ಭೀಮ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೀಮಾ ನದಿ (भिमा नदी)
ಚಂದ್ರಭಾಗ ನದಿ
River
Kintra  ಭಾರತ
States ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ
Tributaries
 - left Ghod, Sina, Kagini
 - right Bhama, Indrayani, Mula-Mutha, Nira
Soorce ಭೀಮಾಶಂಕರ
 - elevation ೯೪೫ m (೩,೧೦೦ ft)
Mooth ಕೃಷ್ಣಾ ನದಿ
 - elevation ೩೩೬ m (೧,೧೦೨ ft)
Lenth ೮೬೧ km (೫೩೫ mi)
Basin ೭೦,೬೧೪ km² (೨೭,೨೬೪ sq mi)
[[Image:| 256px|none
]]


ಭೀಮಾ ನದಿಯು ಕೃಷ್ಣಾ ನದಿಯ ಉಪನದಿಯಾಗಿದೆ.

ಉಗಮ--ಸಂಗಮ[ಬದಲಾಯಿಸಿ]

ಭೀಮಾ ನದಿಯು ಮಹಾರಾಷ್ಟ್ರದಲ್ಲಿ ಪುಣೆಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯ ಕಡ್ಲೂರು ಊರ ಹತ್ತಿರ, ಆಂಧ್ರಪ್ರದೇಶದ ಗಡಿಗೆ ಸಮೀಪವಾಗಿ ಈ ನದಿಯು ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸುಮಾರು ೮೬೧ ಕಿ.ಮೀ.ಗಳಷ್ಟು.

ಉಪನದಿಗಳು[ಬದಲಾಯಿಸಿ]

ಕರ್ನಾಟಕದಲ್ಲಿ ಅಮರಜಾ, ಮುಲ್ಲಾಮಾರಿ, ಗಂಡೋರಿ ಹಳ್ಳ, ಕಾಗಿನಾ ಹಾಗು ಬೆಣ್ಣೆತೊರಾ ಇವು ಭೀಮಾನದಿಯ ಉಪನದಿಗಳು.

ಆಣೆಕಟ್ಟುಗಳು[ಬದಲಾಯಿಸಿ]

ಭೀಮಾ ನದಿಗೆ ಕಲಬುರ್ಗಿ ಜಿಲ್ಲೆಯ ನೆಲೊಗಿ "ಗ್ರಾಮದ ಹತ್ತಿರ ಆಣೆಕಟ್ಟು ಕಟ್ಟುವ ಯೋಜನೆ ಇದೆ. ಭೀಮಾ ನದಿಯ ಉಪನದಿಗಳಿಗೆ ಈಗಾಗಲೆ ಸಣ್ಣಪುಟ್ಟ ಆಣೆಕಟ್ಟುಗಳನ್ನು ಕಟ್ಟಲಾಗಿದೆ.

ಮಹತ್ವದ ತೀರ ಪ್ರದೇಶಗಳು[ಬದಲಾಯಿಸಿ]

ಭೀಮಾನದಿಯ ಉಗಮದಲ್ಲಿರುವ ಭೀಮಾಶಂಕರವು ಒಂದು ಪವಿತ್ರ ಯಾತ್ರಾಸ್ಥಳ. ದ್ವಾದಶಲಿಂಗಗಳಲ್ಲಿಯ ಒಂದು ಲಿಂಗ ಭೀಮಾಶಂಕರದಲ್ಲಿದೆ.

ಅಷ್ಟವಿನಾಯಕರಲ್ಲಿಯ ಒಂದು ವಿನಾಯಕ ದೇವಾಲಯವು ಸಿದ್ಧಟೇಕದಲ್ಲಿದೆ.

ಸುಪ್ರಸಿದ್ಧ ಪಂಢರಪುರ ವಿಠ್ಠಲ ದೇವಸ್ಥಾನವು ಸೊಲ್ಲಾಪುರ ಜಿಲ್ಲೆಯಲ್ಲಿದೆ.

ಸುಪ್ರಸಿದ್ಧ ಧೂಳಖೇಡ ಶ್ರೀ ಶಂಕರಲಿಂಗ ದೇವಸ್ಥಾನ ಧೂಳಖೇಡ ದಲ್ಲಿದೆ.

ಸುಪ್ರಸಿದ್ದ ದೈವಪೀಠ ವಾದ ` ಶ್ರೀ ಸಿದ್ಧಲಿಂಗ ಮಹಾರಾಜ ´ ರ ದೇವಸ್ಥಾನವಿರುವ ಲಚ್ಯಾಣ [ ಇಂಡಿ ತಾಲೂಕದಲ್ಲಿದೆ ]

ಪ್ರಸಿದ್ಧ ದತ್ತಪೀಠವಾದ ಗಾಣಗಾಪುರವು ಭೀಮಾದ ಉಪನದಿಯಾದ ಅಮರಜಾದ ತೀರದಲ್ಲಿದೆ.

ಪ್ರಸಿದ್ಧ ಶಕ್ತಿಪೀಠವಾದ, ಚಂದ್ರಲಾ ಪರಮೇಶ್ವರಿಯ ದೇವಸ್ಥಾನವಿರುವ ಸನ್ನತಿ ಗ್ರಾಮವು ಭೀಮಾನದಿಯ ದಂಡೆಯ ಮೇಲಿದೆ. ಇದೇ ಗ್ರಾಮದಲ್ಲಿ ಪ್ರಾಚ್ಯ ಸಂಶೋಧಕರಿಗೆ ಬೌದ್ಧ ವಿಹಾರದ ಅವಶೇಷಗಳು ದೊರೆತಿವೆ.

ಕಾಗಿನಾ ಉಪನದಿಯ ತೀರದಲ್ಲಿ ಹೊನಗುಂಟಾ ಗ್ರಾಮದಲ್ಲಿ ಚಂದ್ರಲಾ ಪರಮೇಶ್ವರಿಯ ಮತ್ತೊಂದು ದೇವಸ್ಥಾನವಿದೆ.

"https://kn.wikipedia.org/w/index.php?title=ಭೀಮ_ನದಿ&oldid=1184127" ಇಂದ ಪಡೆಯಲ್ಪಟ್ಟಿದೆ