ವಿಷಯಕ್ಕೆ ಹೋಗು

ಹೆನ್ರಿ ಜೇಮ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆನ್ರಿ ಜೇಮ್ಸ್
ಹೆನ್ರಿ ಜೇಮ್ಸ್
ಜನನ೧೫ ಏಪ್ರಿಲ್ ೧೮೪೩
ವಾಷಿಂಗ್ಟನ್‍, ನ್ಯೂಯಾರ್ಕ್‌ ನಗರ, ಅಮೆರಿಕ
ಮರಣ೨೮ ಫೆಬ್ರವರಿ ೧೯೧೬
ಲಂಡನ್, ಇಂಗ್ಲೆಂಡ್
ವೃತ್ತಿಬರಹಗಾರ
ರಾಷ್ಟ್ರೀಯತೆಅಮೇರಿಕನ್‌, ೧೯೧೫ ರಲ್ಲಿ ಬ್ರಿಟಿಷ್ ಪೌರತ್ವ ಪಡೆದರು
ಪೌರತ್ವಅಮೆರಿಕನ್ (೧೮೪೩-೧೯೧೫) ಬ್ರಿಟಿಷ್ (೧೯೧೫-೧೯೧೬)
ಸಂಬಂಧಿಗಳುಹೆನ್ರಿ ಜೇಮ್ಸ್ Sr (ತಂದೆ) ವಿಲಿಯಮ್ ಜೇಮ್ಸ್ (ಸೋದರ)

ಸಹಿ

ಹೆನ್ರಿ ಜೇಮ್ಸ್[] (೧೫ ಏಪ್ರಿಲ್ ೧೮೪೩-೨೮ ಫೆಬ್ರವರಿ ೧೯೧೬),ಅಮೆರಿಕಾದ ಬರಹಗಾರರು. ಅವರ ಬರವಣಿಗೆಯ ಹೆಚ್ಚು ಕಾಲವನ್ನು ಬ್ರಿಟನ್‍ನಲ್ಲಿ ಕಳೆದರು. ಅವರು ೧೯ನೆಯ ಶತಮಾನದ ಸಾಹಿತ್ಯದ ವಾಸ್ತವಿಕ ನೆಲೆಗಟ್ಟಿನಲ್ಲಿ ಕೃತಿಗಳನ್ನು ಬರೆದವರೆಂದು ಪ್ರಸಿದ್ಧರಾಗಿದ್ದಾರೆ. ಹೆನ್ರಿ ಜೇಮ್ಸ್ Sr. ಜೇಮ್ಸ್‌ರವರ ತಂದೆ. ತತ್ವಜ್ಞಾನಿಯೂ ಮತ್ತು ಮನೋಶಾಸ್ತ್ರಜ್ಞರಾದಂತಹ ವಿಲಿಯಮ್ ಜೇಮ್ಸ್ ಮತ್ತು ದಿನಚರಿ ಬರೆಯುವ ಆಲಿಸ್ ಜೇಮ್ಸ್ ಅವರ ಸೋದರ.

ಅವರು ಅನೇಕ ಕಾದಂಬರಿಗಳಿಂದಾಗಿ ಪ್ರಸಿದ್ಡರಾಗಿದ್ದಾರೆ. ಅಮೆರಿಕನ್ನರು, ಯುರೋಪ್ ಮತ್ತು ಯುರೋಪಿಯನ್ನರ ವಿರುದ್ಡ ಸೆಣೆಸಾಡುವುದನ್ನು ಅವರ ಕಾದಂಬರಿಗಳಲ್ಲಿ ವರ್ಣಿಸಿದ್ದಾರೆ. ಅವರ ಬರವಣಿಗೆಯಲ್ಲಿ ಬರುವ ಪಾತ್ರಗಳ ದೃಷ್ಟಿಯಿಂದ, ಅನ್ವೇಷಣೆಯಿಂದ, ಪ್ರಜ್ಞೆ ಮತ್ತು ಗ್ರಹಿಕೆಯನ್ನು ಶೋಧಿಸಿದ್ದಾರೆ. ಅವರ ಶೈಲಿ ಪ್ರಭಾವಿ ಚಿತ್ರಕಲೆಗೆ ಹೋಲಿಸಲಾಗಿದೆ. ಅವರ ಕಲ್ಪನೆ ಆಂತರಿಕ ಮತ್ತು ಆತ್ಮಗತ್ಮಾಕ ದೃಷ್ಟಿಕೋನ ಮತ್ತು ಅವಾಸ್ತವಿಕತೆ ಅವರ ಬರಹಕ್ಕೆ ಆಳವಾದ ನಿರೂಪಣಾ ಸಾಮರ್ಥ್ಯವನ್ನು ನೀಡಿದೆ.

ಜೇಮ್ಸ್ ಅವರು ಸಾಹಿತ್ಯದ ವಿಮರ್ಶೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದರಲ್ಲಿ ಬರಹಗಾರರಿಗೆ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನಿರೂಪಣೆಗೆ ಸಾಕಷ್ಟು ಸ್ವಾತಂತ್ರವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಪ್ರಕಾರ ಕೃತಿ ಮೊದಲ ಮತ್ತು ಅತ್ಯಂತ ಪ್ರಮುಖ ಸ್ಥಾನ ಪಡೆಯಬೇಕು ಮತ್ತು ಓದುಗರು ಗುರುತಿಸುವಂತೆ ಮತ್ತು ಅವರ ಆಸಕ್ತಿಯನ್ನು ಕೆರಳಿಸುವಂತೆ ಇರಬೇಕೆಂಬುದು ಮುಖ್ಯ.


ಬಾಲ್ಯ

[ಬದಲಾಯಿಸಿ]

ಜೇಮ್ಸ್ ಎರಡನೆಯ ಪುತ್ರನಾಗಿ ವಾಷಿಂಗ್ಟನ್ನ್ಯೂಯಾರ್ಕ್ ನಗರದಲ್ಲಿ ೧೫ ಏಪ್ರಿಲ್ ೧೮೪೩ರಲ್ಲಿ ಜನಿಸಿದರು. ಮೇರಿ ವಾಲ್ಷ್ ಮತ್ತು ಹೆನ್ರಿ ಜೇಮ್ಸ್ Sr. ಅವರ ತಾಯಿ-ತಂದೆ. ಅವರ ತಂದೆ ಬುದ್ಧಿವಂತರಾಗಿದ್ದರು,ಉಪನ್ಯಾಸಕರು ಮತ್ತು ತತ್ವಶಾಸ್ತ್ರಜ್ಞರಾಗಿದ್ದರು. ಅವರ ತಾತನವರಾದ ಆಲ್ಬನಿ ಅವರಿಂದ ಉದಾತ್ತ ಗುಣಗಳನ್ನು ಪಡೆದಿದ್ದರು. ಆಲ್ಬನಿ ಬ್ಯಾಂಕರ್ ಮತ್ತು ಹೂಡಿಕೆದಾರರಾಗಿದ್ದರು. ಮೇರಿ ಶ್ರಿಮಂತ ಕುಟುಂಬದಿಂದ ಬಂದು ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದರು. ವಿಲಿಯಮ್ ಅವರ ಸೋದರ. ವಿಲ್ಕಿನ್ಸನ್ ಮತ್ತು ರಾಬರ್ಟ್ಸನ್ ಕಿರಿಯ ಸೋದರರು. ಅಲಿಶಿಯಾ ಅವರ ಕಿರಿಯ ಸಹೋದರಿ.

ಅವರ ಕುಟುಂಬ ಆಲ್ಬನಿಯಲ್ಲಿ ನೆಲೆಸಿತ್ತು. ಅಲ್ಲಿಂದ ನ್ಯೂಯಾರ್ಕ್‌ಗೆ ವಲಸೆ ಬಂದರು. ಆಗ ಜೇಮ್ಸ್ ಸಣ್ಣ ಹುಡುಗ. ಅವನ ವಿದ್ಯಾಭ್ಯಾಸದಲ್ಲಿ ಅವರ ತಂದೆಯ ಪ್ರಭಾವವು ಸಾಕಷ್ಟಿದೆ. ವೈಜ್ಞಾನಿಕ ಮತ್ತು ತತ್ವಶಾಸ್ತ್ರ ವಿಷಯಗಳಲ್ಲಿ ಅವರು ಅಭ್ಯಾಸ ಮಾಡಿದರು. ೧೮೫೫ ಮತ್ತು ೧೮೬೦ರಲ್ಲಿ ಜೇಮ್ಸ್ ಕುಟುಂಬ ಲಂಡನ್, ಪ್ಯಾರಿಸ್, ಜಿನೀವಾ, ಬೌಲೋನ್-ಸುರ್-ಮೆರ್, ನ್ಯೂಪೋರ್ಟ್ನ, ರೋಡ್ ದ್ವೀಪ ಮುಂತಾದ ಕಡೆಗೆ ಪ್ರವಾಸ ಕೈಗೊಂಡರು. ಪ್ರಾನ್ಸ್‌ನಲ್ಲಿ ಹೆಚ್ಚು ಕಾಲ ಇದ್ದರು. ೧೮೬೦ರಲ್ಲಿ ನ್ಯೂಪೋರ್ಟ್ನಗೆ ಹಿಂತಿರುಗಿದರು. ಜಾನ್ ಲಾ ಫ಼ಾರ್ಜ್ ಎಂಬುವರು ಹೆನ್ರಿಗೆ ಸ್ನೇಹಿತರಾಗಿ ಫ್ರೆಂಚ್ ಸಾಹಿತಿ ಬಾಲ್ಜಾಕ್ ಅವರಿಗೆ ಪರಿಚಯಿಸಿದರು. ಬಾಲ್ಜಾಕ್ ನನ್ನ ಅತ್ಯಂತ ದೊಡ್ಡ ಗುರು ಎಂದು ಹೆನ್ರಿ ಅವರನ್ನು ಸ್ಮರಿಸುತ್ತಾರೆ.

೧೮೬೪ರಲ್ಲಿ ಅವರ ಕುಟುಂಬ ಬೋಸ್ಟನ್‌ಗೆ ಬಂದಿತು. ೧೮೬೨ರಲ್ಲಿ ಹೆನ್ರಿ ಹಾರ್ವರ್ಡ್ ಲಾ ಸ್ಕೂಲ್‌ನಲ್ಲಿ ಅಭ್ಯಾಸಿಸಿದರು. ವಿಲಿಯಂ ಡೀನ್ ಹೊವೆಲ್ಲ್ಸ್ ಮತ್ತು ಚಾರ್ಲ್ಸ್ ಎಲಿಯಟ್ ನಾರ್ಟನ್ ಅವರು ಜೇಮ್ಸ್‌ನ ದೀರ್ಘಕಾಲದ ಸ್ನೇಹಿತರಾದರು. ಅವರ ಮೊದಲ ಕೃತಿ 'ಮಿಸ್ ಮ್ಯಾಗಿ ಮಿಚೆಲ್' ೧೮೬೩ರಲ್ಲಿ ಪ್ರಕಟವಾಯಿತು. 'ಎ ಟ್ರಾಜಿಡಿ ಆಫ್ ಎರರ್' ಎಂಬ ಸಣ್ಣ ಕಥೆ ಒಂದು ವರ್ಷದ ನಂತರ ಪ್ರಕಟವಾಯಿತು. ಅವರು ನಾರ್ತ್ ಅಮೆರಿಕನ್ ರಿವ್ಯೂ ಮುಂತಾದ ಪತ್ರಿಕೆಗಳಿಗೆ ಬರೆಯುತ್ತಿದ್ದರು.

ವೃತ್ತಿ ಜೀವನ

[ಬದಲಾಯಿಸಿ]

೧೮೬೯-೭೦ರಲ್ಲಿ ರಸ್ಕಿನ್, ಡಿಕನ್ಸ್, ಮ್ಯಾಥ್ಯೂ, ಅರ್ನಾಲ್ಡ್, ವಿಲಿಯಮ್ ಮಾರಿಸ್ ಮತ್ತು ಜಾರ್ಜ್ ಎಲಿಯಟ್ ಅವರನ್ನು ಬೇಟಿ ಮಾಡಿದರು. ಅವರೆಲ್ಲರು ಹೆನ್ರಿ ಅವರ ಮೇಲೆ ತುಂಬಾ ಪ್ರಭಾವ ಬೀರಿದರು. ೧೮೭೫೪-೭೫ರ ಮಧ್ಯೆ 'ಟ್ರಾನ್ಸ್ ಅಟ್ಲಾಂಟಿಕ್ ಸ್ಕೆಚಸ್', 'ಎ ಪ್ಯಾಷನೆಟ್ ಪಿಲಿಗ್ರಿಮ್' ಮತ್ತು 'ರಾಡ್ರಿಕ್ ಹಡ್ಸನ್' ಎಂಬ ಪುಸ್ತಕಗಳನ್ನು ಪ್ರಕಟಿಸಿದರು. ಅವರ ಬರವಣಿಗೆಯ ಆರಂಭಿಕ ದಿನಗಳಲ್ಲಿ ಹಾಥಾರ್ನೆ ಅವರಿಂದ ಪ್ರಭಾವಿತರಾಗಿದ್ದರು.

೧೮೬೯ರಲ್ಲಿ ಲಂಡನ್‌ನಲ್ಲಿ ನೆಲೆಸಿದರು. ಅಲ್ಲಿ ಮ್ಯಾಕ್ಮಿಲನ್ ಮತ್ತು ಇತರೆ ಪ್ರಕಾಶಕರ ಜೊತೆ ಸಂಪರ್ಕ ಬೆಳೆಸಿದರು. ನಂತರದ ದಿನಗಳಲ್ಲಿ ಜೇಮ್ಸ್ ಅವರ ಲೇಖನಗಳನ್ನು ಪುಸ್ತಕದ ರೂಪದಲ್ಲಿ ಬಿಡುಗಡೆಗೊಳಿಸಿದರು. ಅವರ ಲೇಖನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಮ ವರ್ಗದ ಮಹಿಳೆಯರು ಓದುತ್ತಿದ್ದರು. ಜೇಮ್ಸ್ ಪ್ರಕಾಶಕರ ಮತ್ತು ಸಂಪಾದಕರ ಸಲಹೆಯಂತೆ ಮಧ್ಯಮ ವರ್ಗದ ಮಹಿಳೆಯರಿಗೆ ಇಷ್ಟವಾಗುವಂತೆ ಲೇಖನಗಳನ್ನು ಬರೆದರು. ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ಸ್ನೇಹಿತರನ್ನು ಕ್ಲಬ್‌ಗಳಲ್ಲಿ ಮತ್ತು ಲೈಬ್ರರಿಗಳಲ್ಲಿ ಬೇಟಿಯಾಗಿ ಅವರೆಲ್ಲರ ಜೊತೆ ಖುಷಿಯಿಂದ ಕಾಲಕಳೆಯುತ್ತಿದ್ದರು. ಅವರು ಬ್ರಿಟಿಷ್ ಸಮಾಜಕ್ಕೆ ಹೆನ್ರಿ ಆಯ್ಡಮ್ಸ್ ಮತ್ತು ಚಾರ್ಲ್ಸ್ ಮಿಲ್ನೆಸ್ ಗಾಸ್ಕೆಲ್ ಅವರಿಂದ ಪರಿಚಿತರಾದರು.

೧೮೭೫ರ ಅಂತಿಮದಲ್ಲಿ ಪ್ಯಾರಿಸ್‌ಗೆ ಪ್ರಯಾಣಿಸಿದರು. ಅವರು ನಂತರದ ಮೂರು ದಶಕಗಳನ್ನು ಯುರೋಪ್‌ನಲ್ಲಿ ಕಳೆದರು. ಪ್ಯಾರಿಸ್‌ನಲ್ಲಿ ಮೊದಲ ಬಾರಿಗೆ ಅವರು ಝೋಲಾ, ಆಲ್ಫೋನ್ಸ್ ಡೌಡೆಟ್, ಮಾಪಸೆಂಟ್, ತುರ್ಜೆನೆವ್ ಮುಂತಾದವರನ್ನು ಬೇಟಿಯಾದರು. ಅವರು ಒಂದು ವರ್ಷ ಮಾತ್ರ ಪ್ಯಾರಿಸ್‍ನಲ್ಲಿದ್ದರು, ನಂತರ ಲಂಡನ್‍ಗೆ ಪ್ರಯಾಣ ಬೆಳೆಸಿದರು.

ಅವರು ಇಂಗ್ಲೆಡ್‍ನಲ್ಲಿ ಪ್ರಮುಖ ರಾಜಕಾರಣಿಗಳನ್ನು ಮತ್ತು ಸಾಂಸ್ಕೃತಿಕ ವ್ಯಕ್ತಿಗಳನ್ನು ಬೇಟಿಮಾಡಿದರು. ಅವರು 'ದಿ ಅಮೆರಿಕನ್' (೧೮೭೭), 'ದಿ ಯುರೋಪಿಯನ್ಸ್' (೧೮೭೮), 'ಎ ರಿವಿಷನ್ ಆಫ್ ವಾಚ್ ಅಂಡ್ ವಾರ್ಡ್' (೧೮೭೮), 'ಫ್ರೆಂಚ್ ಪೊಯೆಟ್ಸ್ ಅಂಡ್ ನಾವೆಲಿಸ್ಟ್' (೧೮೭೮), 'ಹಾಥಾರ್ನೆ' (೧೮೭೯) ಮತ್ತು ಅನೇಕ ಪುಸ್ತಕಗಳನ್ನು ಬರೆದರು.

ಅವರು ಲಂಡನಿನಲ್ಲಿದ್ದಾಗ ಫ್ರೆಂಚ್ ವಾಸ್ತವತಾವಾದಿಗಳು ಎಮಿಲ್ ಝೋಲಾ ಮುಂತಾದವರನ್ನು ಇಷ್ಟವಟ್ಟರು. ೧೮೭೯-೮೨ರ ಮಧ್ಯೆ ಅವರ 'ವಾಷಿಂಗ್ಟನ್ ಸ್ಕ್ವೇರ್ ಕಾನ್ಫಿಡೆನ್ಸ್', 'ದ ಪೊರ್‌ಟ್ರೆಟ್ ಆಫ್ ಎ ಲೇಡಿ' ಪ್ರಕಟಗೊಂಡವು.

೧೮೮೧ ರಿಂದ ೮೩ರ ವರೆಗೆ ಅವರು ಅನೇಕ ನಷ್ಟಗಳನ್ನು ಅನುಭವಿಸಬೇಕಾಯಿತು. ಅವರ ತಾಯಿ ೧೮೮೧ರಲ್ಲಿ ತೀರಿಕೊಂಡರು. ಕೆಲವು ತಿಂಗಳ ನಂತರ ಅವರ ತಂದೆಯೂ ತೀರಿಕೊಂಡರು. ಮತ್ತೊಬ್ಬ ಅಣ್ಣ ವಿಲ್ಕೀ ಮತ್ತು ಎಮರ್ಸನ್ ಎಂಬ ಸ್ನೇಹಿತ ತೀರಿಕೊಂಡರು. ತುರ್ಜೆನೆವ್ ಎಂಬ ಸ್ನೇಹಿತ ೧೮೮೩ರಲ್ಲಿ ತೀರಿಕೊಂಡರು.

೧೮೮೪ರಲ್ಲಿ ಜೇಮ್ಸ್ ಮತ್ತೊಮ್ಮೆ ಪ್ಯಾರಿಸ್‍ಗೆ ಬೇಟಿ ನೀಡಿ ಝೋಲ, ಗಾನ್‌ಕೋರ್ಟ್ ಮುಂತಾದವರನ್ನು ಬೇಟಿಯಾದರು. ಫ್ರೆಂಚ್ ವಾಸ್ತವತಾವಾದಿ ಲೇಖಕರು ಅವನ ಮೇಲೆ ತುಂಬಾ ಪರಿಣಾಮ ಬೀರಿದರು. 'ದಿ ಬೋಸ್ಟೋನಿಯನ್ಸ್' ಮತ್ತು 'ದಿ ಪ್ರಿನ್ಸೆಸ್ ಕ್ಯಾಸಮೆಸ್ಸಿಮಾ' ಎಂಬ ಎರಡು ಗ್ರಂಥಗಳನ್ನು ಬರೆದರು. ಎರಡೂ ಮಾರಾಟದಲ್ಲಿ ವಿಫಲವಾದವು. ಅವರಿಗೆ ನಿರಾಸೆ ಉಂಟಾಯಿತು. ನಂತರ ರಾಬರ್ಟ್ ಲೂಯಿಸ್ ಸ್ಟೀವನ್ಸನ್, ಜಾನ್ ಸಿಂಗರ್ ಸಾರ್ಜೆಂಟ್, ಎಡ್ಮಂಡ್ ಗೋಸ್ ಮುಂತಾದವರನ್ನು ಬೇಟಿಯಾದರು. ಅವರ ದಿ ಟ್ರಾಜಿಕ್ ಮ್ಯೂಸ್ ಎಂಬ ಕಾದಂಬರಿ ಪ್ರಕಟವಾಯಿತು. ನಿರಾಶರಾದ ಅವರು ನಾಟಕಗಳನ್ನು ಬರೆಯಲು ಪ್ರಾರಂಭಿಸಿದರು. ೮೦-೯೦ರ ದಶಕದಲ್ಲಿ ಅವನು ಅನೇಕ ಭಾರಿ ಯುರೋಪಿಗೆ ಬೇಟಿ ನೀಡಿದರು. ೧೮೮೭ರಲ್ಲಿ ಇಟಲಿಯಲ್ಲಿ ನೆಲೆಸಿದರು. 'ದಿ ಆಸ್‌ಫರ್ನ್ ಪೇಪರ್ಸ್' ಮತ್ತು 'ದಿ ರಿವರ್ಬರೆಟರ್' ಪುಸ್ತಕಗಳನ್ನು ಪ್ರಕಟಿಸಿದರು.[]

ಹೆನ್ರಿ ಜೇಮ್ಸ್‌ರವರ ರೇಖಾ ಚಿತ್ರ

ಅಂತಿಮ ವರ್ಷಗಳಲ್ಲಿ

[ಬದಲಾಯಿಸಿ]

೧೯೦೨ ರಿಂದ ೧೯೦೪ರ ವರೆಗೆ 'ದಿ ಅಂಬಾಸಡರ್ಸ್', 'ದಿ ವಿಂಗ್ಸ್ ಆಫ್ ದಿ ಡವ್', 'ದಿ ಗೋಲ್ಡನ್ ಬೌಲ್' ಬರೆದರು. ೧೯೦೬ ರಿಂದ ೧೯೧೦ರ ವರೆಗೆ 'ದಿ ಅಮೆರಿಕನ್ ಸೀನ್' ಬರೆದರು. ದಿ ನ್ಯೂಯಾರ್ಕ್ ಎಡಿಷನ್ ೨೪ ಸಂಪುಟಗಳಲ್ಲಿ ಪ್ರಕಟಗೊಂಡಿತು. ೧೯೧೦ರಲ್ಲಿ ಅವರ ಸಹೋದರ ವಿಲಿಯಮ್ ತೀರಿಕೊಂಡರು. ೧೯೧೩ರಲ್ಲಿ 'ಎ ಸ್ಮಾಲ್ ಬಾಯ್ ಅಂಡ್ ಅದರ್ಸ್' ಮತ್ತು 'ನೋಟ್ಸ್ ಆಫ್ ಎ ಸನ್ ಅಂಡ್ ಬ್ರದರ್' ಎಂಬ ಆತ್ಮಚರಿತ್ರೆಯನ್ನು ಬರೆದರು. ೧೯೧೫ರಲ್ಲಿ ಅವರು ಬ್ರಿಟಿಷ್ ಪ್ರಜೆಯಾದರು. ೧೯೧೬ರಲ್ಲಿ 'ದಿ ಆರ್ಡರ್ ಆಫ್ ಮೆರಿಟ್‌'ಗೆ ಪಾರಿತೋಷಕ ಲಭಿಸಿತು. ಫೆಬ್ರವರಿ ೨೮ ೧೯೧೬ರಲ್ಲಿ ತೀರಿಕೊಂಡರು.

ಜೇಮ್ಸ್‌ರ ನಾಟಕಗಳು

[ಬದಲಾಯಿಸಿ]

೧೮೬೯-೭೧ರ ಮಧ್ಯೆ ಅವರು ಅನೇಕ ಏಕಾಂಕ ನಾಟಕಗಳನ್ನು ಪತ್ರಿಕೆಗಳಿಗೆ ಬರೆದರು. ೧೮೯೦-೯೨ರ ವರೆಗೆ ಸುಮಾರು ಆರು ನಾಟಕಗಳನ್ನು ಬರೆದರು. ಅವರ ಕಾದಂಬರಿ 'ದಿ ಅಮೆರಿಕನ್' ನಾಟಕ ರೂಪತಾಳಿತು. ಅನೇಕ ವರ್ಷಗಳ ಕಾಲ ಪ್ರದರ್ಶಿತವಾಯಿತು. 'ಗೈ ಡಾಮ್‌ವಿಲ್ಲೆ' ಅವರ ದೊಡ್ಡ ನಾಟಕ. ಅನೇಕ ಒತ್ತಡಗಳು ಮತ್ತು ನಿರಾಶಗಳ ನಡುವೆ ಅವರು ಹೆಚ್ಚು ನಾಟಕಗಳನ್ನು ಬರೆಯಲು ತೀರ್ಮಾನಿಸಿದರು. 'ದಿ ಔಟ್‌ಕ್ರೆಯ್' ನಾಟಕವು ತುಂಬಾ ಹೆಚ್ಚಾಗಿ ಮಾರಾಟಗೊಂಡಿತು. ೧೮೯೦-೯೩ರ ವರೆಗೆ ಅವರು ನಾಟಕಗಳ ವಿಮರ್ಶೆಯನ್ನು ಹೆಚ್ಚಾಗಿ ಬರೆದರು.

ಹೊರಗಿನ ಸಂಪರ್ಕಗಳು

[ಬದಲಾಯಿಸಿ]


ಉಲ್ಲೇಖನೆಗಳು

[ಬದಲಾಯಿಸಿ]
  1. "ಹೆನ್ರಿ ಜೇಮ್ಸ್‌ರವರ ಜೀವನ".
  2. "ಜೇಮ್ಸ್‌ರವರ ಕಾದಂಬರಿಗಳು".