಣದಲ್ಲಿ ಸುಂದರ ಮಂದಿರಗಳಿರುವ ನಗರ ಭಾಗ. ಗ್ರೀಕ್ ಭಾಷೆಯಲ್ಲಿ ಇದಕ್ಕೆ ಎತ್ತರದಲ್ಲಿಯ ಪಟ್ಟಣ ಎಂಬರ್ಥವಿದೆ. ಸುತ್ತಲೂ ಕಡಿದಾದ ಇಳಿಜಾರಿರುವ ಬೆಟ್ಟದ ಮೇಲೆ ಕಟ್ಟಿದ ಅಥೆನ್ಸ್ ಪಟ್ಟಣದ ಕೇಂದ್ರಬಿಂದುವಿದು. ಸು. 2,300 ವರ್ಷಗಳ ಹಿಂದೆ ಪೆರಿಕ್ಲೀಸನ ಕಾಲದಲ್ಲಿ ಗ್ರೀಕರು ಕಟ್ಟಿದ ಸುಂದರ ಶುಭ್ರಸಂಗಮವರಿ ಕಲ್ಲಿನ ಮಂದಿರಗಳೂ ಇಲ್ಲಿವೆ. ಅವುಗಳಲ್ಲಿ ಪಾರ್ಥೆನಾನ್ ದೇವಾಲಯವೂ ಒಂದು. ಇದು ಅಥೆನ್ಸ್ ನಗರದ ಮಧ್ಯದಲ್ಲಿ ಎತ್ತರವಾದ ಪ್ರದೇಶದಲ್ಲಿ ನಿಂತಿದೆ. ಪಟ್ಟಣದ ಬುಡದಿಂದ 78ಮೀ ಎತ್ತರ, 304ಮೀ ಉದ್ದ ಮತ್ತು 140ಮೀ ಅಗಲವುಳ್ಳ ಈ ಪ್ರದೇಶ 3 ಹೆಕ್ಟೇರ್ ಕ್ಷೇತ್ರವನ್ನೊಳಗೊಂಡಿದೆ. ಸಂಗಮವರಿ ಕಲ್ಲನ್ನು 16 ಕಿಮೀ ದೂರದಲ್ಲಿರುವ ಪೆಂಟೆಲಿಕಸ್ ಗುಡ್ಡದಿಂದ ಹೊತ್ತು ತರಲಾಗಿದೆ. ಪ್ರ.ಶ.ಪು. 600 ವರ್ಷಗಳ ಹಿಂದೆ ಲೆಕೆಡೆಮಾನಿಯನ್ಸ್ ಮತ್ತು ಪರ್ಷಿಯನ್ನರು ಈ ಸುಂದರ ಮಂದಿರಗಳನ್ನು ಹಾಳುಗೆಡವಿದರು. ರೋಮನ್ನರ ಆಳ್ವಿಕೆಯ ಕಾಲದಲ್ಲಿ ಇವು ಮತ್ತೆ ಊರ್ಜಿತಗೊಂಡುವು. ಈ ಕಾಲವೇ ಅದರ ಸುವರ್ಣಯುಗವೆಂದು ಹೇಳಬಹುದು. 5ನೆಯ ಶತಮಾನದ ಅನಂತರ ಇದನ್ನು ಚರ್ಚನ್ನಾಗಿಯೂ 15ನೆಯ ಶತಮಾನದಲ್ಲಿ ಮಸೀದಿಯಾಗಿಯೂ ಮಾರ್ಪಡಿಸಲಾಯಿತು. ವೆನಿಸ್ ದೇಶದೊಡನೆ ನಡೆದ ಯುದ್ಧಕಾಲದಲ್ಲಿ ಇದು ಮದ್ದುಗುಂಡುಗಳ ಸಂಗ್ರಹಾಲಯವಾಗಿ ಸಂಪುರ್ಣ ಹಾಳಾಯಿತು. 18 ಮತ್ತು 19ನೆಯ ಶತಮಾನದಲ್ಲಿ ಅಳಿದುಳಿದ ಮಂದಿರಗಳು ವಿದೇಶೀ ಪ್ರಾಚ್ಯಕಲಾ ವಸ್ತುಸಂಗ್ರಹಕಾರರ ದಾಳಿಗೆ ಬಲಿಯಾದುವು. ಇಲ್ಲಿನ ದೇವಾಲಯಗಳ ಆಕರ್ಷಕ ಭಾಗಗಳು ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಈಗಲೂ ಇವೆ. 1835ರಲ್ಲಿ ಕೆಲವನ್ನು ಗ್ರೀಕರು ಪುನಃ ಕಟ್ಟಿದರು. ಈ ಅವಶೇಷಗಳನ್ನು ಕಾಯ್ದು ಪ್ರದರ್ಶಿಸುವುದಕ್ಕಾಗಿಯೇ ಒಂದು ಪ್ರಾಚ್ಯ ವಸ್ತುಸಂಗ್ರಹಾಲಯವನ್ನು ಈಗ ನಿರ್ಮಿಸಿದ್ದಾರೆ. ಗ್ರೀಕರು ಅಥೆನ್ಸ್ ನಗರದ ಹೆಮ್ಮೆಯ ಸವಿನೆನಪಿಗಾಗಿ ರಚಿಸಿದ ಸುಂದರ ಕಲಾಕೃತಿಗಳನ್ನು ಯುದ್ಧಗಳಾಗಲೀ ಕಾಲಚಕ್ರವಾಗಲೀ ನಿರ್ನಾಮ ಮಾಡಲಾರದೆಂಬ ಸತ್ಯವನ್ನು ಇಂದಿನ ಈ ಸುಂದರ ಅವಶೇಷಗಳು ಎತ್ತಿ ತೋರಿಸುತ್ತಿವೆ.

ಛಾಯಾಂಕಣ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]