ವಿಷಯಕ್ಕೆ ಹೋಗು

ನಾಟ್ಟಿಂಗ್ ಹಿಲ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Notting Hill
A poster with a large picture of a women shaded blue on it is stuck to a wall, a man walks in front of it.
The film's poster.
ನಿರ್ದೇಶನRoger Michell
ನಿರ್ಮಾಪಕDuncan Kenworthy
ಲೇಖಕRichard Curtis
ಪಾತ್ರವರ್ಗJulia Roberts
Hugh Grant
Hugh Bonneville
Emma Chambers
James Dreyfus
Rhys Ifans
Tim McInnerny
Gina McKee
ಸಂಗೀತTrevor Jones
ಛಾಯಾಗ್ರಹಣMichael Coulter
ಸಂಕಲನNick Moore
ಸ್ಟುಡಿಯೋPolyGram Films
Working Title Films
ವಿತರಕರುUniversal Pictures
ಬಿಡುಗಡೆಯಾಗಿದ್ದು21 May 1999 (UK)
28 May 1999 (USA)
ಅವಧಿ124 min.
ದೇಶUnited Kingdom
ಭಾಷೆEnglish
ಬಂಡವಾಳ$42 million
ಬಾಕ್ಸ್ ಆಫೀಸ್$363,889,678

ನಾಟ್ಟಿಂಗ್ ಹಿಲ್ 1999ರಲ್ಲಿ ಬಿಡುಗಡೆಯಾದ ಒಂದು ಭಾವಪ್ರಧಾನ, ಹಾಸ್ಯ ಚಲನಚಿತ್ರ. ಚಿತ್ರವನ್ನು ಲಂಡನ್ನಾಟ್ಟಿಂಗ್ ಹಿಲ್ ನ ಪರಿಸರದಲ್ಲಿ ಚಿತ್ರಿಸಲಾಗಿದೆ . ಚಲನಚಿತ್ರವು ಮೇ 21 1999ರಲ್ಲಿ ಬಿಡುಗಡೆಯಾಯಿತು. ಚಿತ್ರಕಥೆಯನ್ನು ರಿಚರ್ಡ್ ಕರ್ಟಿಸ್ ಬರೆದಿದ್ದಾರೆ. ಇವರು ಇದಕ್ಕೂ ಮುಂಚೆ ಫೊರ್ ವೆಡ್ಡಿಂಗ್ಸ್ ಅಂಡ್ ಯೆ ಫ್ಯೂನರಲ್ ಎಂಬ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಚಿತ್ರವನ್ನು ಡಂಕನ್ ಕೆನ್ವರ್ಥಿ ನಿರ್ಮಿಸಿ ರೊಜರ್ ಮಿಚೆಲ್ ನಿರ್ದೇಶಿಸಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಹಗ್ ಗ್ರ್ಯಾಂಟ್, ಜುಲಿಯಾ ರಾಬರ್ಟ್ಸ್, ರೈಸ್ ಇಫಾನ್ಸ್ , ಎಮ್ಮಾ ಚೇಂಬರ್ಸ್ , ಟಿಮ್ ಮ್ಯಾಕ್ ಇನ್ನೆರ್ನಿ, ಗಿನ ಮ್ಯಾಕ್ ಕೀ ಮತ್ತು ಹಗ್ ಬೋನ್ನೆವಿಲ್ ಮುಂತಾದವರಿದ್ದಾರೆ.

ಚಿತ್ರವು ವಿಮರ್ಶಕರ ಮೆಚ್ಚುಗೆ ಗಳಿಸಿತು. ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆಹೊಡೆಯುವುದರ ಜೊತೆಗೆ ಇಲ್ಲಿಯತನಕ ಬಿಡುಗಡೆಯಾದ ಬ್ರಿಟಿಶ್ ಚಿತ್ರಗಳಲ್ಲಿ ಅತ್ಯಧಿಕ ಲಾಭ ಗಳಿಸಿದ ಚಿತ್ರವೆಂಬ ಕೀರ್ತಿಗೆ ಪಾತ್ರವಾಯಿತು. ಚಿತ್ರವು BAFTA ಪ್ರಶಸ್ತಿ ಗಳಿಸುವುದರ ಜೊತೆಗೆ ಮತ್ತೆರಡು ವಿಭಾಗಗಳಲ್ಲಿ ನಾಮಕರಣಗೊಂಡಿತು. ನಾಟ್ಟಿಂಗ್ ಹಿಲ್ ಹಲವಾರು ಪ್ರಶಸ್ತಿಗಳನ್ನು ಗಳಿಸಿತು. ಇದರಲ್ಲಿ ಬ್ರಿಟೀಶ್ ಹಾಸ್ಯ ಪ್ರಶಸ್ತಿ ಮತ್ತು ಧ್ವನಿಮುದ್ರಣಕ್ಕಾಗಿ ಬ್ರಿಟ್ ಪ್ರಶಸ್ತಿ ಒಳಗೊಂಡಿದೆ.

ಕಥಾವಸ್ತು

[ಬದಲಾಯಿಸಿ]

ವಿಲ್ಲಿಯಮ್ ಥಾಕರ್ (ಹಗ್ ಗ್ರ್ಯಾಂಟ್)ನಾಟ್ಟಿಂಗ್ ಹಿಲ್ ನಲ್ಲಿ ಒಂದು ಸ್ವತಂತ್ರ ಪುಸ್ತಕದಂಗಡಿಯ ಮಾಲೀಕ. ಈ ಅಂಗಡಿಯು ಪ್ರವಾಸ-ಕಥನಗಳಿಗೆ ಹೆಸರುವಾಸಿಯಾಗಿರುತ್ತದೆ. ಬುದ್ಧಿವಂತ ಜೊತೆಗೆ ಸುಂದರನಾದ ಈತ ತನ್ನ ವಿಚ್ಚೇದನದ ನಂತರ ಜೀವನೋಪಾಯ ಕಂಡುಕೊಳ್ಳಲು ಅಸಮರ್ಥನಾಗಿರುತ್ತಾನೆ. (ಆತನ ಹೆಂಡತಿಯು "ಹ್ಯಾರಿಸನ್ ಫೋರ್ಡ್ ನ ತದ್ರೂಪದಂತಿರುವ ಮನುಷ್ಯನನ್ನು ಬಿಟ್ಟು ಹೋಗಿರುತ್ತಾಳೆ"). ಈಗ ಅವನು ತನ್ನ ಮನೆಯಲ್ಲಿ ಕಲಾವಿದನಾಗಲು ಬಯಸುತ್ತಿರುವ ಸ್ಪೈಕ್ ಹೆಸರಿನ ಒಬ್ಬ ವಿಲಕ್ಷಣ ವೆಲ್ಶ್ ನ ಜೊತೆಗೆ ವಾಸಿಸುತ್ತಿದ್ದಾನೆ.(ರೈಸ್ ಇಫಾನ್ಸ್). ಒಂದು ದಿನ, ಥಾಕರ್ ಜಗತ್ ಪ್ರಸಿದ್ದ ಹಾಲಿವುಡ್ ನಟಿ ಅನ್ನಾ ಸ್ಕಾಟ್ ಳನ್ನು ಸಂಧಿಸುತ್ತಾನೆ.(ಜುಲಿಯಾ ರಾಬರ್ಟ್ಸ್). ಅವಳು ಲಂಡನ್ ಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಪುಸ್ತಕ ಕೊಂಡುಕೊಳ್ಳಲು ಅವನ ಅಂಗಡಿಗೆ ಬರುತ್ತಾಳೆ. ಇದಾದ ಸ್ವಲ್ಪ ಸಮಯದ ನಂತರ, ಇವರಿಬ್ಬರೂ ಆಕಸ್ಮಿಕವಾಗಿ ರಸ್ತೆಯಲ್ಲಿ ಡಿಕ್ಕಿ ಹೊಡೆಯುತ್ತಾರೆ. ಇದರಿಂದ ವಿಲ್ಲಿಯಮ್ ಕಿತ್ತಳೆ ರಸವನ್ನು ತಮ್ಮಿಬ್ಬರ ಮೇಲೂ ಚೆಲ್ಲಿಕೊಳ್ಳುವಂತಾಗುತ್ತದೆ. ಹೀಗಾಗಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ತನ್ನ ಮನೆಗೆ ಅನ್ನಾ ಬಟ್ಟೆಯನ್ನು ಬದಲಾಯಿಸಿಕೊಳ್ಳಲು ಬರಬಹುದೆಂದು ಹೇಳುತ್ತಾನೆ. ಅವಳು ಒಪ್ಪಿಕೊಂಡ ನಂತರ ಅವರಿಬ್ಬರು ಅವನ ಮನೆಗೆ ನಿರ್ಗಮಿಸುತ್ತಾರೆ. ಬಟ್ಟೆ ಬದಲಾಯಿಸಿದ ನಂತರ, ಅನ್ನಾ ವಿಲ್ಲಿಯಮ್ ಗೆ ಚುಂಬಿಸುವ ಮೂಲಕ ಅವನನ್ನು ಚಕಿತಗೊಳಿಸುತ್ತಾಳೆ. ಜೊತೆಗೆ ಅವರಿಬ್ಬರ ಪರಸ್ಪರ ಆಕರ್ಷಣೆಯ ಪ್ರತೀಕವಾಗಿ ಸಸಿಗಳನ್ನು ನೆಡುತ್ತಾಳೆ.

ಕೆಲವು ದಿನಗಳ ನಂತರ, ವಿಲ್ಲಿಯಮ್ ತನಗೆ ಯಾವುದಾದರೂ ಸಂದೇಶ ಬಂದಿದೆಯೇ ಎಂಬುದಾಗಿ ಸ್ಪೈಕ್ ನನ್ನು ಕೇಳುತ್ತಾನೆ. ಸ್ಪೈಕ್ ಗೆ, ವಿಲ್ ಗೆ ಬಂದ ಯಾವುದೇ ಸಂದೇಶಗಳನ್ನು ಜ್ಞಾಪಿಸಿ ಕೊಳ್ಳಲು ಅಥವಾ ಬರೆದಿಡಲು ತೊಂದರೆಯುಂಟಾಗುತ್ತದೆ. ಆದರೆ "ಯಾರೋ ಅನ್ನಾ ಹೆಸರಿನ ಒಬ್ಬ ಅಮೇರಿಕನ್ ಹುಡುಗಿ" ಕೆಲ ದಿನಗಳ ಹಿಂದೆ ಅವನಿಗೆ ಕರೆಮಾಡಿದ್ದನ್ನು ಸ್ಮರಿಸಿಕೊಳ್ಳುತ್ತಾನೆ. ಅನ್ನಾ "ಫ್ಲಿಂಟ್ ಸ್ಟೋನ್" ಹೆಸರಿನಿಂದ ದಿ ರಿಟ್ಜ್ ನಲ್ಲಿ ತಂಗಿರುವುದಾಗಿ ಹೇಳುತ್ತಾಳೆ ಜೊತೆಗೆ ವಿಲ್ಲಿಯಮ್ ತನ್ನನ್ನು ಬಂದು ಕಾಣಬೇಕೆಂದು ಕೇಳಿಕೊಳ್ಳುತ್ತಾಳೆ. ಅವನು ಅಲ್ಲಿಗೆ ಆಗಮಿಸಿದಾಗ, ಅನ್ನಾಳ ಕೋಣೆಯು ಮಾಧ್ಯಮದವರ ಕೇಂದ್ರಬಿಂದುವಾಗಿರುತ್ತದೆ. ಪರಿಣಾಮವಾಗಿ ವಿಲ್ಲಿಯಮ್ ನನ್ನು ಸಹ ಒಬ್ಬ ಮಾಧ್ಯಮದವನೆಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಒಂದು ಕ್ಷಣ ಗಾಬರಿಯಾದ ಅವನು, ತಾನು ಹಾರ್ಸ್ & ಹೌಂಡ್ ನಿಯತಕಾಲಿಕಕ್ಕೆ ಕೆಲಸ ಮಾಡುವುದಾಗಿ ಸಮರ್ಥಿಸಿಕೊಳ್ಳುತ್ತಾನೆ. ಅವನು ಅನ್ನಾಳ ಹೊಸ ಚಿತ್ರ ಹೆಲಿಕ್ಸ್ ನಲ್ಲಿ ಪಾತ್ರ ನಿರ್ವಹಿಸಿರುವ ಪ್ರತಿಯೊಬ್ಬರನ್ನು ಅವನು ಚಿತ್ರ ನೋಡದಿದ್ದರೂ ಸಹ ಸಂದರ್ಶಿಸಬೇಕಾಯಿತು. ವಿಲ್ಲಿಯಮ್ ಗೆ ಅನ್ನಾಳ ಜೊತೆ ಮಾತನಾಡಲು ಅವಕಾಶ ಸಿಗುತ್ತದೆ. ಆತ ತನ್ನ ಸಹೋದರಿ ಹನಿಯ ಹುಟ್ಟುಹಬ್ಬದ ಪಾರ್ಟಿಗೆ ಅವಳನ್ನು ಆಹ್ವಾನಿಸುತ್ತಾನೆ.

ಮ್ಯಾಕ್ಸ್ (ಟಿಮ್ ಮ್ಯಾಕ್ ಇನ್ನೆರ್ನಿ) ಮತ್ತು ಬೆಲ್ಲಾ (ಗಿನಾ ಮ್ಯಾಕ್ ಕೀ)ಳ ಮನೆಯಲ್ಲಿ ವಿಲ್ಲಿಯಮ್ ನ ಸ್ನೇಹಿತರ ಒಡನಾಟದಲ್ಲಿ ಅನ್ನಾಗೆ ತನ್ನ ಮನೆಯಲ್ಲಿರುವಂತೆ ಭಾಸವಾಗುತ್ತದೆ. ಅಲ್ಲಿ ನಡೆದ ಒಳ್ಳೆಯ ರೀತಿಯ "ಬೀಳ್ಕೊಡುಗೆ" ಯು ಇಡೀ ಸಮಾರಂಭದಲ್ಲೇ ಅತ್ಯಂತ ಭಾವನಾತ್ಮಕವಾಗಿತ್ತೆಂದು ಘೋಷಿಸಲಾಯಿತು. ಇದಾದ ನಂತರ ಅವರಿಬ್ಬರೂ ಖಾಸಗಿಯಾಗಿ ಲಂಡನ್ ಚೌಕಕ್ಕೆ ಅತಿಕ್ರಮಣ ಪ್ರವೇಶ ಮಾಡುತ್ತಾರೆ. ಅವರು ಸಿನಿಮಾ ಮತ್ತು ಹೋಟೆಲುಗಳಿಗೆ ಹಲವಾರು ಬಾರಿ ಹೋಗುತ್ತಾರೆ. ಅನ್ನಾ, ವಿಲ್ಲಿಯಮ್ ನನ್ನು ಮರಳಿ ಹೋಟೆಲ್ ರೂಮಿಗೆ ಆಹ್ವಾನಿಸುತ್ತಾಳೆ. ಅಲ್ಲಿ ಅವಳಿಗೆ ತನ್ನ ಅಮೇರಿಕನ್ ಗೆಳೆಯ, ಜೆಫ್ಫ್ ಕಿಂಗ್(ಅಲೆಕ್ ಬಾಲ್ಡ್ವಿನ್ ಕಿರು ಪಾತ್ರದಲ್ಲಿ ನಟಿಸಿರುವ ಅಷ್ಟೊಂದು ಪ್ರಾಮುಖ್ಯತೆ ಪಡೆಯದ ಪಾತ್ರ) ಈಗಾಗಲೇ ಅಲ್ಲಿರುವುದು ತಿಳಿಯುತ್ತದೆ. ತನ್ನ ಗೆಳೆಯ ಕೋಣೆಯಿಂದ ಹೊರ ಹೋದಾಗ ಅನ್ನಾ ಅವನನ್ನು ಕ್ಷಮೆ ಕೇಳುತ್ತಾಳೆ. ವಿಲ್ಲಿಯಮ್, ಜೆಫ್ಫ್ ನ ಎದುರು ಒಬ್ಬ ಮಾಣಿಯಂತೆ ನಟಿಸುತ್ತಾನೆ. ಜೊತೆಗೆ ತಾನು ಅಲ್ಲಿಂದ ಹೊರ ಹೋಗಬೇಕೆಂದು ಅವನ ಅರಿವಿಗೆ ಬರುತ್ತದೆ. ಕೆಲ ಸಮಯದ ನಂತರ, ಅನ್ನಾ ವಿಲ್ಲಿಯಮ್ ನ ಮನೆ ಬಾಗಿಲಿಗೆ ಆಗಮಿಸಿ ಅಲ್ಲಿ ಆಕೆ ತಂಗಲು ಜಾಗ ಸಿಗಬಹುದೆಂದು ನಿರೀಕ್ಷಿಸುತ್ತಾಳೆ. ಆಗ ಆಕೆ ಹಾಗು ಜೆಫ್ಫ್ ಸಂಬಂಧ ಕಡಿದುಕೊಂಡಿರುತ್ತಾರೆ. ಆಕೆಯ ನಗ್ನತೆ ಗೋಚರಿಸುವ ಕೆಲವು ಚಿತ್ರಗಳು ಒಂದು ಅಶ್ಲೀಲತೆಯಂತೆ ಕಂಡುಬರುತ್ತಿದ್ದವು. ಜೊತೆಗೆ ಅವುಗಳು ಮಾಧ್ಯಮಕ್ಕೆ ಬಹಿರಂಗವಾಗಿದ್ದವು. ಇದರ ಪರಿಣಾಮವಾಗಿ ದಿನಪತ್ರಿಕೆಗಳು ಅವಳನ್ನು ಅಣಕವಾಡಲು ಪ್ರಾರಂಭ ಮಾಡಿದವು.("ಸ್ಕಾಟ್ ಆಫ್ ಪ್ಯಾನ್ಟಾರ್ಟಿಕ" ಹಾಗೂ "ವೊಟ್ಟ ಲೊಟ್ಟ ಸ್ಕಾಟ್" ಎಂದು ಕರೆಯಿತು). ಆಗ ಅವಳು ತಲೆಮರೆಸಿಕೊಳ್ಳುವ ಪರಿಸ್ಥಿತಿ ಉಂಟಾಯಿತು. ಅವರ ಜೋಡಿಯು ಮತ್ತೆ ಒಂದುಗೂಡುತ್ತದೆ. ವಿಲ್ಲಿಯಮ್ ಅನ್ನಾಳಿಗೆ ಅವಳ ಹೊಸ ಚಿತ್ರದ ಸಾಲುಗಳನ್ನು ಕಲಿಯಲು ಸಹಾಯ ಮಾಡುತ್ತಾನೆ. ಅವತ್ತಿನ ರಾತ್ರಿ, ಅವರಿಬ್ಬರೂ ಮೊದಲ ಬಾರಿಗೆ ಒಟ್ಟಾಗಿ ಮಲಗುತ್ತಾರೆ. ಮಾರನೇ ದಿನ ಬೆಳಗ್ಗೆ, ವಿಲ್ಲಿಯಮ್ ಪತ್ರಕರ್ತರನ್ನು ತನ್ನ ಮನೆಯ ಬಾಗಿಲಿನಲ್ಲಿ ಕಂಡು ದಿಗ್ಬ್ರಾಂತನಾಗುತ್ತಾನೆ. ಇದು ಸ್ಪೈಕ್ ಹಿಂದಿನ ರಾತ್ರಿ ಪಬ್ ನಲ್ಲಿ ಎಚ್ಚರಿಕೆಯಿಲ್ಲದೆ ಆಡಿದ ಮಾತಿನಿಂದಾಗಿ ಮಾಧ್ಯಮದವರಿಗೆ ಅನ್ನಾಳ ಇರುವಿನ ಬಗ್ಗೆ ತಿಳಿದುಬಂದಿರುತ್ತದೆ. ಅವನು ತನಗೆ ನಂಬಿಕೆದ್ರೋಹ ಎಸಗಿದ್ದಾನೆಂದು ಅವಳು ಅವನ ಮೇಲೆ ಕೋಪಗೊಂಡು ಆತುರದಿಂದ ಅಲ್ಲಿಂದ ಹೊರಡುತ್ತಾಳೆ. ವಿಲ್ಲಿಯಮ್ ಅವಳನ್ನು ಮರೆಯಲು ನಿರ್ಧರಿಸುತ್ತಾನೆ.

ಒಂದು ವರ್ಷದ ಬಳಿಕ, ಅನ್ನಾ ಹೆನ್ರಿ ಜೇಮ್ಸ್ ರ ಚಿತ್ರದಲ್ಲಿ ನಟಿಸಲು ಲಂಡನ್ ಗೆ ಬರುತ್ತಾಳೆ. ಇದರಲ್ಲಿ ಪಾತ್ರ ನಿರ್ವಹಿಸುವಂತೆ ವಿಲ್ಲಿಯಮ್ ಅವಳಿಗೆ ಸೂಚಿಸಿರುತ್ತಾನೆ. ವಿಲ್ಲಿಯಮ್ ಚಿತ್ರದ ಸೆಟ್ ನ ಬಳಿ ಧಾವಿಸುತ್ತಾನೆ. ಅನ್ನಾ ಚಿತ್ರೀಕರಣ ವೀಕ್ಷಿಸಲು ಅವನನ್ನು ಆಹ್ವಾನಿಸುತ್ತಾಳೆ. ಅನ್ನಾ ಚಿತ್ರೀಕರಣದಲ್ಲಿ ಪಾಲ್ಗೊಂಡಾಗ ಅವನು ಚಿತ್ರದ ಧ್ವನಿ ಮುದ್ರಣ ಆಲಿಸುತ್ತಾನೆ ಜೊತೆಗೆ ಅವಳು ತನ್ನ ಸಹ-ತಾರೆಗೆ ಆತನನ್ನು ಪರಿಚಯಿಸುವಾಗ; ವಿಲ್ಲಿಯಮ್ "ಯಾರೋ ಒಬ್ಬ ಮನುಷ್ಯ" ಎಂದು ಹೇಳುವುದನ್ನು ಆಕಸ್ಮಿಕವಾಗಿ ಕೇಳಿಸಿಕೊಳ್ಳುತ್ತಾನೆ. ಇದರಿಂದ ನಿರಾಶೆಗೊಂಡ ವಿಲ್ಲಿಯಮ್ ಅಲ್ಲಿಂದ ಹೊರಡುತ್ತಾನೆ. ಅದರ ಮರು ದಿನ, ಅನ್ನಾ ಪುಸ್ತಕದಂಗಡಿಗೆ ತಮ್ಮ ಪ್ರೀತಿಯನ್ನು ಪುನರಾರಂಭಿಸುವ ಭರವಸೆಯೊಂದಿಗೆ ಮತ್ತೊಮ್ಮೆ ಬರುತ್ತಾಳೆ. ಆದರೆ ವಿಲ್ಲಿಯಮ್ ಅವಳನ್ನು ತಿರಸ್ಕರಿಸುತ್ತಾನೆ. ಅವಳು ಅವನಿಗೆ ಮಾರ್ಕ್ ಚಾಗಲ್ ರ ಮೂಲ ವರ್ಣಚಿತ್ರ ಲಾ ಮರಿಏ ವನ್ನು ಅವನಿಗೆ ನೀಡುತ್ತಾಳೆ. ಅವಳು ವಿಲ್ಲಿಯಮ್ ನ ಮನೆಯಲ್ಲಿ ಚಿತ್ರದ ಒಂದು ಪ್ರತಿ ನೋಡಿರುತ್ತಾಳೆ. ಅಲ್ಲಿಂದ ಹೊರಡುವ ಮುನ್ನ, ಅನ್ನಾ ಒಂದು ಪ್ರಸಿದ್ಧ ಸಾಲನ್ನು ಹೇಳುತ್ತಾಳೆ: "ನಾನು ಒಬ್ಬ ಸಾಮಾನ್ಯ ಹುಡುಗಿಯಂತೆ, ಒಬ್ಬ ಹುಡುಗನ ಮುಂದೆ ನಿಂತು, ತನ್ನನ್ನು ಪ್ರೀತಿಸುವಂತೆ ಕೇಳಿಕೊಳ್ಳುತ್ತಿದ್ದೇನೆ"; ಆದರೆ ವಿಲ್ಲಿಯಮ್ ತನ್ನ ನಿರ್ಧಾರದ ಬಗ್ಗೆ ಅಚಲನಾಗಿರುತ್ತಾನೆ. ಇದಾದ ನಂತರ, ವಿಲ್ಲಿಯಮ್ ಅವನ ನಿರ್ಧಾರದ ಬಗ್ಗೆ ತನ್ನ ಸ್ನೇಹಿತರನ್ನು ಸಲಹೆ ಕೇಳುತ್ತಾನೆ. ಇದರಿಂದ ಅವನು "ತನ್ನ ಜೀವನದ ಬಹುದೊಡ್ಡ ತಪ್ಪು" ಮಾಡಿರುವುದು ಅರಿವಾಗುತ್ತದೆ. ಅವನು ಹಾಗು ಅವನ ಸ್ನೇಹಿತರು ಅನ್ನಾಳನ್ನು ಹುಡುಕಲು ಮಾಕ್ಸ್ ನ ಕಾರ್ ನಲ್ಲಿ ಧಾವಂತದಲ್ಲಿ ಲಂಡನ್ ಬೀದಿ ಬೀದಿ ಸುತ್ತುತ್ತಾರೆ. ಅವರು ಅನ್ನಾಳ ಪತ್ರಿಕಾ ಸಂದರ್ಶನವನ್ನು ಮುಗಿಸಿ ಯುನೈಟೆಡ್ ಸ್ಟೇಟ್ಸ್ ಗೆ ಹೊರಡುವ ಮುಂಚೆ ಅವಳನ್ನು ತಲುಪುತ್ತಾರೆ. ವಿಲ್ಲಿಯಮ್ ಅವಳನ್ನು ಇಂಗ್ಲೆಂಡ್ ನಲ್ಲೇ ತನ್ನ ಜೊತೆ ಉಳಿದುಕೊಳ್ಳುವಂತೆ ಒಪ್ಪಿಸುವಲ್ಲಿ ಸಫಲನಾಗುತ್ತಾನೆ. ಅನ್ನಾ ಹಾಗು ವಿಲ್ಲಿಯಮ್ ಮದುವೆಯಾಗುತ್ತಾರೆ. ಚಿತ್ರವು ವಿಲ್ಲಿಯಮ್ ಹಾಗು ಗರ್ಭಿಣಿ ಅನ್ನಾ ನಾಟ್ಟಿಂಗ್ ಹಿಲ್ ನ ಪಾರ್ಕ್ ಬೆಂಚ್ ಮೇಲೆ ಕುಳಿತಿರುವ ದೃಶ್ಯದೊಂದಿಗೆ ಕೊನೆಯಾಗುತ್ತದೆ.

ಪಾತ್ರ ಮತ್ತು ವೈಶಿಷ್ಟ್ಯತೆಗಳು

[ಬದಲಾಯಿಸಿ]
ಚಿತ್ರದ ಆರಂಭಿಕ ಶೀರ್ಷಿಕೆಯಲ್ಲಿ ಪಟ್ಟಿಯಾಗಿರುವ ಹೆಸರುಗಳು.
  • ಅನ್ನಾ ಸ್ಕಾಟ್ ಪಾತ್ರದಲ್ಲಿ ಜುಲಿಯಾ ರಾಬರ್ಟ್ಸ್ : ಒಬ್ಬ ಜಗತ್ಪ್ರಸಿದ್ಧ ಹಾಲಿವುಡ್ ಚಿತ್ರ ನಟಿ. ಅವಳು ವಿಲ್ ನನ್ನು ನಾಟ್ಟಿಂಗ್ ಹಿಲ್ ನಲ್ಲಿ ಷಾಪಿಂಗ್ ಮಾಡುವ ಸಮಯ ಅವನ ಪುಸ್ತಕದಂಗಡಿಗೆ ಬಂದಾಗ ಸಂಧಿಸುತ್ತಾಳೆ. ಅನ್ನಾ ಪಾತ್ರಕ್ಕಾಗಿ ರಾಬರ್ಟ್ಸ್ "ಏಕೈಕ" ಮಾತ್ರ ಎನ್ನುವಂತೆ ಆಯ್ಕೆಯಾಗಿದ್ದಳು. ಆದಾಗ್ಯೂ ರೋಜರ್ ಮಿಚೆಲ್ ಹಾಗು ಡಂಕನ್ ಕೆನ್ವರ್ತಿ ಗೆ ಅವಳು ಪಾತ್ರವನ್ನು ಒಪ್ಪಿಕೊಳ್ಳಬಹುದೆಂಬ ನಿರೀಕ್ಷೆ ಇರಲಿಲ್ಲ. ಆದಾಗ್ಯೂ ಪಾತ್ರವನ್ನು ಒಪ್ಪಿಕೊಳ್ಳುತ್ತಾಳೆ. ಅವಳ ಚಿತ್ರ ಪ್ರತಿನಿಧಿ ಉಲ್ಲೇಖಿಸುವಂತೆ "ಅವಳು ಇದುವರೆಗೂ ಓದಿದ ಅತ್ಯುತ್ತಮ ರೋಮ್ಯಾಂಟಿಕ್ ಕಾಮಿಡಿ ಇದಾಗಿದೆ".[] ರಾಬರ್ಟ್ಸ್, ಚಿತ್ರಕಥೆ ಓದಿದ ನಂತರ ಅವಳು "ಇದರಲ್ಲಿ ಪಾತ್ರ ಮಾಡಲು" ನಿರ್ಧರಿಸಿದ್ದಾಗಿ ವಿವರಿಸಿದ್ದಾಳೆ.[]
  • ವಿಲ್ಲಿಯಮ್ ಥಾಕರ್ ಪಾತ್ರದಲ್ಲಿ ಹಗ್ ಗ್ರ್ಯಾಂಟ್ : ಇತ್ತೀಚಿಗಷ್ಟೇ ವಿಚ್ಛೇದನ ಪಡೆದ ನಾಟ್ಟಿಂಗ್ ಹಿಲ್ ನಲ್ಲಿನ ಒಂದು ಪ್ರವಾಸಿ ಪುಸ್ತಕದಂಗಡಿಯ ಮಾಲೀಕ. ಪುಸ್ತಕ ಹುಡುಕಿಕೊಂಡು ಅಂಗಡಿಗೆ ಬಂದ ಅನ್ನಾ ಸ್ಕಾಟ್ ಳನ್ನು ಅವನು ಸಂಧಿಸುತ್ತಾನೆ. ಗ್ರ್ಯಾಂಟ್ ನನ್ನು ವಿಲ್ ಪಾತ್ರಕ್ಕೆ ಆಯ್ಕೆ ಮಾಡುವ ನಿರ್ಧಾರ ಸರ್ವಸಮ್ಮತವಾಗಿತ್ತು. ಆತ ಮತ್ತು ರಿಚರ್ಡ್ ಕರ್ಟಿಸ್ ಜೋಡಿ "ಲೇಖಕ/ನಟನ ಸಾಂಗತ್ಯ; ಸ್ವರ್ಗದಲ್ಲಿ ನಿರ್ಧಾರವಾಗುವ ಮದುವೆ ಜೋಡಿ" ಯಂತೆ ಇತ್ತು. ಮಿಚೆಲ್ ವಿವರಿಸುವಂತೆ "ಹಗ್ ಬೇರೆಯವರೆಲ್ಲರಿಗಿಂತ ರಿಚರ್ಡ್ ಹೆಣೆದ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಾನೆ. ಅಲ್ಲದೇ ರಿಚರ್ಡ್ ಬೇರೆಯವರಿಗಿಂತ ಸಮರ್ಥವಾಗಿ ಹಗ್ ಗೋಸ್ಕರ ಪಾತ್ರ ನಿರ್ಮಿಸಿದ್ದಾನೆ". ಜೊತೆಗೆ "ಗ್ರ್ಯಾಂಟ್ ರಿಚರ್ಡ್ ನ ಸಾಲುಗಳನ್ನು ಸ್ಪಷ್ಟವಾಗಿ ಹೇಳುವ ಕೆಲವೇ ಕೆಲವು ನಟರಲ್ಲಿ ಈತ ಒಬ್ಬ".[]
  • ಹನಿ ಥಾಕರ್ ನ ಪಾತ್ರದಲ್ಲಿ ಎಮ್ಮಾ ಚೇಂಬರ್ಸ್ : ವಿಲ್ ನ ಮುಗ್ಧ, ಅಮಾಯಕ ಒಬ್ಬ ಕಿರಿಯ ಸಹೋದರಿ. ಇವಳು ಅನ್ನಾ ಸ್ಕಾಟ್ ನ ಬಹು ದೊಡ್ಡ ಅಭಿಮಾನಿ.
  • ಬೆರ್ನಿ ಯ ಪಾತ್ರದಲ್ಲಿ ಹಗ್ ಬೋನ್ನೇವಿಲ್ಲೆ : ಒಬ್ಬ ವಿಫಲ ಸ್ಟಾಕ್ (ಶೇರು)ದಳ್ಳಾಳಿ ಜೊತೆಗಿರುವ ವಿಲ್ ನ ಒಬ್ಬ ಸ್ನೇಹಿತ. ಅವನು ಮೊದಲು ಅನ್ನಾ ಸ್ಕಾಟ್ ಳನ್ನು ಸಂಧಿಸಿದಾಗ ಆಕೆ ಯಾರೆಂದು ಗುರುತಿಸುವಲ್ಲಿ ವಿಫಲನಾಗುತ್ತಾನೆ.
  • ಸ್ಪೈಕ್ ನ ಪಾತ್ರದಲ್ಲಿ ರೈಸ್ ಇಫಾನ್ಸ್ : ಇವನೊಬ್ಬ ವಿಚಿತ್ರ ವೆಲ್ಶ್. ಇವನು ವಿಲ್ ನ ಜೊತೆ ಅವನ ಮನೆಯಲ್ಲಿ ವಾಸಿಸುತ್ತಾನೆ. ಅವನು ಒಬ್ಬ ಕಲಾವಿದನಾಗುವ ಕನಸು ಕಾಣುತ್ತಿರುತ್ತಾನೆ. ಅವನನ್ನು ವಿಲ್ "ಅವನು ಮತ್ತಿನಲ್ಲಿದ್ದಾಗ ಜಗತ್ತಿನ ಅತ್ಯಂತ ಮೂರ್ಖ ವ್ಯಕ್ತಿ" ಎಂದು ವಿವರಿಸುತ್ತಾನೆ.
  • ಮಾಕ್ಸ್ ಪಾತ್ರದಲ್ಲಿ ಟಿಮ್ ಮ್ಯಾಕ್ಇನ್ನೆರ್ನಿ : ವಿಲ್ ನ ಆಪ್ತ ಸ್ನೇಹಿತ. ಇವನ ಜೊತೆ ಅನೇಕ ಸಂದರ್ಭಗಳಲ್ಲಿ ವಿಲ್ ತಂಗಿದ್ದಾನೆ. ಅವನು ಹಾಗು ಬೆಲ್ಲಾ, ಹನಿಯ ಹುಟ್ಟುಹಬ್ಬ ಆಚರಣೆಗಾಗಿ ಪಾರ್ಟಿಯನ್ನು ಏರ್ಪಡಿಸಿರುತ್ತಾರೆ.
  • ಬೆಲ್ಲಾ ಳ ಪಾತ್ರದಲ್ಲಿ ಗಿನಾ ಮ್ಯಾಕ್ ಕೀ : ಪಾರ್ಶ್ವವಾಯು ತಗುಲಿದ ಒಬ್ಬ ವಕೀಲೆ ಹಾಗು ವಿಲ್ ನ ಮಾಜಿ-ಗೆಳತಿ. ಆಕೆಗೆ ಮಾಕ್ಸ್ ನೊಂದಿಗೆ ಮದುವೆಯಾಗಿರುತ್ತದೆ.
  • ಮಾರ್ಟಿನ್ ಪಾತ್ರದಲ್ಲಿ ಜೇಮ್ಸ್ ಡ್ರೆಯ್ಫಸ್ : ವಿಲ್ಲಿಯಮ್ ನ ಪುಸ್ತಕದಂಗಡಿಯಲ್ಲಿ ಅವನಿಗೆ ಒಬ್ಬ ಸ್ಪಂದನಶೀಲನಲ್ಲದ ಸಹಾಯಕ.

ಹಗ್ ಬೋನ್ನೆವಿಲ್ಲೇ, ಟಿಮ್ ಮ್ಯಾಕ್ಇನ್ನೆರ್ನಿ, ಗಿನಾ ಮ್ಯಾಕ್ ಕೀ, ಎಮ್ಮಾ ಚೇಂಬರ್ಸ್ ಹಾಗು ರಯ್ಸ್ ಇಫಾನ್ಸ್ ರನ್ನು ವಿಲ್ ನ ಸ್ನೇಹಿತರ ಗುಂಪೆಂದು ಆಯ್ಕೆ ಮಾಡುವುದಕ್ಕಿಂತ ಹೆಚ್ಚಾಗಿ "ಒಂದು ಕುಟುಂಬವನ್ನು ಒಟ್ಟುಗೂಡಿಸಿದಂತಿತ್ತು". ಮಿಚೆಲ್ ವಿವರಿಸುವಂತೆ "ಐದು ಜನರ ಸ್ನೇಹಿತರ ಒಂದು ಗುಂಪನ್ನು ಪಾತ್ರಕ್ಕಾಗಿ ಆಯ್ಕೆ ಮಾಡಬೇಕಾದಾಗ, ಅವರ ವೈಶಿಷ್ಟ್ಯ, ಅವರ ಸಾಮಾನ್ಯ ಗುಣ ಲಕ್ಷಣ ಹಾಗು ಅವರ ಭಾವ-ಸೂಕ್ಷ್ಮತೆ, ಸಮಾನ ಮನಸ್ಕತೆಯುಳ್ಳವರನ್ನು ಆಯ್ಕೆ ಮಾಡಬೇಕಾಗುತ್ತದೆ. ಅವರೆಲ್ಲರೂ ಜಿಗ್ ಗರಗಸದಂತಿದ್ದರೂ ಅವರೆಲ್ಲರನ್ನು ಒಟ್ಟುಗೂಡಿಸಬೇಕಿತ್ತು. ನನ್ನ ಪ್ರಕಾರ ನಮಗೆ ವೈವಿಧ್ಯಮಯವಾದ ಜನರು ದೊರೆತಿದ್ದಾರೆ. ಇವರೆಲ್ಲರೂ ವಾಸ್ತವಿಕವಾಗಿ ಇದೆ ಜಗತ್ತಿನಲ್ಲಿ ಇನ್ನೂ ವಾಸಿಸುತ್ತಿದ್ದಾರೆ."[]

ಇತರೆ
  • ಟೋನಿ ಪಾತ್ರದಲ್ಲಿ ರಿಚರ್ಡ್ ಮ್ಯಾಕ್ ಕಾಬೆ : ಒಬ್ಬ ಅಯಶಸ್ವಿ ಹೋಟೆಲ್ ಮಾಲೀಕ. ಸ್ನೇಹಿತರ ಗುಂಪು ಸಾಧಾರಣವಾಗಿ ಅವನ ಹೋಟೆಲಿನಲ್ಲಿ ಸಂಧಿಸುತ್ತಿದ್ದವು.
  • ಓಮಿದ್ ಡಿಜಲಿಲಿ ಒಬ್ಬ ಮಾರಾಟಗಾರನಾಗಿ ಒಂದು ಕಿರು ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾನೆ. ಇವನು ಚಿತ್ರ ಆರಂಭವಾದ ಕೆಲ ನಿಮಿಷಗಳಲ್ಲಿ ಸ್ಥಳೀಯ ಹಿನ್ನಲೆಯ ದೃಶ್ಯಗಳಲ್ಲಿಯೂ ಕಂಡುಬರುತ್ತಾನೆ.
  • ರುಫುಸ್ ಪಾತ್ರದಲ್ಲಿ ಡೈಲನ್ ಮೋರನ್ : ವಿಲ್ ನ ಪುಸ್ತಕದಂಗಡಿಯಲ್ಲಿ ಕಳವು ಮಾಡಲು ಯತ್ನಿಸುವ ಒಬ್ಬ ಕಳ್ಳ. ಅವನು ಪುಸ್ತಕವನ್ನು ತನ್ನ ಷರಾಯಿಯ ಒಳಗೆ ಬಚ್ಚಿಡುವುದು, CCTV ಮೂಲಕ ಪತ್ತೆಯಾದರೂ, ತಾನು ಒಬ್ಬ ಮುಗ್ದನೆಂದು ಸುಳ್ಳು ಹೇಳುತ್ತಾನೆ. ನಂತರ ಅನ್ನಾಗೆ ತನ್ನ ಫೋನ್ ನಂಬರ್ ನ ಅಗತ್ಯವಿದೆಯೇ ಎಂಬುದಾಗಿ ಕೇಳುತ್ತಾನೆ.
  • ಅಲೆಕ್ ಬಾಲ್ಡ್ವಿನ್ ಅನ್ನಾಳ ಅಮೆರಿಕನ್ ಗೆಳೆಯನಾಗಿ ಅಷ್ಟೊಂದು ಪ್ರಾಮುಖ್ಯತೆ ಪಡೆಯದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ.[]
  • ಸಂಜೀವ್ ಭಾಸ್ಕರ್ ಒಬ್ಬ ಗಟ್ಟಿಯಾಗಿ ಮಾತನಾಡುವ ಅವಹೇಳನ ಮಾಡುವ ಚಿತ್ರ ವಿಮರ್ಶಕನಾಗಿ ಒಂದು ಕಿರು ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾನೆ. (ಅವನು ಮೆಗ್ ರಯಾನ್ ಎಂಬ ನಟಿಯ ಬಗ್ಗೆ ಹೇಳುತ್ತಾ ಅವಳನ್ನು ಪ್ರತಿ ಬಾರಿಯೂ ಕಾಫಿ ಕುಡಿಯಲು ಕರೆದುಕೊಂಡು ಹೋದರೆ ಅವಳು ಕ್ರೋಧಾವೇಶಕ್ಕೆ ಒಳಗಾಗುತ್ತಾಳೆ).ಅನ್ನಾ ಹಾಗು ವಿಲ್ ಅದೇ ಹೋಟೆಲಿಗೆ ಹೋಗುತ್ತಾರೆ.[]
  • ಪುಟಾಣಿ ಮಿಸ್ಚ ಬಾರ್ಟನ್ ಬಾಲ ನಟಿಯಾಗಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಇವಳನ್ನು ವಿಲ್ ಹಾರ್ಸ್ & ಹೌಂಡ್ ನಿಯತಕಾಲಿಕಕ್ಕೆ ಸಂದರ್ಶನ ಮಾಡುವ ಹಾಗೆ ನಟಿಸುತ್ತಾನೆ.[]

ನಿರ್ಮಾಣ

[ಬದಲಾಯಿಸಿ]
"ನನಗೆ ಕೆಲವೊಂದು ಸಲ ನಾನು ಸ್ನೇಹಿತರ ಮನೆಯಲ್ಲಿ ಉಳಿದುಕೊಂಡು ವಾರಕ್ಕೊಂದು ಬಾರಿ ಆ ಕಾಲದ ಪ್ರಸಿದ್ದ ವ್ಯಕ್ತಿಯೊಂದಿಗೆ ಭೋಜನ ಮಾಡಿದರೆ ಹೇಗಿರುತ್ತದೆ ಎಂಬ ಯೋಚನೆ ಬಂತು. ಅದು ಮಡೋನ್ನಾ ಆಗಿರಬಹುದು ಅಥವಾ ಯಾರೇ ಆಗಿರಬಹುದು. ಈ ಯೋಚನೆ ಅಲ್ಲಿಂದ ಹೊರಹೊಮ್ಮಿತು. ಇದಕ್ಕೆ ನನ್ನ ಸ್ನೇಹಿತರು ಹೇಗೆ ಪ್ರತಿಕ್ರಿಯಿಸಬಹುದು? ಇದಕ್ಕೆ ಯಾರು ಪ್ರಯತ್ನಿಸುತ್ತಾರೆ ಮತ್ತು ಶಾಂತಚಿತ್ತರಾಗಿರುತ್ತಾರೆ?

ನೀವು ಯಾವ ರೀತಿ ಭೋಜನ ಮಾಡಲು ಹೋಗಬಹುದು? ಇದಾದ ನಂತರ ಅವರು ನಿಮಗೆ ಏನು ಹೇಳಬಹುದು?"

- ರಿಚರ್ಡ್ ಕರ್ಟಿಸ್ []

ರಿಚರ್ಡ್ ಕರ್ಟಿಸ್ ರಾತ್ರಿ ವೇಳೆ ಎಚ್ಚರಗೊಂಡಾಗ ತಮಗೆ ಬರುತ್ತಿದ್ದ ಆಲೋಚನೆಗಳನ್ನು ಸೇರಿಸಿ ಚಿತ್ರಕ್ಕೆ ಒಂದು ಹೊಸತನ ತಂದರು. ಅವರು ಕಥಾ ವಸ್ತುವಿನ ಆರಂಭವನ್ನು ಹೀಗೆ ವಿವರಿಸುತ್ತಾರೆ: "ಇದು ಒಬ್ಬ ಸಾಮಾನ್ಯ ಮನುಷ್ಯ ನಂಬಲಸಾಧ್ಯವಾದ ಒಬ್ಬ ಪ್ರಸಿದ್ದ ವ್ಯಕ್ತಿಯ ಜೊತೆ ಹೊರ ಹೋಗುವ ಒಂದು ಕಲ್ಪನೆ; ಜೊತೆಗೆ ಅದು ಅವರಿಬ್ಬರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸುವುದೇ ಆಗಿದೆ".[] ಫೋರ್ ವೆಡ್ಡಿಂಗ್ಸ್ ಅಂಡ್ ಏ ಫ್ಯೂನರಲ್ ಚಿತ್ರದ ನಿರ್ದೇಶಕ ಮೈಕ್ ನೆವೆಲ್ ರನ್ನು ಚಿತ್ರಕ್ಕಾಗಿ ಪ್ರಸ್ತಾಪಿಸಲಾಗಿತ್ತು. ಅವರು ಪುಶಿಂಗ್ ಟಿನ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಿದ್ದರಿಂದ ಈ ಪ್ರಸ್ತಾಪ ತಿರಸ್ಕರಿಸಿದರು. ಅವರು ವಾಣಿಜ್ಯ ದೃಷ್ಟಿಯಿಂದ ನೋಡಿದರೆ ಚಿತ್ರವನ್ನು ನಿರಾಕರಿಸಿ ತಪ್ಪು ನಿರ್ಧಾರವನ್ನು ತೆಗೆದುಕೊಂಡರೆಂದು ನಂತರ ಒಪ್ಪಿಕೊಳ್ಳುತ್ತಾರೆ. ಆದರೆ ಅದರ ಬಗ್ಗೆ ಅವರಿಗೆ ಪಶ್ಚಾತ್ತಾಪವಿಲ್ಲವೆಂದೂ ಸಹ ಹೇಳುತ್ತಾರೆ.[] ಚಿತ್ರ ನಿರ್ಮಾಪಕ ಡಂಕನ್ ಕೆನ್ವರ್ತಿ ಅವರ ಗಮನ, ನಂತರ ರೋಜರ್ ಮಿಚೆಲ್ ರ ಕಡೆ ವಾಲಿತು. ಅವರು ಹೇಳುವಂತೆ "ರೋಜರ್ ನಂತಹ ಒಬ್ಬ ಒಳ್ಳೆಯ ನಿರ್ದೇಶಕನನ್ನು ಹುಡುಕುವುದು ಪ್ರತಿ ಪಾತ್ರಕ್ಕೆ ಒಬ್ಬ ಸಮರ್ಥ ನಟನನ್ನು ಹುಡುಕಿದ ಮಾದರಿಯೇ ಆಗಿದೆ. ರೋಜರ್ ಅವರ ಪ್ರತಿಭೆ ಈ ರೀತಿ ಬೆಳಕಿಗೆ ಬಂದಿದೆ."[]

A road with some cars parked on it next to a line of houses
ಹೆಚ್ಚಿನ ದೃಶ್ಯಗಳನ್ನು ಪೋರ್ಟೊಬೆಲ್ಲೋ ರಸ್ತೆಯಲ್ಲಿ ಚಿತ್ರೀಕರಿಸಲಾಯಿತು.

ಕರ್ಟಿಸ್ ನಾಟ್ಟಿಂಗ್ ಹಿಲ್ ನಲ್ಲಿ ವಾಸ ಮಾಡಿದ್ದರಿಂದ ಜೊತೆಗೆ ಆ ಪ್ರದೇಶವನ್ನು ಅವರು ಚೆನ್ನಾಗಿ ಬಲ್ಲವರಾದ್ದರಿಂದ ಚಿತ್ರಕ್ಕೆ ಅಲ್ಲಿನ ಪರಿಸರ ಆಯ್ಕೆ ಮಾಡಿದರು. ಅವರು ಹೇಳುವಂತೆ " ನಾಟ್ಟಿಂಗ್ ಹಿಲ್ ಒಂದು ಹೃದಯ ಕರಗಿಸುವ ತಾಣ, ಜೊತೆಗೆ ಚಿತ್ರೀಕರಣಕ್ಕೆ ಅದೊಂದು ಸೂಕ್ತ ಸ್ಥಳ".[] ಇಲ್ಲಿ ನಿರ್ಮಾಪಕರಿಗೆ ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಚಿತ್ರೀಕರಣ ಮಾಡಲು ತೊಂದರೆಯಾಯಿತು. ಕೆನ್ವರ್ತಿ ಹೇಳುವಂತೆ " ಪ್ರಾರಂಭದಲ್ಲಿ, ನಾವು ಒಂದು ದೊಡ್ಡ ಹೊರಾಂಗಣದಲ್ಲಿ ಉತ್ತಮ ಥಳಥಳಿಸುವ ಸೆಟ್ ನಿರ್ಮಿಸುವ ಆಲೋಚನೆಯೊಂದಿಗೆ ಒಂದು ಯೋಜನೆ ರೂಪಿಸಿದ್ದೆವು. ಇದರಿಂದ ಪರಿಸ್ಥಿತಿಯು ನಮ್ಮ ನಿಯಂತ್ರಣದಲ್ಲಿರುತ್ತಿತ್ತು. ಏಕೆಂದರೆ ರಾಬರ್ಟ್ಸ್ ಹಾಗು ಗ್ರ್ಯಾಂಟ್ ಸಾರ್ವಜನಿಕವಾಗಿ ಬೀದಿಗಳಲ್ಲಿ ಓಡಾಡಿದರೆ ಸಾವಿರಾರು ಜನ ಅವರನ್ನು ಮುತ್ತಬಹುದೆಂಬ ಚಿಂತೆ ನಮ್ಮನ್ನು ಕಾಡಿತ್ತು." ಕಡೆಯಲ್ಲಿ ಅವರು ಈ ಸಾಹಸಕ್ಕೆ ಕೈ ಹಾಕಲು ನಿರ್ಧರಿಸಿದರು. ಜೊತೆಗೆ ಚಿತ್ರವನ್ನು ನಿಜವಾದ ಬೀದಿಗಳಲ್ಲಿ ಚಿತ್ರೀಕರಿಸಲಾಯಿತು.[] ಮಿಚೆಲ್ ರಿಗೆ "ಹಗ್ ಹಾಗು ಜುಲಿಯಾ ಪೋರ್ಟೊಬೆಲ್ಲೋ ರಸ್ತೆಯಲ್ಲಿ ನಡೆದ ಮೊದಲ ದಿನದ ಚಿತ್ರೀಕರಣದ ನಂತರ ಚಿತ್ರದಿಂದ ಹಿಂದಕ್ಕೆ ಸರಿಯುವರೆಂಬ ಚಿಂತೆಯಿತ್ತು. ಅಲ್ಲದೆ ಅವರಿಗೆ ವಾಹನದಲ್ಲಿ ಚಲಿಸಲು ತೊಂದರೆಯಾಗಬಹುದು, ಜೊತೆಗೆ ನಮ್ಮನ್ನು [ವ್ಯಂಗ್ಯವಾಗಿ] ಸಾವಿರಾರು ಜನ ಹಾಗು ಪತ್ರಕರ್ತ ಛಾಯಾಗ್ರಾಹಕರು ಮುತ್ತಬಹುದು. ಇಲ್ಲಿ ಚಿತ್ರೀಕರಣ ಮಾಡದಂತೆ ತಡೆಯಬಹುದು". ಹೊರಾಂಗಣ ಘಟಕ ಹಾಗು ಭದ್ರತಾ ದಳವು ಇದನ್ನು ನಿಯಂತ್ರಿಸುವುದರ ಜೊತೆಗೆ ಚಿತ್ರ ತಂಡದ ಉಪಸ್ಥಿತಿಯಿಂದ ನಾಟ್ಟಿಂಗ್ ಹಿಲ್ ನ ನಿವಾಸಿಗಳಿಗೆ ತೊಂದರೆಯಾಗುವುದನ್ನೂ ನಿಯಂತ್ರಿಸಿತು. ನಾಟ್ಟಿಂಗ್ ಹಿಲ್ ನ ನಿವಾಸಿಗಳು ಮಿಚೆಲ್ ರ ಪ್ರಕಾರ ಚಿತ್ರದ ಬಗ್ಗೆ "ಪ್ರಾಮಾಣಿಕ ಉತ್ಸಾಹ" ವನ್ನು ಹೊಂದಿದ್ದರು.[] ಚಿತ್ರದ ಹೊರಾಂಗಣ ಘಟಕದ ವ್ಯವಸ್ಥಾಪಕ ಸುಎ ಕ್ವಿನ್ನ್ ಅವಳ ಕೆಲಸದ ಬಗ್ಗೆ ವಿವರಿಸುತ್ತಾ ಒಂದು ಸೂಕ್ತ ಹೊರಾಂಗಣ ಹುಡುಕುವದು, ಜೊತೆಗೆ ಚಿತ್ರೀಕರಣಕ್ಕೆ ಅನುಮತಿ ಪಡೆಯುವುದು "ಒಂದು ಅತಿ ದೊಡ್ಡ ಕೆಲಸ"ವಾಗಿತ್ತು.[] ಕ್ವಿನ್ನ್ ಹಾಗು ಅವಳ ಹೊರಾಂಗಣ ಘಟಕದ ತಂಡ ಆ ಪ್ರದೇಶದ ಸಾವಿರಾರು ಜನರಿಗೆ ಕಾಗದ ಬರೆದು ಅಲ್ಲಿರುವ ಪ್ರತಿಯೊಬ್ಬರ ಮೆಚ್ಚಿನ ಧರ್ಮಸಂಸ್ಥೆಗಳಿಗೆ ದಾನ ಮಾಡುವುದಾಗಿ ಹೇಳಿದರು. ಪರಿಣಾಮವಾಗಿ ಚಿತ್ರದ ಯೋಜನೆಯಿಂದ 200 ವಿವಿಧ ಧರ್ಮಸಂಸ್ಥೆಗಳು ಇದರಿಂದ ಹಣದ ನೆರವು ಪಡೆದವು.[]

"ನಮಗೆ ಎದುರಾದ ಪ್ರಮುಖ ತೊಂದರೆಯೆಂದರೆ ನಮ್ಮ ಚಿತ್ರ ಘಟಕದ ಗಾತ್ರ. ನಾವು ಒಳ ಹೋಗಿ ಚಿತ್ರೀಕರಣ ಮುಗಿಸಿ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ನಾವು ಎಲ್ಲೆಲ್ಲೂ ಇದ್ದೆವು. ಲಂಡನ್ ನ ರಸ್ತೆಗಳಲ್ಲಿ ಚಿತ್ರೀಕರಣ ಮಾಡುವುದು ಹೇಗಿರಬೇಕಾಗಿತ್ತೆಂದರೆ ಅಲ್ಲಿ ಒಂದು ಆರೋಗ್ಯಕರ ಹಾಗು ಸುರಕ್ಷಿತ ಮಟ್ಟ ಕಾಯ್ದುಕೊಳ್ಳಬೇಕಾದ ಅವಶ್ಯಕತೆಯಿತ್ತು. ಅಲ್ಲಿ ರಸ್ತೆ ಸಮಾಪ್ತಿ ಎಂಬುದೇ ಇರಲಿಲ್ಲ. ಈ ವಿಷಯದಲ್ಲಿ ನಾವು ಅದೃಷ್ಟ ಮಾಡಿದ್ದೆವೆಂದೇ ಹೇಳಬೇಕು. ಏಕೆಂದರೆ ನಮಗೆ ಪೋಲಿಸರಿಂದ ಹಾಗು ಮೇಲಧಿಕಾರಿಗಳಿಂದ 100% ಸಹಕಾರ ದೊರೆಯಿತು.

ಅವರು ನಾವು ಮಾಡಲು ಪ್ರಯತ್ನಿಸುತ್ತಿದ್ದ ಕಾರ್ಯಕ್ಕೆ ಅನುಕೂಲ ಮಾಡಿಕೊಟ್ಟರು. ಜೊತೆಗೆ ಇದರಿಂದ ಆ ಪ್ರದೇಶವು ಹೇಗೆ ಪ್ರಚಾರ ಪಡೆಯುತ್ತದೆ ಎಂಬುದನ್ನಷ್ಟೇ ನೋಡುತ್ತಿದ್ದರು."

- ಸುಎ ಕ್ವಿನ್ನ್ []
A shop with a car in front of it; the shop has a blue sign
ಪ್ರವಾಸಿ ಪುಸ್ತಕದಂಗಡಿಯು, ಪೋರ್ಟೊಬೆಲ್ಲೋ ರಸ್ತೆಯ ಸಮೀಪ ಸ್ಠಾಪಿತಗೊಂಡಿದೆ ಜೊತೆಗೆ ಚಿತ್ರದಲ್ಲಿ ಬರುವ ಪುಸ್ತಕದಂಗಡಿಗೆ ಇದು ಸ್ಪೂರ್ತಿಯಾಗಿದೆ.

ಚಿತ್ರ ನಿರ್ಮಾಣದ ವಿನ್ಯಾಸಕ ಸ್ಟುಅರ್ಟ್ ಕ್ರೈಗ್ಗೆ ಒಂದು ಆಧುನಿಕ ಶೈಲಿಯ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ದೊರೆತಿದ್ದು ಸಂತಸವಾಗಿತ್ತು. ಅವರು ಚಿತ್ರದ ಬಗ್ಗೆ ಹೇಳುತ್ತಾ "ನಾವು ರಸ್ತೆಯಲ್ಲಿ ಸಾವಿರಾರು ಜನರ, ಮಾರುಕಟ್ಟೆ ವ್ಯಾಪಾರಿಗಳ, ಅಂಗಡಿ ಮಾಲೀಕರ ಹಾಗು ನಿವಾಸಿಗಳ ಸಂಪರ್ಕಕ್ಕೆ ಬರುತ್ತಿದ್ದೆವು. ಇದರಿಂದ ಹೆಚ್ಚು ಜನಸಮೂದಾಯದ ಸಂಪರ್ಕ ಉಂಟಾಗುತ್ತಿತ್ತು".[] ಚಿತ್ರೀಕರಣವು 17 ಏಪ್ರಿಲ್ 1998ರಂದು ಪಶ್ಚಿಮ ಲಂಡನ್ ಹಾಗು ಶೆಪ್ಪರ್ಟನ್ ಸ್ಟುಡಿಯೋಸ್ ಎರಡೂ ಕಡೆ ಪ್ರಾರಂಭವಾಯಿತು.[] ವಿಲ್ ನ ಪುಸ್ತಕದಂಗಡಿಯು ಪೋರ್ಟೊಬೆಲ್ಲೋ ರಸ್ತೆಯಲ್ಲಿ ನೆಲೆಗೊಂಡಿತ್ತು. ಇದು ಚಿತ್ರೀಕರಣಗೊಂಡ ಪ್ರಮುಖ ಪ್ರದೇಶಗಳಲ್ಲೊಂದು. ಚಿತ್ರೀಕರಣವಾದ ನಾಟ್ಟಿಂಗ್ ಹಿಲ್ ನ ಇತರ ಪ್ರದೇಶಗಳೆಂದರೆ ವೆಸ್ಟ್ ಬೌರ್ನೆ ಪಾರ್ಕ್ ರಸ್ತೆ, ಗೋಲ್ಬೋರ್ನೆ ರಸ್ತೆ, ಲ್ಯಾಂಡ್ಸ್ ಡೌನ್ ರಸ್ತೆ ಹಾಗು ಕಾರೋನೆಟ್ ಚಿತ್ರಮಂದಿರ.[] ವಿಲ್ ನ ಮನೆ, 280 ವೆಸ್ಟ್ ಬೌರ್ನೆ ಪಾರ್ಕ್ ರಸ್ತೆಯು, ವಾಸ್ತವವಾಗಿ ರಿಚರ್ಡ್ ಕರ್ಟಿಸ್ ರ ಒಡೆತನದಲ್ಲಿತ್ತು. ಪ್ರವೇಶ ದ್ವಾರದ ಹಿಂಭಾಗಕ್ಕೆ ಒಂದು ದೊಡ್ಡ ಮನೆಯಿದೆ, ಇದು ಚಿತ್ರದಲ್ಲಿ ಕಾಣುವ ಮನೆಯನ್ನು ಹೋಲುವುದಿಲ್ಲ. ಇದನ್ನು ನಿಜವಾಗಿ ಸ್ಟುಡಿಯೋದಲ್ಲಿಯೇ ನಿರ್ಮಿಸಲಾಗಿತ್ತು. ಪ್ರಸಿದ್ದ ನೀಲಿ ಬಾಗಿಲನ್ನು ಅಂತಿಮವಾಗಿ ಹರಾಜು ಹಾಕಲಾಯಿತು. ಜೊತೆಗೆ ಇದರಿಂದ ಬಂದ ಹಣವನ್ನು ಧರ್ಮಸಂಸ್ಥೆಗೆ ನೀಡಲಾಯಿತು. ಪ್ರಸ್ತುತ ಈಗಿರುವ ಕಪ್ಪು ಬಣ್ಣದ ಬಾಗಿಲು ಅದೃಷ್ಟದ ಸಂಕೇತವೆಂದು ಹೇಳಲಾಗುತ್ತಿದೆ. ನಾಟ್ಟಿಂಗ್ ಹಿಲ್ ನಲ್ಲಿ ಆರು ವಾರಗಳ ಕಾಲ ಚಿತ್ರೀಕರಣ ಮುಗಿಸಿದ ಬಳಿಕ, ಚಿತ್ರೀಕರಣವು ರಿಟ್ಜ್ ಹೋಟೆಲ್ ಗೆ ಸ್ಥಳಾಂತರಗೊಂಡಿತು. ಚಿತ್ರೀಕರಣ ರಾತ್ರಿಯ ವೇಳೆ ದಿ ಸವೊಯ್ ಹೋಟೆಲ್, ದಿ ನೋಬು ರೆಸ್ಟೋರೆಂಟ್, ದಿ ಹೆಮ್ಪೆಲ್ ಹೋಟೆಲ್ ನ ದಿ ಜೆನ್ ಗಾರ್ಡನ್ ಹಾಗು ಕೆನ್ವುಡ್ ಹೌಸ್ ನಲ್ಲಿ ನಡೆಯಿತು.[] ಚಿತ್ರದ ಅಂತಿಮ ದೃಶ್ಯಗಳು ಚಿತ್ರದ ಒಂದು ಪ್ರಧಾನ ಜಾಗೆಯಲ್ಲಿ ನಡೆಯುತ್ತಿದ್ದವು. ಇದರಿಂದ ನಿರ್ಮಾಣ ತಂಡ ತೊಂದರೆಗೆ ಸಿಲುಕಬೇಕಾಯಿತು. ಮಿಚೆಲ್ ಚಿತ್ರದ ದೃಶ್ಯವನ್ನು ಲೈಸೆಸ್ಟರ್ ಸ್ಕ್ವೆರ್ ನಲ್ಲಿ ಚಿತ್ರೀಕರಣ ಮಾಡಲು ಯೋಜಿಸಿದ್ದರು, ಆದರೆ ಅವರ ಕೋರಿಕೆ ನಿರಾಕರಿಸಲಾಯಿತು. ಪೋಲೀಸಿನವರಿಗೆ ಕೆಲ ಸಮಯದ ಹಿಂದೆ ನಡೆದ ಲಿಯೋನಾರ್ಡೊ ಡಿ ಕಾಪ್ರಿಯೋ ಅವರ ಚಿತ್ರ ಪ್ರದರ್ಶನದಲ್ಲಿ ಅಭಿಮಾನಿಗಳು ತೊಂದರೆಯನ್ನುಂಟು ಮಾಡಿದ ರೀತಿಯೇ, ಈ ಚಿತ್ರದ ಪ್ರದರ್ಶನದಲ್ಲೂ ಸಮಸ್ಯೆಗಳು ಉಂಟಾಗಬಹುದೆಂದು ಪೋಲಿಸಿನವರು ಕಳವಳ ವ್ಯಕ್ತ ಪಡಿಸಿದರು. ಒಂದು ಸ್ವಸ್ಥ ಹಾಗು ಸುರಕ್ಷಿತ ಕ್ರಮದಿಂದ, ನಿರ್ಮಾಣ ತಂಡಕ್ಕೆ ಚಿತ್ರೀಕರಿಸಲು ಅನುಮತಿ ದೊರೆಯಿತು. ಜೊತೆಗೆ ಇಪ್ಪತ್ತ-ನಾಲ್ಕು ಗಂಟೆಗಳಲ್ಲಿ ದೃಶ್ಯ ಚಿತ್ರೀಕರಿಸಲಾಯಿತು.[] ಚಿತ್ರದ ಅಂತಿಮ ದೃಶ್ಯಗಳನ್ನು ಶೆಪ್ಪರ್ಟನ್ ಸ್ಟುಡಿಯೋಸ್ ನ ಒಳಾಂಗಣ ಘಟಕದಲ್ಲಿ ಚಿತ್ರೀಕರಿಸಲಾಯಿತು.[] ಚಿತ್ರೀಕರಣ ಮುಗಿದ ನಂತರ, ಚಿತ್ರವನ್ನು 3½ ಗಂಟೆಗಳ ಅವಧಿಗೆ ಸೀಮಿತಗೊಳಿಸಲಾಯಿತು. ಚಿತ್ರದ ಬಿಡುಗಡೆಗೋಸ್ಕರ ಚಿತ್ರಿಸಲಾಗಿದ್ದ 90 ನಿಮಿಷಗಳ ಕಾಲದ ಚಿತ್ರ ವಿವರಣೆಯನ್ನು ತೆಗೆದು ಹಾಕಲಾಯಿತು.[]

ಚಿತ್ರದಲ್ಲಿ 1950ಮಾರ್ಕ್ ಚಗಲ್ ರ ವರ್ಣಚಿತ್ರ ಲಾ ಮರಿಏ ಕಂಡು ಬರುತ್ತದೆ. ಚಿತ್ರದಲ್ಲಿ, ಅನ್ನಾ ವಿಲ್ಲಿಯಮ್ ನ ಮನೆಯಲ್ಲಿ ವರ್ಣಚಿತ್ರದ ಒಂದು ಪ್ರತಿ ನೋಡಿರುತ್ತಾಳೆ, ನಂತರ ಅವನಿಗೆ ಮೂಲವೆಂದು ಭಾವಿಸಲಾದ ಇನ್ನೊಂದು ಪ್ರತಿಯನ್ನು ನೀಡುತ್ತಾಳೆ. ನಿರ್ದೇಶಕ ಮಿಚೆಲ್ ಎಂಟರ್ಟೈನ್ಮೆಂಟ್ ವೀಕ್ಲಿ ಯ ಒಂದು ಲೇಖನದಲ್ಲಿ , ವರ್ಣಚಿತ್ರವನ್ನು ಚಿತ್ರಕಥೆಗಾರ ಕರ್ಟಿಸ್ ಆಯ್ಕೆ ಮಾಡಿದರು, ಏಕೆಂದರೆ ಅವರು ಚಾಗಲ್ ರ ಕೃತಿಗಳ ಬಹು ದೊಡ್ಡ ಅಭಿಮಾನಿ. ಜೊತೆಗೆ ಲಾ ಮರಿಏ ವರ್ಣಚಿತ್ರದಲ್ಲಿ "ಯಾವುದೋ ಕಳೆದುಹೋದ ವಸ್ತುವಿಗಾಗಿ ಹಂಬಲಿಸುವುದನ್ನು ಇಲ್ಲಿ ಚಿತ್ರಿಸಲಾಗಿದೆ." ನಿರ್ಮಾಪಕರು ಚಿತ್ರದಲ್ಲಿ ಈ ವರ್ಣಚಿತ್ರವನ್ನು ಬಳಸಿಕೊಳ್ಳುವುದಕ್ಕೊಸ್ಕರ ಕೆಲವೊಂದು ಬದಲಾವಣೆಗಳೊಂದಿಗೆ ಮತ್ತೊಂದು ನಕಲು ಪ್ರತಿ ರಚಿಸಬೇಕಾಯಿತು. ಆದರೆ ಇದಕ್ಕೆ ಮೊದಲು ವರ್ಣಚಿತ್ರದ ಕಲಾಗಾರನ ಅನುಮತಿ ಪಡೆಯುವುದರ ಜೊತೆಗೆ ಬ್ರಿಟಿಶ್ ನ ಡಿಸೈನ್ ಅಂಡ್ ಆರ್ಟಿಸ್ಟ್ಸ ಕಾಪಿರೈಟ್ ಸೊಸೈಟಿ ಯಿಂದಲೂ ಅನುಮತಿ ಪಡೆಯಬೇಕಾಯಿತು. ಅಂತಿಮವಾಗಿ, ನಿರ್ಮಾಪಕ ಕೆನ್ವರ್ತಿಯ ಪ್ರಕಾರ, "ಚಿತ್ರದಲ್ಲಿ ಬಳಕೆಯಾದ ನಂತರ, ನಕಲು ಪ್ರತಿ ನಾಶಮಾಡಲು ನಾವು ಒಪ್ಪಿಕೊಳ್ಳಬೇಕಾಯಿತು. ಈ ನಕಲು ಪ್ರತಿ ತುಂಬಾ ಚೆನ್ನಾಗಿ ಮೂಡಿ ಬಂದರೆ, ಅದು ಮಾರುಕಟ್ಟೆಯಲ್ಲಿ ಚಾಲ್ತಿಗೆ ಬರುವುದರ ಜೊತೆಗೆ ಸಮಸ್ಯೆ ಸೃಷ್ಟಿಸಬಹುದೆಂಬ ಕಳವಳ ಅವರಲ್ಲಿ ಉಂಟಾಗಿತ್ತು." ಲೇಖನದಲ್ಲಿ ನಮೂದಿಸಿರುವಂತೆ "ಕೆಲವು ತಜ್ಞರ ಪ್ರಕಾರ ಮೂಲ ಕ್ಯಾನ್ವಾಸ್ $500,000 ರಿಂದ $1 ಮಿಲ್ಯನ್ ಬೆಲೆಬಾಳುತ್ತದೆ."[೧೦]

ಸಂಗೀತ

[ಬದಲಾಯಿಸಿ]

ಟ್ರೆವೊರ್ ಜೋನೆಸ್ ಚಿತ್ರಕ್ಕಾಗಿ ಸಂಗೀತ ಸಂಯೋಜಿಸಿದರು.[೧೧] ಹೆಚ್ಚಿನ ಹಾಡುಗಳನ್ನು ಇತರ ಕಲಾವಿದರು ಬರೆದಿದ್ದಾರೆ. ಇದು ಚಿತ್ರದ ಧ್ವನಿಮುದ್ರಿಕೆಯಲ್ಲಿ ಕೇಳಿಬರುತ್ತದೆ. ಇದರಲ್ಲಿ ಎಲ್ವಿಸ್ ಕಾಸ್ಟೆಲ್ಲೋಅವರ ಚಾರ್ಲೆಸ್ ಅಜ್ನವೌರ್ ಅವರ ಮರು ಮುದ್ರಣಗೊಂಡ ಹಾಡು "ಶೀ", ಶಾನಿಯ ಟ್ವೈನ್ ರ ರೀಮಿಕ್ಸ್ ಆವೃತ್ತಿಯ ಹಾಡು, "ಯು'ವ್ ಗಾಟ್ ಏ ವೇ", ಜೊತೆಗೆ ರೋನನ್ ಕೀಟಿಂಗ್ ಅವರ ವೆನ್ ಯು ಸೆ ನಥಿಂಗ್ ಅಟ್ ಆಲ್ ಹಾಡಿನ ವಿಶೇಷ ಧ್ವನಿಮುದ್ರಣ ಒಳಗೊಂಡಿದೆ"; ಹಾಡುಗಳು ಬ್ರಿಟಿಶ್ ಹಾಡುಗಳ ಕೋಷ್ಟಕದಲ್ಲಿ ಅಗ್ರ ಸ್ಥಾನ ಗಳಿಸಿದವು. ವಿಲ್ ಪೋರ್ಟೊ ಬೆಲ್ಲೋ ರಸ್ತೆ ಯಲ್ಲಿ ನಡೆದು ಹೋಗುವಾಗ ಬಿಲ್ ವಿಥೆರ್ಸ್ ಬರೆದ ಅಇನ್'ಟ್ ನೋ ಸನ್ ಶೈನ್ ಹಾಡು ಕೇಳಿ ಬರುತ್ತದೆ. ಟೋನಿ ಮತ್ತು ಮ್ಯಾಕ್ಸ್ ಟೋನಿಯ ರೆಸ್ಟೋರಂಟ್ ನಲ್ಲಿ ರಾತ್ರಿ ಕಳೆಯುವ ಹೊತ್ತಿಗೆ ಬ್ಲೂ ಮೂನ್ಹಾಡನ್ನು ಪಿಯಾನೋ ದಲ್ಲಿ ನುಡಿಸುತ್ತಾರೆ.[೧೨] ಮೂಲತಃ, ಚಾರ್ಲೆಸ್ ಅಜ್ನವೌರ್ ಅವರ "ಶೀ" ಹಾಡಿನ ಆವೃತ್ತಿಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಯಿತು. ಆದರೆ ಅಮೇರಿಕಾದಲ್ಲಿ ಚಿತ್ರದ ಪೂರ್ವಭಾವಿ ಪ್ರದರ್ಶನದಲ್ಲಿ ಪ್ರೇಕ್ಷಕರು ಇದಕ್ಕೆ ನಿರಾಶಾದಾಯಕ ಪ್ರತಿಕ್ರಿಯೆ ನೀಡಿದರು. ನಂತರ ರಿಚರ್ಡ್ ಕರ್ಟಿಸ್ ಕಾಸ್ಟೆಲ್ಲೋವನ್ನು ಹಾಡು ಮರುಮುದ್ರಣ ಮಾಡಲು ಕರೆತಂದರು.[೧೩] ಹಾಡಿನ ಎರಡೂ ಆವೃತ್ತಿಗಳು U.S. ಬಿಟ್ಟು ಬೇರೆ ಕಡೆಗಳಲ್ಲಿ ಬಿಡುಗಡೆಗೊಂಡವು.

ಧ್ವನಿಮುದ್ರಿಕಾ ಪಟ್ಟಿ

[ಬದಲಾಯಿಸಿ]
  1. ಫ್ರಂ ದಿ ಹಾರ್ಟ್ - ಅನದರ್ ಲೆವೆಲ್
  2. ವೆನ್ ಯು ಸೆ ನಥಿಂಗ್ ಅಟ್ ಆಲ್ - ರೋನನ್ ಕೀಟಿಂಗ್
  3. ಶೀ - ಎಲ್ವಿಸ್ ಕಾಸ್ಟೆಲ್ಲೋ
  4. ಹೌ ಕ್ಯಾನ್ ಯು ಮೆಂಡ್ ಏ ಬ್ರೋಕನ್ ಹಾರ್ಟ್? - ಅಲ್ ಗ್ರೀನ್
  5. ಇನ್ ಅವರ್ ಲೈಫ್ ಟೈಮ್ - ಟೆಕ್ಸಾಸ್
  6. ಐ ಡು (ಚೆರಿಶ್ ಯು) - 98 ಡಿಗ್ರೀಸ್
  7. ಬಾರ್ನ್ ಟು ಕ್ರೈ - ಪಲ್ಪ್
  8. ಅಇನ್'ಟ್ ನೋ ಸನ್ ಶೈನ್ - ಲೈಟ್ ಹೌಸ್ ಫ್ಯಾಮಿಲಿ
  9. ಯು'ವ್ ಗಾಟ್ ಏ ವೇ - ಶನಿಯ ಟ್ವೈನ್ (ನಾಟ್ಟಿಂಗ್ ಹಿಲ್ ರಿಮಿಕ್ಸ್)
  10. ಗಿಮ್ಮೆ ಸಂ ಲವಿನ್' - ಸ್ಪೆನ್ಸೆರ್ ಡೇವಿಸ್ ಗುಂಪು
  11. ವಿಲ್ ಹಾಗು ಅನ್ನಾ - ಟ್ರೆವೊರ್ ಜೋನೆಸ್(ಸ್ಕೋರ್)
  12. ನಾಟ್ಟಿಂಗ್ ಹಿಲ್- ಟ್ರೆವೊರ್ ಜೋನೆಸ್ (ಸ್ಕೋರ್)
  13. ಅಇನ್'ಟ್ ನೋ ಸನ್ ಶೈನ್ - ಬಿಲ್ ವಿಥರ್ಸ್ (ಉಚಿತ ಹಾಡು).

ಸ್ವಾಗತ ಪೂರ್ಣ ಪ್ರತಿಕ್ರಿಯೆ

[ಬದಲಾಯಿಸಿ]

ಚಿತ್ರಕ್ಕೆ ವ್ಯಾಪಕ ಪ್ರಶಂಸೆ ದೊರಕಿತು. ರಾಟನ್ ಟಮಾಟೋಸ್ ನಲ್ಲಿ "ಸರ್ಟಿಫೈಡ್ ಫ್ರೆಶ್" ವಿಭಾಗದಲ್ಲಿ 85% ರೇಟಿಂಗ್ ಗಳಿಸಿತು.[೧೪] ವರೈಟಿ ಯಡೆರೆಕ್ ಎಲ್ಲೆಯ್ ಹೇಳುವಂತೆ "ಚಿತ್ರವು ಅಚ್ಚುಕಟ್ಟಾಗಿದೆ, ವಿಚಿತ್ರವಾಗಿದೆ, ಚಿತ್ರ ಸಾಮಾನ್ಯ ವೇಳೆಗಿಂತ 10 ನಿಮಿಷದಷ್ಟು ಹೆಚ್ಚು ಉದ್ದವಾಗಿದೆ ಅನಿಸುತ್ತದೆ. ಆದರೆ ಇದು ನಿಖರವಾಗಿದ್ದು, ಚಿತ್ರದ ಸಂಯೋಜನೆ ಅಥವಾ ಒಟ್ಟಾರೆ ಹೇಳುವುದಾದರೆ "ಫೋರ್ ವೆಡ್ಡಿಂಗ್ಸ್ ಅಂಡ್ ಏ ಫ್ಯೂನರಲ್ ನ 2ನೇ ಭಾಗವಲ್ಲ" ಎಂಬ ಉತ್ತಮ ಪ್ರತಿಕ್ರಿಯೆ ನೀಡಿದರು .[] ಕ್ರ್ಯಾಂಕಿ ಕ್ರಿಟಿಕ್ ಇದನ್ನು "ಬಹಳ ಚೆನ್ನಾಗಿದೆ" ಎಂದು ಹೇಳುತ್ತಾರೆ, ಜೊತೆಗೆ ಇದನ್ನು " ಪ್ರೇಮಿಗಳು ವಿಹಾರಕಾಲದಲ್ಲಿ ವೀಕ್ಷಿಸಲು ಹೇಳಿಮಾಡಿಸಿದ ಒಂದು ಪಕ್ಕಾ ಚಿತ್ರ" ವೆಂದು ಹೇಳುತ್ತಾರೆ. [೧೫] ನೈಟ್ರೇಟ್ ಹೇಳುವಂತೆ " ನಾಟ್ಟಿಂಗ್ ಹಿಲ್ ಒಂದು ವಿಚಿತ್ರ ಹಾಗು ಹಗುರ, ತಾಜಾ ಹಾಗು ಚಮತ್ಕಾರಿ ಚಿತ್ರ" ಜೊತೆಗೆ ಇದರಲ್ಲಿ "ಪ್ರೀತಿಯ ಕ್ಷಣಗಳು ಹಾಗು ಅವಿಸ್ಮರಣೀಯ ಪಾತ್ರಗಳು" ಇವೆ.[೧೬] ಚಿತ್ರದ DVDಗೆ ಪ್ರತಿಕ್ರಿಯಿಸುತ್ತಾ ಜಾನ್ J. ಪುಕ್ಕಿಒ "ಚಿತ್ರವು ಒಂದು ಕಾಲ್ಪನಿಕ ಕಟ್ಟು ಕಥೆಯಂತೆ ಇದೆ. ಚಿತ್ರ ಕಥೆಗಾರ ರಿಚರ್ಡ್ ಕರ್ಟಿಸ್ ಗೆ ಪ್ರೇಕ್ಷಕರು ಇಂತಹ ಕಥೆಗಳನ್ನು ಎಷ್ಟು ಇಷ್ಟ ಪಡುತ್ತಾರೆ ಎಂಬುದು ಗೊತ್ತು ಎಂದು ಹೇಳುತ್ತಾರೆ. ಅವರು ಚಿತ್ರವನ್ನು "ಒಂದು ಸದಭಿರುಚಿಯ ಚಿತ್ರ" ಎಂದೂ ಹೇಳುತ್ತಾರೆ.[೧೭] ವಾಶಿಂಗ್ಟನ್ ಪೋಸ್ಟ್ ನ ಡೆಸ್ಸನ್ ಹೊವೆ, ಚಿತ್ರಕ್ಕೆ ಒಂದು ಉತ್ತಮ ಪ್ರತಿಕ್ರಿಯೆ ನೀಡುತ್ತಾರೆ. ವಿಶೇಷವಾಗಿ ಸ್ಪೈಕ್ ನ ಪಾತ್ರದಲ್ಲಿ ರೈಸ್ ಇಫಾನ್ಸ್ ರ ಅಭಿನಯ ಪ್ರಶಂಸಿಸುತ್ತಾರೆ.[೧೮] ಜೇಮ್ಸ್ ಸ್ಯಾನ್ ಫೋರ್ಡ್ ನಾಟ್ಟಿಂಗ್ ಹಿಲ್ ಚಿತ್ರಕ್ಕೆ ಮೂರುವರೆ ಸ್ಟಾರ್ಸ್ ಗಳನ್ನೂ ನೀಡುತ್ತಾರೆ. ಅವರ ಪ್ರಕಾರ "ಕರ್ಟಿಸ್ ಅವರ ವ್ಯರ್ಥ ಕಥಾವಸ್ತುವಿಗಿಂತ ಅವರ ಸಂಭಾಷಣೆಯು ಚುರುಕಾಗಿರಬಹುದಿತ್ತು. ಆದರೆ ನಾಟ್ಟಿಂಗ್ ಹಿಲ್ ನ ಮೊದಲ ಭಾಗವು ತುಂಬಾ ವಿನೋದಮಯವಾಗಿದೆ, ಜೊತೆಗೆ ತಮಾಷೆಯಿಂದ ಕೂಡಿದೆ; ಹೀಗಾಗಿ ಅದರ ಬಗ್ಗೆ ಅತೃಪ್ತಿ ತೋರಿದರೆ ಅದು ಒರಟುತನವಾಗುತ್ತದೆ. ಮಿಕ್ಕ ಭಾಗಗಳು ಬಹುತೇಕ ಚೆನ್ನಾಗಿದೆ."[೧೯] ಮಿಲ್ವುಕೀ ಜರ್ನಲ್ ಸೆಂಟಿನೆಲ್ ನ ಸುಎ ಪಿಎರ್ಮ್ಯಾನ್ಪ್ರಕಾರ ನಾಟ್ಟಿಂಗ್ ಹಿಲ್ ಚಿತ್ರ ಪ್ರತಿಭೆ, ಮೋಜು ಹಾಗು ರಮ್ಯತೆ, ಸೇರಿ ಭಾವನಾತ್ಮಕವಾಗಿದೆ - ಜೊತೆಗೆ, ಹೌದು , ಇದು ಫೋರ್ ವೆಡ್ಡಿಂಗ್ಸ್ ಅಂಡ್ ಏ ಫ್ಯೂನರಲ್ ಚಿತ್ರವನ್ನು ನೆನಪಿಗೆ ತರುತ್ತದೆ. ಆದರೆ "ಚಿತ್ರ ತೃಪ್ತಿಕರವಾಗಿದ್ದು. ಇದು ಸಣ್ಣ ವಿಷಯಗಳಿಗೆ ಅಷ್ಟಾಗಿ ಗಮನ ನೀಡುವುದಿಲ್ಲ."[೨೦] ರೋಜರ್ ಎಬರ್ಟ್ ಚಿತ್ರ ಮೆಚ್ಚಿಕೊಂಡು "ಚಿತ್ರವು ಚೆನ್ನಾಗಿದೆ, ಸಂಭಾಷಣೆಯು ವಿವೇಕ ಹಾಗು ಬುದ್ಧಿವಂತಿಕೆಯಿಂದ ಕೂಡಿದೆ. ರಾಬರ್ಟ್ಸ್ ಹಾಗು ಗ್ರ್ಯಾಂಟ್ ತುಂಬಾ ಸುಲಭವಾಗಿ ಮೆಚ್ಚುಗೆಗೆ ಪಾತ್ರರಾಗುತ್ತಾರೆ."[೨೧] ಕೆನ್ನೆತ್ ಟ್ಯುರನ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿ "ಚಿತ್ರದ ಭಾವನಾತ್ಮಕ ತಿರುಳು, ಸಮಸ್ಯೆಗಳ ಪ್ರಭಾವಕ್ಕೆ ಒಳಗಾಗಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾರೆ."[೨೨] CNN ವಿಮರ್ಶಕ ಪಾಲ್ ಕ್ಲಿಂಟನ್ ರ ಪ್ರಕಾರ ನಾಟ್ಟಿಂಗ್ ಹಿಲ್ ಚಿತ್ರವು "ಎಲ್ಲ ಅನಿಶ್ಚಿತತೆಯ ನಡುವೆ ಪ್ರೀತಿ ಗೆಲ್ಲುತ್ತದೆ ಎಂಬುದನ್ನು ತೋರಿಸುವ ಮತ್ತೊಂದು ಹಾಸ್ಯ ಹಾಗು ಹೃದಯಸ್ಪರ್ಶಿ ಕಥೆಯಲ್ಲದೇ ಎಲ್ಲಕ್ಕಿಂತ ವಿಭಿನ್ನವಾಗಿ ನಿಲ್ಲುತ್ತದೆ".[೨೩]

Needcoffee.com ನ ವಿಡ್ಗೆಟ್ಟ್ ವಾಲ್ಸ್ ಚಿತ್ರಕ್ಕೆ "ಮೂರುವರೆ ಕಪ್ ಕಾಫಿ" ಅಂಕವನ್ನು ನೀಡುತ್ತಾರೆ. ಅವರ ಪ್ರಕಾರ ಚಿತ್ರದ ಹಾಸ್ಯವು ಅದನ್ನು ಸಂಪೂರ್ಣ ಸಾಮಾನ್ಯ ಶೈಲಿ ಜೊತೆಗೆ ಅಸಮರ್ಪಕ (ಇಲ್ಲ, ನಾನು ಅದನ್ನು ರೋಷ ಎಂದು ಕರೆಯುತ್ತೇನೆ) ಕೊನೆಯಿಂದ ರಕ್ಷಿಸುತ್ತದೆ". ಆದರೆ ಅವರು ಚಿತ್ರದ ಕಳಪೆ ಧ್ವನಿಮುದ್ರಣ ಖಂಡಿಸಿದ್ದಾರೆ.[೨೪] ಡೆನ್ನಿಸ್ ಸಚ್ವರ್ತ್ಜ್ ಚಿತ್ರಕ್ಕೆ ಒಂದು ನಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಾರೆ. ಚಿತ್ರಕ್ಕೆ "C"-ದರ್ಜೆ ನೀಡಿ "ಈ ಚಿತ್ರವು ಅಪ್ರಬುದ್ದವಾಗಿದೆ, ಜೊತೆಗೆ ಅಶುದ್ಧ, ನಿರರ್ಥಕ ಪದಗಳಿಂದ ತುಂಬಿದೆ" ಎಂದು ಹೇಳುತ್ತಾರೆ.[೨೫] ಕೆಲವರು ಈ ಚಿತ್ರವನ್ನು "ಒಂದು ಅವಾಸ್ತವಿಕ ದೃಷ್ಟಿಕೋನದಿಂದ ಲಂಡನ್ ಜೀವನ ಹಾಗು ವಿಲಕ್ಷಣ ಬ್ರಿಟಿಶ್ ವಿಕೇಂದ್ರೀಯತೆಯನ್ನು ಚಿತ್ರಿಸಲಾಗಿದೆ" ಎಂದು ಖಂಡಿಸುತ್ತಾರೆ.[೨೬]

ಬ್ರಿಟಿಶ್ ಫಿಲಂ ಇನ್ಸ್ಟಿಟ್ಯೂಟ್ ನ ಎಲ್ಲ ಕಾಲದ ಅಗ್ರ 100 ಚಿತ್ರಗಳ ಪಟ್ಟಿಯಲ್ಲಿ ನಾಟ್ಟಿಂಗ್ ಹಿಲ್ ಚಿತ್ರಕ್ಕೆ 95 ಸ್ಥಾನ ನೀಡಲಾಗಿದೆ. ಈ ಫಲಿತಾಂಶವನ್ನು ಬ್ರಿಟಿಶ್ ಸಿನಿಮಾ ಪ್ರವೇಶದ ಶ್ರೇಯಾಂಕದಲ್ಲಿ ಪ್ರತಿ ಚಿತ್ರದ ಅಂದಾಜಿನ ಮೇಲೆ ಆಧರಿಸಲಾಗಿದೆ.[]

ಚಿತ್ರದ ವಿಶ್ವವಿಖ್ಯಾತ ಪ್ರಶಸ್ತಿಯ ಸ್ಮರಣೆ ಕಾರ್ಯಕ್ರಮ, ವರ್ಲ್ಡ್ ಪ್ರೇಮಿಯರ್ ಅನ್ನು ಲೈಸೆಸ್ಟರ್ ಸ್ಕ್ವೆರ್ ನಲ್ಲಿರುವ ಒಡೆಒನ್ ಚಿತ್ರಮಂದಿರದಲ್ಲಿ 27 ಏಪ್ರಿಲ್ 1999ರಂದು ಹಮ್ಮಿಕೊಳ್ಳಲಾಗಿತ್ತು.[೨೭] ನಾಟ್ಟಿಂಗ್ ಹಿಲ್ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯಿತು. ಅದು ಒಟ್ಟಾರೆಯಾಗಿ $116,089,678ರಷ್ಟು ಸ್ಥಳೀಯವಾಗಿ ಲಾಭ ಗಳಿಸಿತು. ಜೊತೆಗೆ ಅದು ವಿಶ್ವವ್ಯಾಪಿ ಪ್ರದರ್ಶನದಲ್ಲಿ $363,889,678ರಷ್ಟು ಲಾಭ ಮಾಡಿತು.[೨೮] ಮೊದಲ ವಾರಾಂತ್ಯದಲ್ಲಿ ಚಿತ್ರವು $27.7 ಮಿಲಿಯನ್ ಆದಾಯ ಗಳಿಸಿ, ಅಮೇರಿಕಾದ ಬಾಕ್ಸ್ ಆಫೀಸ್ ದಾಖಲೆ ಮೀರಿ [೨೯] ಜೊತೆಗೆ ಆ ಹಂತದಲ್ಲಿ ಒಂದು ಭಾವಪ್ರಧಾನ ಹಾಸ್ಯ ಚಿತ್ರಕ್ಕೆ ಭರ್ಜರಿ ಆರಂಭ ದೊರೆಯಿತು. ಇದು ಮೈ ಬೆಸ್ಟ್ ಫ್ರೆಂಡ್'ಸ್ ವೆಡ್ಡಿಂಗ್ ಚಿತ್ರದ ದಾಖಲೆ ಮುರಿಯಿತು.[೩೦] ನಾಟ್ಟಿಂಗ್ ಹಿಲ್ ಅದರ ಮರು ವಾರದಲ್ಲಿ ಮತ್ತೊಂದು $15 ಮಿಲಿಯನ್ ಆದಾಯ ಗಳಿಸಿತು.[೩೧] ಆದರೆ ನಂತರದಲ್ಲಿ ಅದು ಕುಸಿಯಿತು.[೩೨] ಬಿಡುಗಡೆಯಾದ ಒಂದು ತಿಂಗಳ ನಂತರ, ನಾಟ್ಟಿಂಗ್ ಹಿಲ್ ಅತ್ಯಧಿಕ ಲಾಭ ಗಳಿಸಿದ ಭಾವಪ್ರಧಾನ ಹಾಸ್ಯ ಚಿತ್ರವೆಂಬ ದಾಖಲೆಯನ್ನುರನ್ ಅವೆ ಬ್ರೈಡ್ (ಈ ಚಿತ್ರದಲ್ಲೂ ರಾಬರ್ಟ್ಸ್ ನಟಿಸಿದ್ದಾಳೆ)ಚಿತ್ರ ಮೀರಿಸಿತು.[೩೩] ಚಿತ್ರವು 1999ರ ಅತ್ಯಧಿಕ ಲಾಭ ಗಳಿಸಿದ ಚಿತ್ರಗಳಲ್ಲಿ 16ನೇ ಸ್ಥಾನ ಪಡೆಯಿತು.[೩೪] ಜೊತೆಗೆ ಮೇ 2007ರ ತನಕ ಎಲ್ಲ ಕಾಲದಲ್ಲೂ ಅತ್ಯಧಿಕ ಲಾಭ ಗಳಿಸಿದ ಚಿತ್ರಗಳಲ್ಲಿ 104ನೇ ಸ್ಥಾನ ಪಡೆಯಿತು.[೩೫] ಆ ಸಮಯದಲ್ಲಿ, ಎಲ್ಲ ಕಾಲದಲ್ಲೂ ಅತ್ಯಧಿಕ ಲಾಭ ಗಳಿಸಿದ ಬ್ರಿಟಿಶ್ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.[೩೬]

ನಾಟ್ಟಿಂಗ್ ಹಿಲ್ 2000ದ BAFTA ಪ್ರಶಸ್ತಿಗಳಲ್ಲಿ ಅತ್ಯಂತ ಜನಪ್ರಿಯ ಚಿತ್ರವೆಂದು ಪ್ರೇಕ್ಷಕರ ಪ್ರಶಸ್ತಿ ಗಳಿಸಿತು.[೩೭] ಅಲೆಕ್ಸಾಂಡರ್ ಕೋರ್ಡ ಪ್ರಶಸ್ತಿ ವಿಭಾಗದಲ್ಲಿ ವರ್ಷದ ಅತ್ಯುತ್ತಮ ಬ್ರಿಟಿಶ್ ಚಿತ್ರವೆಂದು ನಾಮಕರಣಗೊಂಡಿತು. ಜೊತೆಗೆ ರೈಸ್ ಇಫಾನ್ಸ್ ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ನೀಡಲಾಯಿತು.[೩೮] ಬ್ರಿಟಿಶ್ ಕಾಮಿಡಿ ಅವಾರ್ಡ್ ಗಳಲ್ಲಿ ಚಿತ್ರವು ಅತ್ಯುತ್ತಮ ಹಾಸ್ಯ ಚಿತ್ರವೆಂದು ಪ್ರಶಸ್ತಿ ಗಳಿಸಿತು.[೩೯] ಚಿತ್ರದಲ್ಲಿನ ಧ್ವನಿ ಮುದ್ರಣಕ್ಕಾಗಿ ಬ್ರಿಟ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಎನ್ನಲಾದ ಪ್ರಶಸ್ತಿ ಗಳಿಸಿತು, Star Wars - Episode I: The Phantom Menace [೪೦] ಚಿತ್ರವು ಅತ್ಯುತ್ತಮ ಬ್ರಿಟಿಶ್ ಚಿತ್ರ, ರೋಜರ್ ಮಿಚೆಲ್ ಅತ್ಯುತ್ತಮ ಬ್ರಿಟಿಶ್ ನಿರ್ದೇಶಕ ಹಾಗು ಹಗ್ ಗ್ರ್ಯಾಂಟ್ ಅತ್ಯುತ್ತಮ ಬ್ರಿಟಿಶ್ ನಟ ಎಂದು ಎಂಪೈರ್ ಪ್ರಶಸ್ತಿಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.[೪೧] ಚಿತ್ರವು ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗಳ ಮೂರು ವಿಭಾಗಗಳಲ್ಲಿ ನಾಮಕರಣಗೊಂಡಿತು. ಇದು ಅತ್ಯುತ್ತಮ ಚಲನಚಿತ್ರ - ಹಾಸ್ಯ/ಸಂಗೀತ, ಹಗ್ ಗ್ರ್ಯಾಂಟ್ ಅತ್ಯುತ್ತಮ ಚಿತ್ರ ನಟ - ಹಾಸ್ಯ/ ಸಂಗೀತ ಹಾಗು ಜೂಲಿಯಾ ರಾಬರ್ಟ್ಸ್ ಅತ್ಯುತ್ತಮ ಚಿತ್ರ ನಟಿ - ಹಾಸ್ಯ/ಸಂಗೀತ ವನ್ನು ಒಳಗೊಂಡಿದೆ.[೪೨]

ಆಕರಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ "About the Production". Notting Hill.com. Retrieved 22 May 2007.
  2. "A Romantic Comedy Dream Team". Notting Hill.com. Retrieved 22 May 2007.
  3. ೩.೦ ೩.೧ Elley, Derek (30 April 1999). "Notting Hill". Variety. Retrieved 19 May 2007.
  4. ೪.೦ ೪.೧ "95: NOTTING HILL". British Film Institute. Retrieved 19 May 2007.
  5. Gordon, Jane (12 May 2007). "Mischa Barton: Little Miss Sunshine". The Mail on Sunday. Retrieved 19 May 2007.
  6. ೬.೦ ೬.೧ "Behind-the-Scenes". Notting Hill.com. Retrieved 22 May 2007.
  7. Chris Parry. "The man who told Notting Hill to 'sod off'". eFilm Critic. Archived from the original on 27 ಸೆಪ್ಟೆಂಬರ್ 2007. Retrieved 21 May 2007.
  8. ೮.೦೦ ೮.೦೧ ೮.೦೨ ೮.೦೩ ೮.೦೪ ೮.೦೫ ೮.೦೬ ೮.೦೭ ೮.೦೮ ೮.೦೯ ೮.೧೦ "Notting Hill, the place, the movie location". Notting Hill.com. Retrieved 22 May 2007.
  9. Greg Dean Schmitz. "Notting Hill (1999)". Yahoo!. Archived from the original on 12 ಜುಲೈ 2007. Retrieved 28 May 2007.
  10. Joe Dziemianowicz; Clarissa Cruz (11 June 1999). "Flashes". Entertainment Weekly. Archived from the original on 17 ಅಕ್ಟೋಬರ್ 2007. Retrieved 20 May 2007.{{cite web}}: CS1 maint: multiple names: authors list (link)
  11. "Notting Hill". Filmtracks.com. Retrieved 23 May 2007.
  12. "'When You Say Nothing at All'". BBC. Retrieved 21 May 2007.
  13. Darryl Chamberlain (20 July 1999). "Elvis alive and well in Notting Hill". BBC News. Retrieved 23 May 2007.
  14. "Notting Hill (1999)". Rotten Tomatoes. Retrieved 21 May 2007.
  15. "Notting Hill". Cranky Critic. Archived from the original on 8 ಜೂನ್ 2007. Retrieved 19 May 2007.
  16. Savada, Elias (28 May 1999). "Notting Hill". Nitrate. Retrieved 19 May 2007.
  17. John J. Puccio. "Notting Hill [Ultimate Edition]". DVD Town.com. Archived from the original on 28 ಸೆಪ್ಟೆಂಬರ್ 2007. Retrieved 20 May 2007.
  18. Desson Howe (28 May 1999). "'Notting Hill': Easy to Love". Washington Post. Retrieved 21 May 2007.
  19. James Sanford. "Notting Hill". Kalamazoo Gazette. Archived from the original on 19 ಅಕ್ಟೋಬರ್ 2006. Retrieved 21 May 2007.
  20. Sue Pierman (27 May 1999). "'Notting Hill' is perfect romantic fit for Roberts, Grant". Milwaukee Journal Sentinel. Archived from the original on 29 ಸೆಪ್ಟೆಂಬರ್ 2000. Retrieved 21 May 2007.
  21. Roger Ebert (28 May 1999). "Notting Hill". Chicago Sun-Times. Archived from the original on 15 ಮಾರ್ಚ್ 2005. Retrieved 21 May 2007.
  22. Kenneth Turan (28 May 1999). "Notting Hill". Calendar Live. Retrieved 21 May 2007.
  23. Paul Clinton (27 May 1999). "Review: Julia, Hugh a perfect match for 'Notting Hill'". CNN. Retrieved 21 May 2007.
  24. Widgett Walls. "Notting Hill (1999)". Needcoffee.com. Retrieved 21 May 2007.
  25. Dennis Schwartz (29 November 2000). "Notting Hill". Ozus' World Movie Reviews. Retrieved 21 May 2007.
  26. Tom Brook (5 June 1999). "Money takes over the movies". BBC News. Retrieved 22 March 2008.
  27. "Notting Hill premieres in Leicester Square". BBC News. 27 April 1999. Retrieved 23 May 2007.
  28. "NOTTING HILL". Box Office Mojo. Retrieved 20 May 2007.
  29. "Notting Hill has The Force". BBC News. 2 June 1999. Retrieved 23 May 2007.
  30. Brandon Gray (2 June 1999). "Weekend Box Office". Box Office Mojo. Retrieved 20 May 2007.
  31. Brandon Gray (7 June 1999). "Weekend Box Office". Box Office Mojo. Retrieved 20 May 2007.
  32. Brandon Gray (21 June 1999). "Weekend Box Office". Box Office Mojo. Retrieved 20 May 2007.
  33. Brandon Gray (3 August 1999). "Weekend Box Office". Box Office Mojo. Retrieved 20 May 2007.
  34. "1999 DOMESTIC GROSSES". Box Office Mojo. Retrieved 20 May 2007.
  35. "WORLDWIDE GROSSES". Box Office Mojo. Retrieved 20 May 2007.
  36. "Notting Hill breaks film record". BBC News. 26 August 1999. Retrieved 23 May 2007.
  37. "2000 British Academy of Film and Television Awards". infoplease.com. Retrieved 22 May 2007.
  38. "Bafta nominations in full". BBC News. 1 March 2000. Retrieved 22 May 2007.
  39. "The Past Winners 1999". British Comedy Awards. Archived from the original on 27 ಸೆಪ್ಟೆಂಬರ್ 2007. Retrieved 22 May 2007.
  40. "Brits 2000: The winners". BBC News. 3 March 2000. Retrieved 22 May 2007.
  41. "What are they doing?". British Theatre Guide. 20 February 2000. Archived from the original on 6 ಜೂನ್ 2007. Retrieved 21 May 2007.
  42. "Notting Hill". TheGoldenGlobes.com. Archived from the original on 17 ಅಕ್ಟೋಬರ್ 2007. Retrieved 22 May 2007.


ಹೊರಗಿನ ಕೊಂಡಿಗಳು

[ಬದಲಾಯಿಸಿ]