ವಿಷಯಕ್ಕೆ ಹೋಗು

ವೇದಗಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೇದ ಗಣಿತ

[ಬದಲಾಯಿಸಿ]

ವೇದ ಗಣಿತವೆಂಬುವುದು ಒಂದು ಪುರಾತನ ಗಣಿತದ ವಿಧಾನ. ಈ ಗಣಿತದ ಪ್ರಕಾರ ಗಣಿತದ ಯಾವುದೇ ಕ್ಲಿಷ್ಟಕರ ಸಮಸ್ಯೆಯನ್ನು ಮನಸ್ಸಿನಲ್ಲೇ ಯೋಚಿಸಿ, ಬರವಣಿಗೆಯಿಲ್ಲದೇ ವೇಗವಾಗಿ ಬಗೆಹರಿಸಬಹುದು ಎಂದು ಹೇಳಲಾಗುತ್ತದೆ.

ವೇದ ಗಣಿತದ ಪ್ರಕಾರ ಸಮಸ್ಯೆಗಳಿಗೆ ೧೬ ಸಂಸ್ಕೃತದ ಗಣಿತ ಸೂತ್ರಗಳಿಂದ ಹಾಗೂ ಅವುಗಳಿಂದ ವ್ಯುತ್ಪನ್ನವಾಗುವ ವೇದೀಯ ಪರಿಣಾಮಗಳಿಂದ ಪರಿಹಾರ ಕಂಡು ಹಿಡಿಯಬಹುದು.

ಈ ಸೂತ್ರಗಳು ಕಳೆದು ಹೋಗಿದ್ದವೆಂದೂ ಹಾಗೂ ಇವುಗಳನ್ನು ಜಗದ್ಗುರು ಸ್ವಾಮಿ ಶ್ರೀ ಭಾರತೀ ಕೃಷ್ಣ ತೀರ್ಥಜಿ ಮಹಾರಾಜ ಎಂಬುವವರು ೧೯೧೧-೧೯೧೮ ರಲ್ಲಿ ಪುನ: ಪರಿಶೋಧನೆ ಮಾಡಿದರೆಂದೂ ಹೇಳಲಾಗುತ್ತದೆ. ಇವರ ಪ್ರಕಾರ ಇವರಿಗೆ ವೇದಾಧ್ಯಯನ ಮಾಡುವಾಗ ಸೂತ್ರಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತಂತೆ.

ತಮ್ಮ ಪರಿಶೊಧನೆಯ ತಳಹದಿಯ ಮೇಲೆ ಶ್ರೀ ಭಾರತೀ ಕೃಷ್ಣ ತೀರ್ಥಜಿಯವರು ೧೯೫೭ ರಲ್ಲಿ ವೇದಿಕ್ ಮ್ಯಾಥಮೆಟಿಕ್ಸ್ ಎಂಬ ಪುಸ್ತಕವನ್ನು ಬರೆದರು. ೧೯೬೦ ರಲ್ಲಿ ಶ್ರೀ ಭಾರತೀ ಕೃಷ್ಣ ತೀರ್ಥಜಿಯವರು ನಿಧನಹೊಂದಿದರು. ಈ ಪುಸ್ತಕವನ್ನು ೧೯೬೫ ರಲ್ಲಿ ಪ್ರಕಟಿಸಲಾಯಿತು.

ವೇದಗಣಿತವಂಬ ಪ್ರಕಾರವೇ ಇಲ್ಲವೆಂದೂ, ಇದರ ಬಗ್ಗೆ ಯಾವ ವೇದದಲ್ಲೂ ಉಲ್ಲೇಖವೇ ಇಲ್ಲವೆಂದೂ ಹೇಳಲಾಗುತ್ತದೆ.

ವೇದಗಣಿತದ ಆ ಹದಿನಾರು ಸೂತ್ರಗಳು ಹೀಗಿವೆ:[][]: 11 

# ಮೂಲ ಸೂತ್ರ Corollory ಸೂತ್ರಾರ್ಥ
1 ಏಕಾಧಿಕೇನ ಪೂರ್ವೇಣ ಆನುರೂಪ್ಯೇಣ ಹಿಂದಿನ ಸಂಖ್ಯೆಗಿಂತ ಒಂದು ಹೆಚ್ಚು
2 ನಿಖಿಲಂ ನವತಶ್ಚರಮಂ ದಶತಃ ಶಿಷ್ಯತೇ ಶೇಷಸಂಜ್ಞಃ ಎಲ್ಲವನ್ನೂ ಒಂಭತ್ತರಿಂದ; ಕೊನೆಯದನ್ನು ಹತ್ತರಿಂದ
3 ಊರ್ಧ್ವ ತಿರ್ಯಗ್ಭ್ಯಾಮ್ ಆದ್ಯಮಾದ್ಯೇನಾಂತ್ಯಮಂತ್ಯೇನ ನೇರವಾಗಿ ಮತ್ತು ಅಡ್ಡಲಾಗಿ (Vertically and crosswise)
4 ಪರಾವರ್ತ್ಯ ಯೋಜಯೇತ್ ಕೇವಲೈಃ ಸಪ್ತಕಂ ಗುಣ್ಯಾತ್ Transpose and adjust
5 ಶೂನ್ಯಂ ಸಾಮ್ಯಸಮುಚ್ಚಯೇ ವೇಷ್ಟನಮ್ When the sum is the same that sum is zero
6 ಆನುರೂಪ್ಯೇ ಶೂನ್ಯಮನ್ಯತ್ ಯಾವದೂನಂ ತಾವದೂನಂ If one is in ratio, the other is zero
7 ಸಂಕಲನ ವ್ಯವಕಲನಾಭ್ಯಾಂ ಯಾವದೂನಂ ತಾವದೂನೀಕೃತ್ಯ ವರ್ಗಂ ಚ ಯೋಜಯೇತ್ By addition and by subtraction
8 ಪುರಾಣಪುರಾಣಾಭ್ಯಾಂ ಅಂತ್ಯಯೋರ್ದಶಕೇಽಪಿ By the completion or non-completion
9 ಚಲನಕಲನಾಭ್ಯಾಮ್ ಅಂತ್ಯಯೋರೇವ Differences and Similarities
10 ಯಅವದೂನಮ್ ಸಮುಚ್ಚಯಗುಣಿತಃ Whatever the extent of its deficiency
11 ವ್ಯಷ್ಟಿ ಸಮಷ್ಟಿಃ ಲೋಪನಸ್ಥಾಪನಾಭ್ಯಾಮ್ Part and Whole
12 ಶೇಷಾನ್ಯಂಕೇನ ಚರಮೇಣ ವಿಲೋಕನಂ The remainders by the last digit
13 ಸೋಪಾನ್ತ್ಯದ್ವಯಮಂತ್ಯಮ್ ಗುಣಿತಸಮುಚ್ಚಯಃ ಸಮುಚ್ಚಯಗುಣಿತಃ The ultimate and twice the penultimate
14 ಏಕನ್ಯೂನೇನ ಪೂರ್ವೇಣ ಧ್ವಜಾಂಕ By one less than the previous one
15 ಗುಣಿತಸಮುಚ್ಚಯಃ ದ್ವಂದ್ವಯೋಗ The product of the sum is equal to the sum of the product
16 ಗುಣಕಸಮುಚ್ಚಯಹ ಆದ್ಯಂ ಅಂತ್ಯಂ ಮಧ್ಯಂ The factors of the sum is equal to the sum of the factors

ಉಲ್ಲೇಖಗಳು

[ಬದಲಾಯಿಸಿ]
  1. R. K. Thakur (1 November 2009). Vedic Mathematics. Unicorn Books. ISBN 978-81-7806-177-1. Retrieved 23 May 2013.
  2. ಉಲ್ಲೇಖ ದೋಷ: Invalid <ref> tag; no text was provided for refs named WBFlorentin2006


"https://kn.wikipedia.org/w/index.php?title=ವೇದಗಣಿತ&oldid=1252681" ಇಂದ ಪಡೆಯಲ್ಪಟ್ಟಿದೆ