ಅಮ್ಮ ಪ್ರಶಸ್ತಿ
ಗೋಚರ
ಅಮ್ಮ ಪ್ರಶಸ್ತಿ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು , ೨೦೦೦ ರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡುತ್ತಿರುವವರಿಗೆ ಕೊಡಲಾಗುತ್ತಿದೆ. ಪತ್ರಕರ್ತ, ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿಗಾಗಿ ಸ್ಥಾಪಿಸಿದ ಪ್ರಶಸ್ತಿ ಇದಾಗಿದೆ. ಕನ್ನಡದ ಪ್ರತಿಭಾವಂತ ಬರಹಗಾರರು ಅಮ್ಮಪ್ರಶಸ್ತಿಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ;ಗೌರವಿಸಿದ್ದಾರೆ.
ಪ್ರಶಸ್ತಿಯ ವಿವರ
[ಬದಲಾಯಿಸಿ]ಪ್ರಶಸ್ತಿಯು ತಲಾ 5000 ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಒಳಗೊಂಡಿರುತ್ತದೆ.
೨೦೧೦ರ ಪ್ರಶಸ್ತಿ ವಿಜೇತರು ಮತ್ತು ಕೃತಿಗಳು
[ಬದಲಾಯಿಸಿ]- ಡಿ.ಬಿ.ರಜಿಯಾ ಅವರ ಕವಿತೆಗಳು
- ಡಾ.ಲಕ್ಷ್ಮಣಕೌಂಟೆ ಅವರ ಐತಿಹಾಸಿಕ ಕಾದಂಬರಿ ಆಂದೋಲನ
- ಬಿ.ಎನ್.ಮಲ್ಲೇಶರ ಬ್ರೇಕಿಂಗ್ ನ್ಯೂಸ್
- ಎ.ಆರ್.ಮಣಿಕಾಂತರ ಅಮ್ಮ ಹೇಳಿದ ಎಂಟು ಸುಳ್ಳುಗಳು
ನವೆಂಬರ್ 26, ೨೦೧೦ ರಂದು ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗಿದ ಸಮಾರಂಭದಲ್ಲಿ ಅಮ್ಮಪ್ರಶಸ್ತಿ ಪ್ರದಾನ ಮಾಡಲಾಯಿತು. ದಶಮಾನೋತ್ಸವದ ಅಂಗವಾಗಿ
೨೦೧೨ರ ಪ್ರಶಸ್ತಿ ವಿಜೇತರು ಮತ್ತು ಕೃತಿಗಳು
[ಬದಲಾಯಿಸಿ]- ಹಿರಿಯ ಲೇಖಕ, ಪತ್ರಕರ್ತ ಜಿ ಎನ್ ಮೋಹನ್ ಅವರ ಅನುವಾದ ಬರ ಅಂದ್ರೆ ಎಲ್ಲರಿಗೂ ಇಷ್ಟ
- ಕಥೆಗಾರ್ತಿ ಸುಧಾ ಚಿದಾನಂದಗೌಡ ಅವರ ಕಥಾ ಸಂಕಲನ ಕನ್ನಡಿಯನ್ನು ನೋಡಲಾರೆ
- ಕವಿಯಿತ್ರಿ ಜ.ನಾ.ತೇಜಶ್ರೀ ಅವರ ಕಾವ್ಯ ಅವನರಿವಲ್ಲಿ
- ಸಂಶೋಧಕ ಡಾ.ವಿ.ಜಿ.ಪೂಜಾರ್ ಅವರ ಸಂಶೋಧನಾ ಕೃತಿ ಗುಲ್ಬರ್ಗಾ ಮತ್ತು ಯಾದಗಿರಿ ಜಿಲ್ಲೆಯ ತತ್ವಪದಕಾರರ ಸ್ಮಾರಕಗಳು
- ಕಾದಂಬರಿಕಾರ ಎಂ.ಆರ್.ದತ್ತಾತ್ರಿ ಅವರ ಕಾದಂಬರಿ ದ್ವೀಪವ ಬಯಸಿ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ೨೦೧೦ರ ಪ್ರಶಸ್ತಿಯ ವಿವರಗಳು ದಟ್ಸ್ ಕನ್ನಡದಲ್ಲಿ - http://kannada.oneindia.in/news/2010/11/13/amma-award-for-ar-manikanth-and-three-others.html
- https://kannada.yahoo.com/%E0%B2%90%E0%B2%B5%E0%B2%B0-%E0%B2%95-%E0%B2%A4-%E0%B2%97%E0%B2%B3-%E0%B2%97-%E0%B2%85%E0%B2%AE-%E0%B2%AE-%E0%B2%AA-114243331.html
- http://www.udayavani.com/news/210680L15-%E0%B2%90%E0%B2%B5%E0%B2%B0-%E0%B2%95-%E0%B2%A4-%E0%B2%97%E0%B2%B3-%E0%B2%97-%E0%B2%85%E0%B2%AE-%E0%B2%AE-%E0%B2%AA-%E0%B2%B0%E0%B2%B6%E0%B2%B8-%E0%B2%A4.html