ಮಯೂರಶರ್ಮ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕದಂಬ ರಾಜರುಗಳು (೩೪೫ -೫೨೫) | ||
(ಬನವಾಸಿ ರಾಜರುಗಳು) | ||
ಮಯೂರಶರ್ಮ | (೩೪೫ - ೩೬೫) | |
ಕಂಗವರ್ಮ | (೩೬೫ - ೩೯೦) | |
ಬಗೀತಾರ್ಹ | (೩೯೦ -೪೧೫) | |
ರಘು | (೪೧೫ - ೪೩೫) | |
ಕಾಕುಸ್ಥವರ್ಮ | (೪೩೫ - ೪೫೫) | |
ಶಾಂತಿವರ್ಮ | (೪೫೫ - ೪೬೦) | |
ಮೃಗೇಶವರ್ಮ | (೪೬೦ - ೪೮೦) | |
ಶಿವಮಾಂಧಾತಿವರ್ಮ | (೪೮೦ – ೪೮೫) | |
ರವಿವರ್ಮ | (೪೮೫ – ೫೧೯) | |
ಹರಿವರ್ಮ | (೫೧೯ – ೫೩೦) | |
(ತ್ರಿಪರ್ವತ ಶಾಖೆ) | ||
ಒಂದನೆಯ ಕೃಷ್ಣ ವರ್ಮ | (೪೩೦-೪೬೦) | |
ವಿಷ್ಣುವರ್ಮ | (೪೬೦-೪೯೦) | |
ಸಿಂಹವರ್ಮ | (೪೯೦-೫೧೬) | |
ಎರಡನೆಯ ಕೃಷ್ಣವರ್ಮ | (೫೧೬-೫೨೬) | |
ಎರಡನೆಯ ಅಜವರ್ಮ | () | (ಹಾನಗಲ್ ಕದಂಬ ಶಾಖೆ) |
ಆದ್ಯ ಚಟ್ಟಯ್ಯ ದೇವ ಅಥವಾ ಚಟ್ಟ ಅಥವಾ ಚಟ್ಟಿಗ | (೯೭೨-೧೦೧೫) | |
ಕೀರ್ತಿವರ್ಮ | (೧೦೬೮-೧೦೮೨) | |
ತೈಲ | (೧೦೮೨-೧೧೩೦) | |
ಮಯೂರವರ್ಮ | (೧೧೩೦-೧೧೩೨) | |
ಮಲ್ಲಿಕಾರ್ಜುನ | (೧೧೩೨-೧೧೪೬) | |
ಒಂದನೆಯ ಪುಲಿಕೇಶಿ (ಚಾಲುಕ್ಯ) |
(೫೪೩ - ೫೬೬) |
ಮಯೂರವರ್ಮ (ಕ್ರಿ.ಶ. ೩೪೫-೩೬೫) ತಾಳಗುಂದ (ಆಧುನಿಕ ಕರ್ನಾಟಕದ ರಾಜ್ಯದ ಶಿವಮೊಗ್ಗ ಜಿಲ್ಲೆ) [ಬನವಾಸಿ ಕದಂಬ]] ವಂಶದ ಮೂಲ ವ್ಯಕ್ತಿ. ಬನವಾಸಿ ಕದಂಬರು ಹಳೆ ಕರ್ನಾಟಕದಲ್ಲಿ ರಾಜ್ಯಭಾರ ಮಾಡಿದ ಮೊದಲ ಕನ್ನಡ ರಾಜ ಮನೆತನ.[Maiyuravarma ೧]
ಇತಿಹಾಸ
[ಬದಲಾಯಿಸಿ]ಹಳೆ ಕರ್ನಾಟಕದ ಜಾಗಗಳು ಮೊದಲು ಹೊರಗಿನ ಇತರೆ ರಾಜರುಗಳ ಆಳ್ವಿಕೆಯಲ್ಲಿದು, ನಂತರ ಬನವಾಸಿ ಕದಂಬರು ಕನ್ನಡ ಭಾಷೆಯನ್ನು ಮೂಲವಾಗಿ ಹೊಸ ಭೌಗೋಳಿಕ ಮತ್ತು ರಾಜಕೀಯ ರಾಜ್ಯಾವಾಗಿ ಹೊರ ಹೊಮ್ಮಿದ್ದು ಇದು ಆಧುನಿಕ ಕರ್ನಾಟಕದ ಒಂದು ಮಹತ್ವ ವಾದ ಮೈಲಿಗಲ್ಲಾಗಿ ಇತಿಹಾಸವಾಗಿರುತ್ತದೆ. ಕನ್ನಡ ಭಾಷೆಯ ಮೊದಲ ಬರಹಗಳು ಬನವಾಸಿ ಕದಂಬರ ಕೊಡುಗೆಯಾಗಿರುತ್ತದೆ. ಕರ್ನಾಟಕದ ಇತಿಹಾಸಕ್ಕೆ ಮತ್ತು ಕನ್ನಡಕ್ಕೆ ಬನವಾಸಿ ಕದಂಬರ ಕಾಣಿಕೆಗಾಗಿ ಕದಂಬರ ಮೂಲ ವ್ಯಕ್ತಿ ಮಯೂರವರ್ಮನು ಮಹತ್ವವನ್ನು ಪಡೆದಿರುತ್ತಾನೆ.
ಮೊದಲ ಜೀವನ
[ಬದಲಾಯಿಸಿ]- ಕಿ.ಶ. ೪೫೦ರ ತಾಳಗುಂದ ಶಾಸನವು ಬನವಾಸಿ ಕದಂಬರ ಬಗ್ಗೆ , ಮಯೂರವರ್ಮನ ಕುಟುಂಬ ಮತ್ತು ಕದಂಬರ ಮೂಲಗಳ ಬಗ್ಗೆ ನಂಬಲಾರ್ಹವಾಗಿರುವ ಮಾಹಿತಿಯನ್ನು ಹೊಂದಿರುತ್ತದೆ. ತಾಳಗುಂದ ಶಾಸನದ ಪ್ರಕಾರ ಮಯೂರವರ್ಮನು ತಾಳಗುಂದದ ಒಬ್ಬ ಬ್ರಾಹ್ಮಣ ಪಂಡಿತನಾಗಿದು ಬಂಧುಸೇನರ ಮಗನಾಗಿರುತ್ತಾನೆ
- ಮಯೂರವರ್ಮನ ಮನೆಯ ಪಕ್ಕ ಕದಂಬ ಎಂಬ ಮರವನ್ನು ಬೆಳೆಸಿರುವ ಕಾರಣಕ್ಕೆ ಕುಟುಂಬಕ್ಕೆ ಕದಂಬ ಎಂದು ಹೆಸರಿಸಲಾಯಿತು ಎಂಬ ಮಾಹಿತಿಯನ್ನು ಈ ಶಾಸನ ಕೊಡುತ್ತದೆ. ವೈದಿಕ ಕಾಲದಲ್ಲಿ ಮಯೂರವರ್ಮನ ಕುಟುಂಬ ಕನ್ನಡಿಗ ಕರ್ಣಾಟ ಮತಕ್ಕೆ ಸೇರಿದವರಾಗಿರುತ್ತಾರೆ. ಮಯೂರವರ್ಮನ್ನು ಕ್ಷತ್ರಿಯ ಧರ್ಮಕ್ಕೆ ಬದಲಾವಣೆಗೊಂಡ ಬಗ್ಗೆ ಗುಂಡಾಪುರ ಶಾಸನ ಹೆಚ್ಚಿನ ಮಾಹಿತಿ ಕೊಡುತ್ತದೆ.
ಬನವಾಸಿ ಕದಂಬ ರಾಜ್ಯ ರಚನೆ
[ಬದಲಾಯಿಸಿ]- ತಾಳಗುಂದ ಶಾಸನದಲ್ಲಿ ಇರುವ ಮಾಹಿತಿ ಪ್ರಕಾರ, ಮಯೂರವರ್ಮನು ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಪಲ್ಲವರ ರಾಜಧಾನಿ ಕಂಚಿಗೆ ಹೋದಾಗ ಕ್ಷತ್ರಿಯನೊಬ್ಬನಿಂದ ಅವಮಾನಿತನಾದ ಮಯೂರವರ್ಮ ವಿಧ್ಯಾಭ್ಯಾಸವನ್ನು ಅಲ್ಲಿಗೆ ಬಿಟ್ಟು ಸೈನ್ಯ ಕಟ್ಟಿ ಪಲ್ಲವ ಸೇನೆಯನ್ನು ಎದುರಿಸಿದ. ಇವನಿಂದ ಪರಾಜಿತರಾದ ಪಲ್ಲವರು ಪಶ್ಚಿಮ ಸಮುದ್ರ (ಅರಬ್ಬೀ ಸಮುದ್ರ)ದಿಂದ ಈಗಿನ ಘಟಪ್ರಭಾ ನದಿಯವರೆಗಿನ ಪ್ರದೇಶದಲ್ಲಿ ಇವನ ಆಧಿಪತ್ಯವನ್ನು ಒಪ್ಪಿಕೊಂಡರು. ಇದರಿಂದ ಕದಂಬ ವಂಶದ ಆಡಳಿತ ಪ್ರಾರಂಭವಾಗಿರುತ್ತದೆ.
- ಮಯೂರವರ್ಮನ ಸಫಲವಾದ ಈ ರಾಜಕೀಯ ಬಂಡಾಯ ಸಾಹಸದಿಂದ ಕ್ಷತ್ರಿಯರಾದ ಕಂಚಿಯ ಪಲ್ಲವರ ಆಡಳಿತಕ್ಕೆ ಬಾರಿ ಹಿನ್ನೆಡೆ ಉಂಟಾಗಿರುತ್ತದೆ. ಆ ಕಾಲದಲ್ಲಿ ನಡೆದ ಈ ಒಂದು ರಾಜಕೀಯದ ಬೆಳವಣಿಯಿಂದ ೨೧ನೇ ಶತಮಾನದ ಕರ್ನಾಟಕ ರಾಜ್ಯದ ಮೊದಲ ರಾಜ ಮನೆತನ ಉದಯವಾಗಿರುತ್ತದೆ. ಇತರೆ ಇತಿಹಾಸದ ಪಂಡಿತರ ಪ್ರಕಾರ ಮಯೂರವರ್ಮನ ರಾಜಕೀಯ ಬಂಡಾಯ ಮತ್ತು ದಕ್ಷಿಣದ ಪಲ್ಲವರ ರಾಜ ವಿಷ್ಣುಗೋಪ ಹಾಗೂ ಉತ್ತರದ ಸಮುದ್ರ ಗುಪ್ತರ ನಡುವೆ ನಡೆದ ಯುದ್ದ್ಧಗಳು (ಅಲಹಾಬಾದ ಶಾಸನ ಪ್ರಕಾರ) ಒಂದೇ ಕಾಲದಲ್ಲಿ ನಡೆದು ಪಲ್ಲವರ ಆಡಳಿತ ಕೊನೆಗೊಳ್ಳಲು ಕಾರಣವಾಗಿರಬಹುದು ಎಂಬ ವಾದವು ಉಂಟು.
- ಇತರೆ ಇತಿಹಾಸಗಾರರ ಅಭಿಪ್ರಾಯದಂತೆ ಮೊದಲಿಗೆ ಪಲ್ಲವರು ಮಯೂರವರ್ಮನನ್ನು ಸೇನಾನಿ (ದಂಡ ನಾಯಕ)ಯಾಗಿ ತಮ್ಮ ಸೈನಕ್ಕೆ ನೇಮಿಸಿರುತ್ತಾರೆ. ಕಾಲಕ್ರಮೇಣ ಪಲ್ಲವರ ರಾಜ ವಿಷ್ಣುಗೋಪ ಹಾಗೂ ಉತ್ತರದ ಸಮುದ್ರ ಗುಪ್ತರ ನಡುವೆ ನಡೆದ ಯುದ್ದ್ಧಗಳಿಂದ ಉಂಟಾದ ಭಿನ್ನಾಭಿಪ್ರಾಯದಿಂದ ಮಯೂರವರ್ಮನು ಬನವಾಸಿಯನ್ನು ರಾಜಧಾನಿಯಾಗಿ ಇಟ್ಟುಕೊಂಡು ಬನವಾಸಿ ಕದಂಬ ರಾಜ್ಯ ಕಟ್ಟಿರುತ್ತಾನೆ ಎನ್ನುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]
ಉಲ್ಲೇಖ ದೋಷ: <ref>
tags exist for a group named "Maiyuravarma", but no corresponding <references group="Maiyuravarma"/>
tag was found