ವಿಷಯಕ್ಕೆ ಹೋಗು

ದೇವತಾಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಬರ್ಟ್ ದಿ ಗ್ರೇಟ್, ರೋಮನ್ ಕೆಥೋಲಿಕ್ ದೇವತಾಶಾಸ್ತ್ರಜ್ಞರ ಪೋಷಕ ಸಂತ

ದೇವತಾಶಾಸ್ತ್ರವು ದೇವರ ಅಧ್ಯಯನಕ್ಕೆ ಸಂಬಂಧಿಸಿದ್ದು. ಇನ್ನಷ್ಟು ಸರಳವಾಗಿ ವಿವರಿಸುವುದಾದರೆ ಧಾರ್ಮಿಕ ನಂಬಿಕೆ, ಆಚರಣೆ ಮತ್ತು ಅನುಭವಗಳ ಅಥವಾ ಆಧ್ಯಾತ್ಮಿಕತೆಯ ಅಧ್ಯಯನ.

ವ್ಯಾಖ್ಯಾನ

[ಬದಲಾಯಿಸಿ]

ಲ್ಯಾಟಿನ್ನಲ್ಲಿ ಇದಕ್ಕೆ ಸಂವಾದಿಯಾದ ಥಿಯೋಲೋಜಿಯಾ ವನ್ನುಹಿಪ್ಪೋದ ಅಗಸ್ಟೀನ್ ಹೀಗೆ ವ್ಯಾಖ್ಯಾನಿಸಿದ್ದಾರೆ, "ದೇವತೆಯ ಕುರಿತು ತರ್ಕ ಅಥವಾ ಚರ್ಚೆ"[], ಆಂಗ್ಲದಲ್ಲಿ "ಥಿಯೋಲಜಿ"ಯನ್ನು "ದೈವೀ ಸಂಗತಿಗಳ ವಿಜ್ಞಾನ"ವೆಂದು ರಿಚರ್ಡ್ ಹೂಕರ್ ವ್ಯಾಖ್ಯಾನಿಸಿದ್ದಾರೆ.[] ಈ ಪದವನ್ನು ವಿಭಿನ್ನ ಬೋಧನೆಗಳಲ್ಲಿ ಅಥವಾ ಉಪನ್ಯಾಸದ ರೂಪದಲ್ಲಿ ಬಳಕೆಮಾಡುತ್ತಾರೆ.[] ದೇವತಾ ಶಾಸ್ತ್ರಜ್ಞರು ವಿವಿಧ ರೀತಿಯ ವಿಶ್ಲೇಷಣೆ ಮತ್ತು ವಾದಗಳನ್ನು (ದಾರ್ಶನಿಕ, ಜನಾಂಗ ವಿವರಣೆಯ, ಐತಿಹಾಸಿಕ, ಆಧ್ಯಾತ್ಮಿಕ ಮತ್ತು ಇತರ) ಯಾವುದೇ ಅಸಂಖ್ಯಾತ ಧಾರ್ಮಿಕ ವಿಷಯಗಳನ್ನು ಅರಿತುಕೊಳ್ಳಲು, ವಿವರಿಸಲು, ಪರೀಕ್ಷಿಸಲು, ವಿಮರ್ಶಾತ್ಮಕವಾಗಿ ಚರ್ಚಿಸಲು, ಸಮರ್ಥಿಸಲು ಅಥವಾ ಉತ್ತೇಜಿಸಲು ನೆರವಾಗುವುದಕ್ಕೆ ಬಳಸುತ್ತಾರೆ. ದೇವತಾಶಾಸ್ತ್ರಜ್ಞನಿಗೆ ನೆರವಾಗುವ ಭರವಸೆಯನ್ನು ದೇವತಾಶಾಸ್ತ್ರ ನೀಡಬೇಕು

  • ಅವನ ಅಥವಾ ಅವಳ ಸ್ವಂತ ಧಾರ್ಮಿಕ ಸಂಪ್ರದಾಯದ ಬಗ್ಗೆ ಹೆಚ್ಚು ಕರಾರುವಾಕ್ಕಾಗಿ ಅರಿತುಕೊಳ್ಳುವುದು.[]
  • ಹೆಚ್ಚು ಕರಾರುವಾಕ್ಕಾಗಿ ಇನ್ನೊಂದು ಧಾರ್ಮಿಕ ಸಂಪ್ರದಾಯದ ಬಗ್ಗೆ ಅರಿತುಕೊಳ್ಳುವುದು.[]
  • ಧಾರ್ಮಿಕ ಸಂಪ್ರದಾಯಗಳ ನಡುವೆ ಹೋಲಿಸಿ ನೋಡುವುದು[]
  • ಒಂದು ಧಾರ್ಮಿಕ ಸಂಪ್ರದಾಯವನ್ನು ಸಮರ್ಥಿಸುವುದು ಅಥವಾ ನ್ಯಾಯಯುತವೆಂದು ತೋರಿಸುವುದು
  • ನಿರ್ದಿಷ್ಟ ಸಂಪ್ರದಾಯವೊಂದರ ಸುಧಾರಣೆಗೆ ಅನುಕೂಲ ಕಲ್ಪಿಸುವುದು.[]
  • ಒಂದು ಧಾರ್ಮಿಕ ಸಂಪ್ರದಾಯದ ಪ್ರಸಾರಕ್ಕೆ ನೆರವಾಗುವುದು[] ಅಥವಾ
  • ಕೆಲವು ಸದ್ಯದ ಪರಿಸ್ಥಿತಿ ಅಥವಾ ಅಗತ್ಯವನ್ನು ಪರಿಹರಿಸಲು ಸಂಪ್ರದಾಯವೊಂದರ ಮಾರ್ಗೋಪಾಯವನ್ನು ಕಂಡುಕೊಳ್ಳುವುದು.[]
  • ಜಗತ್ತನ್ನು ವ್ಯಾಖ್ಯಾನಿಸಲು ಸಾಧ್ಯವಿರುವ ಮಾರ್ಗಗಳನ್ನು ಪರಿಶೋಧಿಸಲು ಸಂಪ್ರದಾಯವೊಂದರ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು.[೧೦] ಅಥವಾ
  • ಯಾವುದೇ ಸಂಪ್ರದಾಯದ ಉಲ್ಲೇಖವಿಲ್ಲದೆ ದೈವತ್ವದ ಸ್ವರೂಪವನ್ನು ಪರಿಶೋಧಿಸುವುದಕ್ಕೆ.

ಪದದ ಇತಿಹಾಸ

[ಬದಲಾಯಿಸಿ]

ಥಿಯೋಲಜಿ ಯನ್ನು ಗ್ರೀಕ್‍‌ನ ಥಿಯೋಲಜಿಯಾ (θεολογία) ದಿಂದ ಇಂಗ್ಲಿಷ್‌ಗೆ ಅನುವಾದಿಸಲಾಗಿದೆ. (ಥಿಯೋಸ್ (θεός) ಅರ್ಥ ದೇವರು ಮತ್ತು ಲೋಗೋಸ್ (λόγος) ಅರ್ಥ ಪದ, ಪ್ರವಚನ, ಅಥವಾ ತರ್ಕ, ಜೊತೆಗೆ ಅಮೂರ್ತ ನಾಮಪದಕ್ಕೆ ia ) ಎಂಬ ಕೊನೆಯ ಪ್ರತ್ಯಯದಿಂದ), ಇದು ಲ್ಯಾಟಿನ್‌ಗೆ ಥಿಯೋಲೋಜಿಯಾ ಎಂದು ಮತ್ತು ಫ್ರೆಂಚ್‌ಗೆ ಥಿಯೋಲೋಜಿ ಎಂದು ವರ್ಗವಾಗಿದೆ. ಇಂಗ್ಲಿಷ್ ಸಂವಾದಿ ಪದ "theology" (Theologie, Teologye) 1362 ರಲ್ಲಿ ಚಲಾವಣೆಗೆ ಬಂತು.[೧೧] ಇಂಗ್ಲಿಷ್‌ನಲ್ಲಿರುವ ಈ ಪದದ ತಾತ್ಪರ್ಯವು ಲ್ಯಾಟಿನ್ ಮತ್ತು ಗ್ರೀಕ್‌ನಲ್ಲಿಯ ಸಮಾನಾರ್ಥಕ ಪದವು ಹೊಂದಿರುವ ಆದ್ಯ ಕ್ರೈಸ್ತ ಲೇಖಕರ ಮತ್ತು ಮಧ್ಯಕಾಲೀನ ಕ್ರಿಶ್ಚಿಯನ್ನರ ಬಳಕೆಯ ತಾತ್ಪರ್ಯದ ಬಹುತೇಕ ಅಂಶವನ್ನು ಒಳಗೊಳ್ಳುತ್ತದೆ. ಆದರೂ ಈಗ ಇಂಗ್ಲಿಷ್ ಪದವು ಅದರ ಕ್ರಿಶ್ಚಿಯನ್ ಸಂದರ್ಭದ ಆಚೆಗೂ ಅರ್ಥವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

  • ಗ್ರೀಕ್ ಪದ ಥಿಯೋಲೋಜಿಯಾ (θεολογια) "ದೇವರ ಮೇಲೆ ಪ್ರವಚನ" ಎಂಬ ಅರ್ಥದಲ್ಲಿ ಕ್ರಿಸ್ತ ಪೂರ್ವ 4ನೆ ಶತಮಾನದಲ್ಲಿ ಪ್ಲೇಟೋ ದಿ ರಿಪಬ್ಲಿಕ್, ಕೃತಿಯಲ್ಲಿ ii, Ch. 18 ಬಳಸಿದ್ದನು.[೧೨] ಅರಿಸ್ಟಾಟಲ್‌‌ ಸೈದ್ಧಾಂತಿಕ ತತ್ವಶಾಸ್ತ್ರವನ್ನು ಮ್ಯಾಥೆಮೆಟಿಕೆ' , ಫಿಸಿಕೆ ಮತ್ತು ಥಿಯೋಲಾಜಿಕೆ ಎಂದು ವಿಭಜಿಸಿದ, ಕೊನೆಯದು ಸ್ಥೂಲವಾಗಿ ಮೆಟಾಫಿಸಿಕ್ಸ್ ಬಗ್ಗೆ ಮಾತ್ರ ಸಂಬಂಧಿಸಿತ್ತು. ಅರಿಸ್ಟಾಟಲ್‌‌ ಅದರಲ್ಲಿ ದೈವತ್ವದ ಸ್ವರೂಪದ ಕುರಿತ ಪ್ರವಚನವನ್ನೂ ಸೇರಿಸಿದ.[೧೩].
  • ಗ್ರೀಕ್ ಸ್ಟೋಯಿಕ್ ಮೂಲಗಳನ್ನು ಆಧರಿಸಿ ಲ್ಯಾಟಿನ್ ಲೇಖಕ ವರ್ರೋ ಇಂಥ ಮೂರು ರೀತಿಯ ಪ್ರವಚನಗಳನ್ನು ಪ್ರತ್ಯೇಕಿಸುತ್ತಾರೆ: ಪೌರಾಣಿಕ (ಗ್ರೀಕ್ ದೇವತೆಗಳ ಪುರಾಣಿಕ್ಕೆ ಸಂಬಂಧಿಸಿದಂತೆ)
ವೈಚಾರಿಕ (ದೇವರುಗಳು ಮತ್ತು ಸೌಂದರ್ಯಶಾಸ್ತ್ರದ ತತ್ವಶಾಸ್ತ್ರೀಯ ವಿಶ್ಲೇಷಣೆ ಮತ್ತು ನಾಗರಿಕ (ಸಾರ್ವಜನಿಕರ ಧಾರ್ಮಿಕ ಆಚರಣೆಯ ಧಾರ್ಮಿಕ ವಿಧಿ ಮತ್ತು ಕರ್ತವ್ಯಗಳಿಗೆ ಸಂಬಂಧಿಸಿ) .<ಸಾಂದರ್ಭಿಕ>ಅಗಸ್ಟೀನ್ ಉಲ್ಲೇಖಿಸಿದಂತೆ, ಸಿಟಿ ಆಫ್ ಗಾಡ್, ಬುಕ್ 6], ಅಧ್ಯಾಯ.5.</ಸಾಂದರ್ಭಿಕ>
  • ಥಿಯೋಲೋಜಿಯಾಕ್ಕೆ ನಿಕಟ ಸಂಬಂಧ ಹೊಂದಿದ ದೇವತಾಶಾಸ್ತ್ರಜ್ಞರು , ದಿವ್ಯಜ್ಞಾನದ ಗ್ರಂಥ ಅಪೋಕಲಿಪ್ಸಿಸ್ ಅಯನ್ನೊಯ್ ಟೊಯ್ ಥಿಯೋಲಜಿ "ದಿ ರಿವಿಲೇಶನ್ ಆಫ್ ಜಾನ್ ದಿ ಥಿಯೋಲೋಗೋಸ್ ." ರಚಿಸುವ ಪೂರ್ವದಲ್ಲಿ ಬೈಬಲ್ಲಿನ ಹಸ್ತಪ್ರತಿಯನ್ನು ಪ್ರವೇಶಿಸಿರುವಂತೆ ಕಂಡುಬರುತ್ತದೆ. ಹೀಗಿದ್ದರೂ ಪದವು "ದೇವತಾಶಾಸ್ತ್ರಜ್ಞ" ಜಾನ್‌ರನ್ನು ಆಧುನಿಕ ಇಂಗ್ಲಿಷಿನಲ್ಲಿರುವ ಅರ್ಥಕ್ಕೆ ಸಂವಾದಿಯಾಗಿ ಉಲ್ಲೇಖಿಸುವುದಿಲ್ಲ. ನಾಮದ ಸ್ವಲ್ಪ ಭಿನ್ನವಾದ ಅರ್ಥ ದೇವವಾಕ್ಕು , ಅರ್ಥ "ವೈಚಾರಿಕ ಪ್ರವಚನ" ಅಲ್ಲ, ಆದರೆ "ಪದ" ಅಥವಾ "ಸಂದೇಶ" - ದೇವರ ಮಾತುಗಳನ್ನು ಆಡುವವನು, ಲೋಗಿ ಟೊಯ್ ಥಿಯೋಯಿ .[೧೪]
  • ಟೆರ್ಟುಲಿಯನ್ ಮತ್ತು ಅಗಸ್ಟೀನ್ ಅವರಂಥ ಕೆಲವು ಲ್ಯಾಟಿನ್ ಕ್ರಿಶ್ಚಿಯನ್ ಲೇಖಕರು ವರ್ರೋನ ಮೂರು ವಿಧದ ಬಳಕೆಯನ್ನು ಅನುಸರಿಸಿದರು. <ಸಾಂದರ್ಭಿಕ>ನೋಡಿ ಆಗಸ್ಟೀನ್, ಸಿಟಿ ಆಫ್ ಗಾಡ್, ಬುಕ್ 6], ಅಧ್ಯಾಯ.5. ಮತ್ತು ಟೆರ್ಟುಲಿಯನ್, Ad Nationes, ಬುಕ್ 2, ಅಧ್ಯಾಯ.1.</ಸಾಂದರ್ಭಿಕ>ಹೀಗಿದ್ದರೂ ಅಗಸ್ಟೀನ್ ಈ ಪದವನ್ನು ಹೆಚ್ಚು ಸರಳವಾಗಿ 'ದೇವತೆ ಕುರಿತ ತರ್ಕ ಅಥವಾ ಚರ್ಚೆ' ಎಂಬ ಅರ್ಥದಲ್ಲಿಯೂ ಬಳಸಿದನು.<ಸಾಂದರ್ಭಿಕ>ಸಿಟಿ ಆಫ್ ಗಾಡ್ ಬುಕ್ VIII. i. [೭] "de divinitate rationem sive sermonem"</ಸಾಂದರ್ಭಿಕ>
  • ಆದ್ಯ ಕ್ರೈಸ್ತ ಗ್ರಂಥಕಾರರ ಗ್ರೀಕ್ ಕ್ರಿಶ್ಚಿಯನ್ ಮೂಲಗಳು, ಥಿಯೋಲೋಜಿಯಾ ಧರ್ಮನಿಷ್ಠ ಮತ್ತು ಸ್ಫೂರ್ತಿಯಿಂದ ಪಡೆದ ಜ್ಞಾನ ಮತ್ತು ದೇವರ ಅಸ್ತಿತ್ವದ ಸ್ವರೂಪ ಕುರಿತ ಬೋಧನೆಗಳು ಎಂಬ ಅರ್ಥವನ್ನೂ ಹೌದೋ ಅಲ್ಲವೋ ಎನ್ನುವಂತೆ ನೀಡಬಹುದು.[೧೫]
  • ಕೆಲವು ಮಧ್ಯಕಾಲೀನ ಗ್ರೀಕ್ ಮತ್ತು ಲ್ಯಾಟಿನ್ ಮೂಲಗಳು, ಥಿಯೋಲೋಜಿಯಾ ("ದೇವರ ರೀತಿಗಳ ಖಾತೆ ಅಥವಾ ದಾಖಲೆ ಎನ್ನುವ ಅರ್ಥದಲ್ಲಿ") ಸರಳವಾಗಿ ಬೈಬಲನ್ನು ಹೇಳುತ್ತದೆ ಎನ್ನುತ್ತವೆ.[೧೬]
  • 6ನೆ ಶತಮಾನದ ಲ್ಯಾಟಿನ್ ಲೇಖಕ ಬೋಯೆಥಿಯಸ್ ತನ್ನ ಬರೆಹದಲ್ಲಿ, ಶೈಕ್ಷಣಿಕ ಅಧ್ಯಯನದ ವಿಷಯವಾಗಿ ಥಿಯೋಲೋಜಿಯಾ ತತ್ವಶಾಸ್ತ್ರದ ಒಂದು ಉಪವಿಭಾಗ, ಅದು ಚಲನರಹಿತ, ಅಮೂರ್ತ ವಾಸ್ತವದ ಬಗ್ಗೆ ಹೇಳುತ್ತದೆ ಎಂದಿದ್ದಾರೆ. (ಅದು ರೋಗ ಚಿಕಿತ್ಸೆ ಗೆ ವಿರುದ್ಧ, ಏಕೆಂದರೆ ಅದು ಶಾರೀರಕ, ಚಲಿಸುವ ವಾಸ್ತವದ ಬಗ್ಗೆ ವ್ಯವಹರಿಸುತ್ತದೆ.)[೧೭] ಬೋಯೆಥೀಯನ ವ್ಯಾಖ್ಯೆಯು ಮಧ್ಯಕಾಲೀನ ಲ್ಯಾಟಿನ್ ಬಳಕೆಯನ್ನು ಪ್ರಭಾವಿಸಿದೆ.[೧೮]
  • ಶಾಲೆಗಳಿಗೆ ಸಂಬಂಧಿಸಿದ ಲ್ಯಾಟಿನ್ ಮೂಲಗಳು, ಈ ಪದವು ಕ್ರಿಶ್ಚಿಯನ್ ಧರ್ಮದ ಸಿದ್ಧಾಂತದ ವೈಚಾರಿಕ ಅಧ್ಯಯನವನ್ನು ನಿರ್ದೇಶಿಸುತ್ತದೆ ಎಂದು ಹೇಳುತ್ತದೆ. ಅಥವಾ (ಹೆಚ್ಚು ಕರಾರುವಾಕ್ಕಾಗಿ) ಬೈಬಲ್ಲಿನ ಭಾಷೆ ಮತ್ತು ಹೇಳಿಕೆಗಳ ಸುಸಂಬದ್ಧತೆ ಮತ್ತು ಪರಿಣಾಮಗಳು ಮತ್ತು ದೇವತಾಶಾಸ್ತ್ರಕ್ಕೆ ಸಂಬಂಧಿಸಿದ ಸಂಪ್ರದಾಯಗಳ ಶೋಧದ ಶೈಕ್ಷಣಿಕ ಶಿಸ್ತು. (ಎರಡನೆಯದು ಆಗಾಗ್ಗೆ ಪೀಟರ್ ಲೋಂಬಾರ್ಡ್‌ನ, ಚರ್ಚ್ ಫಾದರ್‌ಗಳ ಉದ್ಧರಣೆಗಳನ್ನು ಒಳಗೊಂಡ ಕೃತಿ ಸೆಂಟೆನ್ಸಸ್‌ನಲ್ಲಿ ಪ್ರತಿನಿಧಿಸಲ್ಪಟ್ಟಿದೆ) [೧೯]
  • ಕೊನೆಯ ಅರ್ಥದಲ್ಲಿ, ದೇವತಾಶಾಸ್ತ್ರ ಕ್ರಿಶ್ಚಿಯನ್ ಬೋಧನೆಗಳ ವೈಚಾರಿಕ ಅಧ್ಯಯನವನ್ನು ಒಳಗೊಂಡಿರುವ ಒಂದು ಶೈಕ್ಷಣಿಕ ಶಿಸ್ತು, ಈ ಪದವು ಹದಿನಾಲ್ಕನೆ ಶತಮಾನದಲ್ಲಿ ಇಂಗ್ಲಿಷಿಗೆ ಬಂತು.[೨೦] ದೇವರ ಅಮೂರ್ತ ಸ್ವರೂಪದ ವೈಚಾರಿಕ ಅಧ್ಯಯನ- ಒಂದು ಪ್ರವಚನ, -ಈಗ ಕೆಲವೊಮ್ಮೆ ದೇವತಾಶಾಸ್ತ್ರ ಯಥಾರ್ಥ ಎಂದು ಕರೆಯುವುದು- ಎಂಬ ಸೀಮಿತ ಅರ್ಥದಲ್ಲಿ ಬೋಯೆಥಿಯಸ್ ಮತ್ತು ಗ್ರೀಕ್ ಆದ್ಯ ಕ್ರೈಸ್ತಧರ್ಮದ ಲೇಖಕರು ಇದನ್ನು ಬಳಸಿರುವಂತೆ ಬಳಸಲೂ ಬಹುದು.[೨೧]
  • 17ನೆ ಶತಮಾನದ ಈಚೆಗೆ, ಧಾರ್ಮಿಕ ವಿಚಾರಗಳ ಮತ್ತು ಬೋಧನೆಗಳ ಅಧ್ಯಯನ, ಅದು ವಿಶೇಷವಾಗಿ ಕ್ರಿಶ್ಚಿಯನ್ನೇ ಆಗಿರಬೇಕಿಲ್ಲ, ಎಂಬ ಅರ್ಥದಲ್ಲಿ 'ದೇವತಾಶಾಸ್ತ್ರ' ಪದದ ಬಳಕೆ ಸಾಧ್ಯವಾಯಿತು. (ಉದಾ., ನೈಸರ್ಗಿಕ ದೇವತಾಶಾಸ್ತ್ರ' ಪದದಲ್ಲಿ, ದೇವತಾಶಾಸ್ತ್ರವು ವಿಶೇಷವಾಗಿ ಕ್ರಿಶ್ಚಿಯನ್ ದೈವಜ್ಞಾನದಿಂದ ಸ್ವತಂತ್ರವಾದ್ದು, ವಾಸ್ತವಾಂಶಗಳ ಮೇಲೆ ತರ್ಕವನ್ನು ಆಧರಿಸಿದ್ದು,[೨೨]), ಅಥವಾ ಅವು ಬೇರೊಂದು ಧರ್ಮಕ್ಕೆ ವಿಶಿಷ್ಟವಾದದ್ದು. (ಕೆಳಗೆ ನೋಡಿ).
  • "ದೇವತಾಶಾಸ್ತ್ರ"ವನ್ನು ಈಗ ಒಂದು "ಸೈದ್ಧಾಂತಿಕ ತತ್ವಗಳ ವ್ಯವಸ್ಥೆ, ಒಂದು (ಅಪ್ರಾಯೋಗಿಕ ಅಥವಾ ನಿಷ್ಠುರ) ಸಿದ್ಧಾಂತ" ಎಂಬ ಅರ್ಥದಲ್ಲಿ ಬಳಸಬಹುದು[೨೩]

ಕ್ರೈಸ್ತ ಧರ್ಮವನ್ನು ಬಿಟ್ಟು ಉಳಿದ ಧರ್ಮಗಳು

[ಬದಲಾಯಿಸಿ]

ಶೈಕ್ಷಣಿಕ ದೇವತಾಶಾಸ್ತ್ರೀಯ ವಲಯದಲ್ಲಿ ದೇವತಾಶಾಸ್ತ್ರವು ಕ್ರಿಶ್ಚಿಯನ್ ಧರ್ಮಕ್ಕೆ ಮಾತ್ರ ವಿಶಿಷ್ಟವಾದ ಚಟುವಟಿಕೆಯೆ? "ದೇವತಾಶಾಸ್ತ್ರ" ಪದವನ್ನು ಕ್ರಿಶ್ಚಿಯನ್ ದೇವತಾಶಾಸ್ತ್ರಕ್ಕೆ ಮತ್ತು ಇತರ ಧಾರ್ಮಿಕ ಸಂಪ್ರದಾಯಗಳಲ್ಲಿಯ ಸದೃಶ ಪ್ರವಚನಗಳಿಗೆ ಮೀಸಲಿಡಬೇಕೆ ಎಂಬ ಚರ್ಚೆ ನಡೆದಿದೆ.[೨೪] ದೇವತೆಯನ್ನು (ಒಂದು ದೈವ ವನ್ನು) ಪೂಜಿಸುವ ಧರ್ಮಗಳ ಅಧ್ಯಯನಕ್ಕೆ ಈ ಪದ ಸೂಕ್ತ. ಮತ್ತು ಈ ದೇವತೆಯ ಬಗ್ಗೆ ಮಾತನಾಡುವ ಹಾಗೂ ತರ್ಕಿಸುವ ಸಾಮರ್ಥ್ಯದ ಬಗ್ಗೆ ಇದು ಮುಂದಾಗಿಯೇ ಗ್ರಹಿಸಿದ ನಂಬಿಕೆಯನ್ನು ಒಳಗೊಂಡಿರುತ್ತದೆ. (ವರ್ಣನೆ )— ಮತ್ತು ಈ ಕಾರಣಕ್ಕಾಗಿ ಧಾರ್ಮಿಕ ಸಂದರ್ಭಗಳಲ್ಲಿ ಅಷ್ಟಾಗಿ ಸೂಕ್ತವಾಗದ ಅವು ವಿಭಿನ್ನವಾಗಿ ಸಂಘಟಿಸಲ್ಪಟ್ಟಿರುತ್ತವೆ (ಒಂದು ದೇವತೆ ಇಲ್ಲದ ಧರ್ಮಗಳು ಅಥವಾ ಇಂಥ ವಸ್ತುಗಳನ್ನು ಅಲ್ಲಗಳೆಯುವ ಧರ್ಮಗಳನ್ನು ತಾರ್ಕಿಕವಾಗಿ ಅಧ್ಯಯನ ಮಾಡಬಹುದು.) ಎಂದು ಕೆಲವರು ನೋಡಿದ್ದಾರೆ.

("ಧಾರ್ಮಿಕ ಗ್ರಂಥಗಳ ಅಧ್ಯಯನ" ಎಂಬುದನ್ನು ಒಂದು 

ಪರ್ಯಾಯ, ಹೆಚ್ಚು ಜಾತಿವಿಶಿಷ್ಟ ಪದವೆಂದು ಪ್ರಸ್ತಾವಿಸಲಾಗಿದೆ.[೨೫]

ಸದೃಶ ಪ್ರವಚನಗಳು

[ಬದಲಾಯಿಸಿ]
  • ಬೌದ್ಧ ಧರ್ಮದಲ್ಲಿಯ ಕೆಲವು ಶೈಕ್ಷಣಿಕ ಶೋಧಗಳು ಜಗತ್ತಿನ ಬಗ್ಗೆ ಬೌದ್ಧರ ತಿಳಿವಳಿಕೆಯನ್ನು ವೈಚಾರಿಕವಾಗಿ ಶೋಧಿಸುವುದಕ್ಕೆ ಸಮರ್ಪಿತವಾಗಿವೆ. ಬೌದ್ಧರ ದೇವತಾಶಾಸ್ತ್ರ ಎನ್ನುವುದಕ್ಕೆ ಬದಲಾಗಿ ಬೌದ್ಧರ ತತ್ವಶಾಸ್ತ್ರ ಎಂದು ಕರೆಯುವುದಕ್ಕೇ ಅವರು ಆದ್ಯತೆ ನೀಡುತ್ತಾರೆ. ಬೌದ್ಧಧರ್ಮದಲ್ಲಿಯೂ ಇದೇ ರೀತಿ ದೈವತ್ವ ರ ಪರಿಕಲ್ಪನೆ ಇಲ್ಲ. "ದೇವತಾಶಾಸ್ತ್ರ" ಎಂದು ಬಳಸುವುದು ಸೂಕ್ತವಾಗಿ ಇದೆ , ಅದೊಂದೇ ಹಾಗೆ ಮಾಡಬಲ್ಲುದು ಎಂದು ವಾದಿಸಿದ ಜೋಸ್ ಇಗ್ನಾಸಿಯೋ ಕಬೆಜೋನ್, ಅದು ಏಕೆಂದರೆ "ನಾನು ದೇವತಾಶಾಸ್ತ್ರವನ್ನು ದೇವರ ಮೇಲೆ ಪ್ರವಚನ ಮಾಡುವುದಕ್ಕೆ ಮಾತ್ರವೇ ಸೀಮಿತಗೊಳಿಸಿಕೊಂಡಿಲ್ಲ... ಎಂದು ಹೇಳುತ್ತಾರೆ. ನಾನು 'ದೇವತಾಶಾಸ್ತ್ರ'ವನ್ನು ಅದರ ವ್ಯುತ್ಪತ್ತಿ ವಿಷಯಕ ಅರ್ಥಕ್ಕೆ ಸೀಮಿತಗೊಳಿಸಿ ಸ್ವೀಕರಿಸಿಲ್ಲ. ಈ ಎರಡನೆಯ ಅರ್ಥದಲ್ಲಿ ಬೌದ್ಧಧರ್ಮವು ದೇವರ ಕಲ್ಪನೆಯನ್ನು ತಿರಸ್ಕರಿಸುವ ಮೂಲಕ ಒಂದು ದೇವತಾಶಾಸ್ತ್ರೀಯವೂ ಹೌದು,"[೨೬]
  • ಹಿಂದೂ ತತ್ವಶಾಸ್ತ್ರದೊಳಗೆ, ಅತ್ಯಂತ ಘನವಾದ ಮತ್ತು ಪ್ರಾಚೀನವಾದ ತತ್ವಶಾಸ್ತ್ರೀಯ ಊಹೆಗಳು ವಿಶ್ವದ ಸ್ವರೂಪದ ಕುರಿತು, ದೇವರ ಕುರಿತು ("ಬ್ರಹ್ಮನ್" ಎಂದು ಹಿಂದೂ ವಿಚಾರಧಾರೆಯ ಕೆಲವು ಪಂಥಗಳಲ್ಲಿ ವರ್ಣಿಸಿದ್ದಾರೆ.) ಮತ್ತು ಆತ್ಮನ್ (ಆತ್ಮ)ದ ಕುರಿತು ಇವೆ,. ಹಿಂದೂ ತತ್ವಶಾಸ್ತ್ರದ ವಿವಿಧ ಶಾಖೆಗಳ ಸಂಸ್ಕೃತ ಪದ ದರ್ಶನ (ಅರ್ಥ "ಅವಲೋಕನ" ಅಥವಾ "ದೃಷ್ಟಿಕೋನ") ವೈಷ್ಣವ ದೇವತಾಶಾಸ್ತ್ರ ಶತಮಾನಗಳಿಂದ ಭಾರತದಲ್ಲಿ ಅನೇಕ ಭಕ್ತರ, ತತ್ವಶಾಸ್ತ್ರಜ್ಞರ ಮತ್ತು ಪಂಡಿತರ ಅಧ್ಯಯನದ ವಸ್ತುವಾಗಿದೆ. ಮತ್ತು ಇತ್ತೀಚಿನ ದಶಕಗಳಲ್ಲಿಯೂ ಯುರೋಪಿನಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ಇದನ್ನು ತೆಗೆದುಕೊಂಡಿವೆ, ಅವುಗಳಲ್ಲಿ ಆಕ್ಸ್‌ಫರ್ಡ್ ಸೆಂಟರ್ ಫಾರ್ ಹಿಂದೂ ಸ್ಟಡೀಸ್ ಮತ್ತು ಭಕ್ತಿ ವೇಂದಾಂತ ಕಾಲೇಜ್ ಸೇರಿವೆ.[೨೭] ಇವನ್ನೂ ನೋಡಿ: ಕೃಷ್ಣೋಲಜಿ
  • ಮುಸ್ಲಿಂ ದೇವತಾಶಾಸ್ತ್ರೀಯ ಚರ್ಚೆಯು ಕ್ರಿಶ್ಚಿಯನ್ ದೇವತಾಶಾಸ್ತ್ರೀಯ ಚರ್ಚೆಗೆ ಸಮಾನಂತರವಾಗಿದೆ. ಇದನ್ನು "ಕಲಂ" ಎಂದು ಹೆಸರಿಸಿದ್ದಾರೆ; ಕ್ರಿಶ್ಚಿಯನ್ ದೇವತಾಶಾಸ್ತ್ರೀಯ ಚರ್ಚೆಯ ರೀತಿಯಲ್ಲೇ ಮುಸ್ಲಿಮರದ್ದೂ ಇದ್ದು, ಅದು ಇನ್ನೂ ಹೆಚ್ಚು ಸೂಕ್ತವಾಗಿ ಮುಸ್ಲಿಂ ಕಾನೂನು, ಅಥವಾ "ಫಿಖ್"ನ ಶೋಧನೆ ಮತ್ತು ವಿವರಣೆಯನ್ನು ಮಾಡುತ್ತವೆ. "ಕಲಂ ... ಮುಸ್ಲಿಂ ವಿಚಾರಧಾರೆಯಲ್ಲಿ ದೇವತಾಶಾಸ್ತ್ರವು ಕ್ರೈಸ್ತಧರ್ಮದಲ್ಲಿ ಪಡೆದಿರುವಂತೆ ಮಹತ್ವದ ಸ್ಥಾನವನ್ನು ಪಡೆದಿಲ್ಲ, 'ದೇವತಾಶಾಸ್ತ್ರಕ್ಕೆ' ಕ್ರಿಶ್ಚಿಯನ್ ಆಲೋಚನೆಯಂತೆ ಸಮಾನವಾದುದನ್ನು ಕಂಡುಕೊಳ್ಳಲು ಅನೇಕ ಬೋಧನ ಶಾಖೆಗಳ ಅವಲಂಬನ ಅಗತ್ಯವಾಗುತ್ತದೆ. ಮತ್ತು ಕಲಂ ಹಾಗೆಯೇ ಉಸುಲ್ ಅಲ್-ಫಿಖ್ ಎನ್ನುವುದಕ್ಕೂ" (ಎಲ್. ಗರ್ಡೆಟ್)[೨೮]
  • ಯಹೂದ್ಯಧರ್ಮದಲ್ಲಿ, ರಾಜಕೀಯ ಅಧಿಕಾರದ ಐತಿಹಾಸಿಕ ಗೈರುಹಾಜರಿಯಲ್ಲಿ ಹೆಚ್ಚಿನ ದೇವತಾಶಾಸ್ತ್ರೀಯ ಪ್ರತಿಫಲನವೆಲ್ಲವೂ ಯಹೂದಿ ಸಮುದಾಯದ ಸಂದರ್ಭದಲ್ಲಿ ಮತ್ತು ಸಿನಾಗೋಗೆ (ಯಹೂದ್ಯರ ಆರಾಧನಾ ಮಂದಿರ)ದಲ್ಲಿ ಸಂಭವಿಸಿದವೇ ಹೊರತು ಪರಿಣತ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಲ್ಲ. ಅದೇನೇ ಇದ್ದರೂ, ಯಹೂದಿಗಳ ದೇವತಾಶಾಸ್ತ್ರವು ಐತಿಹಾಸಿಕವಾಗಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ದೇವತಾಶಾಸ್ತ್ರಕ್ಕೆ ಅತ್ಯಂತ ಕ್ರಿಯಾಶೀಲವಾದ್ದು ಮತ್ತು ಅತ್ಯಂತ ಮಹತ್ವದ್ದು. ಹೀಗಿದ್ದರೂ, ಕ್ರಿಶ್ಚಿಯನ್ನರ ದೇವತಾಶಾಸ್ತ್ರೀಯ ಚರ್ಚೆಯು ಯಹೂದಿ ಸಾದೃಶ್ಯವನ್ನು ಹೊಂದಿರುವುದನ್ನು ಹೆಚ್ಚು ಸೂಕ್ತವಾಗಿ ರಾಬೈಗಳ ಲಿಖಿತ ಗ್ರಂಥಗಳ ಯಹೂದಿ ಕಾನೂನು ಮತ್ತು ಯಹೂದಿ ಬೈಬಲಿನ ವ್ಯಾಖ್ಯಾನಗಳ ಚರ್ಚೆ ಎಂದು ಕೆಲವೊಮ್ಮೆ ಹೇಳಿಕೊಳ್ಳಲಾಗುತ್ತಿದೆ.[೨೯]

ದೇವತಾ ಶಾಸ್ತ್ರ ಒಂದು ಶೈಕ್ಷಣಿಕ ಶಿಸ್ತಾಗಿ

[ಬದಲಾಯಿಸಿ]

ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿ ದೇವತಾಶಾಸ್ತ್ರವನ್ನು ಅಧ್ಯಯನ ಮಾಡುವ ಇತಿಹಾಸ ಆ ಸಂಸ್ಥೆಗಳ ಇತಿಹಾಸದಷ್ಟೇ ಪುರಾತನವಾದದ್ದು. ಉದಾಹರಣೆಗೆ, ತಕ್ಷಶಿಲಾ ಪ್ರಾಚೀನಕಾಲದ ವೇದ ಅಧ್ಯಯನ ಕೇಂದ್ರವಾಗಿತ್ತು. ಕ್ರಿ.ಪೂ.6ನೆ ಶತಮಾನ ಅಥವಾ ಅದಕ್ಕೂ ಮೊದಲೇ ಇದು ಇದ್ದಿರುವ ಸಾಧ್ಯತೆ ಇದೆ;[೩೦] ಪ್ಲಟೋನಿಕ್ ಅಕಾಡೆಮಿ ಯನ್ನು ಅಥೆನ್ಸ್‌ನಲ್ಲಿ ಕ್ರಿ.ಪೂ.4ನೆ ಶತಮಾನದಲ್ಲಿ ಸ್ಥಾಪಿಸಲಾಯಿತು. ಇಲ್ಲೆಲ್ಲ ದೇವತಾಶಾಸ್ತ್ರ ವಿಚಾರವನ್ನು ಒಂದು ವಿಷಯವನ್ನಾಗಿ ಮಾಡಲಾಗಿತ್ತು;[೩೧] ಚೀನದಲ್ಲಿ ತೈಕ್ಷ್ಯುನಲ್ಲಿ ಕನ್ಫುಶಿಯಸ್‌ನ ಬೋಧನೆಗಳನ್ನು ಕ್ರಿ.ಪೂ. 2ನೆ ಶತಮಾನದಲ್ಲಿಯೇ ಬೋಧಿಸಲಾಗುತ್ತಿತ್ತು.;[೩೨] ನಿಸಿಬಿಸ್ ಸ್ಕೂಲ್‌ ಕ್ರಿ.ಶ. 4ನೆ ಶತಮಾನದಲ್ಲಿಯೇ ಕ್ರಿಶ್ಚಿಯನ್ ಕಲಿಕೆಯ ಕೇಂದ್ರವಾಗಿತ್ತು;[೩೩] ಭಾರತದಲ್ಲಿಯ ನಳಂದಕನಿಷ್ಠ ಕ್ರಿ.ಶ. 5 ಅಥವಾ 6ನೆ ಶತಮಾನದಲ್ಲಿ ಬೌದ್ಧ ಧರ್ಮದ ಉನ್ನತ ಕಲಿಕೆಯ ಕೇಂದ್ರವಾಗಿತ್ತು;[೩೪] ಮತ್ತು ಮೊರಕ್ಕೊದ ಅಲ್-ಕರೌನೆ ವಿಶ್ವವಿದ್ಯಾನಿಲಯ ಹತ್ತನೆ ಶತಮಾನದಿಂದ ಇಸ್ಲಾಮಿಕ್ ಜ್ಞಾನದ ಕಲಿಕೆಯ ಕೇಂದ್ರವಾಗಿತ್ತು.,[೩೫] ಕೈರೋದಲ್ಲಿಯ ಅಲ್-ಅಝರ್ ವಿಶ್ವವಿದ್ಯಾಲಯ ಕೂಡ.[೩೬]

ಆಧುನಿಕ ವಿಶ್ವವಿದ್ಯಾನಿಲಯಗಳು ಒಳಗೊಂಡಿರುವುದು ಸನ್ಯಾಸಿಗಳಿರುವ ಸಂಸ್ಥೆಗಳು ಮತ್ತು (ವಿಶೇಷವಾಗಿ) ಕೊನೆಯ ಮಧ್ಯಕಾಲೀನ ಪಶ್ಚಿಮ ಯುರೋಪಿನ ಕೆಥಡ್ರಲ್ ಸ್ಕೂಲ್್ಗಳು. (ನೋಡಿ, ಉದಾಹರಣೆಗೆ ವೊಲೋಗ್ನಾ ವಿಶ್ವವಿದ್ಯಾನಿಲಯ, ಪ್ಯಾರಿಸ್ ವಿಶ್ವವಿದ್ಯಾನಿಲಯ ಮತ್ತು ಆಕ್ಸ್್ಫರ್ಡ್ ವಿಶ್ವವಿದ್ಯಾನಿಲಯ).[೩೭] ಆರಂಭದಿಂದಲೂ, ಈ ಸಂಸ್ಥೆಗಳಲ್ಲಿ ಕ್ರಿಶ್ಚಿಯನ್ ದೇವತಾಶಾಸ್ತ್ರದ ಕಲಿಕೆಯು ಕೇಂದ್ರ ವಸ್ತು ಅಂಗಭೂತವಾಗಿತ್ತು. ಚರ್ಚುಗಳ ಅಥವಾ ಕೆನೋನ್ ಲಾ) ಅಧ್ಯಯನ ಅದಾಗಿತ್ತು: ವಿಶ್ವವಿದ್ಯಾನಿಲಯಗಳು ಚರ್ಚಿನ ಅಧಿಕಾರಿಗಳನ್ನು ತರಬೇತುಗೊಳಿಸುವದರಲ್ಲಿ ಮಹತ್ವದ ಪಾತ್ರವನ್ನ ವಹಿಸಿದವು. ತನ್ನ ಬೋಧನೆಗಳ ಬಗ್ಗೆ ಸ್ಪಷ್ಟೀಕರಣ ಮತ್ತು ಸಮರ್ಥನೆಯನ್ನು ನೀಡುವುದಕ್ಕೆ ಚರ್ಚುಗಳಿಗೆ ನೆರವಾದವು. ಮತ್ತು ಜಾತ್ಯತೀತ ಆಡಳಿತಗಾರರ ವಿರುದ್ಧ ಚರ್ಚುಗಳ ಕಾನೂನುಬದ್ಧ ಹಕ್ಕುಗಳನ್ನು ಬೆಂಬಲಿಸಿದವು.[೩೮] ಇಂಥ ವಿಶ್ವವಿದ್ಯಾನಿಲಯಗಳಲ್ಲಿ, ದೇವತಾಶಾಸ್ತ್ರದ ಅಧ್ಯಯನವು ಪ್ರಾರಂಭದಲ್ಲಿ ನಿಷ್ಠೆಯ ಬದುಕು ಮತ್ತು ಚರ್ಚುಗಳ ಜೊತೆ ನಿಕಟ ಸಂಬಂಧವನ್ನು ಹೊಂದಿತ್ತು: ಬೋಧನೆ, ಪ್ರಾರ್ಥನೆ ಮತ್ತು ಸಮೂಹ ಉತ್ಸವಗಳ ಆಚರಣೆಗಳ ಬಗ್ಗೆ ಅವು ಬೋಧಿಸಿದವು, ಬೋಧಿಸುತ್ತ ಹೋದವು.[೩೯]

ಮಧ್ಯಯುಗೀನ ಕೊನೆಯ ಹಂತದಲ್ಲಿ, ದೇವತಾಶಾಸ್ತ್ರವು ವಿಶ್ವವಿದ್ಯಾನಿಲಯಗಳಲ್ಲಿ ಅನಿವಾರ್ಯದ ವಿಷಯವಾಗಿತ್ತು, "ವಿಜ್ಞಾನಗಳ ರಾಣಿ" ಎಂದು ಅದನ್ನು ಕರೆಯಲಾಗುತ್ತಿತ್ತು ಮತ್ತು ಯುವಕರು ಕಲಿಯಬಯಸುತ್ತಿದ್ದ ತ್ರಿಶಾಸ್ತ್ರ ಮತ್ತು ಚತುರ್‌ಶಾಸ್ತ್ರಗಳಿಗೆ ತಲೆಗಲ್ಲಿನಂತೆ ಅದು ಕೆಲಸಮಾಡುತ್ತಿತ್ತು. ಇದರರ್ಥ ಉಳಿದ ವಿಷಯಗಳು (ತತ್ವಶಾಸ್ತ್ರವೂ ಒಳಗೊಂಡಂತೆ) ಆರಂಭದಲ್ಲಿ ದೇವತಾಶಾಸ್ತ್ರದ ವಿಚಾರಗಳಿಗೆ ನರವಾಗುವಂತೆ ಇದ್ದವು.[೪೦]

ವಿಶ್ವವಿದ್ಯಾನಿಲಯಗಳಲ್ಲಿ ದೇವತಾಶಾಸ್ತ್ರಕ್ಕೆ ಇದ್ದ ವಿಶೇಷ ಸ್ಥಾನವನ್ನು ಯುರೋಪಿನ ಜ್ಞಾನೋದಯದ ಸಂದರ್ಭದಲ್ಲಿ ವಿಶೇಷವಾಗಿ ಜರ್ಮನಿಯಲ್ಲಿ ಸವಾಲನ್ನು ಎದುರಿಸಬೇಕಾಯಿತು.[೪೧] ಇತರ ವಿಷಯಗಳು ಸ್ವಾತಂತ್ರ್ಯ ಮತ್ತು ಪ್ರತಿಷ್ಠೆಯನ್ನು ಪಡೆದವು. ಮತ್ತು ಒಂದು ಬೋಧನ ಶಾಖೆಯ ತರ್ಕದ ಸ್ವತಂತ್ರ ಅಧ್ಯಯನಕ್ಕೆ ಮೀಸಲಿರಬೇಕಾದ ಸಂಸ್ಥೆಗಳೆಂಬ ನಂಬಿಕೆಯು ಬೆಳೆಯುತ್ತಿದ್ದಾಗ ನಿರ್ದಿಷ್ಟ ಧಾರ್ಮಿಕ ಸಂಪ್ರದಾಯಗಳ ಪ್ರಭುತ್ವಕ್ಕೆ ಬದ್ಧತೆಯನ್ನು ತೋರಿಸುವುದು ಪ್ರಶ್ನೆಗಳನ್ನು ಹುಟ್ಟುಹಾಕಿತು.[೪೨]

ಹತ್ತೊಂಬತ್ತನೆ ಶತಮಾನದ ಆರಂಭದ ವರೆಗೂ ದೇವತಾಶಾಸ್ತ್ರವನ್ನು ಒಂದು ಅಧ್ಯಯನ ವಿಭಾಗವಾಗಿ ಉಳಿಸಿಕೊಳ್ಳುವುದಕ್ಕೆ ವಿವಿಧ ರೀತಿಯ ಪ್ರಯತ್ನಗಳು ಪಶ್ಚಿಮದಲ್ಲಿ ಉದ್ಭವವಾದವು. ಹೆಚ್ಚಿನ ಚರ್ಚೆಗಳು ದೇವತಾಶಾಸ್ತ್ರವನ್ನು ವಿಶ್ವವಿದ್ಯಾನಿಲಯದಂಥ ಸ್ಥಳಗಳಲ್ಲಿ ಬೋಧಿಸುವ ಸಂಬಂಧದಲ್ಲಿದ್ದವು ಅಥವಾ ಸಾಮಾನ್ಯ ಉನ್ನತ ಶಿಕ್ಷಣದ ಅಭ್ಯಾಸಕ್ರಮದ ಕೇಂದ್ರಗಳಲ್ಲಿ ದೇವತಾಶಾಸ್ತ್ರದ ಪದ್ಧತಿಗಳು ಸುಸಂಬದ್ಧವಾಗಿ ಸೈದ್ಧಾಂತಿಕವಾಗಿರುವವೆ (ವಿಶಾಲಾರ್ಥದಲ್ಲಿ ಹೇಳುವುದೆಂದರೆ) ವೈಜ್ಞಾನಿಕವಾಗಿರುವವೆ ಅಥವಾ ಇನ್ನೊಂದೆಡೆ, ದೇವತಾಶಾಸ್ತ್ರಕ್ಕೆ ಅದರ ವೃತ್ತಿನಿರತರಿಂದ ನಿಷ್ಠೆಯ ಪೂರ್ವಬದ್ಧತೆಯ ಅವಶ್ಯಕತೆ ಇದೆಯೆ ಮತ್ತು ಇಂಥ ಬದ್ಧತೆಯು ಶೈಕ್ಷಣಿಕ ಸ್ವಾತಂತ್ರ್ಯದ ಜೊತೆ ಸಂಘರ್ಷಕ್ಕೆ ಕಾರಣವಾಗುವುದೆ ಎಂಬ ಕುರಿತು ಚರ್ಚೆಗಳು ನಡೆದವು.[೪೩]

ದೇವತಾ ಶಾಸ್ತ್ರ ಮತ್ತು ಪಾದ್ರಿಯ ತರಬೇತಿ

[ಬದಲಾಯಿಸಿ]

ಕೆಲವು ಸಂದರ್ಭಗಳಲ್ಲಿ ದೇವತಾಶಾಸ್ತ್ರವು, ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಪ್ರಾಥಮಿಕವಾಗಿ ಕ್ರಿಶ್ಚಿಯನ್ ಪಾದ್ರಿಗಳಿಗೆ ವೃತ್ತಿ ತರಬೇತಿಯನ್ನು ನೀಡುವ ರೂಪದಲ್ಲಿ ಬೋಧನೆಯಾಗುತ್ತಿತ್ತು.

ಫ್ರೆಡರಿಕ್ ಶ್ಲಿಯರ್ಮೆಶೆರ್ ಎಂಬ ಉದಾರವಾದಿ ದೇವತಾಶಾಸ್ತ್ರಜ್ಞ 1810ರಲ್ಲಿ ಬರ್ಲಿನ್್ನ ಹೊಸ ವಿಶ್ವವಿದ್ಯಾನಿಲಯದಲ್ಲಿ ದೇವತಾಶಾಸ್ತ್ರವನ್ನು ಸೇರಿಸಿಕೊಳ್ಳುವಂತೆ ಒತ್ತಾಯಿಸಿದ್ದರ ಫಲವಾಗಿ ಇದು ಸಾಧ್ಯವಾಯಿತು..[೪೪]

ಉದಾಹರಣೆಗೆ ಜರ್ಮನಿಯಲ್ಲಿ, ದೇವತಾಶಾಸ್ತ್ರದ ಅಧ್ಯಯನ ವಿಭಾಗಗಳು ಸರ್ಕಾರದ ವಿಶ್ವವಿದ್ಯಾನಿಲಯಗಳಲ್ಲಿ ಇದ್ದವು. ಅವು ಪ್ರಾತಿನಿಧಿಕವಾಗಿ ನಿರ್ದಿಷ್ಟ ಧಾರ್ಮಿಕ ಪಂಥಗಳ ಜೊತೆ, ಪ್ರಾಟೆಸ್ಟಂಟ್ ಅಥವಾ ರೋಮನ್ ಕೆಥೋಲಿಕ್ ಜೊತೆಗೆ ಜೊತೆಯಾಗಿದ್ದವು, ಮತ್ತು ಆ ಅಧ್ಯಯನ ವಿಭಾಗಗಳು ಧಾರ್ಮಿಕ ಪಂಥಗಳಿಗೇ ಬದ್ಧವಾದ (konfessionsgebunden-ದೇವರ ಮೇಲೆ ಪ್ರವಚನ) ಪದವಿಗಳನ್ನು ಮತ್ತು ಧಾರ್ಮಿಕ ಪಂಥಗಳಿಗೇ ಸೀಮಿತವಾದ ಸಾರ್ವಜನಿಕ ಹುದ್ದೆಗಳನ್ನು ತಮ್ಮ ಅಧ್ಯಯನ ವಿಭಾಗಗಳಲ್ಲಿ ನೀಡುತ್ತಿದ್ದವು; ‘ಕ್ರಿಶ್ಚಿಯನ್ ಜ್ಞಾನದ ಅಭಿವೃದ್ಧಿ ಮತ್ತು ಬೆಳವಣಿಗೆಗೆ’ ಕೊಡುಗೆಯನ್ನು ಕೊಡುತ್ತ, ಭವಿಷ್ಯದ ಕ್ರೈಸ್ತ ಪುರೋಹಿತ ವರ್ಗದ ಸದಸ್ಯರಿಗೆ ಮತ್ತು ಜರ್ಮನ್ ಶಾಲೆಗಳಲ್ಲಿಯ ಧಾರ್ಮಿಕ ಶಿಕ್ಷಣದ ಶಿಕ್ಷಕರಿಗೆ ಅವರು ಶೈಕ್ಷಣಿಕ ತರಬೇತಿಯನ್ನು ನೀಡಿದರು.’[೪೫]

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಕ್ರಿಶ್ಚಿಯನ್ ಪುರೋಹಿತರ ತರಬೇತಿಗಾಗಿ ಅನೇಕ ಪ್ರಮುಖ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಪ್ರಾರಂಭವಾಗಿವೆ. ಹಾರ್ವರ್ಡ್,[೪೬] ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯ,[೪೭] ಬೋಸ್ಟನ್ ವಿಶ್ವವಿದ್ಯಾನಿಲಯ,[೪೮] ಯಾಲೆ,[೪೯] ಮತ್ತುಪ್ರಿನ್ಸ್‌ಟನ್[೫೦] ಎಲ್ಲವೂ ಕ್ರೈಸ್ತ ಪುರೋಹಿತ ವರ್ಗದ ಸದಸ್ಯರಿಗೆ ತರಬೇತಿಯನ್ನು ನೀಡುವ ಪ್ರಾಥಮಿಕ ಉದ್ದೇಶದಿಂದ ದೇವತಾಶಾಸ್ತ್ರದ ತರಬೇತಿಯನ್ನು ಹೊಂದಿವೆ.

ಧರ್ಮಶಾಸ್ತ್ರಜ್ಞರ ವೃತ್ತಿಶಿಕ್ಷಣ ಕಾಲೇಜು (ಸೆಮಿನರಿಸ್) ಮತ್ತು ಬೈಬಲ್ ಕಾಲೇಜುಗಳು ದೇವತಾಶಾಸ್ತ್ರದ ಶೈಕ್ಷಣಿಕ ಅಧ್ಯಯನ ಮತ್ತು ಕ್ರಿಶ್ಚಿಯನ್ ಪುರೋಹಿತರ ತರಬೇತಿಯ ನಡುವೆ ಸಂಬಂಧವನ್ನು ಉಳಿಸಿಕೊಂಡವು. ನಿದರ್ಶನಕ್ಕೆ, ಅನೇಕ ಪ್ರಮುಖ ಅಮೆರಿಕದ ಉದಾಹರಣೆಗಳಲ್ಲಿ ಚಿಕಾಗೋದ ಕೆಥೋಲಿಕ್ ಥಿಯಾಲೋಜಿಕಲ್ ಯೂನಿಯನ್[೫೧] ಬರ್ಕಲಿಯ ಗ್ರಾಜುಯೇಟ್ ಥಿಯಾಲಜಿಕಲ್ ಯೂನಿಯನ್,[೫೨] ಡಲ್ಲಾಸ್‌ನ ಕ್ರಿಸ್‌ವೆಲ್ ಕಾಲೇಜು,[೫೩] ಲುಯಿಸ್‌ವಿಲ್ಲೆಯ ಸದರ್ನ್ ಬ್ಯಾಪ್ಟಿಸ್ಟ್ ಥಿಯಾಲಜಿಕಲ್ ಸೆಮಿನರಿ ,[೫೪] ಡೀರ್‌ಫೀಲ್ಡ್, ಇಲ್ಲಿನೋಯ್ಸ್‌ನ ಟ್ರಿನಿಟಿ ಇವೆಂಜೆಲಿಕಲ್ ಡಿವಿನಿಟಿ ಸ್ಕೂಲ್ ,[೫೫] ಮತ್ತು ಡಲ್ಲಾಸ್ ಥಿಯೋಲಜಿಕಲ್ ಸೆಮಿನರಿ.[೫೬] ಇವು ಸೇರಿವೆ. ಸ್ಪ್ರಿಂಗ್ ಫೀಲ್ಡ್, ಮಿಸ್ಸೌರಿಯ .ಅಸೆಂಬ್ಲಿಸ್ ಆಫ್ ಗಾಡ್ ಥಿಯೋಲಜಿಕಲ್ ಸೆಮಿನರಿ.

ದೇವತಾಶಾಸ್ತ್ರವು ತನ್ನ ಸ್ವಂತ ಬಲ ಮೇಲೆ ಶೈಕ್ಷಣಿಕ ವಿಭಾಗವಾಗಿ

[ಬದಲಾಯಿಸಿ]

ಕೆಲವು ಸಂದರ್ಭಗಳಲ್ಲಿ, ದೇವತಾಶಾಸ್ತ್ರವು ಔಪಚಾರಿಕ ಸಂಲಗ್ನತೆಯಿಲ್ಲದೆ ಶೈಕ್ಷಣಿಕ ಅಧ್ಯಯನ ವಿಭಾಗವಾಗಿ ಯಾವುದೇ ನಿರ್ದಿಷ್ಟ ಚರ್ಚಿನಲ್ಲಿ ಕಲಿಸಲಾಗುತ್ತಿದೆ. (ಸಿಬ್ಬಂದಿ ವರ್ಗದ ವೈಯಕ್ತಿಕ ಸದಸ್ಯರು ವಿವಿಧ ಚರ್ಚುಗಳೊಂದಿಗೆ ಸಂಲಗ್ನತೆ ಹೊಂದಿದ್ದರೂ) ಮತ್ತು ತಮ್ಮ ಉದ್ದೇಶದ ಕೇಂದ್ರಭಾಗವಾಗಿದ್ದೂ ಕ್ರೈಸ್ತ ಪುರೋಹಿತರ ತರಬೇತಿ ಹೊಂದಿರುವುದಿಲ್ಲ. ಯುನೈಟೆಡ್ ಕಿಂಗ್ಡಂನ ಅನೇಕ ಶಾಖೆಗಳಲ್ಲಿ ಇದು ಸತ್ಯ. ನಿದರ್ಶನಕ್ಕೆ ಎಕ್ಸೆಟರ್ ವಿಶ್ವವಿದ್ಯಾಲಯ ದೇವತಾಶಾಸ್ತ್ರ ಮತ್ತು ಧರ್ಮ ವಿಭಾಗ ಮತ್ತು ಲೀಡ್ಸ್ ವಿಶ್ವವಿದ್ಯಾಲಯದ ದೇವತಾಶಾಸ್ತ್ರ ಮತ್ತು ಧಾರ್ಮಿಕ ಅಧ್ಯಯನಗಳ ವಿಭಾಗ.[೫೭]

ದೇವತಾಶಾಸ್ತ್ರ ಮತ್ತು ಧಾರ್ಮಿಕ ಅಧ್ಯಯನಗಳು

[ಬದಲಾಯಿಸಿ]

ಕೆಲವು ಸಮಕಾಲೀನ ಸಂದರ್ಭಗಳಲ್ಲಿ, ದೇವತಾಶಾಸ್ತ್ರ ಮತ್ತು ಧಾರ್ಮಿಕ ಅಧ್ಯಯನಗಳ ನಡುವೆ ಅಂತರವನ್ನು ಕಲ್ಪಿಸಲಾಗಿದೆ. ದೇವತಾಶಾಸ್ತ್ರದಲ್ಲಿ ಕೆಲವು ಮಟ್ಟದ ಬದ್ಧತೆಯು ಅಧ್ಯಯನ ಮಾಡುವ ಧಾರ್ಮಿಕ ಸಂಪ್ರದಾಯದ ಸತ್ಯದ ಬಗ್ಗೆ ಇರಬೇಕಾದುದು ಅಗತ್ಯವೆಂದು ತೋರುತ್ತದೆ ಅದು ಧಾರ್ಮಿಕ ಅಧ್ಯಯನದಲ್ಲಿ ಇಲ್ಲ. ದೇವತಾಶಾಸ್ತ್ರಕ್ಕೆ ಈ ರೀತಿಯಲ್ಲಿ ವಿರುದ್ಧವಾಗಿ, ಧಾರ್ಮಿಕ ಅಧ್ಯಯನವು, ಅಧ್ಯಯನ ಮಾಡಲಾದ ಧಾರ್ಮಿಕ ಸಂಪ್ರದಾಯಗಳ ಸತ್ಯದ ಪ್ರಶ್ನೆಯನ್ನು ಒಂದು ವರ್ಗದಲ್ಲಿ ಸೇರಿಸುವ ಅಗತ್ಯವನ್ನು ಕಾಣುತ್ತದೆ. ಮತ್ತು ಐತಿಹಾಸಿಕ ಅಥವಾ ಸಮಕಾಲೀನ ಆಚರಣೆಗಳ, ಅಥವಾ ಯಾವ ಸಂಪ್ರದಾಯಗಳು ಬೌದ್ಧಿಕ ಸಾಧನವಾಗಿ ಬಳಸುತ್ತಿರುವ ವಿಚಾರಗಳ ಚೌಕಟ್ಟುಗಳು, ಅವು ತಮ್ಮನ್ನು ಯಾವುದೇ ಧಾರ್ಮಿಕ ಸಂಪ್ರದಾಯಕ್ಕೂ ವಿಶೇಷವಾಗಿ ಬಂಧಿಸಿಕೊಂಡಿರುವುದಿಲ್ಲವೋ ಅವುಗಳ ಮತ್ತು ಅವು ಸಾಮಾನ್ಯವಾಗಿ ತಟಸ್ಥ ಮತ್ತು ಜಾತ್ಯತೀತವಾಗಿತ್ತವೆ ಇವುಗಳ ಅಧ್ಯಯನದಲ್ಲಿ ತೊಡಗಿಕೊಂಡಿದೆ.[೫೮] ಯಾವ ಸಂದರ್ಭಗಳಲ್ಲಿ 'ಧಾರ್ಮಿಕ ಅಧ್ಯಯನಗಳು' ಈ ಅರ್ಥದಲ್ಲಿ ಪ್ರಾಮುಖ್ಯವನ್ನು ಪಡೆದು ಪ್ರಾಥಮಿಕ ರೂಪಗಳಲ್ಲಿ ಅಧ್ಯಯನದಲ್ಲಿ ಇವು ಸೇರಬಹುದು:

  • ಧರ್ಮದ ಮಾನವಶಾಸ್ತ್ರ,
  • ತೌಲನಿಕ ಧರ್ಮ,
  • ಧರ್ಮಗಳ ಇತಿಹಾಸ
  • ಧರ್ಮದ ತತ್ವಜ್ಞಾನ
  • ಧರ್ಮದ ತತ್ವಶಾಸ್ತ್ರ, ಮತ್ತು
  • ಧರ್ಮದ ಸಮಾಜಶಾಸ್ತ್ರ.

ದೇವತಾಶಾಸ್ತ್ರ ಮತ್ತು ಧಾರ್ಮಿಕ ಅಧ್ಯಯನಗಳು ಕೆಲವೊಮ್ಮೆ ತ್ವೇಷದಲ್ಲಿ ಇರುವಂತೆ ಕಾಣುತ್ತದೆ;[೫೯] ಕೆಲವೊಮ್ಮೆ ಅವು ಯಾವುದೇ ಗಂಭೀರ ತ್ವೇಷವಿಲ್ಲದೆ ಜೊತೆಜೊತೆಗೆ ಇರುತ್ತವೆ;[೬೦] ಮತ್ತು ಇವು ಕೆಲವೊಮ್ಮೆ ಅವುಗಳ ನಡುವೆ ಇಲ್ಲಿ ಸೂಚಿಸಿರುವ ವಿವರಣೆಗಳಂತೆ ಸ್ಪಷ್ಟವಾದ ಗಡಿಗಳಿವೆ ಎಂಬುದನ್ನು ಅಲ್ಲಗಳೆಯುತ್ತವೆ.[೬೧] ಈಶ್ವರವಾದ

ವಿಮರ್ಶೆ

[ಬದಲಾಯಿಸಿ]

ದೈವತ್ವದ ಬಗ್ಗೆ ವಿವೇಚನಾಯುಕ್ತ ಚರ್ಚೆ ಸಾಧ್ಯವಿದೆಯೋ ಇಲ್ಲವೋ ಎಂಬುದು ಬಹುಕಾಲದಿಂದ ಇರುವ ವಾದಾಂಶದ ವಿಷಯವಾಗಿದೆ. ಕ್ರಿಸ್ತವೂರ್ವ ಐದನೆ ಶತಮಾನದಷ್ಟು ಪೂರ್ವದಲ್ಲಿಯೇ, ಪ್ರೋಟೋಗೋರಾಸ್ ದೇವರುಗಳ ಅಸ್ತಿತ್ವದ ಸಂಬಂಧದಲ್ಲಿ ತನ್ನ ಆಜ್ಞೇಯತಾ ವಾದದ ಪರಿಣಾಮವಾಗಿ ಅಥೆನ್ಸ್‌ನಿಂದ ದೇಶಭ್ರಷ್ಟನಾಗಿ ಹೋದ ಪ್ರಸಿದ್ಧಿ ಹೊಂದಿದವನು. "ದೇವರುಗಳಿಗೆ ಸಂಬಂಧಿಸಿದಂತೆ, ಅವು ಅಸ್ತಿತ್ವದಲ್ಲಿ ಇವೆಯೋ ಅಥವಾ ಅವು ಅಸ್ತಿತ್ವದಲ್ಲಿ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ, ಅಥವಾ ಅವರು ಯಾವ ರೂಪವನ್ನು ಹೊಂದಿದ್ದಾರೆ, ಒಂದನ್ನು ಅರಿಯುವ ವಿಷಯದಲ್ಲಿ ಸಾಕಷ್ಟು ಅಡ್ಡಿಗಳಿವೆ: ವಸ್ತುವಿನ ಬಗ್ಗೆ ಅಸ್ಪಷ್ಟತೆಯಿದೆ ಮತ್ತು ಮನುಷ್ಯನ ಜೀವಿತತಾವಧಿ ಅಲ್ಪವಾಗಿದೆ" ಎಂದು ಹೇಳಿದ್ದನು.[೬೨]

ತನ್ನ ದಿ ಏಜ್ ಆಫ್ ರೀಶನ್‌ನ ಎರಡು ಭಾಗಗಳಲ್ಲಿ, ಅಮೆರಿಕದ ಕ್ರಾಂತಿಕಾರಿ ಥಾಮಸ್ ಪೈನೆ, ಹೀಗೆ ಬರೆದಿದ್ದಾರೆ, "ದೇವತಾಶಾಸ್ತ್ರದ ಅಧ್ಯಯನ, ಕ್ರಿಶ್ಚಿಯನ್ ಚರ್ಚುಗಳಲ್ಲಿ ಅದು ಇರುವಂತೆ ಯಾವುದರ ಅಧ್ಯಯನವೂ ಅಲ್ಲ; ಏನೂ ಇಲ್ಲದ್ದರ ಮೇಲೆ ಅದರ ಅಸ್ತಿತ್ವವಿದೆ; ಯಾವುದೇ ತತ್ವಗಳ ಮೇಲೆ ಅದು ನಿಂತಿಲ್ಲ; ಯಾವುದೇ ಅಧಿಕಾರಿಗಳಿಂದ ಮುನ್ನೆಡೆಯುತ್ತಿಲ್ಲ; ಇದಕ್ಕೆ ಯಾವುದೇ ಅಂಕಿಅಂಶಗಳಿಲ್ಲ; ಇದು ಏನನ್ನೂ ಪ್ರದರ್ಶಿಸುವುದಿಲ್ಲ; ಮತ್ತು ಇದು ಯಾವುದೇ ನಿರ್ಣಯವನ್ನೂ ಒಪ್ಪಿಕೊಳ್ಳುವುದಿಲ್ಲ. ಯಾವುದನ್ನೂ ವಿಜ್ಞಾನದಂತೆ ಅಧ್ಯಯನ ಮಾಡಲು ಆಗುವುದಿಲ್ಲ. ಅದು ಯಾವ ತತ್ವಗಳ ಮೇಲೆ ಪ್ರತಿಷ್ಠಾಪಿಸಲ್ಪಟ್ಟಿದೆಯೋ ಆ ತತ್ವಗಳ ಮೇಲೆ ನಮ್ಮ ಹಿಡಿತ ಇಲ್ಲದೆ ಹೋದರೆ; ಮತ್ತು ಕ್ರಿಶ್ಚಿಯನ್ ದೇವತಾಶಾಸ್ತ್ರದ ಸ್ಥಿತಿಯೇ ಆದರೆ ಇದು ಏನೂ ಇಲ್ಲದ್ದರ ಅಧ್ಯಯನ."[೬೩]

ನಿರೀಶ್ವರವಾದಿ ತತ್ವಶಾಸ್ತ್ರಜ್ಞ ಲುಡ್ವಿಗ್ ಫ್ಯೂಅರ್‌ಬಾಕ್ ತನ್ನ ಕೃತಿ ಪ್ರಿನ್ಸಿಪಲ್ಸ್ ಆಫ್ ಫಿಲಾಸಫಿ ಆಫ್ ದಿ ಫ್ಯೂಚರ್ನಲ್ಲಿ ದೇವತಾಶಾಸ್ತ್ರವನ್ನು ಕೈಬಿಡಲು ನೋಡಿದ: "ಆಧುನಿಕ ಶಕೆಯ ಕಾರ್ಯವು ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವುದು ಮತ್ತು ಮಾನವಹಿತ ಸಾಧನೆ ಮಾಡುವುದು- ದೇವತಾಶಾಸ್ತ್ರವನ್ನು ಮಾನವಶಾಸ್ತ್ರದಲ್ಲಿ ಪರಿವರ್ತಿಸುವುದು ಮತ್ತು ವಿಲೀನಗೊಳಿಸುವುದು."[೬೪] ಆತನ ಆರಂಭಿಕ ಕೃತಿ ದಿ ಎಸ್ಸೆನ್ಸ್ ಆಫ್ ಕ್ರಿಶ್ಚಿಯಾನಿಟಿ (ಪ್ರಕಟಣೆ. 1841)ಯಲ್ಲಿ ಇದು ಪ್ರತಿಫಲಿಸಿದೆ, ಇದಕ್ಕಾಗಿ ಜರ್ಮನಿಯಲ್ಲಿ ಆತನಿಗೆ ಬೋಧನೆಯನ್ನು ನಿಷೇಧಿಸಲಾಗಿತ್ತು. ಇದರಲ್ಲಿ ಆತನು ದೇವತಾಶಾಸ್ತ್ರವು "ವೈರುದ್ಧ್ಯಗಳು ಮತ್ತು ಭ್ರಾಂತಿಯ ಜಾಲ" ಎಂದು ಹೇಳಿದ್ದನು.[೬೫]

ತಾರ್ಕಿಕ-ಪ್ರತ್ಯಕ್ಷಸಿದ್ಧವಾದುದನ್ನು ಮಾತ್ರ ನಂಬುವ ಪಂಥಕ್ಕೆ ಸೇರಿದ ಎ.ಜೆ.ಅಯ್ಯರ್ ತನ್ನ ಪ್ರಬಂಧ "ಕ್ರಿಟಿಕ್ ಆಫ್ ಎಥಿಕ್ಸ್ ಎಂಡ್ ಥಿಯೋಲಜಿ"ಯಲ್ಲಿ ದೈವತ್ವದ ಬಗ್ಗೆ ಇರುವ ಎಲ್ಲ ಹೇಳಿಕೆಗಳನ್ನು ಅಸಂಬದ್ಧವಾದದ್ದು ಮತ್ತು ಯಾವುದೇ ದೈವತ್ವವನ್ನು ಸಿದ್ಧಮಾಡಿ ತೋರಿಸಲು ಸಾಧ್ಯವಿಲ್ಲ

ಅವರು ಬರೆಯುತ್ತಾರೆ: "ಇದನ್ನು ಈಗ ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ, ತತ್ವಶಾಸ್ತ್ರಜ್ಞರು ಯಾವುದೇ ಪ್ರಮಾಣದಲ್ಲಿ, ಜೀವಿಯೊಂದರ ಅಸ್ತಿತ್ವವು ಯಾವುದೇ ಸರ್ವಸಜೀವತ್ವವಾದಿಯಲ್ಲದ ಧರ್ಮವು ವ್ಯಾಖ್ಯಾನಿಸುವ ದೇವರನ್ನು ಪ್ರಮಾಣಪೂರ್ವಕವಾಗಿ ಪ್ರದರ್ಶಿಸುವುದು ಸಾಧ್ಯವಿಲ್ಲ... ದೇವರ ಸ್ವರೂಪ ಕುರಿತ [ಎ]ಲ್ಲ ಹೇಳಿಕೆಗಳು ಅಸಂಬದ್ಧವಾದವು."[೬೬]

ತನ್ನ ಪ್ರಬಂಧ, "ಅಗೇನ್‌ಸ್ಟ್ ಥಿಯಾಲಿಜಿ"ಯಲ್ಲಿ, ತತ್ವಶಾಸ್ತ್ರಜ್ಞ ವಾಲ್ಟರ್ ಕೌಫ್‌ಮನ್ ಸಾಮಾನ್ಯ ಧರ್ಮದಿಂದ ದೇವತಾಶಾಸ್ತ್ರವನ್ನು ಪ್ರತ್ಯೇಕಿಸಲು ಒತ್ತಾಯಿಸುತ್ತಾನೆ. "ದೇವತಾಶಾಸ್ತ್ರವು, ನಿಜ, ಅದು ಧರ್ಮವಲ್ಲ; ಮತ್ತು ಧರ್ಮದೊಂದಿಗೆ ಅದು ನಿಕಟ ಸಂಪರ್ಕವನ್ನು ಹೊಂದಿದೆ, ಅದರಲ್ಲೂ ದೇವತಾಶಾಸ್ತ್ರಕ್ಕೆ ವಿರುದ್ಧವಾದುದರ ಬಗ್ಗೆ. ದೇವತಾಶಾಸ್ತ್ರದ ಮೇಲಿನ ದಾಳಿಯು, ಆ ಕಾರಣಕ್ಕಾಗಿ ಧರ್ಮದ ಮೇಲಿನ ದಾಳಿಯೆಂದು ತಗೆದುಕೊಳ್ಳಬೇಕಾದ ಅಗತ್ಯವಿಲ್ಲ. ಧರ್ಮವು ಹೀಗಿರಬಹುದು, ಮತ್ತು ಬಹುತೇಕ ಹೀಗೆಯೇ ಇರುತ್ತದೆ, ದೇವತಾಶಾಸ್ತ್ರೀಯವಲ್ಲದ್ದು ಅಥವಾ ದೇವತಾಶಾಸ್ತ್ರೀಯಕ್ಕೆ ವಿರುದ್ಧವಾದ್ದೂ ಕೂಡ." ಹೀಗಿದ್ದರೂ, ಕೌಫ್‌ಮನ್ "ಕ್ರೈಸ್ತಧರ್ಮವು ಅಪರಿಹಾರ್ಯವಾಗಿ ಒಂದು ದೇವತಾಶಾಸ್ತ್ರೀಯ ಧರ್ಮ" ಎಂಬುದನ್ನು ಕಂಡುಕೊಂಡ.[೬೭]

ದೃಷ್ಟಾಂತವಾದ, ಒಂದು ಬಂಗಾಲಿ ತತ್ವಶಾಸ್ತ್ರ, ಈಗಿನ ದಿನಗಳಲ್ಲಿ ದೇವತಾಶಾಸ್ತ್ರೀಯ ವಿಷಯ ಮಹತ್ವದ್ದಲ್ಲ ಎಂದು ವಾದಿಸುತ್ತಿದೆ.[೬೮]

ಇವನ್ನೂ ನೋಡಿ

[ಬದಲಾಯಿಸಿ]
ಅಗಲ=
  • ಆಜ್ಞೇಯತಾ ವಾದ
  • ಸ್ವಧರ್ಮ ಪರಿತ್ಯಾಗ
  • ವೈರಾಗ್ಯದ ದೇವತಾಶಾಸ್ತ್ರ
  • ನಾಸ್ತಿಕತೆ
  • ಬೈಲಲ್ಲಿನ ದೇವತಾಶಾಸ್ತ್ರ
  • ದೈವನಿಂದನೆ
  • ಕ್ರೈಸ್ತಧರ್ಮದ ಸಮರ್ಥನೆಗಳು
  • ಕ್ರೈಸ್ತಧರ್ಮದ ದೇವತಾಶಾಸ್ತ್ರ
  • ರಚನಾತ್ಮಕ ದೇವತಾಶಾಸ್ತ್ರ
  • ಸಂವಾದಾತ್ಮಕ ಅಸಹಿಷ್ಣುತೆ
  • ಆತ್ಮಸೃಷ್ಟಿವಾದ
  • ದೈವತ್ವದ ವಿದ್ವಾಂಸ
  • ದೇವರು ನಮ್ಮೊಳಗೇ ಇದ್ದಾನೆ ಎನ್ನುವವರು
  • ವ್ಯಾಖ್ಯಾನ
  • ದೇವತಾಶಾಸ್ತ್ರಅಲ್ಲದ್ದು
  • ಮಹಿಳಾವಾದಿ ದೇವತಾಶಾಸ್ತ್ರ
  • ದೇವತಾ ಶಾಸ್ತ್ರದ ಔಪಚಾರಿಕ ಮತ್ತು ಪ್ರಾಪಂಚಿಕ ತತ್ವಗಳು
  • ಪಾಷಂಡಮತ
  • ಧಾರ್ಮಿಕ ಸಾಹಿತ್ಯ
ಅಗಲ=
  • ದೇವತಾಶಾಸ್ತ್ರದ ಇತಿಹಾಸ
  • ದೇವತಾಶಾಸ್ತ್ರದ ವಿಮೋಚನೆ
  • ನೈತಿಕ ದೇವತಾಶಾಸ್ತ್ರ
  • ಮುಮುಕ್ಷು ದೇವತಾಶಾಸ್ತ್ರ
  • ಸಹಜ ದೇವತಾಶಾಸ್ತ್ರ
  • ಉನ್ಮತ್ತ ದೇವತಾಶಾಸ್ತ್ರ
  • ಅಸಹಿಷ್ಣುತೆಯ ದೇವತಾಶಾಸ್ತ್ರೀಯತೆ
  • ಮೂಲತತ್ವಶಾಸ್ತ್ರದ ಮತ್ತು ದೇವತಾಶಾಸ್ತ್ರೀಯ ಪರಿಪೂರ್ಣತೆ
  • ಧರ್ಮದ ತತ್ವಜ್ಞಾನ
  • ಪ್ರಕ್ರಿಯಾ ದೇವತಾಶಾಸ್ತ್ರ
  • ಪ್ರಸನ್ನಗೊಳಿಸುವಿಕೆ
  • ವಿಲಕ್ಷಣ ದೇವತಾಶಾಸ್ತ್ರ
  • ಅತಿ ಸೂಕ್ಷ್ಮ ತರ್ಕ
  • ಸೋಲಾ ಫಿಡೆಅಥವಾ "ನಂಬಿಕೆಯಿಂದ ಸಮರ್ಥನೆ"
  • ವ್ಯವಸ್ಥಿತ ದೇವತಾಶಾಸ್ತ್ರ
  • ದೇವತಾಶಾಸ್ತ್ರ
  • ದೇವವಂಶಾವಳಿ
  • ಸೈದ್ಧಾಂತಿಕ ಸೌಂದರ್ಯ ಶಾಸ್ತ್ರ
  • ಸಂಬಂಧಾತ್ಮಕ ಕಾಳಜಿಯ ದೇವತಾಶಾಸ್ತ್ರ
  • ಬ್ರಹ್ಮವಿದ್ಯೆ

ಅಡಿ ಟಿಪ್ಪಣಿಗಳು

[ಬದಲಾಯಿಸಿ]
  1. ಸಿಟಿ ಆಫ್ ಗಾಡ್ ಬುಕ್ VIII. i.[೧] "ಡೆ ಡಿವಿನಿಟಾಟೆ ರೇಶನೆಮ್ ಸಿವೆ ಸೆರ್ಮೋನೆಮ್"
  2. ಆಫ್ ದಿ ಲಾಸ್ ಆಫ್ ಎಕ್ಸಿಲೆಸಿಯಾಸ್ಟಿಕಲ್ ಪೊಲಿಟಿ , 3.8.11
  3. ಮೆಕ್‌ಗ್ರಾಥ್, ಅಲಿಸ್ಟೆರ್. 1998. ಹಿಸ್ಟಾರಿಕಲ್ ಥಿಯಾಲಜಿ: ಆನ್ ಇಂಟ್ರೊಡಕ್ಷನ್ ಟು ದಿ ಹಿಸ್ಟರಿ ಆಫ್ ಕ್ರಿಶ್ಚಿಯನ್ ಥಾಟ್. ಆಕ್ಸ್‌ಫರ್ಡ್: ಬ್ಲಾಕ್‌ವೆಲ್ ಪಬ್ಲಿಶರ್ಸ್. ಪುಟಗಳು. 1-8.
  4. ನೋಡಿ, ಉದಾ., ಡೇನಿಯಲ್ ಎಲ್. ಮಿಗ್ಲಿಯೋರ್, ಫೇಥ್ ಸೀಕಿಂಗ್ ಅಂಡರ್‌ಸ್ಟ್ಯಾಂಡಿಂಗ್: ಆನ್ ಇಂಟ್ರೊಡಕ್ಷನ್ ಟು ಕ್ರಿಶ್ಚಿಯನ್ ಥಿಯೋಲಜಿ 2ನೆ ಆವೃತ್ತಿ.(ಗ್ರಾಂಡ್ ರಪಿಡ್ಸ್: ಎರ್ಡಮನ್ಸ್, 2004)
  5. ನೋಡಿ, ಉದಾ., ಮೈಕೆಲ್ ಎಸ್. ಕೋಗನ್, 'ಟವರ್ಡ್ ಎ ಜೆವಿಶ್ ಥಿಯಾಲೋಜಿ ಆಪ್ ಕ್ರಿಶ್ಚಿಯಾನಿಟಿ ' ಇನ್ ದಿ ಜರ್ನಲ್ ಆಫ್ ಎಕುಮೆನ್ಸಿಯಲ್ ಸ್ಟಡಿಸ್ 32.1 (ವಿಂಟರ್ 1995), 89-106; ಆನ್‌ಲೈನಲ್ಲಿ ಇಲ್ಲಿ ಲಭ್ಯವಿದೆ [೨] Archived 2006-06-15 ವೇಬ್ಯಾಕ್ ಮೆಷಿನ್ ನಲ್ಲಿ.
  6. ನೋಡಿ, ಉದಾ., ಡೇವಿಡ್ ಬರ್ರೆಲ್ಲ್, ಫ್ರೀಡಂ ಎಂಡ್ ಕ್ರಿಯೇಶನ್ ಇನ್ ಥ್ರೀ ಟ್ರೆಡಿಶನ್ಸ್ (ನೋಟ್ರೆ ಡಮೆ: ನೋಟ್ರೆ ಡಮೆ ವಿಶ್ವವಿದ್ಯಾನಿಲಯ ಮುದ್ರಣಾಲಯ, 1994)
  7. ನೋಡಿ, ಉದಾ., ಜಾನ್ ಶೆಲ್ಬಿ ಸ್ಪೂಂಗ್, ವೈ ಕ್ರಿಶ್ಚಿಯಾನಿಟಿ ಮಸ್ಟ್ ಚೇಂಜ್ ಆರ್ ಡೈ (ನ್ಯೂ ಯಾರ್ಕ್: ಹಾರ್ಪರ್ ಕಾಲಿನ್ಸ್, 2001)
  8. ನೋಡಿ, ಉದಾ., ಡಂಕನ್ ಡೋರ್ಮೋರ್ ಎಟ್ ಅಲ್ (ಆವೃತ್ತಿಗಳು), ಅಂಗ್ಲಿಕಾನಿಸಂ, ದಿ ಆನ್ಸರ್ ಟುದಿ ಮಾಡರ್ನಿಟಿ (ಲಂಡನ್: ಕಾಂಟಿನಂ, 2003)
  9. ನೋಡಿ, ಉದಾ., ಟಿಮೋಥಿ ಗೊರಿಂಜೆ, ಕ್ರೈಂ , ಚೇಂಜಿಂಗ್ ಸೊಸೈಟಿ ಎಂಡ್ ದಿ ಚರ್ಚಸ್ ಸೀರೀಸ್ (ಲಂಡನ್:SPCK, 2004)
  10. ನೋಡಿ, ಉದಾ., ಅನ್ನೆ ಹುಂಟ್ ಓವರ್‌ಜೀಯ ರಿಸಿಯೋರ್ (1913–2005)ನ ವಿಚಾರಗಳ ಪದವಿವರಣೆ. 'ದೇವತಾಶಾಸ್ತ್ರಜ್ಞನ ಪಾತ್ರ': "ದೇವತಾಶಾಸ್ತ್ರಜ್ಞ ಒಬ್ಬ ವಿವರಣೆಕಾರ ಎಂದು ಪೌಲ್ ರಿಸಿಯೋರ್ ಹೇಳುತ್ತಾನೆ, ಆತನ ಕೆಲಸ ಸಂಪ್ರದಾಯದ ಸಾಂಕೇತಿಕ ನೆಲೆಯಿಂದ ಬಂದ ಅಸಂಖ್ಯ, ಶ್ರೀಮಂತ ಉಪಮೆಗಳ ವಿವರಣೆ ನೀಡುವುದು. ಇದರಿಂದ ಸಂಕೇತಗಳೂ ನಮ್ಮ ಅಸ್ತಿತ್ವವಾದಿ ಪರಿಸ್ಥಿತಿಯ ಮತ್ತೊಮ್ಮೆ "ಮಾತನಾಡುವುದು" ಸಾಧ್ಯವಾಗುತ್ತದೆ." ಅನ್ನೆ ಹಂಟ್ ಓವರ್‌ಝೀ ದಿ ಬಾಡಿ ಡಿವೈನ್: ದಿ ಸಿಂಬಾಲ್ ಆಫ್ ದಿ ಬಾಡಿ ಇನ್ ದಿ ವರ್ಕ್ಸ್ ಆಫ್ ತೆಲ್‌ಹಾರ್ಡ್ ಡೆ ಚಾರ್ಡಿನ್ ಎಂಡ್ ರಾಮಾನುಜ , ಧಾರ್ಮಿಕ ಸಂಪ್ರದಾಯಗಳಲ್ಲಿ ಕ್ಯಾಂಬ್ರಿಡ್ಜ್ ಅಧ್ಯಯನ 2 (ಕ್ಯಾಂಬ್ರಿಡ್ಜ್: ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 1992), ISBN 0-521-38516-4, 9780521385169, ಪುಟ.4; ಮೂಲ: [೩] (ಲಭ್ಯವಾಗಿದ್ದು: ಸೋಮವಾರ ಏಪ್ರಿಲ್ 5, 2010)
  11. ಲಾಂಗ್ಲ್ಯಾಂಡ್, ಪಿಯರ್ಸ್ ಪ್ಲೋಮನ್ ಎ ix 136
  12. ಲಿಡ್ಡೆಲ್ ಮತ್ತು ಸ್ಕಾಟ್ಸ್ ಗ್ರೀಕ್-ಇಂಗ್ಲಿಷ್ ಲೆಕ್ಸಿಕಾನ್' '.
  13. "ಅರಿಸ್ಟೋಟಲ್, ಮೆಟಾಫಿಸಿಕ್ಸ್, ಬುಕ್ ಎಪ್ಸಿಲನ್.". Archived from the original on 2008-02-16. Retrieved 2010-11-02.
  14. ಈ ಶೀರ್ಷಿಕೆಯು ಹಸ್ತಪ್ರತಿ ಸಂಪ್ರದಾಯದ ಸ್ವಲ್ಪ ಈಚೆ ಬುಕ್ ಆಫ್ ರಿವಿಲೇಶನ್‌ನಲ್ಲಿ ಕಂಡುಬಂದಿದೆ. ಎರಡು ಹಳೆಯ ಉಲ್ಲೇಖಗಳು ಡೇವಿಡ್ ಔನೆಸ್ ಅವರ ವರ್ಡ್ ಬಿಬ್ಲಿಕಲ್ ಕಾಮೆಂಟರಿಯಲ್ಲಿದೆ 52: ರಿವಿಲೇಶನ್ 1-5 (ಡಲ್ಲಾಸ್: ವರ್ಡ್ ಬುಕ್ಸ್, 1997) ಎರಡೂ 11ನೆ ಶತಮಾನದ್ದು- ಗ್ರೆಗೊರಿ 325/ಹೊಸ್ಕಿಯರ್ 9 ಮತ್ತು ಗ್ರೆಗೊರಿ 1006/ಹೊಸ್ಕಿಯರ್ 215: ಈ ಶೀರ್ಷಿಕೆ 6ನೆ ಶತಮಾನದ ವೇಳೆ ಚಲಾವಣೆಯಲ್ಲಿತ್ತು.- ನೋಡಿ ಅಲ್ಲೆನ್ ಬ್ರೆಂಟ್ ‘ಜಾನ್ ಆಸ್ ಥಿಯೋಲೋಗೋಸ್: ದಿ ಇಂಪೀರಿಯಲ್ ಮಿಸ್ಟರಿಸ್ ಎಂಡ್ ದಿ ಅಪೋಕಲಿಪ್ಸಸ್’, ಜರ್ನಲ್ ಫಾರ್ ದಿ ಸ್ಟಡಿ ಆಫ್ ದಿ ನ್ಯೂ ಟೆಸ್ಟಾಮೆಂಟ್ 75 (1999), 87-102.
  15. ನಝಿಯಾಂಜುಸ್‌ನ ಗ್ರೆಗೊರಿ ಈ ಪದವನ್ನು ತನ್ನ ನಾಲ್ಕನೆ ಶತಮಾನದ ಥಿಯಾಲೋಜಿಕಲ್ ಒರೇಶನ್ಸ್ ನಲ್ಲಿ ಬಳಸಿದನು; ಆತನ ಸಾವಿನ ಬಳಿಕ, ಚಾಲ್ಸೆಡಾನ್‌ನ ಮಂಡಳಿಯಲ್ಲಿ ಆತನನ್ನು "ದೇವತಾ ಶಾಸ್ತ್ರಜ್ಞ" ಎಂದು ಕರೆಯಲಾಯಿತು. ಮತ್ತು ಆ ಬಳಿಕ ಪೂರ್ವದ ಸಾಂಪ್ರದಾಯಿಕತೆ- ಏಕೆಂದರೆ ಆತನ ಉಪನ್ಯಾಸಗಳು ಈ ರೀತಿಯ ದೇವತಾಶಾಸ್ತ್ರಕ್ಕೆ ಅತ್ಯಂತ ಮಹತ್ವದ ಉದಾಹರಣೆಗಳಾಗಿದ್ದಿರಬಹುದು ಅಥವಾ (ಬುಕ್ ಆಫ್ ರಿವಿಲೇಶನ್ ಲೇಖಕನ ಹಾಗೆ) ಆತ ಪದಗಳು ದೇವರ ಸ್ಫೂರ್ತಿ ಪಡೆದ ಬೋಧಕನ ಹಾಗೆ ಎಂಬ ಅರ್ಥದಲ್ಲಿದ್ದಿರಬಹುದು. (ನೈಸೀನ್ ಮತ್ತು ನೈಸೀನ್ ನಂತರದ ಫಾದರ್‌ಗಳು ಆತನ ದೇವತಾ ಶಾಸ್ತ್ರದ ಪ್ರವಚನ ಗಳಿಗೆ ನೀಡಿದ ಪ್ರವೇಶಿಕೆಯಲ್ಲಿ ಹೇಳಿಕೊಳ್ಳುವ ಹಾಗೆ ಕ್ರಿಸ್ತ ಪದ ದೈವಿಕತೆಯ ಸಮರ್ಥಕ ಆತ ಆಗಿದ್ದ ಎಂಬುದು ಇರಲಿಕ್ಕಿಲ್ಲ.) ನೋಡಿ ಜಾನ್ ಮೆಕ್‌ಗುಕಿನ್, ನಝಿಯಾಂಜುಸ್‌‌ನ ಸೇಂಟ್ ಗ್ರೆಗೊರಿ: ಆನ್ ಇಂಟೆಲೆಕ್ಚುಅಲ್ ಬಯಾಗ್ರಫಿ (ಕ್ರೆಸ್ಟ್‌ವುಡ್, ಎನ್‌ವೈ: ಸೆಂಟ್ ವ್ಲಾಡಿಮಿರ್‌ನ ಸೆಮಿನರಿ ಮುದ್ರಣಾಲಯ, 2001), ಪುಟ.278.
  16. ಸೇಂಟ್ ವಿಕ್ಟರ್್ನ ಹುಗ್, ಕಮೆಂಟರಿಯೋರಂ ಇನ್ ಹೇರಾರ್ಚಿಯಂ ಕೊಲೆಸ್ಟೆಮ್ , ಎಕ್ಸ್್ಪೋಸ್ಟಿಯೋ ಟು ಬುಕ್ 9: "ಥಿಯೋಲೋಜಿಯಾ, ಇದ್ ಎಸ್ಟ್, ಡಿವೈನ್ ಸ್ಕ್ರಿಪ್ಟುರಾ" ( ಮಿಗ್ನೆಸ್‌ನ ಪತ್ರೋಲೋಜಿಯಾ ಲಾಟಿನಾ ಸಂಪುಟ.175, 1091C).
  17. ಡೆ ಟ್ರಿನಿಟಟೆ 2
  18. ಜಿ.ಆರ್. ಇವಾನ್ಸ್, ಓಲ್ಡ್ ಆರ್ಟ್ಸ್ ಎಂಡ್ ನ್ಯೂ ಥಿಯಾಲಜಿ: ದಿ ಬಿಗಿನಿಂಗ್ ಆಫ್ ಥಿಯಾಲಜಿ ಆಸ್ ಎನ್ ಅಕಾಡೆಮಿಕ್ ಡಿಸಿಪ್ಲಿನ್ (ಆಕ್ಸ್‌ಫರ್ಡ್: ಕ್ಲಾರೆಂಡಾನ್ ಮುದ್ರಣಾಲಯ, 1980), 31-32.
  19. ಪೀಟರ್ ಅಬೆಲಾರ್ಡ್‌ನ ಥಿಯೋಲೋಜಿಯಾ ಕ್ರಿಸ್ಟಿಯಾನಾ , ಮತ್ತು, ಬಹುಶಃ ಅತ್ಯಂತ ಪ್ರಸಿದ್ಧವಾದ ಥಾಮಸ್ ಅಕ್ವಿನಾಸ್್ನ ಸುಮ್ಮ ಥಿಯೋಲೋಜಿಕಾ ಶೀರ್ಷಿಕೆ ನೋಡಿ
  20. ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟುವಿನ 'ಥಿಯೋಲೋಜಿ'.ಗೆ ಪ್ರವೇಶದಲ್ಲಿರುವ 'ಟಿಪ್ಪಣಿ' ನೋಡಿ
  21. ನೋಡಿ, ಉದಾಹರಣೆಗೆ, ಚಾರ್ಲ್ಸ್ ಹಾಡ್ಜ್, ಸಿಸ್ಟಮೆಟಿಕ್ ಥಿಯಾಲೋಜಿ , ಸಂ. 1, ಭಾಗ 1 (1871).
  22. ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿ, ಸೆನ್ಸ್ 1
  23. ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿ , 1989 ಆವೃತ್ತಿ, 'ಥಿಯೋಲಜಿ' ಸೆನ್ಸ್ 1(ಡಿ), ಎಂಡ್ 'ಥಿಯೋಲಾಜಿಕಲ್' ಸೆನ್ಸ್ ಎ.3; ಅತ್ಯಂತ ಹಳೆಯ ಉಲ್ಲೇಖ ನೀಡಿದ್ದು 1959 ಟೈಮ್ಸ್ ಲಿಟರರಿ ಸಪ್ಲಿಮೆಂಟ್ 5 ಜೂನ್ 329/4: "ದಿ 'ಥಿಯೋಲಾಜಿಕಲ್' ಅಪ್ರೋಚ್ ಟು ಸೋವಿಯಟ್ ಮಾರ್ಕ್ಸಿಸಂ ... ಪ್ರೂವ್ಸ್ ಇನ್ ಲಾಂಗ್ ರನ್ ಅನ್‌ಸ್ಯಾಟಿಸ್‌ಫ್ಯಾಕ್ಟರಿ."
  24. ನೋಡಿ, ಉದಾಹರಣೆಗೆ, ಜಾಕ್ಸನ್ ಮತ್ತು ಮಕ್ರನ್‌ಸ್ಕಿಯ ಬುದ್ಧಿಸ್ಟ್ ಥಿಯಾಲಜಿ (ಲಂಡನ್: ಕ್ರುಜ್, 2000)ಗೆ ವೆಸ್ಟರ್ನ್ ಬುದ್ಧಿಸ್ಟ್ ರಿವ್ಯೂ 3 ದಲ್ಲಿ ಧರ್ಮಾಚಾರಿ ನಾಗಪ್ರಿಯ ಅವರ ವಿಮರ್ಶೆ Archived 2011-03-26 ವೇಬ್ಯಾಕ್ ಮೆಷಿನ್ ನಲ್ಲಿ. ಯಲ್ಲಿ ಪ್ರಾರಂಭಿಕ ಪ್ರತಿಕ್ರಿಯೆಯನ್ನು ನೋಡಿ.
  25. ಉದಾ., ಕೌಂಟ್ ಇ ಅವರಿಂದ. ಗೋಬ್ಲೆಟ್ ಡ'ಅಲ್ವಿಯೆಲ್ಲ 1908ರಲ್ಲಿ; ನೋಡಿ ಅಲನ್ ಎಚ್. ಜೋನ್ಸ್, ಇಂಡಿಪೆಂಡನ್ಸ್ ಎಂಡ್ ಎಕ್ಸೆಗೆಸಿಸ್: ದಿ ಸ್ಟಡಿ ಆಫ್ ಅರ್ಲಿ ಕ್ರಿಶ್ಚಿಯಾನಿಟಿ ಇನ್ ದಿ ವರ್ಕ್ ಆಫ್ ಅಲ್ಫ್ರೆಡ್ ಲೋಯಿಸಿ (1857-1940), ಚಾರ್ಲ್ಸ್ ಗ್ವಿಗ್ನೆಬರ್ಟ್ (1857 [i.e. 1867]-1939), ಎಂಡ್ ಮೌರಿಸ್ ಗೋಗ್ವೆಲ್ (1880-1955) (ಮೊಹ್ರ್ ಸೀಯೆಬೆಕ್,1983), ಪು.194.
  26. ಜೋಸಿ ಇಗ್ನಾಶಿಯೋ ಕಬೆಜೋನ್, 'ಬುದ್ಧಿಸ್ಟ್ ಥಿಯಾಲಜಿ ಇನ್ ದಿ ಅಕಾಡೆಮಿ' ರೋಜರ್ ಜಾಕ್ಸನ್ ಮತ್ತು ಜಾನ್ ಜೆ. ಮಕ್ರಾನ್್ಸ್ಕಿಯ ಬುದ್ಧಿಸ್ಟ್ ಥಿಯಾಲಜಿ: ಕ್ರಿಟಿಕಲ್ ರಿಫ್ಲೆಕ್ಷನ್ಸ್ ಬೈ ಕಾಂಟೆಂಪರರಿ ಬುದ್ಧಿಸ್ಟ್ ಸ್ಕಾಲರ್ಸ್ (ಲಂಡನ್: ರೌಟ್ ಲೆಡ್ಜ್, 1999), ಪುಟಗಳು.25-52.ಇದರಲ್ಲಿ.
  27. ನೋಡಿ ಅನ್ನಾ ಎಸ್. ಕಿಂಗ್, 'ಫಾರ್ ಲವ್ ಆಫ್ ಕೃಷ್ಣ: ಫಾರ್ಟಿ ಇಯರ್ಸ್ ಆಫ್ ಚಾಂಟಿಂಗ್' ಇನ್ ಗ್ರಹಾಮ್ ಡ್ವಯರ್ ಎಂಡ್ ರಿಚರ್ಡ್ ಜೆ.ಕೋಲ್, ದಿ ಹರೇ ಕೃಷ್ಣ ಮೂವ್‌ಮೆಂಟ್: ಫಾರ್ಟಿ ಇಯರ್ಸ್ ಆಫ್ ಚಾಂಟ್ ಎಂಡ್ ಚೇಂಜ್ (ಲಂಡನ್/ನ್ಯೂ ಯಾರ್ಕ್: ಐ.ಬಿ. ಟೌರಿಸ್, 2006),ಪುಟಗಳು.134-167: ಪು.163, ಇದು ಎರಡೂ ಸಂಸ್ಥೆಗಳಲ್ಲಿಯ ಬೆಳವಣಿಗೆಗಳನ್ನು ವರ್ಣಿಸುತ್ತದೆ ಪ್ರಮುಖ ವಿಶ್ವವಿದ್ಯಾನಿಲಯಗಳಲ್ಲಿ ವೈಷ್ಣವ ದೇವತಾಶಾಸ್ತ್ರವನ್ನು ಅಭ್ಯಾಸಮಾಡುತ್ತಿರುವ ಹರೇಕೃಷ್ಣ ಭಕ್ತರ ಬಗ್ಗೆ ಹೇಳುತ್ತದೆ.
  28. ಎಲ್.ಗಾರ್ಡೆಟ್, 'ಲಿಮ್ ಅಲ್-ಕಲಂ' ದಿ ಎನ್‌ಸೈಕ್ಲೋಪಿಡಿಯಾ ಆಫ್ ಇಸ್ಲಾಂ ನಲ್ಲಿ, ಆವೃತ್ತಿ. ಪಿ.ಜೆ.ಬರ್ಮನ್ ಎ (ಲಿಡೆನ್: ಕೋನಿನ್್ಕ್ಲಿಜ್ಕೆ ಬ್ರಿಲ್ ಎನ್್ವಿ, 1999).
  29. ರಾಂಡಿ ರಕ್ಷೋವರ್, 'ಎ ಕಾಲ್ ಫಾರ್ ಜೆಯಿಸ್ ಥಿಯೋಲಜಿy', ಕ್ರಾಸ್‌ಕರೆಂಟ್ಸ್ , ವಿಂಟರ್ 1999, "ಮೇಲಿಂದ ಮೇಲೆ ಈ ಹೇಳಿಕೆಯನ್ನು ನೀಡಲಾಗುತ್ತಿದೆ, ಯಹೂದಿ ಧರ್ಮವು ಕ್ರಿಶ್ಚಿಯನ್ ಧರ್ಮದಂತೆ ಅಲ್ಲ, ಅದು ಕೃತ್ಯಗಳ ಸಂಪ್ರದಾಯಗಳು ಮತ್ತು ನಿರ್ವಹಣೆ ಮೇಲಿದೆ, ಕಟ್ಟುನಿಟ್ಟಾದ ದೇವತಾಶಾಸ್ತ್ರದ ಸಂಪ್ರದಾಯದ ಮೇಲಿಲ್ಲ.-ಹೀಗೆ ಹೇಳುವುದರಿಂದ ಆರಂಭವಾಗುತ್ತದೆ. ಯಹೂದಿ ಧರ್ಮದ ಮೂಲಭೂತ ನಂಬಿಕೆಗಳು ಅವರ ನಿಜ ಮಾರ್ಗದ ಆಚರಣೆಯ ಅಪರಿಹಾರ್ಯ ಮಾರ್ಗ (ಅದು ಯೆಹೂದಿ ದೇವರಿಂದ ಪ್ರಕಾಶಿಸಲ್ಪಟ್ಟ ಕಾನೂನುಗಳ ಕಟ್ಟು), ಆ ರೀತಿಯ ಬದುಕಿನಿಂದ ಬದುಕನ್ನು ಬದುಕಿದ್ದು ಮತ್ತು ಕಲಿತದ್ದು ಕೆತ್ತಲ್ಪಟ್ಟಿದ್ದು ಮತ್ತು ಮುಂದಾಗಿಯೇ ಊಹಿಸಿದ್ದು."
  30. ಟಿಮೋಟಿ ರೇಗನ್, ನಾನ್-ವೆಸ್ಟರ್ನ್ ಎಜುಕೇಶನಲ್ ಟ್ರೆಡಿಶನ್ಸ್: ಅಲ್ಟರ್ನೇಟಿವ್ ಅಪ್ರೋಚಸ್ ಟು ಎಜುಕೇಶನಲ್ ಥಾಟ್ ಎಂಡ್ ಪ್ರಾಕ್ಟಿಸ್ , 3ನೆ ಆವೃತ್ತಿ (ಲಾರೆನ್ಸ್ ಎರಿಬೌಮ್: 2004), ಪು.185 ಮತ್ತು ಸುನ್ನಾ ಚಿಟ್ನಿಸ್, 'ಹೈಯರ್ ಎಜುಕೇಶನ್' ಇನ್ ವೀಣಾ ದಾಸ್ (ಆವೃತ್ತಿ), ದಿ ಆಕ್ಸ್ಫರ್ಡ್ ಇಂಡಿಯಾ ಕಂಪಾನಿಯನ್ ಟು ಸೋಶಿಯಾಲಜಿ ಎಂಡ್ ಸೋಶಿಯಲ್ ಅಂಥ್ರೋಪೋಲಜಿ (ನ್ಯೂ ಡೆಲ್ಲಿ: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2003), ಪುಟಗಳು.1032-1056: ಪು.1036 ಸಜೆಸ್ಟ್ ಆನ್ ಅರ್ಲಿ ಡೇಟ್ ಎ ಮೋರ್ ಕ್ವಾಸಿಯಸ್ ಅಪ್ರೇಶಲ್ ಈಸ್ ಗಿವನ್ ಇನ್ ಹಾರ್ಟ್‌ಮಟ್ ಸ್ಕ್ರಾಫೆ, ಎಜುಕೇಶನ್ ಇನ್ ಏನ್ಸಿಯಂಟ್ ಇಂಡಿಯಾ (ಲಿಡೆನ್: ಬ್ರಿಲ್, 2002), ಪುಟಗಳು.140-142.
  31. ಜಾನ್ ದಿಲ್ಲೋನ್, ದಿ ಹೇರ್ಸ್ ಆಫ್ ಪ್ಲೇಟೋ: ಎ ಸ್ಟಡಿ ಇನ್ ದಿ ಓಲ್ಡ್ ಅಕಾಡೆಮಿ A Study in the Old Academy, 347-274BC (Oxford: OUP, 2003)
  32. ಕ್ಸಿಂಗ್‌ಜಾಂಗ್ ಯೋ, ಆನ್ ಇಂಟ್ರಡಕ್ಷನ್ ಟು ಕನ್ಫುಶಿಯನಿಸಂ (ಕೇಂಬ್ರಿಡ್ಜ್: CUP, 2000), ಪು.50.
  33. ಅಡಂ ಎಚ್.ಬೆಕರ್‌ರ, ದಿ ಫಿಯರ್ ಆಫ್ ಗಾಡ್ ಎಂಡ್ ದಿ ಬಿಗಿನಿಂಗ್ ಆಫ್ ವಿಸ್ಡಂ: ದಿ ಸ್ಕೂಲ್ ಆಫ್ ನಿಸಿಬಿಸ್ ಎಂಡ್ ದಿ ಡೆವಲಪ್‌ಮೆಂಟ್ ಆಫ್ ದಿ ಸ್ಕಾಲಸ್ಟಿಕ್ ಕಲ್ಚರ್ ಇನ್ ಲೇಟ್ ಆಂಟಿಕ್ ಮೆಸೋಪೋಟೋಮಿಯಾ (ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ, 2006); ಇದನ್ನೂ ನೋಡಿ ದಿ ಸ್ಕೂಲ್ ಆಫ್ ನಿಸಿಬಿಸಿ Nestorian.orgನಲ್ಲಿ
  34. ಹಾರ್ಟ್‌ಮಟ್ ಸ್ಕಾರ್ಫೆ, ಎಜುಕೇಶನ್ ಇನ್ ಏನ್ಸಿಯಂಟ್ ಇಂಡಿಯಾ (ಲೀಡೆನ್: ಬ್ರಿಲ್, 2002), ಪು.149.
  35. ದಿ ಅಲ್-ಕ್ವರಾವಿಯ್ಯಿನ್ ಮಸೀದಿಯನ್ನು ಕ್ರಿ.ಶ. 859ರಲ್ಲಿ ಸ್ಥಾಪಿಸಲಾಯಿತು, ಆದರೆ 'ಮಸೀದೆಯಲ್ಲಿಯ ಬೋಧನೆ ಆರಂಭದಿಂದಲೇ ಶುರುವಾಗಬೇಕಿತ್ತು, ಇದು ಏಕೈಕ.... ...ಹತ್ತನೆ ಶತಮಾನದ ಕೊನೆಯ ವೇಳೆಗೆ ಇದರ ಪ್ರತಿಷ್ಠೆಯು ಧಾರ್ಮಿಕ ಮತ್ತು ಜಾತ್ಯತೀತ ವಿಜ್ಞಾನಗಳನ್ನು ಕಲಿಸುವ ಕೇಂದ್ರವೆಂದು ಬೆಳೆಯಿತು... ಕಳೆಯೇರಲು ಪ್ರಾರಂಭವಾಗಬೇಕು.' ವೈ. ಜಿ-ಎಂ. ಲುಲತ್, ಎ ಹಿಸ್ಟರಿ ಆಫ್ ಆಫ್ರಿಕನ್ ಹೈಯರ್ ಎಜುಕೇಶನ್ ಫ್ರಾಂ ಆಂಟಿಕ್ವಿಟಿ ಟು ದಿ ಪ್ರೆಸೆಂಟ್: ಎ ಕ್ರಿಟಿಕಲ್ ಸಿಂಥೆಸಿಸ್ (ಗ್ರೀನ್‌ವುಡ್, 2005), ಪು.71
  36. ಆಂಡ್ರ್ಯೂ ಬೀಟಿ, ಕೈರೋ: ಎ ಕಲ್ಚರಲ್ ಹಿಸ್ಟರಿ (ನ್ಯೂ ಯಾರ್ಕ್: ಆಕ್ಸ್್ಫರ್ಡ್ ಯುನಿವರ್ಸಿಟಿ ಪ್ರೆಸ್, 2005), ಪು.101.
  37. ವಾಲ್ಟರ್ ರೇಗ್, ಎ ಹಿಸ್ಟರಿ ಆಫ್ ಯುನಿವರ್ಸಿಟಿ ಇನ್ ಯುರೋಪ್ , ಸಂ.1, ಆವೃತ್ತಿ. ಎಚ್. ಡೆ ರೈಡರ್-ಸಿಮೋಯೆನ್ಸ್, ಯುನಿವರ್ಸಿಟಿಸ್ ಇನ್ ದಿ ಮಿಡ್ಲ್ ಏಜಸ್ (ಕ್ಯಾಂಬ್ರಿಡ್ಜ್: ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2003).
  38. ವಾಲ್ಟರ್ ರೇಗ್, “ಥೀಮ್ಸ್” ಇನ್ ವಾಲ್ಟರ್ ರೇಗ್, ಎ ಹಿಸ್ಟರಿ ಆಫ್ ದಿ ಯುನಿವರ್ಸಿಟಿ ಇನ್ ಯುರೋಪ್ , ಸಂ.1, ಸಂಪಾದನೆ. ಎಚ್. ಡೆ ರೈಡರ್-ಸಿಮೋಯೆನ್ಸ್, ಯುನಿವರ್ಸಿಟಿಸ್ ಇನ್ ದಿ ಮಿಡ್ಲ್‌ ಏಜಸ್ (ಕ್ಯಾಂಬ್ರಿಡ್ಜ್ ಯುನಿವರ್ಸಿಟಿ ಮುದ್ರಣಾಲಯ: 2003), ಪುಟಗಳು.3–34:ಪುಟಗಳು.15-16.
  39. ನೋಡಿ ಗೇವಿನ್ ಡಿ’ಕೋಸ್ಟಾ, ಥಿಯೋಲಜಿ ಇನ್ ದಿ ಪಬ್ಲಿಕ್ ಸ್ಕ್ವೇರ್: ಚರ್ಚ್, ಅಕಾಡೆಮಿ ಆ್ಯಡ್ ನೇಶನ್ (ಆಕ್ಸ್‌ಫರ್ಡ್: ಬ್ಲಾಕ್‌ವೆಲ್, 2005), ಅಧ್ಯಾಯ.1.
  40. ಥಾಮಸ್ ಅಲ್ಬರ್ಟ್ ಹೌವಾರ್ಡ್, ಪ್ರಾಟೆಸ್ಟಂಟ್ ಥಿಯಾಲಜಿ ಎಂಡ್ ದಿ ಮೇಕಿಂಗ್ ಆಫ್ ದಿ ಮಾಡರ್ನ್ ಜರ್ಮನ್ ಯುನಿವರ್ಸಿಟಿ (ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, 2006), ಪು.56: '[ಪಿ]ಲೋಸಪಿ, ದಿ ಸೈಯೆಂಟಿಯಾ ಸೈಯೆಂಟರಂ ಇನ್ ಒನ್ ಸೆನ್ಸ್ ವಾಸ್, ಇನ್ ಅನೆದರ್, ಪೋಟ್ರೇಯ್ಡ್ ಆಸ್ ದಿ ಹಂಬಲ್ "ಹ್ಯಾಂಡ್ ಮೇಡ್ ಆಫ್ ಥಿಯಾಲಜಿ".'
  41. ನೋಡಿ ಥಾಮಸ್ ಆಲ್ಬರ್ಟ್ ಹೋವಾರ್ಡ್, ಪ್ರೊಟೆಸ್ಟಂಟ್ ಥಿಯೋಲಜಿ ಆ್ಯಂಡ್ ದಿ ಮೇಕಿಂಗ್ ಆಫ್ ದಿ ಮಾಡರ್ನ್ ಜರ್ಮನ್ ಯುನಿವರ್ಸಿಟಿ. (ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, 2006):
  42. ಸೀ ಥಾಮಸ್ ಅಲ್ಬರ್ಟ್ ಹವಾರ್ಡ್‌ನ ಕೃತಿ ಈಗಾಗಲೆ ಉಲ್ಲೇಖಿಸಲಾಗಿದೆ, ಮತ್ತು ಆತನ ಚರ್ಚೆಗಳು, ನಿದರ್ಶನಕ್ಕೆ, ಇಮ್ಮಾನುಯೆಲ್ ಕಾಂಟ್‌ನ ಕಾನ್‌ಫ್ಲಿಕ್ಟ್ ಆಫ್ ದಿ ಫ್ಯಾಕಲ್ಟಿಸ್ (1798), ಮತ್ತು ಜೆ.ಜಿ. ಫಿಚ್ಟೆಯ ಡೆಡುಜಿಯರ್ಟರ್ ಪ್ಲಾನ್ ಐನರ್ ಝು ಬರ್ಲಿನ್ ಎರಿಚ್‌ಟೆಂಡನ್ ಹೋಹೆರೆನ್ ಲೆಹ್ರಾನ್‌ಸ್ಟಾಲ್ಟ್ (1807).
  43. ನೋಡಿ, ಥಾಮಸ್ ಆಲ್ಬರ್ಟ್ ಹೋವಾರ್ಡ್, ಪ್ರಾಟೆಸ್ಟಂಟ್ ಥಿಯಾಲಜಿ ಎಂಡ್ ದಿ ಮೇಕಿಂಗ್ ಆಫ್ ದಿ ಮಾಡರ್ನ್ ಜರ್ಮನ್ ಯುನಿವರ್ಸಿಟಿ (ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, 2006);ಹಾನ್ಸ್ ಡಬ್ಲ್ಯೂ.ಫ್ರೇಯಿ, ಟೈಪ್ಸ್ ಆಫ್ ಕ್ರಿಶ್ಚಿಯನ್ ಥಿಯೋಲಜಿ , ಆವೃತ್ತಿ. ವಿಲಿಯಂ ಸಿ. ಪ್ಲಾಚೆರ್ ಮತ್ತು ಜಾರ್ಜ್ ಹುನ್‌ಸಿಂಗರ್ (ನ್ಯೂ ಪೆವನ್, ಸಿಟಿ: ಯಾಲೆ ವಿಶ್ವವಿದ್ಯಾನಿಲಯ ಮುದ್ರಣಾಲಯ, 1992); ಗೆವಿನ್ ಡಿ’ಕೋಸ್ಟಾ, ಥಿಯೋಲಜಿ ಇನ್ ದಿ ಪಬ್ಲಿಕ್ ಸ್ಕ್ವೇರ್: ಚರ್ಚ್, ಅಕಾಡೆಮಿ ಎಂಡ್ ನೇಶನ್ (ಆಕ್ಸ್‌ಫರ್ಡ್: ಬ್ಲಾಕ್‌ವೆಲ್, 2005); ಜೇಮ್ಸ್ ಡಬ್ಲ್ಯೂ. ಮೆಕ್ಲೆಂಡನ್, ಸಿಸ್ಟಮೆಟಿಕ್ ಥಿಯೋಲಜಿ 3: ವಿಟ್ನೆಸ್ (ನಾಶ್್ವಿಲ್ಲೆ, ಟಿಎನ್: ಅಬಿಗ್ಡಂನ್, 2000), ಅಧ್ಯಾಯ.10: 'ಥಿಯೋಲಜಿ ಎಂಡ್ ದಿ ಯುನಿವರ್ಸಿಟಿ'.
  44. ಫ್ರೆಡರಿಕ್ ಶ್ಲಿಯರ್್ಮೆಶರ್, ಬ್ರೀಫ್ ಔಟ್‌ಲೈನ್ ಆಫ್ ಥಿಯೋಲೋಜಿ ಆಸ್ ಎ ಫೀಲ್ಡ್ ಆಫ್ ಸ್ಟಡಿ , 2ನೆ ಆವೃತ್ತಿ, tr. ಟೆರೆನ್ಸ್ ಎನ್. ಟಿಸ್ (ಲೂಯಿಸ್ಟನ್, ಎನ್‌ವೈ: ಎಡ್ವಿನ್ ಮೆಲ್ಲೆನ್, 1990); ಥಾಮಸ್ ಅಲ್ಬರ್ಟ್ ಹೋವಾರ್ಡ್, ಪ್ರಾಟೆಸ್ಟಂಟ್ ಥಿಯೋಲೋಜಿ ಎಂಡ್ ದಿ ಮೇಕಿಂಗ್ ಆಫ್ ದ ಮಾಡರ್ನ್ ಜರ್ಮನ್ ಯುನಿವರ್ಸಿಟಿ (ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, 2006), ಅಧ್ಯಾಯ.14.
  45. ರೆಇನ್‌ಹಾರ್ಡ್ ಜಿ. ಕ್ರಾಟ್ಜ್, 'ಅಕಾಡೆಮಿಕ್ ಥಿಯಾಲಜಿ ಇನ್ ಜರ್ಮನಿ', ರಿಲಿಜನ್ 32.2 (2002): ಪುಟಗಳು.113–116.
  46. 'ಹಾರ್ವರ್ಡ್ ಕಾಲೇಜಿನ ಮೂಲ ಉದ್ದೇಶ ಕ್ರೈಸ್ತ ಪುರೋಹಿತ ವರ್ಗದ ಸದಸ್ಯರಿಗೆ ಸೂಕ್ತ ರೀತಿಯಲ್ಲಿ ತರಬೇತಿಯನ್ನು ನೀಡುವುದು,’ ಆದರೆ ‘ಆ ಶಾಲೆಯು ಎರಡು ಉದ್ದೇಶದೊಂದಿಗೆ ಕೆಲಸ ಮಾಡಿತು, ಪುರುಷರನ್ನು ಇತರ ವೃತ್ತಿವಂತಿಕೆಯ ಕೆಲಸಕ್ಕೂ ತರಬೇತುಗೊಳಿಸಿತು.’ ಜಾರ್ಜ್ ಎಂ.ಮಾರ್ಶ್್ಡೆನ್, ದಿ ಸೌಲ್ ಆಫ್ ದಿ ಅಮೆರಿಕನ್ ಯುನಿವರ್ಸಿಟಿ: ಫ್ರಾಂ ಪ್ರಾಟೆಸ್ಟಂಟ್ ಎಸ್ಟಾಬ್ಲಿಶ್‌ಮೆಂಟ್ ಟು ಎಸ್ಟಾಬ್ಲಿಶ್ಡ್ ನಾನ್‌ಬಿಲೀಫ್ (ನ್ಯೂಯಾರ್ಕ್: ಆಕ್ಸ್‌ಫರ್ಡ್ ಯುನಿವರ್ಸಿಟಿ ಮುದ್ರಣಾಲಯ, 1994), ಪು.41.
  47. ಜಾರ್ಜ್‌ಟೌನ್ ಒಂದು ಯಹೂದಿ ಶಿಕ್ಷಣ ಸಂಸ್ಥೆಯಾಗಿತ್ತು. ಮಹತ್ವದ ಭಾಗದಲ್ಲಿ ಅದರ ಸ್ಥಾಪನೆಯಾಗಿತ್ತು. ಶಿಕ್ಷಣ ಪಡೆದ ಕ್ಯಾಥೋಲಿಕ್‌ರ ಗುಂಪನ್ನು ಒದಗಿಸಿತು ಇವರಲ್ಲಿ ಕೆಲವರು ಪಾದ್ರಿ ಪದವಿ ಪಡೆಯಲು ಪೂರ್ಣ ಸೆಮಿನರಿ ತರಬೇತಿಗೆ ಹೋಗಬಲ್ಲವರಾಗಿದ್ದರು. ನೋಡಿ ರಾಬರ್ಟ್ ಎಮ್ಮೆಟ್ ಕುರ್ರಾನ್, ಲಿಯೋ ಜೆ ಒಡೊನ್ನೋವನ್, ದಿ ಬೈಸೆಂಟೆನಿಯಲ್ ಹಿಸ್ಟರಿ ಆಫ್ ಜಾರ್ಜ್‌ಟೌನ್ ಯುನಿವರ್ಸಿಟಿ: ಫ್ರಾಂ ಅಕಾಡೆಮಿ ಟು ಯುನಿವರ್ಸಿಟಿ 1789-1889 (ಜಾರ್ಜ್‌ಟೌನ್: ಜಾರ್ಜ್‌ಟೌನ್ ವಿಶ್ವವಿದ್ಯಾಲಯ ಮುದ್ರಣಾಲಯ, 1961), ಪಾರ್ಟ್ ಒನ್.
  48. ಬೋಸ್ಟನ್ ಸ್ಕೂಲ್ ಆಫ್ ಥಿಯೋಲೋಜಿಯಿಂದ ಬೋಸ್ಟನ್ ವಿಶ್ವವಿದ್ಯಾಲಯದ ಉಗಮವಾಯಿತು. ಇದೊಂದು ಮೆಥೋಡಿಸ್ಟ್ ಸೆಮಿನರಿ. ಬೋಸ್ಟನ್ ಯುನಿವರ್ಸಿಟಿ ಇನ್ಫಾರ್ಮೇಶನ್ ಸೆಂಟರ್, 'ಹಿಸ್ಟರಿ - ದಿ ಅರ್ಲಿ ಇಯರ್ಸ್' [೪] Archived 2012-07-31 ವೇಬ್ಯಾಕ್ ಮೆಷಿನ್ ನಲ್ಲಿ.
  49. ಯಾಲೆಯ ಮೂಲ 1710ರ ಸನ್ನದು ಉದ್ದೇಶದ ಬಗ್ಗೆ ಹೀಗೆ ಹೇಳುತ್ತದೆ, 'ಕ್ರಿಶ್ಚಿಯನ್ ಪ್ರಾಟೆಸ್ಟಂಟ್ ಧರ್ಮವನ್ನು ಪ್ರಾಮಾಣಿಕತೆ, ವಿಶ್ವಾಸ ಮತ್ತು ಬಯಕೆಯಿಂದ ಎತ್ತಿಹಿಡಿದು ಪ್ರಚಾರ ಮಾಡುವುದಕ್ಕಾಗಿ ವಿದ್ವಾಂಸರು ಮತ್ತು ಸಾಂಪ್ರದಾಯಿಕರ ಉತ್ತರಾಧಿಕಾರತ್ವದಿಂದ' ಮತ್ತು ಆ 'ಯುವಕರು ಕಲೆ ಮತ್ತು ವಿಜ್ಞಾನದಲ್ಲಿ ತರಬೇತು ಪಡೆದಿರಬೇಕು (ಮತ್ತು) ಸರ್ವಶಕ್ತ ದೇವರ ಆಶೀರ್ವಾದದ ಮೂಲಕ ,ಸಾರ್ವಜನಿಕ ಸೇವೆಯ ಹುದ್ದೆಗಳಿಗೆ ಚರ್ಚುಗಳಲ್ಲಿ ಮತ್ತು ಸರ್ಕಾರದ ಸೇವೆಯಲ್ಲಿ ನೇಮಿಸಬಹುದು.' 'ಕಾಲೇಜಿಗೇಟ್ ಸ್ಕೂಲ್‌ನ ಸನ್ನದು, ಅಕ್ಟೋಬರ್ 1701' ಇನ್ ಫ್ರಾಂಕ್ಲಿನ್ ಬೌಡಿಚ್ ಡೆಕ್ಸಟರ್, ಡಾಕ್ಯುಮೆಂಟರಿ ಹಿಸ್ಟರಿ ಆಫ್ ಯಾಲೆ ಯುನಿವರ್ಸಿಟಿ, ಅಂಡರ್ ದಿ ಒರಿಜಿನಲ್ ಚಾರ್ಟರ್ ಆಫ್ ದಿ ಕಾಲೇಜಿಗೇಟ್ ಸ್ಕೂಲ್ ಆಫ್ ಕಾನೆಕ್ಟಿಕಟ್ 1701-1745 (ನ್ಯೂ ಹೆವನ್, ಸಿಟಿ: ಯಾಲೆ ವಿಶ್ವವಿದ್ಯಾಲಯ ಮುದ್ರಣಾಲಯ, 1916); ಆನ್್ಲೈನ್‌ನಲ್ಲಿ ಲಭ್ಯವಿದೆ [೫]
  50. ಪ್ರಿನ್ಸ್‌ಟನ್‌ನಲ್ಲಿ, ಸಂಸ್ಥಾಪಕರಲ್ಲಿ ಒಬ್ಬರು (ಬಹುಶಃ ಎಬೆನೀಝೆರ್ ಪೆಂಬರ್ಟನ್) 1750ರಲ್ಲಿ ಹೀಗೆ ಬರೆದರು, ‘ನಮ್ಮ ಮಹತ್ವದ ಉದ್ದೇಶವು ಗೋಸ್ಪೆಲ್್ನ ಕ್ರೈಸ್ತ ಪುರೋಹಿತರಿಗೆ ಶಿಕ್ಷಣ ನೀಡಲು ಸೆಮಿನರಿಯೊಂದನ್ನು ನಿರ್ಮಿಸುವುದಾಗಿದ್ದರೂ, ಇದು ಇತರ ಪರಿಣತ ವೃತ್ತಿವಂತಿಕೆಗೂ ಉಪಯುಕ್ತವಾಗುವುದೆಂದು ಆಶಿಸುತ್ತೇವೆ- ಸರ್ಕಾರಕ್ಕೂ ಮತ್ತು ಚರ್ಚಿಗೂ ಆಭರಣವಾಗಲೆಂದು ಆಶಿಸುತ್ತೇವೆ. ಆದ್ದರಿಂದ ನಾವು ನಮ್ಮ ಸಂದರ್ಭ ಸನ್ನಿವೇಶಗಳು ಅವಕಾಶ ಒದಗಿಸುವ ವ್ಯಾಪಕವಾದ ಶಿಕ್ಷಣವನ್ನು ನೀಡುವ ಯೋಜನೆಯ ಪ್ರಸ್ತಾಪವನ್ನು ಮಾಡಿದ್ದೇವೆ.’ ಅಲೆಕ್ಸಾಂಡರ್ ಲೆಯಿಟ್ಚ್‌ನಲ್ಲಿ ಉಲ್ಲೇಖಿಸಿದ್ದು, ಎ ಪ್ರಿನ್ಸ್‌ಟನ್ ಕಂಪಾನಿಯನ್' Archived 2015-08-26 ವೇಬ್ಯಾಕ್ ಮೆಷಿನ್ ನಲ್ಲಿ. (ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಮುದ್ರಣಾಲಯ, 1978).
  51. ನೋಡಿ [೬] Archived 2010-11-02 ವೇಬ್ಯಾಕ್ ಮೆಷಿನ್ ನಲ್ಲಿ.'ಅವರ್ ಸ್ಟೋರಿ' ಕ್ಯಾಥೋಲಿಕ್ ಥಿಯಾಲಜಿಕಲ್ ಯೂನಿಯನ್ ವೆಬ್‌ಸೈಟ್ (ಲಭ್ಯ 29 ಆಗಸ್ಟ್ 2009): 'ದೇವರ ಜನರ ಸೇವೆಗಾಗಿ ಪುರುಷರು ಮತ್ತು ಮಹಿಳೆಯರು, ಧಾರ್ಮಿಕ ಸಹೋದರಿಯರು ಮತ್ತು ಸಹೋದರರು, ಮತ್ತು ವೃತ್ತಿಶಿಕ್ಷಣ ಕಾಲೇಜಿನಲ್ಲಿ ಕಲಿತವರು ಅದರ ಜೊತೆಯಲ್ಲಿಯೇ ಅಭ್ಯಾಸ ಮಾಡಿದವರು ಸಿದ್ಧತೆ ನಡೆಸಿದ್ದಾರೆ.'.
  52. ನೋಡಿ 'ಅಬೌಟ್ ದಿ GTU' ಗ್ರಾಜುಯೇಟ್ ಥಿಯಾಲೋಜಿಕಲ್ ಯೂನಿಯನ್ ವೆಬ್‌ಸೈಟಿನಲ್ಲಿ (ಲಭ್ಯ 29 ಆಗಸ್ಟ್ 2009): 'ಕಲಿಸುವುದು, ಸಂಶೋಧನೆ, ಕ್ರೈಸ್ತ ಪೌರೋಹಿತ್ಯ, ಮತ್ತು ಸೇವೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸಮರ್ಪಿತರಾಗಿದ್ದಾರೆ'.
  53. ನೋಡಿ 'ನಮ್ಮ ಬಗ್ಗೆ' Archived 2010-04-26 ವೇಬ್ಯಾಕ್ ಮೆಷಿನ್ ನಲ್ಲಿ. ಕ್ರಿಸ್‌ವೆಲ್ ಕಾಲೇಜ್ ವೆಬ್‌ಸೈಟಿನಲ್ಲಿ (ಲಭ್ಯ 29 ಆಗಸ್ಟ್ 2009): 'ಕ್ರಿಸ್‌ವೆಲ್ ಕಾಲೇಜ್ ದೇವರೆಂದು ಕರೆಯಲ್ಪಡುವ ಪುರುಷರನ್ನು ಮಹಿಳೆಯರನ್ನು ಸಿದ್ಧಗೊಳಿಸುವ ಮೂಲಕ ಲಾರ್ಡ್ ಜೀಸಸ್ ಕ್ರೈಸ್ತನ ಚರ್ಚುಗಳ ಸೇವೆಯನ್ನು ಮಾಡುವುದಕ್ಕಾಗಿ ಇರುವುದು. ಈ ಪದದಲ್ಲಿ (ಬೌದ್ಧಿಕವಾಗಿ ಮತ್ತು ಶೈಕ್ಷಣಿಕವಾಗಿ ) ಮತ್ತು ಈ ಪದದ ಮೂಲಕ (ವೃತ್ತಿವಂತಿಕೆಯಲ್ಲಿ ಮತ್ತು ಆಧ್ಯಾತ್ಮಿಕವಾಗಿ) ವಿಶ್ವಾಸಾರ್ಹ ಪುರೋಹಿತರ ನಾಯಕತ್ವಕ್ಕಾಗಿ'.
  54. ನೋಡಿ 'ಮಿಶನ್ ಸ್ಟೇಟ್‌ಮೆಂಟ್' Archived 2015-03-29 ವೇಬ್ಯಾಕ್ ಮೆಷಿನ್ ನಲ್ಲಿ. ಎಸ್‌ಬಿಟಿಎಸ್ ವೆಬ್‌ಸೈಟಿನಲ್ಲಿ (ಲಭ್ಯ 29 ಆಗಸ್ಟ್ 2009): ' ಸದರ್ನ್ ಬ್ಯಾಪ್ಟಿಸ್ಟ್ ಥಿಯೋಲಜಿಕಲ್ ಸೆಮಿನರಿಯ ಮತಪ್ರಚಾರಕ ತಂಡದ ... ಸದರ್ನ್ ಬ್ಯಾಪ್ಟಿಸ್ಟ್ ಚರ್ಚುಗಳ ಸೇವೆಯ ತರಬೇತಿ, ಕಲಿಸಿಕೊಡುವುದು ಮತ್ತು ಗಾಸ್ಪೆಲ್‌ಗೆ ಹೆಚ್ಚು ನಿಷ್ಠೆಯ ಸೇವೆಗಾಗಿ ಧರ್ಮಪ್ರಚಾರಕರನ್ನು ಸಿದ್ಧಗೊಳಿಸುವುದು.ಈ ಮೂಲಕ ಅದೊಂದು ಸೇವಕ.'
  55. ನೋಡಿ 'ಅಬೌಟ್ ಟ್ರಿನಿಟಿ ಎವೆಂಜಿಕಲ್ ಡಿವಿನಿಟಿ ಸ್ಕೂಲ್' Archived 2011-08-30 ವೇಬ್ಯಾಕ್ ಮೆಷಿನ್ ನಲ್ಲಿ. ಅವರ ವೆಬ್‌ಸೈಟಿನಲ್ಲಿ (ಲಭ್ಯ 29 ಆಗಸ್ಟ್ 2009): 'ಟ್ರಿನಿಟಿ ಇವಾಂಜಿಕಲ್ ಡಿವಿನಿಟಿ ಸ್ಕೂಲ್(ಟಿಇಡಿಎಸ್) ಒಂದು ಕಲಿಯುವ ಸಮುದಾಯ, ಗ್ಲೋಬಲ್ ಚರ್ಚ್‌ನ ಸೇವಾನಾಯಕರಿಗಾಗಿ ಸಮರ್ಪಿಸಿಕೊಂಡಿರುವ, ಕ್ರೈಸ್ತನ ರಾಜ್ಯಕ್ಕಾಗಿ ಸಮಕಾಲೀನ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕವಾಗಿ, ಬೈಬಲ್ಲಿನ ರೀತಿಯಲ್ಲಿ ಮತ್ತು ದೇವತಾಶಾಸ್ತ್ರೀಯವಾಗಿ ಸಿದ್ಧತೆಯಲ್ಲಿ ತೊಡಗಿಕೊಂಡಿರುವ ನಾಯಕರು.
  56. ನೋಡಿ 'ಅಬೌಟ್ ಡಿಟಿಎಸ್' ಡಲ್ಲಾಸ್ ಥಿಯಾಲಜಿಕಲ್ ಸೆಮಿನರಿ ವೆಬ್‌ಸೈಟಿನಲ್ಲಿ (ಪ್ರವೇಶ 29 ಆಗಸ್ಟ್ 2009): 'ಡಲ್ಲಾಸ್‌ನಲ್ಲಿ, ಬೈಬಲ್ಲಿನ ವಿದ್ವಾಂಸರ ಅಧ್ಯಯನ ಮತ್ತು ಸಂಬಂಧಿಸಿದ ವಿಷಯಗಳು ಆಧ್ಯಾತ್ಮಿಕ ಬದುಕಿನೊಂದಿಗೆ ಪ್ರತ್ಯೇಕಿಸಲಾರದ ರೀತಿಯಲ್ಲಿ ಬೆಸೆದುಕೊಂಡಿದೆ. ಸ್ಫೂರ್ತಿಯ ದೇವರ ಶಕ್ತಿಯಲ್ಲಿ ದೇವರ ಮಾತನ್ನು ಸಂವಹನ ಗೊಳಿಸಲು ವಿದ್ಯಾರ್ಥಿಗಳನ್ನು ತರಬೇತುಗೊಳಿಸುವುದಕ್ಕಾಗಿ ಇವೆಲ್ಲವನ್ನೂ ವಿನ್ಯಾಸಗೊಳಿಸಲಾಗಿದೆ.'
  57. ನೋಡಿ 'ವ್ಹೈ ಸ್ಟಡಿ ಥಿಯಾಲಜಿ?' Archived 2009-08-09 ವೇಬ್ಯಾಕ್ ಮೆಷಿನ್ ನಲ್ಲಿ. ಎಕ್ಸೆಟರ್ ವಿಶ್ವವಿದ್ಯಾನಿಲಯದ ಪುಟ (1 ಸೆಪ್ಟೆಂಬರ್ 2009 ರಲ್ಲಿ ಪ್ರವೇಶ ಲಭ್ಯ), ಮತ್ತು 'ಅಬೌಟ್ ಅಸ್' Archived 2008-05-05 ವೇಬ್ಯಾಕ್ ಮೆಷಿನ್ ನಲ್ಲಿ. ಯುನಿವರ್ಸಿಟಿ ಆಫ್ ಲೀಡ್ಸ್‌ನಲ್ಲಿಯ ಪುಟ.
  58. ನೋಡಿ, ಉದಾಹರಣೆಗೆ, ಡೊನಾಲ್ಡ್ ವೈಬೆ, ದಿ ಪಾಲಿಟಿಕ್ಸ್ ಆಫ್ ರಿಲಿಜಿಯಸ್ ಸ್ಟಡಿಸ್: ದಿ ಕಂಟಿನ್ಯೂಯಿಂಗ್ ಕಾನ್‌ಫ್ಲಿಕ್ಟ್ ವಿಥ್ ಥಿಯಾಲಜಿ ಇನ್ ದಿ ಅಕಾಡೆಮಿ (ನ್ಯೂ ಯಾರ್ಕ್: ಪಾಲ್‌ಗ್ರೇವ್ ಮ್ಯಾಕ್‌ಮಿಲನ್, 2000).
  59. ನೋಡಿ ಕೆ.ಎಲ್.ನೋಲ್ಲ್, 'ದಿ ಎಥಿಕ್ಸ್ ಆಫ್ ಬೀಯಿಂಗ್ ಎ ಥಿಯೋಲೋಜಿಯನ್', ಕ್ರಾನಿಕಲ್ ಆಫ್ ಹೈಯರ್ ಎಜುಕೇಶನ್ , ಜುಲೈ 27, 2009.
  60. ಡೇವಿಡ್ ಫೋರ್ಡ್ ನೋಡಿ, 'ಥಿಯಾಲಜಿ ಎಂಡ್ ರಿಲಿಜಿಯಸ್ ಸ್ಟಡಿಸ್ ಫಾರ್ ಎ ಮಲ್ಟಿಫೇಥ್ ಎಂಡ್ ಸೆಕ್ಯುಲರ್ ಸೊಸೈಟಿ' ಡಿ.ಎಲ್. ಬರ್ಡ್ ಮತ್ತು ಸಿಮೊನ್ ಜಿ. ಸ್ಮಿಥ್ (ಆವೃತ್ತಿ)ಗಳಲ್ಲಿ, ಥಿಯಾಲಜಿ ಎಂಡ್ ರಿಲಿಜಿಯಸ್ ಸ್ಟಡಿಸ್ ಇನ್ ಹೈಯರ್ ಎಜುಕೇಶನ್ (ಲಂಡನ್: ಕಂಟಿನ್ಯೂಮ್, 2009).
  61. ಟಿಮೋಥಿ ಫಿಟ್ಜ್‌ಗೆರಾಲ್ಡ್, ದಿ ಐಡಿಯಾಲಜಿ ಆಫ್ ರಿಲಿಜಿಯಸ್ ಸ್ಟಡಿಸ್ (ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮುದ್ರಣಾಲಯ, 2000).
  62. ಪ್ರೋಟಾಗೋರಾಸ್, fr.4, ಆನ್ ದಿ ಗಾಡ್ಸ್ ದಿಂದ, ಅನುವಾದ. ಮೈಕೇಲ್ ಜೆ. ಓ'ಬ್ರಿಯಾನ್ ದಿ ಓಲ್ಡರ್ ಸೋಫಿಸ್ಟ್ಸ್ ನಲ್ಲಿ, ಆವೃತ್ತಿ. ರೋಸಮುಂದ್ ಕೆಂಟ್ ಸ್ಪ್ರಾಗ್ಯೂ (ಕೋಲಂಬಿಯಾ: ದಕ್ಷಿಣ ಕೊರೋಲಿನಾ ವಿಶ್ವವಿದ್ಯಾಲಯದ ಮುದ್ರಣಾಲಯ, 1972), 20, ಸ್ವರಭಾರ ಸೇರಿಸಲಾಗಿದೆ. Cf. ಕರೋಲ್ ಪೊಸ್ಟರ್, "ಪ್ರೋಟೋಗೋರಾಸ್ (fl. 5th C. BCE)" ದಿ ಇಂಟರ್ನೆಟ್ ಎನ್್ಸೈಕ್ಲೋಪೀಡಿಯಾ ಆಫ್ ಫಿಲಾಸಫಿ ಯಲ್ಲಿ; ಓದಲು ಅವಕಾಶ: ಅಕ್ಚೋಬರ್ 6, 2008.
  63. ಥಾಮಸ್ ಪೈನೆ, ದಿ ಏಜ್ ಆಫ್ ರೀಸನ್, "ದಿ ಲೈಫ್ ಆ್ಯಂಡ್ ಮೇಜರ್ ರೈಟಿಂಗ್ಸ್ ಆಫ್ ಥಾಮಸ್ ಪೈನೆ", ಆವೃತ್ತಿಯಿಂದ. ಫಿಲಿಪ್ ಎಸ್. ಫೊನ್ನರ್, (ನ್ಯೂ ಯಾರ್ಕ್, ದಿ ಸಿಟಾಡೆಲ್ ಪ್ರೆಸ್, 1945) ಪುಟ 601
  64. ಲಡ್‌ವಿಗ್ ಫ್ಯೂಅರ್ ಬಾಕ್, ಪ್ರಿನ್ಸಿಪಲ್ಸ್ ಆಫ್ ದಿ ಫಿಲಾಸಫಿ ಆಫ್ ದಿ ಫ್ಯೂಚರ್,, ಟ್ರಾನ್ಸ್. ಮ್ಯಾನ್‌ಫ್ರೆಡ್ ಎಚ್.ವೊಗೆಲ್, (ಇಂಡಿಯಾನಾಪೊಲೀಸ್, ಹ್ಯಾಕೆಟ್ ಪಬ್ಲಿಶಿಂಗ್ ಕಂಪನಿ, 1986) ಪುಟ 5
  65. ಲಡ್‌ವಿಗ್ ಫ್ಯೂಅರ್ ಬಾಕ್, ದಿ ಎಸ್ಸೆನ್ಸ್ ಆಫ್ ಕ್ರಿಶ್ಚಿಯಾನಿಟಿ, ಟ್ರಾನ್ಸ್. ಜಾರ್ಜ್ ಇಲಿಯಟ್, (ಆಮ್‌ಹರ್ಸ್ಟ್, ನ್ಯೂ ಯಾರ್ಕ್, ಪ್ರೊಮೆಥಿಯಸ್ ಬುಕ್ಸ್, 1989) ಪ್ರಿಫೇಸ್, XVI
  66. ಎ.ಜೆ.ಅಯ್ಯರ್ , ಲ್ಯಾಂಗ್ವೇಜ್, ಟ್ರುಥ್ ಎಂಡ್ ಲಾಜಿಕ್, (ನ್ಯೂ ಯಾರ್ಕ್, ಡೋವರ್ ಪಬ್ಲಿಕೇಶನ್ಸ್, 1936) ಪುಟ 114-115
  67. ವಾಲ್ಟರ್ ಕೌಫ್‌ಮನ್, ದಿ ಫೇಥ್ ಆಫ್ ಎ ಹೆರೆಟಿಕ್, (ಗಾರ್ಡನ್ ಸಿಟ್, ನ್ಯೂ ಯಾರ್ಕ್, ಆಂಕರ್ ಬುಕ್ಸ್, 1963) ಪುಟ 114, 127-128, 130
  68. http://www.dristantobad.fineartsbd.com
Wikiversity
Wikiversity
At Wikiversity you can learn more and teach others about ದೇವತಾಶಾಸ್ತ್ರ at: