ವೈಜನಾಥ್ ಬಿರಾದಾರ್
ವೈಜನಾಥ ಬಿರಾದಾರ್ | |
---|---|
ಜನನ | |
ವೃತ್ತಿ | ಚಲನಚಿತ್ರ ನಟ |
ಕನ್ನಡ ಚಿತ್ರನಟ. ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದಾರೆ. 'ಓ ಮಲ್ಲಿಗೆ', 'ಅಕ್ಕ', 'ಹುಲಿಯಾ', 'ಮಠ', 'ಲವ್ ಟ್ರೈನಿಂಗ್ ಸ್ಕೂಲ್' ಸೇರಿದಂತೆ 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಲ್ಕು ಲಂಬಾಣಿ, ತುಳು ಹಾಗೂ ಹಿಂದಿಯ 'ಹ್ಯಾಂಗ್ ಟು ಡೆತ್' ಸಿನಿಮಾದಲ್ಲೂ ನಟಿಸಿದ್ದಾರೆ. ಬೋಳು ಮುಂದಲೆ, ಹಿಂಬದಿಯಲ್ಲಿ ಕೆದರಿದ ಕೂದಲು, ಬಡಕಲು ದೇಹ, ಕೀರಲು ದನಿ - ಇದು ಬಿರಾದಾರರ ಮೇಲ್ನೋಟದ ಚಹರೆ
ಜೀವನ
[ಬದಲಾಯಿಸಿ]ಜನನ
[ಬದಲಾಯಿಸಿ]ವೈಜನಾಥ ಬಿರಾದಾರ ಅವರು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ತೇಂಪುರದಲ್ಲಿ ಬಸಪ್ಪ ಮತ್ತು ನಾಗಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು.
ವಿದ್ಯಾಭ್ಯಾಸ
[ಬದಲಾಯಿಸಿ]ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ತೀರಿಕೊಂಡದ್ದರಿಂದ ಶಾಲೆ ಬಿಟ್ಟರು.
ಬಣ್ಣದ ಬದುಕು
[ಬದಲಾಯಿಸಿ]ನಂತರ ನಾಟಕದ ಗೀಳು ಹಚ್ಚಿಕೊಂಡರು.
ನಾಟಕದಲ್ಲಿ
[ಬದಲಾಯಿಸಿ]ಬೆಳಗಾವಿ ಜಿಲ್ಲೆಯ ಗೋಕಾಕದ ಅಪ್ಪಾಸಾಬ್ ಅವರ ನಾಟಕ ತಂಡದಲ್ಲಿ ಕೆಲಸ ಮಾಡಿದರು.
ಸಿನಿಮಾದಲ್ಲಿ
[ಬದಲಾಯಿಸಿ]ಎಂ.ಎಸ್. ಸತ್ಯು ನಿರ್ದೇಶನದ 'ಬರ' ಚಿತ್ರದಲ್ಲಿ ಅನಂತನಾಗ್ ಅವರ ಸಹಾಯದಿಂದ ಸಣ್ಣ ಪಾತ್ರವೊಂದನ್ನು ಗಿಟ್ಟಿಸಿಕೊಂಡರು. ಅನಂತನಾಗ್ ಅವರ ಸಲಹೆಯಂತೆ ಬೆಂಗಳೂರಿಗೆ ಬಂದರು. 'ಓ ಮಲ್ಲಿಗೆ', 'ಅಕ್ಕ', 'ಹುಲಿಯಾ', 'ಮಠ', 'ಲವ್ ಟ್ರೈನಿಂಗ್ ಸ್ಕೂಲ್' ಸೇರಿದಂತೆ 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಲ್ಕು ಲಂಬಾಣಿ, ತುಳು ಹಾಗೂ ಹಿಂದಿಯ 'ಹ್ಯಾಂಗ್ ಟು ಡೆತ್' ಸಿನಿಮಾದಲ್ಲೂ ನಟಿಸಿದ್ದಾರೆ. ಕುಡುಕ, ಭಿಕ್ಷುಕ ಹೀಗೆ ಸಣ್ಣಪುಟ್ಟ ಪಾತ್ರಗಳಿಗೆ ಸೀಮಿತವಾಗಿದ್ದ ಬಿರಾದಾರ್ ಅವರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟದ್ದು ಗಿರೀಶ್ ಕಾಸರವಳ್ಳಿಯವರ 'ಕನಸೆಂಬೋ ಕುದುರೆಯನೇರಿ' ಸಿನಿಮಾ. ಈ ಸಿನಿಮಾ ಸ್ಪೇನ್‍ನ ಮ್ಯಾಡ್ರಿಡ್ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಬಿರಾದಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು. ವೈಜನಾಥ ಬಿರಾದಾರ್ ಅವರು ಸುಮಾರು ಮೂರು ದಶಕಗಳಿಂದ ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ ಹಿರಿಯ ಭಾರತೀಯ ಚಲನಚಿತ್ರ ನಟ. ಅವರು ಜಯಭೇರಿ (1989) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಅವರು ಹಲವಾರು ಪ್ರಸಿದ್ಧ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ಏಕಲವ್ಯ (1990), ಅಜಗಜಾಂತರ (1991), ಸೂಪರ್ ನನ್ನ ಮಗ (1992), ಶಿವಣ್ಣ (1993), ಶ್ (1993), ದೊರೆ (1995), ಓ ಮಲ್ಲಿಗೆ (1997) ನಂತಹ ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ), ಎಲ್ಲರಂತಲ್ಲ ನನ್ನ ಗಂಡ (1997), ಎ: ಉಪೇಂದ್ರ ಅವರ ಚಿತ್ರ (1998), ಸ್ವಸ್ತಿಕ್ (1999), ತವರಿಗೆ ಬಾ ತಂಗಿ (2002), ನಂದಿ (2002), ಅಭಿ (2003), ಕಿಚ್ಚ (2003), ಸುಂಟರಗಾಳಿ (2005), ಮಾತಾ (2006), ಹುಬ್ಬಳ್ಳಿ (2006), ಮಠದ ಮಠದ ಮಲ್ಲಿಗೆ (2007), ಉಪ್ಪಿ 2 (2015) ಮತ್ತು ದನ ಕಾಯೋನು (2016). ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಆಯೋಜಿಸಲಾದ ಇಂಡಿಯಾ ಇಮ್ಯಾಜಿನ್ ಫಿಲ್ಡ್ ಫೆಸ್ಟಿವಲ್‌ನಲ್ಲಿ ಗಿರೀಶ್ ಕಾಸರವಳ್ಳಿಯವರ ಕನಸೆಂಬ ಕುದುರೆಯನೇರಿ (2010) ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. 2023ರಲ್ಲಿ "90 ಬಿಡಿ ಮನೆಗೆ ನಡಿ" ಚಿತ್ರಕ್ಕಾಗಿ ನಟರಾಗಿ ಆಕ್ಟಿಂಗ್ ಮಾಡಿದ್ದಾರೆ.
ಪ್ರಶಸ್ತಿ ಗೌರವ
[ಬದಲಾಯಿಸಿ]ಸ್ಪೇನ್‍ನ ಮ್ಯಾಡ್ರಿಡ್ನಲ್ಲಿ ನಡೆದ ೨೦೧೧ರ ಸಾಲಿನ “ಇಮ್ಯಾಜಿನ್ ಇಂಡಿಯಾ” ಚಲನಚಿತ್ರೋತ್ಸವದಲ್ಲಿ 'ಕನಸೆಂಬೋ ಕುದುರೆಯನೇರಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. [೧] ಬಿರಾದಾರ್ ಅವರಿಗೆ 2014ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಆಕರ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2011-07-26. Retrieved 2011-06-08.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |