ಸ್ನಾರ್ಕ್ಲಿಂಗ್ (ಉಸಿರುಕೊಳವೆಯನ್ನು ಕಟ್ಟಿಕೊಂಡು ಈಜುವುದು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫಿಜಿಯ ಬಳಿಯಿರುವ ಹವಳದ ಬಂಡೆಗಳ ಮೇಲೆ ಹವಳಗಳ ಮಧ್ಯದಲ್ಲಿರುವ ಸ್ನಾರ್ಕಲರ್.

ಸ್ನಾರ್ಕ್ಲಿಂಗ್ (ಬ್ರಿಟಿಷ್ ಉಚ್ಚರಣೆ: ಸ್ನಾರ್ಕೆಲಿಂಗ್ )ಎಂಬುದು ಜಲರಾಶಿಯ ಮೂಲಕ ಅಥವಾ ಅದರ ಮೇಲೆ ,ನೇರವಾಗಿ ನೀರಿಗಿಳಿಯುವ ಡೈವಿಂಗ್ ಮುಖವಾಡ ಧರಿಸಿಕೊಂಡು ಈಜುವುದನ್ನು ಅಭ್ಯಾಸ ಮಾಡುವುದಾಗಿದೆ. ಈ ಡೈವಿಂಗ್ ಮುಖವಾಡವನ್ನು ಕೊಳವೆಯಾಕಾರದಲ್ಲಿರುವ ಉಸಿರುಕೊಳವೆ ಎಂದು ಕರೆಯಲಾಗುತ್ತದೆ. ಅಲ್ಲದೇ ಈಜು ರೆಕ್ಕೆಗಳು ಎಂದೂ ಕರೆಯಲಾಗುತ್ತದೆ. ತಣ್ಣೀರಿನಕೊಳಗಳಲ್ಲಿ,ಒದ್ದೆಯಾಗದ ನೀರಿಳಿಯದ ಉಡುಪುನ್ನು ಧರಿಸಬಹುದು. ಈ ಸಾಧನದ ಬಳಕೆಯು , ಉಸಿರುಕೊಳವೆ ಧರಿಸಿಕೊಂಡು ಈಜುವವನಿಗೆ ನಿರಾಯಾಸವಾಗಿ ನೀರೊಳಗಿನ ಆಕರ್ಷಣೆಯನ್ನು ಹೆಚ್ಚು ಕಾಲದವರೆಗೆ ವೀಕ್ಷಿಸುವ ಅವಕಾಶವನ್ನು ನೀಡುತ್ತದೆ.

ಸ್ನಾರ್ಕ್ಲಿಂಗ್ , ಪ್ರಖ್ಯಾತ ಮನರಂಜನ ಚಟುವಟಿಕೆಯಾಗಿದೆ, ವಿಶೇಷವಾಗಿ ಇದು ಉಷ್ಣವಲಯದ ರೆಸಾರ್ಟ್ಗಳಲ್ಲಿ ಹಾಗು ಅಂತರ್ಜಲ ಶ್ವಾಸೋಪಕರಣ ಬಳಸಿಕೊಂಡು ನೀರಿನಲ್ಲಿ ಈಜುವಂತಹ ಸ್ಥಳಗಳಲ್ಲಿ ಹೆಚ್ಚಾಗಿರುತ್ತದೆ. ಇದರ ಪ್ರಮುಖ ಆಕರ್ಷಣೆಯೆಂದರೆ , ನೀರೊಳಗಿರುವ ಜೀವಜಗತ್ತನ್ನು ಕಷ್ಟಕರವಾದ ಸಾಧನವಿಲ್ಲದೆ ,ಹಾಗು ಅಂತರ್ಜಲ ಶ್ವಾಸೋಪಕರಣವನ್ನು ಧರಿಸಿಕೊಂಡು ನೀರಿನಲ್ಲಿ ಈಜಲು ಪಡೆಯಬೇಕಾದ ತರಬೇತಿಯಿಲ್ಲದೆ, ಮತ್ತು ಅಂತರ್ಜಲ ಶ್ವಾಸೋಪಕರಣದಿಂದ ಹೊರಬರುವ ಗುಳ್ಳೆಗಳಿಲ್ಲದೆ , ಸಹಜರೀತಿಯಲ್ಲಿ ನೋಡುವ ಅವಕಾಶವಾಗಿದೆ.

ಸ್ನಾರ್ಕ್ಲಿಂಗ್ ಅನ್ನು ,ಸ್ಕೂಬ ಈಜುಗಾರರು ಮೇಲಿರುವಾಗ , ತಂಡಗಳನ್ನು ಹುಡುಕಲು ಮತ್ತು ರಕ್ಷಿಸಲು ಉಸಿರುಕೊಳವೆಯನ್ನು ಜಲ ಆಧಾರಿಯ ಹುಡುಕಾಟದ ಭಾಗವೆಂಬಂತೆ ಬಳಸಿಕೊಳ್ಳುತ್ತಾರೆ. ಜನಪ್ರಿಯ ಕ್ರೀಡೆಗಳಲ್ಲಿ ಮುಕ್ತಾಯ ಎಂಬ ಅರ್ಥವನ್ನು ಕೊಡುತ್ತದೆ. ಉದಾಹರಣೆಗೆ , ನೀರಿನೊಳಗೆ ಆಡುವ ಹಾಕಿ, [[ನೀರಿನೊಳಗೆ ಆಡುವ ಐಸ್ ಹಾಕಿ]], ನೀರಿನೊಳಗಿನ ರಗ್ಬಿ ಹಾಗು ಮೀನುಭರ್ಜಿ.

ಉಸಿರುಕೊಳವೆ[ಬದಲಾಯಿಸಿ]

ಗುಂಡಿ ಕವಾಟವಿಲ್ಲದ , ಆದರೆ ಸ್ಪ್ಲ್ಯಾಶ್ ಗಾರ್ಡ್ ಅನ್ನು ಮೇಲೆ ಹೊಂದಿರುವ ಈಜುಗಾರರ ಉಸಿರುಕೊಳವೆ.

ಈಜುಗಾರರ ಉಸಿರುಕೊಳವೆ ಕೊಳವೆಯಾಕಾರದಲ್ಲಿದ್ದು , ಸಾಮಾನ್ಯವಾಗಿ 30 ಸೆಂಟಿಮೀಟರ್ ಗಳಷ್ಟು ಉದ್ದವಾಗಿರುತ್ತವೆ ಹಾಗು ಒಳಗೆ 1.5 ಮತ್ತು 2.5 ಸೆಂಟಿಮೀಟರ್ ಗಳ ನಡುವಿನ ವ್ಯಾಸವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ L- ಅಥವಾ J-ಆಕಾರದಲ್ಲಿರುತ್ತದೆ.ಅಲ್ಲದೇ ಕೆಳಗಿನ ತುದಿಯಲ್ಲಿ ಬಾಯಿಕೊಳವಿಯನ್ನು ಅಳವಡಿಸಲಾಗಿರುತ್ತದೆ.ಅಲ್ಲದೇ ಇದನ್ನು ರಬ್ಬರ್ ಅಥವಾ ಪ್ಲ್ಯಾಸ್ಟಿಕ್ ನಿಂದ ಮಾಡಲಾಗಿರುತ್ತದೆ. ಇದನ್ನು ಉಸಿರುಕೊಳವೆ ಹಾಕಿಕೊಂಡಿರುವವನ ಬಾಯಿ ಹಾಗು ಮೂಗು ಮುಳುಗಿದಾಗ, ನೀರಿನ ಮೇಲ್ಮೈನಿಂದ ಗಾಳಿಯನ್ನು ತೆಗೆದುಕೊಂಡು ಉಸಿರಾಡಲು ಬಳಸಲಾಗುತ್ತದೆ. ಉಸಿರುಕೊಳವೆ, ಸಾಮಾನ್ಯವಾಗಿ ಒಂದು ರಬ್ಬರಿನ ತುಂಡನ್ನು ಹೊಂದಿರುತ್ತದೆ. ಈ ರಬ್ಬರು ಡೈವಿಂಗ್ ಮುಖವಾಡದ ಹೊರಗಿನ ಪಟ್ಟಿಯ ಮೂಲಕ ಉಸಿರುಕೊಳವೆಗೆ ಹೊಂದಿಕೊಂಡಿರುತ್ತದೆ. ಹಳೆಯ ವಿಧಾನದಲ್ಲಿ ಉಸಿರುಕೊಳವೆಯನ್ನು, ಮುಖವಾಡಪಟ್ಟಿಯ ಹಾಗು ತಲೆಯ ನಡುವೆ ಧರಿಸಲಾಗುತ್ತಿತ್ತು. ಆದರೆ ಮೊದಲ ಈ ಬಳಕೆಯಲ್ಲಿ ಮುಖವಾಡದೊಳಗೆ ನೀರು ಒಳನುಗ್ಗುವ ಸಾಧ್ಯತೆ ಹೆಚ್ಚಿತ್ತು.

ಸರಳವಾದ ಕೊಳವೆ ಉಸಿರುಕೊಳವೆಯ ಸಾಮಾನ್ಯ ವಿಧವಾಗಿದೆ. ಇದು ನೀರಿನೊಳಗೆ ಇರುವಾಗ ನೀರು ಒಳಬರಲು ಅವಕಾಶವನ್ನು ನೀಡುತ್ತದೆ. ಸ್ನಾರ್ಕಲರ್ ಉಸಿರುಕೊಳವೆಯ ಮೂಲಕ ನೀರನ್ನು ಹೊರಹಾಕಬಹುದು, ಇಲ್ಲವೇ ಮೇಲಕ್ಕೆ ಬರುವಾಗ ಆಳವಾಗಿ ಉಸಿರು ಬಿಡುವುದರ ಮೂಲಕ (ಬ್ಲಾಸ್ಟ್ ಕ್ಲಿಯರಿಂಗ್ ) ಅಥವಾ ಮೇಲಕ್ಕೆ ಹೋಗುವ ಮೊದಲು ತಲೆಯನ್ನು ಹಿಂದಕ್ಕೆ ಬಾಗಿಸುವುದರ ಮೂಲಕವೂ ನೀರನ್ನು ಹೊರಹಾಕಬಹುದು,ಹಾಗು ಮೇಲಕ್ಕೆ ಹೋಗುವವರೆಗು ಹೊರಹಾಕುವ ಮೂಲಕ ಅಥವಾ ಮೇಲ್ಮೈಅನ್ನು "ಒಡೆಯುವ ಮೂಲಕ" (ಡಿಸ್ ಪ್ಲೇಸ್ ಮೆಂಟ್ ಮೆಥೆಡ್ ) ಹಾಗು ಮುಂದಿನ ಉಸಿರನ್ನು ತೆಗೆದುಕೊಳ್ಳುವ ಮೊದಲು ಮತ್ತೆ ಮುಂದಕ್ಕೆ ಮುಖಮಾಡಿ ನೀರನ್ನು ಹೊರಹಾಕಬಹುದು. ಡಿಸ್ ಪ್ಲೇಸ್ ಮೆಂಟ್ ಮೆಥೆಡ್(ಸ್ಥಳಾಂತರ ವಿಧಾನ), ಉಸಿರುಕೊಳವೆಯಲ್ಲಿ ನೀರನ್ನು ಸ್ಥಳಾಂತರಗೊಳಿಸುವ ಮೂಲಕ ಗಾಳಿಯ ಜೊತೆಯಲ್ಲಿ ನೀರನ್ನು ಹೊರಹಾಕುತ್ತದೆ; ಇದು ಅತ್ಯಂತ ಮುಂದುವರೆದ ವಿಧಾನವಾಗಿದೆ. ಆದರೆ ಉಸಿರುಕೊಳವೆಯನ್ನು ಸ್ವಚ್ಛ ಗೊಳಿಸುತ್ತದೆ.

ಪ್ರಮುಖ ಸ್ಥಾನದಲ್ಲಿ ಕಾಣುವ ಗುಂಡಿಕವಾಟವನ್ನು ಹೊಂದಿರುವ ಉಸಿರುಕೊಳವೆಯ ಜೊತೆಯಲ್ಲಿ ನೀರೊಳಗಿರುವ ಸ್ನಾರ್ಕಲರ್ .

ಕೆಲವು ಆಧುನಿಕ ಉಸಿರುಕೊಳವೆಗಳು ಬಾಯಿಕೊಳವಿಯಲ್ಲಿ ಗುಂಡಿಯನ್ನು ಹೊಂದಿರುತ್ತವೆ.ಈ ಗುಂಡಿಗಳು ಸ್ನಾರ್ಕಲರ್ ಉಸಿರಾಡುವಾಗ ಉಸಿರೆಳೆದುಕೊಳ್ಳದೆಯೇ ಉಸಿರುಕೊಳವೆಯಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಉಳಿಯುವಂತೆ ಮಾಡುತ್ತವೆ. ಕೆಲವು ಉಸಿರುಕೊಳವೆಗಳು ಗುಂಡಿ ಯಲ್ಲಿ ಒಮ್ಮಾರ್ಗದ ಕವಾಟವನ್ನು ಹೊಂದಿರುತ್ತವೆ. ಗುಂಡಿ ತುಂಬಿದಾಗಲೆಲ್ಲಾ ಈ ಕವಾಟಗಳು ಗುಂಡಿಯನ್ನು ಬರಿದುಮಾಡುತ್ತದೆ. ಕೆಲವು ಉಸಿರುಕೊಳವೆಗಳು ತೇಲುತ್ತ ಕಾರ್ಯನಿರ್ವಹಿಸುವ ಕವಾಟಗಳನ್ನು ಹೊಂದಿರುತ್ತವೆ . ಸ್ನಾರ್ಕಲರ್ ನೀರಿನಲ್ಲಿ ಮುಳುಗಿದಾಗ ನೀರನ್ನು ಹೊರಗಿರಿಸಲು ಇವು ಕೊಳವೆಯ ಮೇಲಿನ ತುದಿಯನ್ನು ಕೂಡಿಕೊಂಡಿರುತ್ತವೆ.ಅಲ್ಲದೇ ಇತ್ತೀಚಿನ ಹೆಚ್ಚು ವಿನ್ಯಾಸಗಳು ಕೊಳವೆಯ ಮೇಲಿನ ತುದಿಯಲ್ಲಿ ಹರಿಯುವಿಕೆಯ ವಿಚಲಕವನ್ನು ಹೊಂದಿರುತ್ತವೆ. ಇದು ತೆರೆದಿರುವ ಕೊಳವೆಯಲ್ಲಿ ಹರಿಯುವ ನೀರನ್ನು ಕೊಳವೆಯ ಹೊರಗೆ ಹರಿಯುವಂತೆ ಮಾಡುವ ಮೂಲಕ ಈಜುಗಾರನ ಬಾಯಿಯಲ್ಲಿ ನೀರು ಹೋಗದಂತೆ ನೋಡಿಕೊಳ್ಳುತ್ತದೆ.

ಕೆಲವು ಉಸಿರುಕೊಳವೆಗಳಲ್ಲಿ , ಚಿಕ್ಕ "ಪಿಂಗ್ ಪಾಂಗ್" ಬಾಲ್ಸ್ ಗಳನ್ನು ಚೌಕಟ್ಟಿನಲ್ಲಿ ಕೊಳವೆಯ ಪ್ರಾರಂಭದಿಂದ ಕೊನೆಯವರೆಗೆ ನೀರು ಹೆಚ್ಚುವುದನ್ನು ತಡೆಯಲು ಬಳಸಲಾಗಿರುತ್ತದೆ. ಆದರೆ ಇವು ಹೆಚ್ಚು ಕಾಲದವರೆಗೆ ಬಳಕೆಗೆ ಬರಲಿಲ್ಲ. ಅಲ್ಲದೇ ಸ್ನಾರ್ಕಲರ್ ಗೆ ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟ ಕಾರಣದಿಂದ ಇವುಗಳ ಬಳಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಿಲ್ಲ. ಇದೇ ರೀತಿಯಲ್ಲಿ , ಡೈವಿಂಗ್ ಮುಖವಾಡಗಳು, ಅವುಗಳಲ್ಲಿಯೇ ಮಾಡಲಾಗಿರುವ ಉಸಿರುಕೊಳವೆಗಳು ಕೂಡ ಅಸುರಕ್ಷಿತ ಹಾಗು ಅಪೂರ್ಣವೆಂದು ಪರಿಗಣಿಸಲ್ಪಟ್ಟಿವೆ.

ಅತ್ಯಂತ ಅನುಕೂಲಕರ ಉಸಿರುಕೊಳವೆಯ ಉದ್ದ 40 ಸೆಂಟಿಮೀಟರ್ ಗಳಿರುತ್ತದೆ (ಸುಮಾರು 16 ಇಂಚುಗಳು). ಉದ್ದವಾದ ಕೊಳವೆಗಳು, ಈಜುಗಾರ ಆಳಕ್ಕೆ ಹೋದಂತೆಲ್ಲ ಅವನಿಗೆ ಉಸಿರಾಡುವುದು ಕೆಲಮಟ್ಟಿಗೆ ಕಷ್ಟವಾಗುವಂತೆ ಮಾಡುತ್ತವೆ.ಸುತ್ತಲ ನೀರಿನ ಒತ್ತಡ ಹೆಚ್ಚಿರುವುದರಿಂದ ಶ್ವಾಸಕೋಶಗಳನ್ನು ಆಳವಾದ ನೀರಿರುವಲ್ಲಿಗೆ ತಂದಾಗ ಉಸಿರಾಟ ಕಷ್ಟವಾಗುತ್ತದೆ. ಸ್ನಾರ್ಕಲರ್ ಉಸಿರನ್ನು ಎಳೆದುಕೊಂಡಾಗ, ಶ್ವಾಸಕೋಶ ಹಿಗ್ಗಲು ಸಾಧ್ಯವಾಗುವುದಿಲ್ಲ; ಏಕೆಂದರೆ ಶ್ವಾಸಕೋಶವನ್ನು ಹಿಗ್ಗಿಸುವ ಸ್ನಾಯುಗಳು ಹೆಚ್ಚಿನ ಒತ್ತಡದ ವಿರುದ್ಧ ಕಾರ್ಯ ನಿರ್ವಹಿಸುವಷ್ಟು ಬಲಿಷ್ಠವಾಗಿರುವುದಿಲ್ಲ.[೧] ಉಸಿರುಕೊಳವೆಗಳು, "ಆಮ್ಲಕನಕವಿಲ್ಲದ ಪ್ರದೇಶ"ಗಳನ್ನು ಸೃಷ್ಟಿಸಬಲ್ಲವು–ಬಳಕೆದಾರ ತಾಜಾಗಾಳಿಯನ್ನು ತೆಗೆದುಕೊಂಡಾಗ , ಉಸಿರುಕೊಳವೆಯಲ್ಲಿ ಮೊದಲು ಹೊರಹಾಕಿದಂತಹ ಗಾಳಿ ಉಳಿದುಕೊಂಡಿರುತ್ತದೆ. ಈ ಗಾಳಿಯನ್ನು ಶ್ವಾಸಕೋಶದಲ್ಲಿ ಮರುಬಳಸಲ್ಪಟ್ಟಾಗ , ಉಸಿರಾಡುವ ಸಾಮರ್ಥ್ಯವನ್ನು ಕಡಿಮೆಮಾಡುತ್ತದೆ. ಅಲ್ಲದೇ ರಕ್ತದಲ್ಲಿ ಕಾರ್ಬನ್ ಡೈಆಕ್ಸೈಡ್ ಅನ್ನು ಹೆಚ್ಚಿಸುವ ಮೂಲಕ ಹೈಪರ್ ಕ್ಯಾಪ್ನಿಯವನ್ನು ಉಂಟುಮಾಡುತ್ತದೆ. ಸಾಧನದ ಗಾತ್ರ ಹೆಚ್ಚಾದಂತೆ ಈ ಸಮಸ್ಯೆ ಉಲ್ಬಣಗೊಳ್ಳುತ್ತದೆ.

ಸ್ನಾರ್ಕ್ಲಿಂಗ್ ತಂತ್ರಜ್ಞಾನದಲ್ಲಿ ಮಾಡಲಾದ ಹೊಸ ಅಳವಡಿಕೆಗಳು CO₂ ಧಾರಕದ ಶಕ್ತಿ ಯನ್ನು ಕಡಿಮೆ ಮಾಡಲು ಸಹಾಯಮಾಡಿವೆ. ಮಾರ್ಕ್ R. ಜಾನ್ ಸನ್ MD, ಉಸಿರುಕೊಳವೆಯನ್ನು ಕಂಡುಹಿಡಿದನು. ಅದರ ಲಕ್ಷಣಗಳನ್ನು "ಕಡೆನ್ಸ್ ತಂತ್ರಜ್ಞಾನ"ವೆಂದು ಕರೆದನು. ಇದು ನೇರವಾಗಿ ಗಾಳಿಹರಿಯುವಿಕೆಗೆಂದು ಒಮ್ಮಾರ್ಗದ ಕವಾಟವನ್ನು ಬಳಸುವಂತಹ ಉಸಿರುಕೊಳವೆಯಲ್ಲಿ, ಉಸಿರನ್ನು ತೆಗೆದುಕೊಳ್ಳುವ ಹಾಗು ಉಸಿರನ್ನು ಹೊರಹಾಕುವ ದಾರಿಗಳನ್ನು ಬೇರ್ಪಡಿಸುತ್ತದೆ. ಹೊರಹಾಕುವ ಕವಾಟದ ಸ್ಥಳ ಉಸಿರುಕೊಳವೆಯ ಹೊರಹಾಕುವ ದಾರಿಯನ್ನು ಪ್ರತಿರೋಧಿಸುತ್ತದೆ. ಇದು ಸ್ವಲ್ಪ ಹಿಂದಿನಿಂದ ಒತ್ತಡವನ್ನು ಹಾಕುವ ಮೂಲಕ ಸ್ಥಿರ ಉಸಿರಾಟ ಹಾಗು ಸಹಜ ಶ್ವಾಸಕೋಶದ ಹಿಗ್ಗುವಿಕೆಯನ್ನು ಉಂಟುಮಾಡುತ್ತದೆ. ನೀರಿನಲ್ಲಿ ಮುಳುಗಿದಾಗ ಉಸಿರನ್ನು ತೆಗೆದುಕೊಳ್ಳುವ ದಾರಿಯು ಮುಚ್ಚಿ ಹೋಗುತ್ತದೆ. ಇದು ಉಸಿರುಕೊಳವೆಯನ್ನು ಶುದ್ಧಮಾಡದೇ ಸ್ನಾರ್ಕಲರ್ ನನ್ನು ಮೇಲ್ಮೈಗೆ ಹಿಂದಿರುಗಿ ಬಂದು ಉಸಿರಾಡುವಂತೆ ಮಾಡುತ್ತದೆ.[೨]

ಸ್ನಾರ್ಕ್ಲಿಂಗ್ ನ ಅಭ್ಯಾಸ[ಬದಲಾಯಿಸಿ]

ಉಸಿರುಕೊಳವೆಯನ್ನು ಹಾಗು ಮುಖವಾಡವನ್ನು ಹಾಕಿಕೊಂಡು ಯಾವುದೇ ಜಲರಾಶಿಯಲ್ಲಿ ಈಜುವುದು ತಾಂತ್ರಿಕವಾಗಿ "ಸ್ನಾರ್ಕ್ಲಿಂಗ್ ಎಂದು ಕರೆಸಿಕೊಳ್ಳುತ್ತದೆ. "ಸ್ನಾರ್ಕಲರ್" ಸಾಧನವನ್ನು ಧರಿಸಿಕೊಂಡು ಬಂಡೆಗಳ, ಶಿಥಿಲಗೊಂಡಿರುವ , ಅಥವಾ ಇತರ ಮುಳುಗಿರುವ ವಸ್ತುಗಳ ಸಮೀಪದಲ್ಲಿ ಸಂಶೋಧಕ ಹುಡುಕಾಟದ ಕೆಲಸಮಾಡುತ್ತಾನೆಂದು ಸಾಮಾನ್ಯವಾಗಿ ನಂಬಲಾಗಿದೆ ಅಥವಾ ಮೀನು, ಅಲ್ಗೆ ಇತ್ಯಾದಿಗಳನ್ನು ಒಳಗೊಂಡಂತೆ ಜಲಜೀವಿ ವ್ಯವಸ್ಥೆಯನ್ನು ವೀಕ್ಷಿಸಲು ಅಥವಾ ಶಿಲಾ ರಚನೆಯನ್ನು ನೋಡಲು ಈ ತೆರನಾದ ಈಜುವುದನ್ನು ಅಭ್ಯಾಸ ಮಾಡುತ್ತಾನೆ. ಈ ಕಾರಣದಿಂದಲೇ ಸ್ನಾರ್ಕ್ಲಿಂಗ್ ಅನ್ನು ಕ್ರೀಡೆಗಿಂತ ಮನರಂಜನಾ ಚಟುವಟಿಕೆ ರೂಪದಲ್ಲಿ ನೋಡಲಾಗುತ್ತದೆ.

ಮುಖವಾಡ ಹಾಗು ಉಸಿರುಕೊಳವೆಯೊಂದಿಗೆ ಸ್ನಾರ್ಕಲರ್.

ಸ್ನಾರ್ಕ್ಲಿಂಗ್ ಗೆ ವಿಶೇಷವಾದ ತರಬೇತಿ ಬೇಕಿಲ್ಲ, ಕೇವಲ ಈಜುವ ಹಾಗು ಉಸಿರುಕೊಳವೆಯ ಮೂಲಕ ಉಸಿರಾಡುವ ಸಾಮರ್ಥ್ಯವಿದ್ದರೆ ಸಾಕು. ಆದರೂ, ಸುರಕ್ಷತೆಯ ದೃಷ್ಟಿಯಿಂದ ಅನುಭವಿ ಸ್ನಾರ್ಕಲರ್ ಗಳು ,ಪ್ರಯಾಣ ಮಾರ್ಗದರ್ಶನ, ಡೈವ್ ಶಾಪ್ ಅಥವಾ ಸಲಕರಣೆಯನ್ನು ಬಾಡಿಗೆ ಕೊಡುವ ಮಳಿಗೆಗಳ ಬಗ್ಗೆ ಮಾಹಿತಿ ಹಾಗು ಪರಿಚಯವನ್ನು ನೀಡುತ್ತಾರೆ. ಸಾಧನದ ಬಳಕೆ, ಪ್ರಾಥಮಿಕ ಸುರಕ್ಷತೆ , ಏನನ್ನು ನೋಡಬೇಕು, ಅಪಾಯವನ್ನು ಹೇಗೆ ಗುರುತಿಸಬೇಕು ಹಾಗು ರಕ್ಷಣೆಗೆ (ದುರ್ಬಲ ಜೀವಿಗಳು ಉದಾಹರಣೆಗೆ ಹವಳಗಳು, ಈಜುಗಾರರಿಂದ ಹಾಗು ಸ್ನಾರ್ಕಲರ್ಸ್ ನಿಂದ ಸುಲಭವಾಗಿ ಹಾನಿಗೊಳಗಾಗಬಲ್ಲವು)ಸಂಬಂಧಿಸಿದಂತೆ ಸೂಚನೆಯನ್ನು ನೀಡಲಾಗುತ್ತದೆ. ಸ್ಕೂಬ-ಡೈವಿಂಗ್ ನ ಜೊತೆಯಲ್ಲಿ ಉಸಿರುಕೊಳವೆಯೊಂದಿಗೆ ಒಬ್ಬರೇ ಇರುವ ಬದಲು, "ಸ್ನೇಹಿತರೊಡನೆ", ಮಾರ್ಗದರ್ಶಕನೊಡನೆ ಅಥವಾ ಪ್ರಯಾಣ ತಂಡದೊಡನೆ ಇರುವುದು ಸೂಕ್ತ ಎಂದು ಹೇಳಲಾಗುತ್ತದೆ.

ಕೆಲವು ಸ್ನಾರ್ಕ್ಲಿಂಗ್ ತಾಣಗಳು , ಸ್ನಾರ್ಕಲರ್ ಗಳು ವೈಯಕ್ತಿಕವಾಗಿ ತೇಲುವ ಸಾಧನದ ರೀತಿಯಲಲ್ಲಿರುವ ಗಾಳಿ ತುಂಬಬಹುದಾದ ಉಡುಗೆಯನ್ನು ಧರಿಸಬೇಕು ಎಂದು ಅಪೇಕ್ಷಿಸುತ್ತವೆ. ಅವುಗಳು ಯಾವಾಗಲೂ ಗಾಢವಾದ ಹಳದಿ ಅಥವಾ ಕಿತ್ತಳೆ ಬಣ್ಣದ್ದಾಗಿರುತ್ತವೆ. ಅಲ್ಲದೇ ಈ ಸಾಧನಗಳು ಬಳಕೆದಾರರಿಗೆ, ಸಾಧನಗಳಲ್ಲಿ ತೇಲಲು ಬೇಕಾವಷ್ಟು ಗಾಳಿಯನ್ನು ತುಂಬಿಕೊಳ್ಳುವ ಅವಕಾಶವನ್ನು ನೀಡುತ್ತವೆ. ಆದರೂ ಈ ಸಾಧನಗಳು ಸ್ನಾರ್ಕಲರ್ ಆಳದವರೆಗೆ ಹೋಗದಂತೆ ಆತನನ್ನು ತಡೆಯುತ್ತವೆ ಹಾಗು ಎಚ್ಚರಿಸುತ್ತವೆ. ವಿಶೇಷವಾಗಿ ತಣ್ಣನೆಯ ನೀರಿನಲ್ಲಿ ,ದಪ್ಪವಿರುವ ಹಾಗು ರಕ್ಷಣೆಯನ್ನು ನೀಡುವ ನೀರಿಳಿಯದ(ಸೋಕದ) ಉಡುಪನ್ನು ಧರಿಸಬಹುದು;ನೀರಿಳಿಯದ ಉಡುಪುಗಳು ನೀರಿನಲ್ಲಿ ಮುಳುಗುದಂತೆ ತೇಲಿಸುವ ಶಕ್ತಿಯನ್ನು ನೀಡುತ್ತವೆ. ಉಷ್ಣವಲಯದಲ್ಲಿ , ಸ್ನಾರ್ಕಲರ್ ಗಳು (ವಿಶೇಷವಾಗಿ ಬಿಳಚಿಕೊಂಡಿರುವ ಚರ್ಮವನ್ನು ಹೊಂದಿದವರು) ದೇಹದ ಬೆನ್ನಿನ ಹಾಗು ತೊಡೆಗಳ ಚರ್ಮವನ್ನು ಬಿಸಿಲು ಕಂದಿನಿಂದ ರಕ್ಷಿಸಲು, ಯಾವಾಗಲೂ ರಾಷ್ ಗಾರ್ಡ್(ಚರ್ಮ ರಕ್ಷಕ) ಅಥವಾ ಶರ್ಟ್ ಹಾಗು/ಅಥವಾ ಬೋರ್ಡ್ ಶಾರ್ಟ್ಸ್ ಗಳನ್ನು ಧರಿಸಬೇಕು.

ಅನುಭವಿ ಸ್ನಾರ್ಕಲರ್ ಗಳು ಹವ್ಯಾಸಿ ಫ್ರೀ-ಡೈವಿಂಗ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿದರು. ಈ ಫ್ರೀ-ಡೈವಿಂಗ್ ಅನ್ನು ಈಜು ನಿರ್ದೇಶಕನಿಂದ ಅಥವಾ ಅನುಭವಿ (ಮುಕ್ತ) ಫ್ರೀ ಈಜುಗಾರನ ಮೂಲಕ ಮಾಡಬೇಕಾಗಿದೆ.

ಸುರಕ್ಷತೆಯ ಮುಂಜಾಗ್ರತೆಗಳು[ಬದಲಾಯಿಸಿ]

ಸ್ನಾರ್ಕಲರ್ಗಳಿಗೆ ಚಿಕ್ಕ ಕಡಲತೀರಗಳು ಹಾಗು ದೋಣಿಗಳು ಅತ್ಯಂತ ಅಪಾಯಕಾರಿಯಾಗಿವೆ, ಉದಾಹರಣೆಗೆ ; ಜೆಟ್ ಸ್ಕಿಸ್, ಸ್ಪೀಡ್ ಬೋಟ್ಸ್ ಇತ್ಯಾದಿ. ಸ್ನಾರ್ಕಲರ್ ನೀರಿನಲ್ಲಿ ಮುಳುಗಿರುವಾಗ ಕೇವಲ ಕೊಳವೆ ಮಾತ್ರ ಮೇಲೆ ಕಾಣುತ್ತಿರುತ್ತದೆ. ಈ ದೋಣಿಗಳು ಸ್ನಾರ್ಕಲರ್ ಹೋಗುವಂತಹ ಸ್ಥಳಕ್ಕೆ ಹೋಗುವುದರಿಂದ , ಡಿಕ್ಕಿ ಹೊಡೆದು ಅಪಘಾತವಾಗುವ ಸಂಭವವಿರುತ್ತದೆ. ಹಾಯಿದೋಣಿಗಳು ಹಾಗು ಹಾಯಿಹಲಗೆಗಳು ವಿಶೇಷವಾಗಿ ಅವುಗಳು ನಿಧಾನವಾಗಿ ಚಲಿಸುವ ಕಾರಣ ಸಮಸ್ಯೆಯನ್ನು ಉಂಟುಮಾಡುತ್ತವೆ. ಸ್ನಾರ್ಕಲರ್ ಗಳು ನೀರಿನೊಳಗೆ ಶಬ್ದ ಮಾಡಿಕೊಂಡು ನಾಲ್ಕು ಪಟ್ಟು ಹೆಚ್ಚು ವೇಗವಾಗಿ ಚಲಿಸುವ ಮೋಟಾರುಗಳಿಂದ ಚಲಿಸುವಂತಹ ದೋಣಿಗಳಂತೆ , ಅವುಗಳ ಇರುವಿಕೆಯನ್ನು ತಿಳಿಯಲಾಗುವುದಿಲ್ಲ. ಸ್ನಾರ್ಕಲರ್ ಗಳು ಅಂತಹ ದೋಣಿಗಳ ಕೆಳಗುಳಿಯಬಹುದು ಹಾಗು/ ಅಥವಾ ಅದಕ್ಕೆ ಡಿಕ್ಕಿ ಹೊಡೆಯಬಹುದು. ಕೆಲವು ಸ್ಥಳಗಳು ಸ್ನಾರ್ಕಲರ್ ಗಳಿಂದ ಚಿಕ್ಕ ದೋಣಿಗಳ ಎಲ್ಲೆಯನ್ನು ಗೊತ್ತು ಮಾಡಿರುತ್ತವೆ. ಕಾಯಂ ಆಗಿ ಬರುವಂತಹ ಈಜುಗಾರರು ತೇಲುಬುರುಡೆಯಿಂದ(ಅಪಾಯ ಸೂಚಿ) ಗುರುತಿಸಲಾಗಿರುವ ಪ್ರದೇಶಗಳನ್ನು ಹೊಂದಿರುತ್ತಾರೆ. ಆದ್ದರಿಂದ ಸ್ನಾರ್ಕಲರ್ ಗಳು ಗಾಢವಾದ ಅಥವಾ ಅತ್ಯಂತ ಹೆಚ್ಚು ಪ್ರತಿಫಲಿಸುವಂತಹ ಬಣ್ಣಗಳನ್ನು /ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಅಲ್ಲದೇ/ಅಥವಾ ಸುಲಭವಾಗಿ ನೌಕವಿಹಾರಿಗಳು ಹಾಗು ಇತರರು ಗುರುತಿಸಲು ಸಾಧ್ಯವಾಗುವಂತೆ ಡೈವ್ ಫ್ಲಾಗ್ಸ್ ಗಳನ್ನು ಬಳಸಬೇಕು.

ಸ್ನಾರ್ಕಲರ್ ಗಳು ತಮ್ಮ ಬೆನ್ನನ್ನು ಕೆಲವು ಸಮಯಗಳ ಕಾಲ ಸೂರ್ಯನ ಬಿಸಿಲಿಗೆ ಒಡ್ಡಲೇಬೇಕಾಗುತ್ತದೆ.ಅದು ಅವರಿಗೆ ತಿಳಿಯದಂತೆ ಚರ್ಮವನ್ನು ಕೆಟ್ಟದಾಗಿ ಸುಡುವ ಸಾಧ್ಯತೆ ಇರುತ್ತದೆ.(ಸ್ವಲ್ಪ ಮಟ್ಟಿಗೆ ಮುಳುಗಿದ್ದರೂ ಕೂಡ). ಸರಿಯಾದಂತಹ ರಕ್ಷಣಾ ಕವಚವನ್ನು ತೊಡುವುದರಿಂದ ಉದಾಹರಣೆಗೆ ; "ರಾಷ್ ಗಾರ್ಡ್" (ಬೆಚ್ಚಗಿನ ನೀರಿನಲ್ಲಿ), ಟಿ ಶರ್ಟ್, ನೀರಿಳಿಯದ ಉಡುಪು ಹಾಗು/ಅಥವಾ ಬಿಸಿಲು ಮುಲಾಮು , ಬಿಸಿಲುಕಂದಿ(ಸನ್ ಬರ್ನ)ನಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.

ದೇಹದ ಜಲಾಂಶ ಕಡಿಮೆಯಾಗುವುದು ಕೂಡಾ ಮತ್ತೊಂದು ಕಳವಳಕಾರಿ ಅಂಶವಾಗಿದೆ. ವಿಶೇಷವಾಗಿ ಹಲವು ಗಂಟೆಗಳ ಉಸಿರುಕೊಳವೆಯನ್ನು ಬಳಸಲು ಇಚ್ಚಿಸುವುದಾದರೆ, ಈಜಲು ಹೋಗುವ ಮೊದಲು ಚೆನ್ನಾಗಿ ನೀರು ಕುಡಿದಿರಬೇಕು. ದೇಹಕ್ಕೆ ಸರಿಯಾದ ನೀರಿನ ಪ್ರಮಾಣವನ್ನು ಸಕಾಲದಲ್ಲಿ ಪೂರೈಕೆ ಮಾಡುವುದರಿಂದ ಮಾಂಸಖಂಡಗಳ ಸೆಳೆತವನ್ನು ತಡೆಗಟ್ಟಬಲ್ಲದು.

ಸ್ನಾರ್ಕಲರ್ ಗಳು ಹೆಚ್ಚಿನ ಉಸಿರಾಟವನ್ನು ಅನುಭವಿಸಬಹುದು. ಇದರಿಂದ “ಪ್ರಜ್ಞೆತಪ್ಪಬಹುದು″;ಸಹಈಜುಗಾರರ ಜೊತೆಯಲ್ಲಿ ಸ್ನಾರ್ಕ್ಲಿಂಗ್ ಮಾಡುವುದರಿಂದ(ಎಲ್ಲಾ ಸಮಯದಲ್ಲೂ ಸಹಈಜುಗಾರನ ಬಗ್ಗೆ ತಿಳಿದುಕೊಂಡಿರುವ ಮೂಲಕ) ಈ ಅಪಾಯವನ್ನು ತಪ್ಪಿಸಬಹುದು.

ಹವಳದ ಬಂಡೆಗಳ ಮೇಲೆ ಅಥವಾ ಹತ್ತಿರ ಸ್ನಾರ್ಕ್ಲಿಂಗ್ ಮಾಡುವಾಗ , ಚೂಪಾಗಿರುವ ಹವಳಗಳ ಬಳಿ ಹೋಗದಂತೆ ಕಾಳಜಿವಹಿಸಬೇಕು. ಅಲ್ಲದೇ ಅವುಗಳಿರುವ ಜಾಗದಲ್ಲಿ ವಿಷಪೂರಿತ ಪರಿಸರವಿರುತ್ತವೆ. ಸಾಮಾನ್ಯವಾಗಿ ರಕ್ಷಕ ಕವಚ ಗ್ಲವ್ಸ್ ಗಳ ಮೂಲಕ ಹಾಗು ವಾತಾವರಣದ ಬಗ್ಗೆ ಎಚ್ಚರಿಕೆಯಿಂದಿರುವ ಮೂಲಕ ಅಪಾಯವನ್ನು ತಪ್ಪಿಸಬಹುದು. ಚಪ್ಪಲಿಗಳು ಹಾಗು ಸರ್ಫ್ ಶೂಸ್ ಗಳು , ಕಡಿಮೆ ಉಬ್ಬರದಲ್ಲಿ ಅವರು ಬಂಡೆಗಳ ಮೇಲೆ , ತಗ್ಗಿನಲ್ಲಿ ಅಥವಾ ಹೊರಗಿನ ಬಂಡೆಯ ಆಳವಾದ ನೀರಿನಲ್ಲಿ ಪ್ರಯಾಣ ಮಾಡಲು ಅನುಕೂಲಕರವಾಗಿವೆ.

ಸ್ನಾರ್ಕ್ಲಿಂಗ್ ಸ್ಥಳಗಳು[ಬದಲಾಯಿಸಿ]

ಸ್ನಾರ್ಕಲರ್ ಗಳು ಕಾಜುಮೆಲ್, ಮೆಕ್ಸಿಕೋ ನಲ್ಲಿ ಮೀನನ್ನು ವೀಕ್ಷಿಸುತ್ತಿರುವುದು.

ಬಹುಪಾಲು ಯಾವುದೇ ತೆರನಾದ ಜಲರಾಶಿಯಲ್ಲಾದರೂ ಸ್ನಾರ್ಕ್ಲಿಂಗ್ ಮಾಡಲು ಸಾಧ್ಯ, ಆದರೆ ಸ್ನಾರ್ಕಲರ್ ಗಳು ಹೆಚ್ಚಾಗಿ ಸಣ್ಣ ಅಲೆಗಳಿರುವಂತಹ ,ಬೆಚ್ಚಗಿನ ನೀರಿರುವಂತಹ ಹಾಗು ಕೆಲವು ಸಮಯ ನೀರಿನ ಮೇಲ್ಮೈ ಗೆ ಹತ್ತಿರವಿರುವಂತಹ ಸ್ಥಳಗಳಲ್ಲಿ ಕಾಣಸಿಗುತ್ತಾರೆ.

ಸಾಮಾನ್ಯವಾಗಿ ಸಮುದ್ರಮಟ್ಟದಲ್ಲಿ 1 ರಿಂದ 4 ಮೀಟರ್ ಗಳ ವರೆಗೆ ಹರಡಿರುವ ತಗ್ಗಿಲ್ಲದ ಬಂಡೆಗಳು(3 ರಿಂದ 12 ಫೀಟ್) ಸ್ನಾರ್ಕಲರ್ ಗಳಿಗೆ ಇಷ್ಟವಾಗುತ್ತವೆ. ಆಳವಾದ ಬಂಡೆಗಳು ಕೂಡ ಉತ್ತಮವಾಗಿರುತ್ತವೆ, ಆದರೆ ಆಳಕ್ಕೆ ಧುಮುಕಬೇಕಾದರೆ ಪದೇ ಪದೇ ಉಸಿರನ್ನು ಹಿಡಿಯುವುದರಿಂದ, ಇದು ಅಭ್ಯಾಸಿಗರ ಸಂಖ್ಯೆಯನ್ನು ತಗ್ಗಿಸುತ್ತದೆ. ಅಲ್ಲದೇ ಸಾಮರ್ಥ್ಯ ಮತ್ತು ಕುಶಲತೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.

ಭಿನ್ನರೂಪಗಳು ಹಾಗು ಸಂಬಂಧಿತ ಚಟುವಟಿಕೆಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. R. ಸ್ಟಿಗ್ಲರ್, ಡೈ ಟೌಚೆರಿರೈ ಇನ್ ಫೋರ್ಟ್ ಚ್ರಿಟ್ಟೆ ಡರ್ ನ್ಯಚ್ಯುರ್ ವಿಸ್ಸೆನ್ಸ್ ಫೋರ್ಸ್ ಚುನ್ಗ್, IX. ಬ್ಯಾಂಡ್ , ಬರ್ಲಿನ್/ವ್ಯೇನ್ 1913
  2. untitled. Kapitol Reef Aquatics. 2009. Archived from the original (swf) on 13 ಜುಲೈ 2011. Retrieved 16 December 2009.
  • ದಿ ಬ್ರಿಟಿಷ್ ಸಬ್-ಅಕ್ವಾ ಕ್ಲೂಬ್, ಹಾಗು ಹಾಲ್ ಬ್ರೋಕ್, ಮೈಕ್. ಸ್ನಾರ್ಕೆಲಿಂಗ್ ಫಾರ್ ಆಲ್ . ಲಂಡನ್: ಎಬ್ಯೂರಿ , 2001. ಐ ಎಸ್ ಬಿ ಎನ್ 0-19-211579-0

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. REDIRECT Template:Underwater diving