ಎಸ್ಸಾರ್ ಉದ್ಯಮ ಸಮೂಹ
ಸಂಸ್ಥೆಯ ಪ್ರಕಾರ | Public (ಬಿಎಸ್‌ಇ: 500630) (ಬಿಎಸ್‌ಇ: 500134) |
---|---|
ಸ್ಥಾಪನೆ | 1969 |
ಸಂಸ್ಥಾಪಕ(ರು) | Shri.Shashi Ruia Shri.Ravi Ruia |
ಮುಖ್ಯ ಕಾರ್ಯಾಲಯ | Essar House, 11 Keshavrao Khadye Marg, Mahalaxmi, ಮುಂಬೈ, India |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Shashi Ruia (Chairman) Ravi Ruia (Vice-Chairman) Prashant Ruia Director Anshuman Ruia Director Smiti Kanodia Director Rewant Ruia Director |
ಉದ್ಯಮ | Conglomerate |
ಉತ್ಪನ್ನ | Steel Oil & Gas Power Mobile networks Construction Shipping BPO |
ಆದಾಯ | US$ 15 billion (2009) |
ಉದ್ಯೋಗಿಗಳು | 70,000 (2009) |
ಉಪಸಂಸ್ಥೆಗಳು | Essar Steel,Essar Steel Algoma, Essar Oil,Essar Shipping,Essar Hypermart,The MobileStore |
ಜಾಲತಾಣ | Essar.com |
ಎಸ್ಸಾರ್ ಉದ್ಯಮ ಸಮೂಹ ವು (ಬಿಎಸ್‌ಇ: 500630, ಬಿಎಸ್‌ಇ: 500134) ಉಕ್ಕು, ಇಂಧನ, ವಿದ್ಯುಚ್ಛಕ್ತಿ, ಸಂಪರ್ಕಮಾಧ್ಯಮ, ಸಾಗರಯಾನದ ಬಂದರುಗಳು & ವ್ಯವಸ್ಥಾಪನ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಅಷ್ಟೇಅಲ್ಲದೇ ನಿರ್ಮಾಣ ಕ್ಷೇತ್ರದಲ್ಲಿಯೂ ಚಟುವಟಿಕೆಯಲ್ಲಿರುವ ಭಾರತದ ಮುಂಬಯಿ ಮಹಾನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಹುರಾಷ್ಟ್ರೀಯ ಸಂಘಟಿತ ಉದ್ಯಮಗಳ ಬೃಹತ್ ಸಂಸ್ಥೆಯಾಗಿದೆ. ಈ ಉದ್ಯಮ ಸಮೂಹದ ವಾರ್ಷಿಕ ಆದಾಯವು FY08-09ರಲ್ಲಿ USD 15 ಶತಕೋಟಿಗಳಿಗೂ ಮೀರಿತ್ತು.
ಎಸ್ಸಾರ್ ಕಂಪೆನಿಯು 1969ರಲ್ಲಿ ಒಂದು ಕಟ್ಟಡ ನಿರ್ಮಾಣ ಕಂಪೆನಿಯಾಗಿ ಆರಂಭಗೊಂಡಿತು, ತದನಂತರ ತಯಾರಿಕೆ, ಸೇವೆಗಳು ಮತ್ತು ಚಿಲ್ಲರೆ ವ್ಯವಹಾರಗಳಂತಹಾ ವೈವಿಧ್ಯಮಯ ಕ್ಷೇತ್ರಗಳಿಗೂ ದಾಪುಗಾಲಿಟ್ಟಿತು. ಎಸ್ಸಾರ್ ಉದ್ಯಮ ಸಮೂಹದ ಅಧ್ಯಕ್ಷರಾದ Shri.ಶಶಿ ರೂಯಿಯಾ, ಮತ್ತು ಎಸ್ಸಾರ್ ಉದ್ಯಮ ಸಮೂಹದ ಉಪಾಧ್ಯಕ್ಷರಾದ Shri.ರವಿ ರೂಯಿಯಾರವರುಗಳಿಂದ ಎಸ್ಸಾರ್ ಕಂಪೆನಿಯು ನಿರ್ವಹಿಸಲ್ಪಡುತ್ತಿದೆ.[೧]
ಉಕ್ಕು
[ಬದಲಾಯಿಸಿ]ಎಸ್ಸಾರ್ ಸ್ಟೀಲ್ ಎಂಬುದು ಒಂದು ಜಾಗತಿಕ ಉಕ್ಕು ಕಂಪೆನಿಯಾಗಿದ್ದು ತೀವ್ರತರದ ಉಕ್ಕು ಬೇಡಿಕೆಯಿರುವ ಏಷ್ಯಾ ಹಾಗೂ ಉತ್ತರ ಅಮೇರಿಕಾದ ಮಾರುಕಟ್ಟೆಗಳಲ್ಲಿ ತನ್ನ ಇರವನ್ನು ಸ್ಥಾಪಿಸಿಕೊಂಡಿದೆ. ಇದು 8.6 MTPA (ವರ್ಷಕ್ಕೆ ದಶಲಕ್ಷ ಟನ್ನುಗಳು) ಸಾಮರ್ಥ್ಯದ ಸಪಾಟಾದ/ಮಟ್ಟಸವಾದ ಉಕ್ಕಿನ ಭಾರತದ ಬೃಹತ್ ರಫ್ತುಸಂಸ್ಥೆಯಾಗಿದೆ. ಟೆಂಪ್ಲೇಟು:Http://www.essar.com/section level1.aspx?cont id=eLiVfqUiZks= ಎಸ್ಸಾರ್ ಉಕ್ಕು ಗಣಿಗಾರಿಕೆಯಿಂದ ಚಿಲ್ಲರೆ ವ್ಯವಹಾರದವರೆಗೆ ಸಂಪೂರ್ಣವಾಗಿ ಸಂಘಟಿತವಾಗಿದ್ದು ಜಾಗತಿಕ ಚಿಲ್ಲರೆ ವ್ಯವಹಾರದಲ್ಲಿ 3 MTPAಗಳಿಗೂ ಮೀರಿದ ಸದೃಢ ವ್ಯಾವಹಾರಿಕ ಸಾಮರ್ಥ್ಯವನ್ನು ಹೊಂದಿದೆ.
ಜಾಗತಿಕ ಹೆಜ್ಜೆಗುರುತು
[ಬದಲಾಯಿಸಿ]2007ರಲ್ಲಿ, ಎಸ್ಸಾರ್ ಸ್ಟೀಲ್ ಕಂಪೆನಿಯು ಪ್ರಸ್ತುತ 4 MTPAಗಳಷ್ಟು ಸಾಮರ್ಥ್ಯವನ್ನು ಹೊಂದಿರುವ ಕೆನಡಾದ ಅಲ್ಗೋಮಾ ಸ್ಟೀಲ್ ಉಕ್ಕು ಕಂಪೆನಿಯನ್ನು ಮತ್ತು 1.4 ಶತಕೋಟಿ ಟನ್ನುಗಳಿಗೂ ಮೀರಿದ ಕಬ್ಬಿಣದ ಅದಿರುಗಳ ನಿಕ್ಷೇಪವನ್ನು ಹೊಂದಿರುವ ಮಿನ್ನೆಸೋಟಾ ಸ್ಟೀಲ್ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿತು. ಈ ಕಂಪೆನಿಯು 6 MTPA ಸಾಮರ್ಥ್ಯದ ಪೆಲೆಟ್/ಗುಂಡುನಿರ್ಮಾಣ ಘಟಕ, ಒಂದು ಸಾಂದ್ರೀಕರಣ ಘಟಕ ಮತ್ತು ನೇರವಾಗಿ ಕರಗಿಸಿದ ಕಬ್ಬಿಣದ ಘಟಕಗಳನ್ನು ಮಿನ್ನೆಸೋಟಾದಲ್ಲಿ ನಿರ್ಮಿಸುತ್ತಿದೆ. ಇಂಡೋನೇಷ್ಯಾದಲ್ಲಿ, ಈ ಕಂಪೆನಿಯು 150,000 TPA ಸಾಮರ್ಥ್ಯದ ನೇರ ವಿದ್ಯುತ್ ಪ್ರವಾಹದ ಸಂಪರ್ಕವನ್ನು ಹೊಂದಿರುವ 400,000 TPA ಸಾಮರ್ಥ್ಯದ ತಂಪಾಗಿ ಸುರುಳಿ ಸುತ್ತುವ ಘಟಕವನ್ನು ಹೊಂದಿದ್ದು ಆ ರಾಷ್ಟ್ರದಲ್ಲಿನ ಬೃಹತ್/ಅತಿದೊಡ್ಡ ಖಾಸಗಿ ಉಕ್ಕು ಕಂಪೆನಿಯ ಪಟ್ಟವನ್ನು ಪಡೆದುಕೊಂಡಿದೆ. [ಸೂಕ್ತ ಉಲ್ಲೇಖನ ಬೇಕು]
ಮೇ 2010ರ ಹಾಗೆ, ರೂಯಿಯಾರ ಸಹೋದರರ ಮಾಲೀಕತ್ವದ ಹಿಡುವಳಿ ಕಂಪೆನಿಯಾದ ಎಸ್ಸಾರ್ ಗ್ಲೋಬಲ್ ಲಿಮಿಟೆಡ್ ಎಸ್ಸಾರ್ ಎನರ್ಜಿ Plcಅನ್ನು ಸ್ಥಾಪಿಸುವ ಮೂಲಕ ಲಂಡನ್ ಸ್ಟಾಕ್ ವಿನಿಮಯ ಕೇಂದ್ರದಲ್ಲಿ £1.3bn ಮೊತ್ತದ ಮಟ್ಟಿಗೆ ಬಂಡವಾಳ ಹೂಡಿಕೆಯನ್ನು ಪಡೆದುಕೊಂಡರು. ಎಸ್ಸಾರ್ ಎನರ್ಜಿ Plc ಎಂಬುದೊಂದು FTSE 50 ಮಟ್ಟದ ಕಂಪೆನಿಯಾಗಿದೆ. ಎಸ್ಸಾರ್ ಕಂಪೆನಿಯು ಷೇರುಗಳ ಪಟ್ಟಿಯನ್ನು ಸಂಯೋಜಿಸುವ ಹೊಣೆಗಾರಿಕೆಯನ್ನು JPಮೋರ್ಗನ್ ಕ್ಯಾಜೆನೊವ್ ಮತ್ತು ಡಚ್/ಡಾಯಿಚ್ ಬ್ಯಾಂಕ್‌ಗಳಿಗೆ ವಹಿಸಿತ್ತು. ಎಸ್ಸಾರ್ ಗ್ಲೋಬಲ್ ಲಿಮಿಟೆಡ್ ಕಂಪೆನಿಯ ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಸಂಜಯ್ ಮೆಹ್ತಾ ರನ್ನು ಇಕನಾಮಿಕ್ ಟೈಮ್ಸ್ ಆಫ್ ಇಂಡಿಯಾ* ನಿಯತಕಾಲಿಕೆಯು ಈ ವ್ಯವಹಾರದ ಮೂಲಪುರುಷರೆಂದು ಹೆಸರಿಸಿತ್ತು. ಎಸ್ಸಾರ್ ಸಮೂಹವು USನ ಇದ್ದಿಲು ಉತ್ಪಾದಕ ಕಂಪೆನಿಯಾದ ಟ್ರಿನಿಟಿ ಕೋಲ್ ಪಾರ್ಟ್‌ನರ್ಸ್‌ಅನ್ನು USನ ಖಾಸಗಿ ಷೇರು ಕಂಪೆನಿಗಳ ಸಮೂಹ ಡೆನ್‌ಹಾಮ್ ಕ್ಯಾಪಿಟಲ್‌ನಿಂದ $600mಗಳ ಮೊತ್ತಕ್ಕೆ [೨][೩] ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ ಎಂದು 7 ಮಾರ್ಚ್ 2010ರಂದು ಘೋಷಿಸಿತು.
ಭಾರತದಲ್ಲಿನ ವ್ಯಾವಹಾರಿಕ ಕಾರ್ಯಾಚರಣೆಗಳು
[ಬದಲಾಯಿಸಿ]ಗುಜರಾತ್‌ನ ಹಝೀರಾದಲ್ಲಿನ ಘಟಕವು 10 MTPA ಸಾಮರ್ಥ್ಯವನ್ನು ಹೊಂದಿದ್ದು ಎಸ್ಸಾರ್ ಸ್ಟೀಲ್ ಕಂಪೆನಿಯು ಪಶ್ಚಿಮ ಭಾರತದ,[ಸೂಕ್ತ ಉಲ್ಲೇಖನ ಬೇಕು] ಬೃಹತ್/ಅತಿದೊಡ್ಡ ಉಕ್ಕು ಉತ್ಪಾದಕ ಕಂಪೆನಿಯಾಗಿದೆ. ಭಾರತದ ಗುಜರಾತ್‌ನಲ್ಲಿರುವ,[ಸೂಕ್ತ ಉಲ್ಲೇಖನ ಬೇಕು] ಹಝೀರಾ ನಗರದಲ್ಲಿರುವ ಎಸ್ಸಾರ್ ಸ್ಟೀಲ್ ಸಮುಚ್ಛಯ ಘಟಕವು ನಿರ್ಬಂಧಿತ ರೇವು, ಸುಣ್ಣದಕಲ್ಲಿನ ಘಟಕ ಮತ್ತು ಆಮ್ಲಜನಕ ಘಟಕಗಳೂ ಸೇರಿದಂತೆ ಸಂಪೂರ್ಣ ಆಧಾರ ರಚನೆಯನ್ನು ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು] ಈ ಕಂಪೆನಿಯು ಹಝೀರಾದಲ್ಲಿ 1.5 MTPA ಸಾಮರ್ಥ್ಯದ ಸಪಾಟಾದ ಉಕ್ಕಿನ ಗಿರಣಿ ಮತ್ತು 0.6 MTPA ಸಾಮರ್ಥ್ಯದ ಕೊಳಾಯಿ ಉಕ್ಕಿನ ಗಿರಣಿಗಳನ್ನು ನಿರ್ಮಿಸುತ್ತಿದೆ.[ಸೂಕ್ತ ಉಲ್ಲೇಖನ ಬೇಕು]
ಛತ್ತೀಸ್‌ಗಢದ[ಸೂಕ್ತ ಉಲ್ಲೇಖನ ಬೇಕು] ಬೈಲಾಡಿಲಾದಲ್ಲಿ, 8 MTPA ಸಾಮರ್ಥ್ಯದ ಸಂಸ್ಕರಣಾ ಘಟಕ, ವಿಶಾಖಪಟ್ಟಣಂನಲ್ಲಿನ,[ಸೂಕ್ತ ಉಲ್ಲೇಖನ ಬೇಕು] 8 MTPA ಸಾಮರ್ಥ್ಯದ ಪೆಲೆಟ್/ಗುಂಡುನಿರ್ಮಾಣ ಸಮುಚ್ಛಯ ಮತ್ತು ಹಝೀರಾದಲ್ಲಿನ[ಸೂಕ್ತ ಉಲ್ಲೇಖನ ಬೇಕು] 5.5 MTPA ಸಾಮರ್ಥ್ಯದ ಕಾದ ಇದ್ದಲಿನಿಂದ ಕರಗಿಸಿದ ಕಬ್ಬಿಣದ ದಿಂಡುಗಳ ಘಟಕ ಮತ್ತು 1.4 MTPA ಸಾಮರ್ಥ್ಯದ ಶೀತಲ ಸುರುಳಿ ಸುತ್ತುವಿಕೆ ಸಮುಚ್ಛಯಗಳು ಭಾರತದಲ್ಲಿನ ಕಾರ್ಯಾಚರಣೆಗಳಲ್ಲಿ ಸೇರಿವೆ.[ಸೂಕ್ತ ಉಲ್ಲೇಖನ ಬೇಕು] ಇಷ್ಟೇ ಅಲ್ಲದೇ, ಎಸ್ಸಾರ್ ಸಮೂಹವು ಒರಿಸ್ಸಾದ ಪ್ಯಾರಾಡಿಪ್‌ನಲ್ಲಿ[ಸೂಕ್ತ ಉಲ್ಲೇಖನ ಬೇಕು] 12 MTPA ಸಾಮರ್ಥ್ಯದ ಪೆಲೆಟ್/ಗುಂಡುನಿರ್ಮಾಣ ಘಟಕವನ್ನು ನಿರ್ಮಿಸುತ್ತಿದೆ.
ಉತ್ಪನ್ನಗಳು ಮತ್ತು ಸೇವೆಗಳು
[ಬದಲಾಯಿಸಿ]ಎಸ್ಸಾರ್ ಸ್ಟೀಲ್ ಕಂಪೆನಿಯು ಗ್ರಾಹಕೀಕರಿಸಿದ ಉತ್ಪನ್ನಗಳನ್ನು ಉತ್ಪಾದಿಸುವುದರಿಂದ ವೈವಿಧ್ಯಮಯ ಉತ್ಪನ್ನ ವಿಭಾಗಗಳು ಸಪಾಟಾದ/ಮಟ್ಟಸವಾದ ಉತ್ಪನ್ನಗಳು US ಮತ್ತು ಐರೋಪ್ಯ ರಾಷ್ಟ್ರಗಳ,[ಸೂಕ್ತ ಉಲ್ಲೇಖನ ಬೇಕು] ಮತ್ತು ಆಗ್ನೇಯ ಏಷ್ಯಾದ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳ ಮಾರುಕಟ್ಟೆಗಳಿಗೆ ಭಾರತದ ಬೃಹತ್/ಅತಿದೊಡ್ಡ ರಫ್ತುಗಾರ ಕಂಪೆನಿಯಾಗಿದೆ. [ಸೂಕ್ತ ಉಲ್ಲೇಖನ ಬೇಕು]
ಇಂಧನ
[ಬದಲಾಯಿಸಿ]ಎಸ್ಸಾರ್ ಆಯಿಲ್ ಕಂಪೆನಿಯು ಹೈಡ್ರೋಕಾರ್ಬನ್ ಮೌಲ್ಯ ಸರಪಣಿಯಲ್ಲಿ ಪರಿಶೋಧನೆ & ಉತ್ಪಾದನೆಗಳಿಂದ ತೈಲ ಚಿಲ್ಲರೆ ವ್ಯವಹಾರಗಳವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣವಾಗಿ ಸುಸಂಘಟಿತವಾದ ಅಂತರರಾಷ್ಟ್ರೀಯ ಮಟ್ಟದ ತೈಲ & ಅನಿಲ ಕಂಪೆನಿಯಾಗಿದೆ. [ಸೂಕ್ತ ಉಲ್ಲೇಖನ ಬೇಕು] ಈ ಕಂಪೆನಿಯು ವಿಶ್ವದಾದ್ಯಂತ ವಿಸ್ತಾರವಾದ ತೀರದಂಚಿನ ಮತ್ತು ತೀರದಾಚೆಯ ತೈಲ & ಅನಿಲ ಘಟಕಗಳ ಸ್ವಾಮ್ಯವನ್ನು ಹೊಂದಿದ್ದು ಸರಿಸುಮಾರು 70,000 km2ರಷ್ಟು ವಿಸ್ತಾರವಾದ ಪ್ರದೇಶದಲ್ಲಿ ಶೋಧನೆಗೆ ಲಭ್ಯವಿದೆ.[ಸೂಕ್ತ ಉಲ್ಲೇಖನ ಬೇಕು]
ತೈಲನಿಕ್ಷೇಪ ಶೋಧನೆ ಮತ್ತು ಉತ್ಪಾದನೆ
[ಬದಲಾಯಿಸಿ]ಕಂಪೆನಿಯ ತೈಲನಿಕ್ಷೇಪ ಶೋಧನೆ ಮತ್ತು ಉತ್ಪಾದನೆ ವ್ಯವಹಾರವು ತೈಲನಿಕ್ಷೇಪ ಶೋಧನೆ ಮತ್ತು ತೈಲ & ಅನಿಲಗಳ ಉತ್ಪಾದನೆಗಾಗಿ ಬಹಳಷ್ಟು ವಿವಿಧ ರೀತಿಯ ಹೈಡ್ರೋಕಾರ್ಬನ್ ದಿಂಡುಗಳ ಅಗತ್ಯತೆಯನ್ನು ಹೊಂದಿತ್ತು. ಇವುಗಳಲ್ಲಿ ರತ್ನ ಮತ್ತು R-ಸರಣಿಯ ನಿಕ್ಷೇಪಗಳು ಮತ್ತು ಒಂದು ಆಳವಿಲ್ಲದ ನೀರಿನ ಪ್ರದೇಶದಲ್ಲಿರುವ ಕಡಲಕರೆಯಾಚೆಯ ತೈಲನಿಕ್ಷೇಪ ಶೋಧನಾ ವಿಭಾಗಗಳು ಸೇರಿದ್ದು ಮುಂಬಯಿ ಮಹಾನಗರ ಕಡಲಕರೆಯಾಚೆಯ ರೇವುಪ್ರದೇಶದಲ್ಲಿರುವ ಮುಂಬಯಿ ಹೈ ಪ್ರದೇಶಕ್ಕೆ ಸನಿಹದಲ್ಲಿಯೇ ಎರಡೂ ಇವೆ. ಈ ವ್ಯವಹಾರವು ಗುಜರಾತ್‌ನ ಮೆಹ್ಸಾನಾದಲ್ಲಿರುವ ತೈಲನಿಕ್ಷೇಪ ಶೋಧನಾ ವಿಭಾಗದಲ್ಲಿಯೂ ತನ್ನ ಹಿತಾಸಕ್ತಿ ಹೊಂದಿದ್ದು, ಇದು ಪ್ರಸ್ತುತ ವಾಣಿಜ್ಯಿಕ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಇವುಗಳೊಂದಿಗೆ ಕಲ್ಲಿದ್ದಲು ಪದರದ ಮೀಥೇನ್ (CBM) ಹೊಂದಿರುವ ನಿಕ್ಷೇಪವನ್ನು ಪಶ್ಚಿಮ ಬಂಗಾಳದ ದುರ್ಗಾಪುರ ಎಂಬಲ್ಲಿ ಹೊಂದಿರುವುದಲ್ಲದೇ, ಭಾರತದ ಅಸ್ಸಾಂನಲ್ಲಿ ಮತ್ತೆರಡು ತೈಲಶೋಧನೆ ನಿಕ್ಷೇಪಗಳನ್ನು ಹೊಂದಿದೆ. ಕಂಪೆನಿಯು ಹೊಂದಿರುವ ಸಾಗರೋತ್ತರ ತೈಲನಿಕ್ಷೇಪ ಶೋಧನೆ ಆಸ್ತಿಗಳಲ್ಲಿ ಆಫ್ರಿಕಾದ ಮಡಗಾಸ್ಕರ್‌ನಲ್ಲಿ ತೀರದ ಬಳಿಯಿರುವ ಎರಡು ತೈಲ & ಅನಿಲ ನಿಕ್ಷೇಪಗಳು, ಇಂಡೋನೇಷ್ಯಾದಲ್ಲಿ ತೀರದ ಬಳಿಯ ಒಂದು ನಿಕ್ಷೇಪ, ಆಸ್ಟ್ರೇಲಿಯಾದಲ್ಲಿ ಎರಡು ಕಡಲಕರೆಯಾಚೆಯ ನಿಕ್ಷೇಪಗಳು ಮತ್ತು ವಿಯೆಟ್ನಾಮ್ ಮತ್ತು ನೈಜೀರಿಯಾಗಳೆರಡರಲ್ಲೂ ಇರುವ ಒಂದೊಂದು ಕಡಲಕರೆಯಾಚೆಯ ನಿಕ್ಷೇಪಗಳು ಸೇರಿವೆ.[ಸೂಕ್ತ ಉಲ್ಲೇಖನ ಬೇಕು]
ಎಸ್ಸಾರ್ ಸಮೂಹವು ಕೀನ್ಯಾದ ಮೊಂಬಾಸಾದಲ್ಲಿರುವ ಕೀನ್ಯಾ ಪೆಟ್ರೋಲಿಯಮ್ ರಿಫೈನರೀಸ್ Ltd ಎಂಬ ಕಂಪೆನಿಯಿಂದ ನಡೆಸಲ್ಪಡುವ 88,000-bpd ಸಾಮರ್ಥ್ಯದ ತೈಲ ಸಂಸ್ಕರಣಾ ಕೇಂದ್ರದ 50 ಪ್ರತಿಶತ ಷೇರುಗಳ ಸ್ವಾಮ್ಯವನ್ನು ಕೂಡಾ ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು]
ವಿದ್ಯುಚ್ಛಕ್ತಿ
[ಬದಲಾಯಿಸಿ]ಎಸ್ಸಾರ್ ಎನರ್ಜಿ ಕಂಪೆನಿಯ, ಸರಿಸುಮಾರು 76%ರಷ್ಟರ ಮಾಲೀಕತ್ವವನ್ನು ಎಸ್ಸಾರ್ ಉದ್ಯಮ ಸಮೂಹವು ಹೊಂದಿದ್ದು ಪ್ರಸ್ತುತ ಖಾಸಗೀ ಕ್ಷೇತ್ರದಲ್ಲಿ ಭಾರತದ ದ್ವಿತೀಯ ಬೃಹತ್/ಅತಿದೊಡ್ಡ ವಿದ್ಯುಚ್ಛಕ್ತಿ ಉತ್ಪಾದನಾ ಕಂಪೆನಿಯೆನಿಸಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು] ಇದರ ವಿದ್ಯುಚ್ಛಕ್ತಿ ಉತ್ಪಾದನಾ ಸಾಮರ್ಥ್ಯವು 1,200 MWಗಳಷ್ಟಿದ್ದು ಇದನ್ನು 6,000 MW ಸಾಮರ್ಥ್ಯಕ್ಕೆ ಹೆಚ್ಚಿಸಲಾಗುತ್ತಿದೆ.[ಸೂಕ್ತ ಉಲ್ಲೇಖನ ಬೇಕು] ಅನಿಲ, ಕಲ್ಲಿದ್ದಲು ಮತ್ತು ದ್ರವ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳ ಹೂಡಿಕೆಗಳ ಪಟ್ಟಿಯೊಂದಿಗೆ, ಎಸ್ಸಾರ್ ಪವರ್ ಕಂಪೆನಿಯು ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದಿಸುವ ವಿದ್ಯುತ್ ಉತ್ಪಾದಕ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ಇದು ಸಂವಹನ ಹಾಗೂ ವಿತರಣಾ ಕ್ಷೇತ್ರಗಳೆರಡರಲ್ಲೂ ಕೂಡಾ ಪ್ರವೇಶಿಸಿರುವ ಕಂಪೆನಿಯು ತ್ವರಿತವಾಗಿ ಭದ್ರವಾದ ಬುನಾದಿಯನ್ನು ರೂಪಿಸಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು]ಪಶ್ಚಿಮ ಭಾರತದಲ್ಲಿ ಇದು ಮಾರುಕಟ್ಟೆಯ ಮುಂದಾಳು ಸಂಸ್ಥೆಯಾಗಿದೆ. ಎಸ್ಸಾರ್ ಆಯಿಲ್ ಕಂಪೆನಿಯಲ್ಲಿ ನಿಯಂತ್ರಣ ಹೊಂದುವಷ್ಟು ಷೇರುಗಳನ್ನು ಎಸ್ಸಾರ್ ಪವರ್ ಸಂಸ್ಥೆಯು ಹೊಂದಿದೆ.
ಅಸ್ತಿತ್ವದಲ್ಲಿರುವ ಮತ್ತು ಮುಂಬರಲಿರುವ ಘಟಕಗಳು
[ಬದಲಾಯಿಸಿ]ಎಸ್ಸಾರ್ ಪವರ್ ಕಂಪೆನಿಯು ಐದು ವಿದ್ಯುಚ್ಛಕ್ತಿ ಉತ್ಪಾದಕ ಘಟಕಗಳನ್ನು ನಿರ್ವಹಿಸುತ್ತಿದ್ದು ಭಾರತದಲ್ಲಿನ ಮೂರು ಸ್ಥಳಗಳಲ್ಲಿ ವಿಸ್ತರಿಸಿರುವ ಅವುಗಳ ಒಟ್ಟಾರೆ ಸಾಮರ್ಥ್ಯ 1,200 MWಗಳಾಗಿವೆ. ಎರಡು ಅನಿಲ-ಆಧಾರಿತ ಘಟಕಗಳು ಮತ್ತು ಹಝೀರಾದಲ್ಲಿನ ಒಂದು ದ್ರವ ಇಂಧನ ಆಧಾರಿತ ಘಟಕ, ವಾಡಿನಾರ್‌ನಲ್ಲಿನ ಸಹಯೋಗಿ-ಉತ್ಪಾದಕ ಘಟಕ ಮತ್ತು ವಿಶಾಖಪಟ್ಟಣಂನ ಕಲ್ಲಿದ್ದಲು ಆಧಾರಿತ ಘಟಕಗಳು ಇವುಗಳಲ್ಲಿ ಸೇರಿವೆ.[೪]
ಸಂವಹನ ಘಟಕಗಳು
[ಬದಲಾಯಿಸಿ]ಎಸ್ಸಾರ್ ಕಮ್ಯುನಿಕೇಷನ್ಸ್ ಕಂಪೆನಿಯು ಸಂವಹನ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿದ್ದು ದೂರವಾಣಿ ಸಂವಹನ ಸೇವೆಗಳು, ದೂರವಾಣಿ ಸಂವಹನ ಚಿಲ್ಲರೆ ವ್ಯವಹಾರ, ದೂರವಾಣಿ ಸಂವಹನ ಗೋಪುರಗಳ ಆಧಾರರಚನೆಗಳಲ್ಲಿ ಮತ್ತು ವ್ಯವಹಾರ ಪ್ರಕ್ರಿಯೆ ಹೊರಗುತ್ತಿಗೆಗಳಲ್ಲಿ ಕೂಡಾ ತನ್ನ ಛಾಪು ಮೂಡಿಸುತ್ತಿದೆ. ಮತ್ತಷ್ಟು ಮಾಹಿತಿ
ವೊಡಾಪೋನ್-ಎಸ್ಸಾರ್
[ಬದಲಾಯಿಸಿ]ವೊಡಾಪೋನ್-ಎಸ್ಸಾರ್ ಕಂಪೆನಿಯು ಎಸ್ಸಾರ್ ಕಮ್ಯುನಿಕೇಷನ್ಸ್ ಹೋಲ್ಡಿಂಗ್ಸ್ Ltd ಮತ್ತು UK-ಮೂಲದ ವೊಡಾಪೋನ್ ಸಮೂಹಗಳ ಜಂಟಿ ಉದ್ಯಮವಾಗಿದೆ. ಇದು ಭಾರತದ 90 ದಶಲಕ್ಷಕ್ಕೂ ಮೀರಿದ ಚಂದಾದಾರರೊಂದಿಗೆ ಭಾರತದ ಬೃಹತ್/ಅತಿದೊಡ್ಡ ಸಂಚಾರಿ ದೂರವಾಣಿ ಸೇವಾದಾರ ಕಂಪೆನಿಗಳಲ್ಲಿ ಒಂದಾಗಿದೆ. ಎಸ್ಸಾರ್ ಕಂಪೆನಿಯು ಆಫ್ರಿಕಾ ಮತ್ತು ದಕ್ಷಿಣ ಏಷ್ಯಾಗಳಲ್ಲಿನ ಅಭಿವೃದ್ಧಿಯಾಗುತ್ತಿರುವ ಮಾರುಕಟ್ಟೆಗಳಲ್ಲಿ ಕೂಡಾ ತನ್ನ ಉದ್ಯಮವನ್ನು ಸ್ಥಾಪಿಸುತ್ತಿದೆ. ಕೀನ್ಯಾದಲ್ಲಿ “ಯು” ಎಂದು ಕರೆಯಲ್ಪಡುವ ನವೀನ ಸಂಚಾರಿ ದೂರವಾಣಿ ಸೇವೆಗಳ ಬ್ರಾಂಡ್ ಅನ್ನು ಆರಂಭಿಸಿರುವ ಎಸ್ಸಾರ್ ಕಮ್ಯುನಿಕೇಷನ್ಸ್ ಕಂಪೆನಿಯು ಆ ರಾಷ್ಟ್ರದ ನಾಲ್ಕನೇ ದೂರವಾಣಿ ಸೇವಾ ಸಂಸ್ಥೆಯಾಗಿದೆ. [ಸೂಕ್ತ ಉಲ್ಲೇಖನ ಬೇಕು]
ಹಡಗು ರವಾನೆ ರೇವುಗಳು & ವ್ಯವಸ್ಥಾಪನ ಉದ್ಯಮ
[ಬದಲಾಯಿಸಿ]ಎಸ್ಸಾರ್ ಷಿಪ್ಪಿಂಗ್ ಕಂಪೆನಿಯನ್ನು 1945ರಲ್ಲಿ ಆರಂಭಿಸಲಾಯಿತು.ಪೋರ್ಟ್ಸ್ & ಲಾಜಿಸ್ಟಿಕ್ಸ್ ಎಂಬುದೊಂದು ಕಂಪೆನಿಯು ವಿಸ್ತಾರವಾದ ಸಾಗರಯಾನ ವ್ಯವಸ್ಥಾಪನ ಉದ್ಯಮವಾಗಿದ್ದು ಸಾಗರ ಸಾರಿಗೆ, ಬಂದರುಗಳು & ಸಾಗರಸಾರಿಗೆ ಕೇಂದ್ರಗಳು, ವ್ಯವಸ್ಥಾಪನ ಮತ್ತು ತೈಲನಿಕ್ಷೇಪಗಳ ಸೇವೆಗಳಲ್ಲಿ ತನ್ನ ಛಾಪು ಮೂಡಿಸಿದೆ. ಈ ಕಂಪೆನಿಯು 25 ಸರಕು ಸಾಗಣೆ ಹಡಗುಗಳ ಪಡೆಯ ಸ್ವಾಮ್ಯವನ್ನು ಹೊಂದಿದ್ದು, 12 ನವೀನ ಹಡಗುಗಳನ್ನು ಕೊಳ್ಳಲು ಬೇಡಿಕೆಯಿಟ್ಟಿದೆ. [ಸೂಕ್ತ ಉಲ್ಲೇಖನ ಬೇಕು] 150 MTPAಗಳಿಗೂ ಹೆಚ್ಚಿನ ಸಾಮರ್ಥ್ಯದ ಸರಕು ಸಾಗಣೆ ವ್ಯವಸ್ಥೆಯನ್ನು ನಿರ್ಮಿಸುತ್ತಿರುವ ಈ ಕಂಪೆನಿಯು ಭಾರತದ ಬಂದರುಗಳ ಬೃಹತ್/ಅತಿದೊಡ್ಡ ಸೇವಾದಾರ ಸಂಸ್ಥೆಗಳಲ್ಲಿ ಒಂದಾಗಿದೆ[ಸೂಕ್ತ ಉಲ್ಲೇಖನ ಬೇಕು].
ಸಮುದ್ರ ಸಾರಿಗೆ
[ಬದಲಾಯಿಸಿ]ಕಂಪೆನಿಯ ಸಾಗರ ಸಾರಿಗೆ ಉದ್ಯಮವು ಕಚ್ಚಾ ತೈಲ ಮತ್ತು ಪೆಟ್ರೋಲಿಯಮ್ ಉತ್ಪನ್ನಗಳು ಮತ್ತು ಜಾಗತಿಕ ವಿದ್ಯುಚ್ಛಕ್ತಿ, ಉಕ್ಕು ಮತ್ತು ಇಂಧನ ಉದ್ಯಮಗಳಿಗೆ ಭಾರೀ ಪ್ರಮಾಣದ ಶುಷ್ಕ ಸರಕು ಸಾಗಣೆ ಮಾಡಲು ಸಾರಿಗೆ ಮತ್ತು ನಿರ್ವಹಣಾ ಸೇವೆಗಳನ್ನು ನೀಡುತ್ತದೆ. ಕಂಪೆನಿಯು 25 ಸರಕು ಸಾಗಣೆ ಹಡಗುಗಳ ವೈವಿಧ್ಯಮಯ ಪಡೆಯನ್ನು ಹೊಂದಿದ್ದು ಅವುಗಳಲ್ಲಿ ಭಾರೀ ಗಾತ್ರದ ಕಚ್ಚಾ ತೈಲಸಾಗಣೆ ಹಡಗುಗಳು, ಉತ್ಪನ್ನ ಟ್ಯಾಂಕರ್ ಹಡಗುಗಳು ಮತ್ತು ಬೃಹತ್ ಕಚ್ಚಾವಸ್ತು ಸಾಗಣೆ ಹಡಗುಗಳು ಸೇರಿವೆ. ಈ ಕಂಪೆನಿಯು ಕಚ್ಚಾ ತೈಲ ಮತ್ತು ಪೆಟ್ರೋಲಿಯಮ್ ಉತ್ಪನ್ನಗಳ ಸರಕುಸಾಗಣೆ, ಸರಕುಸಾಗಣೆ ನಿರ್ವಹಣಾ ಸೇವೆಗಳು ಮತ್ತು ಸಂಘಟಿತ ಶುಷ್ಕ ಭಾರೀ ಸರಕುಸಾಗಣೆ ಸಾರಿಗೆ ಸೇವೆಗಳನ್ನು ನೀಡುತ್ತದೆ. [ಸೂಕ್ತ ಉಲ್ಲೇಖನ ಬೇಕು]
ಬಂದರುಗಳು ಮತ್ತು ಸಾಗರಸಾರಿಗೆಯ ಸರಕುಸಾಗಣೆ ಕೇಂದ್ರಗಳು
[ಬದಲಾಯಿಸಿ]ಪೋರ್ಟ್ಸ್ & ಟರ್ಮಿನಲ್ಸ್ ಕಂಪೆನಿಯ ಉದ್ಯಮವು ಭಾರತದ ಬಂದರುಗಳು ಮತ್ತು ಸಾಗರಸಾರಿಗೆ ಸರಕುಸಾಗಣೆ ಕೇಂದ್ರಗಳ ಬೃಹತ್/ಅತಿದೊಡ್ಡ ಮಾಲೀಕರು ಮತ್ತು ಸೇವಾದಾರ ಸಂಸ್ಥೆಗಳಲ್ಲಿ ಒಂದಾಗಿದೆ. ವಡಿನಾರ್‌ನಲ್ಲಿರುವ ತೈಲ ಸರಕುಸಾಗಣೆ ಕೇಂದ್ರ ಮತ್ತು ಹಝೀರಾ ಮತ್ತು ಸಲಾಯಾಗಳಲ್ಲಿ ಸದ್ಯದಲ್ಲೇ ಆರಂಭವಾಗಲಿರುವ ಭಾರೀ ಸರಕುಸಾಗಣೆ ಕೇಂದ್ರಗಳು ಕಂಪೆನಿಯ ಕಾರ್ಯಾಚರಣೆಯಲ್ಲಿ ಸೇರಿದ್ದು ಇವಷ್ಟೂ ಗುಜರಾತ್ ರಾಜ್ಯದಲ್ಲಿಯೇ ಇವೆ. ಸರ್ವ-ಋತು, ಭಾರೀಆಳ-ಪ್ರದೇಶದ ಬಂದರಾಗಿರುವ ವಡಿನಾರ್ ಬಂದರು, ಆ ಪ್ರದೇಶದಲ್ಲಿರುವ ಎಲ್ಲಾ ಪ್ರಮುಖ ತೈಲ ಸಂಸ್ಕಾರಕ ಕೇಂದ್ರಗಳು ಮತ್ತು ಖಾಸಗಿ ಸರಕುಸಾಗಣೆ ಉದ್ಯಮಗಳಿಗೆ ತನ್ನ ಸೇವೆಯನ್ನು ನೀಡುತ್ತದೆ. ಈ ಸಾಗರ ಸರಕುಸಾಗಣೆ ಕೇಂದ್ರವು 32 MTPAಗಳಷ್ಟು ಕಚ್ಚಾ ತೈಲವನ್ನು ಸಂಗ್ರಹಿಸಿಟ್ಟು ರವಾನಿಸುವ ಸಾಮರ್ಥ್ಯವನ್ನು ಹೊಂದಿದ್ದು, (ಇದನ್ನು 50 MTPAಗಳಿಗೆ ವಿಸ್ತರಿಸಲಾಗುತ್ತಿದೆ) 14 MTPAಗಳಷ್ಟು ಸಮುದ್ರ-ಆಧಾರಿತ ಉತ್ಪನ್ನಗಳ ರವಾನೆ ಸಾಮರ್ಥ್ಯವನ್ನು ಹೊಂದಿದೆ. ಹಝೀರಾದಲ್ಲಿರುವ ಬಂದರು 8 MTPAಗಳಷ್ಟು ಪ್ರಮಾಣದ ಭಾರೀ ಸರಕನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಾಮರ್ಥ್ಯವನ್ನು ಇನ್ನೂ ಬೃಹತ್ ಹಡಗುಗಳನ್ನು ತರಲು ಸಾಧ್ಯವಾಗುವಂತಹಾ ಹಡಗುಕಟ್ಟೆಗಳನ್ನು ನಿರ್ಮಿಸಿ 30 MTPAಗಳಿಗೆ ಹಿಗ್ಗಿಸಲಾಗುತ್ತಿದೆ. ಈ ಹಿಗ್ಗಿಸಲಾಗುತ್ತಿರುವ ಸಾಮರ್ಥ್ಯವು ಹಝೀರಾ ಉಕ್ಕು ಘಟಕದ ವಿಸ್ತರಣೆಗೆ ಮಾತ್ರವೇ ಸಹಾಯಕವಾಗಿರದೇ, ಸದ್ಯದಲ್ಲೇ ಆರಂಭವಾಗಲಿರುವ ಎಸ್ಸಾರ್ SEZ ಘಟಕಗಳ ಅಗತ್ಯವನ್ನೂ ಪೂರೈಸಲಿದೆ. ಈ ಉದ್ಯಮವು ಸಲಾಯಾದಲ್ಲಿ ಸುಮಾರು 20 MTPA ಸಾಮರ್ಥ್ಯದ ಬಂದರೊಂದನ್ನು ಕೂಡಾ ನಿರ್ಮಿಸುತ್ತಿದ್ದು ಅದು ಭಾರೀ ಸರಕು ಹಾಗೂ ದ್ರವಸರಕು ಸಾಗಣೆಯ ನಿರ್ವಹಣೆ ಸೌಲಭ್ಯವನ್ನು ಹೊಂದಿರುವುದಲ್ಲದೇ ಹಡಗು ನಿರ್ವಹಣಾ ಸೌಲಭ್ಯವನ್ನು ಕೂಡಾ ಹೊಂದಿರಲಿದೆ. [ಸೂಕ್ತ ಉಲ್ಲೇಖನ ಬೇಕು]
ವ್ಯವಸ್ಥಾಪನ ಉದ್ಯಮ (ಸಾಮಾನು ಸರಂಜಾಮುಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಿಸುವ ವ್ಯವಸ್ಥೆ)
[ಬದಲಾಯಿಸಿ]ವ್ಯವಸ್ಥಾಪನ ಉದ್ಯಮವು ಹಡಗುಗಳಿಂದ ಬಂದರುಗಳಿಗೆ ಮೂಲಸ್ಥಾನದಿಂದ ಗಮ್ಯದವರೆಗೆ ಸಂಪೂರ್ಣ ಸರಕುಸಾಗಣೆ ವ್ಯವಸ್ಥೆ, ಹಗುರದೋಣಿ ಸರಕುಸಾಗಣೆ ಸೇವೆಗಳು, ಅಂತರ್-ಘಟಕ ಸರಕು ಸಾಗಣೆ ಮತ್ತು ಸಿದ್ಧ ಸರಕು ಉತ್ಪನ್ನಗಳ ರವಾನೆ ಮುಂತಾದ ಸೇವೆಗಳನ್ನು ನೀಡುತ್ತದೆ. ಈ ಉದ್ಯಮವು ಹಡಗುಗಳಿಂದ ಹಡಗುಗಳಿಗೆ ಸರಕುಗಳನ್ನು ಸ್ಥಳಾಂತರಿಸಲು ಬೇಕಾದ ಮತ್ತು ಹಗುರದೋಣಿ ಸರಕುಸಾಗಣೆ ನಿರ್ವಹಣೆಯ ಸೇವೆಗಳನ್ನು ಮತ್ತು ಕಡಲಕರೆಯಲ್ಲಿನ ಮತ್ತು ಕಡಲಕರೆಯಾಚೆಯ ಸರಕುಸಾಗಣೆ ವ್ಯವಸ್ಥಾಪನ ಸೇವೆಗಳನ್ನು ನೀಡಬಲ್ಲ ಅಗತ್ಯ ಸಾಗಣೆ ಉಪಕರಣಗಳನ್ನು ಹೊಂದಿದೆ. ಈ ಉದ್ಯಮವು ಉಕ್ಕು ಮತ್ತು ಪೆಟ್ರೋಲಿಯಮ್ ಉತ್ಪನ್ನಗಳ ಒಳನಾಡಿನ ಸಾರಿಗೆಗೆ ಅಗತ್ಯವಾದ 4,200 ಟ್ರಕ್‌ಗಳ ದೊಡ್ಡ ಪಡೆಯನ್ನು ಕೂಡಾ ಹೊಂದಿದೆ. [ಸೂಕ್ತ ಉಲ್ಲೇಖನ ಬೇಕು]
ಉಲ್ಲೇಖಗಳು
[ಬದಲಾಯಿಸಿ]- ↑ ಫೋರ್ಬ್ಸ್‌ನಲ್ಲಿನ ಶಶಿ & ರವಿ ರೂಯಿಯಾರವರುಗಳ ಬಗ್ಗೆ ವಿಷಯ ಸೂಚಕ ಪುಟ Archived 2011-02-01 ವೇಬ್ಯಾಕ್ ಮೆಷಿನ್ ನಲ್ಲಿ. Forbes.com. ಏಪ್ರಿಲ್ 2010ರಲ್ಲಿ ಪಡೆಯಲಾಗಿತ್ತು.
- ↑ ಭಾರತದ ಎಸ್ಸಾರ್ ಉದ್ಯಮ ಸಮೂಹವು UK ಷೇರು ಮಾರುಕಟ್ಟೆಯಲ್ಲಿ ತೊಡಗಿಕೊಳ್ಳಲು ಯೋಜಿಸುತ್ತಿದೆ
- ↑ 2 Apr, 2010, 04.41AM IST,ET Bureau (2010-04-02). "Essar's Ravi Ruia relocates to London; to raise $3bn - The Economic Times". Economictimes.indiatimes.com. Retrieved 2010-10-01.
{{cite web}}
: CS1 maint: multiple names: authors list (link) CS1 maint: numeric names: authors list (link) - ↑ "Essar Group plans power plants in Jharkhand". Business Standard. 21 August 2007. Retrieved 25 February 2010.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಎಸ್ಸಾರ್ ಉದ್ಯಮ ಸಮೂಹದ ಅಧಿಕೃತ ಜಾಲತಾಣ
- ಎಸ್ಸಾರ್ ಸ್ಟೀಲ್ನ ಅಧಿಕೃತ ಜಾಲತಾಣ Archived 2009-12-19 ವೇಬ್ಯಾಕ್ ಮೆಷಿನ್ ನಲ್ಲಿ.
- ತೈಲ & ಅನಿಲ Archived 2009-11-29 ವೇಬ್ಯಾಕ್ ಮೆಷಿನ್ ನಲ್ಲಿ.
- ವಿದ್ಯುಚ್ಛಕ್ತಿ Archived 2009-12-08 ವೇಬ್ಯಾಕ್ ಮೆಷಿನ್ ನಲ್ಲಿ.
- ದೂರವಾಣಿ ಕ್ಷೇತ್ರ Archived 2009-12-13 ವೇಬ್ಯಾಕ್ ಮೆಷಿನ್ ನಲ್ಲಿ.
- ಮಾಹಿತಿ ತಂತ್ರಜ್ಞಾನ ಕ್ಷೇತ್ರ Archived 2009-06-10 ವೇಬ್ಯಾಕ್ ಮೆಷಿನ್ ನಲ್ಲಿ.
- ಷಿಪ್ಪಿಂಗ್ & ಲಾಜಿಸ್ಟಿಕ್ಸ್ Archived 2009-12-18 ವೇಬ್ಯಾಕ್ ಮೆಷಿನ್ ನಲ್ಲಿ.
- ಕಟ್ಟಡ ನಿರ್ಮಾಣ ಉದ್ಯಮಗಳು Archived 2009-12-03 ವೇಬ್ಯಾಕ್ ಮೆಷಿನ್ ನಲ್ಲಿ.
- ಇತರೆ ಉದ್ಯಮಗಳು Archived 2009-12-07 ವೇಬ್ಯಾಕ್ ಮೆಷಿನ್ ನಲ್ಲಿ.
- ಏಜೀಸ್ ಲಿಮಿಟೆಡ್ Archived 2017-04-15 ವೇಬ್ಯಾಕ್ ಮೆಷಿನ್ ನಲ್ಲಿ.
- ಫೋರ್ಬ್ಸ್ ನಿಯತಕಾಲಿಕೆಯಲ್ಲಿ ನೀಡಿರುವ ಶಶಿ & ರವಿ ರೂಯಿಯಾರವರುಗಳ ವ್ಯಕ್ತಿ ಪರಿಚಯ Archived 2011-02-01 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 maint: multiple names: authors list
- CS1 maint: numeric names: authors list
- Orphaned articles from ಮಾರ್ಚ್ ೨೦೧೯
- All orphaned articles
- ಮುಂಬೈ ಶೇರು ಪೇಟೆಯಲ್ಲಿ ನಮೂದಿಸಲಾಗಿರುವ ಕಂಪನಿಗಳು
- Articles with unsourced statements from October 2009
- ಮುಂಬಯಿ ಮೂಲದ ಸಂಸ್ಥೆಗಳು
- 1969ರಲ್ಲಿ ಸ್ಥಾಪನೆಯಾದ ಕಂಪನಿಗಳು
- ಮಹಾರಾಷ್ಟ್ರದ ಆರ್ಥಿಕ ಪರಿಸ್ಥಿತಿ
- ಮುಂಬಯಿನ ಆರ್ಥಿಕ ಪರಿಸ್ಥಿತಿ
- ಮಹಾರಾಷ್ಟ್ರ ಮೂಲದ ಕಂಪೆನಿಗಳು
- ಭಾರತದ ಸಂಘಟಿತ ಉದ್ಯಮ ಕಂಪೆನಿಗಳು
- ಭಾರತದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲ್ಪಟ್ಟಿರುವ ಕಂಪನಿಗಳು
- ಎಸ್ಸಾರ್ ಉದ್ಯಮ ಸಮೂಹ
- ಉದ್ಯಮ