ಚಲನಚಿತ್ರೋತ್ಸವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಲನಚಿತ್ರೋತ್ಸವ, ಹೆಸರೆ ಹೇಳುವಂತೆ ಚಲನಚಿತ್ರಗಳ ಉತ್ಸವ. ಸಾಧಾರಣವಾಗಿ ವರ್ಷಕ್ಕೊಮ್ಮೆ ನೆಡೆಯುವ ಈ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಯವುದಾದರು ವಿಶಿಷ್ಟ ವಸ್ತು(ಉದಾ. ಮಕ್ಕಳ ಚಿತ್ರಗಳು, ಏಶಿಯಾದ ಚಿತ್ರಗಳು, ಇತ್ಯಾದಿ) ಅಥವಾ ಪ್ರಭೇದವನ್ನು(ಉದಾ. ಸಣ್ಣ ಚಿತ್ರಗಳು, ಡಾಕ್ಯುಮೆಂಟರಿ ಚಿತ್ರಗಳು, ಇತ್ಯಾದಿ) ಆಧರಿಸಿರುತ್ತದ್ದೆ. ಸಾಮಾನ್ಯವಾಗಿ ಚಲನಚಿತ್ರೋತ್ಸವಗಳಲ್ಲಿ ಚಲನಚಿತ್ರಗಳ ಪ್ರದರ್ಶನ, ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಞರಿಂದ ವಿಚಾರ ವಿಮರ್ಶೆ, ಪತ್ರಿಕಾ ಗೊಷ್ಟಿ, ಇತ್ಯಾದಿ ಇರುತ್ತವೆ. ಸಾಧಾರಣವಾಗಿ ಈ ಚಲನಚಿತ್ರೋತ್ಸವಗಳಲ್ಲಿ ನೂತನ ಚಿತ್ರಗಳು ಮಾತ್ರ ಪ್ರದರ್ಶನಗೊಳ್ಳುತ್ತವೆ. ೧೯೩೨ರಲ್ಲಿ ಮೊದಲಬಾರಿ ಇಟಲಿಯ ವೇನೀಸ್ ನಗರದಲ್ಲಿ ಪ್ರಮುಖ ಚಲನಚಿತ್ರೋತ್ಸವ ನೆಡಯಿತು ತದನಂತರ ಅನೇಕ ಚಲನಚಿತ್ರೋತ್ಸವಗಳು ವಿಶ್ವದ ಅನೇಕ ಭಾಗಗಳಲ್ಲಿ ನೆಡೆಯತೊಡಗಿದವು. ಕೆಲವು ಚಲನಚಿತ್ರೋತ್ಸವಗಳೂ ಅಸ್ಪರ್ಧಾತ್ಮಕ ಸ್ವರೂಪದವಾಗಿದ್ದರೆ (ಉದಾ. ಲಂಡನ್ ಚಲನಚಿತ್ರೋತ್ಸವ) ಇನ್ನು ಕೆಲವು ಸ್ಪರ್ಧಾತ್ಮಕ ಸ್ವರೂಪದವಗಿರುತ್ತವೆ(ಉದಾ. ಟೊರೊಂಟೊ ಚಲನಚಿತ್ರೋತ್ಸವ) ಇನ್ನು ಕೆಲವುಗಳಲ್ಲಿ ಸ್ಪರ್ಧೆಯಲ್ಲಿರುವ ಮತ್ತು ಸ್ಪರ್ಧೆಯಲ್ಲಿರದ ಚಿತ್ರಗಳ ಪ್ರತ್ಯೇಕ ವಿಭಾಗಗಳಿರುತ್ತವೆ(ಉದಾ. ಕ್ಯಾನ್ ಚಲನಚಿತ್ರೋತ್ಸವ, ಬರ್ಲಿನ್ ಚಲನಚಿತ್ರೋತ್ಸವ). ಕ್ಯಾನ್, ವೇನೀಸ್, ಬರ್ಲಿನ್, ಲೊಕಾರ್ನೊ, ಟೊರೊಂಟೊ, ಮಾಸ್ಕೊ, ಸನ್‌ಡಾನ್ಸ್ ಮತ್ತು ಕಾರ್ಲವಿ ವಾರಿ ಚಲನಚಿತ್ರೋತ್ಸವಗಳನ್ನು ಎ ದರ್ಜೆಯ ಚಲನಚಿತ್ರೋತ್ಸವಗಳೆಂದು ಪರಿಗಣಿಸಲಾಗುತ್ತದೆ ಮತ್ತು ನಿಯಮದಂತೆ ಹೊಸ ಚಿತ್ರಗಳು ಇವುಗಳಲ್ಲಿ ಯಾವುದಾದರು ಒಂದು ಚಲನಚಿತ್ರೋತ್ಸವದಲ್ಲಿ ಮಾತ್ರ ಪ್ರದರ್ಶಿತಗೊಳ್ಳಬಹುದು.

ಪ್ರಪಂಚದ ಕೆಲವು ಪ್ರತಿಷ್ಠಿತ ಚಲನಚಿತ್ರೋತ್ಸವಗಳು ಹೀಗಿವೆ