ಅಕೋಲಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಹಾರಾಷ್ಟ್ರದಲ್ಲಿ ಅಕೋಲಾ ಜಿಲ್ಲೆ

ಅಕೋಲಾ ಮಹಾರಾಷ್ಟ್ರದ ಒಂದು ಜಿಲ್ಲಾ ಕೇಂದ್ರ. ಮಹಾರಾಷ್ಟ್ರ ಪ್ರಾಂತ್ಯದ ಒಂದು ಮುಖ್ಯ ಪಟ್ಟಣ ಹಾಗೂ ತಾಲ್ಲೂಕು ಕೇಂದ್ರ. ಊರು ಪುರ್ಣಾನದಿಯ ಉಪನದಿಯಾದ ಮುರ್ನಾ ನದಿಯ ಪಶ್ಚಿಮದಡದ ಭಾಗವನ್ನು ಆಕ್ರಮಿಸಿಕೊಂಡಿದೆ. ಪುರ್ವದಡದ ಭಾಗದಲ್ಲಿ ತಾಜ್ನಾಪೇಟೆ, ಸರ್ಕಾರಿ ಕಟ್ಟಡಗಳು ಮತ್ತು ಐರೋಪ್ಯರ ನಿವಾಸಗಳಿವೆ. ಜನಸಂಖ್ಯೆ 4,00,520 (2006) ಪೌರಸಭೆಯ ಆಡಳಿತಕ್ಕೆ ಒಳಪಟ್ಟಿದೆ. ಪಟ್ಟಣದ ಸುತ್ತಲಿನ ಕೋಟೆ 19ನೆಯ ಶತಮಾನದ್ದು. ಈ ಪಟ್ಟಣ ಹತ್ತಿ ಮತ್ತು ಹೊಗೆಸೊಪ್ಪಿನ ವ್ಯಾಪಾರಕ್ಕೆ ಹೆಸರುವಾಸಿಯಾದ ಕೇಂದ್ರ. ಹತ್ತಿಯಿಂದ ಬೀಜವನ್ನು ಬೇರ್ಪಡಿಸುವ ಅನೇಕ ಕಾರ್ಖಾನೆಗಳುಂಟು. ವಿದ್ಯಾಭ್ಯಾಸದ, ಕೈಗಾರಿಕಾ ಶಾಲೆಯ ಸೌಲಭ್ಯಗಳು ದೊರಕುತ್ತವೆ. ಊರಿನ ತುಂಬ ವಖಾರಗಳು ದಲಾಲಿ ಸಂಸ್ಥೆಗಳೇ ಕಂಡುಬರುತ್ತವೆ.. ಅಕೋಲ ಜಿಲ್ಲೆಯ ವಿಸ್ತೀರ್ಣ ಸು. 10,598 ಚ.ಕಿಮೀ. ಜನಸಂಖ್ಯೆ 16,29,305 (2001). ಜನಸಾಂದ್ರತೆ ಚ.ಕಿಮೀಗೆ 800 ಜನರು. ಈ ಜಿಲ್ಲೆಯ ಭೂಭಾಗ ಚಪ್ಪಟೆಯಾಗಿದ್ದು ಕಣಿವೆಯ ಪ್ರದೇಶ ಸಾಕಷ್ಟಿದೆ. ಉತ್ತರ ಭಾಗದಲ್ಲಿ ಮೇಲ್ಫಟ್ ಬೆಟ್ಟಗಳಿವೆ. ಪುರ್ವದಲ್ಲಿ ಅಜಂತ ಬೆಟ್ಟಗಳು ಜಿಲ್ಲೆಗೆ ಸೇರಿಕೊಂಡಂತಿವೆ. ಈ ಭಾಗ ಸಮುದ್ರಮಟ್ಟಕ್ಕಿಂತ 610 ಮೀ.ಗಳಷ್ಟು ಎತ್ತರದಲ್ಲಿದ್ದು ಬಾಸಿಮ್ ಪ್ರಸ್ಥಭೂಮಿಯನ್ನು ಒಳಗೊಂಡಿದೆ. ಅಜಂತ ಬೆಟ್ಟಗಳ ಉತ್ತರ ಭಾಗದಲ್ಲಿ ತಪತಿಗೆ ಉಪನದಿಯಾದ ಪುರ್ಣಾ ಮತ್ತು ಅದರ ಉಪನದಿಗಳು ಹರಿಯುತ್ತವೆ. ಬೇಸಗೆಯಲ್ಲಿ ಶಾಖ ಹೆಚ್ಚು. ವಾರ್ಷಿಕ ಸರಾಸರಿ ಮಳೆ 26 ಸೆಂ.ಮೀ ಪುರ್ಣಾ ಕಣಿವೆ ಮೆಕ್ಕಲುಮಣ್ಣಿನಿಂದ ಕೂಡಿದ ಫಲವತ್ತಾದ ಕಪ್ಪುಮಣ್ಣಿನಿಂದ ಕೂಡಿದ್ದು ಹತ್ತಿ ಬೆಳೆಗೆ ಉತ್ಕೃಷ್ಟ ಪ್ರದೇಶವಾಗಿದೆ. ಈ ಭಾಗವೆಲ್ಲವನ್ನೂ ಕೃಷಿಗೆ ಅಳವಡಿಸಿಕೊಳ್ಳಲಾಗಿದೆ.

"https://kn.wikipedia.org/w/index.php?title=ಅಕೋಲಾ&oldid=677960" ಇಂದ ಪಡೆಯಲ್ಪಟ್ಟಿದೆ