ವೇದಾಂತ ಸೊಸೈಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೇದಾಂತ ಸೊಸೈಟಿಯನ್ನು ಸ್ವಾಮಿ ವಿವೇಕಾನಂದರು, ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನವೆಂಬರ್, ೧೮೯೪ ರಲ್ಲಿ ಸ್ಥಾಪಿಸಿದರು. ರಾಮಕೃಷ್ಣ ಪರಮಹಂಸರ ತತ್ವಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಈ ಸಂಸ್ಥೆ ಮೊದಲು ಅಸ್ತಿತ್ವಕ್ಕೆ ಬಂತು. ಭಾರತೀಯ ವೇದಾಂತ ತನ್ನದೇ ಅದ ಒಂದು ಪರಂಪರೆಯನ್ನು ಹೊಂದಿದೆ. 'ಸ್ವಾಮಿ ವಿವೇಕಾನಂದ'ರ ನೇತೃತ್ವದಲ್ಲಿ ಅದನ್ನು ಅಧ್ಯಯನಮಾಡಲು, ವಿಮರ್ಶೆ, ಚರ್ಚೆಮಾಡಲು, ಸಮಾಲೋಚಿಸಲು ಸ್ಪಂದಿಸಲು, ವೇದಾಂತಾಸಕ್ತರೆಲ್ಲಾ ಸೇರಿ ಕೆಲವು ಸಮೂಹ ಸಮುದಾಯಗಳನ್ನು ಕಟ್ಟಿಕೊಂಡು ಬೆಳೆಸಿದ ಸಂಸ್ಥೆ ಇದು. 'ವಿವೇಕಾನಂದ'ರು ಭಾರತಕ್ಕೆ ವಾಪಸ್ಸಾದ ಮೇಲೆ, ಸ್ವಾಮಿ ಅಭೇದಾನಂದರು, ಸನ್, ೧೮೯೭ ರಲ್ಲಿ ಆ ಸಂಸ್ಥೆಯನ್ನು ನಡೆಸಲು ಅನುಮತಿ ಪಡೆದರು. 'ವೇದಾಂತ ಸೊಸೈಟಿ'ಯೆಂದು ಪ್ರಾರಂಭವಾದ ಈ ಮುಖ್ಯವಾಹಿನಿಯ ಇನ್ನಿತರ ಸಂಘಟನೆಗಳು ಹಲವಾರು. ಮತ್ತಿತರ ಶಾಖೆಗಳು ಈ ಪ್ರಮುಖ ಸಂಘಟನೆಯ ಭಾಗಗಳಾಗಿವೆ.