ಅರ್ಜುನ್ ಅಟ್ವಾಲ್
Arjun Atwal | |
---|---|
— Golfer — | |
Personal information | |
ಪೂರ್ತಿ ಹೆಸರು | Arjun Singh Atwal |
ಎತ್ತರ | 6 ft 1 in (1.85 m) |
ರಾಷ್ರ್ಟೀಯತೆ | ಭಾರತ |
ನಿವಾಸ | ಕೊಲ್ಕತ್ತ, India; Windermere, Florida, USA |
ಸಂಗಾತಿ | Sona (m.2000) |
ಮಕ್ಕಳು | Ritika, Krishen |
Career | |
ವೃತ್ತಿಪರ ತಿರುಗಿತು | 1995 |
ಪ್ರಸ್ತುತ ಪ್ರವಾಸ (ಗಳು) | PGA Tour European Tour Asian Tour |
ವೃತ್ತಿಪರ ಗೆಲುವು | 11 |
Number of wins by tour | |
ಪಿಜಿಏ ಪ್ರವಾಸ | 1 |
ಯುರೋಪಿಯನ್ ಪ್ರವಾಸ | 3 |
ಏಷಿಯನ್ ಪ್ರವಾಸ | 7 |
ಇತರ | 3 |
Best results in Major Championships | |
ಮಾಸ್ಟರ್ಸ್ ಟೂರ್ನಮೆಂಟ್ | DNP |
ಯು.ಎಸ್. ಓಪನ್ (ಗಾಲ್ಫ್) | CUT: 2010 |
ದಿ ಓಪನ್ ಚಾಂಪಿಯನ್ಶಿಪ್ | CUT: 2004 |
ಪಿಜಿಏ ಚಾಂಪಿಯನ್ಯಿಪ್ | CUT: 2005 |
Achievements and awards |
'ಅರ್ಜುನ್ ಸಿಂಗ್ ಅಟ್ವಾಲ್ (ಹುಟ್ಟಿದ್ದು 20 ಮಾರ್ಚ್, 1973) ಭಾರತದ ವೃತ್ತಿಪರ ಗಾಲ್ಫ್ ಆಟಗಾರರು. ಅವರು ಏಷ್ಯನ್ ಟೂರ್ ಮತ್ತು ಯುರೋಪಿಯನ್ ಟೂರ್ ಪಂದ್ಯಗಳಲ್ಲಿ ಆಡಿದವರು. ಜೊತೆಗೆ ಭಾರತದಲ್ಲಿ ಜನಿಸಿ, ಯು.ಎಸ್. ಮೂಲದ ಪಿಜಿಎ ಟೂರ್ನ ಸದಸ್ಯರಾಗಿ, ನಂತರ ಅದರಲ್ಲಿ ವಿಜೇತರಾದ ಪ್ರಪ್ರಥಮ ಭಾರತೀಯ ಆಟಗಾರರು. '
ಆರಂಭಿಕ ಜೀವನ
[ಬದಲಾಯಿಸಿ]ಭಾರತದ ಪಶ್ಚಿಮ ಬಂಗಾಳ ದಲ್ಲಿರುವ, , ಅಸನ್ಸಾಲ್ ಮತ್ತು ಕೊಲ್ಕತಾದಲ್ಲಿ ನೆಲೆಸಿದ್ದ, ಹರ್ಮಿಂದರ್ ಸಿಂಗ್ ಅಟ್ವಾಲ್ (ಹೆಸರಾಂತ ಕೈಗಾರಿಕೋದ್ಯಮಿ) ಅವರ ಮಗನಾಗಿ ಸಿಖ್ ಕುಟುಂಬದಲ್ಲಿ ಅರ್ಜುನ್ ಅಟ್ವಾಲ್ ಹುಟ್ಟಿದರು. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಗಾಲ್ಫ್ ಆಡಲಾರಂಭಿಸಿದ ಅವರು, ರಾಯಲ್ ಕಲ್ಕತ್ತಾ ಗಾಲ್ಫ್ ಕ್ಲಬ್ ಮತ್ತು ಟಾಲ್ಲಿಗಂಜ್ ಕ್ಲಬ್ಗಳಲ್ಲಿ ಆಡಲಾರಂಭಿಸಿದರು. ಅವರು ಅಮೆರಿಕ ಸಂಯುಕ್ತ ಸಂಸ್ಥಾನದ ವೆಸ್ಟ್‌ಬರಿ, ನ್ಯೂಯಾರ್ಕ್‌ನಲ್ಲಿರುವ ಡಬ್ಲ್ಯು. ಟ್ರೆಸ್ಪರ್ ಕ್ಲಾರ್ಕ್ ಹೈ ಸ್ಕೂಲ್‌ನಲ್ಲಿ ಎರಡು ವರ್ಷ ಶಿಕ್ಷಣ ಪಡೆದರು. ಅವರ ಹಿರಿಯ ಅಣ್ಣ ಗೋವಿಂದ್ ಸಿಂಗ್ ಅಟ್ವಾಲ್ ಕೂಡ ಉತ್ತಮ ಗಾಲ್ಫ್ ಆಟಗಾರರು.
ವೃತ್ತಿಜೀವನ
[ಬದಲಾಯಿಸಿ]1995ರಲ್ಲಿ ಅವರ ವೃತ್ತಿಯಲ್ಲಿ ಆದ ಮಹತ್ವದ ತಿರುವಿನ ನಂತರ ಅವರು ಏಷ್ಯನ್ ಟೂರ್‌ನ ಮಹತ್ವದ ಆಟಗಾರರಲ್ಲಿ ಒಬ್ಬರಾದರು. ಅವರು 2003ರಲ್ಲಿ ಅಗ್ರ ಶ್ರೇಯಾಂಕದಲ್ಲಿದ್ದರು ಮತ್ತು ಅದೇ ವರ್ಷ ಭಾರತದಲ್ಲಿ ನಡೆದ ಹೀರೋ ಹೊಂಡಾ ಮಾಸ್ಟರ್ಸ್ ಪಂದ್ಯದಲ್ಲಿ ಒಂದು ಮಿಲಿಯನ್ ಅಮೆರಿಕನ್ ಡಾಲರ್ ಪ್ರಶಸ್ತಿಯನ್ನು ಜಯಿಸಿದರು. ಜೀವ್ ಮಿಲ್ಖಾ ಸಿಂಗ್ ನಂತರ ಅಟ್ವಾಲ್ ಯುರೋಪಿಯನ್ ಟೂರ್ ಸದಸ್ಯತ್ವ ಪಡೆದ ಎರಡನೇ ಆಟಗಾರರಾಗಿದ್ದಾರೆ. ಜೊತೆಗೆ ಅವರು ಯುರೋಪಿಯನ್ ಟೂರ್ ಪಂದ್ಯದಲ್ಲಿ ಗೆದ್ದ ಪ್ರಥಮ ಆಟಗಾರರು. 2002ರ ಕಾಲ್ಟೆಕ್ಸ್ ಸಿಂಗಾಪುರ್ ಮಾಸ್ಟರ್ಸ್ ಪಂದ್ಯದಲ್ಲಿ ಐದು ಸ್ಟ್ರೋಕ್‌ಗಳ ವಿಜಯವನ್ನು ಗಳಿಸಿದ್ದರು. ಈ ಪಂದ್ಯವನ್ನು ಏಷ್ಯನ್ ಮತ್ತು ಯುರೋಪಿಯನ್ ಟೂರ್‌ಗಳು ಸಹಪ್ರಾಯೋಜತ್ವ ವಹಿಸಿದ್ದವು. ಅವರು ಎರಡನೇ ಯುರೋಪಿಯನ್ ಟೂರ್ ಅನ್ನು ಗೆದ್ದುಕೊಂಡಿದ್ದು, 2003ರ ಕಾರ್ಲ್ಸ್‌ಬರ್ಗ್ ಮಲೇಷ್ಯನ್ ಓಪನ್ ಪಂದ್ಯದಲ್ಲಿ. ಅದೇ ವರ್ಷದ ಕೊನೆಯಲ್ಲಿ ಅಟ್ವಾಲ್ ಅಮೆರಿಕದಲ್ಲಿ ಪಿಜಿಎ ಟೂರ್‌ನ ಕ್ವಾಲಿಫೈಯಿಂಗ್ ಸ್ಕೂಲ್‌ನಲ್ಲಿ ಏಳನೆಯವರಾಗಿ ಕೊನೆಗೊಳಿಸಿ, 2004ರ ಪಿಜಿಎ ಟೂರ್ ಕಾರ್ಡ್ ಗಳಿಸಿದರು. ಅದೇ ಮೊದಲನೆಯ ಬಾರಿಗೆ ಪೂರ್ವ ಭಾರತೀಯ ಮೂಲದ ಆಟಗಾರನೊಬ್ಬ ಈ ಕಾರ್ಡ್ ಗಳಿಸಿದ್ದು ಆಗಿತ್ತು. (ಭಾರತೀಯ ಮೂಲದ ಖ್ಯಾತ ಗಾಲ್ಫರ್, ದೀರ್ಘಕಾಲ ಪಿಜಿಎ ಟೂರ್ ಮುಖ್ಯಭೂಮಿಕೆಯಲ್ಲಿದ್ದ ಮತ್ತು ಅನೇಕ ಪ್ರಮುಖ ಪಂದ್ಯಗಳನ್ನು ಗೆದ್ದುಕೊಂಡಿದ್ದ ವಿಜಯ್ ಸಿಂಗ್ ಅವರು ಫಿಜಿ ದೇಶದವರಾಗಿದ್ದರು.) ಅವರು ತಮ್ಮ 2004ರ ರೂಕೀ ಋತುವಿನಲ್ಲಿ ಪಿಜಿಎ ಟೂರ್ ಪಂದ್ಯದಲ್ಲಿದ್ದರು ಮತ್ತು ಅದರಲ್ಲಿ ಹಣದ ಪಟ್ಟಿಯಲ್ಲಿ (ಅಂದರೆ ಮನಿ ಲಿಸ್ಟ್‌ನಲ್ಲಿ) 142ನೇಯವರಾಗಿ ಪಂದ್ಯವನ್ನು ಪೂರ್ಣಗೊಳಿಸಿದರು. 2005ರಲ್ಲಿ, ಅಟ್ವಾಲ್ ಅವರು ಹಲವಾರು ಬಾರಿ ಪಿಜಿಎ ಟೂರ್ ಅನ್ನು ಗೆಲ್ಲುವ ಹಂತಕ್ಕೆ ಬಂದಿದ್ದರು. ಮುಖ್ಯವಾಗಿ ಆ ವರ್ಷದ ಏಪ್ರಿಲ್‌ನಲ್ಲಿ ಬೆಲ್‌ಸೌತ್ ಕ್ಲಾಸಿಕ್ ನಲ್ಲಿ ಗೆಲುವಿನ ಸಮೀಪ ಬಂದಿದ್ದರು. ಮಳೆಯಿಂದಾಗಿ ಮೊಟಕುಗೊಳಿಸಿದ ಅಂತಿಮ ಸುತ್ತಿನಲ್ಲಿ ಅವರು 64ನೆ ಸ್ಥಾನ ಗಳಿಸಿದರು (ಇದು ಪಂದ್ಯದಲ್ಲಿ ಯಾವುದೇ ಗಾಲ್ಫರ್‌ಗೆ ಅತ್ಯಂತ ಕೆಳಹಂತದ ಸುತ್ತು ಆಗಿರುತ್ತದೆ). ರಿಚ್ ಬೀಮ್ , ಜೋಸ್ ಮಾರಿಯ ಒಲಜಬಲ್ , ಬ್ರಾಂಡ್ ಜೋಬ್ ಮತ್ತು ಫಿಲ್ ಮೇಕಲ್‌ಸನ್, ಇವರೊಂದಿಗೆ ಐದು ಜನರ ಸಡನ್ ಡೆತ್ ಪ್ಲೇಆಫ್ (ಟೈಬ್ರೆಕರ್ ರೀತಿಯಲ್ಲಿ) ನಲ್ಲಿ ಅಟ್ವಾಲ್ ಗಾಯಗೊಂಡರು.. ಪ್ಲೇಆಫ್‌ನ ಮೊದಲ ಹೋಲ್‌ನಲ್ಲಿ , ಪಾರ್-5 18ನೆಯದರಲ್ಲಿ, ಅಟ್ವಾಲ್‌ರ ಎರಡನೇ ಹೊಡೆತವು ಗಾಲ್ಫ್ ಚೆಂಡನ್ನು ನೀರಿನಲ್ಲಿ ಬೀಳಿಸಿತು. ಆದರೂ ಅವರು ನಾಲ್ಕನೇ ಹೊಡೆತದಲ್ಲಿ ಚೆಂಡನ್ನು ಹೋಲ್‌ನ ಹತ್ತಿರಕ್ಕೆ ಕಳುಹಿಸಿದ್ದರು. ಅವರು ಯಶಸ್ವಿಯಾಗಿದ್ದರೆ, ಅವರು ಬರ್ಡಿ (ಅಂದರೆ ಗಾಲ್ಫರ್ ಒಬ್ಬರು ಮಾಡಬೇಕಿರುವ ನಿರೀಕ್ಷಿತ ಹೊಡೆತಗಳಿಗಿಂತ ಒಂದು ಕಡಿಮೆ)ಯಾಗುತ್ತಿದ್ದರು ಮತ್ತು ಗೆಲ್ಲುತ್ತಿದ್ದರು (ಮೈಕಲ್‌ಸನ್ ಮತ್ತು ಒಲಜಬಲ್ ಪಾರ್ ಆದರು [ಅಂದರೆ ಎಲ್ಲ ಹೋಲ್‌ಗಳನ್ನು ಪೂರ್ಣಗೊಳಿಸಲು ಮಾಡಬೇಕಿರುವ ಹೊಡೆತಗಳು] ಮತ್ತು ಜೋಬ್ ಬಾಗ್ಗಿ ಅಂದರೆ ಎಲ್ಲ ಹೋಲ್‌ಗಳನ್ನು ಪೂರ್ಣಗೊಳಿಸಿ ಒಂದು ಹೆಚ್ಚಿನ ಸ್ಕೋರ್ ಮಾಡಿದರು.) ಎರಡು ಬಾರಿ ಚೆಂಡನ್ನು ಹೋಲ್‌ಗೆ ಕಳುಹಿಸಿದ ನಂತರ ಅಂದರೆ ಎರಡು ಗ್ರೀನ್ ಆದ ನಂತರ ಅಟ್ವಾಲ್ ಬಾಗ್ಗಿ ಮಾಡಿದರು, ನಂತರ ಅವರನ್ನು ಮತ್ತು ಜೋಬ್‌ರನ್ನು ಆ ಸುತ್ತಿನಿಂದ ಹೊರಹಾಕಲಾಯಿತು. ಆ ಪಂದ್ಯವನ್ನು ನಂತರ ಮೈಕೆಲ್‌ಸನ್ ಗೆದ್ದುಕೊಂಡರು. 2005ರಲ್ಲಿ ಅಟ್ವಾಲ್ ಅವರು ಮನಿ ಲಿಸ್ಟ್‌ನಲ್ಲಿ 82ನೆಯವರಾಗಿ ಪೂರ್ಣಗೊಳಿಸಿ, 2006ರ ಪಂದ್ಯಕ್ಕೆ ತಮ್ಮ ಸ್ಥಾನವನ್ನು ಕಾಯ್ದಿರಿಸಿಕೊಂಡರು.
ಫ್ಲೋರಿಡಾ ಹೈವೇ ಪ್ಯಾಟ್ರಲ್ ಪ್ರಕಾರ ಅಟ್ವಾಲ್ ಫ್ಲೋರಿಡಾ ಬಳಿಯ ವಿಂಡರ್‌ಮೀರ್‌ನಲ್ಲಿ (ಕಿಸ್ಸಿಮೀ ಬಳಿ) ಎಸ್‌ಆರ್ 535 ಹೆದ್ದಾರಿಯಲ್ಲಿ 2007ರ ಮಾರ್ಚ್ 10ರಂದು ನಡೆದ ಸ್ಟ್ರೀಟ್ ರೇಸಿಂಗ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಭಾಗಿಯಾದ್ದರು [೧] ಅಟ್ವಾಲ್‌ರಿಗೆ ಗಾಯವಾಗಿರಲಿಲ್ಲ ಮತ್ತು ಒಂದು ವರ್ಷದ ತನಿಖೆಯ ನಂತರ ಯಾವುದೇ ಮೊಕದ್ದಮೆ ಹೂಡದೇ ಪ್ರಕರಣವನ್ನು ಕೈಬಿಡಲಾಯಿತು.[೨] ಎರಡನೇ ಚಾಲಕ, 48ರ ಹರೆಯದ ಜಾನ್ ನೋ ಪಾರ್ಕ್ ಈ ಅಪಘಾತದಲ್ಲಿ ಮರಣಿಸಿದ್ದರು. 2010ರ ಆರ್‌ಬಿಸಿ ಕೆನಡಿಯನ್ ಓಪನ್ ನಂತರ, ವೈದ್ಯಕೀಯ ತಪಾಸಣೆಯ ನಂತರ ಭುಜದ ನೋವಿನಿಂದ ಬಳಲುತ್ತಿದ್ದ ಅಟ್ವಾಲ್ ತಮ್ಮ ಪಿಜಿಎ ಟೂರ್ ಕಾರ್ಡ್ ಅನ್ನು ಕಳೆದುಕೊಂಡಿದ್ದಾರೆ. ಪಂದ್ಯದಿಂದ ಹೊರಗುಳಿದ ಅವರು ಸಾಕಷ್ಟು ಹಣ ಸಂಪಾದಿಸಲಾಗಲಿಲ್ಲ.[೩] ನಂತರ ಮತ್ತೆ ಪಿಜಿಎ ಟೂರ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದು, ಮಂಡೆಯವರ 2011 ಮಾಸ್ಟರ್ಸ್ ಟೂರ್ನಮೆಂಟ್ ಗೆ ಅರ್ಹತೆ ಗಳಿಸಿಕೊಂಡಿದ್ದಾರೆ.ನಂತರ ಅವರು ಪಿಜಿಎ ಟೂರ್‌ನ ನಿಯಮಿತ ಋತುವಿನ ಅಂತಿಮ ಪಂದ್ಯವಾದ ವಿಂದಾಮ್ ಚಾಂಪಿಯನ್‌ಶಿಪ್ ನಲ್ಲಿ ತಮ್ಮ ಮೊಟ್ಟಮೊದಲ ಗೆಲುವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಪಿಜಿಎ ಟೂರ್‌ನಲ್ಲಿ ಗೆದ್ದ ಪ್ರಪ್ರಥಮ ಭಾರತೀಯರಾಗಿದ್ದಾರೆ ಮತ್ತು , ಮತ್ತು ಮಂಡೇ ಅರ್ಹತೆ ಪಡೆದುಕೊಂಡು ಪಿಜಿಎ ಟೂರ್ ಗೆದ್ದವರಲ್ಲಿ ಫ್ರೆಡ್ ವ್ಯಾಡ್ಸ್‌ವರ್ತ್ 1986ರಲ್ಲಿ ಸೌದರ್ನ್ ಓಪೆನ್ ಗೆದ್ದುಕೊಂಡ ನಂತರ ಅಟ್ವಾಲ್ ಎರಡನೆಯವರು.[೪] ಅವರು ತಮ್ಮ ಟೂರ್ ಕಾರ್ಡ್ ಕಳೆದುಕೊಂಡಿದ್ದರಿಂದ, ಅವರ ವಿಜಯಕ್ಕಾಗಿ ಫೆಡ್‌ಎಕ್ಸ್ ಕಪ್ ಪಾಯಿಂಟ್‌ಗಳನ್ನು ನೀಡಲಿಲ್ಲ ಮತ್ತು ಪ್ಲೇಆಫ್‌ಗಳನ್ನು ಮಾಡಲು ಮೊದಲೇ ಸಾಕಷ್ಟು ಪಾಯಿಂಟ್‌ಗಳನ್ನು ಮಾಡಿರಲಿಲ್ಲ. ಅವರು ಫ್ಲೋರಿಡಾದಲ್ಲಿ ಟೈಗರ್ ವುಡ್ಸ್ ಗೆ ಐದು ವರ್ಷಗಳ ಕಾಲ ನೆರೆಮನೆಯವರಾಗಿದ್ದರು ಮತ್ತು ಪ್ರಾಕ್ಟೀಸ್‌ನ ಜೊತೆಗಾರನಾಗಿದ್ದರು.[೫]
ವೃತ್ತಿಪರ ಗೆಲವುಗಳು (11)
[ಬದಲಾಯಿಸಿ]ಪಿಜಿಎ ಟೂರ್ ಗೆಲುವುಗಳು (1)
[ಬದಲಾಯಿಸಿ]ಸಂ. | ದಿನಾಂಕ | ಪಂದ್ಯಾವಳಿ | ಗೆದ್ದ ಸ್ಕೋರ್(ಅಂಕ) | ಗೆಲುವಿನ ಅಂತರ |
ರನ್ನರ್ಸ್‌ಅಪ್ |
---|---|---|---|---|---|
1 | 22 ಆಗಸ್ಟ್ 2010 | ವಿಂದಾಮ್ ಚಾಂಪಿಯನ್‌ಶಿಪ್ | −20 (61-67-65-67=260) | 1 ಹೊಡೆತ/ಸ್ಟ್ರೋಕ್ | ಡೇವಿಡ್ ಟೋಮ್ಸ್ |
ಯುರೋಪಿಯನ್ ಟೂರ್ ಗೆಲುವುಗಳು (3)
[ಬದಲಾಯಿಸಿ]ಏಷ್ಯನ್ ಟೂರ್ ಗೆಲುವುಗಳು (7)
[ಬದಲಾಯಿಸಿ]- 1999 ವಿಲ್ಸ್ ಇಂಡಿಯನ್ ಓಪನ್
- 2000 ಹೀರೋ ಹೊಂಡ ಮಾಸ್ಟರ್ಸ್, ಸ್ಟಾರ್ ಅಲಿಯನ್ಸ್ ಓಪನ್
- 2002 ಕಾಲ್ಟೆಕ್ಸ್ ಸಿಂಗಾಪುರ್ ಓಪನ್ ( ಯುರೋಪಿಯನ್ ಟೂರ್ ಜೊತೆ ಸಹ-ಅನುಮೋದನೆಗೊಂಡಿದ್ದು)
- 2003 ಕಾಲ್ರ್ಸ್‌ಬರ್ಗ್ ಮಲೇಷ್ಯನ್ ಓಪನ್ ( ಯುರೋಪಿಯನ್ ಟೂರ್ ಜೊತೆ ಸಹ-ಅನುಮೋದನೆಗೊಂಡಿದ್ದು), ಹೀರೋ ಹೊಂಡಾ ಮಾಸ್ಟರ್ಸ್
- 2008 ಮೇಬ್ಯಾಂಕ್ ಮಲೇಷ್ಯನ್ ಓಪನ್ (ಯುರೋಪಿಯನ್ ಟೂರ್ ಜೊತೆ ಸಹ-ಅನುಮೋದನೆಗೊಂಡಿದ್ದು )
ಜಯಗಳಿಸಿದ ನೇಶನ್‌ವೈಡ್ ಟೂರ್ (1)
[ಬದಲಾಯಿಸಿ]- 2008 ಚಟ್ಟನೂಗ ಕ್ಲಾಸಿಕ್
ಬೇರೆ ಗೆಲುವುಗಳು (2)
[ಬದಲಾಯಿಸಿ]- 1995 ಡಿಸಿಎಂ ಓಪನ್
- 1997 ಕ್ಲಾಸಿಕ್ ಸೌದರ್ನ್ ಇಂಡಿಯನ್ ಓಪನ್
ಪ್ರಮುಖ ಚಾಂಪಿಯನ್‌ಷಿಪ್‌ಗಳ ಫಲಿತಾಂಶಗಳು
[ಬದಲಾಯಿಸಿ]ಪಂದ್ಯಾವಳಿ | 2004 | 2005 | 2006 | 2007 | 2008 | 2009 | 2010 |
---|---|---|---|---|---|---|---|
ಮಾಸ್ಟರ್ಸ್ ಟೂರ್ನಮೆಂಟ್ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ |
ಯುಎಸ್ ಓಪನ್ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಸಿಯುಟಿ |
ದಿ ಓಪನ್ ಚಾಂಪಿಯನ್‌ಷಿಪ್ | ಸಿಯುಟಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ |
ಪಿಜಿಎ ಚಾಂಪಿಯನ್‌ಷಿಪ್ | ಡಿಎನ್‌ಪಿ | ಸಿಯುಟಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ | ಡಿಎನ್‌ಪಿ |
ಡಿಎನ್‌ಪಿ = ಡಿಡ್ ನಾಟ್ ಪ್ಲೇ (ಆಟವಾಡಲಿಲ್ಲ)
ಸಿಯುಟಿ (ಕಟ್) = ಹಾಫ್‌ವೇ ಕಟ್ ತಪ್ಪಿಸಿಕೊಂಡಿದ್ದು
"ಟಿ" = ಟೈ ಆಗಿದ್ದು
ಗೆದ್ದಿದ್ದು - ಹಸಿರು ಹಿನ್ನೆಲೆ. ಹಳದಿ ಹಿನ್ನೆಲೆ - ಟಾಪ್ 10.
ತಂಡದಲ್ಲಿ ಕಾಣಿಸಿಕೊಂಡಿದ್ದು
[ಬದಲಾಯಿಸಿ]- ರಾಯಲ್ ಟ್ರೋಫಿ (ಏಷ್ಯಾ ಪ್ರತಿನಿಧಿಸಿದ್ದು ): 2006
ಇವನ್ನೂ ಗಮನಿಸಿ
[ಬದಲಾಯಿಸಿ]- 2008 ನೇಶನ್‌ವೈಡ್ ಟೂರ್ ಗ್ರಾಜುಯೇಟ್ಸ್
- ಗಾಲ್ಫರ್ಸ್ ವಿತ್ ಮೋಸ್ಟ್ ಏಷ್ಯನ್ ಟೂರ್ ವಿನ್ಸ್
ಉಲ್ಲೇಖಗಳು
[ಬದಲಾಯಿಸಿ]- ↑ "ಅಟ್ವಾಲ್ ಇನ್‌ವೆಸ್ಟಿಗೇಟೆಡ್ ಆಫ್ಟರ್ ಕ್ರಾಶ್ ಡೆತ್". Archived from the original on 2007-09-30. Retrieved 2007-09-30.
- ↑ ನೋ ಚಾರ್ಜ್‌ಸ್ ಪ್ರೆಸ್‌ಡ್, ಸೊ ಅಟ್ವಾಲ್ ಕ್ಯಾನ್ ಪ್ರೆಸ್ ಆನ್
- ↑ "India's Atwal matches course record to seize PGA lead". France 24. Agence France-Presse. 20 August 2010. Retrieved 22 August 2010.
- ↑ "Arjun Atwal of India gets historic win". ESPN. Associated Press. 22 August 2010. Retrieved 22 August 2010.
- ↑ "Woods' practice partner ties for 1st". The News Tribune. 2 July 2010. Archived from the original on 3 April 2012. Retrieved 25 August 2010.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಪ್ರೊಫೈಲ್ ಆನ್ ಪಿಜಿಎ ಟೂರ್'ಸ್ ಅಫಿಶಿಯಲ್ ಸೈಟ್ Archived 2010-12-16 ವೇಬ್ಯಾಕ್ ಮೆಷಿನ್ ನಲ್ಲಿ.
- ಪ್ರೊಫೈಲ್ ಆನ್ ಯುರೋಪಿಯನ್ ಟೂರ್'ಸ್ ಅಫಿಶಿಯಲ್ ಸೈಟ್
- ಪ್ರೊಫೈಲ್ ಆನ್ ಏಷ್ಯನ್ ಟೂರ್'ಸ್ ಅಫಿಶಿಯಲ್ ಸೈಟ್ Archived 2010-12-12 ವೇಬ್ಯಾಕ್ ಮೆಷಿನ್ ನಲ್ಲಿ.
- ಅಧಿಕೃತ ವಿಶ್ವ ಗಾಲ್ಫ್ ರ್ಯಾಂಕಿಂಗ್ ಸೈಟ್ನಿಂದ ಕಳೆದ ಎರಡು ವರ್ಷಗಳ ಟೂರ್ನ್ಮೆಂಟ್ಗಳ ರ್ಯಾಂಕಿಂಗ್ ಫಲಿತಾಂಶಗಳು Archived 2011-05-19 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Persondata templates without short description parameter
- ಭಾರತೀಯ ಪುರುಷ ಗಾಲ್ಫ್ ಆಟಗಾರರು
- ಏಷ್ಯನ್ ಟೂರ್ ಗಾಲ್ಫ್ ಆಟಗಾರರು
- ಯುರೋಪಿಯನ್ ಟೂರ್ ಗಾಲ್ಫ್ ಆಟಗಾರರು
- ಪಿಜಿಎ ಟೂರ್ ಗಾಲ್ಫ್ ಆಟಗಾರರು
- ಅರ್ಜುನ್ ಪ್ರಶಸ್ತಿ ವಿಜೇತರು
- ಭಾರತದ ಸಿಖ್ಖರು
- ಪಶ್ಚಿಮ ಬಂಗಾಳದ ಜನರು
- ಅಸನ್ಸಾಲ್ನ ಜನರು
- 1973ರಲ್ಲಿ ಹುಟ್ಟಿದವರು
- ಬದುಕಿರುವ ವ್ಯಕ್ತಿಗಳು
- ಕ್ರೀಡಾಪಟುಗಳು