ಅಂಕಿತಾ ರೈನಾ

ವಿಕಿಪೀಡಿಯ ಇಂದ
Jump to navigation Jump to search
Ankita Raina
અંકિતા રૈના
2018 Roland Garros Qualifying Tournament - 55 (cropped).jpg
Raina in 2018
ದೇಶ India
ಜನನ (1993-01-11) 11 January 1993 (age 26)
Ahmedabad, Gujarat
ಆಟಗಳುRight (two-handed backhand)
ಪ್ರಶಸ್ತಿಯ ಮೊತ್ತ$226,697
ಸಿಂಗಲ್ಸ್
ವೃತ್ತಿಜೀವನ  ದಾಖಲೆ233–192
ವೃತ್ತಿಜೀವನ ಪ್ರಶಸ್ತಿಗಳು8 ITF
ಉನ್ನತ  ಶ್ರೇಣಿ164 (11 February 2019)
ಸದ್ಯದ  ಶ್ರೇಣಿ180 (15 April 2019)
ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಫಲಿತಾಂಶಗಳು
ಆಸ್ಟ್ರೇಲಿಯನ್  ಒಪನ್Q2 (2019)
ಫ್ರೇಂಚ್ ಒಪನ್Q1 (2018, 2019)
ವಿಂಬಲ್ಡನ್Q2 (2018)
ಇತರೆ ಪಂದ್ಯಾವಳಿಗಳು
ಡಬಲ್ಸ್
ವೃತ್ತಿಜೀವನ  ದಾಖಲೆ169–151
ವೃತ್ತಿಜೀವನ ಪ್ರಶಸ್ತಿಗಳು1 WTA 125K, 14 ITF
ಉನ್ನತ  ಶ್ರೇಣಿ154 (10 December 2018)
ಸದ್ಯದ  ಶ್ರೇಣಿ176 (15 April 2019)
ತಂಡ ಪಂದ್ಯಾವಳಿಗಳು
ಫೆಡ್ ಕಪ್15–12
ಕೊನೆಯ ಬದಲಾವಣೆ: 19 April 2019.

ಅಂಕಿತಾ ರವೀಂದರ್ ಕ್ರಿಶನ್ ರೈನಾ (ಜನನ ಜನವರಿ ೧೧, ೧೯೯೩) ಒಬ್ಬ ಭಾರತೀಯ ಟೆನ್ನಿಸ್ ಆಟಗಾರ್ತಿ ಮತ್ತು ಪ್ರಸಕ್ತ ಭಾರತದ ನಂ. ೧ ಮಹಿಳಾ ಸಿಂಗಲ್ಸ್ ನಲ್ಲಿದ್ದಾರೆ. ಐಟಿಎಫ್ ಸರ್ಕ್ಯೂಟ್ನಲ್ಲಿ ರೈನಾ ೮ ಸಿಂಗಲ್ಸ್ ಮತ್ತು ೧೪ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[೧] ಏಪ್ರಿಲ್ ೨೦೧೮ ರಲ್ಲಿ ಅವರು ಅಗ್ರ ೨೦೦ ಸಿಂಗಲ್ಸ್ ಶ್ರೇಯಾಂಕಗಳನ್ನು ಪ್ರವೇಶಿಸಿದರು, ಈ ಸಾಧನೆ ಮಾಡಿದ ಭಾರತವನ್ನು ಪ್ರತಿನಿಧಿಸಿದ ಐದನೇ ಆಟಗಾರರಾದರು.[೨] ೨೦೧೭ ರ ಆಗಸ್ಟ್ ೨೮ ರಂದು, ಡಬಲ್ಸ್ ಶ್ರೇಯಾಂಕದಲ್ಲಿ ಅವರು ವಿಶ್ವದ ೧೫೯ ಸ್ಥಾನದಲ್ಲಿದ್ದರು. ೨೦೧೬ ರ ದಕ್ಷಿಣ ಏಷ್ಯಾದ ಕ್ರೀಡಾಕೂಟದಲ್ಲಿ ಮಹಿಳಾ ಸಿಂಗಲ್ಸ್ ಮತ್ತು ಮಿಶ್ರ-ಡಬಲ್ಸ್ ವಿಭಾಗಗಳಲ್ಲಿ ರೈನಾ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಫೆಡ್ ಕಪ್ನಲ್ಲಿ ಭಾರತದ ಪರ ಆಡುತ್ತ ರೈನಾ ೧೫-೧೨ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಪ್ರಸ್ತುತ ಅವರು ಗುಜರಾತ್ ನ ಕ್ರೀಡಾ ಪ್ರಾಧಿಕಾರದಿಂದ ಬೆಂಬಲಿತರಾಗಿದ್ದಾರೆ ಮತ್ತು ಒಎನ್ ಜಿಸಿ ಜೊತೆ ಕೆಲಸ ಮಾಡುತ್ತಿದ್ದಾರೆ. ರೈನಾರನ್ನು ಯುನೆಕ್ಸ್ ಪ್ರಾಯೋಜಿಸುತ್ತಿದೆ.

ವೃತ್ತಿಜೀವನ[ಬದಲಾಯಿಸಿ]

ಭರವಸೆಯ ಕಿರಿಯ ವೃತ್ತಿಜೀವನದ ನಂತರ, ೨೦೦೯ ರಲ್ಲಿ ಮುಂಬೈಯ ಸಣ್ಣ ಐಟಿಎಫ್ ಪಂದ್ಯಾವಳಿಯಲ್ಲಿ ರೈನಾ ಮೊದಲ ವೃತ್ತಿಪರ ಪ್ರದರ್ಶನವನ್ನು ನೀಡಿದರು. ೨೦೧೦ ರಲ್ಲಿ, ಅವರು ಸ್ಥಳೀಯ ಐಟಿಎಫ್ ಸಮಾರಂಭಗಳಲ್ಲಿ ಸೀಮಿತ ಯಶಸ್ಸನ್ನು ಗಳಿಸಿದರು. ರೈನಾ ೨೦೧೧ ರ ಕ್ರೀಡಾಋತುವಿನಲ್ಲಿ ಡಬಲ್ಸ್ ನಲ್ಲಿ ಮೂರು ಐಟಿಎಫ್ ಸರ್ಕ್ಯೂಟ್ ಫೈನಲ್ಸ್ಗೆ ಮುನ್ನಡೆ ಸಾಧಿಸಿ, ಐಶ್ವರ್ಯಾ ಅಗರ್ವಾಲ್ ವಿರುದ್ದ ಗೆಲುವು ಸಾಧಿಸಿದರು. ೨೦೧೨ ರಲ್ಲಿ, ಅವರು ತಮ್ಮ ಪ್ರಥಮ ವೃತ್ತಿಪರ ಸಿಂಗಲ್ಸ್ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಗೆದ್ದರು ಮತ್ತು ಡಬಲ್ಸ್ನಲ್ಲಿ ಮೂರು ಬಾರಿ ಜಯಗಳಿಸಿದರು. ೨೦೧೮ ರ ಏಪ್ರಿಲ್ ನಲ್ಲಿ ಅವರು ವಿಶ್ವದ ನಂ. ೧೮೧ ರ ಶ್ರೇಯಾಂಕವನ್ನು ತಲುಪಿದರು, ನಿರುಪಮಾ ಸಂಜೀವ್, ಸಾನಿಯಾ ಮಿರ್ಜಾ, ಶಿಖಾ ಒಬೆರೋಯ್ ಮತ್ತು ಸುನಿತಾರಾವ್ ನಂತರದ ಶ್ರೇಷ್ಠ ೨೦೦ ಮಹಿಳಾ ಸಿಂಗಲ್ಸ್ ಶ್ರೇಯಾಂಕಗಳನ್ನು ಗೆದ್ದ ಐದನೇ ಭಾರತೀಯರಾಗಿದ್ದಾರೆ.

ಆಗಸ್ಟ್ ೨೦೧೮ ರಲ್ಲಿ, ಅಂಕಿತಾ ಜಕಾರ್ತಾ, ಇಂಡೋನೇಶಿಯಾದ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದರು.[೩] ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿ ಸಿಂಗಲ್ಸ್ ಪದಕ ಗೆದ್ದ ಏಕೈಕ ಆಟಗಾರರಲ್ಲಿ ರೈನಾ ಮತ್ತು ಸಾನಿಯಾ ಮಿರ್ಜಾ ಆಗಿದ್ದಾರೆ.

ಏಷ್ಯನ್ ಗೇಮ್ಸ್[ಬದಲಾಯಿಸಿ]

ಸಿಂಗಲ್ಸ್ (ಕಂಚಿನ ಪದಕ)[ಬದಲಾಯಿಸಿ]

ಪದಕ ವರ್ಷ ಪಂದ್ಯ ಸ್ಥಳ ಎದುರಾಳಿ ಅಂಕ
Bronze medal.svg ಕಂಚು ಆಗಸ್ಟ್ 2018 2018 ಏಷ್ಯನ್ ಗೇಮ್ಸ್ ಜಕಾರ್ತ, ಇಂಡೋನೇಷ್ಯಾ ಚೀನಾ Zhang Shuai 4–6, 6–7(6–8)

ಉಲ್ಲೇಖಗಳು[ಬದಲಾಯಿಸಿ]

  1. https://www.vijayavani.net/%E0%B2%85%E0%B2%82%E0%B2%95%E0%B2%BF%E0%B2%A4%E0%B2%BE-%E0%B2%B0%E0%B3%88%E0%B2%A8%E0%B2%BE%E0%B2%97%E0%B3%86-%E0%B2%B5%E0%B2%B0%E0%B3%8D%E0%B2%B7%E0%B2%A6-%E0%B2%AE%E0%B3%8A%E0%B2%A6%E0%B2%B2/
  2. https://kannada.news18.com/news/sports/ankita-breaks-top-200-barrier-only-third-female-from-india-to-do-so-28407.html
  3. https://kannada.mykhel.com/tennis/asian-games-2018-india-win-bronze-in-women-tennis-singles-005943.html