ಐದು ದೊಡ್ಡ ವ್ಯಕ್ತಿತ್ವದ ಸ್ವಭಾವಗಳು
ಸಮಕಾಲೀನ ಮನಶಾಸ್ತ್ರದಲ್ಲಿ ಮಾನವ ವ್ಯಕ್ತಿತ್ವವನ್ನು ವರ್ಣಿಸಲು ಬಳಸಲಾಗುವ ಐದು ದೊಡ್ಡ ಗುಣಾಂಶಗಳು ವ್ಯಕ್ತಿತ್ವದ ಐದು ಆಯಾಮಗಳಾಗಿವೆ.
ಈ ಐದು ಗುಣಾಂಶಗಳೆಂದರೆ ಮುಕ್ತತೆ, ಮನಸ್ಸಾಕ್ಷಿ, ಬಹಿರ್ಮುಖತೆ, ಒಪ್ಪಿಕೊಳ್ಳುವಿಕೆ, ಮತ್ತು ನ್ಯೂರೋಟಿಸಿಸಂ (OCEAN, ಅಥವಾ ಮರುಜೋಡಣೆ ಮಾಡಿದಲ್ಲಿ CANOE). ಸಮಚಿತ್ತತೆಯ ಗುಣಾಂಶವನ್ನು ಕೆಲವು ಸಲ ಭಾವನಾತ್ಮಕ ಸಧೃಢತೆ ಎಂದು ಹೇಳಲಾಗುತ್ತದೆ. ಮುಕ್ತತೆಯ ಅಂಶವನ್ನು ಹೇಗೆ ವ್ಯಾಖ್ಯಾನಿಸಬೇಕೆಂಬ ವಿಷಯದಲ್ಲಿ ಕೆಲವು ಭಿನ್ನಾಭಿಪ್ರಾಯಗಳಿವೆ, ಕೆಲವು ಸಲ ಇದನ್ನು ಬುದ್ಧಿ ಶಕ್ತಿ ಎಂದು ಕರೆಯಲಾಗಿದೆ.[೧] ಪ್ರತಿಗುಣಾಂಶ ಹೆಚ್ಚು ನಿರ್ಧಿಷ್ಟ ಚಹರೆಗಳ ಗುಂಪನ್ನು ಒಳಗೊಂಡಿದ್ದು ಅವು ಪರಸ್ಪರ ಪೂರಕವಾಗಿರುತ್ತವೆ. ಉದಾಹರಣೆಗೆ, ಬಹಿರ್ಮುಖತೆ ಸಮಾಜಮುಖಿ, ಉತ್ತೇಜಕತೆ, ಅರಸುವಿಕೆ, ತಹತಹಿಕೆ ಮತ್ತು ಇತ್ಯಾತ್ಮಕ ಭಾವನೆಗಳಿಗಿಂತ ಸಂಬಂಧಿ ಗುಣಾಂಶಗಳನ್ನು ಹೊಂದಿದೆ.
ಈ ಐದು ಗುಣಾಂಶಗಳ ಮಾದರಿ ಶುದ್ಧಾಂಗವಾಗಿ ವ್ಯಕ್ತಿತ್ವದ ವಿವರಣಾತ್ಮಕ ಮಾದರಿ. ಆದರೆ ಮನಶಾಸ್ತ್ರಜ್ಞರು ಈ ಐದು ಗುಣಾಂಶಗಳಿಗೆ ಸಂಬಂಧಿಸಿದಂತೆ ಅನೇಕ ತಾತ್ವಿಕತೆಗಳನ್ನು ರೂಪಿಸಿದ್ದಾರೆ.
ಸ್ಥೂಲ ಅವಲೋಕನ
[ಬದಲಾಯಿಸಿ]ಐದು ದೊಡ್ಡ ಗುಣಾಂಶಗಳು ಮತ್ತು ಅವುಗಳನ್ನು ರೂಪಿಸಿರುವ ಚಹರೆಗಳನ್ನು ಈ ಮುಂದಿನಂತೆ ಸಂಕ್ಷಿಪ್ತಗೊಳಿಸಬಹುದು:
- ಮುಕ್ತತೆ - (ಸೃಜನಶೀಲ/ಕುತೂಹಲ vs. ಮುಂಜಾಗರೂಕ/ಸಂಪ್ರದಾಯವಾದಿ). ಕಲೆ, ಭಾವನಾತ್ಮಕತೆ, ಸಾಹಸ, ಅಸಾಮಾನ್ಯ ವಿಚಾರಗಳು, ಕುತೂಹಲ ಮತ್ತು ಅನುಭವಾತ್ಮಕ ವೈವಿಧ್ಯತೆಗಳ ಬಗೆಗಿನ ಸಾಮಾನ್ಯ ಮೆಚ್ಚುಗೆ.
- ಮನಸಾಕ್ಷಿತ್ವ - (ಸಮರ್ಥ/ಸಂಘಟನಾಕಾರಿ vs. ಸುಲಭವಾಗಿ-ತೆಗೆದುಕೊಳ್ಳುವ/ಅಸಡ್ಡೆಯ). ಸ್ವಯಂ-ಶಿಸ್ತು, ಕರ್ತವ್ಯ ಪರತೆ, ಮತ್ತು ಸಾಧನೆಯ ಉದ್ದೇಶವಿರುವ ಸ್ವಭಾವ; ತಕ್ಷಣದ ವರ್ತನೆಯ ಬದಲು ಯೋಜಿತ ವರ್ತನೆಗೆ ಆದ್ಯತೆ ಕೊಡುವ ಗುಣ.
- ಬಹಿರ್ಮುಖತೆ - (ನಿರ್ಗಮಿಸುವ/ಶಕ್ತಿಯುತ vs. ನಾಚಿಕೆ/ಅತಿ ಸಂಕೋಚದ). ಶಕ್ತಿಯುತ, ಸಕಾರಾತ್ಮಕ ಭಾವನೆಗಳು, ಸರ್ಜೆನ್ಸಿ, ಮತ್ತು ಇತರರ ಸಾಂಗತ್ಯದಿಂದ ಉತ್ತೇಜಿತಗೊಳ್ಳುವ ಗುಣಗಳಿಂದ ರೂಪಿತವಾಗಿದೆ.
- ಒಪ್ಪಿಕೊಳ್ಳುವಿಕೆ - (ಸ್ನೇಹಪರ/ದಯೆಯುಳ್ಳ vs. ಸ್ಪರ್ಧಾತ್ಮಕ/ಖಂಡಿತವಾದಿ). ಇತರರೊಂದಿಗೆ ಅನುಮಾನ ಮತ್ತು ವಿರೋಧದ ಬದಲು ಅನುಕಂಪ ಮತ್ತು ಸಹಕಾರಿ ಮನೋಭಾವದ ನಡವಳಿಕೆ.
- ನ್ಯೂರೋಟಿಸಂ - (ಸೂಕ್ಷ್ಮಗ್ರಾಹಿ/ಮಾನಸಿಕ ಒತ್ತಡ vs. ನಿರ್ಭಯ/ಆತ್ಮವಿಶ್ವಾಸ). ಭಾವನಾತ್ಮಕ ಪ್ರತಿಕ್ರಿಯಾತ್ಮಕರಾಗಿದ್ದು ಸುಲಭವಾಗಿ ಒತ್ತಡಕ್ಕೆ ಒಳಗಾಗುತ್ತಾರೆ, ಅವೆಂದರೆ ಕೋಪ, ಚಿಂತೆ, ಖಿನ್ನತೆ, ಅಥವಾ ಟೀಕೆ.
ಈ ಐದು ದೊಡ್ಡ ಗುಣಾಂಶಗಳ ಮಾದರಿ ವ್ಯಕ್ತಿತ್ವ ಮನಶಾಸ್ತ್ರದ ಚರಿತ್ರೆಯಲ್ಲಿ ಹೆಚ್ಚು ಸಮಗ್ರ ಅನುಭವಜನ್ಯ ಮತ್ತು ದತ್ತಾಂಶ ಪ್ರೇರಿತ ಸಂಶೋಧನೆ ಎಂದು ಪರಿಗಣಿಸಲ್ಪಟ್ಟಿದೆ. ಮಾನವ ವ್ಯಕ್ತಿತ್ವದ ಚಹರೆ ಮತ್ತು ಸಂರಚನೆಗಳನ್ನು ಗುರುತಿಸುವುದು ಇಡೀ ಮನಶಾಸ್ತ್ರದಲ್ಲೇ ಒಂದು ಮೂಲಭೂತ ಗುರಿಯಾಗಿದೆ. ಮೂರು ಅಥವಾ ನಾಲ್ಕು ದಶಕಗಳ ಸಂಶೋಧನೆಯಿಂದ ಅನೇಕ ಸ್ವತಂತ್ರ ಸಂಶೋಧಕರು (ಡಿಗ್ಮನ್, ೧೯೯೦) ಈ ಐದು ವಿಶಾಲ ಗುಣಾಂಶಗಳನ್ನು ಕ್ರಮೇಣ ಕಂಡುಕೊಂಡು ಅವುಗಳನ್ನು ನಿರೂಪಿಸಿದ್ದಾರೆ.[೨] ಈ ಸಂಶೋಧಕರು ಗೊತ್ತಿರುವ ಎಲ್ಲಾ ವ್ಯಕ್ತಿತ್ವ ಚಹರೆಗಳ ಬಗ್ಗೆ ಅಧ್ಯಯನ ಪ್ರಾರಂಭಿಸಿ ನಂತರ ಈ ಚಹರೆಗಳ ನೂರಾರು ಆಯಾಮಗಳನ್ನು ವಿಶ್ಲೇಷಿಸಿ (ವರದಿ, ದತ್ತಾಂಶ ಪ್ರಶ್ನಾವಳಿ, ಪೀರ್ ರೇಟಿಂಗ್ಸ್ ಪ್ರಾಯೋಗಿಕ ವ್ಯವಸ್ಥೆಯಿಂದ ವಸ್ತುನಿಷ್ಟ ಮಾಪನ) ವ್ಯಕ್ತಿತ್ವದ ಮೂಲಭೂತ ಒಳಾಂಶಗಳನ್ನು ಕಂಡುಕೊಂಡರು.
ಈ ಪ್ರಾರಂಭಿಕ ಮಾದರಿಯನ್ನು ೧೯೫೦ರ ಕೊನೆಯ ಭಾಗದಲ್ಲಿ ಅರ್ನೆಸ್ಟ್ ಟ್ಯೂಪ್ಸ್ ಮತ್ತು ರೇಮಂಡ್ ಕ್ರಿಸ್ಟಲ್ ಅಮೇರಿಕಾದ ಏರ್ಫೋರ್ಸ್ ಸಿಬ್ಬಂದಿ ಲ್ಯಾಬೋರೇಟರಿಯಲ್ಲಿ ಮಾಡಿದ ಕೆಲಸದ ಮೂಲಕ ಅಭಿವೃದ್ಧಿ ಪಡಿಸಿದರು, ದುರದೃಷ್ಟವಶಾತ್ ಅವರು ತಮ್ಮ ಕೆಲಸವನ್ನು ಕೇವಲ ಒಂದು ತಾಂತ್ರಿಕ ವರದಿಯಲ್ಲಿ ಮಾತ್ರ ದಾಖಲಿಸಿದ್ದರು (ಟ್ಯೂಪ್ಸ್, E.C., & ಕ್ರಿಸ್ಟಲ್, R.E., ಟ್ರೈಟ್ ರೇಟಿಂಗ್ಸ್ ಆಧಾರಿತ ಪುನರಾವರ್ತಿತ ವ್ಯಕ್ತಿತ್ವ ಗುಣಾಂಶಗಳು. ತಾಂತ್ರಿಕ ವರದಿ ASD-TR-೬೧-೯೭, ಲ್ಯಾಕ್ಲ್ಯಾಂಡ್ ಏರ್ ಫೋರ್ಸ್ ಸಿಸ್ಟಮ್ಸ್ ಬೇಸ್, TX: ಸಿಬ್ಬಂದಿ ಲ್ಯಾಬೊರೇಟರಿ, ಏರ್ ಫೋರ್ಸ್ ಸಿಸ್ಟಮ್ಸ್ ಕಮ್ಯಾಂಡ್, ೧೯೬೧). ೧೯೯೦ರಲ್ಲಿ, ಜೆ.ಎಮ್. ಡಿಗ್ಮನ್ ವ್ಯಕ್ತಿತ್ವದ ಬಗೆಗಿನ ತಮ್ಮ ಐದು ಗುಣಾಂಶಗಳ ಮಾದರಿಯನ್ನು ರೂಪಿಸಿದರು, ನಂತರ ಇದನ್ನು ಗೋಲ್ಡ್ಬರ್ಗ್ ಉನ್ನತ ಮಟ್ಟದ ಸಂಘಟನೆಯಾಗಿ ವಿಸ್ತರಿಸಿದರು (ಗೋಲ್ಡ್ಬರ್ಗ್, ೧೯೯೩).[೩] ಈ ಐದು ಪ್ರಮುಖ ಕ್ಷೇತ್ರಗಳು ಗೊತ್ತಿರುವ ಎಲ್ಲಾ[How is this right if "about half of the common variance in most personality inventories"?] ವ್ಯಕ್ತಿತ್ವ ಚಹರೆಗಳನ್ನು ತಮ್ಮಲ್ಲಿ ಒಳಗೊಂಡು ಮತ್ತು ಒಳಗಾಗಿಸಿಕೊಂಡು ಎಲ್ಲಾ ವ್ಯಕ್ತಿತ್ವ ಚಹರೆಗಳ ಪ್ರಾಥಮಿಕ ಸಂರಚನೆಯನ್ನು ಪ್ರತಿನಿಧಿಸುತ್ತವೆ. ಮನಶಾಸ್ತ್ರಜ್ಞರು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದ ಒಂದರ ಮೇಲೊಂದು ಕುಳಿತು ಗೊಂದಲ ಉಂಟುಮಾಡುತ್ತಿದ್ದ ಕೆಳಹಂತದ ವ್ಯಕ್ತಿತ್ವ ಪರಿಕಲ್ಪನೆಗಳ ಅಸ್ತವ್ಯಸ್ತತೆಗೆ ಅವರು ಒಂದು ಸುವ್ಯವಸ್ಥೆಯನ್ನು ರೂಪಿಸಿದರು. ಈ ಐದು ಗುಣಾಂಶಗಳು ವ್ಯಕ್ತಿತ್ವ ಮನಶಾಸ್ತ್ರಜ್ಞದ ಎಲ್ಲ ಸಂಶೋಧನೆ ಮತ್ತು ತಾತ್ವಿಕತೆಗಳಾನ್ನು ಸಮಗ್ರೀಕರಿಸಲು ಒಂದು ಸಮೃದ್ಧ ಪರಿಕಲ್ಪನಾತ್ಮಕ ಚೌಕಟ್ಟನ್ನು ಒದಗಿಸುತ್ತವೆ. ಈ ಐದು ದೊಡ್ಡ ವ್ಯಕ್ತಿತ್ವಗಳು "Five Factor Model" ಅಥವಾ FFM (ಕೋಸ್ಟಾ & ಮೆಕ್ಕ್ರೇ, ೧೯೯೨),[೪] ಮತ್ತು ವ್ಯಕ್ತಿತ್ವದ ಜಾಗತಿಕ ಗುಣಾಂಶಗಳು ಎಂದು ಕೂಡ ಕರೆಯಲಾಗುತ್ತದೆ (ರಸ್ಸೆಲ್ & ಕರೋಲ್, ೧೯೯೪).[೫]
ಕೊನೇಪಕ್ಷ ನಾಲ್ಕು ತಂಡಗಳ ಸಂಶೋಧಕರು ಈ ಸಮಸ್ಯೆಯ ಬಗ್ಗೆ ಅನೇಕ ದಶಕಗಳ ಕಾಲ ಸ್ವತಂತ್ರವಾಗಿ ಕೆಲಸ ಮಾಡಿ,[೬][೭][೮][೯][೧೦] ಸಾಮಾನ್ಯವಾದ ಅದೇ ಐದು ದೊಡ್ಡ ಗುಣಾಂಶಗಳನ್ನು ಗುರುತಿಸಿದ್ದಾರೆ, ಮೊದಲಿಗೆ ಟ್ಯೂಪ್ಸ್ ಮತ್ತು ಕ್ರಿಸ್ಟಲ್,[೧೧][೧೨][೧೩][೧೪] ನಂತರ ಇಲ್ಲಿ ನೋಯಿಸ್ ವಿಶ್ವವಿದ್ಯಾಲಯದ ಕ್ಯಾಟಿಲ್ಲನ ಒರೆಗಾನ್ ರಿಸರ್ಚ್ ಇನ್ಸ್ಟಿಟ್ಯೂಟಿನಲ್ಲಿ ಗೋಲ್ಡ್ಬರ್ಗ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ನಲ್ಲಿ ಕೋಸ್ಟಾ ಮತ್ತು ಮ್ಯಾಕ್ಕ್ರೇ.[೧೫][೧೬][೧೭][೧೮]
ನಾಲ್ಕು ತಂಡಗಳ ಈ ಸಂಶೋಧಕರು ಈ ಐದು ಚಹರೆಗಳನ್ನು ಕಂಡು ಕೊಳ್ಳಲು ವಿಭಿನ್ನ ವಿಧಾನಗಳನ್ನು ಬಳಸಿದ್ದಾರೆ, ಆದ್ದರಿಂದ ಐದು ಗುಣಾಂಶಗಳ ಪ್ರತಿ ಗುಂಪುಗಳಿಗೆ ಬೇರೆ ಬೇರೆ ಹೆಸರು ಮತ್ತು ನಿರೂಪಗಳಿವೆ. ಆದರೂ, ಈ ಎಲ್ಲವೂ ಉನ್ನತ ಒಳಹೆಣಿಗೆಗಳನ್ನು ಹೊಂದಿದ್ದು ವಿಶ್ಲೇಷಣಾತ್ಮಕವಾಗಿ ಒಂದು ಗೂಡಿರುವ ಅಂಶಗಳನ್ನು ತೋರುತ್ತವೆ.[೧೯][೨೦][೨೧][೨೨][೨೩]
ಈ ಚಹರೆಗಳು ಉನ್ನತ ಮಟ್ಟದಲ್ಲಿ ವ್ಯಕ್ತಿತ್ವವನ್ನು ಸಂಘಟಿಸುತ್ತವೆ ಎಂಬುದನ್ನು ಗಮನಿಸುವುದು ಮುಖ್ಯ ಮತ್ತು ನಿಯಮಿತವಾದ ಕೆಳಮಟ್ಟದ ವ್ಯಕ್ತಿತ್ವ ಚಹರೆಗಳ ಚೌಕಟ್ಟು ನಿರ್ಮಾಣಕ್ಕಾಗಿ ಪರಿಕಲ್ಪನಾತ್ಮಕವಾಗಿ ತುಂಬಾ ನೆರವಾಗುತ್ತವೆ. ಆದರೂ ಈ ಐದು ಚಹರೆಗಳು ತುಂಬಾ ವಿಶಾಲ ಮತ್ತು ಸಮಗ್ರವಾಗಿರುವುದರಿಂದ ಅನೇಕ ಕೆಳಮಟ್ಟದ ಚಹರೆಗಳ ನಿಜವಾದ ವರ್ತನೆಯನ್ನು ವಿವರಿಸಲು ಮತ್ತು ಊಹಿಸಲು ಇವು ಅಷ್ಟು ಶಕ್ತಿಯುತ ಸಾಧನಗಳಾಗಲಾರವು. ಅನೇಕ ಅಧ್ಯಯನಗಳು ಪ್ರಾಥಮಿಕ ಹಂತದ ಚಹರೆಗಳ ಅನೇಕ ಮುಖಚರ್ಯೆಗಳು ನಿಜವಾದ ವರ್ತನೆಯನ್ನು ಊಹಿಸಲು ತುಂಬಾ ಪರಿಣಾಮಕಾರಿ ಎಂದು ಖಚಿತಪಡಿಸಿವೆ (ಉದಾಹರಣೆಗೆ ಮೆರ್ಷನ್ & ಗೊರ್ಸುಚ್, ೧೯೮೮[೨೪]; ಪಾವ್ನೋನನ್ & ಆಷ್ಟನ್, ೨೦೦೧[೨೫])
ವೈಯಕ್ತಿಕ ಫೀಡ್ಬ್ಯಾಕ್ನ ಅಂಕಗಳಿಕೆಯಲ್ಲಿ ಈ ಚಹರೆಗಳನ್ನು ಅನೇಕ ಸಲ ಪರ್ಸೆಂಟೈಲ್ ಸ್ಕೋರುಗಳೆಂದು ಪ್ರಸ್ತುತ ಪಡಿಸಲಾಗಿದೆ. ಉದಾಹರಣೆಗೆ, ಮನಸಾಕ್ಷಿ ಕುರಿತಂತೆ ಮಾಡಲಾಗುವ ರೇಟಿಂಗ್ನಲ್ಲಿ ೮೦ನೆಯ ಪರ್ಸೆಂಟೈಲ್ ವ್ಯಕ್ತಿಯ ಉತ್ತಮ ಜವಾಬ್ದಾರಿ ಪ್ರಜ್ಞೆ ಮತ್ತು ಸುವ್ಯವಸ್ಥಿತತೆಯನ್ನು ಸೂಚಿಸುತ್ತದೆ, ಬಹಿರ್ಮುಖತೆಯಲ್ಲಿ ಏಕಾಂತದ ಬಯಕೆ ಮತ್ತು ಮೌನದ ಬಯಕೆಯನ್ನು ಸೂಚಿಸುತ್ತದೆ.
ಆದರೂ ಈ ಚಹರೆಗಳ ಗುಂಪುಗಳು ಅಂಕಿ ಸಂಖ್ಯೆಗಳ ಸರಾಸರಿಯಾಗಿದ್ದು ವೈಯಕ್ತಿಕ ವ್ಯಕ್ತಿತ್ವ ಚಿತ್ರಣದಲ್ಲಿ ಇದಕ್ಕೆ ಹೊರತಾದ ವ್ಯಕ್ತಿತ್ವ ಅಸ್ತಿತ್ವದಲ್ಲಿರಬಹುದು. ಮುಕ್ತತೆಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದವರು ಸಾಮಾನ್ಯವಾಗಿ ಬೌದ್ಧಿಕ ಕುತೂಹಲ, ಭಾವನೆಗಳಿಗೆ ತೆರೆದ ಮನಸು, ಕಲೆಯಲ್ಲಿ ಆಸಕ್ತಿ ಮತ್ತು ಹೊಸ ಪ್ರಯತ್ನಗಳ ಬಗೆಗೆ ಒಲವು ಮತ್ತು ಇಚ್ಛೆ ಹೊಂದಿರುತ್ತಾರೆ. ಆದರೂ ಒಬ್ಬ ನಿರ್ಧಿಷ್ಟ ವ್ಯಕ್ತಿ ಮುಕ್ತತೆಯಲ್ಲಿ ಹೆಚ್ಚು ರೇಟಿಂಗ್ ಪಡೆದು ಹೊಸ ಸಂಸ್ಕೃತಿಗಳ ಬಗೆಗಿನ ಅವಿಷ್ಕಾರದ ಬಗ್ಗೆ ಆಸಕ್ತಿ ತೋರಬಹುದು ಆದರೆ ಆತನಿಗೆ ಕಲೆ ಮತ್ತು ಕಾವ್ಯದ ಬಗ್ಗೆ ಅಂತಹ ಆಸಕ್ತಿ ಇಲ್ಲದೆಯೂ ಇರಬಹುದು. ಸಾಂದರ್ಭಿಕ ಪ್ರಭಾವಗಳು ಕೂಡ ಅಸ್ತಿತ್ವದಲ್ಲಿರುತ್ತವೆ, ಬಹಿರ್ಮುಖಿ ಸ್ವಭಾವದವರಿಗೆ ಆಗಿಂದಾಗ್ಗೆ ಜನರಿಂದ ದೂರ ಉಳಿಯುವ ಅಗತ್ಯ ಉಂಟಾಗಬಹುದು.
ಐದು ದೊಡ್ಡ ಗುಣಾಂಶಗಳ ಮಾಪನದಲ್ಲಿ ಬಳಸಲಾಗುವ ಅಂಶಗಳೆಂದರೆ ಸ್ವವಿವರಣಾತ್ಮಕ ವಾಕ್ಯಗಳು[೨೬] ಅಥವಾ ಭಾಷಾ ಮಾಪನ ಪ್ರಕರಣದಲ್ಲಿ ಒಂಟಿ ಗುಣವಾಚಕವಿರಬಹುದು.[೨೭] ವಾಕ್ಯಾಧಾರಿತ ಮತ್ತು ಕೆಲವು ಭಾಷಾ ಮಾಪನದ ದೀರ್ಘತೆಯ ದೆಸೆ, ಪ್ರಶ್ನಾವಳಿಯ ಅವಕಾಶ ಮತ್ತು ಉತ್ತರಿಸುವವನ ಕಾಲಾವಧಿ ಸೀಮಿತವಾಗಿದ್ದಾಗ ಆನ್ವಯಿಕ ಸಂಶೋಧನಾ ವ್ಯವಸ್ಥೆಯಲ್ಲಿ ಸಂಕ್ಷಿಪ್ತ ರೂಪಗಳನ್ನು ಅಭಿವೃದ್ಧಿ ಪಡಿಸಿ ಅವುಗಳ ಮೌಲ್ಯ ನಿರ್ಧರಿಸಲಾಗಿದೆ. ಅವುಗಳೆಂದರೆ ೪೦-ಐಟಮ್ ಬ್ಯಾಲೆನ್ಸ್ಡ್ ಇಂಟರ್ನ್ಯಾಷನಲ್ ಇಂಗ್ಲೀಷ್ ಬಿಗ್ ಫೈವ್ ಮಿನಿ ಮಾರ್ಕರ್ಸ್ [೨೮] ಅಥವಾ ತುಂಬಾ ಸಂಕ್ಷಿಪ್ತವಾದ (೧೦ ಐಟಮ್) ಮೆಷರ್ ಆಫ್ ಬಿಗ್ ಫೈವ್ ಡೊಮೈನ್ಸ್.[೨೯]
ಮುಕ್ತತೆ ಮತ್ತು ಅನುಭವ
[ಬದಲಾಯಿಸಿ]ಮುಕ್ತತೆ , ಕಲೆ, ಭಾವನಾತ್ಮಕತೆ, ಸಾಹಸ, ಅಸಾಮಾನ್ಯ ವಿಚಾರಗಳು, ಕಾಲ್ಪನಿಕತೆ, ಕುತೂಹಲ ಮತ್ತು ಅನುಭವಾತ್ಮಕ ವೈವಿಧ್ಯತೆಗಳ ಬಗೆಗಿನ ಸಾಮಾನ್ಯ ಮೆಚ್ಚುಗೆ. ಈ ಚಹರೆಗಳು ಸರಳವಾದ, ಸಾಂಪ್ರದಾಯಿಕ ಜನರಿಂದ ಕಲ್ಪನಾತ್ಮಕ ವ್ಯಕ್ತಿಗಳನ್ನು ವಿಶಿಷ್ಟೀಕರಿಸಿ ನೋಡುತ್ತವೆ. ಹೊಸ ಅನುಭವಗಳಿಗೆ ಮುಕ್ತವಾಗಿರುವ ವ್ಯಕ್ತಿಗಳು ಬೌದ್ಧಿಕ ಕುತೂಹಲಿಗಳು, ಕಲೆಯ ಬಗ್ಗೆ ಮೆಚ್ಚುಗೆ ಮತ್ತು ಸೌಂದರ್ಯಕ್ಕೆ ಸೂಕ್ಷ್ಮಜ್ಞರಾಗಿರುತ್ತಾರೆ. ಬಿಗುಮಾನದ ವ್ಯಕ್ತಿಗಳಿಗೆ ಹೋಲಿಸಿದರೆ ಅವರು ಹೆಚ್ಚು ಕ್ರಿಯಾಶೀಲರು ಮತ್ತು ತಮ್ಮ ಭಾವನೆಗಳ ಬಗ್ಗೆ ಎಚ್ಚರವಾಗಿರುತ್ತಾರೆ. ಇಂತಹವರು ಅಸಂಪ್ರದಾಯಿಕ ನಂಬಿಕೆಗಳನ್ನು ಹೊಂದಿರುತ್ತಾರೆ.
ಮುಕ್ತತೆಯಲ್ಲಿ ಕಡಿಮೆ ಅಂಕಗಳಿಂದ ಜನ ಹೆಚ್ಚು ಸಾಂಪ್ರದಾಯಿಕ ಮತ್ತು ಪಾರಂಪರಿಕ ಆಸಕ್ತಿಗಳನ್ನು ಹೊಂದಿರುತ್ತಾರೆ. ಅವರು ಸಂಕೀರ್ಣತೆ, ಸಂಧಿಗ್ಧತೆ ಮತ್ತು ಮಾರ್ಮಿಕತೆಯ ಬದಲು, ಸರಳ, ನೇರವಾದುದಕ್ಕೆ ಆಧ್ಯತೆ ಕೊಡುತ್ತಾರೆ. ಅವರು ಕಲೆ ಮತ್ತು ವಿಜ್ಞಾನವನ್ನು ಅನುಮಾನದಿಂದ ನೋಡಬಹುದು, ಇವೆಲ್ಲಾ ಆಸಕ್ತಿದಾಯಕವಲ್ಲ ಎಂದು ಭಾವಿಸಬಹುದು. ಮುಕ್ತತೆ ಬಗೆಗಿನ ಕೆಲವು ಸ್ವ ಹೇಳಿಕೆಗಳೆಂದರೆ:
ಮುಕ್ತತೆಯ ಅಂಶಗಳ ನಮೂನೆಗಳು
[ಬದಲಾಯಿಸಿ]- ನನಗೆ ವೈವಿಧ್ಯಮಯ ಕಾಲ್ಪನಿಕತೆಗಳಿವೆ.
- ನನಗೆ ವೈವಿಧ್ಯಮಯ ಕಾಲ್ಪನಿಕತೆಗಳಿವೆ.
- ನಾನು ಒಳ್ಳೆಯ ಯೋಜನೆಗಳನ್ನು ಹೊಂದಿದ್ದೇನೆ.
- ನಾನು ಕೆಲವು ವಿಷಯಗಳ ಬಗ್ಗೆ ಪ್ರತಿಫಲನ ಮಾಡಿಕೊಳ್ಳುತ್ತಾ ಸಮಯ ಕಳೆಯುತ್ತೇನೆ.
- ನಾನು ಕಷ್ಟಕರವಾದ ಶಬ್ಧಗಳನ್ನು ಬಳಸುತ್ತೇನೆ.
- ನನಗೆ ಅಮೂರ್ತತೆಯ ಬಗ್ಗೆ ಆಸಕ್ತಿಯಿಲ್ಲ (ವ್ಯತಿರಿಕ್ತವಾಗಿದೆ )
- ನನಗೆ ಒಳ್ಳೆಯ ಕಾಲ್ಪನಿಕತೆಯಿಲ್ಲ. (ವ್ಯತಿರಿಕ್ತವಾಗಿದೆ )
- ಅಮೂರ್ತ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ನನಗೆ ಕಷ್ಟ. (ವ್ಯತಿರಿಕ್ತವಾಗಿದೆ )[೩೦]
ಮನಸಾಕ್ಷಿತ್ವ
[ಬದಲಾಯಿಸಿ]ಮನಸಾಕ್ಷಿತ್ವ ವೆಂದರೆ, ಸ್ವಯಂಶಿಸ್ತು, ಕರ್ತವ್ಯ ಪರತೆ, ಸಾಧನೆಯ ಉದ್ದೇಶವಿರುವ ಸ್ವಭಾವ. ಈ ಚಹರೆಗಳು ತಕ್ಷಣದ ವರ್ತನೆಯ ಬದಲು ಯೋಜಿತ ವರ್ತನೆಗೆ ಆದ್ಯತೆ ಕೊಡುತ್ತವೆ. ನಾವು ನಮ್ಮ ತಹತಹಿಕೆಗಳಾನ್ನು ನಿರ್ದೇಶಿಸುವ, ನಿಯಮಿತಗೊಳಿಸುವ ಮತ್ತು ನಿಯಂತ್ರಿಸುವ ಸ್ವಭಾವದ ಮೇಲೆ ಪ್ರಭಾವ ಬೀರುತ್ತವೆ. ಮನಸ್ಸಾಕ್ಷಿತ್ವ ಸಾಧನೆಯ ಅಗತ್ಯ (NAch) ಎಂಬ ಅಂಶವನ್ನು ಒಳಗೊಳ್ಳುತ್ತವೆ.
ಮನಸಾಕ್ಷಿತ್ವದ ಉದಾಹರಣೆಗಳು
[ಬದಲಾಯಿಸಿ]- ನಾನು ಯಾವಾಗಲೂ ಸಿದ್ಧವಾಗಿರುತ್ತೇನೆ.
- ನಾನು ನನ್ನ ಕೆಲಸದಲ್ಲಿ ನಿಖರತೆ ಬಯಸುತ್ತೇನೆ.
- ನಿಗದಿತ ಕಾರ್ಯಕ್ರಮಗಳನ್ನು ಅನುಸರಿಸುತ್ತೇನೆ.
- ನಾನು ಕೆಲಸದಳನ್ನು ತಕ್ಷಣವೇ ಮಾಡುತ್ತೇನೆ.
- ನನಗೆ ಸುವ್ಯವಸ್ಥೆ ಇಷ್ಟ.
- ನಾನು ವಿವರಗಳಿಗೆ ಗಮನ ಕೊಡುತ್ತೇನೆ.
- ನಾನು ನನ್ನ ವಸ್ತುಗಳನ್ನು ಸುತ್ತಲೂ ಹರಡಿಕೊಂಡಿರುತ್ತೇನೆ.(ವ್ಯತಿರಿಕ್ತವಾಗಿದೆ )
- ನಾನು ವಿಷಯಗಳನ್ನು ಕಗ್ಗಂಟು ಮಾಡಿಕೊಳ್ಳುತ್ತೇನೆ. (ವ್ಯತಿರಿಕ್ತವಾಗಿವೆ )
- ನಾನು ಅನೇಕ ಸಲ ವಸ್ತುಗಳನ್ನು ಅವುಗಳ ಜಾಗಕ್ಕೆ ಹಿಂದಿರುಗಿಸುವುದಿಲ್ಲ. (ವ್ಯತಿರಿಕ್ತವಾಗಿದೆ )
- ನಾನು ನನ್ನ ಕರ್ತವ್ಯಗಳಿಂದ ನುಣುಚಿಕೊಳ್ಳುತ್ತೇನೆ. (ವ್ಯತಿರಿಕ್ತವಾಗಿದೆ )[೩೦]
ಬಹಿರ್ಮುಖತೆ
[ಬದಲಾಯಿಸಿ]ಬಹಿರ್ಮುಖತೆ ಇತ್ಯಾತ್ಮಕ ಭಾವನೆಗಳು, ಚಿಕಿತ್ಸಕ ಗುಣ ಮತ್ತು ಇತರರ ಸಾಂಗತ್ಯದಿಂದ ಉತ್ತೇಜಿತಗೊಳ್ಳುವ ಗುಣಗಳಿಂದ ರೂಪಿತವಾಗಿದೆ. ಬಾಹ್ಯ ಜಗತ್ತಿನೊಂದಿಗೆ ಒಡನಾಡುವ ಗುಣದಿಂದ ಈ ಚಹರೆ ಗುರುತಿಸಲ್ಪಟ್ಟಿದೆ. ಬಹಿರ್ಮುಖಿಗಳು ಜನರೊಡನೆ ಒಡನಾಡುವ ಚೈತನ್ಯಶೀಲರನ್ನಾಗಿ ಗ್ರಹಿಸಲಾಗಿದೆ. ಅವರು ಉತ್ಸಾಹಿಗಳು, ಕ್ರಿಯಾಶೀಲ ವ್ಯಕ್ತಿಗಳಾಗಿದ್ದು, "ಆಗಬಹುದು!" ಅಥವಾ "ಹೋಗೋಣ ನಡೆಯಿರಿ!"ಎನ್ನುತ್ತಾರೆ ರೋಮಾಂಚರನದ ಅವಕಾಶಗಳಿಗಾಗಿ. ಗುಂಪುಗಳಲ್ಲಿರುವಾಗ ಅವರು ಮಾತನಾಡಲು, ತಮ್ಮನ್ನು ತಾವು ದೃಢೀಕರಿಸಿಕೊಳ್ಳಲು ತಮ್ಮೆಡೆಗೆ ಗಮನ ಸೆಳೆದುಕೊಳ್ಳಲು ಇಷ್ಟಪಡುತ್ತಾರೆ.
ಅಂತರ್ಮುಖಿಗಳಿಗೆ ಸಾಮಾಜಿಕ ವಿಜೃಂಭಣೆ ಮತ್ತು ಬಹಿರ್ಮುಖಿಗಳ ಚಟುವಟಿಕೆಯ ಮಟ್ಟದ ಕೊರತೆ ಇರುತ್ತದೆ. ಅವರು ಹೆಚ್ಚು ಮೌನಿಯಾಗಿರಲು, ಪ್ರಾಮುಖ್ಯತೆ ಬಯಸದ, ಉದ್ದೇಶ ಪೂರ್ವಕವಾಗಿ ಮತ್ತು ಸಾಮಾಜಿಕ ಜಗತ್ತಿನ ಜೊತೆಗೆ ಒಡನಾಡುವುದಿಲ್ಲ. ಅವರ ಸಾಮಾಜಿಕ ಒಡನಾಟದ ಕೊರತೆಯನ್ನು ಸಂಕೋಚ ಅಥವಾ ಖಿನ್ನತೆ ಎಂದು ವ್ಯಾಖ್ಯಾನಿಸಬಾರದು. ಅಂತರ್ಮುಖಿಗಳಿಗೆ ಬಹಿರ್ಮುಖಿಗಳಿಗಿಂತ ಕಡಿಮೆ ಉತ್ತೇಜಕತೆ ಸಾಕಾಗುತ್ತದೆ ಮತ್ತು ಬಹಳ ಕಾಲ ಒಂಟಿಯಾಗಿರಬಯಸುತ್ತಾರೆ. ಅವರು ಹೆಚ್ಚು ಕ್ರಿಯಾಶಾಲಿಗಳಾಗಿ, ಚೈತನ್ಯಶೀಲರೂ ಆಗಿರಬಹುದು ಆದರೆ ತುಂಬಾ ಸರಳವಾಗಿ ಅವರು ಸಮಾಜಮುಖಿಯಾಗಿರುವುದಿಲ್ಲ ಅಷ್ಟೇ.
ಬಹಿರ್ಮುಖತೆ ಅಂಶಗಳ ನಮೂನೆಗಳು
[ಬದಲಾಯಿಸಿ]- ಪಾರ್ಟಿಯೇ ನನ್ನ ಜೀವನ.
- ಎಲ್ಲರ ಕೇಂದ್ರ ಬಿಂದುವಾದರೆ ನನಗೇನೂ ಅಭ್ಯಂತರವಿಲ್ಲ.
- ನನ್ನ ಸುತ್ತಮುತ್ತಲೂ ಜನರಿದ್ದರೆ ನಾನು ಹಾಯಾಗಿರುತ್ತೇನೆ
- ನಾನು ಮಾತನ್ನು ಪ್ರಾರಂಭಿಸುತ್ತೇನೆ.
- ನಾನು ಪಾರ್ಟೀಗಳಲ್ಲಿ ವಿವಿಧ ರೀತಿಯ ಜನರೊಂದಿಗೆ ಬಹಳಷ್ಟು ಮಾತನಾಡುತ್ತೇನೆ.
- ಹೊಸಬರೊಂದಿ ನಾನು ಸುಮ್ಮನಿರುತ್ತೇನೆ(ವ್ಯತಿರಿಕ್ತವಾಗಿದೆ )
- ನಾನು ನನ್ನ ಕಡೆ ಎಲ್ಲರ ಗಮನಸೆಳೆಯಲು ಇಚ್ಛಿಸುವುದಿಲ್ಲ. (ವ್ಯತಿರಿಕ್ತವಾಗಿದೆ )
- ನಾನು ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ.(ವ್ಯತಿರಿಕ್ತವಾಗಿದೆ )
- ನನ್ನಲ್ಲಿ ಹೇಳಲು ಬಹಳ ಕಡಿಮೆ ಇದೆ. (ವ್ಯತಿರಿಕ್ತವಾಗಿದೆ )[೩೦]
ಒಪ್ಪಿಕೊಳ್ಳುವಿಕೆ
[ಬದಲಾಯಿಸಿ]ಒಪ್ಪಿಕೊಳ್ಳುವಿಕೆ ಇತರರೊಂದಿಗೆ ಅನುಮಾನ ಮತ್ತು ವಿರೋಧದ ಬದಲು ಅನುಕಂಪ ಮತ್ತು ಸಹಕಾರಿ ಮನೋಭಾವದ ನಡವಳಿಕೆ. ಈ ವ್ಯಕ್ತಿತ್ವ ಸಾಮಾಜಿಕ ಸಾಮರಸ್ಯದ ಬಗೆಗೆ ಸಾಮಾನ್ಯ ಕಾಳಜಿ ಇರುವ ವೈಯಕ್ತಿಕ ವ್ಯತ್ಯಾಸಗಳನ್ನು ಪ್ರತಿಫಲಿಸುತ್ತದೆ. ಒಪ್ಪಿಕೊಳ್ಳುವ ಮನೋಭಾವ ಇರುವ ಜನ ಇತರರ ಜೊತೆಗೆ ಒಡನಾಡಿಯಾಗಿರುವುದನ್ನು ಗೌರವಿಸುತ್ತಾರೆ. ಸಾಮಾನ್ಯವಾಗಿ ಅವರು ಪರಿಗಣಿಸುವ, ಸ್ನೇಹಿಯಾಗಿರುವ, ಉದಾರಿಯಾಗಿರುವ, ನೆರವಾಗುವ ಇತರರೊಂದಿಗೆ ಸಹಕರಿಸಲು ತಮ್ಮ ಹಿತಾಸಕ್ತಿಗಳ ಬಗ್ಗೆ ರಾಜಿ ಮಾಡಿಕೊಳ್ಳುವ ಸ್ವಭಾವಿಗಳಾಗಿರುತ್ತಾರೆ. ಒಪ್ಪಿಕೊಳ್ಳುವ ಸ್ವಭಾವಿಗಳು ಮನುಷ್ಯ ಸ್ವಭಾವದ ಬಗ್ಗೆ ಆಶಾವಾದಿತ್ರದ ದೃಷ್ಟಿ ಹೊಂದಿರುತ್ತಾರೆ. ಮನುಷ್ಯರು ಮೂಲತಃ ಪ್ರಾಮಾಣಿಕರು, ಘನತೆಯುಳ್ಳವರು ಮತ್ತು ನಂಬಿಕೆಗೆ ಅರ್ಹರು ಎಂದು ನಂಬಿರುತ್ತಾರೆ.
ಒಪ್ಪಿಗೆಯ ಸ್ವಭಾವ ಇಲ್ಲದವರು ಇತರರ ಜೊತೆಗೆ ಒಡನಾಡುವುದರ ಬದಲು ಸ್ವಹಿತಾಸಕ್ತಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಅವರಿಗೆ ಇತರರ ಒಳಿತಿನ ಬಗ್ಗೆ ಕಾಳಜಿ ಇರುವುದಿಲ್ಲ, ಇತರರಿಗಾಗಿ ಸಹಾಯ ಹಸ್ತ ಚಾಚಲಾರರು. ಕೆಲವು ಸಲ ಇತರರ ಬಗೆಗಿನ ಅವರ ಸಂದೇಹ, ಅವರಲ್ಲಿ ಅನುಮಾನ ಶತೃತ್ವ ಭಾವನೆ ಮತ್ತು ಅಸಹಕಾರಿ ಭಾವನೆಗಳನ್ನು ಉಂಟುಮಾಡುತ್ತದೆ.
ಒಪ್ಪಿಕೊಳ್ಳುವಿಕೆಯ ಕೆಲವು ನಮೂನೆಗಳು
[ಬದಲಾಯಿಸಿ]- ನಾನು ಜನರಲ್ಲಿ ಆಸಕ್ತಿ ಹೊಂದಿದ್ದೇನೆ.
- ನಾನು ಇತರರ ಭಾವನೆಗಳನ್ನು ಅನುಭವಿಸುತ್ತೇನೆ.
- ನಾನು ಮೃದು ಹೃದಯಿಯಾಗಿದ್ದೇನೆ.
- ನಾನು ಜನರಿಗೆ ಸಮಾಧಾನ ಮಾಡುತ್ತೇನೆ.
- ಇತರರ ನೋವುಗಳಿಗೆ ಅನುಕಂಪ ತೋರಿಸುತ್ತೇನೆ.
- ನಾನು ಇತರರಿಗಾಗಿ ಸಮಯ ತೆಗೆಯುತ್ತೇನೆ.
- ನನಗೆ ಬೇರೆಯವರ ಸಮಸ್ಯೆಗಳಲ್ಲಿ ಆಸಕ್ತಿ ಇಲ್ಲ (ವ್ಯತಿರಿಕ್ತವಾಗಿದೆ )
- ನನಗೆ ನಿಜವಾಗಿಯೂ ಇತರರಲ್ಲಿ ಆಸಕ್ತಿ ಇಲ್ಲ.(ವ್ಯತಿರಿಕ್ತವಾಗಿದೆ )
- ನನಗೆ ಬೇರೆಯವರ ಬಗ್ಗೆ ಕಡಿಮೆ ಕಾಳಜಿ ಇದೆ (ವ್ಯತಿರಿಕ್ತವಾಗಿದೆ )
- ನಾನು ಜನರನ್ನು ಅವಮಾನಿಸುತ್ತೇನೆ. (ವ್ಯತಿರಿಕ್ತವಾಗಿದೆ )[೩೦]
- ನಾನು ಒಬ್ಬನೇ ಇರಲು ಇಷ್ಟ ಪಡುತ್ತೇನೆ. (ವ್ಯತಿರಿಕ್ತವಾಗಿದೆ )
ನ್ಯೂರೋಟಿಸಂ
[ಬದಲಾಯಿಸಿ]ನ್ಯೂರೋಟಿಸಂ ನಲ್ಲಿ ಹೆಚ್ಚು ಅಂಕಗಳಿಸಿಕೊಂಡಿರುವವರು ಭಾವನಾತ್ಮಕ ಪ್ರತಿಕ್ರಿಯಾತ್ಮಕರಾಗಿದ್ದು ಸುಲಭವಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ತುಂಬಾ ಸಾಮಾನ್ಯ ಸಂದರ್ಭಗಳನ್ನು ಅವರು ಅತ್ಯಂತ ಭೀಕರ ಎಂದು, ಸಣ್ಣಪುಟ್ಟ ಹತಾಷೆಗಳನ್ನು ಭರವಸೆಯೇ ಇಲ್ಲದಂತ ಕಷ್ಟಗಳನ್ನಾಗಿ ವ್ಯಾಖ್ಯಾನಿಸುತ್ತಿರುತ್ತಾರೆ. ಅವರ ನಕಾರಾತ್ಮಕ ಭಾವನೆಗಳ ಪ್ರತಿಕ್ರಿಯೆಗಳು ಅವರಲ್ಲಿ ಹೆಚ್ಚುಕಾಲ ಮನೆ ಮಾಡಿಕೊಂಡಿರುತ್ತವೆ, ಅಂದರೆ ಅವರು ಯಾವಾಗಲೂ ಕೆಟ್ಟ ಮನಸ್ಥಿತಿಯಲ್ಲಿರುತ್ತಾರೆ. ಭಾವನೆಗಳನ್ನು ನಿಯಂತ್ರಿಸಿಕೊಳ್ಳುವಲ್ಲಿನ ಈ ಸಮಸ್ಯೆಯಿಂದ ಸ್ಪಷ್ಟವಾಗಿ ಚಿಂತಿಸುವ, ನಿರ್ಧಾರಗಳನ್ನು ತೆಗೆದುಕೊಳ್ಳುವ ಒತ್ತಡದೊಂದಿಗೆ ಪರಿಣಾಮಕಾರಿಯಾಗಿ ಏಗುವ ಮನುಷ್ಯ ಸಾಮರ್ಥ್ಯವನ್ನೇ ಕುಗ್ಗಿಸಿಬಿಡುತ್ತವೆ.
ಈ ಮಾಪನದ ಇನ್ನೊಂದು ಕಡೆ, ನ್ಯೂರೋಟಿಸಿಸಂನಲ್ಲಿ ಕಡಿಮೆ ಅಂಕಗಳಿಸಿದವರು ಅಷ್ಟು ಸುಲಭವಾಗಿ ಬೇಸರಮಾಡಿಕೊಳ್ಳುವುದಿಲ್ಲ, ನಕಾರಾತ್ಮಕ ಭಾವನೆಗಳಿಂದ ಪ್ರತಿಕ್ರಿಯಿಸುವುದಿಲ್ಲ. ಅವರು ಸಮಾಧಾನಿಯಾಗಿ, ಭಾವನಾತ್ಮಕ ಸದೃಢತೆಯಿಂದ ಇದ್ದು ಆಗಿಂದಾಗ್ಗೆ ಉಂಟಾಗುವ ನಕಾರಾತ್ಮಕ ಭಾವನೆಗಳಿಂದ ಮುಕ್ತಿಗಾಗಿರುತ್ತಾರೆ. ಕಡಿಮೆ ಅಂಕಗಳಿಸಿದವರು, ನಕಾರಾತ್ಮಕ ಭಾವನೆಗಳಿಂದ ಮುಕ್ತರಾದವರಲ್ಲಿ ಬಹಳಷ್ಟು ಇತ್ಯಾತ್ಮಕ ಭಾವನೆಗಳಿರುತ್ತವೆ ಎಂದು ಅರ್ಥವಲ್ಲ.
ನ್ಯೂರೋಟಿಸಂನ ಕೆಲವು ನಮೂನೆಗಳು
[ಬದಲಾಯಿಸಿ]- ನಾನು ಸುಲಭವಾಗಿ ಗೊಂದಲಕ್ಕೊಳಗಾಗುತ್ತೇನೆ.
- ನನ್ನ ಮನಸ್ಸನ್ನು ಹೆಚ್ಚಾಗಿ ಬದಲಾಯಿಸುತ್ತೇನೆ
- ನಾನು ಸುಲಭವಾಗಿ ಸಿಟ್ಟಿಗೊಳಗಾಗುತ್ತೇನೆ.
- ನಾನು ಸುಲಭವಾಗಿ ಒತ್ತಡಕ್ಕೊಳಗಾಗುತ್ತೇನೆ.
- ನಾನು ಸುಲಭವಾಗಿ ಖಿನ್ನತೆಗೊಳಗಾಗುತ್ತೇನೆ.
- ನಾನು ಮನಸ್ಸಿನ ಹೊಯ್ದಾಟವನ್ನು ಪದೇ ಪದೇ ಹೊಂದುತ್ತೇನೆ.
- ಪದೇ ಪದೇ ನಾನು ಮನೋವ್ಯಥೆ ಅನುಭವಿಸುತ್ತೇನೆ.
- ನಾನು ವಸ್ತುಗಳ ಬಗ್ಗೆ ಚಿಂತಿಸುತ್ತೇನೆ.
- ನಾನು ಯಾವಾಗಲೂ ಆರಾಮವಾಗಿರುತ್ತೇನೆ. (ವ್ಯತಿರಿಕ್ತವಾಗಿದೆ)
- ನಾನು ಯಾವಾಗಲಾದರೂ ಒಮ್ಮೆ ಮನೋವ್ಯಥೆ ಅನುಭವಿಸುತ್ತೇನೆ. (ವ್ಯತಿರಿಕ್ತವಾಗಿದೆ)[೩೦]
ಇತಿಹಾಸ
[ಬದಲಾಯಿಸಿ]ವ್ಯಕ್ತಿತ್ವಗಳ ಪ್ರಾರಂಭಿಕ ಸಂಶೋಧನೆ
[ಬದಲಾಯಿಸಿ]ಲೆಕ್ಸಿಕಲ್ ಹೈಪೋಥಿಸಿಸ್ ಎಂದು ಕರೆಯಲಾಗಿರುವ ಅಂಶವನ್ನು ಮೊದಲಿಗೆ ಗುರುತಿಸಿದವನು ಸರ್ ಫ್ರಾನ್ಸಿಸ್ ಗ್ಯಾಲ್ಟನ್ ಎಂಬ ವಿಜ್ಞಾನಿ. ಇದು, ಮನುಷ್ಯರ ಜೀವನದಲ್ಲಿನ ಅತ್ಯಂತ ವಿಶಿಷ್ಟ ಮತ್ತು ಸಾಮಾಜಿಕ ಪ್ರಸ್ತುತತೆಯಿರುವ ವ್ಯಕ್ತಿತ್ವ ಭಿನ್ನತೆಗಳು ಮುಂದೆ ಭಾಷೆಯಲ್ಲಿ ಸಂಕೇತಿಸಲ್ಪಡುತ್ತವೆ ಎಂಬ ವಿಚಾರ. ಈ ಹೈಪೋಥಿಸಿಸ್ ಸೂಚಿಸುವ ಮುಂದಿನ ಅಂಶಗಳೆಂದರೆ ಭಾಷೆಯ ಸ್ಯಾಂಪ್ಲಿಂಗ್ಗಳನ್ನು ತೆಗೆದುಕೊಂಡು ಮಾನವ ವ್ಯಕ್ತಿತ್ವ ಚಹರೆಗಳ ಸಮಗ್ರ ಟ್ಯಾಕ್ಸಾನಮಿಯನ್ನು ನಿರ್ಧರಿಸಬಹುದು.
೧೯೩೬ರಲ್ಲಿ, ಗೀರ್ಡಾನ್ ಅಲ್ಪೋರ್ಟ್ ಮತ್ತು ಎಚ್.ಎಸ್ ಓಡ್ಬರ್ಟ್ ಎಂಬ ವಿಜ್ಞಾನಿಗಳು ಈ ಹೈಪೋಥಿಸಿಸ್ ಅನ್ನು ಅಭ್ಯಾಸಕ್ಕೆ ಒಳಪಡಿಸಿದರು.[೩೧] ಅವರು ಆಕಾಲದಲ್ಲಿ ಲಭ್ಯವಿದ್ದ ಇಂಗ್ಲೀಷ್ ಭಾಷೆಯ ತುಂಬಾ ಸಮಗ್ರವಾದ ಎರಡು ಅರ್ಥಕೋಶಗಳನ್ನು ಅಭ್ಯಾಸ ಮಾಡಿ ವ್ಯಕ್ತಿತ್ವವನ್ನು ವರ್ಣಿಸುವ ೧೭,೯೫೩ ಶಬ್ಧಗಳನ್ನು ಹೆಕ್ಕಿತೆಗೆದರು. ನಂತರ ಅವರು ಈ ಬೃಹತ್ ಪಟ್ಟಿಯನ್ನು ೪,೫೦೪ ಗುಣವಾಚಕಗಳಿಗೆ ತಗ್ಗಿಸಿ ಅವುಗಳಾನ್ನು ಅವರು ವೀಕ್ಷಕ ವಿವರಣೆಗಳು ಮತ್ತು ತುಲನಾತ್ಮಕವಾಗಿ ಶಾಶ್ವತ ಚಹರೆಗಳೆಂದು ನಂಬಿದರು.
೧೯೪೦ರಲ್ಲಿ ಅಲ್ಫೋರ್ಟ್-ಒಡ್ಬರ್ಟರ ಈ ಪಟ್ಟಿಯನ್ನು ತೆಗೆದುಕೊಂಡ ರೇಮಂಡ್ ಕ್ಯಾಟೆಲ್ ಮನಶಾಸ್ತ್ರ ಸಂಶೋಧನೆಯಿಂದಗಳಿಸಿಕೊಂಡ ಶಬ್ಧಗಳನ್ನು ಸೇರಿಸಿ, ಸಮಾನಾರ್ಥಕ ಶಬ್ಧಗಳನ್ನು ತೆಗೆದುಹಾಕಿ ಒಟ್ಟು ಅವುಗಳನ್ನು ೧೭೧ಕ್ಕೆ ತಗ್ಗಿಸಿದರು.[೩೨] ನಂತರ ಅವನು ಪಟ್ಟಿಯಲ್ಲಿರುವ ಗುಣವಾಚಕಗಳ ಮೂಲಕ ಗೊತ್ತುಪಡಿಸಿಕೊಂಡ ವ್ಯಕ್ತಿಗಳಿಗೆ ರೇಟಿಂಗ್ ಕೊಡುವಂತೆ ಸೂಚಿಸಿ ಆ ರೇಟಿಂಗ್ಗಳನ್ನು ವಿಶ್ಲೇಷಿಸಿದ. ಕ್ಯಾಟ್ಟೆಲ್ ವ್ಯಕ್ತಿತ್ವ ಚಹರೆಗಳ ೩೫ ಪ್ರಮುಖ ಗುಂಪುಗಳನ್ನು ಗುರುತಿಸಿ ಅವುಗಳನ್ನು "ವ್ಯಕ್ತಿತ್ವ ವಲಯ" ಎಂದು ಕರೆದ. ನಂತರ ಅವನು ಈ ಚಹರೆಗಳಿಗಾಗಿ ತನ್ನ ಸಹೋದ್ಯೋಗಿಗಳೊಂದಿಗೆ ವ್ಯಕ್ತಿತ್ವ ಪರೀಕ್ಷೆಗಳನ್ನು ರಚಿಸಿದ. ಈ ಪರೀಕ್ಷೆಗಳಿಂದ ಅವರುಗಳಿಸಿಕೊಂಡ ಮಾಹಿತಿಗಳನ್ನು ಆಗ ರೂಪುಗೊಳ್ಳುತ್ತಿದ್ದ ಕಂಪ್ಯೂಟರ್ ತಂತ್ರಜ್ಞಾನದ ಜೊತೆಗೆ ಅಂಶ ವಿಶ್ಲೇಷಣೆಯ ಸಂಖ್ಯಾಶಾಸ್ತ್ರೀಯ ವಿಧಾನದಿಂದ ವಿಶ್ಲೇಷಿಸಿದ. ಇದು ಮುಂದೆ ಹದಿನಾರು ಪ್ರಮುಖ ವ್ಯಕ್ತಿತ್ವ ಅಂಶಗಳ ಫಲಿತಾಂಶ ಕೊಟ್ಟು 16PF ಪ್ರಮುಖ ವ್ಯಕ್ತ್ರಿತ್ವ ಮಾಪನ ಪ್ರಶ್ನಾವಳಿ ರೂಪುಗೊಳ್ಳಲು ದಾರಿ ಮಾಡಿಕೊಟ್ಟಿತು.
೧೯೬೧ರಲ್ಲಿ ಅರ್ನೆಸ್ಟ್ ಟ್ಯೂಪ್ಸ್ ಮತ್ತು ರೇಮಂಡ್ ಕ್ರಿಸ್ಟಲ್ ಎಂಬ ಇಬ್ಬರು ವಾಯುಪಡೆಯ ಸಂಶೋಧಕರು ಎಂಟು ದೊಡ್ಡ ಸ್ಯಾಂಪಲ್ಗಳಿಂದ ವ್ಯಕ್ತಿತ್ವ ಮಾಹಿತಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದರು. ಕ್ಯಾಟಲ್ನ ಚಹರೆ ಮಾಪಕಗಳನ್ನು ಬಳಸಿಕೊಂಡು ಅವರು ಪುನರಾವರ್ತಿತಗೊಳ್ಳುವ ಐದು ಅಂಶಗಳನ್ನು ಕಂಡುಕೊಂಡರು, ಅವುಗಳಿಗೆ ಅವರು "ಚಿಕಿತ್ಸಕತೆ", "ಒಪ್ಪಿಕೊಳ್ಳುವಿಕೆ", "ಅವಲಂಬಿತತೆ", "ಭಾವನಾತ್ಮಕ ಸದೃಢತೆ", ಮತ್ತು "ಸಂಸ್ಕೃತಿ" ಎಂಬ ಹೆಸರುಗಳನ್ನಿಟ್ಟರು.[೩೩] ಈ ಕೆಲಸವನ್ನು ಅನುಕರಿಸಿದ ವಾರನ್ ನೊರ್ಮನ್ ದೊಡ್ಡ ಗುಂಪುಗಳ ವ್ಯಕ್ತಿತ್ವ ಮಾಹಿತಿಗಳನ್ನು ಮಾಪಿಸಲು ಈ ಐದು ಅಂಶಗಳು ಸಾಕಾಗುತ್ತವೆಂದು ಕಂಡುಕೊಂಡ. ನೋರ್ಮನ್ ಈ ಅಂಶಗಳಿಗೆ ಚಿಕಿತ್ಸಕತೆ, ಒಪ್ಪಿಕೊಳ್ಳುವಿಕೆ, ಮನಸಾಕ್ಷಿತ್ವ, ಭಾವನಾತ್ಮಕ ಸದೃಡತೆ ಮತ್ತು ಸಂಸ್ಕೃತಿ ಎಂಬ ಹೆಸರುಗಳನ್ನಿಟ್ಟ.[೩೪]
ಈ ಬೆಳವಣಿಗೆಯನ್ನು ತನ್ನ ೧೬ PF ಮಾದರಿಯ ಮೇಲಿನ ದಾಳಿ ಎಂದು ಭಾವಿಸಿದ ರೇಮಂಡ್ ಕ್ಯಾಟ್ಟೆಲ್ ಬೆಳವಣಿಗೆಯಾಗುತ್ತಿದ್ದ ಐದು ಅಂಶಗಳ ಬಗೆಗಿನ ಸಹಮತವನ್ನು ಒಪ್ಪಿಕೊಳ್ಳಲಿಲ್ಲ. ಇದನ್ನು ಅವನು "...ಐದು ಅಂಶಗಳ ವಿತಂಡವಾದ ಎಂದು ಕರೆದು ಇದು ವ್ಯಕ್ತಿತ್ವದ ೧೬ PF ಪರೀಕ್ಷೆಗೆ ವಿರುದ್ಧವಾದುದು..." ಎಂದು ಪರಿಗಣಿಸಿದ.
ಆಮೇರಿಕನ್ ಸೈಕಾಲಜಿಸ್ಟ್ ಪ್ರಕಟವಾದ ಗೋಲ್ಡ್ಬರ್ಗ್ನ ಲೇಖನಕ್ಕೆ ಪ್ರತಿಕ್ರಿಯಿಸಿದ, "ಅವನು ಫಿನೊಟೈಪಿಕ್ ಪರ್ಸನಾಲಿಟಿ ಟ್ರೈಟ್ಸ್ನ ರಚನೆ ಬಗ್ಗೆ ಹೇಳಿದ ವ್ಯಕ್ತಿತ್ವದ ಐದು ಅಂಶಗಳ ತಾತ್ವಿಕತೆಯನ್ನು ಅನುಭವವಿರುವ ಯಾವು ಫ್ಯಾಕ್ಟರಿಸ್ಟ್ ಕೂಡ ಒಪ್ಪಲು ಸಾಧ್ಯವಿಲ್ಲ". ಇದು ಅವನ ೧೬ ಅಂಶಗಳ ಮೊದಲಿಗೆ ಇರುವ FFM ಸವಾಲುಗಳಿಗೆ ತಿರಸ್ಕಾರವನ್ನು ನಿರ್ಧರಿಸಿತು, ಇದು ಅವನ ಜೀವಿತ ಕಾಲದ ಕೊನೆಯಲ್ಲಿ ಪ್ರಕಟವಾದ ವ್ಯಕ್ತಿತ್ವ ವಲಯದ ಐದು ಅಂಶಗಳ ಬೂಟಾಟಿಕೆ, ಎಂಬ ಲೇಖನದಲ್ಲಿ ವ್ಯಕ್ತವಾಗಿದೆ ಕ್ಯಾಟೈಲ್ ಆರ್.ಬಿ ( ೧೯೯೫, ದ ಸೈಕಾಲಜಿಸ್ಟ್, ದ ಬ್ರಿಟಿಷ್ ಸೈಕಾಲಜಿಕಲ್ ಸೊಸೈಟಿ, ಮೇ ಸಂಚಿಕೆ, ಪುಟ ೨೦೭-೨೦೮)
ಸಂಶೋಧನೆಯ ಕೊರತೆ ಕಾಲ
[ಬದಲಾಯಿಸಿ]ಮುಂದಿನ ಎರಡು ದಶಕಗಳಲ್ಲಿ ಬದಲಾಗುತ್ತಿದ್ದ ಸಮಾನ ಅನಿಸಿಕೆಗಳ ಕಾಲಗುಣ ಸಂಶೋಧನೆಯ ಪ್ರಕಟಣೆ ದುಸ್ತರವಾಯಿತು. ೧೯೬೮ರಲ್ಲಿ ತನ್ನ ವ್ಯಕ್ತಿತ್ವ ಮತ್ತು ವಿಶ್ಲೇಷಣೆ ಎಂಬ ಪುಸ್ತಕದಲ್ಲಿ ವಾಲ್ಟರ್ ಮಿಷೆಲ್ ೦.೩ ಗಿಂತ ಹೆಚ್ಚು ಒಳಸಂಬಂಧಗಳ ಮೂಲಕ ವ್ಯಕ್ತಿತ್ವ ಪರೀಕ್ಷೆಗಳು ವರ್ತನೆಯನ್ನು ಊಹಿಸಲಾರವು ಎಂದು ದೃಡವಾಗಿ ಹೇಳಿದ. ಮಿಷೆಲ್ನಂತ ಸಾಮಾಜಿಕ ಮನಶಾಸ್ತ್ರಜ್ಞರು ಮನೋಭಾವ ಮತ್ತು ವರ್ತನೆಗಳು ದೃಡವಾಗಿರುವುದಿಲ್ಲ ಸಂಧರ್ಭಗಳ ಪ್ರಕಾರ ಅವು ಬದಲಾಗುತ್ತಿರುತ್ತವೆ ಎಂದು ವಾದಿಸಿದ. ವ್ಯಕ್ತಿತ್ವದ ಮೂಲಕ ವರ್ತನೆಯನ್ನು ಊಹಿಸುವುದು ಅಸಾಧ್ಯ ಎಂದು ಪರಿಗಣಿಸಲಾಯಿತು. ೧೯೭೦ನೇ ದಶಕದ ಸಿಚುಯೇಷನಿಸ್ಟರು, ಲೋಕದಲ್ಲಿನ ಭ್ರಮೆಯ ನಿರಂತರತೆಯನ್ನು [who?]ನಿರ್ವಹಿಸಿಕೊಂಡು ಹೋಗಲು ವ್ಯಕ್ತಿತ್ವ ಎಂಬುದು ಬೇರೆಯವರ ಮೇಲೆ ಹೊರಿಸಲು ಹುಟ್ಟಿ ಕೊಂಡಿರುವ ಒಂದು ಗ್ರಹಿತ ಸಂರಚನೆ ಮಾತ್ರ ಎಂದು ಹೇಳುವ ಮಟ್ಟಿಗೆ ಮುಂದುವರೆದರು.
೧೯೮೦ರ ವೇಳೆಯಲ್ಲಿ ಉಧ್ಭವಿಸುತ್ತಿದ್ದ ವಿಧಾನಗಳು ಈ ದೃಷ್ಟಿ ಕೋನಕ್ಕೆ ಸವಾಲು ಒಡ್ಡಿದವು. ನೆಚ್ಚಿಗೆಗೆ ಅರ್ಹವಲ್ಲದ ವರ್ತನೆಯ ಒಂದು ಉದಾಹರಣೆಯನ್ನ ಊಹಿಸುವ ಬದಲು ಹೆಚ್ಚಿನ ಸಂಖ್ಯೆಯ ವೀಕ್ಷಣೆಗಳ ಸರಾಸರಿಯ ಮೂಲಕ ವರ್ತನೆಯ ಸಂರಚನೆಯನ್ನ ಊಹಿಸಬಹುದೆಂದು ವಿಜ್ಞಾನಿಗಳು ಕಂಡು ಕೊಂಡರು. ಇದರ ಫಲಿತವಾಗಿ ವ್ಯಕ್ತಿತ್ವ ಮತ್ತು ವರ್ತನೆಗಳ ನಡುವಿನ ಒಳ ಹೆಣಿಗೆಯಲ್ಲಿ ಹೆಚ್ಚಳವಾಯಿತು. ಮತ್ತು ವಾಸ್ತವಿಕವಾಗಿ ವ್ಯಕ್ತಿತ್ವ ಅಸ್ತಿತ್ವದಲ್ಲಿದೆ ಎಂಬುದು ಸ್ಪಷ್ಟವಾಗ ತೊಡಗಿತು. ಈಗ ಮಾನವ ವರ್ತನೆಯನ್ನು ಅಂದಾಜಿಸಲು ವ್ಯಕ್ತಿತ್ವ ಮತ್ತು ಸಾಂಧರ್ಭಿಕ ಏರಿಳಿತಗಳು ಅಗತ್ಯವಿದೆ ಎಂಬುದನ್ನು ವ್ಯಕ್ತಿತ್ವ ಮತ್ತು ಸಾಮಾಜಿಕ ಮನಶಾಸ್ತ್ರಜ್ಞಾರು ಸಾಮಾನ್ಯವಾಗಿ ಒಪ್ಪುತ್ತಾರೆ. ಚಹರೆಯ ತಾತ್ವಿಕತೆಗಳು ಸಮರ್ಥನೆಗೊಂಡು ಈ ಕ್ಷೇತ್ರದಲ್ಲಿ ಕುತೂಹಲ ಮತ್ತೆ ಹುಟ್ಟಿಕೊಂಡಿತು.
೧೯೮೦ ರ ವೇಳೆಗೆ, ಟ್ರೂಪ್ಸ್, ಕ್ರಿಸ್ಟಾಲ್ ಮತ್ತು ನೋರ್ಮನ್ನರ ಮುಂಚೂಣಿ ಸಂಶೋಧನೆಯನ್ನು ಮನಶಾಸ್ತ್ರಜ್ಞರು ಮರೆತೇ ಬಿಟ್ಟಿದ್ದರು. ಗೋಲ್ಡ್ಬರ್ಗ್ ತನ್ನದೇ ಆದ ಲೆಕ್ಸಿಕಲ್ ಪ್ರಾಜೆಕ್ಟನ್ನು ಪ್ರಾರಂಭಿಸಿದ, ಸ್ವಾಂತಂತ್ರವಾಗಿ ಮತ್ತೆ ಐದು ಗುಣಾಂಶಗಳನ್ನು ಕಂಡು ಹಿಡಿದ, ಮತ್ತು ಕ್ರಮೇಣ ಮತ್ತೆ ಅವುಗಳನ್ನ ಮನಶಾಸ್ತ್ರಜ್ಞರ ಗಮನಕ್ಕೆ ತಂದ. ನಂತರ ಈ ಗುಣಾಂಶಗಳಿಗೆ "Big Five" ಎಂಬ ಲೇಬಲ್ಲನ್ನು ಚಲಾವಣಿಗೆ ತಂದ.
ಐದು ದೊಡ್ಡ ಗುಣಾಂಶಗಳ ಮೌಲ್ಯ ಬದ್ಧತೆ
[ಬದಲಾಯಿಸಿ]೧೯೮೧ರಲ್ಲಿ ಹೊನೊಲುಲುನಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ ನಾಲ್ಕು ಪ್ರಮುಖ ಸಂಶೋಧಕರು- ಲೀವಿಸ್ ಗೋಲ್ಡ್ಬರ್ಗ್, ನೋಮಿಟಕೆಮೊಟೊ-ಚೊಕ್, ಆಂಡ್ರೂ ಕಾಮ್ರಿ ಮತ್ತು ಜಾನ್.ಎ.ಡಿಗ್ಮನ್ ಆ ಕಾಲದ ವ್ಯಕ್ತಿತ್ವ ಪರೀಕ್ಷೆಯನ್ನು ಅವಲೋಕಿಸಿದರು. ೧೯೬೩ರಲ್ಲಿ ನೋರ್ಮನ್ ಕಂಡುಹಿಡಿದಿದ್ದಂತೆ, ನಡೆಸಿದ ಪರೀಕ್ಷೆಗಳು ಐದು ಸಾಮಾನ್ಯ ಉಪ ಪಂಗಡಗಳನ್ನು ಮಾಪಿಸಿದವೆಂದು ತೀರ್ಮಾನಿಸಿದರು. ೧೯೮೦ರ ಅವಧಿಯಲ್ಲಿ ಈ ಘಟನೆಯ ನಂತರ ವ್ಯಕ್ತಿತ್ವ ಸಂಶೋಧಕರ ಪೈಕಿ ವ್ಯಕ್ತಿತ್ವ ಮಾದರಿಯ ಐದು ಗುಣಾಂಶಗಳಿಗೆ ವ್ಯಾಪಕ ಸಹಮತ ವ್ಯಕ್ತವಾಯಿತು. ೧೯೮೪ರಲ್ಲಿ ಪೀಟರ್ ಸೇವಿಲ್ಲೆ ಮತ್ತು ಆತನ ತಂಡ ಐದು ಗುಣಾಂಶಗಳ ಪಂಚ ಭುಜ ಮಾದರಿಯನ್ನ ಈ ಮೊದಲಿನ OPQ ಜೊತೆಗೆ ಸೇರಿಸಿದರು, ಈ ಪೆಂಟಾಗನ್ನನ್ನು ೧೯೮೫ರಲ್ಲಿ ರೋಸ್ಟಾ ಮತ್ತು ಮ್ಯಾಕ್ಕ್ರೇ ಪ್ರಕಟಿಸಿದ ಐದು ಗುಣಾಂಶಗಳ ವ್ಯಕ್ತಿತ್ವ ಸೂಚಕಗಳ NEO ತುಂಬಾ ಸಾಮೀಪ್ಯದಲ್ಲಿ ಅನುಸರಿಸಿತು.
ಐದು ಗುಣಾಂಶಗಳ ಮಾದರಿಯ ಒಂದು ಗಣನೀಯ ಸಾಧನೆಯೆಂದರೆ ಈ ಹಿಂದೆ ಹರಿದು ಹಂಚಿ ಹೋಗಿದ್ದ ಅವ್ಯವಸ್ಧೆಯ ಬದಲು ಸುವ್ಯವಸ್ಧೆಯನ್ನು ಪ್ರಾತ್ಯಕ್ಷಿಸುವ ಸಾಮಾನ್ಯ ಟ್ಯಾಕ್ಸಾನಮಿಯ ಸ್ಧಾಪನೆಯಾದದ್ದು. ವ್ಯಕ್ತಿತ್ವದ ಐದು ಗುಣಾಂಶಗಳ ಮಾದರಿಯನ್ನು ಉಳಿದ ಎಲ್ಲ ಮಾದರಿಗಳಿಂದ ಪ್ರತ್ಯೇಕಿಸುವ ಅಂಶವೆಂದರೆ ಅದು ಯಾವುದೇ ಒಬ್ಬ ಮನಶಾಸ್ತ್ರಜ್ಞನ ನಿರ್ಧಿಷ್ಟ ತಾತ್ವಿಕತೆಯನ್ನು ಅಧರಿಸಿಲ್ಲ ಆದರೆ ಮನುಷ್ಯರು ತಮ್ಮ ತಿಳುವಳಿಕೆಯನ್ನು ಪರಸ್ಪರ ಸಂವಹನ ಮಾಡಲು ಜನರು ಬಳಸುವ ಸ್ವಾಭಾವಿಕ ವ್ಯವಸ್ಧೆಯಾಗಿರುವ ಭಾಷೆಯನ್ನು ಆಧರಿಸಿದೆ.
ಅನೇಕ ದೊಡ್ಡ ವಿಶ್ಲೇಷಣೆಗಳು ವಿಸ್ತೃತ ಶೀಂಜನ ವರ್ತನೆಗಳ ಐದು ಅಂಶಗಳ ಊಹಾತ್ಮಕ ಮೌಲ್ಯವನ್ನು ಖಚಿತಪಡಿಸಿದೆ. ವ್ಯಕ್ತಿತ್ವದ ದೊಡ್ಡ ಐದು ಗುಣಾಂಶಗಳ ಆಯಾಮಗಳು ಮತ್ತು ಡೈಯಾಗ್ನೊಸ್ಟಿಕ್ ಅಂಡ್ ಸ್ಟಾಟಿಸ್ಟಿಕಲ್ ಮ್ಯಾನ್ಯುಯರ್ ಆಫ್ ಮೆಂಟಲ್ ಡಿಸ್ ಆರ್ಡರ್ಸ್ (DSM-IV) ನಲ್ಲಿ ವರ್ಗೀಕರಿಸಲಾಗಿರುವ ಪ್ರತಿ ವ್ಯಕ್ತಿತ್ವ ಊನತೆಗಳ ನಡುವಿನ ಸಂಬಂಧವನ್ನ ಸಾಲ್ಸ್ಮನ್ ಮತ್ತು ಪೇಜ್ ಪರಿಶೀಲಿಸಿದ್ದಾರೆ. ೧೫ ಸ್ವಾತಂತ್ರ ಸ್ಯಾಂಪಲ್ಗಳನ್ನು ಪರಿಶೀಲಿಸಿರುವ ಸಂಶೋಧಕರು ಪ್ರತಿ ಊನತೆ ಪ್ರದರ್ಶಿಸಿರುವ ಅನನ್ಯವಾದ ಮತ್ತು ಊಹಿಸಲು ಸಾಧ್ಯವಿರುವ ಐದು ಗುಣಾಂಶಗಳ ಚಿತ್ರಣವನ್ನು ಕಂಡು ಕೊಂಡಿದ್ದಾರೆ. ಊನತೆಯಲ್ಲಿ ಅಡಕವಾಗಿರುವ ತುಂಬಾ ಪ್ರಮುಖ ಮತ್ತು ನಿರಂತರ ವ್ಯಕ್ತಿತ್ವ ಊಹೆಗಳೆಂದರೆ ನ್ಯೂರೋಟಿಸಿಸಂ ಜೊತೆಗಿನ ಇತ್ಯಾತ್ಮಕ ಸಾಂಗತ್ಯ ಮತ್ತು ಒಪ್ಪಿಗೆಯ ಜೊತೆಗಿನ ನಕಾರಾತ್ಮಕ ಸಾಂಗತ್ಯ.[೩೫]
ವೃತ್ತಿ ನಿರ್ವಹಣೆಯಲ್ಲಿ ಕ್ಷೇತ್ರದಲ್ಲಿ ಬ್ಯಾರಿಕ್ ಮತ್ತು ಮೌಂಟ್ ೨೩,೯೯೪ ಮಂದಿ ಭಾಗೀದಾರರ ೧೬೨ ಸ್ಯಾಂಪಲ್ಗಳನ್ನು ಬಳಸಿಕೊಂಡು ೧೧೭ ಅಧ್ಯಯನಗಳನ್ನು ಅವಲೋಕಿಸಿದ್ದಾರೆ. ಎಲ್ಲಾ ವೃತ್ತಿ ಗುಂಪುಗಳ ಪೈಕಿ ಮನಸಾಕ್ಷಿತ್ವಕ್ಕೆ ನಿರ್ವಹಣೆಯ ಜೊತೆಗೆ ನಿರುತರ ಸಂಬಂಧವಿರುವುದನ್ನು ಅವರು ಕಂಡು ಕೊಂಡಿದ್ದಾರೆ ಸಾಮಾಜಿಕ ಸಂವಹನ. ಬಯಸುವ (ಉದಾಹರಣೆಗೆ ಮ್ಯಾನೇಜ್ಮೆಂಟ್ ಮತ್ತು ಮಾರುಕಟ್ಟೆ) ವೃತ್ತಿಯಲ್ಲಿ ಬಹಿರ್ಮುಖತೆ ಒಂದು ಮೌಲ್ಯಯುತ ಊದಾಸಾಧನ. ಹೆಚ್ಚಿನ ಹೇಳಬೇಕೆಂದರೆ, ತರಬೇತಿ ಪರಿಣತಿ ವರ್ಗದಲ್ಲಿ ಬಹಿರ್ಮುಖತೆ ಮತ್ತು ಮುಕ್ತತೆಗಳು ಮೌಲ್ಯಿಯುತ ಊದಾ ಸಾಧನಗಳು.[೩೬][೩೭]
ಆಯ್ದು ವೈಜ್ಞಾನಿಕ ಸಂಶೋಧನೆಗಳು
[ಬದಲಾಯಿಸಿ]ಐದು ಗುಣಾಂಶಗಳ ಬಗೆಗೆ ಮನಶಾಸ್ತ್ರಜ್ಞರ ಪೈಕಿ ಕ್ರಮೇಣ ಬೆಂಬಲದ ಸಹಮತ ಪ್ರಾರಂಭವಾದ ೧೯೦೦ರಿಂದಲೂ ಈ ವ್ಯಕ್ತಿತ್ವ ಚಹರೆಗಳ ಸುತ್ತಲೂ ಸಂಶೋಧನೆಗಳು ಬೆಳವಣಿಗೆಯಾಗುತ್ತಾ ಬಂದಿದೆ (ಊದಾಹರಣೆಗೆ ರಾಬರ್ಟ್ ಹೋಗನ್ ಸಂಪಾದಿಸಿರುವ " ಹ್ಯಾಂಡ್ ಬುಕ್ ಆಫ್ ಪರ್ಸನಾಲಿಟಿ ಸೈಕಾಲಜಿ" ಆಕಾಡೆಮಿಕ್ ಪ್ರೆಸ್,೧೯೭೭)
ವಂಶ ಪಾರಂಪರ್ಯತೆ
[ಬದಲಾಯಿಸಿ]ಎಲ್ಲಾ ಐದು ಗುಣಾಂಶಗಳ ವಂಶ ಪಾರಂಪರ್ಯತೆ ಮತ್ತು ಪರಿಸರದ ಪ್ರಭಾವವನ್ನು ತೋರುತ್ತವೆ. ಈ ಪರಿಣಾಮಗಳು ಸರಿಸುಮಾರು ಸಮ ಪ್ರಮಾಣದಲ್ಲಿವೆಯೆಂದು ಅವಳಿ ಸಂಶೋಧನೆಗಳು ಸೂಚಿಸುತ್ತವೆ.[೩೮] ಐದು ದೊಡ್ಡ ವ್ಯಕ್ತಿತ್ವಗಳು ವಂಶಪಾರಂಪರ್ಯವಾಗಿ ಬರುವುದರ ಒಂದು ವಿಶ್ಲೇಷಣೆ ಕೆಳಗಿನಂತಿದೆ:[೩೯]
- ಮುಕ್ತತೆ: ೫೭%
- ಮನಸಾಕ್ಷಿತ್ವ: ೪೯%
- ಬಹಿರ್ಮುಖತೆ: ೫೪%
- ಒಪ್ಪಿಕೊಳ್ಳುವಿಕೆ: ೪೨%
- ನ್ತ್ಯೂರೋಟಿಸಂ: ೪೮%
- ಒಪ್ಪಿಕೊಳ್ಳುವಿಕೆ: ೪೨%
- ಬಹಿರ್ಮುಖತೆ: ೫೪%
- ಮನಸಾಕ್ಷಿತ್ವ: ೪೯%
ವಿಕಸನ
[ಬದಲಾಯಿಸಿ]ಅನೇಕ ಸಲ ಜನರ ಪರೀಕ್ಷಾ ಅಂಕಗಳಿಕೆಯೊಂದಿಗೆ ತಾಳೆಯಾಗುವ ಲಾಂಜಿಟ್ಯೂಡಿನಲ್ ಮಾಹಿತಿ, ಮತ್ತು ವಿವಿಧ ವಯಸ್ಸಿನ ಗುಂಪುಗಳ ಪೈಕಿ ವ್ಯಕ್ತಿತ್ವದ ಮಟ್ಟವನ್ನು ತುಲಸಿ ಮಾಡುವ ಕ್ರಾಸ್ ಸೆಕ್ಷನಲ್ ಡಾಬಾ ಕುರಿತ ಅನೇಕ ಅಧ್ಯಯನಗಳು ತಾರುಣ್ಯದಲ್ಲಿ ವ್ಯಕ್ತಿತ್ವ ಚಹರೆಗಳು ಹೆಚ್ಚು ಪ್ರಮಾಣದಲ್ಲಿ ಸದೃಡತೆ ಕಂಡು ಬಂದಿರುವುದನ್ನು ತೋರಿಸುತ್ತವೆ.[೪೦]
ಆದರೂ ತುಂಬಾ ಇತ್ತೀಚಿನ ಸಂಶೋಧನೆ ಮತ್ತು ಹಿಂದಿನ ಅಧ್ಯಯನಗಳ ಬಗೆಗಿನ ಮೆಟಾ ಅನಾಲಿಸಿಸ್ ಸೂಚಿಸುವ ಪ್ರಕಾರ ಮನುಷ್ಯನ ಜೀವಿತಾವಧಿಯ ವಿವಿಧ ಹಂತಗಳಲ್ಲಿ ಎಲ್ಲ ಐದು ಚಹರೆಯಲ್ಲಿ ಬದಲಾವಣೆ ಸಂಭವಿಸುತ್ತದೆ. ಹೊಸ ಸಂಶೋಧನೆ ಮೆಚ್ಯುರೇಷನ್ ಎಫೆಕ್ಟಗೆ ಸಾಕ್ಷಿಯನ್ನು ತೋರಿಸುತ್ತದೆ. ಸರಾಸರಿಯಾಗಿ, ಒಪ್ಪಿಕೊಳ್ಳುವಿಕೆ ಮತ್ತು ಮನಸಾಕ್ಷಿತ್ವಗಳು ಕಾಲಕಳೆದಂತೆ ಸಾಧಾರಣವಾಗಿ ಹೆಚ್ಚುತ್ತಾ ಹೋಗುತ್ತವೆ. ಆದರೆ ಬಹಿರ್ಮುಖತೆ, ನ್ಯೂರೋಟಿಸಿಸಂ ಮತ್ತು ಮುಕ್ತತೆಗಳು ಕುಗ್ಗುತ್ತಾ ಹೋಗುತ್ತದೆ.[೪೧] ಈ ಗುಂಪು ಪರಿಣಾಮಗಳ ಜೊತೆಗೆ ವೈಯಕ್ತಿಕ ವ್ಯತ್ಯಸಗಳಿರುತ್ತದೆ. ವಿವಿಧ ಜನ ತಮ್ಮ ಜೀವಿತಕಾಲದ ಎಲ್ಲ ಹಂತಗಳಲ್ಲಿ ಬದಲಾವಣೆಯ ಅನನ್ಯ ಸಂರಚನೆಗಳನ್ನ ತೋರುತ್ತಾರೆ.[೪೨]
ಲಿಂಗ ವ್ಯತ್ಯಾಸಗಳು
[ಬದಲಾಯಿಸಿ]೨೬ ದೇಶಗಳ ಬಹು ಸಂಸ್ಕೃತಿಕ ಸಂಶೋಧನೆಗಳು (N=೨೩.೦೩೧) ವಿಷಯಗಳು ಮತ್ತು ಮತ್ತೆ ೫೫ ದೇಶಗಳ (N=೧೭,೬೩೭ ವಿಷಯಗಳು) ಈ ಐದು ದೊಡ್ಡ ಸೂಚಕಗಳಿಗೆ ಲಿಂಗ ವ್ಯತ್ಯಾಸದ ಜಾಗತಿಕ ಸಂರಚನೆಯನ್ನು ತೋರಿದ್ದಾರೆ. ಮಹಿಳೆಯರು ನಿರಂತರವಾಗಿ ಹೆಚ್ಚಿನ ನ್ಯೂರೋಟಿಸಿಸಂ ಮತ್ತು ಒಪ್ಪಿಕೊಳ್ಳುವಿಕೆಯನ್ನು ಹೇಳಿಕೊಂಡಿದ್ದರೆ, ಪುರುಷರು ಅನೇಕ ಸಲ ಹೆಚ್ಚಿನ ಬಹಿರ್ಮುಖತೆ ಮತ್ತು ಮನಸಾಕ್ಷಿತ್ವವನ್ನು ಹೇಳಿಕೊಂಡಿದ್ದಾರೆ. ಪುರುಷರಿಗೆ ಸಮನಾದ ಅವಕಾಶಗಳು ಮಹಿಳೆಯರಿಗೆ ಇರುವ ಶ್ರೀಮಂತ, ಆರೋಗ್ಯಕರ ಮತ್ತು ಇಗ್ಯಾಲಿಟೇರಿಯನ್ ಸಂಸ್ಕೃತಿಗಳಲ್ಲಿ ವ್ಯಕ್ತಿತ್ವ ಚಹಾರೆಗಳಲ್ಲಿ ಲಿಂಗ ವ್ಯತ್ಯಸಗಳು ಹೆಚ್ಚಾಗಿ ಕಾಣಿಸಿಕೊಂಡಿವೆ.[೪೩][೪೪]
ಜನನ ಅನುಕ್ರಮಣಿಕೆ
[ಬದಲಾಯಿಸಿ]ವ್ಯಕ್ತಿಗಳಲ್ಲಿ ತಮ್ಮ ಜನನದ ಕ್ರಮಕ್ಕೆ ಅನುಗುಣವಾಗಿ ವ್ಯತ್ಯಾಸಗಳಿರುತ್ತವೆ ಎಂಬ ಸಲಹೆಯನ್ನು ಅನೇಕ ಸಲ ಮಾಡಲಾಗಿದೆ. ಫ್ರಾಂಕ್.ಜೆ.ಸಲ್ಲೊವೇ ಹುಟ್ಟಿನ ಅನುಕ್ರಮಣಿಕೆ ವ್ಯಕ್ತಿತ್ವ ಚಹರೆಗಳೊಂದಿಗೆ ಸಾಂಗತ್ಯ ಹೊಂದಿರುವುದನ್ನು ವಾದಿಸುತ್ತಾನೆ. ಮೊದಲು ಹುಟ್ಟಿದವರು ಹೆಚ್ಚು ಮನಸಾಕ್ಷಿತ್ವದವರು, ಸಾಮಾಜಿಕವಾಗಿ ಪ್ರಬಲರು, ಒಪ್ಪಿಕೊಳ್ಳುವಿಕೆ ಕಡಿಮೆ, ಹೊಸಚಿಂತನೆಗಳಿಗೆ ನಂತರ ಹುಟ್ಟಿದವರಿಂಗಿಂತ ಕಡಿಮೆ ಒಲವು ಇರುತ್ತದೆಂದು ಅವನು ಹೇಳಿಕೊಳ್ಳುತ್ತಾನೆ.
ಆದರೂ ಸಲೋವೇನ ಪ್ರಕರಣವನ್ನು ಪ್ರಶ್ನಿಸಲಾಗಿದೆ ಇರುವ ಒಂದು ಟೀಕೆಯೆಂದರೆ ಅವನ ಅಂಕೆ ಅಂಶಗಳು ಜನನ ಅನುಕ್ರಮಣಿಕೆಯ ಕೌಂಟುಬಿಕ ಗಾತ್ರಕ್ಕೆ ಸೀಮಿತ ಗೊಂಡಿದೆ. ವ್ಯಕ್ತಿಯ ವ್ಯಕ್ತಿತ್ವದ ಚಹರೆಗಳಿಗೆ ಕುಟುಂಬದ ಸದಸ್ಯರು (ಅಣ್ಣ ತಮ್ಮಂದಿರು ಅಥವಾ ಪೋಷಕರು) ಅಥವಾ ವ್ಯಕ್ತಿಯ ಹುಟ್ಟಿನ ಅನುಕ್ರಮದ ಬಗ್ಗೆ ತಿಳಿದಿರುವ ಪರಿಚಯಸ್ತರು ಮೌಲ್ಯಕಟ್ಟಿರುವಂತ ಅಧ್ಯಯನಗಳಲ್ಲಿ ಮಾತ್ರ ಹುಟ್ಟಿನ ಅನುಕ್ರಮದ ಪರಿಣಾಮಗಳು ಕಂಡು ಬಂದಿದೆ ಎಂದು ನಂತರದ ವಿಶ್ಲೇಷಣೆಗಳು ಹೇಳುತ್ತವೆ. NEO P1-R ನಂತ ಸ್ವ ವರದಿ ವ್ಯಕ್ತಿತ್ವ ಪರೀಕ್ಷೆಗಳು ಮತ್ತು ರ್ಯಾಂಡಮ್ ಸ್ಯಾಂಪಲ್ಗಳನ್ನು ಬಳಸಿರುವ ದೊಡ್ಡ ಪ್ರಮಾಣದ ಅಧ್ಯಯನಗಳಿಗೆ ವ್ಯಕ್ತಿತ್ವವನ್ನು ತೋರುವ ಜನನ ಅನುಕ್ರಮಣಿಕೆಯ ಯಾವುದೇ ಗಣನೀಯ ಪರಿಣಾಮಗಳು ಕಂಡುಬಂದಿಲ್ಲ.[೪೫][೪೬]
ಅಂತರ್ ಸಾಂಸ್ಕೃತಿಕ ಸಂಶೋಧನೆ
[ಬದಲಾಯಿಸಿ]ವ್ಯಕ್ತಿತ್ವದ ಈ ದೊಡ್ಡ ಐದು ಗುಣಾಂಶಗಳು ಜರ್ಮನ್ ಮತ್ತು ಚೈನೀಸ್ನಂತಹ ಅನೇಕ ವಿಭಿನ್ನ ಭಾಷೆ [೪೭] ಮತ್ತು ಸಂಸ್ಕೃತಿಗಳಲ್ಲಿ ಅನುಕರಿಸಲ್ಪಟ್ಟಿವೆ.[೪೮] ಥಾಂಪ್ಸನ್ ಇಂಟರ್ ನ್ಯಾಷನಲ್ ಇಂಗ್ಲೀಷ್ ಲಾಂಗ್ವೇಜ್ ಸ್ಕೇಲನ್ನು ಬಳಸಿಕೊಂಡು ದೊಡ್ಡ ಐದು ರಚನೆಗಳನ್ನು ವಿವಿಧ ಸಂಸ್ಕೃತಿಗಳಲ್ಲಿ ಪ್ರಾತ್ಯಕ್ಷಿಸಿದ್ದಾನೆ.[೨೮]
ಇದರ ಬಗೆಗಿನ ಇತ್ತೀಚಿನ ಕೆಲಸಗಳು ಗೀರ್ಟ್ ಹೊಫ್ಸ್ಟೆಡ್ನ ಸಾಂಸ್ಕೃತಿಕ ಅಂಶಗಳು, ವೈಯಕ್ತಿಕ, ಅಧಿಕಾರದಿಂದ ಇರುವ ದೂರ ಮತ್ತು ಖಚಿತವಿಲ್ಲದಿರುವಿಕೆಯನ್ನು ನಿಭಾಯಿಸುವ ಅಂಶಗಳ ನಡುವೆ ಮತ್ತು ದೇಶವೊಂದರ ಸರಾಸರಿ ಐದು ದೊಡ್ಡ ಗುಣಾಂಶಗಳಿಕೆಗಳೊಂದಿಗೆ ಸಂಬಂಧ ಸ್ಧಾಪಿಸಿಕೊಂಡಿವೆ.[೪೯] ಉದಾಹರಣೆಗೆ ದೇಶವೊಂದು ವೈಯಕ್ತಿಕತೆಯನ್ನು ಗೌರವಿಸುವ ಪ್ರಮಾಣ ಅದರ ಸರಾಸರಿ ಬಹಿರ್ಮುಖತೆಯ ಸಾಂಗತ್ಯ ಹೊಂದಿದ್ದರೆ, ತಮ್ಮ ಅಧಿಕಾರ ಸಂರಚನೆಯಲ್ಲಿ ಬಹುದೊಡ್ಡ ಪ್ರಮಾಣದ ತಾರತಮ್ಯವನ್ನು ಒಪ್ಪಿಕೊಂಡಿರುವ ಸಂಸ್ಕೃತಿಗಳಲ್ಲಿ ಬದುಕಿರುವ ಜನತೆ ಮನಸಾಕ್ಷಿ ವಿಚಾರದಲ್ಲಿ ಹೆಚ್ಚು ಅಂಕಗಳಿಸುತ್ತಾರೆ. ಈ ವ್ಯತ್ಯಾಸಗಳಿಗೆ ಕಾರಣ ಇನ್ನೂ ಗೊತ್ತಿಲ್ಲ ಇದು ಸಂಶೋಧನೆಯ ಕ್ರಿಯಾಶೀಲ ಕ್ಷೇತ್ರ.
ಮನುಷ್ಯೇತರರು
[ಬದಲಾಯಿಸಿ]ಐದು ದೊಡ್ಡ ವ್ಯಕ್ತಿತ್ವ ಗುಣಾಂಶಗಳನ್ನ ಕೆಲವು ಮನುಷ್ಯೇತಾರ ಜೀವ ಪ್ರಭೇದಗಳಲ್ಲಿ ವಿಶ್ಲೇಷಿಸಲಾಗಿದೆ. ಒಂದು ಸರಣಿ ಅಧ್ಯಯನಗಳಲ್ಲಿ ಚಿಂಪಾಂಜಿಗಳ ವ್ಯಕ್ತಿತ್ವ ಪ್ರಶ್ನಾವಳಿಗಳನ್ನ (CPQ)ಬಳಸಿಕೊಂಡು ಮಾಡಿದ ಜಿಂಪಾಂಜಿಗಳ ಮಾನವಿಕ ಕೀಲಿಂಗ್ಗಳು ಬಹಿರ್ಮುಖತೆ, ಮನಸಾಕ್ಷಿತ್ವ ಮತ್ತು ಒಪ್ಪಿಗೆಯ ಗುಣಾಂಶಗಳನ್ನ ಬಹಿರಂಗಗೊಳಿಸಿವೆ. ಇದರ ಜೊತೆಗೆ ಹೆಚ್ಚುವರಿಯಾಗಿ ಪ್ರಾಣಿ ಸಂಗ್ರಹಾಲಯ, ದೊಡ್ಡ ಸ್ವಾಭಾವಿಕ ಉದ್ಯಾನವನಗಳು ಮತ್ತು ಸಂಶೋಧನಾ ಲ್ಯಾಬೋರೇಟರಿಗಳಲ್ಲಿ ನೂರಾರು ಜಿಂಪಾಂಜಿಗಳ ನಡುವೆ ಪ್ರಾಬಲ್ಯ ಗುಣ ಕೂಡ ಕಾಣಿಸಿದೆ. ಮೂಲ ಪ್ರಾಣಿ ಸಂಗ್ರಹಾಲಯ ಸ್ಯಾಂಪಲ್ಗಳಲ್ಲಿ ಅಥವಾ ಇತರ ವ್ಯವಸ್ಧೆಗಳಲ್ಲಿ ನ್ಯೂರೋಟಿಸಿಸು ಮತ್ತು ಮುಕ್ತತೆಯ ಗುಣಾಂಶಗಳು ಕಂಡು ಬಂದಿಲ್ಲ (ಬಹುಷ್ಟು ಇದು CPQ ನ ವಿನ್ಯಾಸವನ್ನ ಪ್ರತಿಫಲಿಸುತ್ತದೆ)[೫೦]
ಟೀಕೆಗಳು
[ಬದಲಾಯಿಸಿ]ಈ ಐದು ದೊಡ್ಡ ಗುಣಾಂಶಗಳ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಇದು ಮಾದರಿಯ ಬಗೆಗೆ[೫೧] ಟೀಕೆ ಮತ್ತು ಬೆಂಬಲದಲ್ಲಿ ಫಲಿತಗೊಂಡಿದೆ.[೫೨] ಒಂದು ವಿವರಣಾತ್ಮಕ ಅಥವಾ ಊಹಾ ತಾತ್ಚಿಕತೆಯಾಗಿ ಇದರ ವ್ಯಾಪ್ತಿಗೆ ಮಿತಿಗಳಿವೆಯೆಂದು ವಿಮರ್ಶಕರು ವಾದಿಸುತ್ತಾರೆ. ಈ ಐದು ದೊಡ್ಡ ಗುಣಾಂಶಗಳ ಮನುಷ್ಯನ ಸಮಸ್ತ ವ್ಯಕ್ತಿತ್ವವನ್ನ ವಿವರಿಸಲಾರವೆಂದು ವಾದಿಸಲಾಗಿದೆ. ವ್ಯಕ್ತಿತ್ವ ಚಹರೆಗಳ ಆಯಾಮಾತ್ಮಕ ಸಂರಚನೆಯನ್ನು ಗುರುತಿಸಲು ಬಳಸಲಾಗುವ ವಿಧಾನ, ಅಂಶಾತ್ಮಕ ವಿಶ್ಲೇಷಣೆಗಳು, ಅಂಶಗಳ ವಿವಿಧ ಸಂಖ್ಯೆಗಳ ಜೊತೆಗೆ ಇರುವ ಪರಿಹಾರಗಳನ್ನ ಅಯ್ಕೆ ಮಾಡಿಕೊಳ್ಳಲು ಜಾಗತಿಕವಾಗಿ ಮಾನ್ಯತೆ ಇರುವ ಆಧಾರಗಳಿಲ್ಲ ಎಂದು ಇದಕ್ಕೆ ಅನೇಕ ಸವಾಲುಗಳು ಎದುರಾಗಿವೆ. ಅನೇಕ ಸಲ ಕೇಳಿ ಬರುವ ಮತ್ತೊಂದು ಟೀಕೆ ಎಂದರೆ ಈ ಐದು ದೊಡ್ಡ ಗುಣಾಂಶಗಳಿಗೆ ತಾತ್ವಿಕತೆಯ ಮೂಲವಿಲ್ಲ, ಗುಣಹೀನ ವಿಶ್ಲೇಷಣೆಗಳನ್ನು ಗುಂಪುಗೂಡಿಸುವ ಸ್ವಭಾವವಿರುವ ಇದು ಕೇವಲ ಮಾಹಿತಿ ಚಾಲಿತ ತನಿಖೆ.
ಸೀಮಿತ ವ್ಯಾಪ್ತಿ
[ಬದಲಾಯಿಸಿ]ಇರುವ ಒಂದು ಸಾಮಾನ್ಯ ಟೀಕೆಯೆಂದರೆ ದೊಡ್ಡ ಐದು ಗುಣಾಂಶಗಳ ಸಮಸ್ತ ಮಾನವ ವ್ಯಕ್ತಿತ್ವವನ್ನ ವಿವರಿಸಲಾರವು. ಕೆಲವು ಮನಶಾಸ್ತ್ರಜ್ಞರು ಈ ವಿಧಾನದ ಬಗ್ಗೆ ನಿಖರವಾಗಿ ಭಿನ್ನ ಮತ ವ್ಯಕ್ತ ಪಡಿಸಿರುವುದು ಯಾಕೆಂದರೆ ಅದು ವ್ಯಕ್ತಿತ್ವದ ಇತರೆ ವಲಯಗಳನ್ನ, ಅಂದರೆ ಮನುಷ್ಯನೊಬ್ಬನ ಧಾರ್ಮಿಕತೆ, ಸಮಯ ಸಾಧಕತೆ / ಅಪ್ರಾಮಾಣಿಕ ವಿಧಾನ, ಪ್ರಾಮಾಣಿಕತೆ, ಅಡಕ ಖರ್ಚುಗಾರಿಕೆ, ಸಾಂಪ್ರದಾಯಕತೆ, ಪುರುಷತ್ವ/ಸ್ತ್ರೀತ್ವ, ಆಡಂಬರಿಕೆಯ ಪ್ರದರ್ಶನ ಹುಸಿ ಉತ್ತಮಿಕೆ, ತಮಾಷೆಯ ಪ್ರಜ್ಞೆ, ಗುರುತುಗಾರಿಕೆ, ಸ್ವಯಂಪರಿಕಲ್ಪನಾತ್ಮಕತೆ ಮತ್ತು ಉತ್ತೇಜಕತೆಗಳನ್ನ ಉದಾಸೀನ ಮಾಡಿದೆ.
ಈ ಏರಿಳಿತಗಳು ಮತ್ತು ಐದು ದೊಡ್ಡ ಗುಣಾಂಶಗಳ ನಡುವೆ ಸಾಂಗತ್ಯ ಕಂಡುಬಂದಿದೆ,[೫೩] ರಾಜಕೀಯ ಸಾಂಪ್ರಾದಾಯಿಕತೆ ಮತ್ತು ಮುಕ್ತತೆಯ ನಡುವೆ ತಗ್ಗಿದ ಸಂಬಂಧ ಕಂಡು ಬಂದಿದ್ದರೂ ಈ ಚಹರೆಗಳಲ್ಲಿನ ವ್ಯತ್ಯಾಸಗಳನ್ನ ಈ ಐದು ಗುಣಾಂಶಗಳಷ್ಟೇ ಸರಿಯಾಗಿ ವಿವರಿಸಲು ಸಾಧ್ಯವಿಲ್ಲ. ಈ ಐದು ದೊಡ್ಡ ಗುಣಾಂಶಗಳನ್ನ ಮ್ಯಾಕ್ ಆಡಮ್ಸ್ "ಅಪರಿಚಿತ ಮನಶಾಸ್ತ್ರ" ಎನ್ನುತ್ತಾನೆ, ಯಾಕೆಂದರೆ ಅವು ಅಪರಿಚಿತನಲ್ಲಿ ವೀಕ್ಷಿಸಲು ಸುಲಭವಾದ ಚಹರೆಗಳನ್ನು ಉಲ್ಲೇಖಿಸುತ್ತವೆ; ಅತ್ಯಂತ ಖಾಸಗಿಯಾದ ಅಥವಾ ಸಂಧರ್ಭಾವಲಂಬಿತವಾದ ವ್ಯಕ್ತಿತ್ವದ ಇತರೆ ಆಯಾಮಗಳನ್ನ ಈ ಐದು ದೊಡ್ಡ ಗುಣಾಂಶಗಳಿಂದ ಹೊರತು ಪಡಿಸಲಾಗಿದೆ.
ಅನೇಕ ಅಧ್ಯಯನಗಳಲ್ಲಿ ಈ ಐದು ಗುಣಾಂಶಗಳು ಸಂಪೂರ್ಣ ಒಂದಕ್ಕೊಂದು ಆರ್ಥೊಗೊನಲ್ ಅಲ್ಲ ಅಂದರೆ ಈ ಐದು ಗುಣಾಂಶಗಳು ಸ್ವತಂತ್ರವಲ್ಲ. ನ್ಯೂರೋಟಿಸಿಸಂ ಮತ್ತು ಬಹಿರ್ಮುಖತೆಯ, ನಡುವೆ ಅನೇಕ ಸಲ ನಕಾರತ್ಮಕ ಸಾಂಗತ್ಯಗಳು ಕಂಡು ಬರುತ್ತವೆ, ಉದಾಹರಣೆಗೆ ನಕಾರತ್ಮಕ ಭಾವನೆಗಳ ಅನುಭವಕ್ಕೆ ಈಡಾದವರು ಕಡಿಮೆ ಮಾತಾಡುತ್ತಾರೆ ಮತ್ತು ಹೆಚ್ಚು ಸಮಾಜ ಮುಖಿಗಳಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಕೆಲವು ಸಂಶೋಧಕರು ಆರ್ಥೊಗೊನಾಲಿಟಿಯನ್ನ ಅವಶ್ಯಕ ಎಂದು ಭಾವಿಸುತ್ತಾರೆ ಯಾಕೆಂದರೆ ಇದು ಆಯಾಮಗಳ ನಡುವಿನ ಅನುಪಯುಕ್ತತೆಯನ್ನು ಕಡಿಮೆ ಮಾಡುತ್ತದೆ. ಆದಷ್ಟೂ ಕಡಿಮೆ ಏರಿಳಿತಗಳ ಮೂಲಕ ವ್ಯಕ್ತಿತ್ವದ ಸಮಗ್ರವಿವರಣೆ ಕೊಡುವುದು ಅಧ್ಯಯನದ ಗುರಿಯಾದಾಗ ಇದು ನಿರ್ಧಿಷ್ಟವಾಗಿ ಮುಖ್ಯವಾಗುತ್ತದೆ.
ವಿಧಾನಾತ್ಮಕ ಸಮಸ್ಯೆಗಳು
[ಬದಲಾಯಿಸಿ]ವ್ಯಕ್ತಿತ್ವದ ಚಹರೆಗಳ ಆಯಾಮಾತ್ಮಕ ಸಂರಚನೆಯನ್ನು ಗುರುತಿಸಲು ಬಳಸಿರುವ ಅಂಶಿಕ ವಿಶ್ಲೇಷಣೆ ವಿಧಾನ ವಿವಿಧ ಅಂಶಗಳ ಪ್ರಮಾಣದೊಂದಿಗೆ ಇರುವ ಪರಿಹಾರಗಳ ಪೈಕಿ ಆಯ್ಕೆ ಮಾಡಿಕೊಳ್ಳಲು ಜಾಗತಿಕವಾಗಿ ಮಾನ್ಯತೆ ಇರುವ ಆಧಾರ ಅಂಶಗಳಿಲ್ಲವೆಂದು ಅನೇಕ ಸಲ ಸವಾಲು ಎದುರಾಗಿದೆ. ಅಂದರೆ ಐದು ಅಂಶಗಳ ಪರಿಹಾರ ವಿಶ್ಲೇಷಕನ ಕೆಲ ಮಟ್ಟಿಗಿನ ವ್ಯಾಖ್ಯಾನವನ್ನ ಅವಲಂಬಿಸಿರುತ್ತದೆ. ವಾಸ್ತವಿಕವಾಗಿ ಹೆಚ್ಚು ಪ್ರಮಾಣದ ಅಂಶಗಳಿಗೆ ಈ ಐದು ಅಂಶಗಳು ಕಾರಣವಾಗುತ್ತವೆ. ಇದು ಅಂಶಗಳ ನಿಜವಾದ ಸಂಖ್ಯೆಯ ಬಗ್ಗೆ ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಏಕಮಾತ್ರ ಮಾಹಿತಿ ಗುಂಪಿನಲ್ಲಿ ಇತರೆ ಪರಿಹಾರಗಳು ಸಮರ್ಥವಿರಬಹುದಾದರೂ, ವಿವಿಧ ಅಧ್ಯಯನಗಳಲ್ಲಿ ಐದು ಅಂಶಗಳ ಸಂರಚನೆ ಮಾತ್ರ ನಿರಂತರವಾಗಿ ಅನುಕರಣೆಯಾಗಿದೆಯೆಂದು ಐದು ದೊಡ್ಡ ಅಂಶಗಳ ಪ್ರತಿಪಾದಕರು ಪ್ರತಿಕ್ರಿಯಿಸಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]
ಸಾಕ್ಷಿಯ ಬಹಳಷ್ಟು ಪ್ರಮಾಣ ಸ್ವ-ವರದಿ ಪ್ರಶ್ನಾವಳಿಗಳ ಮೇಲೆ ಅವಲಂಬಿತವಾಗಿದೆ, ಸ್ವ-ವರದಿ ವಿಧಾನ ಪೂರ್ವಗ್ರಹ ಪೀಡಿತವಾದದ್ದು ಅದರಲ್ಲಿನ ಪ್ರತಿಕ್ರಿಯೆಗಳ್ಳೊಗಿನ ಸುಳ್ಳುಗಳನ್ನು ಸಂಪೂರ್ಣವಾಗಿ ನಿರ್ವಹಿಸುವುದು ಕಷ್ಟ ಎಂಬುದಾಗಿ ಅನೇಕ ಸಲ ಐದು ದೊಡ್ಡ ಅಂಶಗಳ ವಿಧಾನದ ವಿರುದ್ಧ ಟೀಕೆಗಳು ಕೇಳಿ ಬಂದಿವೆ. ಯಾಕೆ ವ್ಯಕ್ತಿಗಳ ಅಥವಾ ಜನರ ಗುಂಪುಗಳ ಅಂಕಗಳಿಕೆಯಲ್ಲಿ ವ್ಯತ್ಯಾಸಗಳು ಕಂಡು ಬಂದಿವೆ ಎಂಬುದನ್ನು ಪರಿಗಣಿಸಿದಾಗ ಇದು ವಿಶೇಷವಾಗಿ ಪ್ರಾಮುಖ್ಯತೆ ಪಡೆದು ಕೊಳ್ಳುತ್ತದೆ, ಗಳಿಸುವ ಅಂಕಗಳಲ್ಲಿನ ವ್ಯತ್ಯಸಗಳು ವ್ಯಕ್ತಿತ್ವದ ನಿಜವಾದ, ಅಡಕವಾಗಿರುವ ವ್ಯತ್ಯಾಸಗಳನ್ನ ಪ್ರತಿನಿಧಿಸಬಹುದು, ಅಥವಾ ಅವುಗಳು ಜನರು ಪ್ರಶ್ನೆಗಳಿಗೆ ಉತ್ತರದ ಒಂದು ಸರಳ ಬೊಂಬೆಯಂತಿತಬಹುದು. ಐದು ಅಂಶಗಳ ಸಂರಚನೆ ದೀರ್ ವರದಿಗಳಲ್ಲಿ ಅನುಕರಿಸಲ್ಪಟ್ಟಿದೆ.[೫೪] ಆದರೂ ಇದರ ಅನೇಕ ಗಂಭೀರ ಫಲಿತಾಂಶಗಳು ಸ್ವ ವರದಿಗಳನ್ನ ನೆಚ್ಚಿಕೊಂಡಿವೆ.
ತಾತ್ವಿಕ ಸ್ಧಿತಿ
[ಬದಲಾಯಿಸಿ]ಐದು ದೊಡ್ಡ ಗುಣಾಂಶ ವಿಧಾನಕ್ಕೆ ಯಾವುದೇ ಅಡಕ ತತ್ವವಿಲ್ಲ ಇದು ಕೆಲವು ವಿವರಣೆಕಾರರು ಅಂಶ ವಿಶೇಷಣೆ ಹೆಸರಿನಡಿ ಗುಂಪಾಗಿ ಸೇರಿ ಮಾಡಿರುವ ಕೇವಲ ಅನುಭವ ಜನ್ಯ ಗಳಿಕೆ ಇದರ ಬಗೆಗೆ ಆಗಿಂದಾಗ್ಗೆ ಕೇಳಿ ಬರುವ ಟೀಕೆ. ಇದರಿಂದ ಈ ಐದು ಅಂಶಗಳು ಅಸ್ತಿತ್ವದಲ್ಲಿಲ್ಲ ಎಂದಲ್ಲ ಆದರೆ ಅವುಗಳ ಹಿಂದಿನ ಅಡಕ ಕಾರಣಗಳು ಗೊತ್ತಿಲ್ಲ. ಮೋಜು ಮತ್ತು ಹರ್ಷಚಿತ್ತತೆಯನ್ನು ಒಂದು ಅಡಕ ತಾತ್ವಿಕತೆಯ ದೆಸೆ ಬಹಿರ್ಮುಖತೆಯೊಂದಿಗೆ ಸಂಪರ್ಕಿಸಲಾಗಿಲ್ಲ ಈ ಸಂಬಂಧ ವಿವರಿಸಬೇಕಾದ ಒಂದು ಅನುಭವ್ಯಜನ್ಯಗಳಿಕೆ. ಎಲ್ಲ ಐದು ದೊಡ್ಡ ಗುಣಾಂಶಗಳನ್ನ ಒಳ್ಳಗೊಳ್ಳುವಂತೆ ಪಂಚಾಂಶ ತಾತ್ವಿಕತೆ[ಸೂಕ್ತ ಉಲ್ಲೇಖನ ಬೇಕು] ಮತ್ತು ಸಾಮಾಜಿಕ ವಿನಿಯೋಗ ತಾತ್ವಿಕತೆ ಮತ್ತು ಪ್ರಮುಖ ತಾತ್ವಿಕ ಮಾದರಿಗಳನ್ನ ಪ್ರಸ್ತಾಪಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]. ಟೆಂಪರ್ಮೆಂಟ್ ತಾತ್ವಿಕತೆ ಈ ಐದು ದೊಡ್ಡ ಗುಣಾಂಶಗಳಿಗೆ ಒಂದು ತಾತ್ವಿಕ ತಳಹದಿ ಮತ್ತು ಅದಕ್ಕೆ ಜೀವಿತಾವಧಿಯ ಲಾಂಗಿಟ್ಯೂಡಿನಲ್ ಒದಗಿಸಿ ಅದರಲ್ಲಿ ತನ್ನ ನೆಲೆಗಟ್ಟು ಕಂಡುಕೊಳ್ಳುವಂತೆ ಮಾಡಬಹುದು.[ಸೂಕ್ತ ಉಲ್ಲೇಖನ ಬೇಕು]
ಮುಂದುವರೆದ ಸಂಶೋಧನೆ
[ಬದಲಾಯಿಸಿ]ಪ್ರಸಕ್ತ ಸಂಶೋಧನೆ ಅನೇಕ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ ಇರುವ ಮುಖ್ಯ ಪ್ರಶ್ನೆ ಎಂದರೆ ಈ ಐದು ಗುಣಾಂಶಗಳು ಸರಿಯಾ? ಸ್ಧಳೀಯ ಅರ್ಥಕೋಶಗಳೊಂದಿಗೆ ಈ ಐದು ಗುಣಾಂಶಗಳನ್ನ ಬೇರೆ ದೇಶಗಳಲ್ಲಿ ಅನಿಸರಿಸಲು ಮಾಡಿದ ಪ್ರಯತ್ನಗಳು ಕೆಲವು ದೇಶಗಳಲ್ಲಿ ಯಶಸ್ಸು ಕಂಡಿವೆ, ಕೆಲವು ದೇಶಗಳಲ್ಲಿ ಕಂಡಿಲ್ಲ. ತೋರುವಂತೆ ಉದಾಹರಣೆಗೆ ಹಂಗೇರಿಯನ್ನರಿಗೆ ಒಂದು ಒಪ್ಪಿಗೆಯ ಅಂಶ ಕೂಡ ಇರುವಂತಿಲ್ಲ ಇತರೆ ಸಂಶೋಧಕರು ಒಪ್ಪಿಗೆಯ ಗುಣಾಂಶಕ್ಕೆ ಸಾಕ್ಷಿಗಳನ್ನು ಕಂಡು ಕೊಳ್ಳುತ್ತಾರೆ[೫೫] ಆದರೆ ಇತರೆ ಗುಣಾಂಶಗಳಿಗಲ್ಲ.
ವ್ಯಕ್ತಿತ್ವ ಚಹರೆಗಳಲ್ಲಿನ ಏರಿಳಿತಗಳನ್ನ ಪೂರ್ಣ ಪ್ರಮಾಣದಲ್ಲಿ ವಿವರಿಸುವ ಪ್ರಯತ್ನದಲ್ಲಿ , ಕೆಲವರಲ್ಲಿ ಏಳು ಗುಣಾಂಶಗಳು,ಕೆಲವರಲ್ಲಿ ಹದಿನೆಂಟು, ಕೆಲವರಲ್ಲಿ ಮೂರು ಗುಣಾಂಶಗಳು ಮಾತ್ರ ಕಂಡು ಬಂದಿವೆ. ಮುಂದಿನ ಗುಣಾಂಶಗಳ ಸಂಖ್ಯೆಯನ್ನು ನಿರ್ಧರಿಸುವುದು ಮೊದಲಿಗೆ ಗುಣಾಂಶ ವಿಶ್ಲೇಷಣೆಗೆ ಯಾವ ಬಗೆಯ ಮಾಹಿತಿಯನ್ನು ಒದಗಿಸುತ್ತೇವೆ ಎಂಬುದು ಮುಖ್ಯ.( ಅಂದರೆ garbage in garbage out ತತ್ವ) ಅನೇಕ ಸಲ ತಾತ್ವಿಕತೆ ಅಪರೋಕ್ಷವಾಗಿ ಅನುಭವಜನ್ಯ, ವಿಜ್ಞಾನ (ಗುಣಾಂಶ ವಿಶ್ಲೇಷಣೆ ಯಂತ) ಏನ್ನ ಹಿಂದಕ್ಕೆ ಸರಿಸುವುದರಿಂದ ಐದು ದೊಡ್ಡ ಗುಣಾಂಶಗಳು ಮತ್ತು ಇತರೆ ಪ್ರಸ್ತಾಪಿತ ಅಂಶಗಳ ಸಂರಚನೆಯನ್ನ ಅಂಶ ವಿಶ್ಲೇಷಣೆ ನಿಯಾಮಾವಳಿಗೆ ಸೇರ್ಪಡೆಯಾದ ರೀತಿಯಲ್ಲೇ ತೀರ್ಮಾನಿಸಬೇಕು. ನಾನ್ ಕ್ಲಿನಿಕಲ್ ಸ್ಯಾಂಪಲ್ಗಳು ಮತ್ತು ಸೈಕಿಯಾಟ್ರಿಕ್ ರೋಗಿಗಳಲ್ಲಿ DSM ಆಧಾರಿತ ಲಕ್ಷಣಗಳ ಸಂಖ್ಯೆಯನ್ನು ವಿವರಿಸುವಲ್ಲಿ ಏಳು ಅಥವಾ ಎಂಟು ಗುಣಾಂಶ ಮಾದರಿಗಳಿಗೆ ತಮ್ಮದೇ ಆದ ತುಲನಾತ್ಮಕ ಶಕ್ತಿ ಮತ್ತು ದೌರ್ಬಲ್ಯತೆಗಳಿಗೆ ಮತ್ತು ಇವುಗಳನ್ನ ಐದು ದೊಡ್ಡ ಗುಣಾಂಶಗಳನ್ನ ಅಷ್ಟು ಸ್ಪಷ್ಟವಾಗಿ ಮೀರಿಸಿದಂತೆ ತೋರುವುದಿಲ್ಲ ಎಂಬುದನ್ನ ಇತ್ತೀಚಿನ ಅಧ್ಯಯನಗಳು ತೋರಿಸುತ್ತವೆ.
೧೯೯೨ರಲ್ಲಿ ಪಾಲ್ ಸಿಂಕ್ಲೇರ್ ಮತ್ತು ಸ್ಟೀವ್ ಬ್ಯಾರೋ ನಡೆಸಿದ ಒಂದು ಮೌಲ್ಯನಿಷ್ಕರ್ಷೆ ಅಧ್ಯಯನದಲ್ಲಿ ಆಗಿನ TSB ಬ್ಯಾಂಕಿನ ೨೦೨ ಬ್ಯ್ರಾಂಚ್ ಮ್ಯಾನೇಜರ್ಗಳು ಒಳಗೊಂಡಿದ್ದರು. ಅದು ವೃತ್ತಿ ನಿರ್ವಹಣೆಯಲ್ಲಿ ಐದು ದೊಡ್ಡ ಮಾಪಕಗಳ ಪೈಕಿ ೩ರಲ್ಲಿ ಅನೇಕ ಗಣನಿಯ ಸಾಂಗತ್ಯಗಳನ್ನು ಕಂಡುಹಿಡಿಯಿತು. ಈ ಸಾಂಗತ್ಯಗಳು .೨೧ - .೩೩ರ ರೇಜಿನಲ್ಲಿದ್ದು ಹೆಚ್ಚಿನ ಬಹಿರ್ಮುಖತೆ, ಕಡಿಮೆ ನ್ಯೂರೋಟಿಸಿಸಂ ಮತ್ತು ಅನುಭವದ ಬಗೆಗೆ ಹೆಚ್ಚಿನ ಮುಕ್ತತೆ- ಈ ೩ ಮಾಪಕಗಳಲ್ಲಿ ಕಾಣಸಿಕ್ಕವು.[೫೬]
ಅಧ್ಯಯನ ತನಿಖೆಯ ಇನ್ನೊಂದು ಕ್ಷೇತ್ರವೆಂದರೆ ವ್ಯಕ್ತಿತ್ವದ ಸಂಪೂರ್ಣ ಮಾದರಿ ರೂಪಿಸುವಿಕೆ. ಐದು ದೊಡ್ಡ ವ್ಯಕ್ತಿತ್ವ ಚಹರೆಗಳು ಅನುಭವ ಜನ್ಯ ವೀಕ್ಷಣೆಗಳು, ಆದರೆ ತಾತ್ವಿಕತೆಯಲ್ಲ ವ್ಯಕ್ತಿತ್ವ ಸಂಶೋಧನೆಯ ವೀಕ್ಷಣೆಯ ಇನ್ನೂ ವಿವರಿಸಲ್ಪಡಬೇಕಾಗಿವೆ. ವ್ಯಕ್ತಿತ್ವವನ್ನ ತೊಟ್ಟಿಲಿನಿಂದ ಸಮಾಧಿ ತನಕ ವಿವರಿಸಲು ಕೋಸ್ಟಾ ಮತ್ತು ಮ್ಯಾಕ್ ಕ್ರೇ ವ್ಯಕ್ತಿತ್ವದ ಪಂಚ ಗುಣಾಂಶ ತಾತ್ವಿಕತೆಯನ್ನು ಕಟ್ಟಿದರು. ಅವರು ಲೆಕ್ಸಿಕಲ್ ಹೈಪೋಧೀಸಿಸ್ಸನ್ನು ಅನುಸರಿಸಲಿಲ್ಲ ಆದರೆ ಅದೇ ಪಂಚ ಗುಣಾಂಶ ಮೂಲಗಳಿಂದ ಸ್ಪೂರ್ತಿ ಪಡೆದ ತಾತ್ವಿಕತೆ ಚಾಲಿತ ವಿಧಾನ ಬಯಸಿದರು
ಅಧ್ಯಯನ ತನಿಖೆಯ ಇನ್ನೊಂದು ಕ್ಷೇತ್ರವೆಂದರೆ ಪಂಚ ಗುಣಾಂಶ ತಾತ್ವಿಕತೆಯ ಕೆಳಮುಖಿ ವಿಸ್ತರಣೆ ಅಥವಾ ಬಾಲ್ಯಕಾಲಕ್ಕಾಗಿ ಪಂಚ ಗುಣಾಂಶ ವಿಧಾನದ ವಿಸ್ತರಣೆ. ಪಂಚ ಗುಣಾಂಶಗಳು ಮಕ್ಕಳ ಸಾಮಾಜಿಕ ಮತ್ತು ಭಾವನಾತ್ಮಕ ಹೊಂದಾವಣಿಕೆಗಳು ಮತ್ತು ಶೈಕ್ಷಣಿಕ ಸಾಧನೆಯೊಂದಿಗೆ ಸಾಂಗತ್ಯ ಹೊಂದಿರುವುದನ್ನು ಅಧ್ಯಯನಗಳು ಕಂಡುಕೊಂಡಿವೆ. ತೀರಾ ಇತ್ತೀಚೆಗೆ ೯ ರಿಂದ ೧೮ ವಯಸ್ಸಿನ ಮಕ್ಕಳ ವಿಶ್ಲೇಷಣೆಯನ್ನು[೫೭] ಒಳಗೊಂಡ ಮಕ್ಕಳ ಪಂಚ ಗುಣಾಂಶ ಸೂಚಕ ಪ್ರಕಟವಾಯಿತು. ಪ್ರಾಯಷಃ ಈ ಪ್ರಕಟಣೆಗೆ ಕಾರಣ ಪಂಚ ಗುಣಾಂಶ ಮಾದರಿಯನ್ನು ಮಕ್ಕಳಿಗೆ ವಿಸ್ತರಿಸುವುದರ ಬಗ್ಗೆ ಇದ್ದ ವಿವಾದ ಆಲಿವರ್.ಪಿ.ಜಾನ್ ಮತ್ತು ಇತರರು ಪ್ರಯದ ಹುಡುಗರ ಬಗೆಗೆ ನಡೆಸಿದ ಅಧ್ಯಯನ ಎರಡು ಹೊಸ ಅಂಶಗಳನ್ನು ಕಂಡುಕೊಂಡವು ಅವು "ಕಿರಿಕಿರಿ" ಮತ್ತು "ಚಟುವಟಿಕೆ" ಡಚ್ ಮಕ್ಕಳ ಮೇಲೆ ನಡೆಸಿದ ಅಧ್ಯಯನದಲ್ಲಿ ಅದೇ ಎರಡು ಹೊಸ ಅಂಶಗಳು ಎದ್ದು ಕಾಣುತ್ತಿದ್ದವು. ಈ ಹೊಸ ಸೇರ್ಪಡೆಗಳು ವ್ಯಕ್ತಿತ್ವದ ಚಹರೆಗಳು ವಯಸ್ಕರಿಗಿಂತ ಮಕ್ಕಳಲ್ಲಿ ವಿಶಿಷ್ಟವಾಗಿರುತ್ತವೆ[೫೮] ಎಂಬುದನ್ನ ಸೂಚಿಸುತ್ತದೆ ಇದು ಈ ನಿರ್ಧಿಷ್ಟ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಅಧ್ಯಯನವನ್ನ ವಿವರಿಸುತ್ತದೆ.
ಆಕರಗಳು
[ಬದಲಾಯಿಸಿ]- ↑ "Personality Project". Archived from the original on 2007-10-13. Retrieved 2010-06-16.
- ↑ ಡಿಗ್ಮನ್, ಜೆ.ಎಮ್. (೧೯೯೦). Personality structure: Emergence of the five-factor model. Annual Review of Psychology, ೪೧ , ೪೧೭-೪೪೦.
- ↑ ಗೋಲ್ಡ್ಬರ್ಗ್, ಎಲ್. ಆರ್. (೧೯೯೩). The structure of phenotypic personality traits. American Psychologist , ೪೮ , ೨೬-೩೪.
- ↑ ಕೋಸ್ಟಾ, ಪಿ.ಟಿ.,Jr. & ಮೆಕ್ಕ್ರೇ, ಆರ್.ಆರ್. (೧೯೯೨). Revised NEO Personality Inventory (NEO-PI-R) and NEO Five-Factor Inventory (NEO-FFI) manual. Odessa, FL: Psychological Assessment Resources.
- ↑ ರಸ್ಸೆಲ್, ಎಮ್.ಟಿ., & ಕರೋಲ್, ಡಿ. (೧೯೯೪). ೧೬PF Fifth Edition administrator’s manual.’’ Champaign, IL: Institute for Personality & Ability Testing.
- ↑ ಗೋಲ್ಡ್ಬರ್ಗ್, ಎಲ್.ಆರ್. (| ೧೯೮೨ From Ace to Zombie: Some explorations in the language of personality. In C.D. Spielberger & J.N. Butcher (Eds.), Advances in personality assessment, Vol. ೧. Hillsdale, NJ: Erlbaum.
- ↑ ನೊರ್ಮನ್, W.T. & ಗೋಲ್ಡ್ಬರ್ಗ್, L.R. (೧೯೬೬). Raters, ratees, and randomness in personality structure. Journal of Personality and Social Psychology, ೪ , ೬೮೧-೬೯೧.
- ↑ ಪೀಬಡಿ, D. & ಗೋಲ್ಡ್ಬರ್ಗ್, L.R. (೧೯೮೯). Some determinants of factor structures from personality-trait descriptors. Journal of Personality and Social Psychology, ೫೭ , ೫೫೨-೫೬೭.
- ↑ ಸಾಸಿಯರ್, G. & ಗೋಲ್ಡ್ಬರ್ಗ್, L.R. (೧೯೯೬). The language of personality: Lexical perspectives on the five-factor model. In J.S. Wiggins (Ed.), The five-factor model of personality: Theoretical perspectives. New York: Guilford.
- ↑ ಡಿಗ್ಮನ್, J.M. (೧೯೮೯). Five robust trait dimensions: Development, stability, and utility. Journal of Personality, ೫೭ , ೧೯೫-೨೧೪.
- ↑ ಕ್ಯಾಟೆಲ್, R.B. (೧೯೫೭). Personality and motivation: Structure and measurement. New York: Harcourt, Brace & World.
- ↑ ಕಾರ್ಸನ್, S. & O’Dell, J.W. (೧೯೭೬). A guide to the clinical use of the ೧೬PF. Champaign, IL: Institute for Personality & Ability Testing.
- ↑ ಕ್ರಗ್, S.E. & ಜಾನ್ಸ್, E.F. (೧೯೮೬). A large scale cross-validation of second-order personality structure defined by the ೧೬PF. Psychological Reports, ೫೯ , ೬೮೩-೬೯೩.
- ↑ ಕ್ಯಾಟೆಲ್, H.E.P, ಮತ್ತು ಮೀಡ್, A.D. (೨೦೦೭). The ೧೬ Personality Factor Questionnaire (೧೬PF). In G.J. Boyle, G. Matthews, and D.H. Saklofske (Eds.), Handbook of personality theory and testing: Vol. ೨: Personality measurement and assessment. London: Sage.
- ↑ ಕೋಸ್ಟಾ, P.T., Jr. & ಮೆಕ್ಕ್ರೇ, R.R. (೧೯೭೬). Age differences in personality structure: A cluster analytic approach. Journal of Gerontology, ೩೧ , ೫೬೪-೫೭೦.
- ↑ ಕೋಸ್ಟಾ, P.T., Jr. & ಮೆಕ್ಕ್ರೇ, R.R. (೧೯೮೫). The NEO Personality Inventory manual. Odessa, FL: Psychological Assessment Resources.
- ↑ ಮೆಕ್ಕ್ರೇ, R.R. & ಕೋಸ್ಟಾ, P.T., Jr. (| ೧೯೮೭ Validation of the five-factor model of personality across instruments and observers. Journal of Personality and Social Psychology, ೫೨ , ೮೧-೯೦.
- ↑ ಮೆಕ್ಕ್ರೇ, R.R. & ಜಾನ್, O.P. (೧೯೯೨). An introduction to the five-factor model and its applications. Journal of Personality, ೬೦, ೧೭೫-೨೧೫.
- ↑ International Personality Item Pool. (೨೦೦೧). A scientific collaboratory for the development of advanced measures of personality traits and other individual differences (IPIP.ori.org)
- ↑ ಕಾರ್ನಿವೆಜ್, G.L. & ಅಲ್ಲೆನ್, T.J. (೨೦೦೫). Convergent and factorial validity of the ೧೬PF and the NEO-PI-R. Paper presented at the annual convention of the American Psychological Association, Washington, D.C.
- ↑ ಕಾನ್, ಎಸ್. & ರಿಯ್ಕೆ, ಎಮ್. (೧೯೯೪). The ೧೬PF Fifth Edition technical manual. Champaign, IL: Institute for Personality & Ability Testing.
- ↑ ಕ್ಯಾಟೆಲ್, H.E. (೧೯೯೬). The original big five: A historical perspective. European Review of Applied Psychology, ೪೬, ೫-೧೪.
- ↑ ಗ್ರುಕ್ಜಾ, R.A. & ಮತ್ತು ಗೋಲ್ಡ್ಬರ್ಗ್, L.R.(೨೦೦೭). The comparative validity of ೧೧ modern personality inventories: Predictions of behavioral acts, informant reports, and clinical indicators. Journal of Personality Assessment, ೮೯ , ೧೬೭-೧೮೭.
- ↑ ಮರ್ಷನ್, B. & ಗೊರ್ಸಚ್, R.L. (೧೯೮೮). Number of factors in the personality sphere: does increase in factors increase predictability of real-life criteria? Journal of Personality and Social Psychology, ೫೫’’, ೬೭೫-೬೮೦.
- ↑ ಪಾವ್ನೋನೆನ್, S.V. & ಆಷ್ಟನ್, M.S. (೨೦೦೧). Big Five factors and facets and the prediction of behavior. Journal of Personality & Social Psychology, ೮೧, ೫೨೪-೫೩೯.
- ↑ ಡಿ ಫ್ರಯ್ಟ್, F., ಮೆಕ್ಕ್ರೇ, R. R., ಸ್ಜಿರ್ಮಕ್, Z., & ನಾಗಿ, J. (೨೦೦೪). The Five-Factor personality inventory as a measure of the Five-Factor Model: Belgian, American, and Hungarian comparisons with the NEO-PI-R. Assessment, ೧೧, ೨೦೭-೨೧೫.
- ↑ ಗೋಲ್ಡ್ಬರ್ಗ್, L. R. (೧೯೯೨). The development of markers for the Big-five factor structure. Journal of Personality and Social Psychology, ೫೯(೬), ೧೨೧೬-೧೨೨೯
- ↑ ೨೮.೦ ೨೮.೧ ಥಾಂಪ್ಸನ್, E.R. ೨೦೦೮. Development and validation of an international English big-five mini-markers, Personality and Individual Differences . ೪೫(೬): ೫೪೨ – ೫೪೮
- ↑ ಗೋಸ್ಲಿಂಗ್, S. D., ರೆಂಟ್ಫ್ರೋ, P. J. & ಸ್ವ್ಯಾನ್ Jr, W. B. (೨೦೦೩) A very brief measure of the Big-Five personality domains, Journal of Research in Personality ೩೭ (೬), p೫೦೪–೫೨೮
- ↑ ೩೦.೦ ೩೦.೧ ೩೦.೨ ೩೦.೩ ೩೦.೪ International Personality Item Pool
- ↑ ಅಲ್ಪೋರ್ಟ್, G. W. & ಒಡ್ಬರ್ಟ್, H. S. (೧೯೩೬). Trait names: A psycholexical study. Psychological Monographs , ೪೭ , ೨೧೧.
- ↑ ಕ್ಯಾಟೆಲ್, R. B. (೧೯೫೭). Personality and motivation: Structure and measurement . New York: Harcourt, Brace & World. Journal of Personality Disorders , ೧೯(೧) , ೫೩-೬೭.
- ↑ ಟ್ಯೂಪ್ಸ್, E. C., & ಕ್ರಿಸ್ಟಲ್, R. E. (೧೯೬೧). Recurrent personality factors based on trait ratings. USAF ASD Tech. Rep. No. ೬೧-೯೭, Lackland Airforce Base, TX: U. S. Air Force.
- ↑ ನೊರ್ಮನ್, W. T. (೧೯೬೩). Toward an adequate taxonomy of personality attributes: Replicated factor structure in peer nomination personality ratings. Journal of Abnormal and Social Psychology , ೬೬ , ೫೭೪-೫೮೩.
- ↑ ಸಾಲ್ಸ್ಮನ್, L. M. & ಪೇಜ್, A. C. (೨೦೦೪). The five-factor model and personality disorder empirical literature: A meta-analytic review. Clinical Psychology Review , ೨೩ , ೧೦೫೫-೧೦೮೫.
- ↑ ಬ್ಯಾರ್ರಿಕ್, M. R., & ಮೌಂಟ್ M. K. (೧೯೯೧). The Big Five Personality Dimensions and Job Performance: A Meta-Analysis. Personnel Psychology , ೪೪ , ೧-೨೬.
- ↑ ಮೌಂಟ್, M. K. & ಬ್ಯಾರ್ರಿಕ್, M. R. (೧೯೯೮). Five reasons why the "Big Five" article has been frequently cited. Personnel Psychology , ೫೧ , ೮೪೯-೮೫೭.
- ↑ ಜಾಂಗ್, ಕೆ., ಲೈವ್ಸ್ಲೇ, W. J., ವೆಮನ್, P. A. (೧೯೯೬). Heritability of the Big Five Personality Dimensions and Their Facets: A Twin Study. Journal of Personality , ೬೪ , ೫೭೭-೫೯೧.
- ↑ ಬೌಚರ್ಡ್ & ಮೆಕ್ಗ್ವೆ, ೨೦೦೩. "Genetic and environmental influences on human psychological differences." Journal of Neurobiology , ೫೪ , ೪-೪೫.
- ↑ ಮೆಕ್ಕ್ರೇ, R. R. & ಕೋಸ್ಟಾ, P. T. (೧೯೯೦). Personality in adulthood. New York: The Guildford Press.
- ↑ ಶ್ರೀವಾಸ್ತವ, ಎಸ್., ಜಾನ್, O. P., ಗೊಸ್ಲಿಂಗ್, S. D., & ಪಾಟರ್, J. (೨೦೦೩). Development of personality in early and middle adulthood: Set like plaster or persistent change? Journal of Personality and Social Psychology , ೮೪ , ೧೦೪೧-೧೦೫೩.
- ↑ ರಾಬರ್ಟ್ಸ್, B. W., & ಮ್ರೊಸ್ಜೆಕ್, D. (೨೦೦೮). Personality trait change in adulthood. Current Directions in Psychological Science , ೧೭ , ೩೧-೩೫.
- ↑ ಕೋಸ್ಟಾ, P.T. Jr., ಟೆರ್ರಾಸಿಯಾನೊ, A., & ಮೆಕ್ಕ್ರೇ, R.R. (೨೦೦೧). "Gender Differences in Personality Traits Across Cultures: Robust and Surprising Findings" Journal of Personality and Social Psychology, ೮೧(೨) , ೩೨೨-೩೩೧
- ↑ ಸ್ಚಿಮಿಟ್, D. P., ರಿಯಾಲೊ, A., ವೊರಾಸೆಕ್, M., & ಅಲ್ಲಿಕ್, J. (೨೦೦೮). Why can't a man be more like a woman? Sex differences in Big Five personality traits across ೫೫ cultures. Journal of Personality and Social Psychology , ೯೪ , ೧೬೮-೧೮೨.
- ↑ ಹ್ಯಾರಿಸ್, J. R. (೨೦೦೬). No two alike: Human nature and human individuality . WW Norton & Company.
- ↑ ಜೆಫೆರ್ಸನ್, ಟಿ., ಹರ್ಬ್ಸ್ಟ್, J. H., & ಮೆಕ್ಕ್ರೇ, R. R. (೧೯೯೮). Associations between birth order and personality traits: Evidence from self-reports and observer ratings. Journal of Research in Personality , ೩೨ , ೪೯೮-೫೦೯.
- ↑ ಓಸ್ಟೆಂಡೋರ್ಫ್, ಎಫ್. (೧೯೯೦). Sprache und Persoenlichkeitsstruktur: Zur Validitaet des Funf-Factoren-Modells der Persoenlichkeit . Regensburg, Germany: S. Roderer Verlag.
- ↑ ಟ್ರಲ್, T. J. & ಗಿಯರಿ, D. C. (೧೯೯೭). Comparison of the big-five factor structure across samples of Chinese and American adults. Journal of Personality Assessment, ೬೯(೨), ೩೨೪-೩೪೧.
- ↑ ಮೆಕ್ಕ್ರೇ R. R., ಟೆರ್ರಾಸ್ಸಿನೊ, ಎ., & ೭೯ Members of the Personality Profiles of Cultures Project. (೨೦೦೫) Personality Profiles of Cultures: Aggregate Personality Traits. Journal of Personality and Social Psychology, September ೨೦೦೫, ೮೯, No.೩, ೪೦೭–೪೨೫.
- ↑ ವೇಸ್ಸ್ ಎ, ಕಿಂಗ್ JE, ಹಾಪ್ಕಿನ್ಸ್ WD. (೨೦೦೭) A cross-setting study of chimpanzee (Pan troglodytes) personality structure and development: zoological parks and Yerkes National Primate Research Center. Am J Primatol. Nov;೬೯(೧೧):೧೨೬೪-೭೭. PMID ೧೭೩೯೭೦೩೬
- ↑ A contrarian view of the five-factor approach to personality description
- ↑ Solid ground in the wetlands of personality: A reply to Block
- ↑ ಮೆಕ್ಕ್ರೇ, R. R. (೧೯೯೬). Social consequences of experiential openness. Psychological Bulletin , ೧೨೦, ೩೨೩-೩೩೭.
- ↑ ಗೋಲ್ಡ್ಬರ್ಗ್, L. R. (೧೯೯೦). An alternative “description of personality”: The big-five factor structure. Journal of Personality and Social Psychology , ೫೯ , ೧೨೧೬-೧೨೨೯.
- ↑ ಸ್ಜಿಮಾರ್ಕ್, Z., & ಡಿ ರಾಡ್, B. (೧೯೯೪). Taxonomy and structure of Hungarian personality traits. European Journal of Personality , ೮ , ೯೫-೧೧೭.
- ↑ ಸಿಂಕ್ಲೇರ್, ಪಿ. & ಬಾರೋ, ಎಸ್. (೧೯೯೨)Identifying Personality Traits predictive of Performance. The BPS’s journal on Occupational Testing – Selection & Development Review, SDR - ಅಕ್ಟೋಬರ್ ೧೯೯೨ ಸಂಪುಟ ೮ (೫)
- ↑ ಮೆಕ್ಘೀ, ಆರ್.ಎಮ್., ಎಹ್ರ್ಲರ್, ಡಿ.ಜೆ., & ಬುಖಾಲ್ಟ್, ಜೆ. (೨೦೦೭). Five Factor Personality Inventory - Children (FFPI-C). ಆಸ್ಟಿನ್, TX: Pro-Ed.
- ↑ ಜಾನ್, ಒ. ಪಿ., & ಶ್ರೀವಾಸ್ತವ, ಎಸ್. (೧೯೯೯). The Big-Five trait taxonomy: History, measurement, and theoretical perspectives. ಎಲ್.ಎ.ಪರ್ವಿನ್ & ಒ. ಪಿ. ಜಾನ್ (Eds.), Handbook of personality: Theory and research (ಸಂಪುಟ. ೨, pp. ೧೦೨–೧೩೮). New York: Guilford Press.
- Pages using the JsonConfig extension
- Articles with hatnote templates targeting a nonexistent page
- All articles with specifically marked weasel-worded phrases
- Articles with specifically marked weasel-worded phrases from November 2009
- Articles with invalid date parameter in template
- Articles with unsourced statements from September 2009
- Articles with unsourced statements from March 2010
- ವೈಯಕ್ತಿಕ ಲಕ್ಷಣಗಳು
- ಮನೋವಿಜ್ಞಾನ