ವಿಷಯಕ್ಕೆ ಹೋಗು

ಅಂಜನಾದ್ರಿ ಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹನುಮನಹಳ್ಳಿಯ ಅಂಜನಾದ್ರಿ ಬೆಟ್ಟ
ಹನುಮನಹಳ್ಳಿಯ ಅಂಜನಾದ್ರಿ ಬೆಟ್ಟ

ಹನುಮನಹಳ್ಳಿಯ ಅಂಜನಾದ್ರಿ ಬೆಟ್ಟವು ಕರ್ನಾಟಕಕೊಪ್ಪಳ ಜಿಲ್ಲೆಯಲ್ಲಿದೆ. ಕೊಪ್ಪಳವು ಕರ್ನಾಟಕದಲ್ಲಿರುವ ಒಂದು ಐತಿಹಾಸಿಕ ತಾಣವಾಗಿದೆ. ಕೊಪ್ಪಳವನ್ನು ಕೊಪ್ಪ ನಗರ ಎಂದು ಕರೆಯಲಾಗುತ್ತಿತ್ತು. ಕೊಪ್ಪಳವನ್ನು ಗಂಗರು, ಹೊಯ್ಸಳರು, ಚಾಲುಕ್ಯರು ಆಳಿದ್ದಾರೆ.[೧] ಅಂಜನಾದ್ರಿ ಬೆಟ್ಟದ ತುದಿಯಲ್ಲಿ ಹನುಮಂತನ ದೇವಾಲಯವಿದೆ. ಇದು ಸುಮಾರು ೫೭೫ ಮೆಟ್ಟಿಲುಗಳನ್ನು ಹೊಂದಿದೆ. ದೇವಾಲಯವು ಬಂಡೆಯಿಂದ ಕೆತ್ತಿದ ಹನುಮಂತನ ವಿಗ್ರಹವನ್ನು ಹೊಂದಿದೆ. ಸಮೀಪದಲ್ಲಿ ರಾಮ ಮತ್ತು ಸೀತೆಯ ಗುಡಿಗಳು ಮತ್ತು ಅಂಜನಾ ದೇವಾಲಯವೂ ಇದೆ.[೨] ಈ ಸ್ಥಳವನ್ನು ಪುರಾಣಗಳಲ್ಲಿ ಕಿಷ್ಕಿಂದೆ ಎಂದು ಕರೆಯಲಾಗುತ್ತಿತ್ತು.[೩]

ಇತಿಹಾಸ[ಬದಲಾಯಿಸಿ]

ರಾಮಾಯಣದ ಮಹಾಕಾವ್ಯದಲ್ಲಿ ಉಲ್ಲೇಖಿಸಿರುವ ಪ್ರಕಾರ, ಅಂಜನಾದ್ರಿ ಬೆಟ್ಟವನ್ನು ಹನುಮಂತನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ, ಹನುಮಂತನು ಅಂಜನಾಳಿಗೆ ಜನಿಸಿದನು ಆದ್ದರಿಂದ ಹನುಮಂತನನ್ನು ಆಂಜನೇಯ ಎಂದೂ ಕರೆಯಲಾಯಿತು ಹೀಗಾಗಿ ಆ ಸ್ಥಳವನ್ನು ಅಂಜನಾದ್ರಿ ಬೆಟ್ಟ ಎಂದು ಕರೆಯುತ್ತಾರೆ.[೪] ಇದು ಆನೆಗುಂದಿ ತಾಲೂಕಿನಲ್ಲಿದೆ.[೫]

ಅಂಜನಾದ್ರಿ ಪರ್ವತವು ತುಂಗಾಭದ್ರಾ ನದಿಯ ತಟದಲ್ಲಿದೆ. ಈ ಬೆಟ್ಟಗಳ ನೋಡುತ್ತಾ ಹೋದಂತೆ ಹೇಮಕೂಟ ಪರ್ವತ, ಮಾತಂಗ ಪರ್ವತ, ಋಶ್ಯ ಮೂಕ ಪರ್ವತ ಮತ್ತು ಅಂಜನಾದ್ರಿ ಪರ್ವತ ಕಾಣಿಸುತ್ತದೆ. ಬೆಟ್ಟದ ತುದಿಯಲ್ಲಿ ಭಗವಾನ್ ಹನುಮಾನ್ ದೇವಾಲಯವಿದ್ದು, ಅಲ್ಲಿ ಹನುಮಾನ್ ಜಯಂತಿ ಮತ್ತು ಇತರ ಸಂಬಂಧಿತ ಆಚರಣೆಗಳನ್ನು ಆಚರಿಸುತ್ತಾರೆ.

ತುಂಗಾ ಭದ್ರಾ ನದಿ ತಟದಲ್ಲಿರುವ ಅಂಜನಾದ್ರಿ ಪರ್ವತ
ತುಂಗಾ ಭದ್ರಾ ನದಿ ತಟದಲ್ಲಿರುವ ಅಂಜನಾದ್ರಿ ಪರ್ವತ

ಅಂಜನಾದ್ರಿ ಬೆಟ್ಟವು ಹಂಪಿಯಿಂದ ಅಂದಾಜು ೨೩ಕಿ.ಮೀ ದೂರದಲ್ಲಿದೆ. ಅಂಜನಾದ್ರಿ ಬೆಟ್ಟದ ಮೇಲೆ ನಿಂತು ನೋಡಿದರೆ ಹಂಪಿಯಲ್ಲಿರುವ ದೇವಸ್ಥಾನಗಳೆಲ್ಲಾ ಕಾಣಿಸುತ್ತವೆ. ಅಂಜನಾದ್ರಿಯ ಆಂಜನೇಯ ಗುಡಿಯು ಬಹಳ ಹಳೆಯ ಹಾಗೂ ಚಿಕ್ಕದಾದ ಕಲ್ಲಿನ ದೇವಸ್ಥಾನವಾಗಿದೆ. ಈ ಸ್ಥಳದಲ್ಲಿ ಬಹಳಷ್ಟು ಪ್ರವಾಸಿಗರನ್ನು ಕಾಣಬಹುದು. ಸೂರ್ಯಾಸ್ತದ ವೀಕ್ಷಣೆಗಾಗಿ ಪ್ರವಾಸಿಗರು ಅಂಜನಾದ್ರಿ ಬೆಟ್ಟಕ್ಕೆ ಭೇಟಿನೀಡುತ್ತಾರೆ.

ರಚನೆ[ಬದಲಾಯಿಸಿ]

ಅಂಜನಾದ್ರಿ ಬೆಟ್ಟದ ಮೇಲಿರುವ ಹನುಮಂತನ ದೇವಸ್ಥಾನವನ್ನು ತಲುಪಲು ೫೭೦ ಮೆಟ್ಟಿಲುಗಳನ್ನು ಹತ್ತಬೇಕು.[೬] ಈ ಬೆಟ್ಟವು ಸಮುದ್ರಮಟ್ಟದಿಂದ ಸುಮಾರು ೬೦೦ ಮೀಟರ್ ಎತ್ತರದಲ್ಲಿದೆ.

ಅಂಜನಾದ್ರಿ ಪರ್ವತದ ಮೇಲಿರುವ ಆಂಜನೇಯ ದೇವಸ್ಥಾನ
ಅಂಜನಾದ್ರಿ ಪರ್ವತದ ಮೇಲಿರುವ ಆಂಜನೇಯ ದೇವಸ್ಥಾನ

ಹನುಮಂತನ ದೇವಾಲಯವು ಬಿಳಿ ಬಣ್ಣದ ಪಿರಮಿಡ್ ರಚನೆಯನ್ನು ಹೊಂದಿದೆ. ಇದರ ಮೇಲ್ಛಾವಣಿಯ ಮೇಲ್ಭಾಗವು ಸಣ್ಣ ಕೆಂಪು ಗುಮ್ಮಟವನ್ನು ಹೊಂದಿದೆ.

ಅಂಜನಾದೇವಿ ದೇವಾಲಯ[ಬದಲಾಯಿಸಿ]

ಅಂಜನಾದೇವಿಯು ಹನುಮಂತತಾಯಿ. ಹನುಮಂತ ಮತ್ತು ಅಂಜನಾದೇವಿಯ ದೇವಾಲಯವು ೬೦ ಅಡಿ ತುದಿಯಲ್ಲಿ ನೆಲೆಸಿದೆ. ಈ ದೇವಾಲಯವನ್ನು ಅಲ್ಲಿ ವಾಸಿಸುವ ಕೆಲವು ಋಷಿಯರು ನಿರ್ವಹಿಸುತ್ತಿದ್ದಾರೆ. ಈ ದೇವಾಲಯದಲ್ಲಿ ಬಂಡೆಯಿಂದ ಕೆತ್ತಿದ ಹನುಮಂತನ ವಿಗ್ರಹವಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://vijaykarnataka.com/travel/destinations/attractions-of-anjanadri-hill-hampi/articleshow/72253550.cms?story=1
  2. https://www.india.com/travel/articles/anjeyanadri-hill-in-hampi-is-an-interesting-place-to-be-explored-3495276/
  3. "Anjanadri Hill : ಕರ್ನಾಟಕದಲ್ಲೇ ಇದೆ ಹನುಮಂತನ ಜನ್ಮಸ್ಥಳ; ಪ್ರಸಿದ್ಧ ತಾಣದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ Vistara News". 2023-07-10. Retrieved 2023-07-11.
  4. https://www.karnataka.com/hampi/anjeyanadri-hill/
  5. https://www.deccanherald.com/india/karnataka/prehistoric-rock-art-2073239
  6. https://hampi.in/anjaneya-hill