ನುವಾಖಾಯ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Nuakhai
ಚಿತ್ರ:Nuakhai.jpg
Nuakhai celebrations in ಬೆಂಗಳೂರು, 2007
ಆಚರಿಸಲಾಗುತ್ತದೆHinduism
ರೀತಿFestival of Harvest
ಆಚರಣೆಗಳು1 day
ಆರಂಭPanchami tithi (fifth day) of lunar fortnight of Bhadrava
ದಿನಾಂಕAugust–September
೨೦೨೪ datedate missing (please add)

ನುವಾಖಾಯ್ (ನಬನ್ನ ಎಂದು ಸಹ ಗುರುತಿಸಲ್ಪಡುವ) ಅನ್ನುವುದು ಒಂದು ಕೃಷಿ ಸಂಬಂಧಿ ಹಬ್ಬವಾಗಿದ್ದು, ಭಾರತದಲ್ಲಿ ಇದನ್ನು ಪ್ರಮುಖವಾಗಿ ಪಶ್ಚಿಮ ಒಡಿಶಾ (ಕೊಸಲ) ಜನರಿಂದ ಆಚರಿಸಲಾಗುತ್ತದೆ, ಮುಖ್ಯವಾಗಿ ಸಂಬಲ್‌ಪೂರಿ ಸಾಂಸ್ಕೃತಿಕ ಪ್ರದೇಶದಲ್ಲಿ.[೧] ನುವಾಖಾಯ್ ಹಬ್ಬವನ್ನು ಆ ಋತುವಿನ ಹೊಸ ಅಕ್ಕಿಯನ್ನು ಆಹ್ವಾನಿಸಲು ಆಚರಿಸಲಾಗುತ್ತದೆ. ಹಿಂದು ಪಂಚಾಂಗ ದಾಖಲೆ ಪಟ್ಟಿಯ ಪ್ರಕಾರ ಇದನ್ನು ಭಾದ್ರಪದ ತಿಂಗಳಿನ ಚಂದ್ರ ಪಕ್ಷದ ಪಂಚಮಿ ತಿಥಿ (ಐದನೆಯ ದಿನ)ಯಂದು ಅಥವಾ ಗಣೇಶ ಚತುರ್ಥಿ ಹಬ್ಬದ ಮರುದಿನವಾದ ಭಾದ್ರ (ಆಗಸ್ಟ್-ಸೆಪ್ಟೆಂಬರ್)ದಂದು ಆಚರಿಸಲಾಗುತ್ತದೆ. ಇದು ಕೋಸಲದ ಬಹಳ ಪ್ರಮುಖ ಸಾಮಾಜಿಕ ಹಬ್ಬವಾಗಿದೆ.

ಹಬ್ಬವನ್ನು ಕುರಿತು[ಬದಲಾಯಿಸಿ]

ನುವಾಖಾಯ್ ಹಬ್ಬವನ್ನು ನುವಾಖಾಯ್ ಪರಬ್ ಅಥವಾ ನುವಾಖಾಯ್ ವೆಟ್‌ಘಟ್ ಎಂದು ಸಹ ಕರೆಯಲಾಗುತ್ತದೆ. ನವ್ ಪದದ ಅರ್ಥ ಹೊಸದು ಮತ್ತು ಕಾಯ್ ಅಂದರೆ ಆಹಾರ, ಆದ್ದರಿಂದ ಈ ಹೆಸರು ರೈತರು ಹೊಸಾ ಫಸಲಿನ ಅಕ್ಕಿಯ ಅನುಭೋಗದಲ್ಲಿದ್ದಾರೆ ಎಂಬ ಅರ್ಥವನ್ನು ಹೊಂದಿದೆ. ಹಬ್ಬವನ್ನು ಭರವಸೆಯ ಹೊಸಾ ಕಿರಣವನ್ನಾಗಿ ಕಾಣಲಾಗಿದ್ದು, ಗಣೇಷ್ ಚತುರ್ಥಿ ಹಬ್ಬದ ಮರುದಿನ ಇದನ್ನು ಆಚರಿಸಲಾಗುತ್ತದೆ. ರೈತ ಮತ್ತು ಕೃಷಿಕ ಸಮುದಾಯಕ್ಕೆ ಇದು ಅತ್ಯಂತ ಪ್ರಾಧಾನ್ಯತೆಯನ್ನು ಹೊಂದಿದೆ. ಈ ಹಬ್ಬವನ್ನು ದಿನದ ವಿಶಿಷ್ಟ ಸಮಯದಲ್ಲಿ ಆಚರಿಸಲಾಗುತ್ತದೆ, ಮತ್ತು ಆ ಸಮಯವನ್ನು ಲಗಾನ್ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಮನೆಯು ಅರ್ಸ ಪಿಥ (ಅಕ್ಕಿಯಿಂದ ಮಾಡಿದ ಆಹಾರ)ದಿಂದ ತುಂಬಿರುತ್ತದೆ, ಇದು ಒಡಿಶಾದ ಪಶ್ಚಿಮ ಭಾಗದಲ್ಲಿ ಅತ್ಯಂತ ಪ್ರಸಿದ್ಧಿಯಾದ ತಿಂಡಿ. ಲಗನ್ ಬಂದಾಗ, ಜನರು ಮೊದಲು ತಮ್ಮ ಗ್ರಾಮ ದೇವರು ಅಥವಾ ದೇವತೆಯನ್ನು ನೆನಸಿಕೊಂಡು ನಂತರ ನುವಾ ವನ್ನು ಸ್ವೀಕರಿಸುತ್ತಾರೆ.

ನುವಾಖಾಯ್ ಅನ್ನುವುದು ಆದಿವಾಸಿ ಜನಾಂಗ ಹಾಗು ಹಿಂದು-ಜಾತಿ ಎರಡು ಪಂಗಡ ಜನರ ಕೃಷಿಕ ಹಬ್ಬವಾಗಿದೆ. ಈ ಹಬ್ಬವನ್ನು ಒಡಿಶಾದಾದ್ಯಂತ ಆಚರಿಸಲಾಗುತ್ತದೆ, ಆದರೆ ವಿಶೇಷವಾಗಿ ಇದು ಆದಿವಾಸಿ ಜನಾಂಗ ಹೆಚ್ಚಾಗಿರುವ ಪಶ್ಚಿಮ ಒಡಿಶಾದ ಪ್ರದೇಶಗಳ ಜನರ ಜೀವನ ಮತ್ತು ಸಂಸ್ಕೃತಿಯಲ್ಲಿ ಹೆಚ್ಚು ಪ್ರಧಾನ್ಯವಾಗಿದೆ. ಇದು ಆಹಾರ ಧಾನ್ಯ ಆರಾಧನೆಯ ಹಬ್ಬವಾಗಿ. ಇದನ್ನು ಪಶ್ಚಿಮ ಒಡಿಶಾದ ಕಲಹಂಡಿ, ಸಂಬಲ್‌ಪೂರ್, ಬಲಂಗೀರ್, ಬರ್ಗರ್ಹ್, ಸುಂದರ್‌ಗರ್, ಸೋನ್‌ಪುರ್, ಬೋಧ್ ಮತ್ತು ನುವಾಪಾಡ ಜಿಲ್ಲೆಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಪ್ರಾಚೀನ ಮೂಲಸ್ಥಾನ[ಬದಲಾಯಿಸಿ]

ಸ್ಥಳೀಯ ಸಂಶೋಧಕರ ಪ್ರಕಾರ ನುವಾಖಾಯ್ ಪ್ರಾಚೀನ ಮೂಲಸ್ಥಾನವನ್ನು ಹೊಂದಿದೆ. ಈ ಹಬ್ಬದ ಆಚರಣೆಯ ಮೂಲಭೂತ ಉದ್ದೇಶವು ಕೊನೆಯಪಕ್ಷ ಋಷಿಗಳು (ಯತಿಗಳು) ಪಂಚಯಜ್ಞವನ್ನು , ಕೃಷಿಗೆ ಸಂಬಂಧಿಸಿದ ಸಮಾಜದ ವಾರ್ಷಿಕ ದಿನಾಂಕ ಪಟ್ಟಿಯಲ್ಲಿನ ಐದು ಪ್ರಮುಖ ಚಟುವಟಿಕೆಗಳನ್ನು ಕುರಿತು ಮಾತನಾಡಿದ್ದ ವೇದಗಳ ಕಾಲದ ಸುಳಿವನ್ನು ನೀಡುತ್ತದೆ ಎಂಬುದನ್ನು ಕೆಲವು ಸಂಶೋಧಕರು ಕಂಡುಹಿಡಿದಿದ್ದಾರೆ.[೨] ಈ ಐದು ಚಟುವಟಿಕೆಗಳನ್ನು ಸೀತಾಯಜ್ಞ (ಭೂಮಿಯನ್ನು ಉಳುವುದು), ಪ್ರವಪಾನ ಯಜ್ಞ (ಬೀಜ ಬಿತ್ತನೆ ಮಾಡುವುದು), ಪ್ರಲಂಬನ ಯಜ್ಞ (ಬೆಳೆಯನ್ನು ಕೊಯ್ಯುವ ಆರಂಭ), ಖಲ ಯಜ್ಞ (ಫಸಲಿನ ಕಟಾವು) ಮತ್ತು ಪ್ರಯಯಾನ ಯಜ್ಞ (ಉತ್ಪನ್ನಗಳನ್ನು ಸಂಸ್ಕರಿಸಿಡುವಿಕೆ)ಗಳನ್ನಾಗಿ ಉಲ್ಲೇಖಿಸಲಾಗಿದೆ. ಈ ದೃಷ್ಟಿಯಲ್ಲಿ, ನುವಾಖಾಯ್ ಮೂರನೆಯ ಚಟುವಟಿಕೆ, ಮೊದಲ ಫಸಲನ್ನು ಕೊಯ್ದು ಪೂಜ್ಯಭಾವದಿಂದ ಅದನ್ನು ದೇವತೆಗೆ ಅರ್ಪಿಸುವಿಕೆಯನ್ನು ಒಳಗೊಂಡ, ಪ್ರಲಂಬನ ಯಜ್ಞ ದಿಂದ ಉದ್ಭವಿಸಿದ್ದನ್ನು ಕಾಣಬಹುದಾಗಿದೆ.

ಪ್ರಸ್ತುತ ಮಾದರಿಯ ಮೂಲ[ಬದಲಾಯಿಸಿ]

ಸಮಯ ಕಳೆದಂತೆ ಹಬ್ಬದ ಮೂಲ ಅಳಿದುಹೋದರೂ, ಮೌಖಿಕ ಸಂಪ್ರದಾಯವು ಇದು 12ನೆಯ ಶತಮಾನ ಎಡಿ ಕಾಲದ್ದೆಂಬುದನ್ನು ಸೂಚಿಸುತ್ತದೆ, ಅದು ಮೊದಲ ಚೌಹಾನ್ ರಾಜ ರಮೈ ಡಿಯೊರ ಕಾಲವಾಗಿತ್ತು, ಇವರು ಪಾಟ್ನಾ[೩] ಭವ್ಯ ರಾಜ್ಯದ ಸ್ಥಾಪಕರಾಗಿದ್ದರು, ಈ ಪಾಟ್ನಾ ಪ್ರಸ್ತುತ ಪಾಶ್ಚಿಮ ಒಡಿಶಾದಲ್ಲಿನ ಬಲಂಗೀರ್ ಜಿಲ್ಲೆಯ ಭಾಗವಾಗಿದೆ. ಸ್ವಂತಂತ್ರ ಸಾಮ್ರಾಜ್ಯವನ್ನು ನಿರ್ಮಿಸುವ ಅವರ ಪ್ರಯತ್ನದಲ್ಲಿ, ರಾಜ ರಮೈ ಡಿಯೊ ಸ್ಥಿರ ಕೃಷಿಯ ಮಹತ್ವವನ್ನು ಅರಿತುಕೊಂಡರು, ಆ ಪ್ರದೇಶದಲ್ಲಿನ ಜನರ ಅಸ್ತಿತ್ವದಲ್ಲಿರುವ ಆರ್ಥಿಕ ಸ್ಥಿತಿಯು ಪ್ರಾಥಮಿಕವಾಗಿ ಬೇಟೆಯಾಡುವಿಕೆ ಮಾತು ಆಹಾರ ಸಂಗ್ರಹಣೆಯನ್ನು ಆಧರಿಸಿರುವುದೇ ಇದಕ್ಕೆ ಕಾರಣ. ಈ ಮಾದರಿಯ ಆರ್ಥಿಕ ಸ್ಥಿತಿಯು ರಾಜ್ಯವನ್ನು ನಿಬಾಯಿಸುವ ಮತ್ತು ಉಳಿಸಿಕೊಳ್ಳಲು ಬೇಕಾದ ಅಧಿಕ ಉಳಿತಾಯವನ್ನು ಒದಗಿಸುವುದಿಲ್ಲ ಎಂಬುದನು ಅವರು ತಿಳಿದುಕೊಂಡಿದ್ದರು. ಸಂಬಲ್‌ಪೂರಿ ಪ್ರಾಂತದಲ್ಲಿ ರಾಜ್ಯವನ್ನು ರಚಿಸುವ ಸಮಯದಲ್ಲಿ, ಕೃಷಿಯನ್ನು ಜೀವನದ ದಾರಿಯನ್ನಾಗಿ ಪ್ರೋತ್ಸಾಹಿಸುವಲ್ಲಿ, ಧರ್ಮಾಚರಣೆಯ ಹಬ್ಬವಾಗಿ ನುವಾಖಾಯ್ ಮಹತ್ವದ ಪಾತ್ರವನ್ನು ವಹಿಸಿತ್ತು. ಆದ್ದರಿಂದ ನುವಾಖಾಯ್‌‌ಯನ್ನು ಸಂಬಲ್‌ಪೂರಿ ಸಂಸ್ಕೃತಿ ಮತ್ತು ಅನುವಂಶಿಕ ಪ್ರಾಪ್ತಿಯ ಸಂಕೇತವನ್ನಾಗಿ ಮಾಡಿದ್ದ ಗೌರವವನ್ನು ರಾಜ ರಮೈ ಡೊಯೊರವರಿಗೆ ನೀಡಬಹುದಾಗಿದೆ.

ಹಿಂದಿನ ಕಾಲದಿಂದ ಇಲ್ಲಿಯವರೆಗಿನ ಪಯಣ[ಬದಲಾಯಿಸಿ]

ಆರಂಭದ ವರ್ಷಗಳಲ್ಲಿ, ಹಬ್ಬವನ್ನು ಆಚರಿಸಲು ಒಂದು ಸ್ಥಿರವಾದ ದಿನ ಇರಲಿಲ್ಲ. ಇದನ್ನು ಕೆಲವು ಸಲ ಭಾದ್ರಬ ಶುಕ್ಲ ಪಕ್ಷ (ಭಾದ್ರಬದ ಶುಕ್ಲ ಪಕ್ಷ)ದಂದು ಸಹ ಆಚರಿಸಲಾಗುತ್ತದೆ. ಇದು ಹೊಸದಾಗಿ ಬೆಳೆದ ಖರಿಫ್ ಬೆಳೆ (ವಸಂತಕಾಲದ ಬೆಳೆ)ಯ ಅಕ್ಕಿ ಪಕ್ವವಾಗಲು ಪ್ರಾರಂಭವಾಗುವ ಸಮಯ. ಫಸಲು ಕಟಾವಿಗೆ ತಯಾರಾಗಿಲ್ಲದಿದ್ದರೂ ಭದ್ರಾವ ತಿಂಗಳಿನಲ್ಲಿ ಈ ಹಬ್ಬವನ್ನು ಆಚರಿಸಲು ಕೆಲವು ಕಾರಣಗಳಿವೆ. ಕಾಳುಗಳನ್ನು ಯಾವುದೇ ಪಕ್ಷಿಗಳು ಅಥವಾ ಪ್ರಾಣಿಗಳು ಕಡಿದು ತಿನ್ನುವ ಮೊದಲು ಮತ್ತು ಇವು ತಿನ್ನುವುದಕ್ಕೆ ತಯಾರಾಗುವ ಮೊದಲೇ ಇವನ್ನು ದೇವರಿಗೆ ಅರ್ಪಿಸುವುದೇ ಇದರ ಉದ್ದೇಶ.

ಮೊದಲ ಸಂಪ್ರದಾಯಗಳಲ್ಲಿ, ರೈತರು ಗ್ರಾಮದ ಮುಖ್ಯಸ್ಥ ಮತ್ತು ಅರ್ಚಕರಿಂದ ನಿರ್ಧರಿಸಿದ ದಿನದಂದೇ ನುವಾಖಾಯ್ ಹಬ್ಬವನ್ನು ಆಚರಿಸುತ್ತಿದ್ದರು. ನಂತರ, ರಾಜವಂಶದ ಕುಟುಂಬಗಳ ಪ್ರೋತ್ಸಾಹದಲ್ಲಿ, ಈ ಸರಳ ಹಬ್ಬವನ್ನು ಸಂಪೂರ್ಣ ಕೋಸಲ್ ಪ್ರಾಂತದಲ್ಲಿ ಆಚರಿಸುವ ಬೃಹತ್ ಸಾಮಾಜಿಕ-ಧಾರ್ಮಿಕ ಹಬ್ಬವನ್ನಾಗಿ ಪರಿವರ್ತಿಸಲಾಯಿತು.

ನುವ ನಿವೇದಿಸುವ ದೇವತೆಯರು[ಬದಲಾಯಿಸಿ]

ಪ್ರತೀ ವರ್ಷ, ಆಚರಿಸುವ ತಿಥಿ (ದಿನ) ಮತ್ತು ಸಮಯ್ (ಸಮಯ)ವನ್ನು ಹಿಂದು ಅರ್ಚಕರಿಂದ ಜ್ಯೋತಿಶಾಸ್ತ್ರದ ಆಧಾರದಿಂದ ನಿರ್ಧರಿಸಲಾಗುತ್ತದೆ. ಬ್ರಾಹ್ಮಣ ಅರ್ಚಕರು ಒಟ್ಟಾಗಿ ಸಂಬಲ್‌ಪುರದಲ್ಲಿನ ಬ್ರಹ್ಮಪುರ ಜಗನ್ನಾಥ ದೇವಸ್ಥಾನದಲ್ಲಿ ಕುಳಿತುಕೊಂಡು ದಿನ ಮತ್ತು ಸಮಯವನ್ನು ಲೆಕ್ಕಹಾಕುತ್ತಾರೆ. ತಿಥಿ (ತಾರೀಖು) ಮತ್ತು ಲಗ್ನ (ಶುಭಕರವಾದ ಗಳಿಗೆ)ಗಳನ್ನು ಪತ್ನೆಸ್ವರಿ ದೇವಿ ಹೆಸರಿನಲ್ಲಿ ಬಲಂಗಿರ್-ಪತ್ನಾಗರ್ ಪ್ರದೇಶದಲ್ಲಿ, ಸುರೇಸ್ವರಿ ದೇವಿಯ ಹೆಸರಿನಲ್ಲಿ ಸುಬರ್ನಾಪುರ್ ಪ್ರದೇಶದಲ್ಲಿ, ಮತ್ತು ಮನಿಕೇಸ್ವರಿ ದೇವಿ ಹೆಸರಿನಲ್ಲಿ ಕಲಹಂಡಿ ಪ್ರದೇಶದಲ್ಲಿ ಲೆಕ್ಕಹಾಕಲಾಗುತ್ತದೆ. ಸುಂದರ್‌ಗಾರ್‌ನಲ್ಲಿ, ಪೂಜೆ (ಆರಾಧನೆ)ಯನ್ನು, ನುವಾಖಾಯ್‌ಗೋಸ್ಕರ ಮಾತ್ರ ತೆರೆಯಲಾಗುವ ದೇವಸ್ಥಾನದಲ್ಲಿ ಸೆಖರ್ಬಾಸಿನಿ ದೇವಿಗೆ ಮೊದಲು ರಾಜವಂಶದ ಕುಟುಂಬದಿಂದ ಸಲ್ಲಿಸಲಾಗುವುದು. ಸಂಬಲ್‌ಪುರ್‌ನಲ್ಲಿ, ನಿರ್ಣಯಿಸಿದ ಲಗ್ನ ದಲ್ಲಿ (ಶುಭಕರ ಗಳಿಗೆ), ಸಮಲೇಸ್ವರಿ ದೇವಸ್ಥಾನದಲ್ಲಿನ ಅರ್ಚಕರ ಮುಖ್ಯಸ್ಥ ಸಂಬಲ್‌ಪುರ್ ಗ್ರಾಮ ದೇವತೆಯಾದ ಸಮಾಲೇಶ್ವರಿಗೆ ನುವ-ಅನ್ನ ಅಥವಾ ನಬನ್ನವನ್ನು ನಿವೇದಿಸುತ್ತಾರೆ.

ನುವಾಖಾಯ್‌ನ ಒಂಬತ್ತು ಬಣ್ಣಗಳ ವಿಧಿವತ್ತಾದ ನಡವಳಿಕೆಗಳು[ಬದಲಾಯಿಸಿ]

ಕೋಸಲ್ ಪ್ರಾಂತದಲ್ಲಿನ ಜನರು 15 ದಿನಗಳು ಮುಂಚಿತವಾಗಿಯೇ ತಯಾರಿಯನ್ನು ಪ್ರಾರಂಭಿಸುವರು. ನುವಾಖಾಯ್ ಒಂಬತ್ತು ಬಣ್ಣಗಳನ್ನು ಹೊಂದಿದೆ ಎಂದು ತಿಳಿಯಲಾಗಿದ್ದು ಇದರ ಫಲಿತಾಂಶವಾಗಿ ನಿಜವಾದ ಆಚರಣೆಯ ದಿನಕ್ಕೆ ನಾಂದಿಯಾಗಿ ಒಂಬತ್ತು ಸೆಟ್‌ಗಳ ವಿಧಿವತ್ತಾದ ನಡವಳಿಕೆಗಳನ್ನು ಅನುಸರಿಸಲಾಗುವುದು. ಈ ಒಂಬತ್ತು ಬಣ್ಣಗಳು ಒಳಗೊಂಡವು:

  • ಬೆಹೆರೆನ್ (ದಿನಾಂಕವನ್ನು ನಿರ್ಧರಿಸುವ ಸಮಾವೇಶದ ಪ್ರಕಟಣೆ)
  • ಲಗ್ನ ದೆಖ (ಹೊಸಾ ಅಕ್ಕಿಯ ಪಾಲುತೆಗೆದುಕೊಳ್ಳಲು ನಿಖರವಾದ ದಿನಾಂಕವನ್ನು ನಿರ್ಧರಿಸುವುದು)
  • ದಕ ಹಕ (ಆಮಂತ್ರಣ)
  • ಸಫ ಸುತುರ ಮತ್ತು ಲಿಪ ಪುಚ (ಶುಭ್ರತೆ)
  • ಘಿನ ಬಿಕ (ಖರೀದಿ ನಡೆಸುವುದು)
  • ನುವ ಧನ್ ಖುಜ (ಹೊಸಾ ಫಸಲಿಗಾಗಿ ನಿರೀಕ್ಷಿಸುವುದು)
  • ಬಲಿ ಪಾಕ (ಪ್ರಸಾಧ ವನ್ನು (ನಿವೇದನೆ) ದೇವತೆಗೆ ತಗೆದುಕೊಂಡುಹೋಗುವುದರ ಮೂಲಕ ನುವಾಖಾಯ್‌‌ನ ಅಂತಿಮ ನಿರ್ಧಾರ)
  • ನುವಾಖಾಯ್ (ದೇವತೆಗೆ ಅರ್ಪಿಸಿದ ನಂತರ ಹೊಸಾ ಫಸಲನ್ನು ಪ್ರಸಾಧ ವನ್ನಾಗಿ ಸೇವಿಸುವುದು)
  • ಜುಹಾರ್ ಭೆಟ್ ಹಿರಿಯರಿಗೆ ಗೌರವಿಸುವುದು)

ನುವಾಖಾಯ್‌‌ನ ವಿಧಿವತ್ತಾದ ನಡವಳಿಕೆಗಳ ವಿವರಣೆಗಳು[ಬದಲಾಯಿಸಿ]

ಬೆಹೆರನ್ ತುತ್ತೂರಿ ಊದುವುದರ ಮೂಲಕ ಗ್ರಾಮಸ್ತರನ್ನು ಕರೆದ ನಂತರ ಗ್ರಾಮದ ಹಿರಿಯ ಜನರು ಒಟ್ಟಾಗಿ ಪವಿತ್ರ ಸ್ಥಳದಲ್ಲಿ ಕುಳಿತುಕೊಳ್ಳುವುದರೊಂದಿಗೆ ಹಬ್ಬದ ದಿನಾಂಕಕ್ಕೆ 15 ದಿನಗಳು ಮುಂಚಿತವಾಗಿಯೇ ತಯಾರಿಯನ್ನು ಪ್ರಾರಂಭಿಸಲಾಗುವುದು. ಜನರು ಒಟ್ಟುಗೂಡಿ ಅರ್ಚಕರೊಂದಿಗೆ ನುವಾಖಾಯ್ ಆಚರಣೆಯ ತಿಥಿ ಮತ್ತು ಲಗ್ನ (ಪವಿತ್ರವಾದ ದಿನ ಮತ್ತು ಸಮಯ)ಗಳನ್ನು ಕುರಿತು ಚರ್ಚಿಸುವರು. ಅರ್ಚಕರು ಪಂಜಿಕ (ಜ್ಯೋತಿಶಾಸ್ತ್ರದ ಪಂಚಾಂಗ)ವನ್ನು ನೋಡಿ ನುವವನ್ನು ಸ್ವೀಕರಿಸಬಹುದಾದ ಪವಿತ್ರವಾದ ಮುಹೂರ್ತ (ಸುಮಾರು 48 ನಿಮಿಷಗಳಿಗೆ ಸಮನಾದ ಸಮಯವನ್ನು) ಪ್ರಕಟಿಸುವರು. ತಯಾರಿಯ ಈ ಭಾಗವು ಮೂಲ ಆದಿವಾಸಿಗಳ ಹಬ್ಬದ ಮೂಲಾಂಶಗಳು ಮತ್ತು ಹಿಂದು ಧರ್ಮದ ಮೂಲಾಂಶಗಳು ಎರಡನ್ನೂ ತೋರಿಸುತ್ತದೆ. ಹಿಂದು-ಜಾತಿಯವರು ಪ್ರದೇಶಕ್ಕೆ ಒಲಸೆ ಬಂದಾಗ ಸ್ಥಳೀಯ ಆದಿವಾಸಿ ಜನರು, ಜ್ಯೋತಿಶಾಸ್ತ್ರವನ್ನು ಆಧರಿಸಿ ನುವಾಖಾಯ್ ಹಬ್ಬಕ್ಕೆ ತಿಥಿ ಮತ್ತು ಲಗ್ನ ವನ್ನು ಲೆಕ್ಕಹಾಕುವ ಯೋಜನೆಯನ್ನು ಅಳವಡಿಸಿಕೊಂಡಿದ್ದರು. ಅದೇ ರೀತಿಯಲ್ಲಿ, ಹಿಂದು-ಜಾತಿಯವರು ಆದಿವಾಸಿ ಜನರಿಂದ ನುವಾಖಾಯ್ ಅನ್ನು ಅಳವಡಿಸಿಕೊಂಡಾಗ, ಅವರು ಕೆಲವು ಸಂಸ್ಕೃತ ಮೂಲಾಂಶಗಳನ್ನು ಪರಿಚಯಿಸಿ ಹಿಂದು-ಧರ್ಮದವರು ಇದನ್ನು ಹೆಚ್ಚು ಮನಃಪೂರ್ವಕವಾಗಿ ಅಂಗೀಕರಿಸುವಂತೆ ಮಾಡಿದರು.

1960ರ ದಶಕದ ಸಮಯದಲ್ಲಿ ಕೋಸಲ್ ಪ್ರಾಂತದಾದ್ಯಂತ ನುವಾಖಾಯ್ ಹಬ್ಬಕ್ಕೆ ಒಂದೇ ತಿಥಿ ಯನ್ನು ನಿಗದಿಪಡಿಸುವ ಪ್ರಯತ್ನವನ್ನು ಮಾಡಲಾಯಿತು. ಆದರೆ ಇದು ಆಗುವಂತಹ ಕಲ್ಪನೆ ಅಲ್ಲ ಎಂದು ನಿರ್ಧರಿಸಲಾಗಿತ್ತು. ಭಾದ್ರಬ ಶುಕ್ಲ ಪಂಚಮಿ ತಿಥಿಯನ್ನು ನುವಾಖಾಯ್ ಹಬ್ಬದ ಆಚರಣೆಯ ದಿನವನ್ನಾಗಿ ನಿಶ್ಚಯಿಸಲು, 1991ರಲ್ಲಿ ಈ ಕಲ್ಪನೆಯನ್ನು ಮರು ಪರಿಚಯಿಸಲಾಯಿತು. ಈ ಪ್ರಯತ್ನದಲ್ಲಿ ಅವರು ಸಫಲರಾದರು ಮತ್ತು ಅಂದಿನಿಂದ, ಆ ದಿನದಂದೇ ಹಬ್ಬವನ್ನು ಆಚರಿಸಲಾಗುತ್ತಿತ್ತು, ಮತ್ತು ಒಡಿಶಾ ಸರಕಾರ ಆ ದಿನ ಸರಕಾರ ರಜಾ ದಿನ ಎಂದು ಸಹ ಘೋಷಿಸಿದೆ. ನುವಾಖಾಯ್ ಹಬ್ಬದ ಆಚರಣೆಗೆ ಎಲ್ಲರಿಗೂ ಅನುಕೂಲವಾಗುವಂತೆ ಒಂದೇ ಶುಭಕರವಾದ ದಿನವನ್ನು ನಿಗದಿ ಪಡಿಸಲಾಗಿದ್ದರೂ, ವಿಧಿವತ್ತಾದ ನಡವಳಿಕೆಗಳ ಪವಿತ್ರತೆಯು ಇದರ ಪ್ರಾಮುಖ್ಯತೆಯನ್ನು ಕಳೆದುಕೊಂಡಿಲ್ಲ. ಅದಾಗ್ಯೂ, ಪ್ರಸ್ತುತ ದಿನಗಳಲ್ಲಿ, ತಿಥಿ ಮತ್ತು ಲಗ್ನ ಗಳನ್ನು ನಿರ್ಣಯಿಸುವ ಮತ್ತು ಒಟ್ಟಭಿಪ್ರಾಯಕ್ಕಾಗಿ ಊರಿನ ಹಿರಿಯ ಜನರನ್ನು ಕರೆದು ಒಟ್ಟುಗೂಡಿಸುವ ಪದ್ದತಿಯು ಪಟ್ಟಣದ ಪ್ರದೇಶಗಳಲ್ಲಿ ನಡೆಯುತ್ತಿಲ್ಲ.

ನುವಾಖಾಯ್ ಹಬ್ಬವನ್ನು ಸಮುದಾಯ ಮತ್ತು ಸ್ವದೇಶಿ ಮಟ್ಟ ಎರಡರಲ್ಲೂ ಆಚರಿಸಲಾಗುತ್ತದೆ. ವಿಧಿವತ್ತಾದ ನಡವಳಿಕೆಗಳನ್ನು ಮೊದಲು ಆ ಪ್ರದೇಶದ ಪ್ರಾಂತೀಯ ದೇವತೆ ಅಥವಾ ಗ್ರಾಮ ದೇವತೆಯ ದೇವಸ್ಥಾನದಲ್ಲಿ ಗಮನಿಸಲಾಗುತ್ತದೆ. ನಂತರ, ಜನರು ತಮ್ಮ ತಮ್ಮ ಮನೆಗಳಿಗೆ ತೆರಳಿ ಆರಾಧನೆಯನ್ನು ನಡೆಸುವರು ಮತ್ತು ವಿಧಿವತ್ತಾದ ನಡವಳಿಕೆಗಳನ್ನು ಅವರ ಸ್ವದೇಶಿ ದೇವತೆಗೆ ಮತ್ತು ಹಿಂದು ಸಂಪ್ರದಾಯದಲ್ಲಿ ಧನದ ದೇವತೆಯಾದ, ಲಕ್ಷ್ಮಿಗೆ ಅರ್ಪಿಸುವರು. ಈ ಹಬ್ಬಕ್ಕೆ ಜನರು ಹೊಸಾ ಉಡುಪುಗಳನ್ನು ಧರಿಸುವರು. ಮೊದಲು ನುವವನ್ನು ಸ್ಥಳೀಯ ದೇವತೆಗೆ ಅರ್ಪಿಸಿದ ನಂತರ, ಆ ಕುಟುಂಬದ ಹಿರಿಯರು ಮನೆಯ ಸದಸ್ಯರೆಲ್ಲರಿಗೂ ನುವ ಹಂಚುವುದು ಒಂದು ಸಂಪ್ರದಾಯ. ನುವ ಸ್ವೀಕರಿಸಿದ ನಂತರ, ಆ ಕುಟುಂಬದ ಕಿರಿಯರೆಲ್ಲರೂ ತಮ್ಮ ಹಿರಿಯರಿಗೆ ಗೌರವವನ್ನು ಸಲ್ಲಿಸುವರು. ಆ ನಂತರ, ಸ್ನೇಹಿತರು, ಹಿತೈಷಿಗಳು, ಮತ್ತು ಸಂಬಂಧಿಕರೊಂದಿಗೆ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುವ, ನುವಾಖಾಯ್ ಜುಹಾರ್ ಮುಂದುವರಿಯುತ್ತದೆ. ಇದು ಐಕಮತ್ಯದ ಸಂಕೇತವಾಗಿದೆ. ಜನರು ತಮ್ಮ ತಮ್ಮ ತಾರತಮ್ಯಗಳನ್ನು ಬದಿಗಿಟ್ಟು ಹೊಸಾ ಸಂಬಂಧಗಳನ್ನು ಬೆಳೆಸಲು ಇದು ಒಂದು ಒಳ್ಳೆಯ ಸಂದರ್ಭವಾಗಿದೆ. ಸಾಯಂಕಾಲದ ವರೆಗೂ ಜನರು ಒಬ್ಬರನ್ನೊಬ್ಬರು ಬೇಟಿಯಾಗಿ ಶುಭಾಷಯಗಳನ್ನು ವಿನಿಮಯಮಾಡಿಕೊಳ್ಳುವರು. ಎಲ್ಲಾ ಭೇದ ಭಾವಗಳನ್ನು ಬಿಟ್ಟುಬಿಡಲಾಗುತ್ತದೆ ಮತ್ತು ಹಿರಿಯರು ನುವಾಖಾಯ್ ಜುಹಾರ್ ಎಂದು ಹಾರೈಸುವರು. ಹಿರಿಯರು ತಮ್ಮ ಕಿರಿಯರನ್ನು ಆಶೀರ್ವದಿಸುವರು ಮತ್ತು ಅವರಿಗೆ ದೀರ್ಘ ಆಯಿಷು, ಸಂತೋಷ, ಮತ್ತು ಶ್ರೇಯಸ್ಸು ಅಭಿಸಲೆಂದು ಹಾರೈಸುವರು. ಬೇರೆ ಯಾಗಿದ್ದ ಅಣ್ಣ-ತಮ್ಮಂದಿರು ಸಹ ಈ ಹಬ್ಬವನ್ನು ಒಟ್ಟಾಗಿ ಒಂದೇ ಮನೆಯಲ್ಲಿ ಆಚರಿಸುವರು. ಸಾಯಂಕಾಲದಲ್ಲಿ, ನುವಖಾಯ್ ಭೆಟ್‌ಘಟ್ ಎಂದು ಕರೆಯಲಾಗುವ ಜಾನಪದ ನೃತ್ಯ ಮತ್ತು ಹಾಡುಗಳನ್ನು ಏರ್ಪಡಿಸಲಾಗುವುದು. ಜನರು ರಸರ್ಕೆಲಿ, ದಲ್‌‌ಖೈ, ಮಯಲಜಡ, ಚಿಟ್ಕುಚುಟ, ಸಜನಿ, ನಾಚ್ನಿಯಾ , ಮತ್ತು ಬಜ್ನಿಯಾ ಬೀಟ್‌ಗಳಿಗೆ ಮತ್ತು ಇತ್ತೀಚಿನ ಸಂಬಲ್‌ಪೂರಿ ಜನಪ್ರಿಯ ಹಾಡುಗಳ ರಾಗಗಳಿಗೆ ನೃತ್ಯಮಾಡುವರು.

ನುವಾಖಾಯ್ ಹಬ್ಬವನ್ನು ಆಚರಿಸುವ ಭಾರತದ ಇತರ ಜನಾಂಗಗಳು[ಬದಲಾಯಿಸಿ]

ಪಡೆಯಬಹುದಾದ (1982:75, ರಿಂದ)[೪] ಆಧಾರಗಳ ಪ್ರಕಾರ, ಅಭಿಧಾನದಲ್ಲಿ ಅಲ್ಪ ವ್ಯತ್ಯಾಸಗಳೊಂದಿಗೆ, ನುವಾಖಾಯ್ ಹಬ್ಬವನ್ನು ಮಧ್ಯದ ಮತ್ತು ಪಶ್ಚಿಮ ಭಾರತದಲ್ಲಿನ ಎಲ್ಲಾ ಪ್ರಮುಖ ಜನಾಂಗದವರಿಂದ ಆಚರಿಸಲಾಗುತ್ತದೆ. ಜೆಥ್ ನುವಾಖಾಯ್ ಇದನ್ನು ಡುದ್ ಖರಿಯ ಮತ್ತು ಪಹರಿ ಖರಿಯ ಜನರು ಆಚರಿಸುವರು, ನವಾಖಾನಿ ಓರಯನ್ ಮತ್ತು ಬಿರ್ಜಿಯಾಗಳ ನಡುವೆ, ಜೋನ್ ನವಾ ಮುಂಡಾ ಮತ್ತು ಬಿರ್ಜಿಯಾಗಳ ನಡುವೆ, ಜಂಥೆರ್ ಅಥವಾ ಬೈಹಾರ್-ಹೊರೊ ನವಾಯ್ ಸಾಂತಲ್ ಜನರಿಂದ, ಗೋಂಡ್ಲಿ ನವಾಖಾನಿ ಇದನ್ನು ರಾಂಚಿ ಜಿಲ್ಲೆಯ ಆದಿವಾಸಿ ಜನರಿಂದ, ನವಾ ಬಿರ್ಜಿಯಾ ನರಿಂದ, ನವಾ-ಜೋಮ್ ಬಿರ್ಹೋರ್ ಜನರಿಂದ, ಧಾನ್ ನವಾಖಾನ್ ಕೋರ್ವಾ ಜನರಿಂದ, ಮತ್ತು ಮುಂತಾದವರಿಂದ ಆಚರಿಸಲಾಗುತ್ತದೆ. ಬಾಸ್ಟರ್ ಪ್ರಾಂತ ಮತ್ತು ಒಡಿಶಾದಲ್ಲಿ ಕಂಡುಹಿಡಿಯಲಾದ ಒಂದು ಚಿಕ್ಕ ಜನಾಂಗ, ರುಸ್ಸೆಲ್ ಮತ್ತು ಹಿರಲಾಲ್ ನವಾಖಾನಿ ಹಬ್ಬವನ್ನು ಪರಜ ಎಂದು ಪ್ರಸ್ತಾಪಿಸಿದ್ದಾರೆ. ಸಾಂತಲ್ ಪರಗಾನದಲ್ಲಿ ಸಾಂತಲರ ಹೊಸಾ ಧಾನ್ಯ ನಿವೇಧಿಸುವ ಮತ್ತು ಅಕ್ಕಿಯನ್ನು ಸೇವಿಸುವ ಹಬ್ಬವನ್ನು ಗೌತಮ್ (1977)[೫] ಗಮನಿಸಿದ್ದಾನೆ, ಅದನ್ನು ಅವರುಜೋಮ್ ನವಾ ಎಂದು ಕರೆಯುತ್ತಾರೆ. ದಾಸ್ ಗುಪ್ತ (1978)[೬], ಚೋತನಾಂಗ್‌ಪುರದ ಅಸುರ ಜನಾಂಗದ ಭಾಗವಾದ, ಬಿರಿಜಿಯರ ನವಾ ಆಚರಣೆಯನ್ನು ಗುರುತಿಸಿದ್ದಾನೆ. ಭಾದುರಿ (1944:149-50)[೭] ಮಿಕತಲ್ ಎಂದು ಗುರುತಿಸುವ ಟ್ರಿಪುರರ ಹಬ್ಬದ ಆಚರಣೆಯನ್ನು ಕುರಿತು ಒಂದು ಚಿಕ್ಕ ಟಿಪ್ಪಣಿಯನ್ನು ಪ್ರಸ್ತುತ ಪಡಿಸಿದ್ದಾನೆ, ಇಲ್ಲಿ ಮಿ ಅಂದರೆ ಅಕ್ಕಿ ಮತ್ತು ಕತಲ್ ಅಂದರೆ ಹೊಸದು ಅಂತ ಅರ್ಥ. ಇದನ್ನು ಅಶ್ವಿನಿ ತಿಂಗಳು (ಸೆಪ್ಟೆಂಬರ್-ಅಕ್ಟೋಬರ್) ನಲ್ಲಿ ಆಚರಿಸಲಾಗುತ್ತದೆ. ಪಶ್ಚಿಮ ಬೆಂಗಾಲ್ ಮತ್ತು ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ, ಹಿಂದು-ಧರ್ಮದವರಿಂದ ಈ ಹಬ್ಬವನ್ನು ನಬನ್ನ ಎಂದು ಕರೆಯಲಾಗುತ್ತದೆ. ಹೆಸರುಗಳನ್ನು ಹೊರತುಪಡಿಸಿ, ಈ ಹಬ್ಬದ ಪ್ರಮುಖ ಉದ್ದೇಶ ಎಂದರೆ ಹೊಸಾ ಬೆಳೆಗೆ ಸಾಮಾಜಿಕ ಒಪ್ಪಿಗೆ ಪಡಿಯುವುದು, ಮತ್ತು ತಮ್ಮ ಭೂಮಿಯಲ್ಲಿ ಸಮೃದ್ಧಿಯಾದ ಫಸಲು ಬರುವಂತೆ ಆಶೀರ್ವಧಿಸುವಂತೆ ದೇವತೆಯರಲ್ಲಿ ಬೇಡಿಕೊಳ್ಳುವುದು.

ನುವಾಖಾಯ್ ಹಬ್ಬವನ್ನು ಭಾರತದುದ್ದಕ್ಕೂ ಆಚರಿಸಲಾಗುತ್ತದೆ[ಬದಲಾಯಿಸಿ]

ದೆಹಲಿಯಲ್ಲಿ ವಾಸಿಸುವ ಕೋಸಲ ಪ್ರದೇಶದ ಜನರ ಮಧ್ಯೆ ಉತ್ತಮ ಭಾಂದವ್ಯವನ್ನು ನುವಾಖಾಯ್ ರೂಪಿಸುತ್ತದೆ, ಅವರೆಲ್ಲರೂ ನುವಾಖಾಯ್ ಸಂದರ್ಭದಲ್ಲಿ ಒಟ್ಟಿಗೆ ಸೇರಿ ಆಚರಣೆ ಮಾಡುತ್ತಾರೆ. ಕೋಸಲ ಪ್ರದೇಶದಿಂದ ವಲಸೆ ಬಂದ ಜನರು ಬೆಂಗಳೂರು, ಗೋವಾ, ಮುಂಬಯಿ, ಚೆನ್ನೈ, ಹೈದರಾಬಾದ್, ಕೊಲ್ಕತಾ, ಹಾಗೂ ವಿಶಾಖಪಟ್ಟಣಂ ನಗರಗಳಲ್ಲಿ ನೆಲೆಸಿದ್ದು ಕೆಲ ದಶಕಗಳಿಂದ ಅಲ್ಲಿಯೇ ನುವಾಖಾಯ್ ಆಚರಿಸುತ್ತಿದ್ದಾರೆ. ಆಧುನಿಕ ನುವಾಖಾಯ್ ಹಬ್ಬವು ಈಗ ಭಾದ್ರವ ಮಾಸದ ಎರಡನೆ ಪಕ್ಷದ ಐದನೆಯ ದಿನದಂದು ಗಮನಿಸಲಾಗುತ್ತಿದ್ದು, ವಿವಿಧ ಸಾಮಜಿಕ ಸಂಸ್ಥೆಗಳಿಂದ ಮತ್ತು 1991ರಲ್ಲಿ ಒಡಿಶಾ ಸರಕಾರದಿಂದ ಇದಕ್ಕೆ ಅಸಂದಿಗ್ಧವಾಗಿ ಸಮಾನತೆ ಮತ್ತು ಏಕರೂಪತೆಯನ್ನು ನೀಡಲಾಗಿದೆ. ಸಮಯ ಕಳೆದಂತೆ ಇದು ಇದರ ಕೆಲವು ಅಪಾರತೆ ಮತ್ತು ವೈವಿದ್ಯತೆಯನ್ನು ಕಳೆದುಕೊಂಡಿದೆ, ಆದರೆ ನುವಾಖಾಯ್ ಇನ್ನು ಸಹ ಸಂಬಲ್‌ಪುರಿ ಸಂಸ್ಕೃತಿ ಮತ್ತು ಸಮಾಜದ ಪಾರಂಪರತೆಯನ್ನು ಧೃಡಪಡಿಸುವ ಒಂದು ಸಂದರ್ಭವಾಗಿದೆ.

ಇವನ್ನೂ ಗಮನಿಸಿ[ಬದಲಾಯಿಸಿ]

ಸಂಬಲ್‌ಪುರ್ ಚಲನಚಿತ್ರ ಕೋಸಲ ಪಶ್ಚಿಮ ಒಡಿಶಾ ಸೀತಾಲಸಶ್ತಿ ಕಾರ್ನಿವಾಲ್ ಸಂಬಲ್‌ಪುರ್ ಭಾಷೆ ಸಂಬಲ್‌ಪುರ್ ಸೀರೆ ಗಂಗಾಧರ ಮೆಹೆರ್
ರೂರ್ಕೆಲಾ ರಾಜ್‌ಗಂಗಪುರ್ ಖಾರಿಯರ್ ಖಾರಿಯರ್ ರಸ್ತೆ ಸಂಬಲ್‌ಪುರ್‌ ವಿಶ್ವವಿದ್ಯಾಲಯ ವೀರ ಸುರೇಂದ್ರ ಸಾಯಿ ರಾಣಿಪುರ-ಝಾರಿಯಲ್Jharial
ತಿತ್ಲಾಘರ್ ಸೋನೆಪುರ್ ಬ್ರಜರಾಜನಗರ ಕಾಂತಾಬಂಜಿ ಸಂಬಲ್‌ಪುರ್ ಜಿಲ್ಲೆ ವೀರ ಸುರೇಂದ್ರ ಸಾಯಿ ಯೂನಿವರ್ಸಿಟಿ ಆಫ್ ಟೆಕ್ನಾಲಜಿ, ಬುರ್ಲಾ ರಾಜೇಂದ್ರ ಕಾಲೇಜು ಬಲಾಂಗಿರ್
ಬಿನಿಕಾ ಫುಲಾಬನಿ ಸುಂದೇರ್‌ಗರ್ ಬೌಧ್ ಭೀಮಾ ಬೋಯಿ ಘೆಸ್ ಕೊಚಿಂಡಾ
ಪಂಪೋಶ್ ಪದ್ಮಾಪುರ ಡಿಯೋಗರ್ ಜಿ. ಉದಯಗಿರಿ ಸತ್ಯ ಮಹಿಮಾ ಧರ್ಮ ಕೋಶಲ ರಾಜ್ಯ ಚಳವಳಿ
ಪಾಟ್ನಾಗರ್ ಬೇಲ್‌ಪಹರ್ ಭವಾನಿಪಟ್ನಾ ತೆಭಾಪದರ್ ಮಾ ಸಮಾಲೇಶ್ವರಿ ಬುರ್ಲಾ, ಭಾರತ ಸೈಂತಾಲಾ
ಮುಖಿಗುಡಾ ಕನ್ಸಬಹಲ್ ರೈರಾಖೊಲ್ ಶುಭಾಲಯ ನುವ್ಕಾಯ್ ಹಿರಾಕುಡ್ ಆಣೆಕಟ್ಟು ಪಶ್ಚಿಮ ಒಡಿಶಾ ಅಭಿವೃದ್ಧಿ ನಿಗಮ
ಕಂಸಬಹಲ್ ತೆನ್ಸಾ ಜುನಾಘರ್ ಕೇಸಿಂಗಾ ಮಹಿಮಾ ಹಿರಾಕುಡ್
ಹತಿಬಂದಾ ತರ್ಭಾ ಬಿರ್ಮಹಾರಾಜಪುರ್ ಲುಯಿಸಿಂಗಾ ಸಮಾಲೆಶ್ವರಿ ದೇವಾಲಯ ಸರತ್ ಪೂಜಾರಿ
ಬಾರ್ಗರ್ ಬಾರಪಲಿ ಖಾಲಿಯಪಲಿ ಬಿರಾಮಿತ್ರಪುರ್ ವೀರ ಸುರೇಂದ್ರ ಸಾಯಿ ಮೆಡಿಕಲ್ ಕಾಲೇಜು ಪಶ್ಚಿಮ ಒಡಿಶಾದಲ್ಲಿ ರೈತರ ಆತ್ಮಹತ್ಯೆ
ರೂರ್ಕೆಲಾ ಇಂಡಸ್ಟ್ರಿಯಲ್ ಟೌನ್‌ಶಿಪ್ ಒಸಿಎಲ್ ಇಂಡಸ್ಟ್ರಿಯಲ್ ಟೌನ್‌ಶಿಪ್ ಭುಕಾ ಬಲಾಂಗಿನ್ ನಗರ ಝರ್ಸುಗುಧಾ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ರೂರ್ಕೆಲಾ

ಟಿಪ್ಪಣಿಗಳು ಮತ್ತು ಆಕರಗಳು[ಬದಲಾಯಿಸಿ]

  1. "ಒರಿಸ್ಸಾದ ಪ್ರಮುಖ ಹಬ್ಬಗಳು: ನುವಾಖಾಯ್". Archived from the original on 2017-01-21. Retrieved 2010-12-15.
  2. ಪಸಾಯತ್, ಸಿ.ಎಸ್. (1991), ರೂರಲ್-ಅರ್ಬನ್ ಕಂಟಿನ್ಯುಯಂ ಅಂಡ್ ಫೋಕ್ ಕಲ್ಚರ್: ಸಂಬಲ್ಪುರದ ಕೆಚ್ಚು ಹಾಗೂ ಬದಲಾವಣೆಗಳಿಗಾಗಿ ಒಂದು ಪರೀಕ್ಷೆ . ಪಿಎಚ್.ಡಿ. ಥೀಸೀಸ್, ಸಿಎಸ್‌ಎಸ್‌ಎಸ್/ಎಸ್‌ಎಸ್‌ಎಸ್, ಜೆ‌ಎನ್‌ಯು, ಹೊಸ ದೆಹಲಿ.
  3. ಪಟ್ನಾ ಮಹಾರಾಜ ರಾಮಯ್ ಸಿಂಗ್ ಡಿಯೊ
  4. ಸಿಂಘ್, ಎ.ಕೆ. (1982). ಟ್ರೈಬಲ್ ಫೆಸ್ಟಿವಲ್ಸ್ ಆಫ್ ಬಿಹಾರ್: ಎ ಫಂಕ್ಷನಲ್ ಅನಲಿಸಿಸ್. ನವ ದೆಹಲಿ: ಕಾನ್ಸೆಪ್ಟ್ ಪಬ್ಲಿಷಿಂಗ್ ಕಂಪನಿ
  5. ಗೌತಮ್, ಎಂ.ಕೆ. (1977). ಇನ್ ಸರ್ಚ್ ಆಫ್ ಅನ್ ಐಡೆಂಟಿಟಿ: ಎ ಕೇಸ್ ಸ್ಟಡಿ ಆಫ್ ದಿ ಸಂತಲ್ ಆಫ್ ನಾರ್ತರ್ನ್ ಇಂಡಿಯಾ . ದಿ ಹೇಗ್: ಲೆಯಿಡೆನ್.
  6. ದಾಸ್ ಗುಪ್ತಾ, ಎಸ್.ಬಿ. (1978). ಬಿರ್ಝಿಯಾ: ಎ ಸೆಕ್ಷನ್ ಆಫ್ ದಿ ಅಸುರಾ ಆಫ್ ಚೋಟಾ ನಾಗಪುರ್. ಕಲ್ಕತ್ತಾ: ಕೆ.ಪಿ.ಬಾಗ್ಚಿ & ಕೊ.
  7. ಭಾದುರಿ, ಎಂ.ಬಿ. (1944). "ಮುಂದಾ ಧಾರ್ಮಿಕ ಆಚರಣೆಗಳು ಮತ್ತು ಅವರ ಸಮಯವನ್ನು ಕಳೆಯುವ ಮಾರ್ಗಗಳು." ಮ್ಯಾನ್ ಇನ್ ಇಂಡಿಯಾ , ಸಂಪುಟ.24, ಪುಟಗಳು.148-153.