ಅಂಕಿತಾ ರೈನಾ
ದೇಶ | India | |||||||||||||
---|---|---|---|---|---|---|---|---|---|---|---|---|---|---|
ಜನನ | Ahmedabad, Gujarat | ೧೧ ಜನವರಿ ೧೯೯೩|||||||||||||
ಆಟಗಳು | Right (two-handed backhand) | |||||||||||||
ಪ್ರಶಸ್ತಿಯ ಮೊತ್ತ | $226,697 | |||||||||||||
ಸಿಂಗಲ್ಸ್ | ||||||||||||||
ವೃತ್ತಿಜೀವನ ದಾಖಲೆ | 233–192 | |||||||||||||
ವೃತ್ತಿಜೀವನ ಪ್ರಶಸ್ತಿಗಳು | 8 ITF | |||||||||||||
ಉನ್ನತ ಶ್ರೇಣಿ | 164 (11 February 2019) | |||||||||||||
ಸದ್ಯದ ಶ್ರೇಣಿ | 180 (15 April 2019) | |||||||||||||
ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಫಲಿತಾಂಶಗಳು | ||||||||||||||
ಆಸ್ಟ್ರೇಲಿಯನ್ ಒಪನ್ | Q2 (2019) | |||||||||||||
ಫ್ರೇಂಚ್ ಒಪನ್ | Q1 (2018, 2019) | |||||||||||||
ವಿಂಬಲ್ಡನ್ | Q2 (2018) | |||||||||||||
ಇತರೆ ಪಂದ್ಯಾವಳಿಗಳು | ||||||||||||||
ಡಬಲ್ಸ್ | ||||||||||||||
ವೃತ್ತಿಜೀವನ ದಾಖಲೆ | 169–151 | |||||||||||||
ವೃತ್ತಿಜೀವನ ಪ್ರಶಸ್ತಿಗಳು | 1 WTA 125K, 14 ITF | |||||||||||||
ಉನ್ನತ ಶ್ರೇಣಿ | 154 (10 December 2018) | |||||||||||||
ಸದ್ಯದ ಶ್ರೇಣಿ | 176 (15 April 2019) | |||||||||||||
ತಂಡ ಪಂದ್ಯಾವಳಿಗಳು | ||||||||||||||
ಫೆಡ್ ಕಪ್ | 15–12 | |||||||||||||
ಪದಕ ದಾಖಲೆ
| ||||||||||||||
ಕೊನೆಯ ಬದಲಾವಣೆ: 19 April 2019. |
ಅಂಕಿತಾ ರವೀಂದರ್ ಕ್ರಿಶನ್ ರೈನಾ (ಜನನ ಜನವರಿ ೧೧, ೧೯೯೩) ಒಬ್ಬ ಭಾರತೀಯ ಟೆನ್ನಿಸ್ ಆಟಗಾರ್ತಿ ಮತ್ತು ಪ್ರಸಕ್ತ ಭಾರತದ ನಂ. ೧ ಮಹಿಳಾ ಸಿಂಗಲ್ಸ್ ನಲ್ಲಿದ್ದಾರೆ. ಐಟಿಎಫ್ ಸರ್ಕ್ಯೂಟ್ನಲ್ಲಿ ರೈನಾ ೮ ಸಿಂಗಲ್ಸ್ ಮತ್ತು ೧೪ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[೧] ಏಪ್ರಿಲ್ ೨೦೧೮ ರಲ್ಲಿ ಅವರು ಅಗ್ರ ೨೦೦ ಸಿಂಗಲ್ಸ್ ಶ್ರೇಯಾಂಕಗಳನ್ನು ಪ್ರವೇಶಿಸಿದರು, ಈ ಸಾಧನೆ ಮಾಡಿದ ಭಾರತವನ್ನು ಪ್ರತಿನಿಧಿಸಿದ ಐದನೇ ಆಟಗಾರರಾದರು.[೨] ೨೦೧೭ ರ ಆಗಸ್ಟ್ ೨೮ ರಂದು, ಡಬಲ್ಸ್ ಶ್ರೇಯಾಂಕದಲ್ಲಿ ಅವರು ವಿಶ್ವದ ೧೫೯ ಸ್ಥಾನದಲ್ಲಿದ್ದರು. ೨೦೧೬ ರ ದಕ್ಷಿಣ ಏಷ್ಯಾದ ಕ್ರೀಡಾಕೂಟದಲ್ಲಿ ಮಹಿಳಾ ಸಿಂಗಲ್ಸ್ ಮತ್ತು ಮಿಶ್ರ-ಡಬಲ್ಸ್ ವಿಭಾಗಗಳಲ್ಲಿ ರೈನಾ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಫೆಡ್ ಕಪ್ನಲ್ಲಿ ಭಾರತದ ಪರ ಆಡುತ್ತ ರೈನಾ ೧೫-೧೨ ಅಂತರದಲ್ಲಿ ಗೆಲುವು ದಾಖಲಿಸಿದ್ದರು. ಪ್ರಸ್ತುತ ಅವರು ಗುಜರಾತ್ ನ ಕ್ರೀಡಾ ಪ್ರಾಧಿಕಾರದಿಂದ ಬೆಂಬಲಿತರಾಗಿದ್ದಾರೆ ಮತ್ತು ಒಎನ್ ಜಿಸಿ ಜೊತೆ ಕೆಲಸ ಮಾಡುತ್ತಿದ್ದಾರೆ. ರೈನಾರನ್ನು ಯುನೆಕ್ಸ್ ಪ್ರಾಯೋಜಿಸುತ್ತಿದೆ.
ವೃತ್ತಿಜೀವನ
[ಬದಲಾಯಿಸಿ]ಭರವಸೆಯ ಕಿರಿಯ ವೃತ್ತಿಜೀವನದ ನಂತರ, ೨೦೦೯ ರಲ್ಲಿ ಮುಂಬೈಯ ಸಣ್ಣ ಐಟಿಎಫ್ ಪಂದ್ಯಾವಳಿಯಲ್ಲಿ ರೈನಾ ಮೊದಲ ವೃತ್ತಿಪರ ಪ್ರದರ್ಶನವನ್ನು ನೀಡಿದರು. ೨೦೧೦ ರಲ್ಲಿ, ಅವರು ಸ್ಥಳೀಯ ಐಟಿಎಫ್ ಸಮಾರಂಭಗಳಲ್ಲಿ ಸೀಮಿತ ಯಶಸ್ಸನ್ನು ಗಳಿಸಿದರು. ರೈನಾ ೨೦೧೧ ರ ಕ್ರೀಡಾಋತುವಿನಲ್ಲಿ ಡಬಲ್ಸ್ ನಲ್ಲಿ ಮೂರು ಐಟಿಎಫ್ ಸರ್ಕ್ಯೂಟ್ ಫೈನಲ್ಸ್ಗೆ ಮುನ್ನಡೆ ಸಾಧಿಸಿ, ಐಶ್ವರ್ಯಾ ಅಗರ್ವಾಲ್ ವಿರುದ್ದ ಗೆಲುವು ಸಾಧಿಸಿದರು. ೨೦೧೨ ರಲ್ಲಿ, ಅವರು ತಮ್ಮ ಪ್ರಥಮ ವೃತ್ತಿಪರ ಸಿಂಗಲ್ಸ್ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಗೆದ್ದರು ಮತ್ತು ಡಬಲ್ಸ್ನಲ್ಲಿ ಮೂರು ಬಾರಿ ಜಯಗಳಿಸಿದರು. ೨೦೧೮ ರ ಏಪ್ರಿಲ್ ನಲ್ಲಿ ಅವರು ವಿಶ್ವದ ನಂ. ೧೮೧ ರ ಶ್ರೇಯಾಂಕವನ್ನು ತಲುಪಿದರು, ನಿರುಪಮಾ ಸಂಜೀವ್, ಸಾನಿಯಾ ಮಿರ್ಜಾ, ಶಿಖಾ ಒಬೆರೋಯ್ ಮತ್ತು ಸುನಿತಾರಾವ್ ನಂತರದ ಶ್ರೇಷ್ಠ ೨೦೦ ಮಹಿಳಾ ಸಿಂಗಲ್ಸ್ ಶ್ರೇಯಾಂಕಗಳನ್ನು ಗೆದ್ದ ಐದನೇ ಭಾರತೀಯರಾಗಿದ್ದಾರೆ.
ಆಗಸ್ಟ್ ೨೦೧೮ ರಲ್ಲಿ, ಅಂಕಿತಾ ಜಕಾರ್ತಾ, ಇಂಡೋನೇಶಿಯಾದ ಸಿಂಗಲ್ಸ್ ಪಂದ್ಯಾವಳಿಯಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದರು.[೩] ಏಷ್ಯನ್ ಗೇಮ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿ ಸಿಂಗಲ್ಸ್ ಪದಕ ಗೆದ್ದ ಏಕೈಕ ಆಟಗಾರರಲ್ಲಿ ರೈನಾ ಮತ್ತು ಸಾನಿಯಾ ಮಿರ್ಜಾ ಆಗಿದ್ದಾರೆ.
ಏಷ್ಯನ್ ಗೇಮ್ಸ್
[ಬದಲಾಯಿಸಿ]ಸಿಂಗಲ್ಸ್ (ಕಂಚಿನ ಪದಕ)
[ಬದಲಾಯಿಸಿ]ಪದಕ | ವರ್ಷ | ಪಂದ್ಯ | ಸ್ಥಳ | ಎದುರಾಳಿ | ಅಂಕ |
---|---|---|---|---|---|
ಕಂಚು | ಆಗಸ್ಟ್ 2018 | 2018 ಏಷ್ಯನ್ ಗೇಮ್ಸ್ | ಜಕಾರ್ತ, ಇಂಡೋನೇಷ್ಯಾ | Zhang Shuai | 4–6, 6–7(6–8) |
ಉಲ್ಲೇಖಗಳು
[ಬದಲಾಯಿಸಿ]- ↑ https://www.vijayavani.net/%E0%B2%85%E0%B2%82%E0%B2%95%E0%B2%BF%E0%B2%A4%E0%B2%BE-%E0%B2%B0%E0%B3%88%E0%B2%A8%E0%B2%BE%E0%B2%97%E0%B3%86-%E0%B2%B5%E0%B2%B0%E0%B3%8D%E0%B2%B7%E0%B2%A6-%E0%B2%AE%E0%B3%8A%E0%B2%A6%E0%B2%B2/
- ↑ https://kannada.news18.com/news/sports/ankita-breaks-top-200-barrier-only-third-female-from-india-to-do-so-28407.html
- ↑ https://kannada.mykhel.com/tennis/asian-games-2018-india-win-bronze-in-women-tennis-singles-005943.html