ವಿಷಯಕ್ಕೆ ಹೋಗು

ಪಾದಯಾತ್ರೆ ಮಾಡುವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒರೆಗಾಂವ್‌ನಲ್ಲಿರುವ ಒಂದು ಪಾದಯಾತ್ರೆಯ ಕಾಲುದಾರಿ.

ಪಾದಯಾತ್ರೆ ಮಾಡುವಿಕೆ ಎಂಬುದು ಒಂದು ಹೊರಾಂಗಣ ಚಟುವಟಿಕೆಯಾಗಿದ್ದು ಸ್ವಾಭಾವಿಕ ಪರಿಸರಗಳಲ್ಲಿನ ನಡಿಗೆಯನ್ನು ಇದು ಒಳಗೊಂಡಿರುತ್ತದೆ ಮತ್ತು ಇದು ಅನೇಕವೇಳೆ ಪರ್ವತಮಯ ಪ್ರದೇಶಗಳಲ್ಲಿನ ಪಾದಯಾತ್ರೆಯ ಕಾಲುದಾರಿಗಳಲ್ಲಿ ನಡೆಯುವ ಪಾದಯಾತ್ರೆಯಾಗಿರುತ್ತದೆ. ಇದೆಂಥಾ ಜನಪ್ರಿಯ ಚಟುವಟಿಕೆಯೆಂದರೆ, ವಿಶ್ವಾದ್ಯಂತ ಹಲವಾರು ಪಾದಯಾತ್ರೆಯ ಸಂಘಟನೆಗಳು ಅಸ್ತಿತ್ವದಲ್ಲಿರುವುದನ್ನು ನಾವು ಕಾಣಬಹುದು. ವಿಭಿನ್ನ ಬಗೆಯ ಪಾದಯಾತ್ರೆಗಳಿಂದ ದೊರೆಯುವ ಆರೋಗ್ಯದ ಪ್ರಯೋಜನಗಳು ಅಧ್ಯಯನಗಳಲ್ಲಿ ದೃಢೀಕರಿಸಲ್ಪಟ್ಟಿವೆ.[] ಪಾದಯಾತ್ರೆ ಮಾಡುವಿಕೆ (ಹೈಕಿಂಗ್‌) ಎಂಬ ಪರಿಭಾಷೆಯನ್ನು ಇಂಗ್ಲಿಷ್‌-ಮಾತನಾಡುವ ದೇಶಗಳೆಲ್ಲೆಡೆ ಅರ್ಥೈಸಿಕೊಳ್ಳಲಾಗುತ್ತದೆಯಾದರೂ, ಬಳಕೆಯಲ್ಲಿ ಒಂದಷ್ಟು ವ್ಯತ್ಯಾಸಗಳಿರುವುದನ್ನು ನಾವು ಕಾಣಬಹುದು.

ಸಂಬಂಧಿತ ಪರಿಭಾಷೆಗಳು

[ಬದಲಾಯಿಸಿ]
ಅಪಲೇಚಿಯನ್‌ ಕಾಲುದಾರಿಯು ಒಂದು ಸುದೀರ್ಘ ಪಾದಯಾತ್ರೆಗೆ ಅವಕಾಶವನ್ನು ನೀಡುತ್ತದೆ.

ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ಯುನೈಟೆಡ್‌ ಕಿಂಗ್‌ಡಂಗಳಲ್ಲಿ ವಿನೋದ-ವಿಹಾರದ ಉದ್ದೇಶಗಳಿಗಾಗಿ ಹೊರಾಂಗಣಗಳಲ್ಲಿನ ಕಾಲುದಾರಿಯೊಂದರ ಮೇಲೆ ಮಾಡುವ ನಡಿಗೆಗೆ ಪಾದಯಾತ್ರೆ ಮಾಡುವಿಕೆ (ಹೈಕಿಂಗ್‌) ಎಂದು ಉಲ್ಲೇಖಿಸಲಾಗುತ್ತದೆ.[] ಒಂದು ಏಕದಿನದಲ್ಲಿ ಸಂಪೂರ್ಣಗೊಳಿಸಲ್ಪಡುವ, ಆದರೆ ರಾತ್ರಿಗೆ ತಂಗುವ ಶಿಬಿರವೊಂದರ ಅಗತ್ಯ ಕಂಡುಬರದ ಒಂದು ಪಾದಯಾತ್ರೆಗೆ ದಿನದ ಪಾದಯಾತ್ರೆ (ಡೇ ಹೈಕ್‌) ಎಂದು ಉಲ್ಲೇಖಿಸಲಾಗುತ್ತದೆ. ಶಿಬಿರ ಹೂಡುವಿಕೆಯನ್ನು ಒಳಗೊಂಡಿರುವ ಬಹು-ದಿನದ ಪಾದಯಾತ್ರೆಗಳಿಗೆ ಬೆನ್ನುಹೊರೆ ಹೊರುವಿಕೆ ಎಂದು ಉಲ್ಲೇಖಿಸಲಾಗುತ್ತದೆ.[] ಯುನೈಟೆಡ್‌ ಕಿಂಗ್‌ಡಂನಲ್ಲಿ ಪಾದಯಾತ್ರೆ ಮಾಡುವಿಕೆಯನ್ನು ಸಾಮಾನ್ಯವಾಗಿ ಸುತ್ತಾಡುವಿಕೆ (ರ್ಯಾಂಬ್ಲಿಂಗ್‌) ಎಂದು ಕರೆಯಲಾಗುತ್ತದೆ; ಇದು ರ್ಯಾಂಬ್ಲರ್ಸ್‌‌ ಎಂಬ ಹೆಸರಿನ ಪಾದಯಾತ್ರೆಯ ಸಂಘಟನೆಯು ಹುಟ್ಟಿಕೊಳ್ಳುವುದಕ್ಕೆ ಕಾರಣವಾಗಿದೆ. ಹಾದಿಯಲ್ಲಿ ಮುಂದುವರೆಯಲು ಸಸ್ಯವರ್ಗವನ್ನು ಪಕ್ಕಕ್ಕೆ ತಳ್ಳುವುದರ ಅಗತ್ಯ ಕಂಡುಬರುವ ದಟ್ಟನೆಯ ಅರಣ್ಯ, ಅಡಿಕುರುಚಲು, ಅಥವಾ ಪೊದೆಗಳಂಥ ಪ್ರದೇಶಗಳ ಮೂಲಕ ಸಾಗುವ ಕಷ್ಟಕರವಾದ ನಡಿಗೆಗೆ ಪೊದೆ ಸವರುವಿಕೆ (ಬುಷ್‌ವ್ಯಾಕಿಂಗ್‌) ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಲಾಗುತ್ತದೆ. ಮಾನವ ಸಾಗಣೆಯು ನಿರೋಧಿಸಲ್ಪಡುವಷ್ಟರ ಮಟ್ಟಿಗೆ ಸಸ್ಯವರ್ಗವು ದಟ್ಟವಾಗಿರುವಂಥ ಪೊದೆ ಸವರುವಿಕೆಯ ಪರಮಾವಧಿಯ ಪ್ರಕರಣಗಳಲ್ಲಿ, ಮಾರ್ಗವೊಂದನ್ನು ತೆರವುಮಾಡಲು ಮಚ್ಚುಕತ್ತಿಯೊಂದನ್ನು ಬಳಸಲಾಗುತ್ತದೆ. ಕಾಲುದಾರಿಯ ಮೇಲಿನ ಮತ್ತು ಅದರಾಚೆಗಿನ ಪಾದಯಾತ್ರೆಗಳೆರಡಕ್ಕೂ ಪೊದೆನಡಿಗೆ (ಬುಷ್‌ವಾಕಿಂಗ್‌) ಎಂಬ ಪರಿಭಾಷೆಯನ್ನು ಆಸ್ಟ್ರೇಲಿಯಾದ ಜನರು ಬಳಸುತ್ತಾರೆ. ನ್ಯೂಜಿಲೆಂಡ್‌‌‌ನ ಜನರು ಕಾಲ್ನಡಿಗೆ ಮಾಡುವಿಕೆ (ಅಥವಾ ಟ್ರಾಂಪಿಂಗ್‌) ನಡಿಗೆ (ವಾಕಿಂಗ್‌) ಅಥವಾ ಪೊದೆನಡಿಗೆ (ಬುಷ್‌ವಾಕಿಂಗ್‌) ಎಂಬ ಪರಿಭಾಷೆಗಳನ್ನು ಬಳಸುತ್ತಾರೆ (ಟ್ರಾಂಪಿಂಗ್‌ ಎಂಬ ಪರಿಭಾಷೆಯನ್ನು ನಿರ್ದಿಷ್ಟವಾಗಿ ಒಂದು ರಾತ್ರಿಗೆ ತಂಗುವ ಮತ್ತು ಸುದೀರ್ಘವಾದ ಪ್ರವಾಸಗಳಿಗಾಗಿ ಅವರು ಬಳಸುತ್ತಾರೆ). ಭಾರತ, ನೇಪಾಳ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾದ ಪರ್ವತಮಯ ಪ್ರದೇಶಗಳಲ್ಲಿ ಹಾಗೂ ಪೂರ್ವ ಆಫ್ರಿಕಾದ ಬೆಟ್ಟದ ಸೀಮೆಗಳಲ್ಲಿ ನಡೆಸಲಾಗುವ ಬಹು-ದಿನದ ಪಾದಯಾತ್ರೆಯನ್ನು ಚಾರಣ ಮಾಡುವಿಕೆ (ಟ್ರೆಕಿಂಗ್‌) ಎಂದೂ ಕರೆಯಲಾಗುತ್ತದೆ; ಚಾರಣ ಮಾಡುವಿಕೆಗೂ ಸಹ ಡಚ್ಚರು ಉಲ್ಲೇಖಿಸುತ್ತಾರೆ. ಒಂದು ದೀರ್ಘ-ಅಂತರದ ಕಾಲುದಾರಿಯಲ್ಲಿ ತುದಿಯಿಂದ ತುದಿಗೆ ಪಾದಯಾತ್ರೆ ಮಾಡುವುದಕ್ಕೂ ಸಹ ಚಾರಣ ಮಾಡುವಿಕೆ ಎಂಬುದಾಗಿ ಮತ್ತು ಕೆಲವೊಂದು ಸ್ಥಳಗಳಲ್ಲಿ ಆದ್ಯಂತದ-ಪಾದಯಾತ್ರೆ ಮಾಡುವಿಕೆ (ಥ್ರೂ ಹೈಕಿಂಗ್‌) ಎಂಬುದಾಗಿ ಉಲ್ಲೇಖಿಸಲಾಗುತ್ತದೆ.[] ಅಪಲೇಚಿಯನ್‌ ಕಾಲುದಾರಿ (ಅಪಲೇಚಿಯನ್‌ ಟ್ರೈಲ್‌-AT) ಮತ್ತು ದೀರ್ಘ ಕಾಲುದಾರಿ (ಲಾಂಗ್‌ ಟ್ರೈಲ್‌-LT) ಇವು ದೀರ್ಘ-ಅಂತರದ ಕಾಲುದಾರಿಗಳ ಉದಾಹರಣೆಗಳಲ್ಲಿ ಸೇರಿವೆ.

ಸಲಕರಣೆ

[ಬದಲಾಯಿಸಿ]
ಒಂದು ಸರಳವಾದ ಶುಷ್ಕ ಅಯಸ್ಕಾಂತೀಯ ಪಾಕೆಟ್‌ ದಿಕ್ಸೂಚಿ.

ಪಾದಯಾತ್ರೆಯ ಉದ್ದದ ಮೇಲೆ, ಮತ್ತು ಮೂಲದ ಅನುಸಾರವಾಗಿ ಪಾದಯಾತ್ರೆಗೆ ಅಗತ್ಯವಿರುವ ಸಲಕರಣೆಗಳು ಅವಲಂಬಿಸುತ್ತವೆ. ಪಾದಯಾತ್ರಿಕರು ಸಾಮಾನ್ಯವಾಗಿ ಒಂದು ಬೆನ್ನಹೊರೆಯಲ್ಲಿ ನೀರು, ಆಹಾರ, ಮತ್ತು ಒಂದು ನಕ್ಷೆಯನ್ನು ಸಾಗಿಸುತ್ತಾರೆ.[] ಒರಟಾದ ಭೂಪ್ರದೇಶದಲ್ಲಿ ನಡೆಯುವಾಗ ತಮ್ಮ ಪಾದಗಳನ್ನು ರಕ್ಷಿಸಿಕೊಳ್ಳಲೆಂದು ಪಾದಯಾತ್ರೆಯ ಬೂಟುಗಳನ್ನು ಪಾದಯಾತ್ರಿಕರು ಅನೇಕವೇಳೆ ಧರಿಸುತ್ತಾರೆ.[] ದಿ ಮೌಂಟನೀರ್ಸ್‌‌‌‌ನಂಥ ಕೆಲವೊಂದು ಹೊರಾಂಗಣ ಸಂಘಟನೆಗಳು ಪಾದಯಾತ್ರೆ ಮಾಡುವಿಕೆಗೆ ಸಂಬಂಧಿಸಿದ ಸಲಕರಣೆಗಳ ಒಂದು ಪಟ್ಟಿಯನ್ನು ಪ್ರಬಲವಾಗಿ ಸಮರ್ಥಿಸುತ್ತವೆ ಅಥವಾ ಶಿಫಾರಸು ಮಾಡುತ್ತವೆ ಹಾಗೂ ಹತ್ತು ಅತ್ಯಗತ್ಯ ಅಂಶಗಳು (ಟೆನ್‌ ಎಸೆನ್ಷಿಯಲ್ಸ್‌) ಎಂಬ ಪಟ್ಟಿಯು ಇದಕ್ಕೆ ನಿದರ್ಶನವಾಗಿದೆ. ಈ ಪಟ್ಟಿಯಲ್ಲಿ ಸೇರಿರುವ ವಸ್ತುಗಳೆಂದರೆ: ದಿಕ್ಸೂಚಿ, ಬಿಸಿಲಿನ ಕನ್ನಡಕಗಳು, ಸೂರ್ಯನ ತಡೆಪರದೆ, ಬಟ್ಟೆಗಳು, ಮಿಣುಕುದೀಪ, ಪ್ರಥಮ ಚಿಕಿತ್ಸೆಯ ಪೆಟ್ಟಿಗೆ, ಬೆಂಕಿ ಹಚ್ಚುವ ಸಾಧನ, ಮತ್ತು ಚಾಕು.[] ಕೀಟ ನಿವಾರಕ ಮತ್ತು ಒಂದು ತುರ್ತು ಕಂಬಳಿಯಂಥ ಹೆಚ್ಚುವರಿ ವಸ್ತುಗಳನ್ನು ಇತರ ಮೂಲಗಳು ಸೂಚಿಸುತ್ತವೆ.[] ಈಗಿನ ಕಾಲದಲ್ಲಿ GPS ದಿಕ್ಕುನಿರ್ದೇಶನ ಸಾಧನವೊಂದು ಒಂದು ಮಹತ್ತರವಾದ ನೆರವನ್ನು ನೀಡುತ್ತದೆ; ಅದರಲ್ಲೂ ವಿಶೇಷವಾಗಿ, ಕಡಿಮೆ ದೃಗ್ಗೋಚರತ್ವವನ್ನು ಹೊಂದಿರುವ ಹವಾಮಾನ ಸ್ಥಿತಿಗತಿಗಳಲ್ಲಿ ಅಥವಾ ಅಜ್ಞಾತ ಭೂಪ್ರದೇಶಗಳಲ್ಲಿ ಪಾದಯಾತ್ರೆ ಮಾಡುವ ಸಂದರ್ಭಗಳಲ್ಲಿ ಈ ಸಾಧನವು ನೆರವಿಗೆ ಬರುತ್ತದೆ.

ಅತಿಹಗುರದ ಬೆನ್ನುಹೊರೆ ಹೊರುವಿಕೆಯ ಪ್ರತಿಪಾದಕರು ಸಮರ್ಥಿಸುವ ಪ್ರಕಾರ, ಬಹು-ದಿನದ ಪಾದಯಾತ್ರೆಗಳಿಗೆ ಸಂಬಂಧಿಸಿದ ಅಗತ್ಯ ವಸ್ತುಗಳ ಸುದೀರ್ಘ ಪಟ್ಟಿಗಳು ಹೊರೆಯ ತೂಕವನ್ನು ಹೆಚ್ಚಿಸುತ್ತವೆ. ಆದ್ದರಿಂದ ಬಳಲಿಕೆ ಮತ್ತು ಗಾಯದ ಸಾಧ್ಯತೆಯು ಕಂಡುಬರಬಹುದು.[] ಸುದೀರ್ಘ ಅಂತರಗಳನ್ನು ಸುಲಭವಾಗಿ ಪಾದಯಾತ್ರೆಯಲ್ಲಿ ಕ್ರಮಿಸುವ ದೃಷ್ಟಿಯಿಂದ ಹೊರೆಯ ತೂಕವನ್ನು ತಗ್ಗಿಸುವುದರ ಗುರಿಯೊಂದನ್ನು ಅವುಗಳ ಬದಲಿಗೆ ಅವರು ಶಿಫಾರಸುಮಾಡುತ್ತಾರೆ. ಸುದೀರ್ಘ-ಅಂತರಗಳ ಪಾದಯಾತ್ರೆಗಳಲ್ಲಿ ಪಾದಯಾತ್ರೆಯ ಬೂಟುಗಳನ್ನು ಬಳಸುವ ಪರಿಪಾಠವು ಅತಿಹಗುರದ ಪಾದಯಾತ್ರಿಕರ ವಲಯದಲ್ಲಿ ವಿವಾದಾತ್ಮಕವೆನಿಸಿದ್ದು, ಅವು ಹೊಂದಿರುವ ತೂಕವೇ ಇದಕ್ಕೆ ಕಾರಣವೆನಿಸಿದೆ.[]

ಪರಿಸರೀಯ ಪ್ರಭಾವ

[ಬದಲಾಯಿಸಿ]

ಪಾದಯಾತ್ರೆಯನ್ನು ಕೈಗೊಳ್ಳಬೇಕಿರುವ ಸನ್ನಿವೇಶಗಳಲ್ಲಿ ಪಾದಯಾತ್ರಿಕರು ಅನೇಕವೇಳೆ ಸುಂದರವಾದ ಸ್ವಾಭಾವಿಕ ಪರಿಸರಗಳನ್ನು ಅರಸುತ್ತಾರೆ.[] ಈ ಪರಿಸರಗಳು ಅನೇಕವೇಳೆ ನಾಜೂಕು ರಚನೆಯನ್ನು ಹೊಂದಿರುತ್ತವೆ: ಪಾದಯಾತ್ರಿಕರು ತಾವು ಅನುಭವಿಸುವ ಪರಿಸರವನ್ನು ಆಕಸ್ಮಿಕವಾಗಿ ನಾಶಮಾಡಬಹುದು. ಓರ್ವ ಏಕೋದ್ದಿಷ್ಟ ವ್ಯಕ್ತಿಯ ವರ್ತನೆಯು ಪರಿಸರದ ಮೇಲೆ ಪ್ರಬಲವಾಗಿ ಪರಿಣಾಮ ಬೀರುವ ಸಾಧ್ಯತೆ ಇಲ್ಲವಾದರೂ, ಒಂದು ಬೃಹತ್‌‌ ಸಂಖ್ಯೆಯಲ್ಲಿರುವ ಪಾದಯಾತ್ರಿಕರ ಸಮೂಹ ಪ್ರಭಾವವು ಪರಿಸರವನ್ನು ಕೆಳಮಟ್ಟಕ್ಕಿಳಿಸಬಲ್ಲದು. ಉದಾಹರಣೆಗೆ, ಬೆಂಕಿಯನ್ನು ಹೊತ್ತಿಸುವುದಕ್ಕಾಗಿ ಉನ್ನತ ಪರ್ವತದ ಪ್ರದೇಶವೊಂದರಲ್ಲಿ ಮರವನ್ನು ಒಟ್ಟುಗೂಡಿಸುವ ಪ್ರವೃತ್ತಿಯನ್ನು ಒಂದು ಸಲ ಅನುಸರಿಸಿದರೆ ಅದು ಅಪಾಯಕಾರಿಯಾಗದಿರಬಹುದು (ಕಾಳ್ಗಿಚ್ಚಿನ ಅಪಾಯವನ್ನು ಹೊರತುಪಡಿಸಿ). ಆದಾಗ್ಯೂ, ವರ್ಷಗಟ್ಟಲೆ ಅವಧಿಯವರೆಗೆ ಮರಗಳನ್ನು ಒಟ್ಟುಗೂಡಿಸುತ್ತಾ ಹೋದಲ್ಲಿ, ಸದರಿ ಉನ್ನತ ಪರ್ವತದ ಪ್ರದೇಶದಲ್ಲಿ ಅಮೂಲ್ಯ ಪೌಷ್ಟಿಕ ದ್ರವ್ಯಗಳು ನಷ್ಟವಾಗಬಹುದು.[] ಸಾಮಾನ್ಯವಾಗಿ ಹೇಳುವುದಾದರೆ, ಉದ್ಯಾನವನಗಳಂಥ ಸಂರಕ್ಷಿತ ಪ್ರದೇಶಗಳು ಪರಿಸರವನ್ನು ರಕ್ಷಿಸುವುದಕ್ಕೆ ಸಂಬಂಧಿಸಿದ ಕಟ್ಟುಪಾಡುಗಳನ್ನು ಯಥೋಚಿತವಾಗಿ ಹೊಂದಿವೆ. ಒಂದುವೇಳೆ ಪಾದಯಾತ್ರಿಕರು ಇಂಥ ಕಟ್ಟುಪಾಡುಗಳನ್ನು ಅನುಸರಿಸಿದ್ದೇ ಆದಲ್ಲಿ, ಅವುಗಳ ಪ್ರಭಾವವನ್ನು ತಗ್ಗಿಸಲು ಸಾಧ್ಯವಿದೆ.[] ಇಂಥ ಕಟ್ಟುಪಾಡುಗಳಲ್ಲಿ ಸೇರಿರುವ ಅಂಶಗಳೆಂದರೆ: ಕಾಡಿನಲ್ಲಿ ಬೆಂಕಿ ಹಾಕುವವುದನ್ನು ನಿಷೇಧಿಸುವುದು, ನೆಲೆಗೊಂಡಿರುವ ಶಿಬಿರ ತಾಣಗಳಲ್ಲಿ ಶಿಬಿರ ಹೂಡುವಿಕೆಗೆ ತಡೆಯೊಡ್ಡುವುದು, ಅಮೇಧ್ಯದ ವಸ್ತುವನ್ನು ವಿಲೇವಾರಿ ಮಾಡುವುದು ಅಥವಾ ರವಾನೆ ಮಾಡುವುದು, ಪ್ರತಿ ಮೈಲಿಯ ಅಂತರಕ್ಕೆ ಪಾದಯಾತ್ರಿಕರ ಸಂಖ್ಯೆಯ ಕುರಿತಾಗಿ ಒಂದು ನಿಯತಾಂಶವನ್ನು ವಿಧಿಸುವುದು.

ಗುರುತನ್ನು ಉಳಿಸದಿರುವ ತತ್ತ್ವವನ್ನು ಅನೇಕ ಪಾದಯಾತ್ರಿಕರು ಸಮರ್ಥಿಸುತ್ತಾರೆ: ಅಂದರೆ, ಹಿಂದಿನ ಪಾದಯಾತ್ರಿಕರ ಹಾಜರಿಯನ್ನು ಭವಿಷ್ಯದ ಪಾದಯಾತ್ರಿಕರು ಪತ್ತೆಹಚ್ಚಲು ಸಾಧ್ಯವಾಗದಂತೆ ಪಾದಯಾತ್ರೆ ಮಾಡುವುದನ್ನು ಇದು ಉಲ್ಲೇಖಿಸುತ್ತದೆ. ಈ ತತ್ತ್ವದ ಪರಿಪಾಲಕರು ಇದರ ಕಟ್ಟುನಿಟ್ಟುಗಳನ್ನು ಪಾಲಿಸುತ್ತಾರೆ; ಪ್ರದೇಶದ ಕಟ್ಟುಪಾಡುಗಳ ಗೈರುಹಾಜರಿಯಲ್ಲಿಯೂ ಇದರ ಅನುಸರಣೆ ಕಂಡುಬರುತ್ತದೆ ಎಂಬುದು ಗಮನಾರ್ಹ ಸಂಗತಿ. ಆಹಾರದ ತ್ಯಾಜ್ಯ, ಆಹಾರದ ಪೊಟ್ಟಣ ಕಟ್ಟುವಿಕೆ, ಮತ್ತು ಸುತ್ತಮುತ್ತಲ ಪರಿಸರಕ್ಕೆ ಸಂಬಂಧಿಸಿದ ಮಾರ್ಪಾಡುಗಳ ಕುರಿತಾಗಿ ವ್ಯವಹರಿಸುವ ಸಂದರ್ಭದಲ್ಲಿ ಈ ಪರಿಪಾಠದ ಅನುಯಾಯಿಗಳು ಕಟ್ಟುನಿಟ್ಟಿನ ಆಚರಣೆಗಳನ್ನು ಅನುಸರಿಸುತ್ತಾರೆ.[]

ಒಂದು ಶೌಚಗುಂಡಿ.

ಅನೇಕವೇಳೆ, ಮಾನವ ತ್ಯಾಜ್ಯವು ಪಾದಯಾತ್ರೆ ಮಾಡುವಿಕೆಯಿಂದ ಕಂಡುಬರುವ ಪರಿಸರೀಯ ಪ್ರಭಾವದ ಒಂದು ಪ್ರಮುಖ ಮೂಲವಾಗಿ ಕಂಡುಬರುತ್ತದೆ.[] ಈ ತ್ಯಾಜ್ಯಗಳು ಜಲಾನಯನ ಪ್ರದೇಶವನ್ನು ಮಾಲಿನ್ಯಗೊಳಿಸಬಲ್ಲವು ಮತ್ತು ಇತರ ಪಾದಯಾತ್ರಿಕರನ್ನು ಅಸ್ವಸ್ಥಗೊಳಿಸಬಲ್ಲವು. ಸ್ಥಳೀಯ ಮಣ್ಣಿನ ಸಂಯೋಜನೆ ಮತ್ತು ಬಳಕೆಯ ನಂತರ ಮುಚ್ಚುವಿಕೆಯನ್ನು ಅವಲಂಬಿಸಿ, ೧೦ರಿಂದ ೨೫ ಸೆಂ.ಮೀ. (೪ರಿಂದ ೧೦ ಇಂಚುಗಳಷ್ಟು) ಆಳವನ್ನು ಹೊಂದಿರುವ 'ಶೌಚಗುಂಡಿಗಳನ್ನು' ಅಗೆಯುವ ಮೂಲಕ ಬ್ಯಾಕ್ಟೀರಿಯಾದಿಂದ ಉಂಟಾಗುವ ಮಾಲಿನ್ಯವನ್ನು ತಪ್ಪಿಸಬಹುದು. ನೀರಿನ ಮೂಲಗಳು ಮತ್ತು ಕಾಲುದಾರಿಗಳಿಂದ ಕನಿಷ್ಟಪಕ್ಷ ೬೦ ಮೀಟರ್‌ನಷ್ಟು (೨೦೦ ಅಡಿಗಳು) ದೂರದಲ್ಲಿ ಒಂದುವೇಳೆ ಈ ಶೌಚಗುಂಡಿಗಳನ್ನು ಅಗೆದದ್ದೇ ಆದಲ್ಲಿ, ಮಾಲಿನ್ಯದ ಅಪಾಯವು ತಗ್ಗಿಸಲ್ಪಡುತ್ತದೆ.

ಅಪರೂಪದ ಅಥವಾ ಅಳಿವಿನಂಚಿನಲ್ಲಿರುವ ಪ್ರಾಣಿ ಜಾತಿಗಳನ್ನು ನೋಡುವ ಸದವಕಾಶವು ಕೆಲವೊಮ್ಮೆ ಪಾದಯಾತ್ರಿಕರಿಗೆ ಪ್ರಾಪ್ತವಾಗುತ್ತದೆ. ಆದಾಗ್ಯೂ, ಕೆಲವೊಂದು ಪ್ರಾಣಿ ಜಾತಿಗಳು (ಮಾರ್ಟಿನ್‌‌‌‌ಗಳು ಅಥವಾ ದೊಡ್ಡಕೊಂಬಿನ ಕುರಿಗಳಂಥ ಪ್ರಾಣಿಗಳು) ಮಾನವರ ಹಾಜರಿಗೆ ಅತ್ಯಂತ ಸಂವೇದನಾಶೀಲವಾಗಿರುತ್ತವೆ; ಅದರಲ್ಲೂ ವಿಶೇಷವಾಗಿ ಕೂಡುವಿಕೆಯ ಋತುವಿನ ಆಸುಪಾಸಿನಲ್ಲಿ ಈ ಪ್ರವೃತ್ತಿಯು ಹೆಚ್ಚಾಗಿ ಕಂಡುಬರುತ್ತದೆ. ವ್ಯತಿರಿಕ್ತ ಪ್ರಭಾವವನ್ನು ತಡೆಗಟ್ಟುವ ಸಲುವಾಗಿ, ಅಳಿವಿನಂಚಿನಲ್ಲಿರುವ ಪ್ರಾಣಿ ಜಾತಿಗಳ ಅಭ್ಯಾಸಗಳು ಮತ್ತು ಆವಾಸಸ್ಥಾನಗಳನ್ನು ಪಾದಯಾತ್ರಿಕರು ತಿಳಿದುಕೊಳ್ಳುವುದು ಅವಶ್ಯಕವಾಗಿರುತ್ತದೆ.

ಓರ್ವ ಪ್ರತ್ಯೇಕ ಪಾದಯಾತ್ರಿಕನು ಪರಿಸರ ವ್ಯವಸ್ಥೆಯೊಂದರ ಮೇಲೆ ಬೃಹತ್‌‌ ಪ್ರಭಾವವೊಂದನ್ನು ಉಂಟುಮಾಡುವ ಸನ್ನಿವೇಶವೊಂದಿದೆ: ಅದೇ ಒಂದು ಕಾಳ್ಗಿಚ್ಚನ್ನು ಪ್ರಮಾದವಶಾತ್‌ ಉಂಟುಮಾಡುವುದು. ಉದಾಹರಣೆಗೆ, ೨೦೦೫ರಲ್ಲಿ, ಬೆನ್ನಹೊರೆ ಹೊತ್ತು ಪಾದಯಾತ್ರೆಗೆ ಹೊರಟಿದ್ದ ಓರ್ವ ಝೆಕ್‌ ನಿವಾಸಿಯು, ಅಕ್ರಮವಾದ ಅನಿಲ-ಚಾಲಿತ ಒಯ್ಯಬಹುದಾದ ಒಲೆ‌‌‌ಯೊಂದನ್ನು ಹೊಡೆದುರುಳಿಸುವ ಮೂಲಕ ಚಿಲಿಯಲ್ಲಿನ ಟೋರೆಸ್‌ ಡೆಲ್‌ ಪೈನೆ ರಾಷ್ಟ್ರೀಯ ಉದ್ಯಾನವನದ ೭%ನಷ್ಟು ಭಾಗವನ್ನು ಸುಟ್ಟುಹಾಕಿದ.[] ಪ್ರದೇಶದ ಕಟ್ಟುಪಾಡುಗಳನ್ನು ಪಾಲಿಸುವ ಮತ್ತು ನಿಯೋಜಿತ ಪ್ರದೇಶಗಳಲ್ಲಿ (ಅಥವಾ ಒಂದುವೇಳೆ ಅಗತ್ಯವಿದ್ದರೆ ಬರಿಯ ನೆಲದ ಮೇಲೆ) ಅಡುಗೆಯ ಸಾಧನಗಳನ್ನು ನೆಲೆಗೊಳಿಸುವ ಪರಿಪಾಠಗಳಿಂದ ಕಾಳ್ಗಿಚ್ಚಿನ ಅಪಾಯವನ್ನು ತಗ್ಗಿಸಬಹುದು.

ಪಾದಯಾತ್ರೆಯ ಶಿಷ್ಟಾಚಾರ

[ಬದಲಾಯಿಸಿ]
ಚಿತ್ರ:Trek.JPG
ಒಂದು ಗುಂಪಿನಲ್ಲಿ ಮಾಡುವ ಪಾದಯಾತ್ರೆಯು ಭದ್ರತೆಯನ್ನು ಹೆಚ್ಚಿಸುತ್ತದೆಯಾದರೂ, ಪಾದಯಾತ್ರಿಕರು ವಿಭಿನ್ನ ದರಗಳಲ್ಲಿ ಪಾದಯಾತ್ರೆ ಮಾಡಲು ಬಯಸಬಹುದು.

ಪಾದಯಾತ್ರೆಯು ಒಂದು ವಿನೋದ-ವಿಹಾರದ ಅನುಭವವಾಗಿರುವುದರಿಂದ, ಅದು ಆಹ್ಲಾದಕರವಾಗಿರಬೇಕೆಂದು ಪಾದಯಾತ್ರಿಕರು ನಿರೀಕ್ಷಿಸುತ್ತಾರೆ. ಪಾದಯಾತ್ರಿಕರು ಕೆಲವೊಮ್ಮೆ ಪರಸ್ಪರರ ಸುಖಾನುಭವದಲ್ಲಿ, ಅಥವಾ ಆ ಪ್ರದೇಶದ ಇತರ ಬಳಕೆದಾರರ ಸುಖಾನುಭವದಲ್ಲಿ ಹಸ್ತಕ್ಷೇಪವನ್ನು ಮಾಡಬಹುದು. ಇಂಥ ಹಸ್ತಕ್ಷೇಪಗಳನ್ನು ತಗ್ಗಿಸುವ ಸಲುವಾಗಿ ಪಾದಯಾತ್ರೆಯ ಶಿಷ್ಟಾಚಾರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಉದಾಹರಣೆಗೆ:

  • ಕಡಿದಾದ ಕಾಲುದಾರಿಯೊಂದರ ಮೇಲೆ ಪಾದಯಾತ್ರಿಕರ ಎರಡು ಗುಂಪುಗಳು ಸಂಧಿಸಿದಾಗ, ಕಾಲುದಾರಿಯ ಬಳಕೆಗೆ ಸಂಬಂಧಿಸಿದಂತೆ ಅಲ್ಲಿ ಕಿತ್ತಾಟ ಕಂಡುಬರಬಹುದು. ಆದ್ದರಿಂದ ಘರ್ಷಣೆಯನ್ನು ತಪ್ಪಿಸುವ ಸಲುವಾಗಿ ಕೆಲವೊಂದು ಪ್ರದೇಶಗಳಲ್ಲಿ ಒಂದು ರಿವಾಜನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಅನುಸಾರ ಬೆಟ್ಟದ ಏರುಭಾಗ ದಲ್ಲಿ ಚಲಿಸುತ್ತಿರುವ ಗುಂಪು ಮಾರ್ಗದ ಹಕ್ಕನ್ನು ಹೊಂದಿರುತ್ತದೆ.[೧೦]
  • ಓರ್ವನ ಸ್ವಾಭಾವಿಕ ಗತಿಗಿಂತ ಸಾಕಷ್ಟು ವೇಗವಾಗಿ ಅಥವಾ ನಿಧಾನವಾಗಿ ಪಾದಯಾತ್ರೆ ನಡೆಸುವಂತೆ ಒತ್ತಾಯಕ್ಕೆ ಒಳಗಾಗುವುದು ಕಿರಿಕಿರಿಗೊಳಿಸುವ ಪ್ರವೃತ್ತಿಯೆನಿಸಬಹುದು. ಇದು ಏಕಪ್ರಕಾರವಾಗಿ ವೇಗವನ್ನು ಕಾಯ್ದುಕೊಂಡುಹೋಗುವುದಕ್ಕೆ ಅಡಚಣೆಯನ್ನು ಉಂಟುಮಾಡಬಹುದು. ಹೆಚ್ಚು ಗಂಭೀರವಾಗಿ ಹೇಳುವುದಾದರೆ, ಅಸ್ವಾಭಾವಿಕವಾಗಿ ವೇಗದಲ್ಲಿ ಮಾಡುವ ನಡಿಗೆಯು ಬಳಲಿಕೆ ಮತ್ತು ದಣಿವನ್ನು ನಾಟಕೀಯವಾಗಿ ಹೆಚ್ಚಿಸುತ್ತದೆ, ಹಾಗೂ ಇದು ಗಾಯವನ್ನು ಉಂಟುಮಾಡಬಹುದು. ವೇಗದ ಮತ್ತು ನಿಧಾನಗತಿಯ ಪಾದಯಾತ್ರಿಕರ ದೆಸೆಯಿಂದಾಗಿ ಒಂದುವೇಳೆ ಗುಂಫೊಂದು ಬೇರ್ಪಟ್ಟರೆ, ನಿಧಾನಗತಿಯ ಪಾದಯಾತ್ರಿಕರು ಹಿಂದೆಯೇ ಉಳಿದುಕೊಳ್ಳಬಹುದು ಅಥವಾ ಕಳೆದುಹೋಗಬಹುದು. ಆದ್ದರಿಂದ ಅತಿ ನಿಧಾನದ ಪಾದಯಾತ್ರಿಕರನ್ನು ಅಗ್ರಪಂಕ್ತಿಯಲ್ಲಿ ಪಾದಯಾತ್ರೆ ಮಾಡುವಂತೆ ಉತ್ತೇಜಿಸುವುದು ಹಾಗೂ ಆ ವೇಗಕ್ಕೆ ಪ್ರತಿಯೊಬ್ಬರನ್ನೂ ಹೊಂದಿಸುವುದು ಒಂದು ಸಾಮಾನ್ಯ ರಿವಾಜು ಎನಿಸಿಕೊಳ್ಳುತ್ತದೆ. ಗುಂಪಿನಲ್ಲಿರುವ ಪ್ರತಿಯೊಬ್ಬರೂ ಸುರಕ್ಷಿತವಾಗಿದ್ದಾರೆ ಮತ್ತು ಯಾರೊಬ್ಬರೂ ದಾರಿತಪ್ಪಿಲ್ಲ ಎಂಬುದನ್ನು ಖಾತ್ರಿಪಡಿಸುವ ಸಲುವಾಗಿ, ಒಂದು ಸರದಿಪಟ್ಟಿಯ ರೀತಿಯಲ್ಲಿ ಅನುಭವಸ್ಥ ಪಾದಯಾತ್ರಿಕರು ಹಿಂಭಾಗದಲ್ಲಿ ವೇಗವಾಗಿ ಸಾಗುವುದು ಮತ್ತೊಂದು ರಿವಾಜು ಎನಿಸಿಕೊಂಡಿದೆ.
  • ಪಾದಯಾತ್ರಿಕರು ಸಾಮಾನ್ಯವಾಗಿ ತಾವು ಸಾಗುತ್ತಿರುವ ಸ್ವಾಭಾವಿಕ ಪರಿಸರಗಳ ಶಾಂತತೆಯನ್ನು ಅನುಭವಿಸುತ್ತಾರೆ. ಕಿರಿಚುವಿಕೆ ಅಥವಾ ಜೋರಾದ ಸಂಭಾಷಣೆ, ಅಥವಾ ಮೊಬೈಲ್‌ ಫೋನುಗಳ ಬಳಕೆಯಂಥ ಜೋರಾದ ಶಬ್ದಗಳು ಈ ಸುಖಾನುಭವಕ್ಕೆ ಅಡಚಣೆ ಒಡ್ಡುತ್ತವೆ.[೧೦]

ಅವಘಡಗಳು

[ಬದಲಾಯಿಸಿ]
ಕೆನಡಾದದಲ್ಲಿನ ಒಂದು ಪಾದಯಾತ್ರೆಯ ಕಾಲುದಾರಿಯ ಗುರುತುಕಾರಕ.

ಪಾದಯಾತ್ರೆ ಮಾಡುವಿಕೆಯು ವೈಯಕ್ತಿಕ ಭದ್ರತೆಗೆ ಬೆದರಿಕೆಗಳನ್ನು ಉಂಟುಮಾಡಬಹುದು. ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಕಂಡುಬರುವ ಅಪಾಯಕಾರಿ ಸಂದರ್ಭಗಳು ಮತ್ತು/ಅಥವಾ ನಿರ್ದಿಷ್ಟ ಆಕಸ್ಮಿಕಗಳು ಅಥವಾ ಅಸ್ವಸ್ಥತೆಗಳು ಇಂಥ ಬೆದರಿಕೆಗಳಲ್ಲಿ ಸೇರಿವೆ. ಅತಿಸಾರವು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಸುದೀರ್ಘ-ಅಂತರದ ಪಾದಯಾತ್ರಿಕರನ್ನು ಪೀಡಿಸುವ ಅತ್ಯಂತ ಸಾಮಾನ್ಯ ಅಸ್ವಸ್ಥತೆಗಳ ಪೈಕಿ ಒಂದೆನಿಸಿದೆ.[೧೧] (ನೋಡಿ: ಕಾಡುಪ್ರದೇಶದಲ್ಲಿ ಕಂಡುಬಂದ ಅತಿಸಾರ.)

ಕಾಲುದಾರಿಯ ಬೆಳಗಿಸುವಿಕೆಯಲ್ಲಿ ಬಳಸಲಾಗುವ ಸಂಕೇತಗಳು.

ಪಾದಯಾತ್ರೆಯ ಅವಧಿಯಲ್ಲಿನ ಅಪಾಯಕಾರಿ ಸಂದರ್ಭಗಳಲ್ಲಿ ಇವು ಸೇರಿವೆ: ಹಾದಿ ತಪ್ಪುವಿಕೆ, ಕಟುವಾದ ಹವಾಮಾನ, ಅಪಾಯಕರ ಭೂಪ್ರದೇಶ, ಅಥವಾ ಮುಂಚಿತವಾಗಿದ್ದ ಔಷಧ ಚಿಕಿತ್ಸೆಯ ಅಗತ್ಯವಿರುವ ರೋಗಸ್ಥಿತಿಗಳು ಉಲ್ಬಣವಾಗುವುದು. ನಿರ್ದಿಷ್ಟ ಆಕಸ್ಮಿಕಗಳಲ್ಲಿ ಇವು ಸೇರಿವೆ: ಚಯಾಪಚಯಿ ಅಸಮತೋಲನಗಳು (ನಿರ್ಜಲೀಕರಣ ಅಥವಾ ಲಘೂಷ್ಣತೆಯಂಥವು), ಸ್ಥಳೀಕ ಪೆಟ್ಟುಗಳು (ಹಿಮಗಡಿತ ಅಥವಾ ಬಿಸಿಲುಕಂದು ರೀತಿಯವು), ಪ್ರಾಣಿಗಳಿಂದ ಆಗುವ ದಾಳಿಗಳು, ಅಥವಾ ಆಂತರಿಕ ಪೆಟ್ಟುಗಳು (ಕಣಕಾಲು ಉಳುಕಿನ ರೀತಿಯವು).[೧೨]

ಮಾನವರಿಂದ ಆಗುವ ದಾಳಿಗಳೂ ಸಹ ಒಂದು ವಾಸ್ತವಾಂಶವೆನಿಸಿಕೊಂಡಿವೆ. ತಡೆಗಟ್ಟುವಿಕೆ, ಆತ್ಮರಕ್ಷಣೆ ಮತ್ತು ಪಲಾಯನಗಳನ್ನು ಉತ್ತೇಜಿಸುವಂಥ ಸಂಘಟನೆಗಳು ಅಸ್ತಿತ್ವದಲ್ಲಿವೆ.[which?] ಸೆಲ್‌ ಫೋನ್‌ ಮತ್ತು GPS ಸಾಧನಗಳನ್ನು ಕೆಲವೊಂದು ಸಂಘಟನೆಗಳು ಬಳಸುತ್ತವೆ.

ಹಲವಾರು ದೇಶಗಳಲ್ಲಿ ಸೀಮಾರೇಖೆಗಳು ಕಳಪೆಯಾಗಿ ಗುರುತಿಸಲ್ಪಟ್ಟಿರಬಹುದು. ಅಂತರರಾಷ್ಟ್ರೀಯ ಸೀಮಾರೇಖೆಗಳು ಎಲ್ಲಿ ನೆಲೆಗೊಂಡಿವೆ ಎಂಬುದನ್ನು ಅರಿಯುವುದು ಒಂದು ಉತ್ತಮ ಪರಿಪಾಠವೆನಿಸಿಕೊಳ್ಳುತ್ತದೆ. ಉದಾಹರಣೆಗೆ, ೨೦೦೯ರಲ್ಲಿ ಅಮೆರಿಕಾದ ಮೂವರು ಪಾದಯಾತ್ರಿಕರನ್ನು ಇರಾನ್‌ ಸೆರೆಹಿಡಿಯಿತು; ಪಾದಯಾತ್ರೆ ಮಾಡುವಾಗ ಇರಾನ್‌-ಇರಾಕ್‌ ಸೀಮಾರೇಖೆಯನ್ನು ದಾಟಿದ್ದೇ ಅವರು ಮಾಡಿದ ಅಪರಾಧವಾಗಿತ್ತು.[೧೩] ಫಿನ್ಲೆಂಡ್‌ನಂಥ ಅನೇಕ ರಾಷ್ಟ್ರಗಳು, ಸೀಮಾರೇಖೆಗಳನ್ನು ದಾಟಿಕೊಂಡು ಪಾದಯಾತ್ರೆ ಮಾಡುವುದಕ್ಕೆ ಅನ್ವಯಿಸುವ ನಿರ್ದಿಷ್ಟ ನಿಯಮಗಳನ್ನು ಹೊಂದಿವೆ.[೧೪]

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಪಾದಯಾತ್ರೆ ಮಾಡುವುದಕ್ಕೆ ಸಂಬಂಧಿಸಿದ ಸಲಕರಣೆಗಳು
  • ಸುದೀರ್ಘ-ಅಂತರದ ಕಾಲುಹಾದಿಗಳ ಪಟ್ಟಿ
  • ಯುನೈಟೆಡ್‌ ಕಿಂಗ್‌ಡಂನಲ್ಲಿನ ನಡಿಗೆಯ ಪರಿಪಾಠ
  • ಸ್ಕ್ಯಾಂಡಿನೇವಿಯದಲ್ಲಿನ ನಡಿಗೆಯ ಪರಿಪಾಠ
  • ಈಜಿನ ಮೂಲಕ ಯಾತ್ರೆ ಮಾಡುವಿಕೆ
  • ಸಜ್ಜುಸಾಮಗ್ರಿಯ ಹತ್ತು ಅತ್ಯಗತ್ಯ ವಸ್ತುಗಳು
  • ಚಾರಣ
  • ವಿಹಾರಿಗಳು

ಬಗೆಗಳು

[ಬದಲಾಯಿಸಿ]
  • ಬೆನ್ನುಹೊರೆ ಹೊರುವಿಕೆ – ಇದಕ್ಕೆ ಚಾರಣ ಮಾಡುವಿಕೆ ಎಂಬ ಹೆಸರೂ ಇದ್ದು, ಇದು ಬಹು-ದಿನದ ಅವಧಿಯ, ಅನೇಕವೇಳೆ ಪ್ರಯಾಸಕರವಾಗಿರುವ ಒಂದು ಪಾದಯಾತ್ರೆಯಾಗಿದೆ; ವಿಶೇಷವಾಗಿ ಪರ್ವತಮಯ ಪ್ರದೇಶಗಳಲ್ಲಿ ಇದು ಕಂಡುಬರುತ್ತದೆ.
  • ಶ್ವಾನ ಪಾದಯಾತ್ರೆ ಮಾಡುವಿಕೆ – ಇದು ಶ್ವಾನಗಳೊಂದಿಗೆ ಪಾದಯಾತ್ರೆ ಮಾಡುವ ಬಗೆಯಾಗಿದೆ.
  • ಮುಕ್ತಪಾದಯಾತ್ರೆ ಮಾಡುವಿಕೆ – ವಿವಸ್ತ್ರರಾಗಿದ್ದುಕೊಂಡು ಮಾಡುವ ಪಾದಯಾತ್ರೆ ಇದಾಗಿದೆ, ಮತ್ತು ಇದು ಕಾಲುದಾರಿಯಿಂದ ಆಚೆಗೆ ಮಾಡುವ ಪಾದಯಾತ್ರೆ ಎನಿಸಿಕೊಂಡಿದೆ.
  • ಬೆಟ್ಟನಡಿಗೆ – ಇದು ಬೆಟ್ಟಗಳಲ್ಲಿ ಅಥವಾ ಪರ್ವತಗಳಲ್ಲಿ ಮಾಡುವ ಪಾದಯಾತ್ರೆಗೆ ಸಂಬಂಧಿಸಿದ ಒಂದು ಬ್ರಿಟಿಷ್‌ ಪರಿಭಾಷೆಯಾಗಿದೆ.
  • ನಾರ್ಡಿಕ್‌ ಶೈಲಿಯ ನಡಿಗೆ – ಇದು ಕೋಲುಗಳ ಜೊತೆಗೆ ಕೈಗೊಳ್ಳಲಾಗುವ ಒಂದು ದಾರ್ಢ್ಯತೆಯ ನಡಿಗೆ.
  • ಲಾಮ ಪಾದಯಾತ್ರೆ ಮಾಡುವಿಕೆ
  • ಕೈಕಾಲುಗಳನ್ನು ಊರಿಕೊಂಡು ಸಾಗುವಿಕೆ – "ತಾಂತ್ರಿಕವಲ್ಲದ" ಬಂಡೆ ಹತ್ತುವಿಕೆ ಅಥವಾ ಪರ್ವತಾರೋಹಣ ಅಥವಾ "ತಾಂತ್ರಿಕವಾಗಿರುವ" ಪಾದಯಾತ್ರೆ ಮಾಡುವಿಕೆ.
  • ಆದ್ಯಂತದ-ಪಾದಯಾತ್ರೆ ಮಾಡುವಿಕೆ – ಇದು ಒಂದು ನಿರಂತರ ಪಾದಯಾತ್ರೆಯಲ್ಲಿ ತುದಿಯಿಂದ ತುದಿಯವರೆಗಿನ ಒಂದು ಕಾಲುದಾರಿಯಲ್ಲಿ ಮಾಡುವ ಪಾದಯಾತ್ರೆಯಾಗಿದೆ (ಒಂದು ಕಾಲುದಾರಿಯನ್ನು ತುದಿಯಿಂದ ತುದಿಗೆ ಮುಟ್ಟಿಸಬಹುದು, ಆದರೆ ಅದು ವಿಭಾಗೀಯ ಪಾದಯಾತ್ರೆಗಳ ರೂಪದಲ್ಲಿರುತ್ತದೆ).
  • ಅತಿಹಗುರದ ಬೆನ್ನುಹೊರೆ ಹೊರುವಿಕೆ
  • ಜಲಪಾತದ ಯಾತ್ರೆ – ಇದು ಜಲಪಾತ ಬೇಟೆ ಎಂದೂ ಹೆಸರಾಗಿದ್ದು, ಜಲಪಾತಗಳನ್ನು ಕಂಡುಕೊಳ್ಳುವ ಮತ್ತು ಅನುಭವಿಸುವ ಉದ್ದೇಶದೊಂದಿಗೆ ಮಾಡುವ ಜಲಪಾತ ಪಾದಯಾತ್ರೆಯಾಗಿದೆ.
  • ದಿನದ ಅವಧಿಯಲ್ಲಿನ ಪಾದಯಾತ್ರೆ.
  • ಹೆಲಿ ಪಾದಯಾತ್ರೆ – ಅನ್ಯಥಾ ಪ್ರವೇಶಿಸಲಾಗದ ದೂರದ ಪ್ರದೇಶಗಳನ್ನು ಸಂಪರ್ಕಿಸಲು ಹೆಲಿಕಾಪ್ಟರುಗಳನ್ನು ಬಳಸಿಕೊಂಡು ಮಾಡುವ ಪಾದಯಾತ್ರೆ ಇದಾಗಿದೆ.
  • ಪೊದೆ ಸವರುವಿಕೆ – ಇದು ಪಾದಯಾತ್ರಿಕರು ಮತ್ತು ಹಳ್ಳಿಗಾಡಿನ ಮಾರ್ಗದ ಸ್ಕೀ ಜಾರಾಟಗಾರರಿಗೆ ಸಂಬಂಧಿಸಿದ ಉತ್ತರ ಅಮೆರಿಕಾದ ಒಂದು ಪರಿಭಾಷೆ; ಈ ಸಾಹಸಿಗರು ತಮ್ಮದೇ ಆದ ಕಾಲುದಾರಿಗಳನ್ನು ರೂಪಿಸಿಕೊಳ್ಳುತ್ತಾರೆ ಎಂಬುದು ವಿಶೇಷ.

ಕಾಲುದಾರಿಗಳು

[ಬದಲಾಯಿಸಿ]
  • ಅಪಲೇಚಿಯನ್‌ ಕಾಲುದಾರಿ
  • ಕಾಂಟಿನೆಂಟಲ್‌ ಡಿವೈಡ್‌ ಕಾಲುದಾರಿ
  • ಪೆಸಿಫಿಕ್‌ ಕ್ರೆಸ್ಟ್‌‌ ಕಾಲುದಾರಿ
  • ನಾರ್ತ್‌ ಕಂಟ್ರಿ ಕಾಲುದಾರಿ

ಸಂಬಂಧಿತ ಚಟುವಟಿಕೆಗಳು

[ಬದಲಾಯಿಸಿ]
  • ಹಳ್ಳಿಗಾಡಿನ ಮೂಲಕ ಹಿಮಜಾರಾಟ – ಇದು ಚಳಿಗಾಲದ ಅವಧಿಯಲ್ಲಿ ಹಿಮಾಚ್ಛಾದಿತ ನೆಲಗಳಲ್ಲಿ ಮಾಡಲಾಗುವ ಪಾದಯಾತ್ರೆಗೆ ಅನೇಕವೇಳೆ ಸಮಾನವಾಗಿರುತ್ತದೆ.
  • ಬೆಟ್ಟಗುಡ್ಡಗಳಲ್ಲಿ ಓಡುವಿಕೆ – ಇದು ಒರಟಾದ ಪರ್ವತಮಯ ನೆಲದ ಮೇಲೆ ಓಡುವಂಥ ಒಂದು ಇಂಗ್ಲಿಷ್‌ ಮತ್ತು ವೆಲ್ಷ್‌‌ ಕ್ರೀಡೆಯಾಗಿದ್ದು, ಅನೇಕವೇಳೆ ಕಾಲುದಾರಿಯಿಂದ ಆಚೆಗೆ ನಡೆಯುತ್ತದೆ. ಸ್ಕಾಟ್ಲೆಂಡ್‌ ಮತ್ತು ಐರ್ಲೆಂಡ್‌ಗಳಲ್ಲಿ ಇದನ್ನು ಬೆಟ್ಟದಲ್ಲಿನ ಓಡುವಿಕೆ ಎಂದು ಕರೆಯುತ್ತಾರೆ. ಜನಪ್ರಿಯವಾಗಿರುವ ಸಾಗರೋತ್ತರದ ಪರ್ವತದಲ್ಲಿನ ಓಡುವಿಕೆಯೊಂದಿಗೆ ಇದು ಹೋಲಿಕೆಗಳನ್ನು ಹೊಂದಿದ್ದರೂ, ಅನೇಕ ವ್ಯತ್ಯಾಸಗಳನ್ನೂ ಕಾಣಬಹುದು.
  • ಜಿಯೋಕ್ಯಾಚಿಂಗ್‌ – ಇದು ನಿಧಿ-ಬೇಟೆಯ ಒಂದು ಹೊರಾಂಗಣ ಆಟವಾಗಿದೆ.
  • ಓರಿಯೆಂಟೀರಿಂಗ್‌ – ಇದು ಒಂದು ನಕ್ಷೆ ಮತ್ತು ದಿಕ್ಸೂಚಿಯೊಂದಿಗಿನ ದಿಕ್ಕುನಿರ್ದೇಶನವನ್ನು ಒಳಗೊಂಡಿರುವ ಒಂದು ಓಡುವ ಕ್ರೀಡೆಯಾಗಿದೆ.
  • ನದಿ ಚಾರಣ ಮಾಡುವಿಕೆ
  • ರೋಗೇನಿಂಗ್‌ – ಇದು ಹಳ್ಳಿಗಾಡಿನ ಮಾರ್ಗದ ದೀರ್ಘ ಅಂತರದ ಯಾನದ ಒಂದು ಕ್ರೀಡೆಯಾಗಿದೆ.
  • ಕಾಲುದಾರಿ ಬೆಳಗಿಸುವಿಕೆ

ಉಲ್ಲೇಖಗಳು‌‌

[ಬದಲಾಯಿಸಿ]
  1. McKinney, John (2009-03-22). "For Good Health: Take a Hike!". Miller-McCune.
  2. ೨.೦ ೨.೧ ೨.೨ ೨.೩ ೨.೪ Keller, Kristin T. (2007). Hiking. Capstone Press. ISBN 0736809163.
  3. Mueser, Roland (1997). Long-Distance Hiking: Lessons from the Appalachian Trail. McGraw-Hill. ISBN 0070444587.
  4. Mountaineering: The Freedom of the Hills (6th ed.). The Mountaineers. 1997. pp. 35–40. ISBN 0-89886-427-5.
  5. "Ten Essential Groups Article". Texas Sierra Club. Archived from the original on 2011-05-07. Retrieved 2011-01-19.
  6. ೬.೦ ೬.೧ Jardine, Ray (2000). "Beyond Backpacking: Ray Jardine's Guide to Lightweight Hiking". AdventureLore Press. {{cite web}}: Missing or empty |url= (help)
  7. ೭.೦ ೭.೧ ೭.೨ Cole, David. "Impacts of Hiking and Camping on Soils and Vegetation: A Review" (PDF). Archived from the original (PDF) on 2010-07-06. {{cite journal}}: Cite has empty unknown parameter: |coauthors= (help); Cite journal requires |journal= (help) ಉಲ್ಲೇಖ ದೋಷ: Invalid <ref> tag; name "impact" defined multiple times with different content
  8. "Principles". Leave No Trace. Archived from the original on 2011-01-28. Retrieved 2011-01-19.
  9. "Chilean park recovering from fire". Daily Mail. 2005-05-25.
  10. ೧೦.೦ ೧೦.೧ Devaughn, Melissa (1997). "Trail Etiquette". Backpacker Magazine. Active Interest Media, Inc. p. 40. ISSN 0277867X. Retrieved 22 January 2011. {{cite web}}: Unknown parameter |month= ignored (help)
  11. Boulware, D.R. (2003). "Medical Risks of Wilderness Hiking". American Journal of Medicine. 114 (4): 288–93. doi:10.1016/S0002-9343(02)01494-8. PMID 12681456. {{cite journal}}: Unknown parameter |coauthors= ignored (|author= suggested) (help)
  12. Goldenberg, Marni; Martin, Bruce (2007). Hiking and Backpacking. Wilderness Education Association. p. 104. ISBN 0736068015.
  13. Gordon, Michael R.; Lehren, Andrew W. (2010-10-23). "Iran Seized U.S. Hikers in Iraq, U.S. Report Asserts". New York Times.
  14. "International Borders". Hiking in Finland. Metsähallitus. Archived from the original on 2011-05-18. Retrieved 2011-01-19.


ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]