ಅಣುಕೋಶ ವಿಭಜನೆ
ಪೋಷಕ ಅಣುಕೋಶ ಎರಡು ಅಥವಾ ಹೆಚ್ಚು ಮರಿ ಅಣುಕೋಶಗಳಾಗಿ ವಿಭಜನೆ ಆಗುವ ಪ್ರಕ್ರಿಯೆಯೇ ಅಣುಕೋಶ ವಿಭಜನೆ . ಸಾಮಾನ್ಯವಾಗಿ ಅಣುಕೋಶ ವಿಭಜನೆ ಅಣುಕೋಶ ಚಕ್ರದ ಒಂದು ಚಿಕ್ಕ ಭಾಗ ಯುಕರ್ಯೋಟ್ಗಳಲ್ಲಿ ಈ ತರಹದ ಅಣುಕೋಶ ವಿಭಜನೆಯನ್ನು ಮಿಟೋಸಿಸ್ ಎಂದು ಕರೆಯುತ್ತಾರೆ, ಹಾಗು ಇಲ್ಲಿ ಮರಿ ಅಣುಕೋಶಗಳು ಪುನಃ ವಿಭಜನೆ ಹೊಂದುವ ಸಾಮರ್ಥ್ಯ ಹೊಂದಿರುತ್ತವೆ. ಅನುಗುಣವಾಗಿರುವಂತಹ ಪ್ರೊಕಾರ್ಯೋಟ್‌ಗಳ ಅಣುಕೋಶ ವಿಭಜನೆಯನ್ನು ಬೈನರಿ ಫಿಶನ್ ಎಂದು ಕರೆಯುತ್ತಾರೆ. ಮಿಯೋಸಿಸ್ ಅನ್ನುವಂತಹ ಇನ್ನೊಂದು ತರಹದ ಅಣುಕೋಶ ವಿಭಜನೆ ಯುಕರ್ಯೋಟ್‌ಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಇದರಲ್ಲಿ ಅಣುಕೋಶ ಶಾಶ್ವತವಾಗಿ ಗಮೆಟ್ ರೂಪಕ್ಕೆ ಪರಿವರ್ತನೆಗೊಳ್ಳಲ್ಪಡುತ್ತದೆ ಹಾಗು ಅದು ಫಲೀಕರಣವಾಗುವವರೆಗೂ ಪುನಃ ವಿಭಜನೆ ಮಾಡಲು ಸಾದ್ಯವಾಗುವುದಿಲ್ಲ. ಪೋಷಕ ಅಣುಕೋಶ ವಿಭಜನೆಯಾಗುವ ಮೊದಲು DNA ತದ್ರೂಪಕ್ಕೆ ಒಳಪಡುತ್ತದೆ.ಸರಳವಾದ ಒಂದೇ ಅಣುಕೋಶ ಶರೀರ ರಚನೆ[nb ೧] ಯುಳ್ಳ ಅಮೀಬದಂತಹ ಜೀವಿಗಳಲ್ಲಿ, ಒಂದು ಅಣುಕೋಶ ವಿಭಜನೆಯು ಪ್ರಜೋತ್ಪಾದನೆಗೆ ಸಮವಾಗಿರುತ್ತದೆ—ಇದರಿಂದ ಪೂರ್ಣ ಪ್ರಮಾಣದ ಹೊಸ ಶರೀರ ರಚನೆ ಆಗುತ್ತದೆ. ಬಹುಮಟ್ಟಿಗೆ ಅನೇಕ ಅಣುಕೋಶ ಶರೀರ ರಚನೆಯಲ್ಲಿ ಮಿಟೋಟಿಕ್ ಅಣುಕೋಶ ವಿಭಜನೆಯು ಸಂತಾನೋತ್ಪತ್ತಿ ಮಾಡುತ್ತದೆ, ಸಸ್ಯಗಳ ಕತ್ತರಿಸಿದ ಭಾಗದಿಂದ ಇನ್ನೊಂದು ಸಸ್ಯ ಬೆಳೆಯುವ ರೀತಿಯಲ್ಲಿ. ಅಣುಕೋಶ ವಿಭಜನೆಯು ಗೆಮೇಟ್‌ಗಳ ಅಣುಕೋಶ ವಿಭಜನೆಯಿಂದ ತಾನಾಗಿಯೇ ಉತ್ಪತ್ತಿಯಾಗುವ ಜೀವಾಣುವಿನಿಂದ ಲಿಂಗರಹಿತ ಪುನರುತ್ಪತ್ತಿಯ ಶರೀರ ರಚನೆಯನ್ನೂ ಮಾಡುತ್ತದೆ. ಬೆಳವಣಿಗೆಯ ನಂತರ, ಅಣುಕೋಶ ವಿಭಜನೆಯು ನಿರಂತರವಾಗಿ ಶರೀರ ರಚನೆಯ ನಿರ್ಮಾಣ ಮತ್ತು ಸರಿಪಡಿಸುವಲ್ಲಿ ತೊಡಗಿರುತ್ತದೆ.[೧] ಜೀವಮಾನದಲ್ಲಿ ಮಾನವನ ದೇಹ 10,000 ಟ್ರಿಲಿಯನ್ ಅಣುಕೋಶ ವಿಭಜನೆಯ ಅನುಭವ ಹೊಂದುತ್ತದೆ.[೨] ಮೂಲ ಅಣುಕೋಶಗಳ ಗೆನೊಮ್ ಪೋಷಣೆಯೇ ಅಣುಕೋಶ ವಿಭಜನೆಯ ಪ್ರಾಥಮಿಕ ಕಾಳಜಿ. ಅಣುಕೋಶ ವಿಭಜನೆಯ ಮೊದಲು, ಕ್ರೋಮೋಸೋಮುಗಳಲ್ಲಿ ಶೇಖರಣೆಯಾದ ಜೆನೋಮಿಕ್ ಮಾಹಿತಿಯು ತದ್ರೂಪವಾಗಲೇಬೇಕು, ಹಾಗು ನಕಲಾದ ಜೆನೋಮ್‌ಗಳನ್ನು ಅಣುಕೋಶಗಳ ಮಧ್ಯ ಸ್ವಚ್ಚವಾಗಿ ಬೇರ್ಪಡಿಸಲಾಗುವುದು. "ಪೀಳಿಗೆಗಳ" ಮಧ್ಯ ಜೆನೋಮಿಕ್ ಮಾಹಿತಿಯನ್ನು ಸ್ಥಿರವಾಗಿಡುವುದೇ ಅಣುಕೋಶಗಳ ರಚನೆಯಲ್ಲಿನ ಮೂಲ ಅವಶ್ಯಕತೆ.
ವ್ಯತ್ಯಯಗಳು
[ಬದಲಾಯಿಸಿ]ಅಣುಕೋಶಗಳ ನ್ನು ಸರಳ, ಬೀಜೀಕರಣವಾಗದ ಪ್ರೊಕಾರ್ಯೋಟಿಕ್ ಅಣುಕೋಶಗಳು ಮತ್ತು ಸಂಕೀರ್ಣ, ಬೀಜೀಕರಣವಾದ ಯುಕಾರ್ಯೋಟಿಕ್ ಅಣುಕೋಶಗಳಾಗಿ ಎರಡು ವರ್ಗಗಳಾಗಿ ವಿಂಗಡನೆ ಮಾಡಲಾಗಿದೆ. ಯುಕಾರ್ಯೋಟಿಕ್ ಮತ್ತು ಪ್ರೊಕಾರ್ಯೋಟಿಕ್ ಅಣುಕೋಶಗಳು ಅವುಗಳ ವಿನ್ಯಾಸದ ವ್ಯತ್ಯಾಸಗಳಿಂದ ಒಂದೇ ರೀತಿ ವಿಭಜನೆಯಾಗುವುದಿಲ್ಲ.ಇಷ್ಟೇಅಲ್ಲದೆ, ಅಣುಕೋಶ ವಿಭಜನೆಯಲ್ಲಿ ಯುಕಾರ್ಯೋಟಿಕ್ ಸ್ಟೆಮ್ ಅಣುಕೋಶಗಳನ್ನು ಗೆಮೇಟ್ ಗಳಾಗಿ ( ಪುರುಷರಲ್ಲಿ ವೀರ್ಯ ಅಥವಾ ಸ್ತ್ರೀಯರಲ್ಲಿ ಓವ ) ಪರಿವರ್ತನೆಗೊಳ್ಳುವ ರೀತಿಯು ಯುಕಾರ್ಯೋಟಿಕ್ ದೈಹಿಕ (ಭ್ರೂಣವಲ್ಲದ) ಅಣುಕೋಶಗಳಿಗಿಂತ ಭಿನ್ನವಾಗಿದೆ.
ಅವನತಿ
[ಬದಲಾಯಿಸಿ]ಬಹು ಅಣುಕೋಶಗಳು ಶರೀರ ರಚನೆಯಲ್ಲಿ ಅಣುಕೋಶ ವಿಭಜನೆಯ ಮುಖಾಂತರ ಶಕ್ತಿಗುಂದಿದ ಅಣುಕೋಶಗಳನ್ನು ಬದಲಾಯಿಸುತ್ತವೆ. ಏನೇ ಆದರೂ, ಕೆಲವು ಪ್ರಾಣಿಗಳಲ್ಲಿ, ಅಣುಕೋಶ ವಿಭಜನೆ ಕೊನೆಗೆ ನಿಂತುಹೋಗುತ್ತದೆ. ಮಾನವರಲ್ಲಿ ಈ ಥರಹದ ಅಣುಕೋಶ ವಿಭಜನೆ ಸ್ಥಗಿತವಾಗುವುದು ಸರಾಸರಿ 52 ವಿಭಜನೆಗಳ ನಂತರ, ಇದನ್ನೇ ಹೇಫ್ಲಿಕ್ ಮಿತಿಎನ್ನುತ್ತಾರೆ. ನಂತರ ಅಣುಕೋಶ ಮುದಿಯಾಗಿದೆ ಎಂದು ಹೇಳಲಾಗುತ್ತದೆ. ಟೆಲೊಮರ್ ಶಾರ್ಟನಿಂಗ್ ಬಗೆಗಿನ ಲೇಖನದಲ್ಲಿ ವಿವರಿಸಿದ ರೀತಿಯಲ್ಲಿ, ಅಣುಕೋಶ ವಿಭಜನೆ ಸ್ಥಗಿತಗೊಳ್ಳಲು ಕಾರಣ ಟೆಲೊಮರ್ಗಳು, ಕೊನೆಗೆ ಪ್ರಜೋತ್ಪಾದನೆಗೆ ಬೇಕಾಗುವಂತಹ ಕ್ರೊಮೊಸೊಮ್, ಕೊನೆಗೆ ಮುಗಿದುಹೋದ ನಂತರ DNA ರಕ್ಷಿತ ಚೂರುಗಳು ಪ್ರತಿಬಾರಿ ತದ್ರೂಪಾಗುವುದು ಕಡಿಮೆಗೊಳ್ಳಲ್ಪಡುತ್ತದೆ. ಇನ್ನೊಂದೆಡೆ ಕ್ಯಾನ್ಸರ್ ಅಣುಕೋಶಗಳನ್ನು ಇದೇ ರೀತಿಯಲ್ಲಿ ಕಡೆಗಣಿಸುವ ಅಭಿಪ್ರಾಯಕ್ಕೆ ಬರಲು ಸಾಧ್ಯವೇ ಇಲ್ಲ. ಎನ್‌ಜೈಮ್ ಅನ್ನುವಂತಹ ಟೆಲೊಮರೇಸ್, ಕಾನ್ಸರಸ್ ಅಣುಕೋಶಗಳಲ್ಲಿ ದೊಡ್ಡ ಪ್ರಮಾಣದಲ್ಲಿರುವುದರಿಂದ ಟೆಲೊಮೆರೆಸ್‌ನ ಪುನಃ ರಚನೆಯಾಗಿ ವಿಭಜನೆಯು ಅನಿರ್ದಿಷ್ಟವಾಗಿ ಮುಂದುವರಿಯುತ್ತದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಅಣುಕೋಶದ ಬೆಳವಣಿಗೆ
- ನಿರಂತರ ವಿಭಜನೆಯಾಗುವ ಅಣುಕೋಶಗಳು
- ಅಣುಕೋಶಗಳ ಜೀವಶಾಸ್ತ್ರದ ಅಮೆರಿಕನ್ ಸೊಸೈಟಿ
- ಕೋಶ ವಿಭಜನೆ (ಹೊಸ ಪುಟ).
ಟಿಪ್ಪಣಿಗಳು
[ಬದಲಾಯಿಸಿ]- ↑ ಏಕಕೋಶ ಜೀವಿಗಳು. ಮೈಕ್ರೋಆರ್ಗ್ಯಾನಿಸಂ ಬಗೆಗಿನ ಚರ್ಚೆಯನ್ನೂ ನೋಡಿ.
ಉಲ್ಲೇಖ
[ಬದಲಾಯಿಸಿ]- ↑ Maton, Anthea (1997). Cells: Building Blocks of Life. New Jersey: Prentice Hall. pp. 70–74. ISBN 0-13423476-6.
{{cite book}}
: Unknown parameter|coauthors=
ignored (|author=
suggested) (help) - ↑ Quammen, David (April 2008). "Contagious cancer: The evolution of a killer". Harper's. 316 (1895): 42.
{{cite journal}}
: CS1 maint: date and year (link).
ಆಕರಗಳು
[ಬದಲಾಯಿಸಿ]- ಮಾರ್ಗನ್ DO. (2007) "The Cell Cycle: Principles of Control" ಲಂಡನ್: ನ್ಯೂ ಸೈನ್ಸ್ ಪ್ರೆಸ್.
- ಜೆ.ಎಮ್.ಟರ್ನರ್ Fetus into Man (1978, 1989). ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್. ISBN 0-03-063748-1
- Cell division: binary fission and mitosis Archived 2012-12-30 ವೇಬ್ಯಾಕ್ ಮೆಷಿನ್ ನಲ್ಲಿ.
ಹೊರಗಿನ ಕೊಂಡಿಗಳು
[ಬದಲಾಯಿಸಿ]- How Cells Divide: Mitosis vs. Meiosis
- The Mitosis and Cell Cycle Control Section Archived 2008-06-04 ವೇಬ್ಯಾಕ್ ಮೆಷಿನ್ ನಲ್ಲಿ. from the Landmark Papers in Cell Biology Archived 2009-12-02 ವೇಬ್ಯಾಕ್ ಮೆಷಿನ್ ನಲ್ಲಿ. (Gall JG, McIntosh JR, eds.) contains commentaries on and links to seminal research papers on mitosis and cell division. ಆನ್ಲೈನ್ನಲ್ಲಿ ಪ್ರಕಟಣೆಯಾದ The American Society for Cell Biology ಯ Image & Video Library Archived 2011-06-10 ವೇಬ್ಯಾಕ್ ಮೆಷಿನ್ ನಲ್ಲಿ.
- The American Society for Cell Biology ಯಿಂದ ಪ್ರಕಟವಾದ Image & Video Library Archived 2011-06-10 ವೇಬ್ಯಾಕ್ ಮೆಷಿನ್ ನಲ್ಲಿ. ಯು ಮೈಟೋಸಿಸ್ ಮತ್ತು ಅಣುಕೋಶ ವಿಭಜನೆಯ ಹಲವಾರು ವೀಡಿಯೋಗಳನ್ನು ಹೊಂದಿದೆ.
- Videos of the first cell divisions in Xenopus laevis embryos acquired by MRI (DOI of paper)
- ಚಿತ್ರಗಳು : Calanthe discolor Lindl. - ಫ್ಲೇವನ್ನ ಸೀಕ್ರೆಟ್ ಫ್ಲವರ್ ಗಾರ್ಡನ್
- Tyson's model of cell division ಹಾಗೂ ಬಯೋಮಾಡೆಲ್ಸ್ ಡಾಟಾಬೇಸ್ನ ವಿವರಣೆ