ವಿಷಯಕ್ಕೆ ಹೋಗು

ರಾಮಕೃಷ್ಣ ಮಿಶನ್, ಬಸವನಗುಡಿ, ಬೆಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Bangalore1.JPG
'ಪ್ರಮುಖ ಮಂದಿರ'
ಚಿತ್ರ:Bangalore4.JPG
'ರಾಮಕೃಷ್ಣ ಪರಮಹಂಸರ ಮೂರ್ತಿ'
ಚಿತ್ರ:RKM5.JPG
'ನಾಗಲಿಂಗ ಪುಷ್ಪದ ಮರ'
ಚಿತ್ರ:Bangalore2.JPG
'ಶಾರದಾ ಮಾತಾಜಿಯವರ ಸ್ಮಾರಕ'

ರಾಮಕೃಷ್ಣ ಮಿಶನ್, ದಕ್ಷಿಣ ಬೆಂಗಳೂರು ನಗರದ ಬಸವನಗುಡಿ ಜಿಲ್ಲೆಯಲ್ಲಿದೆ. ಇದಕ್ಕೆ ಒಂದು ಶತಮಾನದ ಇತಿಹಾಸವಿದೆ. [] ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಪುಸ್ತಕ ಪ್ರಕಟಿಸುವ ಈ ಸಂಸ್ಥೆ ಪ್ರಸಿದ್ಧವಾಗಿದೆ. ಬಾಲಕರಿಗಾಗಿ 'ವಿದ್ಯಾರ್ಥಿ ಮಂದಿರ' ಎಂಬ ಹಾಸ್ಟೆಲ್ ನ್ನು ಇದು ನಡೆಸುತ್ತಿದೆ. ಬೆಂಗಳೂರಿನ ಹತ್ತಿರವಿರುವ ಶಿವನಹಳ್ಳಿ ಮೊದಲಾದ ಹಳ್ಳಿಗಳಲ್ಲಿ ಹಲವಾರು ಸಮಾಜಕಲ್ಯಾಣ ಕಾರ್ಯಗಳನ್ನು ಕೈಗೊಂಡಿದೆ. []ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಹೊಂದಿರುವ, ಸ್ವಾಮಿ ಹರ್ಷಾನಂದರು ಆಶ್ರಮದ ಈಗಿನ ಅಧ್ಯಕ್ಷರು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಹಲವಾರು ಪುಸ್ತಕಗಳನ್ನು ಅವರು ಬರೆದಿದ್ದಾರೆ.[]

ವೇದಾಂತ ಸೊಸೈಟಿಯ ಸ್ಥಾಪನೆ

[ಬದಲಾಯಿಸಿ]

'ಶ್ರೀ ರಾಮಕೃಷ್ಣ ಪರಮಹಂಸ'ರ ಆದೇಶದಂತೆ 'ಸ್ವಾಮಿ ವಿವೇಕಾನಂದ'ರು ವೇದಾಂತ ಸೊಸೈಟಿಯನ್ನು ಸನ್ ೧೯೦೧ ರಲ್ಲಿ ಸ್ಥಾಪಿಸಿದರು. ಬೆಂಗಳೂರಿನ ಕೆಲವು ಸದ್ಗೃಹಸ್ಥರು 'ಶ್ರೀ ರಾಮಕೃಷ್ಣ ಪರಮಹಂಸ'ರ ಸಂದೇಶಗಳಿಗೆ ಮಾರುಹೋಗಿ, 'ರಾಮಕೃಷ್ಣಾಶ್ರಮ'ಗಳನ್ನು ಸ್ಥಾಪಿಸುವಲ್ಲಿ, 'ರಾಮಕಿಷ್ಣಾನಂದ ಸ್ವಾಮಿಜಿ'ಯವರನ್ನು ಪ್ರಾರ್ಥಿಸಿದರು. ಆಗ ಮದ್ರಾಸ್ ನಲ್ಲಿದ್ದ ಸ್ವಾಮೀಜಿಯವರು ಬೆಂಗಳೂರಿನಲ್ಲಿ ಒಂದು ಶಾಖೆಯನ್ನು ಖಾಯಂ ಆಗಿ ಸ್ಥಾಪಿಸಿದರು. ಹೀಗೆ ಸನ್ ೧೯೦೪ ರಲ್ಲಿ ಮಠ ಹಾಗೂ ಸಾಂಸ್ಕೃತಿಕ ಸಂಘಟನೆಯೊಂದು ಬಾಡಿಗೆ ಮನೆಯೊಂದರಲ್ಲಿ ಅಸ್ತಿತ್ವಕ್ಕೆ ಬಂತು. [] ಸನ್ ೧೯೦೯ ರಲ್ಲಿ ಮೈಸೂರು ಘನ ಸರಕಾರದ ದಾನದಿಂದಾಗಿ 'ರಾಮಕೃಷ್ಣ ಮಿಶನ್' ಈಗಿನ ಜಾಗಕ್ಕೆ ವರ್ಗಾಯಿಸಲ್ಪಟ್ಟಿತು. ಆಗ'ಸ್ವಾಮಿ ಬ್ರಹ್ಮಾನಂದ'ರು ಅಧ್ಯಕ್ಷರಾಗಿ ಸ್ಥಾನ ವಹಿಸಿಕೊಂಡಿದ್ದರು. ಜನವರಿ ೧೯೦೯ ರಲ್ಲಿ ಮಠದ ಪ್ರಾರಂಭೋತ್ಸವವನ್ನು ಮಾಡಿದರು. ಬೆಂಗಳೂರಿನ ಮಠದ ಪರಿಸರದಲ್ಲಿ ದೇವಸ್ಥಾನವಿದೆ. ಇಲ್ಲಿ ಪವಿತ್ರ ಗ್ರಂಥಗಳ ಸಂಗ್ರಹವಿದೆ. ಪ್ರತಿದಿನದ ಪ್ರಾರ್ಥನೆ ಮತ್ತು ಆರತಿ, ಕೀರ್ತನೆಗಳು ಭಕ್ತರ ಮನಸ್ಸಿಗೆ ಮುದಕೊಡುತ್ತವೆ.

ಶಾರದಾಮಾತೆಯವರು ಇಲ್ಲಿ ತಂಗಿದ್ದರು

[ಬದಲಾಯಿಸಿ]

ಮಾರ್ಚ್ ೧೧, ೧೯೧೧ ರಲ್ಲಿ ಬೆಂಗಳೂರಿಗೆ ಬಂದ ಶಾರದಾ ಮಾತೆಯವರು ಇಲ್ಲಿ ತಂಗಿದ್ದರು. ಪುಟ್ಟ ದಿಬ್ಬದ ಮೇಲೆ ಕುಳಿತು ಧ್ಯಾನಮಾಡುತ್ತಿದ್ದರೆಂದು ತಿಳಿದುಬರುತ್ತದೆ. ಮತ್ತೊಂದು ವಿಶೇಷವೆಂದರೆ, ಸನ್ ೧೮೯೨ ರಲ್ಲಿ ಸ್ವಾಮಿ ವಿವೇಕಾನಂದರು ಇಲ್ಲಿಗೆ ಭೇಟಿ ಕೊಟ್ಟಾಗ ಅಲ್ಲಿನ ಕಲ್ಲಿನ ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದರಂತೆ.

ಶ್ರೀ ರಾಮಕೃಷ್ಣ ಪರಮಹಂಸರ ಬಳಿಕ ಬಂದ ಯತಿಗಳಲ್ಲಿ ಅನೇಕರು ಬೆಂಗಳೂರಿನ ಮಠಕ್ಕೂ ಬಂದಿದ್ದರು. ಅವರುಗಳ ಹೆಸರುಗಳು ಹೀಗಿವೆ.

ಆಶ್ರಮಕ್ಕೆ ಬರಲು ನಗರದ ಸಾರಿಗೆ ಬಸ್ ಸೌಲಭ್ಯಗಳು

[ಬದಲಾಯಿಸಿ]

ಬೆಂಗಳೂರು ನಗರದ ಪ್ರಮುಖ ರೈಲ್ವೆ ನಿಲ್ದಾಣ ದಿಂದ ಬನಶಂಕರಿ ಬಸ್ ನಿಲ್ದಾಣ, ಅಥವಾ ಜಯನಗರದ ೪ ನೆಯ ಬ್ಲಾಕ್ ಕಡೆ ಹೋಗುವ ಬಸ್ ಗಳು ಆಶ್ರಮದ ಮುಂದೆ ಇರುವ ಬಸ್ ನಿಲ್ದಾಣದಲ್ಲಿ ನಿಲ್ಲುತ್ತವೆ. ಶಂಕರಪುರ, ಗವಿಪುರ, ವಿಶ್ವೇಶ್ವರಪುರಂ, ಮತ್ತು ಸಿಟಿ ಮಾರುಕಟ್ಟೆಯ ಕಡೆಯಿಂದಲೂ ಇಲ್ಲಿಗೆ ಬರಲು ಬಸ್ ಸೌಲಭ್ಯಗಳಿವೆ. ಗಾಂಧಿಬಜಾರ್, ನ್ಯಾಷನಲ್ ಕಾಲೇಜ್ ಇಲ್ಲಿಗೆ ತುಂಬಾ ಹತ್ತಿರ.

ಉಲ್ಲೇಖಗಳು

[ಬದಲಾಯಿಸಿ]
  1. "Ramakrishna math and Ramakrishna mission". Archived from the original on 2014-07-18. Retrieved 2014-10-07.
  2. "'ರಾಮಕೃಷ್ಣ ಮಿಶನ್, ಶಿವನ ಹಳ್ಳಿ'". Archived from the original on 2014-12-18. Retrieved 2014-10-07.
  3. "About Ramakrishn math". Archived from the original on 2014-10-01. Retrieved 2014-10-07.
  4. Ramakrishna math, bangalore, 100 years. Sri. Suresh moona