ವಿಷಯಕ್ಕೆ ಹೋಗು

ಅಂತರಾ ಬಿಸ್ವಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋನಾಲಿಸಾ
೨೦೧೮ ರಲ್ಲಿ ಮೊನಾಲಿಸಾ
ಜನನ
ಅಂತರಾ ಬಿಸ್ವಾಸ್

೨೧ ನವೆಂಬರ್ ೧೯೮೨[]
ಇತರೆ ಹೆಸರುಮೋನಾಲಿಸಾ
ವೃತ್ತಿನಟಿ
ಸಕ್ರಿಯ ವರ್ಷಗಳು೧೯೯೭ -
ಸಂಗಾತಿವಿಕ್ರಾಂತ್ ಸಿಂಗ್ ರಾಜ್ಪುತ್

ಅಂತರಾ ಬಿಸ್ವಾಸ್ (ಜನನ:೨೧ ನವೆಂಬರ್ ೧೯೮೨), ಮೋನಾ ಲಿಸಾ ಎಂಬ ರಂಗನಾಮದಿಂದ ಚಿರಪರಿಚಿತ ಇವರು ಭಾರತೀಯ ನಟಿ. ಇವರು ಹೆಚ್ಚಾಗಿ ಭೋಜ್‌ಪುರಿ ಭಾಷಾ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಹಿಂದಿ, ಬಂಗಾಳಿ, ಒಡಿಯಾ, ತಮಿಳು, ಕನ್ನಡ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರು ೨೦೧೬ ರಲ್ಲಿ ಇಂಡಿಯನ್ ಶೋ ಬಿಗ್ ಬಾಸ್ ೧೦ ರ ಸ್ಪರ್ಧಿಯಾಗಿದ್ದರು ಮತ್ತು ನಜರ್‌ ಧಾರವಾಹಿಯಲ್ಲಿ ಮೋಹಾನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಇದೀಗ ನಜರ್ 2 ರಲ್ಲಿ ಮಾಧುಲಿಕಾ ಚೌಧರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.[]

ಆರಂಭಿಕ ಜೀವನ

[ಬದಲಾಯಿಸಿ]

ಅಂತರಾ ಬಿಸ್ವಾಸ್ ಇವರು ಬಂಗಾಳಿಯ ಹಿಂದೂ ಕುಟುಂಬದಲ್ಲಿ ಜನಿಸಿದರು. ಚಿಕ್ಕಪ್ಪನ ಆಜ್ಞೆಯ ಮೇರೆಗೆ ಅವಳು ಮೊನಾಲಿಸಾ ಎಂಬ ಹೆಸರನ್ನು ಅಳವಡಿಸಿಕೊಂಡರು. ಇವರು ದಕ್ಷಿಣ ಕೋಲ್ಕತ್ತಾದ ಎಲ್ಜಿನ್ ರಸ್ತೆಯಲ್ಲಿರುವ ಜೂಲಿಯನ್ ಡೇ ಶಾಲೆಯಲ್ಲಿ ಅಧ್ಯಯನ ಮಾಡಿದರು ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದ ಅಶುತೋಷ್ ಕಾಲೇಜಿನಿಂದ ಪದವಿ ಪಡೆದರು, ಕೆಲವು ವರ್ಷಗಳ ಹಿಂದೆ ಸಣ್ಣ ಸಮಯದ ಟಿವಿ ನಟಿ ಮತ್ತು ಓಡಿಯಾ ವಿಡಿಯೋ ಆಲ್ಬಂಗಳಲ್ಲಿ ರೂಪದರ್ಶಿಯಾಗಿ ನಟಿಸುವ ಮೊದಲು ಸಂಸ್ಕೃತದಲ್ಲಿ ಬಿಎ ಪದವಿ ಗಳಿಸಿದರು.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಇವರು ಭೋಜ್‌ಪುರಿ ನಟ ವಿಕ್ರಾಂತ್ ಸಿಂಗ್ ರಾಜ್‌ಪೂತ್ ಅವರನ್ನು ೧೭ ಜನವರಿ ೨೦೧೭ ರಂದು ಬಿಗ್ ಬಾಸ್ ಮನೆಯಲ್ಲಿ ವಿವಾಹವಾದರು.[][]

ವೃತ್ತಿಜೀವನ

[ಬದಲಾಯಿಸಿ]

ಇವರು ಅಜಯ್ ದೇವ್‌ಗನ್ ಮತ್ತು ಸುನಿಲ್ ಶೆಟ್ಟಿ ನಟಿಸಿದ ಬ್ಲ್ಯಾಕ್‌ಮೇಲ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ ಹಲವಾರು ಕಡಿಮೆ ಬಜೆಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಮೀನ್ ಗಾಜಿ ಎದುರು ತೌಬಾ ತೌಬಾ ಚಿತ್ರದ ಮೂಲಕ ಅವರು ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಿದರು. ಅವರು ಜಾಕ್ಪಾಟ್ ಎಂಬ ಕನ್ನಡ ಚಲನಚಿತ್ರದಲ್ಲಿ ನಟಿಸಿದ್ದಾರೆ. ೨೦೧೦ ರಲ್ಲಿ, ದಿ ಹಿಂದೂ ವರದಿಯ ಪ್ರಕಾರ, ಮೋನಾ ಲಿಸಾ (ರಿಂಕು ಘೋಷ್ ಜೊತೆಗೆ) ಭೋಜ್‌ಪುರಿ ಚಲನಚಿತ್ರೋದ್ಯಮದಲ್ಲಿ ಹೆಚ್ಚು ಬೇಡಿಕೆಯಿರುವ ನಟಿ.

ವೆಬ್ ಸರಣಿಗಳು

[ಬದಲಾಯಿಸಿ]
ವರ್ಷ ಪ್ರದರ್ಶನ ಪಾತ್ರ ಟಿಪ್ಪಣಿ
೨೦೧೮ ದುಪುರ್ ಥುಕರ್ಪೋ 2 ಝುಮ ಬೌದಿ ಬಂಗಾಳಿ

ದೂರದರ್ಶನ

[ಬದಲಾಯಿಸಿ]
ವರ್ಷ ಪ್ರದರ್ಶನ ಪಾತ್ರ ಟಿಪ್ಪಣಿ
೨೦೧೬ ಕಾಮಿಡಿ ನೈಟ್ಸ್ ಬಚಾವೊ ಸೆಲೆಬ್ರೆಟಿ ಅತಿಥಿ ರಾಣಿ ಚಟರ್ಜೀ ಯವರ ಜೊತೆ
೨೦೧೬-೧೭ ಬಿಗ್ ಬಾಸ್ ಸೀಸನ್ ೧೦ ಸೆಲೆಬ್ರೆಟಿ ಸ್ಪರ್ಧಿ ಸ್ಪರ್ಧಿ
೨೦೧೭ ನಚ್ ಬಲಿಯೆ 8 ಸ್ಪರ್ಧಿ ವಿಕ್ರಾಂತ್ ಸಿಂಗ್ ರಾಜ್ಪೂತ್ ರವರ ಜೊತೆ
ಕಾಮಿಡಿ ದಂಗಲ್ ಸ್ಪರ್ಧಿ ನೇಹಾ ಮತ್ತು ಸುರ್ಭಿ ಜ್ಯೋತಿ ರವರ ಜೊತೆ
೨೦೧೮-೨೦ ನಝರ್[][] ಬರ್ಖಾ ಕುಮಾರಿ/ಡಾಯನ್ ಮೋಹನಾ ವಿರೋಧಿ
೨೦೧೯ ಕಿಚನ್ ಚ್ಯಾಂಪಿಯನ್ ಸ್ವತಃ ವಿಕ್ರಾಂತ್ ಸಿಂಗ್ ರಾಜ್ಪೂತ್ ರವರ ಜೊತೆ
೨೦೨೦-ಪ್ರಸ್ತುತ ನಝರ್ 2 ಡಾಯನ್ ಮಧುಬಾಲಿಕಾ ಚೌಧರಿ ವಿರೋಧಿ

ಉಲ್ಲೇಖಗಳು

[ಬದಲಾಯಿಸಿ]
  1. "Bigg Boss 10 November 21, episode 36 update: Manu's surprise for his 'good friend' Mona Lisa on her birthday". 21 November 2016.
  2. "Antara Biswas Photos | Images of Antara Biswas - Times of India". The Times of India. Retrieved 24 March 2020.
  3. https://www.biographyinfo.in/antara-biswas/
  4. https://www.rediff.com/movies/report/i-feel-bad-when-people-make-fun-of-my-marriage-on-bigg-boss-interview-mona-lisa/20170123.htm
  5. https://www.bollywoodshaadis.com/articles/monalisa-of-bigg-boss-buy-car-with-hubby-vikrant-13847
  6. https://www.youtube.com/watch?v=bnttWapQLr4&list=PLibomSiTpDmcvfpfoCpTybnKOrItiMSnL&index=29
  7. https://www.youtube.com/watch?v=L71FLzc1jYk