ವಿಷಯಕ್ಕೆ ಹೋಗು

ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ೨೦೨೨ರ ಡಿಸೆಂಬರ್ ೨೧ ರಿಂದ ೨೭ರವರೆಗೆ ಭಾರತ್ ಸ್ಕೌಟ್ಸ್ - ಗೈಡ್ಸ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸುತ್ತಿರುವ ಸ್ಕೌಟ್ಸ್ - ಗೈಡ್ಸ್ ಶಿಬಿರ. 'ಸಂಸ್ಕೃತಿಯಿಂದ ಯುವಜನತೆಯ ಏಕತೆ' ಎನ್ನುವುದು ಸಾಂಸ್ಕೃತಿಕ ಜಾಂಬೂರಿ ೨೦೨೨ರ ಮುಖ್ಯ ಧ್ಯೇಯ. ಈ ಜಾಂಬೂರಿಯಲ್ಲಿ ೫೦,೦೦೦ಕ್ಕೂ ಅಧಿಕ ದೇಶ-ವಿದೇಶಗಳ ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.[] ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಉದ್ದೇಶ ಯುವಜನತೆಯನ್ನು ಸೌಹಾರ್ದತೆ ಮತ್ತು ಪರಸ್ಪರ ಬಾಳುವಂತೆ ಉತ್ತೇಜಿಸುವುದು. ವಿವಿಧ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ ಜ್ಞಾನ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು ನೆರವಾಗಲಿದೆ.[][]

ಸ್ಕೌಟ್ಸ್ - ಗೈಡ್ಸ್ ಚಳುವಳಿ

[ಬದಲಾಯಿಸಿ]

ವಿಜ್ಞಾನ ಮೇಳ

[ಬದಲಾಯಿಸಿ]

ಜಾಂಬೂರಿಯಲ್ಲಿ ಭಾಗವಹಿಸುವ ಎಲ್ಲಾ ಸ್ಕೌಟ್ - ಗೈಡ್ ವಿದ್ಯಾರ್ಥಿಗಳು, ಪೋಷಕರಿಗೆ ವಿಜ್ಞಾನದ ಲೋಕವನ್ನು ಪರಿಚಯಿಸುವ, ವೈಜ್ಞಾನಿಕ ಆವಿಷ್ಕಾರಗಳ ಹೊಳಹು ನೀಡುವ ಉದ್ದೇಶದೊಂದಿಗೆ ಬೃಹತ್ ವಿಜ್ಞಾನ ಮೇಳವನ್ನು ಆಯೋಜಿಸಲಾಗಿದೆ. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ವಿದ್ಯಾರ್ಥಿಗಳ ವಿಜ್ಞಾನ ಪ್ರಾತ್ಯಕ್ಷಿಕೆಗಳ ವಿಭಾಗ, ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರಗಳ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧಾ ವಿಭಾಗ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆವಿಷ್ಕಾರಗಳ ಪ್ರಾತ್ಯಕ್ಷಿಕೆ, ವೈದ್ಯ ವಿಜ್ಞಾನ ಮತ್ತು ವಿವಿಧ ವೈದ್ಯಕೀಯ ಸಲಕರಣೆಗಳು ಹಾಗು ವೈದ್ಯಕೀಯ ಉಪಕ್ರಮಗಳ ಪ್ರಾತ್ಯಕ್ಷಿಕೆ, ವಿವಿಧ ಕೈಗಾರಿಕಾ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ರಾಷ್ಟ್ರೀಯ ಮಟ್ಟದ ವಿಜ್ಞಾನ ಸಂಶೋಧನಾ ಕೇಂದ್ರಗಳ ಆವಿಷ್ಕಾರಗಳ ಪರಿಚಯಾತ್ಮಕ ಪ್ರಾತ್ಯಕ್ಷಿಕೆ, ವಿವಿಧ ವೈಜ್ಞಾನಿಕ ಶಿಕ್ಷಣ ಕೇಂದ್ರಗಳಿಗೆ ತಂಡಗಳಾಗಿ ಭೇಟಿ ನೀಡುವ ಕಾರ್ಯಕ್ರಮ, ವಿವಿಧ ವೈಜ್ಞಾನಿಕ ಕ್ಲಬ್ ಗಳ ಆಕರ್ಷಕ ಪ್ರಾತ್ಯಕ್ಷಿಕೆಗಳು, ವಿವಿಧ ಸರ್ಕಾರಿ ಇಲಾಖೆಗಳ ಯೋಜನೆ ಮತ್ತು ವೈಜ್ಞಾನಿಕ ತಂತ್ರಗಾರಿಕೆಗಳ ಪ್ರಧರ್ಶನ, ದೇಶದ ವಿವಿಧ ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಆಟಿಕೆಗಳ ಪ್ರದರ್ಶನ, ಗಣಕ ವಿಜ್ಞಾನ ಆಧಾರಿತ ಐಡಿಯಾಥಾನ್ & ಹಾಕಥಾನ್ ಗಳು ಇರಲಿವೆ.

ಕೃಷಿ ಮೇಳ

[ಬದಲಾಯಿಸಿ]

ಸುಮಾರು ೧೨ ಎಕರೆ ಪ್ರದೇಶದ ಮೈದಾನದಲ್ಲಿ ಕೃಷಿ ಮೇಳ ಆಯೋಜನೆಗೊಂಡಿದೆ.ಇಲ್ಲಿ ಹಲವಾರು ವಿಧದ ತರಕಾರಿ ಹಾಗು ಹೂವುಗಳಿದ್ದು ಕುಂಬಳಕಾಯಿ, ಚೀನಿಕಾಯಿ, ಸೋರೆ ಕಾಯಿ, ಹಾಗಲಕಾಯಿ, ಮುಳ್ಳು ಸೌತೆ, ಅಡುಗೆ ಸೌತೆ, ಹೀರೆಕಾಯಿ, ಹಾವಿನ ಆಕಾರದಂತಿರುವ ಪಡುವಾಳ ಕಾಯಿ, ಕಾಡು ಹೀರೆಕಾಯಿ, ಕನ್ನಡ ಹೀರೆ, ಬದನೆ ಕಾಯಿ, ಬೆಂಡೆ ಕಾಯಿ, ಬಾಂಬೆ ಹುಳಿ, ಕಲ್ಲಂಗಡಿ ಹಣ್ಣು, ಹಸಿ ಮೆಣಸು, ನೇರಳೆ - ಕಂದು ಹಾಗು ಹಸಿರು ಬಣ್ಣದ ಬದನೆ, ಬೀನ್ಸ್, ಸಿಂಬ್ಲ ಮೆಣಸು, ದೊಣ್ಣೆ ಮೆಣಸು, ಉದ್ದ ಬದನೆ, ಭತ್ತದ ತೆನೆ, ವಿವಿಧ ಬಗೆಯ ಸೊಪ್ಪು, ನವಿಲು ಕೋಸು, ಟೊಮೊಟೊ ಹಣ್ಣು, ತೊಂಡೆ ಕಾಯಿ, ತೊಂಡೆ ಕಾಯಿ ಚಪ್ಪರ, ಮೀಟರ್ ಅಲಸಂಡೆ, ಗಿಡ ಹಲಸಂಡೆ, ಅರಿವೆ ಸೊಪ್ಪು, ಜೋಳದ ತೆನೆ, ಮೂಲಂಗಿ. ಹಾವಿನ ಆಕಾರದಂತಿರುವ ಪಡುವಾಳ ಇಲ್ಲಿನ ವಿಶೇಷ. ೫೫೦ ವಿಧದ ಸಾಂಪ್ರದಾಯಿಕ ಭತ್ತ, ವಿದೇಶಿ ಲೆಟಿಸ್ , ಬ್ರುಕೋಲಿ ಸೊಪ್ಪು, ಝುಚಿನಿ, ವಿದೇಶಿ ಪಂಪ್ ಕಿನ್, ೬ ಬಗೆಯ ಸೋರೆ ಕಾಯಿ ತಳಿ, ೭೦ ವಿಧದ ಬಾಳೆ ಹಣ್ಣು, ಸುಮಾರು ೭೦೦ ದೇಶೀಯ ಭತ್ತದ ತಳಿಗಳು, ಸಿರಿ ಧಾನ್ಯ, ಎಣ್ಣೆ ಕಾಳುಗಳು, ೪೦ ಬಗೆಯ ಪುರಾತನ ಸಾಂಪ್ರದಾಯಿಕ ಗೆಡ್ಡೆ - ಗೆಣಸು, ೧೫೦ ಕ್ಕೂ ಅಧಿಕ ತೆಂಗಿನ ಕಾಯಿ ಕಲಾಕೃತಿಗಳು ಇರಲಿವೆ. ೨೦೦ ಬಗೆಯ ಆಯುರ್ವೇದಿಕ್ ಔಷಧ ಭರಿತ ಹಣ್ಣು ಮತ್ತು ಕಾಯಿ, ೨೦ ಬಗೆಯ ಅಡಿಕೆಗಳು, ೧೧೦ ಬಗೆಯ ವಿದೇಶಿ ಹಣ್ಣುಗಳು, ೪೦ ಬಗೆಯ ವಿದೇಶಿ ತರಕಾರಿಗಳು, ವಿವಿಧ ಬಗೆಯ ಧಾನ್ಯ, ದೇಶದ ವಿವಿಧ ರಾಜ್ಯದ ವಿವಿಧ ಬಗೆಯ ತರಕಾರಿಗಳು, ಚೈನೀಸ್ ಕಾಲಿಫ್ಲವರ್, ೧೦೦ ಬಗೆಯ ಅಕ್ಕಿ ಇರಲಿವೆ. ಕೃಷಿ ಮೇಳದ ಪ್ರದರ್ಶನ ಹಾಗೂ ಮಾರಾಟ ಸುಮಾರು ೬೦೦ ಮಳಿಗೆಗಳಲ್ಲಿ ನಡೆಯಲಿದ್ದು, ಯಂತ್ರೋಪಕರಣಗಳು, ನರ್ಸರಿ, ಕೃಷಿಗೆ ಪೂರಕವಾದ ಗುಡಿ ಕೈಗಾರಿಕೆ, ಮಡಿಕೆ ತಯಾರಿಕೆ, ಅಡಿಕೆ ಸುಲಿಯುವ ಯಂತ್ರ, ಕರಕುಶಲ ವಸ್ತುಗಳು, ಬುಟ್ಟಿ ತಾಯಾರಿಕಾ ವಸ್ತುಗಳು, ಇನ್ನು ಅನೇಕ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಇರಲಿವೆ.

ಆಹಾರ ಮೇಳ

[ಬದಲಾಯಿಸಿ]

ಪುಸ್ತಕ ಮೇಳ

[ಬದಲಾಯಿಸಿ]

ಕಲಾ ಮೇಳ

[ಬದಲಾಯಿಸಿ]

ಪ್ರದರ್ಶನಗಳು

[ಬದಲಾಯಿಸಿ]

ಚಟುವಟಿಕೆಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಸಾಂಸ್ಕೃತಿಕ ಜಾಂಬೂರಿ".
  2. Mangalorean, Alfie Dsouza, Team (11 October 2022). "The FIRST Scouts-Guides 'International Cultural Jamboree' at Alva's-Moodbidri". Mangalorean.com. Archived from the original on 12 ಡಿಸೆಂಬರ್ 2022. Retrieved 13 ಡಿಸೆಂಬರ್ 2022.{{cite news}}: CS1 maint: multiple names: authors list (link)
  3. Bureau, The Hindu (10 October 2022). "Bharath Scouts and Guides to hold international cultural jamboree in Moodbidri". The Hindu (in Indian English).