ವಿಷಯಕ್ಕೆ ಹೋಗು

ಚಾಬಿ ಬಿಸ್ವಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ಚಾಬಿ ಬಿಸ್ವಾಸ್

Chhabi Biswas
ছবি বিশ্বাস
Born(೧೯೦೦-೦೭-೧೨)೧೨ ಜುಲೈ ೧೯೦೦
DiedJune 11, 1962(1962-06-11) (aged 61)
OccupationActor
Years active೧೯೩೧ to ೧೯೬೨

ಚಾಬಿ ಬಿಸ್ವಾಸ್ (ಬಂಗಾಳಿ:ছবি বিশ্বাসಚೋಬಿ ಬಿಶ್ಶಾಶ್ ) (೧೨ ಜುಲೈ ೧೯೦೦ - ೧೧ ಜೂನ್ ೧೯೬೨) ಹೆಚ್ಚು ಜನಪ್ರಿಯ ಬೆಂಗಾಲಿ ಪಾತ್ರನಟ, ಮೂಲತಃ ಇವರು ತಪನ್ ಸಿನ್ಹಾರ ಕಾಬುಲಿವಾಲ ಹಾಗು ಸತ್ಯಜಿತ್ ರೇ ಅವರ ಚಿತ್ರಗಳಾದ ಜಲಶಾಘರ್ (ದಿ ಮ್ಯೂಸಿಕ್ ರೂಂ, ೧೯೫೮) ದೇವಿ (ದಿ ಗಾಡೆಸ್, ೧೯೬೦) ಹಾಗು ಕಾಂಚೆನ್ಜುಂಗ (೧೯೬೨) ಚಿತ್ರಗಳಲ್ಲಿನ ನಟನೆಯಿಂದಾಗಿ ಗಮನ ಸೆಳೆದಿದ್ದಾರೆ.(ಚಾಬಿ ಅಂದರೆ ಮುದ್ದು ಮುಖದ)

ಇವರು ಉನ್ನತ ಶ್ರೀಮಂತ ವರ್ಗದ ಹಿರಿಯ ವ್ಯಕ್ತಿಯಾಗಿ ಅಭಿನಯಿಸಿದ ಹಲವಾರು ಪಾತ್ರಗಳಿಂದ ಸ್ಮರಣೀಯರಾಗಿದ್ದಾರೆ. ಇವರು ಸ್ವತಃ ಉತ್ತರ ಕೋಲ್ಕತ್ತಾದ ಶ್ರೀಮಂತ ಹಾಗು ಸುಸಂಸ್ಕೃತ ಮನೆತನಕ್ಕೆ ಸೇರಿದವರು. ಇವರು ೧೨ ಜುಲೈ ೧೯೦೦ರಲ್ಲಿ ಜನಿಸಿದರು. ಇವರ ತಂದೆ ಭೂಪತಿನಾಥ್ ಬಿಸ್ವಾಸ್ ತಮ್ಮ ಧರ್ಮಕಾರ್ಯಗಳಿಂದ ಪ್ರಸಿದ್ಧರಾಗಿದ್ದರು. ಇವರಿಗೆ ಸಚೀಂದ್ರನಾಥ್ ಎಂದು ನಾಮಕಾರಣ ಮಾಡಲಾಗಿತ್ತು, ಆದರೆ ಇವರ ತಾಯಿ ತಮ್ಮ ಸುರುದ್ರೂಪಿ ಮಗನಿಗೆ ಚಾಬಿ(ಒಂದು ಸುಂದರ ಚಿತ್ರ!) ಎಂಬ ಉಪನಾಮದಿಂದ ಕರೆದರು. ಹಾಗು ಈ ಹೆಸರು ಅವರ ಜೀವನ ಹಾಗು ವೃತ್ತಿಜೀವನದುದ್ದಕ್ಕೂ ಹಾಗೆ ಉಳಿದುಕೊಂಡಿತು. ತಂದೆಯ ಪಾತ್ರದಲ್ಲಿ ಅವರ ಅಸಾಧಾರಣ ಅಭಿವ್ಯಕ್ತಿಯು, ಅದಕ್ಕೆ ತಕ್ಕಂತೆ ಹೇಳಿ ಮಾಡಿಸಿದಂತೆ ಅನಿಸಿದರೂ, ಜನಪ್ರಿಯತೆ ಹಾಗು ವಿಮರ್ಶಾತ್ಮಕ ಪ್ರಶಂಸೆಯನ್ನು ಗಳಿಸುವಲ್ಲಿನ ಪಾತ್ರ ನಿರೂಪಣೆಯು ಪ್ರಭಾವಶಾಲಿಯಾಗಿರುವುದರ ಜೊತೆಗೆ ಮನಕ್ಕೊಪ್ಪುವಂತಿರುತ್ತಿತ್ತು. ಪಾತ್ರದ ನಿರೂಪಣೆಯು ಬ್ರಿಟಿಶ್ ರಾಜ್ ನ ಮಾದರಿಯಲ್ಲಿ ಸಾಂಸ್ಕೃತಿಕವಾಗಿಯೂ ಬಹಳ ಮಹತ್ವವುಳ್ಳದ್ದಾಗಿರುತ್ತಿತ್ತು. ಪೂರ್ವಾಗ್ರಹದಿಂದ ವಿಮುಕ್ತರಾದ ಬೆಂಗಾಲಿಗಳು ಪುರಾತನ ಸಂಪ್ರದಾಯ ಹಾಗು ಆಂಗ್ಲೀಕರಿಸಿದ ನಾಗರಿಕ ಸುಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದರು.[]

ಜೀವನ ಹಾಗು ಚಿತ್ರಬದುಕು

[ಬದಲಾಯಿಸಿ]

ಹಿಂದೂ ಸ್ಕೂಲ್ ನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ, ಚಾಬಿ ಬಿಸ್ವಾಸ್ ಪ್ರೆಸಿಡೆನ್ಸಿ ಕಾಲೇಜು ಹಾಗು ನಂತರದಲ್ಲಿ ವಿದ್ಯಾಸಾಗರ್ ಕಾಲೇಜಿಗೆ ದಾಖಲಾದರು. ಈ ಅವಧಿಯಲ್ಲಿ ಅವರು ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು, ಹಾಗು ಬೆಂಗಾಲಿ ರಂಗಭೂಮಿಯ ಪ್ರಸಿದ್ಧ ನಟ ಸಿಸಿರ್ ಕುಮಾರ್ ಬಾಧುರಿಯ ಸಂಪರ್ಕಕ್ಕೆ ಬಂದರು. ಯುವ ನಟ, ಸಿಸಿರ್ ಕುಮಾರರ ಅಭಿನಯ ಚತುರತೆಗೆ ಮರುಳಾದರು, ಹಾಗು ಹಲವಾರು ಹವ್ಯಾಸಿ ರಂಗಭೂಮಿ ಸಂಘಟನಾ ಕೂಟದಲ್ಲಿ ತಮ್ಮನ್ನು ಆಳವಾಗಿ ತೊಡಗಿಸಿಕೊಂಡರು. ನಾದೆರ್ ನಿಮೈ ನಾಟಕದಲ್ಲಿನ ಶ್ರೀ ಗೌರಂಗ ಪಾತ್ರವು, ಅಂದಿನ ರಂಗಭೂಮಿ ಆಸಕ್ತರಲ್ಲಿ ಚಾಬಿ ಬಿಸ್ವಾಸ್ ರ ಜನಪ್ರಿಯತೆಯನ್ನು ಗಟ್ಟಿಗೊಳಿಸಿತು.

ನಂತರ ಅವರು ನಟನೆಯಿಂದ ತಾತ್ಕಾಲಿಕವಾಗಿ ವಿರಾಮ ಪಡೆದು, ವಿಮೆ ಸಂಸ್ಥೆಗೆ ಸೇರಿಕೊಂಡರು; ಅದರ ನಂತರ ಸೆಣಬಿನ ಉತ್ಪನ್ನಗಳ ವ್ಯಾಪಾರ ಆರಂಭಿಸಿದರು. ಆದರೆ ಸ್ವಲ್ಪ ಸಮಯದಲ್ಲೇ, ರಂಗಭೂಮಿಯ ಎಡೆಗಿನ ತುಡಿತವನ್ನು ತಡೆಯಲು ಸಾಧ್ಯವಾಗದೇ, ಚಾಬಿ ಬಿಸ್ವಾಸ್ ರಂಗಭೂಮಿ ಕ್ಷೇತ್ರಕ್ಕೆ ಮತ್ತೆ ಕಾಲಿಡುತ್ತಾರೆ, ಹಾಗು ಸಮಾಜ್ ಎಂಬ ಸಾಮಾಜಿಕ ಸಂಗೀತ ನಾಟಕದ ಮೂಲಕ ವೃತ್ತಿಪರ ನಟರಾಗಿ ತಮ್ಮ ಪ್ರಥಮ ಪ್ರದರ್ಶನ ನೀಡುತ್ತಾರೆ. ಚಿತ್ರನಟನಾಗಿ ಯಶಸ್ಸು ಗಳಿಸಿದ ನಂತರವೂ ಚಾಬಿ ಬಿಸ್ವಾಸ್ ವೃತ್ತಿಪರ ರಂಗಭೂಮಿ ಹಾಗು ಜಾತ್ರಾ ನಾಟಕ, ವೃತ್ತಿ ರಂಗಭೂಮಿಯ ತಂಡದೊಂದಿಗೆ ತಮ್ಮ ನಂಟನ್ನು ಹಾಗೆ ಉಳಿಸಿಕೊಂಡು ಬಂದರು. ಶೋರೋಷಿ (೧೯೪೦), ಸೀತಾ (೧೯೪೦), ಕೇದಾರ್ ರಾಯ್ (೧೯೪೧), ಷಹಜಹಾನ್ (೧೯೪೧)ನಂತಹ ಯಶಸ್ವೀ ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿನ ಅವರ ನಟನೆಯು, ಪ್ರೇಕ್ಷಕರು ಹಾಗು ಅವರ ಸಮಕಾಲೀನರಲ್ಲೂ ಮೆಚ್ಚುಗೆಗೆ ಪಾತ್ರವಾಯಿತು.

೧೯೩೬ರಲ್ಲಿ, ಚಾಬಿ ಬಿಸ್ವಾಸ್ ಅನ್ನಪೂರ್ಣಾರ್ ಮಂದಿರ್ ಚಿತ್ರದ ಮೂಲಕ ಸಿನಿಮಾರಂಗ ಪ್ರವೇಶಿಸಿದರು. ತಿನ್ಕರಿ ಚಕ್ರಬೋರ್ತಿ ನಿರ್ದೇಶನದ ಈ ಚಿತ್ರದಲ್ಲಿ ಚಾಬಿಬಾಬು ನಾಯಕಿಯ ಪತಿ, ಬಿಶುವಿನ ಪಾತ್ರ ನಿರ್ವಹಿಸಿದ್ದರು. ಸಮಕಾಲೀನ ಬೆಂಗಾಲಿ ರಂಗಭೂಮಿಯ ಭಾವಾವೇಶ ನಟನಾ ಶೈಲಿಯಲ್ಲಿ ತರಬೇತಿ ಪಡೆದಿದ್ದ ಚಾಬಿ ಬಿಸ್ವಾಸ್, ಸಿನಿಮಾದಲ್ಲಿ ನಟನೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಬಹಳ ಬೇಗನೆ ಗ್ರಹಿಸಿಕೊಂಡರು. ನ್ಯೂ ಥಿಯೇಟರ್ಸ್ ನಿರ್ಮಾಣದ ಎಲ್ಲ ಚಿತ್ರಗಳಲ್ಲೂ ಇವರು ಕಾಣಿಸಿಕೊಂಡರು. ಜೊತೆಗೆ ಚೋಕರ್ ಬಾಲಿ (೧೯೩೭), ನಿಮೈ ಸನ್ಯಾಸ್ (೧೯೪೦) ಹಾಗು ಪ್ರತಿಸೃತಿ (೧೯೪೧)ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇಬಕಿ ಬೋಸ್ ರ ಚಿತ್ರ ನರ್ತಕಿ ಯಲ್ಲಿ (೧೯೪೦) ೯೦ ವರ್ಷ ವಯಸ್ಸಿನ ವೃದ್ಧ ಸಂನ್ಯಾಸಿಯಾಗಿ ಅವರ ನಟನೆಯು ಬಹಳ ಅದ್ಭುತವಾಗಿತ್ತು. ವ್ಯತಿರಿಕ್ತವಾಗಿ, ನರ್ತಕಿ ಯಲ್ಲಿನ ಇವರ ಯಶಸ್ವೀ ನಟನೆಯು, ಪ್ರಮುಖ ಪಾತ್ರ ನಿರ್ವಹಣೆಗೆ ಅವಕಾಶಗಳನ್ನು ಸೀಮಿತಗೊಳಿಸಿತು. ಆದರೆ ಶ್ರೇಷ್ಠ ಪಾತ್ರಧಾರಿನಟನಾಗಿ ಇವರ ಖ್ಯಾತಿಯು ಆ ಹೊತ್ತಿಗೆ ಖಾಯಂಗೊಂಡಿತು. ನಟನಾಗಿ ಚಾಬಿಬಾಬುರ ಎರಡನೇ ಬಾರಿಗಿನ ವೃತ್ತಿಪರತೆಯೂ ಈ ಚಿತ್ರದೊಂದಿಗೆ ಆರಂಭಗೊಂಡಿತು. ಆದರೆ ಮನೆಯ ಒಡೆಯನಾಗಿ ಅಥವಾ ವಿನಮ್ರ ವರ್ತನೆಯ ಕುಲೀನನ ಪಾತ್ರಕ್ಕೆ ಇವರು ಬಹುತೇಕ ಅನಿವಾರ್ಯ ಆಯ್ಕೆಯಾದರು. ತಮ್ಮ ಶುದ್ಧವಾದ ಇಂಗ್ಲಿಷ್ ಉಚ್ಚಾರಣೆಯನ್ನು ಸಂಭಾಷಣೆಯಲ್ಲಿ ಸ್ಪಷ್ಟವಾಗಿ ಬಳಸುವುದರೊಂದಿಗೆ,(ಪಹಾಡಿ ಸಾನ್ಯಾಲ್ ಹಾಗು ಬಿಕಾಶ್ ರಾಯ್ ಸಹ ಒಂದು ಹಂತದವರೆಗೆ ಈ ರೀತಿ ಮಾತನಾಡುತ್ತಿದ್ದರು.) ಚಾಬಿ ಬಿಸ್ವಾಸ ನಾಟಕದ ಸಂಭಾಷಣೆ ಬಿತ್ತರಿಸಲು ಒಂದು ವಿಶಿಷ್ಟ ಮಾದರಿಯನ್ನು ಬೆಳೆಸಿಕೊಂಡರು. ಮೊದಲು ಇಂಗ್ಲಿಷ್ ನಲ್ಲಿ ಮಾತನಾಡಿ, ನಂತರ ಒಂದು ತಾತ್ಕಾಲಿಕ ತಡೆಯ ನಂತರ ಅದೇ ಸಂಭಾಷಣೆಯನ್ನು ಬೆಂಗಾಲಿಯಲ್ಲಿ ಮತ್ತೆ ಪುನುರುಚ್ಚರಿಸುತ್ತಿದ್ದರು. ಅಶೋಕ್ (೧೯೪೨), ಪರಿಣಿತ (೧೯೪೨), ದ್ವಂದ (೧೯೪೩), ಮಾತಿರ್ ಘರ್ (೧೯೪೪), ದುಯಿ ಪುರುಷ್ (೧೯೪೫), ಬಿರಾಜ್ ಬೌ (೧೯೪೬), ಹಾಗು ಮಂದನ (೧೯೫೦)ದಂತಹ ಚಿತ್ರಗಳಲ್ಲಿ ಉತ್ತಮ ನಟನಾಗಿ ಅವರ ಪ್ರತಿಭೆಯು ಜನರ ಗಮನ ಸೆಳೆಯಿತು.

ಚಾಬಿ ಬಿಸ್ವಾಸ್ ೧೧ ಜೂನ್ ೧೯೬೨ರಲ್ಲಿ ಕಾರು ಅಪಘಾತವೊಂದರಲ್ಲಿ ನಿಧನರಾದರು. ೧೯೬೨ರಲ್ಲಿ ಬಿಸ್ವಾಸ್ ರ ನಿಧನದ ನಂತರ, ರೇ, ವೃತ್ತಿಪರ ಪ್ರತಿಭೆಯ ಉತ್ತಮ ಮಟ್ಟ ಅಗತ್ಯವಿದ್ದ ಒಂದೇ ಒಂದು ಮಧ್ಯ ವಯಸ್ಕ ಪುರುಷನ ಪಾತ್ರವನ್ನೂ ರಚಿಸಲಿಲ್ಲವೆಂದು ಒಪ್ಪಿಕೊಳ್ಳುತ್ತಾರೆ.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ಚಿತ್ರ (ವರ್ಷ) ನಿರ್ದೇಶಕ ಪಾತ್ರ
ಅನ್ನಪೂರ್ಣಾರ್ ಮಂದಿರ್ (೧೯೩೬) ತಿನ್ಕರಿ ಚಕ್ರಬೋರ್ತಿ ನಟ
ಹರನಿಧಿ (೧೯೩೭) ತಿನ್ಕರಿ ಚಕ್ರಬೋರ್ತಿ ನಟ
ಚೋಖರ್ ಬಾಲಿ (೧೯೩೮) ಸತು ಸೇನ್ ನಟ
ಚಾಣಕ್ಯ (೧೯೩೯) ಸಿಸಿರ್ ಕುಮಾರ್ ಬಾಧುರಿ ನಟ
ಶರ್ಮಿಷ್ಠ (೧೯೩೯) ನರೇಶ್ ಮಿತ್ರ ನಟ
ನರ್ತಕಿ (೧೯೪೦) ದೇಬಕಿ ಬೋಸ್ ನಟ
ನಿಮೈ ಸನ್ಯಾಸಿ (೧೯೪೦) ಫಣಿ ಬರ್ಮ ನಟ
ಸ್ವಾಮಿ ಸ್ತ್ರೀ (೧೯೪೦) ಸತು ಸೇನ್ ನಟ
ಪ್ರತಿಸೃತಿ (೧೯೪೧) ಹೇಮಚಂದ್ರ ಚಂದರ್ ನಟ
ಪ್ರತಿಶೋಧ್ (೧೯೪೧) ಸುಶೀಲ್ ಮಜುಂದಾರ್ ನಟ
ಬಂಗ್ಲಾರ್ ಮೇಯೆ (೧೯೪೧) ನರೇಶ್ ಮಿತ್ರ ನಟ
ಎಪಾರ್ ಒಪಾರ್ (೧೯೪೧) ಸುಕುಮಾರ್ ದಾಸಗುಪ್ತ ನಟ
ಪಶನ್ ದೇವತಾ (೧೯೪೨) ಸುಕುಮಾರ್ ದಾಸಗುಪ್ತ ನಟ
ಶೋಧ್ ಬೋಧ್ (೧೯೪೨) ಸೌಮ್ಯೆನ್ ಮುಖರ್ಜಿ ನಟ
ಅವಯೇರ್ ಬಿಯೇ (೧೯೪೨) ಸುಶೀಲ್ ಮಜುಂದಾರ್ ನಟ
ನಾರಿ (೧೯೪೨) ಪ್ರಫುಲ್ಲ ರಾಯ್ ನಟ
ಕರ್ಣಾರ್ಜುನ್ (೧೯೪೨) ಜ್ಯೋತಿಶ್ ಬ್ಯಾನರ್ಜಿ ನಟ
ಜಿಬನ್ ಸಂಗಿನಿ (೧೯೪೨) ಗುಣಮಯ ಬ್ಯಾನರ್ಜಿ ನಟ
ಗರ್ಮಿಲ್ (೧೯೪೨) ನಿರೇನ್ ಲಾಹಿರಿ ನಟ
ಬೋಂಡಿ (೧೯೪೨) ಶೈಲಜಾನಂದ್ ಮುಖರ್ಜಿ ನಟ
ಪರಿಣಿತ (೧೯೪೨) ಪಶುಪತಿ ಚ್ಯಾಟರ್ಜಿ ನಟ
ಸೌಗಂಧ್ (೧೯೪೨) ಹೇಮಚಂದ್ರ ಚಂದರ್ ನಟ
ಮಹಾಕಬಿ ಕಾಳಿದಾಸ್ (೧೯೪೨) ನಿರೇನ್ ಲಾಹಿರಿ ನಟ
ಅಶೋಕ್ (೧೯೪೨) ಅಜಯ್ ಭಟ್ಟಾಚಾರ್ಯ ನಟ
ಪತಿವ್ರತಾ (೧೯೪೨) ಜಗದೀಶ್ ಚಕ್ರಬೋರ್ತಿ ನಟ
ಮಹಾಕವಿ ಕಾಳಿದಾಸ್ (೧೯೪೨) ನಿರೇನ್ ಲಾಹಿರಿ ನಟ
ಮಿಲನ್ (೧೯೪೨) ಜ್ಯೋತಿಶ್ ಬ್ಯಾನರ್ಜಿ ನಟ
ನಿಲನ್ಗುರಿಯ (೧೯೪೩) ಗುಣಮಯ ಬ್ಯಾನರ್ಜಿ ನಟ
ದೇವರ್ (೧೯೪೩) ಜ್ಯೋತಿಶ್ ಬ್ಯಾನರ್ಜಿ ನಟ
ದಾಬಿ (೧೯೪೩) ಧೀರೇಂದ್ರನಾಥ್ ಗಂಗೂಲಿ ನಟ
ದ್ವಂದ (೧೯೪೩) ಹೆಮೆನ್ ಗುಪ್ತ ನಟ
ದಂಪತಿ (೧೯೪೩) ನಿರೇನ್ ಲಾಹಿರಿ ನಟ
ಅಲೇಯ (೧೯೪೩) ನಬೇಂದುಸುಂದರ್ ನಟ
ಸಮಾಧಾನ್ (೧೯೪೩) ಪ್ರೇಮೇಂದ್ರ ಮಿತ್ರ ನಟ
ದಿಕ್ಶೂಲ್ (೧೯೪೩) ಪ್ರೇಮಾಂಕುರ್ ಅತೊರ್ಥೆ ನಟ
ಛದ್ಮಬೇಷಿ (೧೯೪೪) ಅಜಯ್ ಭಟ್ಟಾಚಾರ್ಯ ನಟ
ಪ್ರತೀಕಾರ್ (೧೯೪೪) ಚಾಬಿ ಬಿಸ್ವಾಸ್ ನಟ, ನಿರ್ದೇಶಕ
ಮಾತಿರ್ ಘರ್ ೧೯೪೪ ಹರಿ ಭಾಂಜ ನಟ
ದುಯಿ ಪುರುಷ್ (೧೯೪೫) ಸುಬೋಧ್ ಮಿತ್ರ ನಟ
ಪತ್ ಬೆಂಧೆ ದಿಲೋ (೧೯೪೫) ಪ್ರೇಮೇಂದ್ರ ಮಿತ್ರ ನಟ
ಬೊಂದಿತ (೧೯೪೫) ಹೇಮಂತ ಗುಪ್ತ ನಟ
ಶ್ರೀ ದುರ್ಗಾ (೧೯೪೫) ಶೈಲಜಾನಂದ್ ಮುಖರ್ಜಿ ನಟ
ರಾಜ್ ಲಕ್ಷ್ಮಿ (೧೯೪೫) ಪ್ರೇಮೇಂದ್ರ ಮಿತ್ರ ನಟ
ವಂದೇ ಮಾತರಂ (೧೯೪೬) ಸುಧೀರ್ ಬಂಧು ಬ್ಯಾನರ್ಜಿ ನಟ
ನಿಬೇದಿತ (೧೯೪೬) ಪ್ರತಿಭಾ ಸಸ್ಮಲ್ ನಟ
ಸಂಗ್ರಾಮ್ (೧೯೪೬) ಅರ್ಧೆಂದು ಮುಖರ್ಜಿ ನಟ
ಸಾತ್ ನಂಬರ್ ಬರಿ (೧೯೪೬) ಸುಕುಮಾರ್ ದಾಸಗುಪ್ತ ನಟ
ತುಮಿ ಆರ್ ಆಮಿ (೧೯೪೬) ಅಪುರ್ಬಾ ಕುಮಾರ್ ಮಿತ್ರ ನಟ
ಬಿರಾಜ್ ಬೌವು (೧೯೪೬) ಅಮರ್ ಮಲ್ಲಿಕ್ ನಟ
ಮಂದಿರ್ (೧೯೪೭) ಫಣಿ ಬರ್ಮಾ ನಟ
ಚಂದ್ರಶೇಖರ್ (೧೯೪೭) ದೇಬಕಿ ಬೋಸ್ ನಟ
ನರ್ಸ್ ಸಿಸಿ (೧೯೪೭) ಸುಬೋಧ್ ಮಿತ್ರ ನಟ
ಅಭಿಜೋಗ್ (೧೯೪೭) ಸುಶೀಲ್ ಮಜುಂದಾರ್ ನಟ
ಅನಿರ್ಬಾನ್ (೧೯೪೮) ಸೌಮ್ಯೇನ್ ಮುಖರ್ಜಿ ನಟ
ನಂದರನೀರ್ ಸಂಸಾರ್ (೧೯೪೮) ಸುರೇಂದ್ರರಂಜನ್ ಸರ್ಕಾರ್ ನಟ
ಶೇಷ್ ನಿಬೇದನ್ (೧೯೪೮) ಧೀರೆಂದ್ರನಾಥ್ ಗಂಗೂಲಿ ನಟ
ಶಂಖ ಸಿಂಧೂರ್ (೧೯೪೮) ಮನುಜೇಂದ್ರ ಭಾಂಜ ನಟ
ಉಮರ್ ಪ್ರೇಮ್ (೧೯೪೮) ಖಗೇನ್ ರಾಯ್ ನಟ
ಸಧರನ್ ಮೆಯೇ (೧೯೪೮) ನಿರೇನ್ ಲಾಹಿರಿ ನಟ
ದೃಷ್ಟಿದಾನ್ (೧೯೪೮) ನಿತಿನ್ ಬೋಸ್ ನಟ
ಮಂಜೂರ್ (೧೯೪೯) ಸುಬೋಧ್ ಮಿತ್ರ ನಟ
ದೇಬಿ ಚೌಧುರಾಣಿ (೧೯೪೯) ಸತೀಶ್ ದಾನ್ಗುಪ್ತ ನಟ
ಜಾರ್ ಜೇಠ ಘರ್ (೧೯೪೯) ಚಾಬಿ ಬಿಸ್ವಾಸ್ ನಟ, ನಿರ್ದೇಶಕ
ಸಿಂಗ್ ದ್ವಾರ್ (೧೯೪೯) ನಿರೇನ್ ಲಾಹಿರಿ ನಟ
ವಿದ್ಯಾಸಾಗರ್ (೧೯೫೦) ಕಾಳಿ ಪ್ರಸಾದ್ ಘೋಷ್ ನಟ
ಗರಾಬಿನಿ (೧೯೫೦) ನಿರೇನ್ ಲಾಹಿರಿ ನಟ
ಮಾನದಂಡ (೧೯೫೦) ರತನ್ ಚ್ಯಾಟರ್ಜಿ ನಟ
ಮಹಸಂಪದ್ (೧೯೫೦) ಸುರೇಂದ್ರರಂಜಾನ್ ಸರ್ಕಾರ್ ನಟ
ಅನುರಾಗ್ (೧೯೫೧) ಜತಿನ್ ದಾಸ್ ನಟ
ಕಲ್ಸಪ್ (೧೯೫೧) ಖಗೇನ್ ರಾಯ್ ನಟ
ಮಲ್ದಾರ್ (೧೯೫೧) ಅಮಿತ್ ಮೊಯಿತ್ರ ನಟ
ಬಿಪ್ಲಾಬಿ ಕ್ಷುದಿರಾಮ್ (೧೯೫೧) ಹಿರಣ್ಮಯ್ ಸೇನ್ ನಟ
ಅಪರಾಜಿತ (೧೯೫೧) ಪಾರ್ಥ ಸಾರಥಿ ಡ್ರಾಮಾ ನಟ
ದುರ್ಗೇಶ್ ನಂದಿನಿ (೧೯೫೧) ಅಮರ್ ಮಲ್ಲಿಕ್ ನಟ
ಸುನಂದರ್ ಬಿಯೇ (೧೯೫೧) ಸುಧೀರ್ ಸರ್ಕಾರ್ ನಟ
ರಾತ್ರಿರ್ ತಪಸ್ಯಾ (೧೯೫೨) ಸುಶೀಲ್ ಮಜುಂದಾರ್ ನಟ
ಕ್ರಿಷ್ಣಕಾಂತರ್ ವಿಲ್ (೧೯೫೨) ಖಗೇನ್ ರಾಯ್ ನಟ
ನಿರಕ್ಷರ್ (೧೯೫೨) ಗುಣಮಯ ಬ್ಯಾನರ್ಜಿ ನಟ
ಪ್ರಾರ್ಥನಾ (೧೯೫೨) ಪ್ರಣಬ್ ರಾಯ್ ನಟ
ಅಲ್ಲಾದ್ದೀನ್-ಓ-ಆಶ್ಚರ್ಯ ಪ್ರದೀಪ್ (೧೯೫೨) ಬಿಜೋನ್ ಸೇನ್ ನಟ
ವಿದ್ಯಾಸಾಗರ್ (೧೯೫೨) ಕಾಳಿ ಪ್ರಸಾದ್ ಘೋಷ್ ನಟ
ಕರ್ ಪಾಪೆ (೧೯೫೨) ಕಾಳಿ ಪ್ರಸಾದ್ ಘೋಷ್ ನಟ
ಜಬನ್ಬೋಂಡಿ (೧೯೫೨) ಅಮರ್ ದತ್ತಾ ನಟ
ಸುಭದಾ (೧೯೫೨) ನಿರೇನ್ ಲಾಹಿರಿ ನಟ
ಸತಿ ಬೇಹುಲ (೧೯೫೩) ಸುನಿಲ್ ಗಂಗೂಲಿ ನಟ
ರಾಜ ಕೃಷ್ಣಚಂದ್ರ (೧೯೫೩) ಸುಧೀರ್ ಬಂಧು ಬ್ಯಾನರ್ಜಿ ನಟ
ಜೋಗ್ ಬಿಯೋಗ್ (೧೯೫೩) ಪಿನಾಕಿ ಮುಖರ್ಜಿ ನಟ
ಬೌದಿರ್ ಬೋನ್ (೧೯೫೩) ಖಗೇನ್ ರಾಯ್ ನಟ
ಸಬುಜ್ ಪಹರ್ಹ್ (೧೯೫೩) ಅಪುರ್ಬಾ ಕುಮಾರ್ ಮಿತ್ರ ನಟ
ಸಾತ್ ನಂಬರ್ ಕಯೆದಿ (೧೯೫೩) ಸುಕುಮಾರ್ ದಾಸಗುಪ್ತ ನಟ
ಬೈಮನಿಕ್ (೧೯೫೩) ಶ್ಯಾಮ್ ಚಕ್ರಬೋರ್ತಿ ನಟ
ಬ್ಲೈಂಡ್ ಲೇನ್ (೧೯೫೩) ಶೈಲಜಾನಂದ ಮುಖರ್ಜಿ ನಟ
ಶೆಷೆರ್ ಕಬಿತ (೧೯೫೩) ಮೋಧು ಬೋಸ್ ನಟ
ಲಾಖ್ ಟಾಕ (೧೯೫೩) ನಿರೇನ್ ಲಾಹಿರಿ ನಟ
ಮಕರ್ಸರ್ ಜಾಲ (೧೯೫೩) ಪಶುಪತಿ ಕುಂದು ನಟ
ಪ್ರಫುಲ್ಲ (೧೯೫೪) ಚಿತ್ತ ಬೋಸ್ ನಟ
ಜಾದುಭಟ್ಟ (೧೯೫೪) ನಿರೇನ್ ಲಾಹಿರಿ ನಟ
ಭಾಂಗ-ಗರಾ (೧೯೫೪) ಸುಶೀಲ್ ಮಜುಂದಾರ್ ನಟ
ಬಂಗ್ಲಾರ್ ನಾರಿ (೧೯೫೪) ಶೈಲಜಾನಂದನ ಮುಖರ್ಜಿ ನಟ
ಓರಾ ಥಾಕೆ ಒಧರೆ (೧೯೫೪) ಸುಕುಮಾರ್ ದಾಸಗುಪ್ತ ನಟ
ನಾ (೧೯೫೪) ಶ್ರೀ ತಾರಾಶಂಕರ್ ನಟ
ಧುಲಿ (೧೯೫೪) ಪಿನಾಕಿ ಮುಖರ್ಜಿ ನಟ
ಶೋಭಾ (೧೯೫೪) ನಿರೇನ್ ಲಾಹಿರಿ ನಟ
ಶೋರಷಿ (೧೯೫೪) ಪಶುಪತಿ ಚ್ಯಾಟರ್ಜಿ ನಟ
ಚ್ಹೇಲೆ ಕರ್ (೧೯೫೪) ಚಿತ್ತಾ ಬೋಸ್ ನಟ
ಮಾ-ಓ-ಚ್ಹೇಲೆ (೧೯೫೪) ಗುಣಮಯ ಬ್ಯಾನರ್ಜಿ ನಟ
ಕಲ್ಯಾಣಿ (೧೯೫೪) ನಿರೇನ್ ಲಾಹಿರಿ ನಟ
ಸದಾನಂದರ್ ಮೇಲಾ (೧೯೫೪) ಸುಕುಮಾರ್ ದಾಸಗುಪ್ತ ನಟ
ಬಿಧಿಲಿಪಿ (೧೯೫೫) ಮನು ಸೇನ್ ನಟ
ದೇಬಿ ಮಾಲಿನಿ (೧೯೫೫) ನಿರೇನ್ ಲಾಹಿರಿ ನಟ
ದತ್ತಕ್ (೧೯೫೫) ಕಮಲ್ ಗಂಗೂಲಿ ನಟ
ಕಾಲೋ ಬೌ (೧೯೫೫) ಶಿಲ್ಪಿ ಸಾಂಘ ನಟ
ರಾಣಿ ರಾಷ್ಮೊನಿ (೧೯೫೫) ಕಾಳಿ ಪ್ರಸಾದ್ ಘೋಷ್ ನಟ
ಕಥಾ ಕಾವ್ (೧೯೫೫) ಶೈಲಜಾನಂದನ ಮುಖರ್ಜಿ ನಟ
ಪಥೇರ್ ಶೇಷೆ (೧೯೫೫) ಅರ್ಧೆಂದು ಚ್ಯಾಟರ್ಜಿ ನಟ
ಸಂಜ್ಹೇರ್ ಪ್ರದೀಪ್ (೧೯೫೫) ಸುಧಾಂಗ್ಶು ಮುಖರ್ಜಿ ನಟ
ಪ್ರಶ್ನಾ (೧೯೫೫) ಚಂದ್ರಶೇಖರ್ ಬೋಸ್ ನಟ
ಹ್ರಾದ್ (೧೯೫೫) ಅರ್ಧೆಂದು ಸೇನ್ ನಟ
ಶ್ರೀಬತ್ಸ ಚಿಂತ (೧೯೫೫) ಫಣಿ ಬರ್ಮಾ ನಟ
ಭಾಗಬನ್ ಶ್ರೀ ಶ್ರೀ ರಾಮಕೃಷ್ಣ (೧೯೫೫) ಪ್ರಫುಲ್ಲ ಚಕ್ರಬೋರ್ತಿ ನಟ
ದೃಷ್ಟಿ (೧೯೫೫) ಚಿತ್ತಾ ಬೋಸ್ ನಟ
ಉಪಹಾರ್ (೧೯೫೫) ತಪನ್ ಸಿನ್ಹಾ ನಟ
ಪರಿಶೋಧ್ (೧೯೫೫) ಸುಕುಮಾರ್ ದಾಸಗುಪ್ತ ನಟ
ಜೋಯ್ ಮಾ ಕಾಳಿ ಬೋರ್ಡಿಂಗ್ (೧೯೫೫) ಸಾಧನ್ ಸರ್ಕಾರ್ ನಟ
ಬ್ರತಚಾರಿಣಿ (೧೯೫೫) ಕಮಲ್ ಗಂಗೂಲಿ ನಟ
ಝಾರೆರ್ ಪಾರೆ (೧೯೫೫) ದೇಬ್ ನಾರಾಯಣ್ ಗುಪ್ತ ನಟ
ಸಬರ್ ಉಪಾರೆ (೧೯೫೫) ಅಗ್ರದೂತ್ ನಟ
ಫಾಲ್ಗು (೧೯೫೬) ಸತೀಶ್ ದಾಸಗುಪ್ತ ನಟ
ಅಸಮಾಪ್ತ (೧೯೫೬) ರತನ್ ಚ್ಯಾಟರ್ಜಿ ನಟ
ತ್ರಿಜಾಮ (೧೯೫೬) ಅಗ್ರದೂತ್ ನಟ
ರಾಜಪಥ್ (೧೯೫೬) ಗುಣಮಯ ಬ್ಯಾನರ್ಜಿ ನಟ
ಶಂಕರ್ ನಾರಾಯಣ್ ಬ್ಯಾಂಕ್ (೧೯೫೬) ನಿರೇನ್ ಲಾಹಿರಿ ನಟ
ಗೋವಿಂದದಾಸ್ (೧೯೫೬) ಪ್ರಫುಲ್ಲ ಚಕ್ರಬೋರ್ತಿ ನಟ
ಅಸಬರ್ನ (೧೯೫೬) ಪಿನಾಕಿ ಮುಖರ್ಜಿ ನಟ
ಕಾಬುಲಿವಾಲ (೧೯೫೬) ತಪನ್ ಸಿನ್ಹಾ ನಟ
ದಾನೆರ್ ಮರ್ಯಾದ (೧೯೫೬) ಸುಶೀಲ್ ಮಜುಂದಾರ್ ನಟ
ಮಮ್ಲಾರ್ ಫಲ್ (೧೯೫೬) ಪಶುಪತಿ ಚ್ಯಾಟರ್ಜಿ ನಟ
ಮದನ್ ಮೋಹನ್ (೧೯೫೬) ಅಮಲ್ ಕುಮಾರ್ ಬೋಸ್ ನಟ
ರಾತ್ ಭೋರ್ (೧೯೫೬) ಮೃಣಾಲ್‌ ಸೇನ್‌ ನಟ
ಏಕದಿನ ರಾತ್ರೆ (೧೯೫೬) ಸೊಂಭು ಮಿತ್ರ ನಟ
ಛಾಯಾ ಸಂಗಿನಿ ' (೧೯೫೬) ಬಿದ್ಯಾಪತಿ ಘೋಷ್ ನಟ
ಭೋಲಾ ಮಾಸ್ಟರ್ (೧೯೫೬) ನಿರೇನ್ ಲಾಹಿರಿ ನಟ
ಶುಭರಾತ್ರಿ (೧೯೫೬) ಸುಶೀಲ್ ಮಜುಂದಾರ್ ನಟ
ಸಾಧಕ್ ರಾಮ್ ಪ್ರೋಸಾದ್ (೧೯೫೬) ಬಂಗ್ಸಿ ಆಶ್ ನಟ
ಸುರ್ಯಮುಖಿ (೧೯೫೬) ಬಿಕಾಶ್ ರೇ ನಟ
ಸಾಹೇಬ್ ಬೀಬಿ ಗೊಲಾಮ್ (೧೯೫೬) ಕಾರ್ತಿಕ್ ಚಟ್ಟೋಪಾಧ್ಯಾಯ ನಟ
ಪುತ್ರಬಧು (೧೯೫೬) ಚಿತ್ತಾ ಬೋಸ್ ನಟ
ಟಾಕ-ಆನ-ಪೈ (೧೯೫೬) ಜ್ಯೋತಿರ್ಮೊಯ್ ರಾಯ್ ನಟ
ಪರಾಧೀನ್ (೧೯೫೬) ಮೋಧು ಬೋಸ್ ನಟ
ಸಿಂಥಿರ್ ಸಿಂಧೂರ್ (೧೯೫೬) ಅರ್ಧೆಂದು ಸೇನ್ ನಟ
ಕೀರ್ತಿ ಗರ್ಹ್ (೧೯೫೬) ಸೌಮ್ಯೇನ್ ಮುಖರ್ಜಿ ನಟ
ಮನರಕ್ಷಾ (೧೯೫೬) ಸತೀಶ್ ದಾಸಗುಪ್ತ ನಟ
ಕಾರಿ-ಓ-ಕೋಮಲ್ (೧೯೫೭) ಮೋನಿ ಘೋಷ್ ನಟ
ಬರ್ದಿದಿ (೧೯೫೭) ಅಜಯ್ ಕಾರ್ ನಟ
ಅಭಿಷೇಕ್ (೧೯೫೭) ಚಿತ್ರಾ ಪಾಲಿ ನಟ
ಆದರ್ಶ ಹಿಂದೂ ಹೋಟೆಲ್ (೧೯೫೭) ಅರ್ಧೆಂದು ಸೇನ್ ನಟ
ಪರಶ್ ಪತ್ಥರ್ (೧೯೫೭) ಸತ್ಯಜಿತ್ ರೇ ನಟ
ತಪಸಿ (೧೯೫೭) ಚಿತ್ತಾ ಬೋಸ್ ನಟ
ಪ್ರಿತಿಬಿ ಅಮರೆ ಚಾಯ್ (೧೯೫೭) ನಿರೇನ್ ಲಾಹಿರಿ ನಟ
ಶೇಷ್ ಪರಿಚೊಯ್ (೧೯೫೭) ಸುಶೀಲ್ ಮಜುಂದಾರ್ ನಟ
ಮಧಬಿರ್ ಜೋನ್ಯೇ (೧೯೫೭) ನಿತಿನ್ ಬೋಸ್ ನಟ
ಛಾಯ ಪಥ್ (೧೯೫೭) ಗುಣಮಯ ಬ್ಯಾನರ್ಜಿ ನಟ
ಅಂತರಿಕ್ಷ (೧೯೫೭) ರಜೆನ್ ತರಫ್ದಾರ್ ನಟ
ಮಾಥುರ್ (೧೯೫೭) ಸುಧೀರ್ ಬಂಧು ಬ್ಯಾನರ್ಜಿ ನಟ
ಘುಮ್ (೧೯೫೭) ಅಗ್ರಣಿ ನಟ
ಪಥೆ ಹೋಲೋ ದೇರಿ (೧೯೫೭) ಅಗ್ರದೂತ್ ನಟ
ಕಾಂಚ-ಮಿಥೆಯ್ (೧೯೫೭) ಜ್ಯೋತಿರ್ಮೊಯ್ ರಾಯ್ ನಟ
ಬಾಕ್ಸಿದ್ಧ (೧೯೫೭) ಬಿರೇಸ್ವರ್ ಬೋಸ್ ನಟ
ಖೇಲ ಭಾನ್ಗರ್ ಖೇಲ (೧೯೫೭) ರತನ್ ಚ್ಯಾಟರ್ಜಿ ನಟ
ಸಂಧಾನ್ (೧೯೫೭) ಚಿತ್ತಾ ಸೇನ್ ನಟ
ನತುನ್ ಪ್ರಭಾತ್ (೧೯೫೭) ಬಿಕಾಶ್ ರೇ ನಟ
ರಾಸ್ತರ್ ಚ್ಹೇಲೆ (೧೯೫೭) ಚಿತ್ತಾ ಬೋಸ್ ನಟ
ಸುರೇರ್ ಪರಷೆ (೧೯೫೭) ಚಿತ್ತಾ ಬೋಸ್ ನಟ
ಬಾರಾ ಮಾ (೧೯೫೭) ನಿರೇನ್ ಲಾಹಿರಿ ನಟ
ಏಕ್ತಾರಾ (೧೯೫೭) ಹಿರೇನ್ ಬೋಸ್ ನಟ
ಲೌಹ-ಕಪಟ್ (೧೯೫೭) ತಪನ್ ಸಿನ್ಹಾ ನಟ
ಹರಿಶ್ಚಂದ್ರ (೧೯೫೭) ಫಣಿ ಬರ್ಮಾ ನಟ
ಗರೇರ್ ಮಟ್ (೧೯೫೭) ಆಜ್ ನಿರ್ಮಾಣ ತಂಡ ನಟ
ಅಭೋಯೆರ್‌ ಬಿಯೆ (೧೯೫೭) ಸುಕುಮಾರ್ ದಾಸಗುಪ್ತ ನಟ
ನಿಲಾಚಲೇ ಮಹಾಪ್ರಭು (೧೯೫೭) ಕಾರ್ತಿಕ್ ಚಟ್ಟೋಪಾಧ್ಯಾಯ ನಟ
ಮರ್ಮಬನಿ (೧೯೫೮) ಸುಶೀಲ್ ಮಜುಂದಾರ್ ನಟ
ತಾನ್ಸೇನ್ (೧೯೫೮) ನಿರೇನ್ ಲಾಹಿರಿ ನಟ
ಇಂದ್ರಾಣಿ (೧೯೫೮) ನಿರೇನ್ ಲಾಹಿರಿ ನಟ
ನಾಗಿಣಿ ಕನ್ಯಾರ್ ಕಹಿನಿ (೧೯೫೮) ಸಲಿಲ್ ಸೇನ್ ನಟ
ಡೈಲಿ ಪ್ಯಾಸೆಂಜರ್ (೧೯೫೮) ಸಾಧನ್ ಸರ್ಕಾರ್ ನಟ
ಓ ಅಮರ್ ದೇಶೇರ್ ಮಾಟಿ (೧೯೫೮) ಪಥಿಕೃತ್ ನಟ
ಜಮಾಲಯೆ ಜಿಬಂತ ಮನುಷ್ (೧೯೫೮) ಪ್ರಫುಲ್ಲ ಚಕ್ರಬೋರ್ತಿ ನಟ
ನೂಪುರ್ (೧೯೫೮) ದಿಲೀಪ್ ನಾಗ್ ನಟ
ಜಲಸಾಘರ್ (೧೯೫೮) ಸತ್ಯಜಿತ್ ರೇ ನಾಟಕ ನಟ
ಬಂಧು (೧೯೫೮) ಚಿತ್ತಾ ಬೋಸ್ ನಟ
ಸೂರ್ಯ ತೋರಣ್ (೧೯೫೮) ಅಗ್ರದೂತ್ ನಟ
ಸಾಧಕ್ ಬಾಮಕಶ್ಯಪ (೧೯೫೮) ನಾರಾಯಣ್ ಘೋಷ್ (೨) ನಟ
ಹೆಡ್ ಮಾಸ್ಟರ್ (೧೯೫೮) ಅಗ್ರಗಾಮಿ ನಟ
ಚೊವಾ ಪಾವಾ (೧೯೫೮) ತರುಣ್ ಮಜುಂದಾರ್, ಯಾತ್ರಿಕ್ ನಟ
ಪ್ರಿಯಾ (೧೯೫೮) ಸಲಿಲ್ ಸೇನ್ ನಟ
ಧೂಮಕೇತು (೧೯೫೮) ಗೌರಂಗ ಪ್ರಸಾದ್ ಬಸು ನಟ
ಶಶಿ ಬಬುರ್ ಸಂಸಾರ್ (೧೯೫೯) ಸುಧೀರ್ ಮುಖರ್ಜಿ ನಟ
ಕ್ಷಣಿಕರ್ ಅತಿಥಿ (೧೯೫೯) ತಪನ್ ಸಿನ್ಹಾ ನಟ
ಚಾಬಿ (೧೯೫೯) ನಿರೇನ್ ಲಾಹಿರಿ ನಟ
ಆಮ್ರಪಾಲಿ (೧೯೫೯) ಶ್ರೀ ತಾರಾಶಂಕರ್ ನಟ
ನಿರ್ಧಾರಿತ ಸಿಲ್ಪಿರ್ ಅನುಪಸ್ಥಿತಿ ತೆಯ್ (೧೯೫೯) ನಿರ್ಮಲ್ ಡೇ ನಟ
ಗಲಿ ಥೆಕೆ ರಾಜ್ಪಥ್ (೧೯೫೯) ಪ್ರಫುಲ್ಲ ಚಕ್ರಬೋರ್ತಿ ನಟ
ಮ್ರಿತೇರ್ ಮರ್ತ್ಯೆ ಆಗಮನ್ (೧೯೫೯) ಪಶುಪತಿ ಚ್ಯಾಟರ್ಜಿ ನಟ
ಶುಭ ಬಿಬಾಹ (೧೯೫೯) ಸೊಂಭು ಮಿತ್ರ ನಟ
ಖೇಲಘರ್ (೧೯೫೯) ಅಜಯ್ ಕಾರ್ ನಟ
ಸೋನಾರ್ ಹರಿಣ್ (೧೯೫೯) ಮಂಗಲ್ ಚಕ್ರಬೋರ್ತಿ ನಟ
ರಾತೇರ್ ಅಂಧಕಾರೆ (೧೯೫೯) ಅಗ್ರಣಿ ನಟ
ಠಾಕೂರ್ ಹರಿದಾಸ್ (೧೯೫೯) ಗೋಬಿಂದ ರೇ ನಟ
ದೆರ್ಸೋ ಖೊಖರ್ ಕಂಡೋ (೧೯೫೯) ಕಮಲ್ ಗಂಗೂಲಿ ನಟ
ಬಿಚರಕ್ (೧೯೫೯) ಪ್ರಭಾತ್ ಮುಖರ್ಜಿ ನಟ
ಭ್ರಾಂತಿ (೧೯೫೯) ಪ್ರಫುಲ್ಲ ಚಕ್ರಬೋರ್ತಿ ನಟ
ಅಗ್ನಿಸಂಭಾಭ (೧೯೫೯) ಸುಶೀಲ್ ಮಜುಂದಾರ್ ನಟ
ನ್ರಿತ್ಯೇರಿ ತಲೇ ತಲೇ (೧೯೫೯) ಸುಧೀರ್ ಬಂಧು ಬ್ಯಾನರ್ಜಿ ನಟ
ಕ್ಷುದಿಸ್ತ ಪಾಷಾಣ್ (೧೯೬೦) ತಪನ್ ಸಿನ್ಹಾ ನಟ
ಗರಿಬೇರ್ ಮೆಯೇ (೧೯೬೦) ಅರ್ಧೆಂದು ಮುಖರ್ಜಿ ನಟ
ನಾದೆರ್ ನಿಮೈ (೧೯೬೦) ಬಿಮಲ್ ರಾಯ್ Jr. ನಟ
ಹಾಸ್ಪಿಟಲ್ (೧೯೬೦) ಸುಶೀಲ್ ಮಜುಂದಾರ್ ನಟ
ಶೇಷ್ ಪರ್ಯಂತ (೧೯೬೦) ಸುಧೀರ್ ಮುಖರ್ಜಿ ನಟ
ಶುನೋ ಬರನಾರಿ (೧೯೬೦) ಅಜಯ್ ಕಾರ್ ನಟ
ತೈಲಂಗಸ್ವಾಮಿ (೧೯೬೦) ಚಿತ್ರಸಾರಥಿ ನಟ
ಮಾಯಾ ಮೃಗ (೧೯೬೦) ಚಿತ್ತಾ ಬೋಸ್ ನಟ
ಸ್ಮೃತಿ ಟುಕು ಠಾಕ್ (೧೯೬೦) ತರುಣ್ ಮಜುಂದಾರ್ ನಟ
ರಾಜ-ಸಜಾ (೧೯೬೦) ಬಿಕಾಶ್ ರೇ ನಟ
ಸುರೇರ್ ಪಿಯಾಸಿ (೧೯೬೦) ಬಿಶು ದಾಸಗುಪ್ತ ನಟ
ಹಾತ್ ಬರಲೇಯಿ ಬಂಧು (೧೯೬೦) ಸುಕುಮಾರ್ ದಾಸಗುಪ್ತ ನಟ
ಸಕ್ಹೇರ್ ಚೋರ್ (೧೯೬೦) ಪ್ರಫುಲ್ಲ ಚಕ್ರಬೋರ್ತಿ ನಟ
ದೆಬರ್ಷಿ ನರದೇರ್ ಸಂಸಾರ್ (೧೯೬೦) ಪಂಚಬೂತ್ ನಟ
ಅಜನ ಕಹಿನಿ (೧೯೬೦) ಸುನಿಲ್ ಬರನ್ ನಟ
ಚುಪಿ ಚುಪಿ ಆಸೆ (೧೯೬೦) ಪ್ರೇಮೆಂದ್ರ ಮಿತ್ರ ನಟ
ದೇವಿ (೧೯೬೦) ಸತ್ಯಜಿತ್ ರೇ ನಟ
ಕಾರೆಯ್ ಸಹೆಬೇರ್ ಮುನ್ಸಿ (೧೯೬೧) ಬಿಕಾಶ್ ರೇ ನಟ
ಮಾನಿಕ್ (೧೯೬೧) ಬಿಜೋಲಿ ಬರನ್ ಸೇನ್ ನಟ
ಅಗ್ನಿ ಸಂಸ್ಕಾರ್ (೧೯೬೧) ಅಗ್ರದೂತ್ ನಟ
ಮಧ್ಯ ರಾತೇರ್ ತಾರಾ (೧೯೬೧) ಪಿನಾಕಿ ಮುಖರ್ಜಿ ನಟ
ಮಧುರೆನೋ (೧೯೬೧) ಶಾಂತಿ ಬ್ಯಾನರ್ಜಿ ನಟ
ಕಾಂಚನ್ ಮೂಲ್ಯ (೧೯೬೧) ನಿರ್ಮಲ್ ಮಿತ್ರ ನಟ
ಕಾಂಚೆರ್ ಸ್ವರ್ಗ (೧೯೬೧) ತರುಣ್ ಮಜುಂದಾರ್ ನಟ
ಸಪ್ತಪದಿ (೧೯೬೧) ಅಜಯ್ ಕಾರ್ ನಟ
ಆಶಯ್ ಬಂಧಿನು ಘರ್ (೧೯೬೧) ಕನಕ್ ಮುಖರ್ಜಿ ನಟ
ನೆಕ್ ಲೇಸ್ (೧೯೬೧) ದಿಲೀಪ್ ನಾಗ್ ನಟ
ಮಾ (೧೯೬೧) ಚಿತ್ತಾ ಬೋಸ್ ನಟ
ಸ್ವಯಂಬರ (೧೯೬೧) ಅಸಿತ್ ಸೇನ್ ನಟ
ಬಿಶ್ ಕನ್ಯಾ (೧೯೬೧) ಶ್ರೀ ಜಯದ್ರಥ ನಟ
ದೈನೀ (೧೯೬೧) ಮನೋಜ್ ಭಟ್ಟಾಚಾರ್ಯ ನಟ
ದಾದಾ ಠಾಕೂರ್ (೧೯೬೨) ಸುಧೀರ್ ಮುಖರ್ಜಿ ನಟ
ಕಾಂಚೇನ್ಜುಂಗ (೧೯೬೨) ಸತ್ಯಜಿತ್ ರೇ ನಟ
ಶುಭೋದೃಷ್ಟಿ (೧೯೬೨) ಚಿತ್ತಾ ಬೋಸ್ ನಟ
ಬಿಪಾಶಾ (೧೯೬೨) ಅಗ್ರದೂತ್ ನಟ
ಬೋಧು (೧೯೬೨) ಭೂಪೇನ್ ರಾಯ್ ನಟ
ಸೂರ್ಯಸ್ನಾನ್ (೧೯೬೨) ಅಜಯ್ ಕುಮಾರ್ ನಟ
ಅಟಲ್ ಜಲೇರ್ ಆಹ್ವಾನ್ (೧೯೬೨) ಅಜಯ್ ಕಾರ್ ನಟ
ಸಾರೀ ಮೇಡಂ (೧೯೬೨) ದಿಲೀಪ್ ಬೋಸ್ ನಟ
ಶಿಯುಲಿಬರಿ (೧೯೬೨) ಪಿಜುಶ್ ಬೋಸ್ ನಟ
ಅಗ್ನಿಸಿಖಾ (೧೯೬೨) ರಾಜೆನ್ ತರಫ್ದಾರ್ ನಟ
ಧೂಪ್ ಛಾಯಾ (೧೯೬೨) ಚಿತ್ತಾ ಬೋಸ್ ನಟ
ಮಾಯರ್ ಸಂಸಾರ್ (೧೯೬೨) ಕನಕ್ ಮುಖರ್ಜಿ ನಟ
ಕಾಜಲ್ (೧೯೬೨) ಸುನೀಲ್ ಬ್ಯಾನರ್ಜಿ ನಟ
ಸೂರ್ಯ ಸಿಖಾ (೧೯೬೩) ಸಲಿಲ್ ದತ್ತಾ ನಟ
ಹೈ ಹೀಲ್ (೧೯೬೩) ದಿಲೀಪ್ ಬೋಸ್ ನಟ
ಛಕ್ಕಾ ಪಂಜಾ (೧೯೬೩) ಪ್ರಫುಲ್ಲಾ ರಾಯ್ ನಟ
ಕಂಟತರ್ (೧೯೬೪) ಬೀರೆಶ್ವರ್ ಮುಖರ್ಜಿ ನಟ
ಬಿಗ್ನಂ ಓ ಬಿಧಾತ (೧೯೭೩) ಬಿಮಲ್ ರಾಯ್ Jr. ನಟ
ಶ್ರೀ ಶ್ರೀ ಮಾ ಲಕ್ಷ್ಮಿ (೧೯೭೭) ಪ್ರಭಾತ್ ಚಕ್ರಬೋರ್ತಿ ನಟ

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Bengali Cinema Chhabi Biswas". Archived from the original on 2007-12-12. Retrieved 2007-12-12.