ವೈದ್ಯಕೀಯ ಪ್ರತಿಲೇಖನಕ್ರಿಯೆ
This article needs attention from an expert in Medicine.(November 2008) |
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(December 2006) |
- ಈ ಲೇಖನವು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿತವಾಗಿದೆ. ಬೇರೆಲ್ಲಾ ಉಪಯುಕ್ತತೆಗಳಿಗೆ ಪ್ರತಿಲೇಖನಕ್ರಿಯೆ (ಟ್ರಾನ್ಸ್ ಕ್ರಿಪ್ಷನ್) ಮತ್ತು MT ಸ್ಪಷ್ಟತಾಸೂಚಕ ಪುಟಗಳನ್ನು ನೋಡಿ.
MT ಎಂದೂ ಕರೆಯಲ್ಪಡುವ ವೈದ್ಯಕೀಯ ಪ್ರತಿಲೇಖನಕ್ರಿಯೆ ಆರೋಗ್ಯಕ್ಕೆ ಸಂಬಂಧಿತವಾದ ಒಂದು ವೃತ್ತಿಯಾಗಿದ್ದು ಈ ವೃತ್ತಿಯಲ್ಲಿ ಪ್ರತಿಲೇಖನದ ಪ್ರಕ್ರಿಯೆ (ಒಂದು ಪುಸ್ತಕದಲ್ಲಿನದನ್ನು ಇನ್ನೊಂದಕ್ಕೆ ನಕಲು ಮಾಡುವಿಕೆ), ಅಥವಾ ವೈದ್ಯರು ಮತ್ತು/ಅಥವಾ ಇತರ ಆರೋಗ್ಯ ಸಂಬಂಧಿತ ವೃತ್ತಿನಿರತರು ಧ್ವನಿಮುದ್ರಿಕೆಯಲ್ಲಿ ಉಕ್ತಲೇಖನದ ಮೂಲಕ ನೀಡಿದ ಮಾಹಿತಿಗಳನ್ನು ಬರಹದ ರೂಪಕ್ಕೆ ಇಳಿಸುವುದು.
ಇತಿಹಾಸ
[ಬದಲಾಯಿಸಿ]ಪ್ರತಿಲೇಖನಕ್ರಿಯೆಯ ಉಗಮ 1960ರ ದಶಕದಲ್ಲಿ ಆಯಿತು. ಈ ವಿಧವನ್ನು ಉತ್ಪಾದನೆಗೆ ಸಹಾಯಕವಾಗುವ ರೀತಿಯಲ್ಲಿ ಯೋಜಿಸಲಾಗಿತ್ತು. 1975ರಲ್ಲಿ, ಈ ಕ್ರಮದಲ್ಲಿ ತಯಾರಾದ ಮೊದಲ ಪ್ರತಿಲೇಖನ ವ್ಯವಸ್ಥೆಯನ್ನು ಮ್ಯಾನುಫ್ಯಾಕ್ಚರಿಂಗ್ ರಿಸೋರ್ಸ್ ಪ್ಲ್ಯಾನಿಂಗ್ (ಉತ್ಪಾದನಾ ಸಾಧನೋಪಾಯ ಯೋಜನೆ)ಅಥವಾ ಹ್ರಸ್ವರೂಪವಾಗಿ MRP ಎಂದು ಕರೆಯಲಾಯಿತು. ಇದರ ನಂತರ ಈ ವ್ಯವಸ್ಥೆಯನ್ನು ಉತ್ತಮಗೊಳಿಸಿದ MRP2 ಅನುಷ್ಠಾನಕ್ಕೆ ಬಂದಿತು. ಆದರೆ ಅವಾವುವೂ ವೈದ್ಯಕೀಯ ಪ್ರತಿಲೇಖನಕ್ರಿಯೆಯು ನೀಡಿದಂತಹ ಉಪಯೋಗಗಳನ್ನು ನೀಡಲು ಸಮರ್ಪಕವಾಗಲಿಲ್ಲ.
ಅದರೆ ಪ್ರತಿಲೇಕನದ ಸಾಮಗ್ರಿಗಳು ಬದಲಾಗುತ್ತಾ ಬಂದಿದ್ದು ಮೊದಲು ಬೆರಳಚ್ಚುಯಂತ್ರ (ಟೈಪ್ ಟೈಟರ್)ಗಳು ಬಂದು ನಂತರ ಎಲೆಕ್ಟ್ರಾನಿಕ್ ಟೈಪ್ ರೈಟರ್ ಗಳು, ನರ್ಡ್ ಪ್ರೋಸೆಸರ್ ಗಳು, ಕಂಟ್ಯೂಟರ್, ಪ್ಲಾಸ್ಟಿಕ್ ಡಿಸ್ಕ್ ಗಳು, ಮ್ಯಾಗ್ನೆಟಿಕ್ ಬೆಲ್ಟ್ ಗಳು, ಕ್ಯಾಸೆಟ್ ಗಳು, ಕೊನೆಯೇಯಿಲ್ಲದ ಲೂಪ್ ಗಳ ಹಾದಿ ಸವೆದು ಈಗ ಡಿಜಿಟಲ್ ರೆಕಾರ್ಡಿಂಗ್ ಗಳವರೆಗೂ ಪ್ರತಿಲೇಖನದ ಹಾದಿ ಹರಿದುಬಂದಿದೆ. ಈಗ ಸ್ಪೀಚ್ ರೆಕಗ್ನಿಷನ್ (SR)(ಮಾತು ಗುರುತಿಸುವ), ಕಂಟಿನ್ಯುಯಸ್ ಸ್ಪೀಚ್ ರೆಕಗ್ನಿಷನ್ (CSR)(ನಿರಂತರ ಮಾತು ಗುರುತಿಸುವ)ಎಂದೂ ಕರೆಯಲ್ಪಡುವ ಉಪಕರಣಗಳೇ ಹೆಚ್ಚು ಬಳಕೆಯಲ್ಲಿದ್ದು,ವೈದ್ಯಕೀಯ ಪ್ರತಿಲೇಖನಕಾರರು ಅಥವಾ "ಸಂಪಾದಕರು" ಅದಕ್ಕೆ ಪೂರಕವಾದ ಸಂಪಾದನ ಕಾರ್ಯವನ್ನು ನೀಡುತ್ತಿದ್ದರೂ, ಕೆಲವೆಡೆ ಮಾತ್ರ MT ಯ ಸ್ಥಳವನ್ನು SR ಸಂಪೂರ್ಣವಾಗಿ ಆಕ್ರಮಿಸಿಕೊಂಡುಬಿಟ್ಟಿದೆ.ಸ್ವಾಭಾವಿಕ-ಭಾಷಾ ಪರಿಷ್ಕರಣವು "ಸ್ವಯಂ" ಪ್ರತಿಲೇಖನವನ್ನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡುಹೋಗಿ ಮಾತಿನ ಗುರುತಿಸುವಿಕೆಯಲ್ಲಿಯೂ ದೊರೆಯದಿರಬಹುದಾದ ತರ್ಜುಮೆಯ ಪ್ರಕ್ರಿಯೆಗೆ ಪೂರಕವಾದ ಅಂಶಗಳನ್ನು ನೀಡುತ್ತದೆ.(ಇದು MT ಯಲ್ಲೂ ಲಭ್ಯವಹುದು).
ಹಿಂದಿನ ದಿನಗಳಲ್ಲಿ ಈ ವೈದ್ಯಕೀಯ ವರದಿಗಳು ಬಹಳ ಸಂಕ್ಷಿಪ್ತವಾಗಿ ಬರೆದ ಕೈಬರಹದ ಚೀಟಿಗಳಾಗಿದ್ದು, ರೋಗಿಯ ಕಡತದಲ್ಲಿ, ಪ್ರಮುಖ ವೈದ್ಯನು ಅದನ್ನು ಅರ್ಥೈಸಿಕೊಂಡು ಚಿಕಿತ್ಸೆ ನೀಡಲು ಅನುವಾಗುವಂತಿರುತ್ತಿದ್ದವು. ಕಡೆಗೆ ಈ ಕೈಬರಹದ ಗಜಿಬಿಜಿಯ ಚೀಟಿಗಳನ್ನೂ, ಟೈಪ್ ಮಾಡಲ್ಪಟ್ಟ ವರದಿಗಳನ್ನೂ ಒಂದು 'ರೋಗಿಯ ಕಡತ'ದಲ್ಲಿ ಅಡಕವಾಗಿಸಿ, ಆ ಕಡತಗಳನ್ನು ಇತರ ಸಾವಿರಾರು ರೋಗಿಗಳ ಕಡತಗಳೊಂದಿಗೆ, ವೈದ್ಯಕೀಯ ಇಲಾಖೆಯಲ್ಲಿ ಗೋಡೆಯಲ್ಲಿ ಅದಕ್ಕೆಂದೇ ಒಟ್ಟುಗೂಡಿಸಿಟ್ಟ ಕಡತ-ಕಪಾಟುಗಳಲ್ಲಿ ಪೇರಿಸಿಡುತ್ತಿದ್ದರು. ಯಾವುದೇ ರೋಗಿಯ ಕಡತಗಳನ್ನು ಪುನಃಪರಿಶೀಲಿದಬೇಕಾದ ಪ್ರಸಂಗ ಒದಗಿದಾಗ ಆ ಕಡತವನ್ನು ಕಪಾಟಿನಿಂದ ಹೊರತೆಗೆದು ಅದನ್ನು ಕೋರಿದಂತಹ ವೈದ್ಯರಿಗೆ ತಲುಪಿಸಲಾಗುತ್ತಿತ್ತು. ಈ ಕೈಯಾರೆ ಮಾಡಬೇಕಾದ ಕೆಲಸಗಳ ವೇಗವನ್ನು ಚುರುಕುಗೊಳಿಸಲು ಆ ವೈದ್ಯಕೀಯ ದಾಖಲೆಗಳನ್ನು ದ್ವಿಪ್ರತಿ ಮತ್ತು ತ್ರಿಪ್ರತಿಗಳಲ್ಲಿ ಕಾರ್ಬನ್ ನಕಲುಗಳಾಗಿ ಪರಿವರ್ತಿಸಿ ಶೇಖರಿಸಿಡಲಾಗುತ್ತಿತ್ತು.
ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ದಾಖಲೆಗಳು ಬಹಳವೇ ಬದಲಾಗಿವೆ. ಈಗಲೂ ಹಲವಾರು ವೈದ್ಯರು ಮತ್ತು ಆಸ್ಪತ್ರೆಗಳು ಕಾಗದದ ದಾಖಲೆಗಳನ್ನೇ ಉಪಯೋಗಿಸುತ್ತಿದ್ದರೂ, ಎಲೆಕ್ಟ್ರಾನಿಕ್ ದಾಖಲಾತಿಯತ್ತ ಹೆಚ್ಚಿನ ಒಲವನ್ನು ತೋರಿಸಲಾಗುತ್ತಿದೆ. ಕಡತ-ಕಪಾಟುಗಳ ಸ್ಥಾನವನ್ನು ಹೆಚ್ಚಿನ ಸಾಮರ್ಥ್ಯವುಳ್ಳ ಸರ್ವರ್ ಗಳಿಗೆ ಜೋಡಿಸಲ್ಪಟ್ಟ ಡೆಸ್ಕ್ ಟಾಪ್ ಗಣಕಯಂತ್ರಗಳು ಾವರಿಸಿದ್ದು, ಡಿಜಿಟಲ್ ಪದ್ಧತಿಯಲ್ಲಿ ರೋಗಿಗಳ ದಾಖಲೆಗಳನ್ನು ಪರಿಷ್ಕರಿಸಿ ಸಂಗ್ರಹಿಸಿಡಲಾಗುತ್ತಿದೆ. ಈ ಡಿಜಿಟಲ್ ಪದ್ಧತಿಯಿಂದ ಯಾವುದೇ ಸ್ಥಳದಲ್ಲಿದ್ದರೂ, ಈ ದಾಖಲೆಗಳ ಪರಿಶೀಲನೆಗೆ ಅಧಿಕಾರವಿರುವ ವೈದ್ಯನು, ರೋಗಿಯ ಬಗ್ಗೆ ಇರುವ ಮಾಹಿತಿಯನ್ನು ಕುಳಿತಲ್ಲೇ ಕಂಪ್ಯೂಟರ್ ಮೂಲಕ ಪಡೆಯಲು ಅನುಕೂಲವಾಗುತ್ತದೆ. ಹೀಗೆ ಎಲೆಕ್ಟ್ರಾನಿಕ್ ಪದ್ಧತಿಯಲ್ಲಿ ಶೇಖರಿಸಿದ ಮಾಹಿತಿಗಳನ್ನು ಬೇಕೆನಿಸಿದಾಗ, ಬೇಕಾದಷ್ಟು ವಿಷಯಗಳನ್ನು ಪ್ರಿಂಟ್ ಮೂಲಕ ತೆಗೆದುಕೊಳ್ಳಲು ಅವಕಾಶವಾಗಿದೆ. ಹಲವಾರು MTಗಳು ಈ ದಿನಗಳಲ್ಲಿ ಎಲೆಕ್ಟ್ರಾನಿಕ್ ಸೂಚಿತ ಪರ್ಸಲನ್ ಕಂಪ್ಯೂಟರ್ ಗಳನ್ನು ಮತ್ತು ಅಂತರಜಾಲ ವ್ಯವಸ್ಥೆಯನ್ನೂ ಬರಿದೇ ಜಾಲದಲ್ಲಿ ದೊರೆಯುವ ವಿಷಯಗಳಿಗಾಗಿಯಷ್ಟೇ ಅಲ್ಲದೆ ಔದ್ಯೋಗಿಕ ವೇದಿಕೆಯನ್ನಾಗಿಯೂ ಉಪಯೋಗಿಸಿಕೊಳ್ಳುತ್ತಿವೆ. ತಾಂತ್ರಿಕತೆಯು ಹರಹು ವಿಸ್ತಾರವಾಗಿದ್ದು, MT ಸೇವೆಗಳು ಮತ್ತ MT ಇಲಾಖೆಗಳು, ಪ್ರೋಗ್ರಾಮರ್ (ಮಾಹಿತಿಯನ್ನು ಪ್ರತಿಲೇಖಿಸುವವರು) ಮತ್ತು ಮಾಹಿತಿ ಕೇಂದ್ರದ ಸಿಬ್ಬಂದಿವರ್ಗದವರೊಡನೆ ಧ್ವನಿಯ ಮೂಲಕ ಮಾಹಿತಿ ಒದಗಿಸಿ ನಿರಾತಂಕವಾಗಿ, ನಿರಂತರವಾಗಿ ಅಂತರಜಾಲದ ಕೊಂಡಿಗಳ ಮೂಲಕ ಮಾಹಿತಿಯನ್ನು ವರ್ಗಾಯಿಸುತ್ತಾರೆ. ಈ ದಿನಗಳಲ್ಲಿ ಹಲವಾರು ಆರೋಗ್ಯಕೇಂದ್ರಗಳು ಕೈಯಲ್ಲಿ ಒಯ್ಯಬಹುದಾದಂತಹ ಪರ್ಸನಲ್ ಕಂಪ್ಯೂಟರ್ ಅಥವಾ ವೈಯುಕ್ತಿಕ ಮಾಹಿತಿ ಸಹಾಯಕ (ಪರ್ಸನಲ್ ಡಾಟಾ ಅಸಿಸ್ಟೆಂಟ್) (PDAಗಳು)ಗಳ ುಪಯೋಗವನ್ನು ಹೇರಳವಾಗಿ ಪಡೆದು, ಅದರಲ್ಲಿ ಸಾಫ್ಟ್ ವೇರ್ ಆಳವಡಿಸಿ ಉಕ್ತಲೇಖನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥೂಲ ಅವಲೋಕನ
[ಬದಲಾಯಿಸಿ]ವೈದ್ಯಕೀಯ ಪ್ರತಿಲೇಖನ (MT)ದಲ್ಲಿ ಅವಶ್ಯಕವಾದ, ಅಂದಿನವರೆಗಿನ, ಗೌಪ್ಯವಾಗಿರಿಸಬೇಕಾದ ರೋಗಿಗೆ ಸಂಬಂಧಿತವಾದ ಮಾಹಿತಿಗಳನ್ನು ಬರಹದ ರೂಪಕ್ಕೆ ದಾಖಲಿಸಿಕೊಳ್ಳಲಾಗುತ್ತಿದೆ. ಈ ಬರಹಗಳ ಪ್ರಿಂಟ್ ತೆಗೆದುಕೊಂಡು ಅದನ್ನು ರೋಗಿಯ ಕಡತಗಳಲ್ಲಿ ದಾಖಲಿಸಬಹುದು ಅಥವಾ ಅದರ ಮೂಲರೂಪವಾದ ಎಲೆಕ್ಟ್ರಾನಿಕ್ ವಿಧದಲ್ಲೂ ದಾಖಲಿಸಿರಬಹುದು. ಈ ಪ್ರತಿಲೇಖನಗಳನ್ನು ಆಸ್ಪತ್ರೆಯವರೇ ನೇಮಿಸಿಕೊಂದ ಪ್ರತಿಲೇಖನಕಾರರೋ (MTಗಳು) ಅಥವಾ ಸ್ವಗೃಹದಿಂದಲೇ ಆಸ್ಪತ್ರೆಯ ಕೆಲಸಗಳನ್ನು ಒಪ್ಪಿಕೊಂಡು ಮಾಡಿಕೊಡುವ ಪ್ರತಿಲೇಖಕರೋ ಮಾಡಬಹುದು; ಆಸ್ಪತ್ರೆಗಳಿಂದ, ವೈದ್ಯಕೀಯ ಕ್ಷೇತ್ರಗಳಿಂದ, ಕ್ಲಿನಿಕ್ ಗಳಿಂದ, ವೈದ್ಯರ ತಂಡದಿಂದ ಅಥವಾ ಆರೋಗ್ಯಕೇಂದ್ರಗಳಿಂದ ಗುತ್ತಿಗೆ ಪಡೆದು ಕೆಲಸ ಮಾಡಿಕೊಡಲು ಒಪ್ಪಿರುವವರ ಬಳಿ ಉದ್ಯೋಗ ಮಾಡುವ ಪ್ರತಿಲೇಖನಕಾರರು ಆಫ್ ಲೈನ್ (ಏಕಕಾಲದಲ್ಲಿ ಅಂತರಜಾಲದಲ್ಲಿ ಲಾಗ್ ಇನ್ ಆಗಿಲ್ಲದೆಯೇ) ಸಹ ಪ್ರತಿಲೇಖನ ಮಾಡಬಹುದು; ಹಾಗೂ ನೇರವಾಗಿ ಅರೋಗ್ಯಸೇವಾ ನಿರತರ (ವೈದ್ಯರ ಅಥವಾ ಅವರ ಸೇವಾದಳದ) ವೆಬ್ ಸೈಟ್ ನಲ್ಲೇ ಅಥವಾ ಗುತ್ತಿಗೆದಾರರಿಂದ ನಿಯಮಿಸಲ್ಪಟ್ಟವರಾಗಿ ಪ್ರತಿಲೇಖಕರು ಪ್ರತಿಲೇಖನ ಮಾಡಬಹುದು. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗಿದ್ದು ಅವರ ಮಾಹಿತಿಗಳನ್ನು ಕಾಗದರೂಪದಲ್ಲಿಟ್ಟರೆ ಬಹಳವೇ ಸ್ಥಳ ಬೇಕಾಗುವುದರಿಂದ ಅಂತಹ ಆಸ್ಪತ್ರೆಗಳು ಆ ವಯದ್ಯಕೀಯ ಮಾಹಿತಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲೇ ಸಂಗ್ರಹಿಸಲು ಬಯಸುತ್ತವೆ. ಹೀಗೆ ಎಲೆಕ್ಟ್ರಾನಿಕ್ ರೀತಿಯಲ್ಲಿ ಅವರ ಮಾಹಿತಿಸಂಚಯ (ಡಾಟಾಬೇಸ್)ದಲ್ಲಿ ಶೇಖರಿಸಲ್ಪಟ್ಟ ದಾಖಲೆಗಳನ್ನು ಯಾವ ಇಲಾಖೆಗೆ ಬೇಕೋ ಆ ಇಲಾಖೆಯು ಬೇಕಾದಾಗ ಹೊಂದಲು ಅವಕಾಶವಿದ್ದು, ರೋಗಿಗೆ ಅಂದಿನವರೆಗೂ ವೈದ್ಯಕೀಯವಾಗಿ ನೀಡಿದ ಸೇವೆಗಳು, ಅಂದಿನ ಅಥವಾ ಹಿಂದಿನ ಔಷಧಗಳ ಮಾಹಿತಿ, ರೋಗಿಗೆ ಇರಬಹುದಾದ ಅಲರ್ಜಿಗಳು, ಇವುಗಳು ತಕ್ಷಣ ದೊರೆಯುವಂತಾಗಿ, ರೋಗಿಯ ಚರಿತ್ರೆಯ ಆಧಾರದ ಮೇರೆಗೆ ಚಿಕಿತ್ಸೆ ನೀಡಲು ಪ್ರಪಂಚದ ಯಾವುದೋ ಮೂಲೆಯಲ್ಲಿರುವ ಆರೋಗ್ಯಕೇಂದ್ರಕ್ಕೂ ಸಹ ಅನುಕೂಲವಾಗುತ್ತದೆ.
ಒಂದು ನಿರ್ದಿಷ್ಟವಾದ ದಿನ, ನಿರ್ದಿಷ್ಟವಾದ ಆರೋಗ್ಯಕೇಂದ್ರದಲ್ಲಿ ರೋಗಿಯ ತಪಾಸಣೆಗೈದ ವೃತ್ತಿನಿರತ ವ್ಯದ್ಯನು ರೋಗಿಗೆ ನೀಡಿದ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ಪ್ರತಿಲೇಖನವಾಗಿ ಎಲೆಕ್ಟ್ರಾನಿಕ್ ಅಥವಾ ಹಾರ್ಡ್ ಕಾಪಿಯಾಗಿ ಶೇಖರಿಸಿಡುವುದು ಸರಿಯಷ್ಟೆ; ಹೀಗೆ ಪ್ರತಿಲೇಖನ ಕ್ರಿಯೆಯ ಮೂಲಕ ಪಡೆದ ಪತ್ರವನ್ನು ಪ್ರತಿಲೇಖನ, ಅಥವಾ ಸಾಮಾನ್ಯ ಬಳಕೆಯಲ್ಲಿ, "ವರದಿ" ಎಂದು ಕರೆಯುತ್ತಾರೆ. ಈ ವರದಿಯನ್ನು ಬಹಳಷ್ಟು ಜನ "ವೈದ್ಯಕೀಯ ದಾಖಲೆ" (ಮೆಡಿಕಲ್ ರೆಕಾರ್ಡ್) ಎಂದು ಕರೆಯುತ್ತಾರೆ. ಹೀಗೆ ದೊರೆತ ಪ್ರತಿ ಪ್ರತಿಲೇಖಿತ ವೈದ್ಯಕೀಯ ದಾಖಲೆ ಅಥವಾ ವರದಿಯನ್ನು ಅದಕ್ಕೇ ಸೀಮಿತವಾದ ಮಾಹಿತಿ ಮತ್ತು ಸೇವೆ ನೀಡಿದ ದಿನಾಂಕಗಳನ್ನು ನಮೂದಿಸಿ, ಅದಕ್ಕೂ ಮುಂಚೆ ಲಭ್ಯವಿದ್ದ ಆ ರೋಗಿಯ ದಾಖಲೆಗಳೊಡನೆ ಇದನ್ನೂ ಸೇರಿಸಿ, ಅಂತಹ ಮಿಳಿತವಾದ ಕಡತವನ್ನು ರೋಗಿಯ ವೈದ್ಯಕೀಯ ಇತಿಹಾಸ ಎಂದು ವಾಡಿಕೆಯಾಗಿ ಕರೆಯುತ್ತಾರೆ. ಈ ದಾಖಲಾತಿಯನ್ನೇ ಆಸ್ಪತ್ರೆಗಳಲ್ಲಿ ರೋಗಿಯ ಚಾರ್ಟ್ ಎಂಬ ಹೆಸರಿನಿಂದ ಕರೆಯುತ್ತಾರೆ.
ವೈದ್ಯಕೀಯ ಪ್ರತಿಲೇಖನ ಕ್ರಿಯೆಯಲ್ಲಿ ರೋಗಿಯ ಚಿಕಿತ್ಸೆಗಾಗಿ ಚಿಕಿತ್ಸಾವರ್ಗದವರು ಮಾತಿನಲ್ಲಿ ಹೇಳಿದುದನ್ನು ಸುಲಭವಾಗಿ ಅರಿಯಲಾಗುವ ರೀತಿಯ ಬರಹರೂಪಕ್ಕಿಳಿಸಲಾಗುವುದಲ್ಲದೆ ಹಾಗೆ ಬರೆದಂತಹುದು ಸಾಮಾನ್ಯವಾಗಿ ಟೈಪ್ ಮಾಡಲ್ಪಡುವುದಾಗಿದ್ದು, ಆ ಮಾಹಿತಿ ಇರಬೇಕಾದ ರೂಪರೇಷೆಗಳಿಗೆ ಒಳಪಟ್ಟದ್ದಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸರ್ವಾನುಮತದಿಂದ ಅಂಗೀಕೃತವಾದ ಕ್ರಮದಲ್ಲಿ ಪ್ರತಿಲೇಖನವು ಇರುತ್ತದೆ. ಪ್ರತಿಲೇಖನ ಮಾಡಲು ಸರಿಯಾದ ಪದ ಪರಿಚಯ, ಪದಾಕ್ಷರ(ಸ್ಪೆಲಿಂಗ್)ಗಳ ಪರಿಚಯ ಮತ್ತು ತತ್ಸಂಬಂಧಿತ ಪಾರಿಭಾಷಿಕ ಸಂಪತ್ತು ಇದ್ದು, ಒಮ್ಮೊಮ್ಮೆ ನುಡಿಯಲ್ಪಟ್ಟ ಪಾರಿಭಾಷಿಕ ಪದಗಳ ಹಾಗೂ ಉಕ್ತಲೇಖನಕ್ರಿಯೆಯಲ್ಲಾಗಬಹುದಾದ ತಪ್ಪುಗಳನ್ನು ಸರಿಪಡಿಸುವಷ್ಟು ಅರಿವಿರಬೇಕಾದುದು ಅವಶ್ಯ. ಪ್ರತಿಲೇಖನಕಾರರು ಪ್ರತಿಲೇಖ್ಯವಾದ ದಸ್ತಾವೇಜುಗಳನ್ನು ಪರಿಶೀಲಿಸಿ ಸರಿಪಡಿಸುವುದಲ್ಲದೆ, ಅದನ್ನು ಪ್ರಿಂಟ್ ಮಾಡಲು ಅಥವಾ ಸೂಕ್ತ ಸಮಯಕ್ಕೆ ಪರಿಪೂರ್ಣಗೊಂಡ ದಸ್ತಾವೇಜುಗಳನ್ನು ಸಲ್ಲಬೇಕಾದೆಡೆಗೆ ಸಲ್ಲಿಸುವ ಕಾರ್ಯವನ್ನೂ ಎಸಗುತ್ತಾರೆ. ಎಲ್ಲಾ ಪ್ರತಿಲೇಖನಗಳೂ ರೋಗಿಯ ಬಗ್ಗೆಗಿನ ವರದಿಗಳು ಗೋಪ್ಯವಾಗಿರುವಂತೆಯೇ ಇರಿಸಬೇಕಲ್ಲದೆ ಆ ಪ್ರತಿಲೇಖನಗಳು ವೈದ್ಯಕೀಯ-ಕಾನೂನಿನ ರೀತ್ಯಾ ಸಮರ್ಪಕವಾಗಿದ್ದು, ಸಂಬಂಧಿತ ನಿಯಮಾವಳಿಗಳು ಮತ್ತು ತತ್ವಗಳಿಗೆ ಬದ್ಧವಾಗಿರಬೇಕಾದುದು ಅತ್ಯಗತ್ತಯ.
ವೈದ್ಯರಿಗೆ ಅಥವಾ ಒಂದು ಭಿಷಜರ ತಂಡಕ್ಕೆ ಪ್ರತಿಲೇಖನ ಮಾಡಿಕೊಡಿಕೊಡುವ ಸಂದರ್ಭದಲ್ಲಿ ಅವರದೇ ಆದ ನಮೂದಿತ ರೀತಿಗಳು ಮತ್ತು ವರದಿ ದಾಖಲಾತಿಯ ವಿಧಾನಗಳನ್ನು ಅನುಸರಿಸಬೇಕಾಗಿದ್ದು, ಆ ವಿಧಿವಿಧಾನಗಳು ಆ ವೈದ್ಯರು ಪರಿಣತಿ ಪಡೆದಿರುವ ಕ್ಷೇತ್ರ ಮತ್ತು ಚಿಕಿತ್ಸಾಕ್ರಮವನ್ನು ಅವಲಂಬಿಸುತ್ತದಾದರೂ ರೋಗಿಯ ಇತಿಹಾಸ, ಶಾರೀರಿಕ ತಪಾಸಣೆಗಳು ಅಥವಾ ಚಿಕಿತ್ಸಾ ಸೂಚನೆಗಳನ್ನು ಸಾಮಾನ್ಯವಾಗಿ ಬಳಸಿಕೊಳ್ಳಲಾಗುತ್ತದೆ. ಬಹುತೇಕ ಆಸ್ಪತ್ರೆಯ ಹೊರಗಣ ಸೈಟ್ ಗಳಲ್ಲಿ, ಖಾಸಗಿ ವೈದ್ಯರು ಎರಡನೆಯ ಅಭಿಪ್ರಾಯಕ್ಕಾಗಿ ಸಲಹೆನೀಡುವುದು, ಶಸ್ತ್ರಚಿಕಿತ್ಸಾಪೂರ್ವ ತಪಾಸಣೆ ಮಾಡುವುದು ಮತ್ತು ವಿಮೆಯ ವಿಷಯಕ್ಕಾಗಿಯೋ ಅಥವಾ ವಿಕಲತೆ ಹೊಂದಿದುದಕ್ಕಾಗಿ ಪರಿಹಾರಕ್ಕಾಗಿಯೋ ಬಂದ ರೋಗಿಗಳ IME (ಇಂಡಿಪೆಂಡೆಂಟ್ ಮೆಡಿಕಲ್ ಎಕ್ಸಾಮ್) ಅರ್ಥಾತ್ ಖಾಸಗಿ ವೈದ್ಯಕೀಯ ತಪಾಸಣೆಗಳನ್ನು ಮಾಡುವುದರಲ್ಲಿ ತೊಡಗಿಕೊಳ್ಳುತ್ತಾರೆ. ಕೆಲವು ಖಾಸಗಿ ಕುಟುಂಬವೈದ್ಯರು ಈ ಪ್ರತಿಲೇಖನ ವ್ಯವಸ್ಥೆಯನ್ನು ಬಯಸದೆ, ತಮ್ಮ ಕೈಬರಹದಲ್ಲೇ ರೋಗಿಗಳ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವರಾದರೂ ಎಲ್ಲಾ ಕುಟುಂಬವೈದ್ಯರೂ ಹಾಗಿರುವುದಿಲ್ಲ.
ಈಗಿನ ದಿನಗಳಲ್ಲಿ ಡಿಜಿಟಲ್ ಧ್ವನಿಯ ಮೂಲಕ ತಮ್ಮ ಉಕ್ತಲೇಖನಗಳನ್ನು ಕಳುಹಿಸಿಕೊಡುವ ವೃತ್ತಿನಿರತ ವೈದ್ಯರ ಸಂಖ್ಯೆ ಏರುತ್ತಿದ್ದು ಧ್ವನಿ ಅಥವಾ ಮಾತನ್ನು ಗುರುತಿಸುವುದರ ಮೂಲಕ ಪ್ರತಿಲೇಖನ ವ್ಯವಸ್ಥೆಗೆ ತಮ್ಮನ್ನು ತಾವೇ ಒಡ್ಡಿಕೊಳ್ಳುತ್ತಿರುವವರ ಸಂಖ್ಯೆ ಗಮನೀಯವಾಗಿ ಹೆಚ್ಚುತ್ತಿದೆ. ಮಾತನ್ನು ಗುರುತಿಸುವ ತಂತ್ರಜ್ಞಾನವು ಇನ್ನೂ ಶೈಶವದಲ್ಲಿರುವುದರಿಂದ ತರ್ಜುಮೆಯಲ್ಲಿ ಕಳೆದುಹೋಗುವ ಅಂಶಗಳು ಬಹಳ. ಈ ತಂತ್ರಾಂಶವನ್ನು ಉಪಯೋಗಿಸಲಿಚ್ಛಿಸುವ ಉಕ್ತಲೇಖನಕಾರರು ಮೊದಲು ಈ ಯಂತ್ರವು ತಮ್ಮ ಮಾತುಗಳನ್ನು ಗುರುತಿಸಲು ತರಬೇತಿ ನೀಡಬೇಕು. ಪದಗಳನ್ನು ಮಾಹಿತಿಸಂಚಯಕ್ಕೆ ಒಂದೇಸಮನೆ ಓದಿಹೇಳುವುದರ ಮೂಲಕ ತಂತ್ರಾಂಶವು ಪದಗಳನ್ನು ಮತ್ತು ನುಡಿಗಟ್ಟುಗಳನ್ನು ಗುರುತಿಸುವುದನ್ನು "ಕಲಿಯುವುದು".
ಸರಿಯಾಗಿ ಮಾತನಾಡದಿರುವುದು, ಅಲ್ಲದೆ ದಟ್ಟವಾದ ವಿದೇಶೀ ಭಾಷಾಛಾಯೆ ಮತ್ತು ಅಸ್ಪಷ್ಟವಾಗಿ ಗೊಣಗುವಿಕೆಗಳು ಪದಗ್ರಾಹಿ ಸಾಷ್ಟ್ ವೇರ್ ಗೂ ಮತ್ತು ಪ್ರತಿಲೇಖನಕಾರರಿಗೂ ಕಾರ್ಯವೆಸಗಲು ತೊಂದರೆಯುಂಟುಮಾಡುತ್ತವೆ. ಪ್ರತಿಲೇಖನಕಾರನು ಅಂತಹ ವರದಿಗಳನ್ನು ಅರ್ಥವಾಗದ್ದೆಂದು ಅಂಕಿತ ಮಾಡಬಹುದು ಆದರೆ ಧ್ವನಿಗ್ರಹಣ ತಂತ್ರಾಂಶವು ಅಂತಹ ಅರ್ಥಹೀನ ಪದಗಳನ್ನು ಲಭ್ಯವಾದ ಮಾಹಿತಿಸಂಚಯದಿಂದ "ಕಲಿತ" ಭಾಷೆಯನ್ನು ಅನುಸರಿಸಿ ತರ್ಜುಮೆ ಮಾಡುತ್ತದೆ. ತತ್ಪರಿಣಾಮವಾಗಿ 'ಪದ ಖಿಚಡಿ' (ವರ್ಡ್ ಸಲಾಡ್) ಅಥವಾ ಕಳೆದುಹೋದ ಪದಗಳು (ಮಿಸಿಂಗ್ ಟೆಕ್ಸ್ಟ್) ಎಂಬ ಸ್ಥಿತಿ ಉದ್ಭವವಾಗುತ್ತದೆ. ಸರಿಯಾಗಿ ಮೂಡಿರದ ವರದಿಗಳನ್ನು ಹಿಂತಿರುಗಿಸಿ ಸರಿಯಾದ ಉಕ್ತಲೇಖನಗಳನ್ನು ಕಳುಹಿಸಲು ತಾಕೀತು ಮಾಡಬಹುದಾದರೂ ಅಂತಹ ವ್ಯವಸ್ಥೆಗಳು ಒಂದು ಚೌಕಟ್ಟಿಗೆ ಇನ್ನೂ ಅಡಕವಾಗಿಲ್ಲ. ಒಂದು ಮಟ್ಟದಿಂದ ಕೆಳಗೆ, ಸಲಾಡ್ ಎಂಬುವುದು ನೈಜ ಉಕ್ತಲೇಖನಕ್ಕೆ ಅನ್ವಯಿಸುತ್ತದೆ. ಪ್ರತಿಲೇಖನಕಾರನು ಏಕಕಾಲದಲ್ಲಿ ಅದನ್ನು ಕೇಳುತ್ತಾ, ಓದುತ್ತಾ, ಸರಿಪಡಿಸಲ್ಪಟ್ಟ ಲೇಕನವನ್ನು ಸಂಪಾದಿಸುವಲ್ಲಿ ನಿರತನಾಗುತ್ತನೆ. ಈ ಪರಿಕ್ರಮದಲ್ಲಿ ಪ್ರತಿ ಪದವನ್ನೂ ದೃಢಪಡಿಸಬೇಕು. ಈ ತಂತ್ರಾಂಶದ ನ್ಯೂನತೆಯೆಂದರೆ ಹೀಗೆ ಪರಿಷ್ಕರಿಸಲು ತೆಗೆದುಕೊಂಡ ಸಮಯವು ಬೇರೆಲ್ಲಾ ಉಪನೋಗಗಳೂ ನಗಣ್ಯವೆನಿಸುವ ಮಟ್ಟಕ್ಕೆ ತಲುಪಬಹುದು. ಪದಗ್ರಹಣದ ಗುಣಮಟ್ಟವು ಅತ್ಯುತ್ತಮ ದಿಂದ ಕಳಪೆಯವರೆಗೂ ಇರಬಹುದಾಗಿದ್ದು, ಇಡೀ ಪದಗಳೋ, ವಾಕ್ಯಗಳೋ ನೀಡಲ್ಪಟ್ಟ ಮೂಲವರದಿಯಿಂದ ಹೊರಗುಳಿದುಬಿಡಬಹುದು, ಎಷ್ಟೋ ಬಾರಿ ನಕಾರಾತ್ನಕ ಪದಸಂಕೋಚನಗಳು ಮತ್ತು "ಅಲ್ಲ"ವೆಂಬುದನ್ನು ಸೂಚಿಸುವ ಪದಗಳೇ ಬಿಡಲ್ಪಡಬಹುದು. ಧ್ವನಿ ಗುರುತಿಸುವಿಕೆ ಯು "411"ಅನ್ನು ಡಯಲ್ ಮಾಡಿದಾಗ ಕೇಳಿಬರುವ ಧ್ವನಿಗ್ರಾಹಕಗಳಂತೆಯೇ ಇದ್ದು, ಅದು ಕೆಲವೊಮ್ಮೆ ತಪ್ಪಾದ ಅಂಕಿಗಳನ್ನು ಬಿತ್ತರಿಸಿ ಅದಕ್ಕೆ ಹಣವನ್ನೂ ತೆಗೆದುಕೊಳ್ಳುವ ಕ್ರಮವನ್ನು ಬಹಳ ಹೋಲುತ್ತದೆ. ಇಂತಹ ತಪ್ಪುಗಳು ಈ ತಂತ್ರಾಂಶದಿಂದ ರೋಗಿಗಳ ಚಿಕಿತ್ಸೆಯ ಮೇಲೆ ದುಷ್ಪರಿಣಾಮಗಳನ್ನೂ ಬೀರುವ ಸಾಧ್ಯತೆಯಿದೆ ಎಂಬ ಆತಂಕವನ್ನು ಮೂಡಿಸುತ್ತವೆ. ಸರ್ವರ್ ಆಧಾರಿತ ಯಾದಿಗಳನ್ನು ಯೋಜಿತ ಸೇವೆ ನೀಡಲು (ಅಪ್ಲಿಕೇಷನ್ ಸರ್ವೀಸ್ ಪ್ರೊವೈಡರ್) - (ASP) ನಿರತರಾದವರಿಂದ ಪಡೆದಾಗಲೂ ಗುಣಮಟ್ಟ ಕುಂಠಿತವಾಗಬಹುದು.
ಧ್ವನಿ ಗುರುತಿಸುವಿಕೆಗೆ ನೀಡುವ ಹಣದ ಮೊತ್ತವು ಪ್ರತಿಲೇಖನ ಜಗತ್ತಿನಲ್ಲಿ ಕಡಿಮೆಯಾಗುತ್ತಿರುವುದರ ಬಗ್ಗೆ ವಿವಾದವಿದೆ. ಯಾವುದೇ ಗ್ರಾಹಕನು ಅಂತರಜಾಲದಲ್ಲಿ ಉಂಟಾಗುವ ಖರ್ಚುಗಳನ್ನು ಸರಿದೂಗಿಸಲು ಇನ್ನಾವುದಾದರೂ ಎಡೆಯಲ್ಲಿ ಉಳಿತಾಯ ಮಾಡಲೆತ್ನಿಸುವುದು ಸಹಜ. ಆದರೆ ಉತ್ಪಾದನೆಯಿಂದ ದೊರೆತ ಲಾಭಾಂಶವನ್ನು ಸುಳ್ಳೇ ಏರಿಸಿ ಹೇಳುವ ಇಂತಹ ಸೇವೆಯ ಮಾರಾಟಗಾರರಿಂದ ಸಾಲಿಗೆ ಇಂತಿಷ್ಟೆಂದು ಹಣ ಪಡೆಯುವ ಪ್ರತಿಲೇಖನಕಾರರಿಗೆ ಹಾನಿಯೇ ಆಗುತ್ತಿದೆ. ಪ್ರತಿಲೇಖನಕಾರರಿಗೆ ನೂತನ ಸಂಪಾದನಾ ಕೌಶಲವು ಇರಲೇಬೇಕೆಂದು ಹೇಳುವುದಲ್ಲದೆ, ಧ್ವನಿ ಗುರುತಿಸುವಿಕೆಯಲ್ಲಿನ ದೋಷಗಳಿಗಾಗಿ ಗಮನೀಯವಾದ ಮೊತ್ತವನ್ನು ನಷ್ಟಭರ್ತಿಯ ರೂಪದಲ್ಲಿ ಹಿಡಿಯಲಾಗುತ್ತಿರುವ ವರದಿಗಳಿವೆ. ಪ್ರತಿಷ್ಠಿತ ಉದ್ಯಮಮೂಲಗಳು ಈ ಪ್ರತಿಲೇಖನ ಕ್ಷೇತ್ರದಲ್ಲಿನ ಉತ್ಪಾದನೆಯ ಹೆಚ್ಚಳವನ್ನು 30%-50% ಎಂದು ಅಂದಾಜಿಸಿದೆ;ಆದರೆ ಇದು ಈ ಕ್ರಮವನ್ನು ಅಳವಡಿಸುವ ವಿಧಿಯ ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ. ಇಂತಹ ಸೇವೆಯ ವ್ಯವಹಾರ ನಡೆಸುವವರು ನೀಡುವ ನಷ್ಟಭರ್ತಿಯ ತೀರ್ಮಾನದ ಮಾನದಂಡಗಳನ್ನು "ಉಪಯೋಗಿಸು"ವುದನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಕಾಣುವುದು ಅವಶ್ಯಕ.
ಮತ್ತೊಂದು ಇತ್ಯರ್ಥಕ್ಕೆ ಬರಲಾಗದ ಅಂಶವೆಂದರೆ ಸಂರಕ್ಷಿಸಲು ದುಬಾರಿಯಾದ ಹೆಡರ್ ಗಳನ್ನು ಸರಳವಾದ ಇಂಟರ್ ಫೇಸ್ ಗಳ ಬದಲಾಗಿ ಉಪಯೋಗಿಸಿ ತಮಗೆ ಬೇಕಾದ ರೀತಿಯ "ವೇದಿಕೆ" ರಚಿಸಿಕೊಂಡದ್ದು. ಕೊಡಮಾಡುವ ದರಗಳು ಈ ತಪ್ಪಿಹೋದ ಅವಕಾಶವನ್ನು ಪ್ರತಿಲೇಖನಕಾರರಿಗಾಗಿ ಬಿಂಬಿಸಬೇಕು.
ಮಾತು ಗುರುತಿಸುವಿಕೆಯ ತಂತ್ರಾಂಶ (SRT) ವು ಪರಸ್ಪರ ಅವಲಂಬನೆಯುಳ್ಳ, ಸಂಲಗ್ನತೆಯೊಳಗೊಂಡ ಕಾರ್ಯ. ಅದನ್ನು ಮಾದರಿ ಉಕ್ತಲೇಖನದ ವ್ಯವಸ್ಥಿತ ಕ್ರಮಕ್ಕೆ ಹೊಂದುವಂತದ್ದೆಂದು ತಿಳಿಯುವುದು ತಪ್ಪಾಗುತ್ತದೆ. ಇದು ಬಹವಂಶ "ಸ್ಟ್ಯಾಂಡ್ ಅಲೋನ್" (ಒಂಟಿಯಾದುದೇ ಆದ) ವ್ಯವಸ್ಥೆಯಾಗಿರುತ್ತದೆ. ಈ ವಿನೂತನ ಸಾಫ್ಟ್ ವೇರ್ ಹಿಂದಿನ ಪ್ರತಿಲೇಖನಕಾರರು ಬಳಸುತ್ತಿದ್ದ ಸಮಯ ಉಳಿಸುವ ಸಲಕರಣೆಗಳಾದ ಮ್ಯಾಕ್ರೋಗಳು ಮತ್ತು ಇತರೆ ಪದ/ಕ್ರಮ ವಿಕಸಕ (ವರ್ಡ್/ಫರ್ಮಾಟ್ ಎಕ್ಸ್ ಪ್ಯಾಂಡರ್)ಗಳನ್ನು ಬದಿಗೊತ್ತಿತು. ಗ್ರಾಹಕ/ವಿತರಕರ ಮಾದರಿಗಳನ್ನು ಸರಿಪಡಿಸಲು ವಿನಮತಿಸಿಕೊಳ್ಳುವುದು ಆ ಉಳಿತಾಯಗಳ ವಿಳಂಬಕ್ಕೆ ಕಾರಣವಾಗುತ್ತಿದ್ದವು. ವಿಭಿನ್ನ ಶೈಲಿಯಲ್ಲಿ ಕಾರ್ಯವೆಸಗುವ, ಒಬ್ಬರಿಗೊಬ್ಬರು ಸಂಬಂಧವಿರದ ರೀತಿಯಲ್ಲಿ ಎಲ್ಲೋ ಕುಳಿತು ಕೆಲಸ ಮಾಡುವ, ಪ್ರತಿಲೇಖನಕಾರರು ಮಾಡುವ ಕೆಲಸವು ತದ್ವಿರುದ್ಧ ಪರಿಣಾಮ ಬೀರಿ, ಅವರೂ ಮತ್ತು ಧ್ವನಿಗ್ರಾಹಕ ಯಮತ್ರವೂ ಹತೋಟಿಗಾಗಿ ಏತ-ವಾತ ಆಡುವ ಪರಿಸ್ಥಿತಿ ಉಂಟಾಗಬಹುದು. ಧ್ವನಿ ಗುರುತಿಸುವಿಕೆಯ ನಿಯಂತ್ರಕರು ಪ್ರತಿಲೇಖಕನಕಾರರ ಮೇಲೆ ಹೇರುವ ನಿರ್ಬಂಧಗಳು ಈ ಕ್ರಮದ ಉಪಯುಕ್ತತೆಯು ನಶಿದುವ ರೀತಿಯಲ್ಲಿರಬಾರದು.
ಆರೋಗ್ಯಪಾಲನಾ ಕೇಂದ್ರದವರಿಗೆ ರೋಗಿಯ ದಾಖಲೆಗಳನ್ನು ಒದಗಿಸಿಕೊಳ್ಳಲು, ಅವರಿಗೆ ರೊಗಿಯ ದೇಹಸ್ಥಿತಿಯ ಬಗ್ಗೆ ತಿಳಿಸಲು, ಅಂದಿನ ಅಥವಾ ಮುಂದಿನ ಚಿಕಿತ್ಸಾವಿಧಾನಗಳನ್ನು ತಿಳಿಸಲು ಮತ್ತು ರೋಗಿಯನ್ನು ನೋಡಿಕೊಳ್ಳುವುದರ ಬಗ್ಗೆ ನಿರಂತರ ಗಮನವಿರಿಸಲು ಇಂದಿಗೂ ವೈದ್ಯರಿಗೆ ಪ್ರತಿಲೇಖನಕ್ರಿಯೆಯೇ ಸೂಕ್ತವಾದ ಕ್ರಮವಾಗಿದೆ. ಇತ್ತೀಚೆಗೆ, ಫೆಡೆರಲ್ ಮತ್ತು ರಾಜ್ಯದ ಬಲಹೀನತೆ ಕಾಯಿದೆಯ ಮಾರ್ಪಾಡುಗಳಿಗೆ ಅನುಗುಣವಾಗಿ, ವೈದ್ಯಕೀಯ ಬಿಲ್ ಗಾಗಿಯಾಗಲೀ, ಕಾರ್ಮಿಕನು ನಷ್ಟಪರಿಹಾರಕ್ಕಾಗಿ (ಮತ್ತು ತನ್ಮೂಲಕ ನಡೆಯುವ ಪ್ರಕ್ರಿಯೆಗಳಿಗಾಗಿ)ಫೆಡರಲ್ ಮತ್ತು ರಾಜ್ಯದ ನಿಯೋಗಗಳ ವಿಮೆಯನ್ನು ಪಡೆಯಲು ಗುಜರಾಯಿಸುವ ಅರ್ಜಿಗಾಗಲೀ ಒಂದು ಬರವಣಿಗೆಯಲ್ಲಿರುವ ವರದಿ (IME)ಯು ಕಡ್ಡಾಯವಾಗಿದೆ.
ಒಂದು ವೃತ್ತಿಯಾಗಿ
[ಬದಲಾಯಿಸಿ]ಪ್ರತಿಲೇಖನಕ್ರಿಯೆಯಲ್ಲಿ ತೊಡಗಿಕೊಂಡ ವ್ಯಕ್ತಿಯನ್ನು (ಮೆಡಿಕಲ್ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್) ವೈದ್ಯಕೀಯ ಪ್ರತಿಲೇಖನಕಾರ ಅಥವಾ MT ಎಂದು ಕರೆಯುತ್ತಾರೆ.ಪ್ರತಿಲೇಖನಕಾರನು ಉಪಯೋಗಸುವ ಉಪಕರಣವನ್ನು ವೈದ್ಯಕೀಯ ನಕಲುಪಕರಣ ( ಮೆಡಿಕಲ್ ಟ್ರ್ಯಾನ್ಸ್ ಕ್ರೈಬರ್ ) ಎಂದು ಕರೆಯಲಾಗುತ್ತದೆ. "ಪ್ರತಿಲೇಖನಕ್ರಿಯೆಯನ್ನು ಕೈಗೊಳ್ಳುವ ವ್ಯಕ್ತಿಯನ್ನು "ಮೆಡಿಕಲ್ ಟ್ರ್ಯಾನ್ ಸ್ಕ್ರಿಪ್ಷನಿಸ್ಟ್" ಎಂದೇ ಕರೆಯಬೇಕು. ವೈದ್ಯಕೀಯ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಎಂದರೆ ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಕೈಬರಹದ ರೂಪದಲ್ಲಿರಿಸುವ ಬದಲಿಗೆ ಟೈಪ್ ಮಾಡಲ್ಪಟ್ಟ ವಿಧದಲ್ಲಿರಿಸಲು ಸಹಾಯಕವಾಗುವ ವ್ಯಕ್ತಿ. ಕೈಬರಹದ ವರದಿಗಳು/ದಾಖಲೆಗಳು ಇತರೆ ಆರೋಗ್ಯಪಾಲನಾ ಕೆಂದ್ರಗಳಲ್ಲಿ ಸರಿಯಾಗಿ ವ್ಯಾಖ್ಯಾನಿಸದಿರುವ ಸಾಧ್ಯತೆಗಳು ಹೆಚ್ಚು. ವೈದ್ಯಕೀಯ ಪ್ರತಿಲೇಖನಕ್ರಿಯೆಗೆ ಉಪಯೋಗಿಸುವ ಉಪಕರಣಗಳನ್ನು ಟ್ರ್ಯಾನ್ಸ್ ಕ್ರೈಬರ್ ಎಂದು ಕರೆಯುತ್ತಾರೆ; ಉದಾಹರಣೆಗೆ ಪ್ರತಿಲೇಖನಕಾರನಿಂದ ಬಳಸಲ್ಪಡುವ, ಕಾಲುಗಳಿಂದ ಚಾಲನೆಗೊಳಪಡುವ ಕ್ಯಾಸೆಟ್ ಪ್ಲೇಯರ್ ಗಳು. 1990ರ ದಶಕದ ಕೊನೆಯಲ್ಲಿ ಪ್ರತಿಲೇಖನಕಾರರನ್ನು ವೈದ್ಯಕೀಯ ಬಾಷಾತಜ್ಞರು (ಮೆಡಿಕಲ್ ಲ್ಯಾಂಗ್ವೇಜ್ ಸ್ಪೆಷಲಿಸ್ಟ್) ಅಥವಾ ಆರೋಗ್ಯವಿಷಯ ವ್ಯವಸ್ಥಾಪಕ ವಿಶೇಷವೃತ್ತಿನಿರತರು (HIM) ಪ್ಯಾರಾಪ್ರೊಫೆಷನಲ್ಸ್) ಎಂದು ಕರೆಯುತ್ತಿದ್ದರು.
ವೈದ್ಯಕೀಯ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಆಗಲು ಯಾವುದೇ ವಿಶೇಷವಾದ ವಿದ್ಯಾರ್ಹತೆಯ ಅಗತ್ಯವಿಲ್ಲ. ವಿದ್ಯೆ ಮತ್ತು ತರಬೇತಿಯನ್ನು ಸಾಂಪ್ರದಾಯಿಕವಾದ ಶಾಲಾಪದ್ಧತಿಯಲ್ಲೋ, ಅರ್ಹತಾ ಅಥವಾ ತಾಂತ್ರಿಕ ಶಿಕ್ಷಣದ ಮೂಲಕವೋ, ಮುಕ್ತ ವಿದ್ಯಾಲಯಗಳ ಮೂಲಕವೋ, ಅಥವಾ/ಮತ್ತು ಕೆಲವು ಆಸ್ಪತ್ರೆಗಳಲ್ಲಿ ತಾವೇ ನೀಡುವ ವೃತ್ತಿಪರ ತರಬೇತಿಯ ಮೂಲಕವೋ ಪಡೆಯಬುದಾದರೂ, ಕೆಲವು ರಾಷ್ಟ್ರಗಳು ಮಾತ್ರ 18ತಿಂಗಳಿಂದ 2 ವರ್ಷದ ವಿಶೇಷ ಪ್ರತಿಲೇಖನಕ್ರಿಯೆಯ ತರಬೇತಿ ಪಡೆದ ವೈದ್ಯಕೀಯ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಗಳಿಗೆ ಮಾತ್ರ ಆದ್ಯತೆ ನೀಡುತ್ತಾರೆ. ವೈದ್ಯಕೀಯ ಟ್ರ್ಯಾನ್ಸ್ ಕ್ರಿಪ್ಷನ್ ನಲ್ಲಿ ಉದ್ಯೋಗ ಮಾಡುವುದರಿಂದ ವೈದ್ಯಕೀಯ ಪದಗಳ ಮೇಲಿನ ಹಿಡಿತ, ಅಂತಹ ಬಾಷೆಯ ಸಂಪಾದಕತ್ವದ ಮೇಲಿನ ಹತೋಟಿ, ಪ್ರತಿಲೇಖನಕಾರನ ಏಕಕಾಲದಲ್ಲೇ ಕೇಳುತ್ತಲೇ ಟೈಪ್ ಮಾಡುವ ನಿಷ್ನಾತತೆ, ಟ್ರ್ಯಾನ್ಸ್ ಕ್ರೈಬರ್ ಯಂತ್ರವನ್ನು ಹತೋಟಿಗಳ ಮೂಲಕ ಹಿಂದೋಡಿಸಿ, ಉಕ್ತಲೇಖನ ಕೇಳುತ್ತಾ ಕೇಳುತ್ತಾ ಕಾಲ ಪೆಡಲ್ ಮೂಲಕ ಅದನ್ನು ಪ್ಲೇ ಮಾಡುವುದು ಮತ್ತು ಸರಿಪಡಿಸುವುದು - ಇವೆಲ್ಲವನ್ನೂ ಸಾಧಿಸುತ್ತಲೇ ಕ್ರಿಯೆಯಲ್ಲಿ ಒಂದು ಲಯಬದ್ಧತೆಯನ್ನೂ ಕಾಪಾಡಿಕೊಂಡುಬರುವುದನ್ನು ಹಸ್ತಗತವಾಗಿಸಿಕೊಳ್ಳಬಹುದು.
ವೈದ್ಯಕೀಯ ಪ್ರತಿಲೇಖನಕ್ರಿಯೆಯು ನೋಂದಣಿ ಅಥವಾ ದೃಢೀಕರಣಪತ್ರ ಹೊಂದಿಯೇ ಮಾಡಬೇಕೆಂಬ ನಿಯಮವಿರದಿದ್ದರೂ, ಕೆಲವು ಪ್ರತಿಲೇಕನಕ್ರಿಯಾ ನಿರತ ವ್ಯಕ್ತಿಗಳು ತಮ್ಮ ವೈಯುಕ್ತಿಕ ಅಥವಾ ವೃತ್ತಿಪರ ಕಾರಣಗಳಿಗಾಗಿ ನೋಂದಣಿ ಅಥವಾ ದೃಢೀಕರಣಪತ್ರವನ್ನು ಬಯಸಬಹುದು. ವೈದ್ಯಕೀಯ ಪ್ರತಿಲೇಖನಕ್ರಿಯಾ ತರಬೇತಿ ಶಿಬಿರಗಳಿಂದ ಅರ್ಹತಾಪತ್ರ ಪಡೆದ ಮಾತ್ರಕ್ಕೆ ವೈದ್ಯಕೀಯ ಪ್ರತಿಲೇಖನಕಾರನಿಗೆ ಸರ್ಟಿಫೈಡ್ ಮೆಡಿಕಲ್ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ (ದೃಢೀಕೃತ ವೈದ್ಯಕೀಯ ಪ್ರತಿಲೇಖನಕಾರ)(CMT) ಎಂಬ ಪಟ್ಟಿ ನೀಡಲಾಗದು. ಈ (CMT) ಯೋಗ್ಯತಾಪತ್ರವನ್ನು ಪಡೆಯಬೇಕಾದರೆ ಅಸೋಸಿಯೇಷನ್ ಫಾರ್ ಹೆಲ್ತ್ ಕೇರ್ ಡಾಕ್ಯುಮೆಂಟೇಷನ್ ಇಂಟೆಗ್ರಿಟಿ(AHDI) ಯವರು ನಡೆಸುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದುದು ಅವಶ್ಯಕ.ಇದಕ್ಕೂ ಹಿಂದೆ ಅಮೆರಿಕನ್ ಅಸೋಸಿಯೇಷನ್ ಫಾರ್ ಮೆಡಿಕಲ್ ಟ್ರ್ಯಾನ್ಸ್ ಕ್ರಿಪ್ಷನ್ (AAMT) ಎಮಬ ಹೆಸರನ್ನು ಹೊಂದಿದ್ದ ಈ ಸಂಸ್ಥೆಯು ಈ ಯೋಗ್ಯತಾಪತ್ರವನ್ನು ಒಂದು ಮಾನದಂಡವಾಗಿ ಜಾರಿಗೆ ತಂದಿತು. AHDI ರಿಜಿಸ್ಟರ್ಡ್ ಮೆಡಿಕಲ್ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ (RMT) ಎಂಬ ಯೋಗ್ಯತಾಪತ್ರವನ್ನೂ ನೀಡುತ್ತದೆ. AHDI ಪ್ರಕಾರ RMT ಯು ಪ್ರವೇಶ-ಮಟ್ಟದ ಯೋಗ್ಯತಾಪತ್ರವಾದರೆ CMT ಉನ್ನತ ಮಟ್ಟದ ಯೋಗ್ಯತಾಪತ್ರ. AHDI ಅಂಗೀಕೃತ ವೈದ್ಯಕೀಯ ಪ್ರತಿಲೇಕನಕ್ರಿಯಾ ಶಾಲೆ (ಅಪ್ರೋವ್ಡ್ ಮೆಡಿಕಲ್ ಟ್ರ್ಯಾನ್ಸ್ ಕ್ರಿಪ್ಷನ್ ಸ್ಕೂಲ್)ಗಳ ಪಟ್ಟಿಯನ್ನೇ ಹೊಂದಿದೆ.[೧]
ಔದ್ಯೋಗಿಕ ಕ್ಷೇತ್ರದಲ್ಲಿ ವೈದ್ಯಕೀಯ ಪ್ರತಿಲೇಖನಕ್ಕೆ ಯಾವ ತರಬೇತಿ ಕಾರ್ಯಕ್ರಮವು ಸೂಕ್ತ ಎಂಬುದರ ಬಗ್ಗೆ ಬಹಳ ದೊಡ್ಡ ಆಂತರಿಕ ಚರ್ಚೆಯೇ ನಡೆದಿದೆ.[೨] ಹೀಗಿದ್ದರೂ ಪ್ರತಿಲೇಖನಕಾರನು ಯಾವುದೇ ಆನ್ ಲೈನ್ ವೈದ್ಯಕೀಯ ಪ್ರತಿಲೇಖನಕ್ರಿಯೆಯ ಶಿಕ್ಷಣವನ್ನೇ ಪಡೆದಿರಲಿ, ಅಥವಾ ಕಾಲೇಜ್, ಹೈಸ್ಕೂಲ್, ಸಂಜೆ ಕಾಲೇಜು ಅಥವಾ ವೃತ್ತಿಕೇಂದ್ರದಲ್ಲೇ ತರಬೇತಿ ಪಡೆದಿರಲಿ, ವಿಷಯದ ಬಗ್ಗೆ ಜ್ಞಾನಿಯಾದ MT ಬಹಳ ಅಮೂಲ್ವನೆಂದು ಪರಿಗಣಿಸಲ್ಪಡುತ್ತಾನೆ.AHDIನವರ ಯೊಗ್ಯತಾಪತ್ರಗಳಿಗೆ ಬದಲಾಗಿ ಸತತವಾಗಿ ಮತ್ತು ನಿಖರವಾಗಿ ವಿಧವಿಧವಾದ ದಸ್ತಾವೆಜು-ಕ್ರಮಗಳನ್ನು ಪ್ರತಿಲೇಖಿಸುವ ಮತ್ತು ಒಂದು ನಿರ್ದಿಷ್ಟ ಹಿಂತಿರುಗಿಸುವ ವೇಳೆ(ರೀಸನೆಬಲ್ ಟರ್ನರೌಂಡ್ ಟೈಮ್ -(TAT))ಯಲ್ಲಿ ವರದಿಗಳನ್ನು ಹಿಂದಿರುಗಿಸುವ ಪ್ರತಿಲೇಖನಕಾರರಿಗೆ ಬಹಳ ಬೇಡಿಕೆಯಿದೆ. ಸರ್ವೀಸ್ ಕೊಡಮಾಡುವವರು ಅಥವಾ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಹಮ್ಮಿಕೊಳ್ಳುವ (TAT) ಯುಕ್ತವಾಗಿರಬೇಕು ಮತ್ತು ರೋಗಿಗೆ ಬೇಕಾದ ಸಮಯದೊಳಗೆ ದಸ್ತಾವೇಜನ್ನು ಆ ಜಾಗಕ್ಕೆ ಹಿಂದಿರುಗಿಸಲು ಆಗುವಷ್ಟಾಗಬೇಕು.
ಮಾರ್ಚ್ 7, 2006ರಂದು ಪ್ರತಿಲೇಕನಕ್ರಿಯೆಯು ಒಂದು ಉದ್ಯೋಗವೆಂದು ಪರಿಗಣಿಸಲಾಗಿ, U.S. ಡಿಪಾರ್ಟ್ ಮೆಂಟ್ ಆಫ್ ಲೇಬರ್ (ಅಮೆರಿಕದ ಕಾರ್ಮಿಕ ಇಲಾಖೆ) ಎರಡು ವರ್ಷಗಳ ಅವಧಿಯ ವೃತ್ತಿಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ತೀವ್ರ ನಿಗಾ ಸೌಲಭ್ಯ(ಆಸ್ಪತ್ರೆ) ಉದ್ಯೋಗದಡಿಯಲ್ಲಿ ಕಲ್ಪಿಸಿತು. ಮೇ 2004ರಲ್ಲಿ ವೆರ್ಮಾಂಟ್ ನ ನಿವಾಸಿಗಳಿಗಾಗಿ 737 ಅರ್ಜಿದಾರರಿಂದ ಕೂಡಿದ, 20 ತರಗತಿಗಳಲ್ಲಿ ಹಮ್ಮಿಕೊಂಡ ಒಂದು ಪ್ರಾಯೋಗಿಕ ಕಾರ್ಯಕ್ರಮವು ಯೋಜಿತವಾಯಿತು. ಆ ಅರ್ಜಿದಾರರನ್ನು ಕಡಿಮೆ ಅವಧಿಯಲ್ಲೇ ವೈದ್ಯಕೀಯ ಪ್ರತಿಲೇಖಕರನ್ನಾಗಿಸುವುದೇ ಆ ತರಬೇತಿ ಯೋಜನೆಯ ಗುರಿಯಾಗಿತ್ತು. (ಫೆಡೆರಲ್ ಸರ್ಕಾರ, ಆರೋಗ್ಯ ಮತ್ತು ಮಾನವ ಸೇವಾ ಆಯೋಗಗಳು (ಹೆಲ್ತ್ ಎಂಡ್ ಹ್ಯೂಮನ್ ಸರ್ವೀಸ್ ಕಮಿಷನ್) ಜಾರಿಗೆ ತಂದ ಪ್ರಾಯೋಗಿಕ ಕಾರ್ಯಕ್ರಮ ವೆರ್ಮಾಂಟ್ HITECH ಅನ್ನು ಓದಿ)
ಅವಶ್ಯಕವಾದ ವಿದ್ಯಾರ್ಹತೆ, ಕೌಶಲ ಮತ್ತು ಸಾಮರ್ಥ್ಯಗಳು
[ಬದಲಾಯಿಸಿ]ಉದ್ಯೋಗ ಮಾಡಬೇಕಾದ ಸ್ಥಳ(ವೈದ್ಯರ ಬಳಿ ಅಥವಾ ಒಂದು ಆಸ್ಪತ್ರೆಯ ಸೌಕರ್ಯಗಳಡಿ)ದ ಅಗತ್ಯತೆಗಳನ್ನು ಆಧರಿಸಿ, ಪ್ರತಿಲೇಖನಕಾರನ ಕರ್ತವ್ಯಗಳು, ಹಾಗೂ ಜವಾಬ್ದಾರಿಗಳನ್ನು ನಿಭಾಯಿಸಲು ಇರುವ ಅನುಭವಗಳೆಂದರೆ;
- ವ್ಯೆದ್ಯಕೀಯ ಪಾರಿಭಾಷಿಕ ಪದಗಳ ಅರಿವು.
- ಸಾಮಾನ್ಯಕ್ಕಿಂತಲೂ ಉತ್ತಮವಾದ ಸ್ಪೆಲಿಂಗ್, ವ್ಯಾಕರಣ, ಸಂಭಾಷಣ ಕೌಶಲಮತ್ತು ಸ್ಮರಣಶಕ್ತಿ.
- ಅಂಕಿಗಳನ್ನು ವಿಂಗಡಿಸಿ, ಪರಿಕಿಸಿ, ಎಣಿಸುವುದರಲ್ಲಿ ನಿಖರತೆ.
- ಕಚೇರಿಯ ಮೂಲಬೂತ ಉಪಕರಣಗಳು/ಕಂಪ್ಯೂಟರ್ ಬಳಸಲು ಮತ್ತು ಅದನ್ನುಪಯೋಗಿಸಿ ಕಾರ್ಯವೆಸಗಲು ಇರಬೇಕಾದ ಜಾಣ್ಮೆ; ಕಣ್ಣು/ಕೈ/ಕಾಲುಗಳ ಏಕಕಾಲಿಕ ಪರಸ್ಪರಸಂಬಮಧಿ ವಾಲನ ಸಾಮರ್ಥ್ಯ.
- ಹೇಳಿದ ಮತ್ತು ಬರಹರೂಪದ ಆದೇಶಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ.
- ದಾಖಲೆಗಳನ್ನು ಸಂರಕ್ಷಿಸುವ ವಿಧಗಳ ಜ್ಞಾನ ಅಥವಾ ಸಾಮರ್ಥ್ಯ.
- ಒಳ್ಳೆಯ ಅಥವಾ ಉತ್ತಮವಾದ ಟೈಪಿಂಗ್ ಪರಿಣತಿ.
ಅಗತ್ಯವಾದ MT ತಿಳುವಳಿಕೆ, ಕುಶಲತೆ ಮತ್ತು ಸಾಮರ್ಥ್ಯಗಳು
[ಬದಲಾಯಿಸಿ]- ಮೂಲ ಮತ್ತು ಮುಂದುವರಿದ (ಆಧುನಿಕ) ವೈದ್ಯಕೀಯ ಪಾರಿಭಾಷಿಕ ಪದಗಳ ಜ್ಞಾನವು ಅವಶ್ಯಕ.
- ದೇಹರಚನೆ ಮತ್ತು ಶರೀರಶಾಸ್ತ್ರದ ಪರಿಚಯವಿರಬೇಕು.
- ರೋಗಲಕ್ಷಣಗಳ ಬಗ್ಗೆ ಅರಿವು.
- ವೈದ್ಯಕೀಯ ಶೈಲಿ ಮತ್ತು ತತ್ಸಂಬಂಧಿತ ವ್ಯಾಕರಣಜ್ಞಾನ.
- ಸಾಮಾನ್ಯ ಮಾತುಕತೆಯ, ಸಂಭಾಷಣೆಯ ಚತುರತೆ.
- ಮಾಮೂಲಿಗಿಂತಲೂ ಉತ್ತಮ ಸ್ಮರಣಶಕ್ತಿ.
- ಅಂಕಿಗಳನ್ನು ವಿಂಗಡಿಸಿ, ಪರಿಕಿಸಿ, ಎಣಿಸಿ, ದೃಢಪಡಿಸಿಕೊಳ್ಳುವುದರಲ್ಲಿ ನಿಖರತೆ.
- ಕಚೇರಿಯ ಮೂಲಬೂತ ಉಪಕರಣಗಳು/ಕಂಪ್ಯೂಟರ್ ಬಳಸಲು ಮತ್ತು ಅದನ್ನುಪಯೋಗಿಸಿ ಕಾರ್ಯವೆಸಗಲು ಇರಬೇಕಾದ ಜಾಣ್ಮೆಯ ಪ್ರದರ್ಶನ.
- ಹೇಳಿದ ಮತ್ತು ಬರಹರೂಪದ ಆದೇಶಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ.
- ದಾಖಲೆಗಳನ್ನು ಸಂರಕ್ಷಿಸುವ ವಿಧಗಳ ಜ್ಞಾನ ಅಥವಾ ಸಾಮರ್ಥ್ಯ.
- ಒಳ್ಳೆಯ ಅಥವಾ ಉತ್ತಮವಾದ ಟೈಪಿಂಗ್ ಪರಿಣತಿ.
- (ತರಬೇತಿಯಿಂದ ನಿಜವಾದ ವರದಿಕಾರ್ಯದವರೆಗೂ)4 ಮೂಲ ಕಾರ್ಯರೂಪಗಳಲ್ಲೂ ಪ್ರತಿಲೇಖನಕ್ರಿಯೆ ಕೈಗೊಳ್ಳುವ ತಿಳುವಳಿಕೆ ಮತ್ತು ಅನಭವ.
- ವ್ಯಾಕರಣಜ್ಞಾನ ಮತ್ತು ಅದರ ಸೂಕ್ತ ಆಳವಡಿಕೆ.
- ಪದಸಂಚಯದಲ್ಲಿ ಬರಬೇಕಾದ ಕಾಮಾ, ಫುಲ್ ಸ್ಟಾಪ್ ಇತ್ಯಾದಿ ಚಿಹ್ನೆಗಳ ಬಗ್ಗೆ ಅರಿವು, ಯಾವ ಪದದ ಮೊದಲಕ್ಷರ ದೊಡ್ಡಕ್ಷರವಾಗಿರಬೇಕೆಂಬ ತಿಳುವಳಿಕೆ.
- ವಿವಿಧ ವರದಿಕ್ರಮಗಳಲ್ಲಿ ಮತ್ತು ವಿವಿಧ ವಿಶೇಷತೆಗಳಲ್ಲಿ ಪ್ರತಿಲೇಖನಕ್ರಿಯೆಯನ್ನು ಮಾಡಿಕೊಟ್ಟಿರುವುದರ ಪ್ರಕಟರೂಪ.
ಕರ್ತವ್ಯಗಳು ಮತ್ತು ಜವಾಬ್ದಾರಿಗಳು.
[ಬದಲಾಯಿಸಿ]- ಇಂತಹ ಕಡತ ಇಂತಹ ರೋಗಿಯದೇ ಎಂದು ಗುರುತಿಸಲು ಬೇಕಾದ ಮಾಹಿತಿಗಳಾದ ರೋಗಿಯ ಹೆಸರು, ವೈದ್ಯಕೀಯ ಇತಿಹಾಸ ಮತ್ತು ಸೋಷಿಯಲ್ ಸೆಕ್ಯೂರಿಟಿ ಸಂಖ್ಯೆಯನ್ನು ಸರಿಯಾಗಿ ಪ್ರತಿಲೇಖನಗೊಳಿಸುವುದು.
- ಪದಸಂಚಯದಲ್ಲಿ ಬರಬೇಕಾದ ಕಾಮಾ, ಫುಲ್ ಸ್ಟಾಪ್ ಇತ್ಯಾದಿ ಚಿಹ್ನೆಗಳನ್ನೂ, ಯಾವ ಪದದ ಮೊದಲಕ್ಷರ ದೊಡ್ಡಕ್ಷರವಾಗಿರಬೇಕೆಂಬುದನ್ನೂ ನೋಡಿಕೊಂಡು, ಬೇಕಿದ್ದೆಡೆ ಅದನ್ನು ತಿದ್ದಿ ಪ್ರತಿಲೇಖನ ಸಿದ್ಧಗೊಳಿಸುವುದು.
- ವೈದ್ಯಕೀಯ ವಿಧಿವಿಧಾನಗಳು ಮತ್ತು ಪಾರಿಭಾಷಿಕ ಪದಗಳ ಅನ್ವಯದ ಬಗ್ಗೆ ವಿಚಾರಿಸುವ/ ಅಂತಹ ಅರ್ಥಗಳನ್ನು ಸಂಗ್ರಹಿಸುವ ಗುಣವಿರಬೇಕು.
- ಪ್ರತಿಲೇಖನಕ್ರಿಯೆಯ ದಾಖಲೆಗಳ ಪಟ್ಟಿಯನ್ನು ಹೊಂದಿರಬೇಕು.
- ವಿದೇಶಿ MTಗಳು ದಾಖಲೆಗಳನ್ನು ವಿಂಗಡಿಸಿಮ ನಕಲಿಸಿ, ತಯಾರಿಸಿ, ಒಗ್ಗೂಡಿಸಿ, ಆಂತಹ ದಾಖಲೆಗಳನ್ನು ಮತ್ತು ಪಟ್ಟಿಗಳನ್ನು (ಟಾರ್ಟ್ ಗಳನ್ನು) ಶೇಖರಿಸಿಡಬಹುದು.(ಅಮೆರಿಕದ ಆಸ್ಪತ್ರೆಗಳಲ್ಲಿ ದಾಖಲೆಗಳನ್ನು ಮತ್ತು ಪಟ್ಟಿಗಳನ್ನು ಶೇಖರಿಸಿಡಲು ವೈದ್ಯಕೀಯ ದಾಖಲಾತಿ ತಂತ್ರಜ್ಞರನ್ನು ಸಾಮಾನ್ಯವಾಗಿ ನೇಮಿಸುತ್ತಾರೆ ಅಥವಾ ವೈದ್ಯರ ಕಚೇರಿಗಳಲ್ಲಿರುವ ಅವರ ಕಾರ್ಯದರ್ಶಿಗಳೇ ಆ ಕಾರ್ಯ ನಿರ್ವಹಿಸುತ್ತಾರೆ)
- ಪ್ರತಿಲೇಖನಗೊಂಡ ವರದಿಗಳನ್ನು ವಿತರಿಸುವ ಮತ್ತು ಉಕ್ತಲೇಖನಗಳ ಟೇಪ್ ಗಳನ್ನು ಸಂಗ್ರಹಿಸುವ ಕಾರ್ಯವೆಸಗಬೇಕು.
- ವೈದ್ಯರು ಇತ್ತ ಉಕ್ತಲೇಖನದಲ್ಲಿ ಏನಾದರೂ ಊನವಾಗಿದ್ದರೆ ಅದನ್ನು ಡರಿಪಡಿಸಲು, ವೈದ್ಯರು ವಿಳಂಬಿತವಾಗಿತ್ತ ಉಕ್ತಲೇಖನಗಳನ್ನು ಪಡೆಯುವುದು ಮತ್ತು ಅವುಗಳ ಪ್ರತಿಲೇಖನಗೊಂಡ ವರದಿಗಳನ್ನು ಪ್ರಿಂಟ್ ಮಾಡಿಯೋ, ಎಲೆಕ್ಟ್ರಾನಿಕ್ ಮಾರ್ಗದಲ್ಲೋ ಸಮಯಕ್ಕೆ ಸರಿಯಾಗಿ ಹಿಂದಿರುಗಿಸಬೇಕು.(ಅಮೆರಿಕದಲ್ಲಿ ಈ ಕೆಲಸಗಳನ್ನು ಪ್ರತಿಲೇಖನಕಾರರ ನಿರೀಕ್ಷಕನು ಮಾಡುತ್ತಾನೆ).
- ಗುಣಮಟ್ಟ ಖಾತ್ರಿಮಾಡಿಕೊಳ್ಳುವ ಮಾನದಂಡಗಳನ್ನು ಬಳಸಬೇಕು.
- ಡಿಸ್ಕ್ ಮತ್ತು ಡಿಸ್ಕ್ ಬ್ಯಾಕಪ್ ಪದ್ಧತಿಯನ್ನು ಉಳಿಸಿಕೊಳ್ಳಬಹುದು.(ಅಮೆರಿಕದಲ್ಲಿ ಈ ಕೆಲಸಗಳನ್ನು ಪ್ರತಿಲೇಖನಕಾರರ ನಿರೀಕ್ಷಕನು ಮಾಡುತ್ತಾನೆ).
- ಸರಬರಾಜು ಮತ್ತು ವರದಿ ಉಪಕರಣಗಳ ಕಾರ್ಯಕ್ಷಮತೆಯಲ್ಲಿ ಏರುಪೇರುಗಳಾದಾಗ ಅದಕ್ಕೆ ಬೇಕಾದ ಪರಿಕರಗಳನ್ನು ತರಿಸಿಕೊಳ್ಳಬಹುದು.(ಅಮೆರಿಕದಲ್ಲಿ ಈ ಕೆಲಸಗಳನ್ನು ಸಾಮಾನ್ಯವಾಗಿ
ಆ ಘಟಕದ ಕಾರ್ಯದರ್ಶಿಗಳೋ, ಕಚೇರಿಯ ಕಾರ್ಯದರ್ಶಿಗಳೋ ಅಥವಾ ತಾಂತ್ರಿಕ ಬೆಂಬಲ ನೀಡುವ ಸಿಬ್ಬಂದಿಯೋ ನೆರವೇರಿಸುತ್ತಾರೆ).
- ದತ್ತ ಅಂಕಿ ಅಂಶಗಳ ಅಧಾರದ ಮೇಲೆ ವರದಿಯನ್ನು ಸೂಕ್ತ ರೀತಿಯಲ್ಲಿ ತಯಾರಿಸುವುದು, ಸಂಗ್ರಹಿಸುವುದು, ಪಟ್ಟಿಮಾಡುವುದು (ಅಮೆರಿಕದಲ್ಲಿ ಈ ಕೆಲಸಗಳನ್ನು ಪ್ರತಿಲೇಖನಕಾರರ ನಿರೀಕ್ಷಕನು ಮಾಡುತ್ತಾನೆ).
ವೈದ್ಯಕೀಯ ಪ್ರತಿಲೇಖನಕ್ರಿಯಾ ವಿಧಿ
[ಬದಲಾಯಿಸಿ]ರೋಗಿಯು ವೈದ್ಯನ ಬಳಿ ಬಂದಾಗ, ವೈದ್ಯನು ಆತನೊಡನೆ ಕೊಂಚ ಸಮಯ ಕಳೆದು, ಅವನ ಆರೋಗ್ಯದ ವಿಚಾರದಲ್ಲಿನ ತೊಮದರೆಗಳನ್ನು ಚರ್ಚಿಸಿ, ರೋಗಿಯ ಹಿಂದಿನ ವೈದ್ಯಕೀಯ ಸಂಬಂಧಿತ ಇತಿಹಾಸವನ್ನು ಮತ್ತು/ಅಥವಾ ತೊಂದರೆಗಳನ್ನು ತಿಳಿಯುತ್ತಾನೆ. ವೈದ್ಯನು ರೋಗಿಯ ಶಾರೀರಿಕ ತಪಾಸಣೆಗಳನ್ನು ಮಢಿವಿದಲ್ಲದೆ ರೋಗಲಕ್ಷಣಗಳನ್ನು ಆಮೂಲಾಗ್ರವಾಗಿ ಅರಿಯುವ ಸಲುವಾಗಿ ಪ್ರಯೋಗಶಾಲೆಗಳ ಸಹಾಯವನ್ನೂ ಪಡೆಯಬಹುದು. ಹೀಗೆ ಪ್ರಯೋಗಾಲಯದಿಂದ ದೊರೆತ ಮಾಹಿತಿ ಹಾಗೂ ತನ್ನದೇ ಪರೀಕ್ಷೆಗಳನ್ನು ಕೈಗೊಂಡ ನಂತರ ಯಾವ ರೀತಿಯ ಚಿಕಿತ್ಸಾವಿಧಾನವನ್ನು ಕೈಗೊಳ್ಳಬೇಕೆಂದು ನಿರ್ಧರಿಸಿ ಅದನ್ನು ರೋಗಿಯೊಂದಿಗೆ ಚರ್ಚಿಸಿ, ವಿವರಿಸಿ, ಸೂಕ್ತ ಮಾರ್ಗದರ್ಶನ ನೀಡುತ್ತಾನೆ. ರೋಗಿಯು ತನ್ನ ಕೊಠಡಿಯಿಂದ ಹೊರಹೋದ ನಂತರ ವೈದ್ಯನು ಒಂದು ಧ್ವನಿಮುದ್ರಕ ಸಾಧನದಲ್ಲಿ ರೋಗಿಯೊಡನೆ ನಡೆದ ಭೇಟಿಯ ಅಗತ್ಯ ವಿವರಗಳನ್ನು ಮಾತಿನ ಮುಖೇನ ರೆಕಾರ್ಡ್ ಮಾಡುತ್ತಾನೆ. ಈ ಮಾಹಿತಿಯನ್ನು ಕೈಯಲ್ಲಿ ಹಿಡಿದುಕೊಳ್ಳಲು ಸಾಧ್ಯವಾದ ಕ್ಯಾಸೆಟ್ ರೆಕಾರ್ಡರ್ ನಲ್ಲೋ, ಅಥವಾ, ಆಸ್ಪತ್ರೆಯಲ್ಲಿಯೋ ಅಥವಾ ಪ್ರತಿಲೇಖನಕಾರ್ಯಾಲಯದಲ್ಲಿಯೋ ಇರಿಸಿರುವಂತಹ ಸರ್ವರ್ ಗೆ ಸಂಪರ್ಕವಿರುವಂತಹ ದೂರವಾಣಿಯಲ್ಲಿ ನೇರವಾಗಿ ಮಾತನಾಡುವುದರ ಮೂಲಕವೋ ರೆಕಾರ್ಡ್ ಮಾಡಲಾಗುವುದಾಗಿ, ಹಾಗೆ ರೆಕಾರ್ಡ್ ಮಾಡಲ್ಪಟ್ಟ ರೆಕಾರ್ಡನ್ನು ಆ ಸರ್ವರ್ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಗಾಗಿ ಹಿಡಿದಿಟ್ಟುಕೊಂಡಿರುತ್ತದೆ. ಈ ವರದಿಯನ್ನು ನಂತರ ವೈದ್ಯಕೀಯ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ನು ಧ್ವನಿ-ಕಡತದ ರೂಪದಲ್ಲೋ ಅಥವಾ ಕ್ಯಾಸೆಟ್ ರೆಕಾರ್ಡಿಂಗ್ ನ ರೂಪದಲ್ಲೋ ಪಡೆದುಕೊಂಡು, ಅದರಲ್ಲಿನ ಉಕ್ತಲೇಖನವನ್ನು ಆಲಿಸಿ, ಪ್ರತಿಲೇಖನವನ್ನು ವೈದ್ಯಕೀಯ ದಾಖಲಾತಿಗೆ ಬೇಕಾದ ಕ್ರಮದಲ್ಲಿ ತಯಾರಿಸುತ್ತಾನೆ ಹಾಗೂ ಹೀಗೆ ತಯಾರಿಸಲ್ಪಟ್ಟ ಪ್ರತಿಲೇಖನವು ಕಾನೂನು ರೀತ್ಯಾ ದಸ್ತಾವೇಜೆಂದು ಅಂಗೀಕರಿಸಲಾಗುತ್ತದೆ. ಮುಂದಿನ ಬಾರಿ ರೋಗಿಯು ವೈದ್ಯನಲ್ಲಿಗೆ ಬಂದಾಗ ವೈದ್ಯನು ಈ ವೈದ್ಯಕೀಯ ದಾಖಲೆಗಳನ್ನು ಆಥವಾ ರೋಗಿಯ ಇಡೀ ಚಾರ್ಟನ್ನೇ (ಚಾರ್ಟ್ ನಲ್ಲಿ ರೋಗಿಯ ಹಿಂದಿನ ಎಲ್ಲಾ ಭೇಟಿಗಳ ದಾಖಲಾತಿ ಇರುತ್ತದೆ)ಬರಮಾಡಿಕೊಳ್ಳುತ್ತಾನೆ. ಒಮ್ಮೊಮ್ಮೆ ವೈದ್ಯನು ರೋಗಿಗೆ ನೀಡಬೇಕಾದ ಔಷಧಿಗಳನ್ನು ಈ ವರದಿಗಳ ಆಧಾರದ ಮೇಲೆಯೇ ನಿಡಬಹುದಾದರೂ, ರೋಗಿಯಲ್ಲಿನ ರೋಗದ ಚಿಹ್ನೆಗಳ ಬದಲಾವನೆಗಳು ಸಾಧ್ಯವಿರುವುದರಿಂದ ರೋಗಿಯನ್ನು ಕಂಡನಂತರವೇ ಔಷಧ, ಚಿಕಿತ್ಸೆ ನೀಡಲು ವೈದ್ಯನು ಸಾಮಾನ್ಯವಾಗಿ ಬಯಸುತ್ತಾನೆ.
ಸೂಕ್ತವಾಗಿ ರಚಿಸಲ್ಪಟ್ಟ, ತಪ್ಪುಗಳನ್ನ್ನು ತಿದ್ದಿದಂತಹ, ಮತ್ತು ಪುನಃ ಪರಿಶೀಲಿಲ್ಪಟ್ಟ ವೈದ್ಯಕೀಯ ಪ್ರತಿಲೇಖನಗಳನ್ನು ಹೊಂದುವುದು ಬಹಳ ಮುಖ್ಯ. ವೈದ್ಯಕೀಯ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಅಕಸ್ಮಾತ್ ಔಷಧಿಯ ಹೆಸರನ್ನು ತಪ್ಪಾಗಿ ಬರೆದುಬಿಟ್ಟರೆ ಅಥವಾ ರೋಗಲಕ್ಷಣಗಳನ್ನು ತಪ್ಪಾಗಿ ನಮೂದಿಸಿಬಿಟ್ಟರೆ ಹಾಗೂ ವೈದ್ಯನೋ (ಅಥವಾ ಅವನಿಂದ ನಿಯಮಿಸಲ್ಪಟ್ಟವನೋ) ಆ ವರದಿಯು ಸರಿಯಿದೆಯೋ ಇಲ್ಲವೋ ಎಂದು ಪರಿಶೀಲಿಸದಿದ್ದಲ್ಲಿ, ರೋಗಿಗೆ ಅಪಾಯ ಒದಗಬಹುದು. ಪ್ರತಿಲೇಖಿತ ಬರಹವು ಕರಾರುವಾಕ್ಕಾಗಿದೆ ಮತ್ತು ಸೂಕ್ತವಾಗಿದೆ ಎಂಬುದನ್ನು ಖಾತ್ರಪಡಿಸಿಕೊಳ್ಳುವಲ್ಲಿ ವೈದ್ಯ ಮತ್ತು ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಇಬ್ಬರದೂ ಪ್ರಮುಖ ಪಾತ್ರವಾಗಿರುತ್ತದೆ. ಔಷಧಗಳ ವಿಷಯದ ಉಕ್ತಲೇಖನ ನೀಡುವಾಗಲಾಗಲೀ, ಖಾಯಿಲೆಯ ಸ್ವರೂಪ ಮತ್ತು ಅದರ ವಿವರಗಳನ್ನು ನೀಡುವಾಗಲಾಗಲೀವೈದ್ಯನು ನಿಧಾನವಾಗಿ ಹಾಗೂ ನಿರ್ದಿಷ್ಟವಾಗಿ ಮಾತನಾಡಬೇಕು ಮತ್ತು ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಒಳ್ಳೆಯ ಶ್ರವಣಶಕ್ತಿ, ವೈದ್ಯಕೀಯದ ಅರಿವು, ಓದಿದುದನ್ನು ಉತ್ತಮವಾಗಿ ಗ್ರಹಿಸುವ ಸಾಮರ್ಥ್ಯ ಹೊಂದಿರಬೇಕಲ್ಲದೆ ಸಂಶಯ ಬಂದರೆ ಉಲ್ಲೇಖಗಳ ಸತ್ಯಾಸತ್ಯತೆಯನ್ನೂ ಪರಿಶೀಲಿಸಬೇಕು.
ಆದರೆ ಕೆಲವು ವೈದ್ಯರು ತಮ್ಮ ಪ್ರತಿಲೇಖನಗೊಂಡ ವರದಿಗಳನ್ನು ಸರಿಯಿದೆಯೋ ಇಲ್ಲವೋ ಎಂದು ಪರೀಕ್ಷಿಸುವುದಿಲ್ಲ ಮತ್ತು ಅಂತಹ ಸಂದರ್ಭದಲ್ಲಿ ಕಂಪ್ಯೂಟರ್ "ಉಕ್ತಲೇಖನವಾದುದು ಅದರೆ ಓದಿಲ್ಲ" ಎಂಬ ಒಂದು ಅಡಿಟಿಪ್ಪಣಿಯೊಂದಿಗೆ ಒಂದು ಎಲೆಕ್ಟ್ರಾನಿಕ್ ರುಜು ನೀಡುತ್ತದೆ. ಈ ಎಲೆಕ್ಟ್ರಾನಿಕ್ ರುಜುವನ್ನು ಕಾನೂನು ಅಂಗೀಕರಿಸುತ್ತದೆ. ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಪ್ರತಿಲೇಖನಕ್ರಿಯೆಯನ್ನು ಅಕ್ಷರಶಃ (ಹೇಗೆ ಹೇಳಲ್ಪಟ್ಟಿದೆಯೋ ಹಾಗೆ) ಮಾಡುವುದು ಮತ್ತು ಅದರಲ್ಲಿ ಯಾವುದೇ ಬದಲಾವಣೆ ತರದಿರುವುದು ಸರಿಯಾದರೂ, ವರದಿಯಲ್ಲಿ ಲೋಪದೋಷಗಳೇನಾದರೂ ಕಂಡುಬಂದಲ್ಲಿ ಅದಕ್ಕೆ ಅಂಕಿತ ಹಾಕುವ ಹಕ್ಕು ಆತನಿಗಿದೆ. ಕೆಲವು ಬಾರಿ ವೈದೈರು ಸರಿಯಾಗಿ ಮಾತನಾಡುವುದಿಲ್ಲ ಅಥವಾ ಧ್ವನಿ-ಕಡತಗಳು ಕೆಟ್ಟುಹೋಗಿರುತ್ತವೆ. ಕೆಲವು ವೈದ್ಯರು, ದುರಾದೃಷ್ಟವಶಾತ್, ಸಮಯಾಭಾವದಿಂದ ತಮ್ಮ ವರದಿಗಳನ್ನು ಬಹಳ ಬೇಗ ಹೇಳಬೇಕಾಗುತ್ತದೆ (ER ವರದಿಗಳಲ್ಲಿ ಆಗುವಂತೆ. ಅಲ್ಲದೆ MT ಯು ಎಷ್ಟೋ ರಾಜ್ಯಗಳ ಮತ್ತು ದೇಶಗಳ ಜನರ ಭಾಷಾಛಾಯೆ (accent) ಮತ್ತು ತಪ್ಪು ಉಚ್ಚಾರಣೆಗಳನ್ನೂ ಗುರುತಿಸಬೇಕಾಗುತ್ತದೆ. ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ನ ಕೆಲಸದ ಅವಿಭಾಜ್ಯ ಅಂಗವಾಗಿ, ಕ್ಲಿಷ್ಟ ಹಾಗೂ ಸಂಕೀರ್ಣ ವೈದೈಕೀಯ ಪದಗಳ ಮತ್ತು ಔಷಧಗಳ ಹೆಸರಿನ ಸರಿಯಾದ ಸ್ಪೆಲಿಂಗ್ ಪರಿಶೀಲಿಸುವುದು, ಔಷಧ ನೀಡಬೇಕಾದ ಮೊತ್ತದಲ್ಲಿನ ಏರುಪೇರುಗಳಿದ್ದರೆ ಗಮನಿಸುವುದು ಮತ್ತು ಉಕ್ತಲೇಖನದ ದೋಷಗಳನ್ನು ಸರಿಪಡಿಸುವುದು, ಇರುತ್ತಿದ್ದು,ಎಲ್ಲಿಯಾದರೂ ಸಂಶಯ ಉದ್ಭವಿಸಿದಾಗ ಅ ವರದಿಯನ್ನು "ಫ್ಲ್ಯಾಗ್" ಮಾಡಬೇಕು.(ವರದಿಗೆ ಅಂಕಿತ ತೊಡಿಸಬೇಕು) ಹೀಗೆ "ಫ್ಲ್ಯಾಗ್" ಮಾಡಲ್ಪಟ್ಟ ವರದಿಯ ಮೇಲೆ, ಉಕ್ತಲೇಖನಕಾರ ಅಥವಾ ಅವನಿಂದ ನೇಮಿಸಲ್ಪಟ್ಟವನು, ಆ ವರದಿಯು ಹಿಂದಿರುಗಿಸಲ್ಪಟ್ಟಾಗ, ಒಂದು ಖಾಲಿ ಜಾಗದ ಅಂಕಿತವನ್ನು ಹಾಕಿದನಂತರವೇ ಆ ವರದಿಯು ಪೂರ್ಣಗೊಂಡಿತೆಂದು ನಿರ್ಧರಿತವಾಗುತ್ತದೆ. ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಗಳಿಗೆ ವರದಿಗಳಲ್ಲಿ "ಏನೋ ಒಂದನ್ನು ಬರೆದು ಹಾಕುವುದು" ಅಥವಾ ಊಹೆಯ ಮೇಲೆ ಪದಗಳನ್ನು ತುಂಬುವುದಕ್ಕೆ ಎಂದೆಂದಿಗೂ ಪರವಾನಗಿ ಇಲ್ಲ. ಅಲ್ಲದೆ, ಔಷಧಗಳು ಸದಾ ಬದಲಾಗುತ್ತಲೇ ಇರುತ್ತವೆ. ಹೊಸ ಉಪಕರಣಗಳು, ಹೊಸ ಸಾಧನಗಳು,ಮತ್ತು ಹೊಸ ಔಷಧಿಗಳು ದಿನವೂ ಮಾರುಕಟ್ಟೆಗೆ ಬರುತ್ತಿರುತ್ತವೆಯಾದ್ದರಿಮದ ವೈದೈಕೀಯ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಈ ಎಲ್ಲಾ ಹೊಸ ವಿಷಯಗಳ ಬಗ್ಗೆಯೂ ಅರಿವನ್ನು ಬೆಳೆಸಿಕೊಳ್ಳುವುದಲ್ಲದೆ ಅವುಗಳ ಹೆಸರುಗಳನ್ನೂ ತಿಳಿದುಕೊಳ್ಳಬೇಕಾಗುತ್ತದೆ. MT ಗೆ ಅಂದಿನವರೆಗಿನ ಪದಗಳ ಅರ್ಥ ಕೊಡುವಂತಹ ಪುಸ್ತಕಗಳ ಮತ್ತು ಅಲ್ಲಿನವರೆಗೆ ವೈದ್ಯಕೀಯದ ಬಾಷೆ, ಹೆಸರುಗಳ ಹರಹನ್ನು ಹೊಂದಿದ ಪುಸ್ತಕಗಳ ಗ್ರಂಥಾಲಯವೊಂದು ತನ್ನ ಅಳವಿನಲ್ಲಿರಬೇಕು ಅಥವಾ ತನ್ನ ಕಂಪ್ಯೂಟರ್ ನ 'ಮೆಮೋರಿ'ಯಲ್ಲಿ ಅಂತಹವನ್ನು ಆತನು ದಾಖಲಿಸಿರಬೇಕು.ಹೀಗಿದ್ದಾಗ ಮಾತ್ರ ಆತನು ಸರಿಯಾದ ಹೆಸರಿನ ಸಾಧನ, ಉಪಕರಣಗಳನ್ನು ಉಲ್ಲೇಖಿಸಲು ಸಾಧ್ಯ.
ವೈದ್ಯಕೀಯ ಪ್ರತಿಲೇಖನಕ್ರಿಯೆಯ ಹೊರಗುತ್ತಿಗೆ ನೀಡುವಿಕೆ (ಔಟ್ ಸೋರ್ಸಿಂಗ್)
[ಬದಲಾಯಿಸಿ]ವೈದ್ಯಕೀಯ ದಾಖಲೆಗಳನ್ನು ಬರೆಯಲು ದಿನೇ ದಿನೇ ಬೇಡಿಕೆ ಹೆಚ್ಚುತ್ತಿರುವುದರಿಂದ ದೇಶಗಳು ಈ ಪ್ರತಿಲೇಖನಕಾರ್ಯವನ್ನು ಹೊರಗುತ್ತಿಗೆಯ ಮೂಲಕ ಮಾಡಿಸಿಕೊಳ್ಳುವುದು ಆರಂಭವಾಯಿತು. ಯುನೈಟೆಡ್ ಸ್ಟೇಟ್ಸ್ ನಲ್ಲಿ ವೈದ್ಯಕೀಯ ಪ್ರತಿಲೇಖನ ವಹಿವಾಟು ವರ್ಷಕ್ಕೆ ಸುಮಾರು US$10 ರಿಂದ $25 ಬಿಲಿಯನ್ ಇದ್ದು, ಪ್ರತಿ ವರ್ಷ ೧೫ ಪ್ರತಿಶತ ಏರುತ್ತಲೇ ಸಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ಔಟ್ ಸೋರ್ಸಿಂಗ್ (ಹೊರಗುತ್ತಿಗೆ)ನ ಮೂಲ ಉದ್ದೇಶವು ಅದರಿಂದ ದೊರೆಯುವ ಆರ್ಥಿಕ ಅನುಕೂಲ; ಪ್ರಗತಿಪರ ರಾಷ್ಟ್ರಗಳಲ್ಲಿ ನೌಕರರು ಕಡಿಮೆ ಸಂಬಳಕ್ಕೆ ದೊರಕುವುದರಿಂದಲೂ, ಅಲ್ಲಿನ ಹಣ U.S.ಡಾಲರ್ ಗೆ ಹೋಲಿಸಿದರೆ ಕಡಿಮೆಯಿರುವುದರಿಂದಲೂ ಇವರಿಗೆ ಲಾಭದಾಯಕವಾಗುತ್ತದೆ.
ವೈದ್ಯಕೀಯ ಪ್ರತಿಲೇಖನಕ್ರಿಯೆಯನ್ನು ಹೊರಗಿನವರಿಗೆ ನೀಡುವುದರ ಬಗ್ಗೆ ಬಿರುಸಾದ ವಿವಾದಗಳದ್ದಿವೆ. ಈ ವಿವಾದಗಳಿಗೆ ಪ್ರಮುಖವಾದ ಮೂರು ಕಾರಣಗಳೆಂದರೆ:
- MT ಯಲ್ಲಿ ನಿರತರಾಗಿರುವ ಅರ್ಧಕ್ಕೂ ಹೆಚ್ಚು ಮಂದಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಬದಲು ಗೃಹ-ಕಚೇರಿಗಳಿಂದಲೇ ಕಾರ್ಯವೆಸಗತೊಡಗಿದ್ದು, "ನ್ಯಾಷನಲ್" ಪ್ರತಿಲೇಖನ ಸಂಸ್ಥೆಗಳಲ್ಲಿ ಆಫ್-ಸೈಟ್ ಕೆಲಸ ಮಾಡುತ್ತಿದ್ದಾರೆ.
ಇಂತಹ ಯುನೈಟೆಡ್ ಸ್ಟೇಟ್ಸ್ ನ ನ್ಯಾಷನಲ್ ವ್ಯಕ್ತಿಗಳೇ ಹೆಚ್ಚಾಗಿ ಹೊರಗುತ್ತಿಗೆ ನೀಡಲು ಬಯಸಿ ಅಮೆರಿಕೇತರ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಗಳಿಗೆ ಔಟ್ ಸೋರ್ಸ್ ಮಾಡಲು ಕಾತುರರಾಗಿದ್ದಾರೆ. ಹೀಗೆ ಔಟ್ ಸೋರ್ಸ್ ಮಾಡುವಾಗ ಕೆಲವೊಮ್ಮೆ ಕಡಿಮೆ ಓದಿರುವ ಮತ್ತು ಕಡಿಮೆ ಸಂಬಳಕ್ಕೆ ದುಡಿಯುವ ಅಮೆರಿಕೇತರ MTಗಳಿಗೆ ಕೆಲಸ ಕೊಡುವುದರಿಂದ, ನ್ಯಾಷನಲ್ ನವರು ದೌರ್ಭಾಗ್ಯವಶಾತ್ ಅಮೆರಿಕದ ಪ್ರತಿಲೇಕನಕಾರರು(ಟ್ರ್ಯಾನ್ಸ್ ಕ್ರಿಪ್ಷನಿಸ್ಟ್), ಕೆಲಸ ತಮ್ಮ ಕೈಬಿಟ್ಟು ಕಡಿಮೆ ದರಕ್ಕೆ ದುಡಿಯುವ ಅನ್ಯರ ಪಾಲೆಗೆ ಹೋಗದಿರಲೆಂಬ ಉದ್ದೇಶದಿಂದ, ತಾವೂ ಕಡಿಮೆ ದರಕ್ಕೇ ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿಗೆ ದೂಡಿದ್ದಾರೆ. ಅಮೆರಿಕದ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಗಳಿಗೆ ಹೀಗೆ ಪ್ರತಿ ಸಾಲಿಗೆ ನೀಡುವ ದರವನ್ನು ಕಡಿಮೆಗೊಳಿಸಿದುದಲ್ಲದೆ,ಅಮೆರಿಕದ MTಗಳಿಗೆ IC (ಇಂಡಿಪೆಂಡೆಂಟ್ ಕಂಟ್ರಾಕ್ಟರ್ಸ್) ಅರ್ಥಾತ್ ಖಾಸಗಿ ಗುತ್ತಿಗೆದಾರರಿಗೆ ಹಣ ನೀಡುವಂತೆ ನೀಡಲಾಗುತ್ತದೆ; ಇದರಿಂದ ನ್ಯಾಷನಲ್ಸ್ ಗೆ ಕೆಲಸಗಾರರಿಗೆ ಮಾಡಬೇಕಾದ ವಿಮೆ ಮತ್ತು ನೀಡಬೇಕಾದ ಿತರೆ ಸೌಲಭ್ಯಗಳ ಬಾಬ್ತಿನ ಖರ್ಚು ಉಳಿದಂತಾಗುತ್ತದೆ. ವಿಷಾದಕರ ಸಂಗತಿಯೆಂದರೆ ನ್ಯಾಷನಲ್ಸ್ ನವರು ುನೈಟೆಡ್ ಸ್ಟೇಟ್ಸ್ ನ ರಾಜ್ಯಗಳ ಅರೋಗ್ಯ ಇಲಾಖೆಯ ಆಡಳಿತ ಮಂಡಳಿಗಳಿಂದ ಹಿಂದೆ ಅಮೆರಿಕದ ಪರಿಪೂರ್ಣ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಗಳಿಂದ ಕೆಲಸ ಮಾಡಿಸುತ್ತಿದ್ದಾಗ ಯಾವ ದರವನ್ನು ಪಡೆಯುತ್ತಿದ್ದರೋ ಈಗಲೂ, ಈಗೆ ಔಟ್ ಸೋರ್ಸ್ ಮಾಡಿದಾಗಲೂ, ಅದೇ ದರವನ್ನು ಆಗ್ರಹದಿಂದ ಪಡೆಯುತ್ತಿದ್ದಾರಾದರೂ ಅಮೆರಿಕೇತರ MTಗಳಿಗೆ ಕಡಿಮೆ ದರಕ್ಕೆ ಅಟಿ-ಗುತ್ತಿಗೆ ನೀಡಿ, ತನ್ಮೂಲಕ ಉಳಿದ ಮೊತ್ತವನ್ನು ತಮ್ಮ ಲಾಭಾಂಶವಾಗಿ ಹೊಂದುತ್ತಿದ್ದಾರೆ.
- ಯಾವ ಯಾವ ದೇಶಗಳಿಗೆ ಔಟ್ ಸೋರ್ಸ್ ಮಾಡಲಾಗುವುದೋ ಆಯಾ ದೇಶಗಳಲ್ಲಿ ರೋಗಿಯ ಮಾಹಿತಿಗಳ ಗೋಪ್ಯತೆಯನ್ನು ರಕ್ಷಿಸುವ ಕಾನೂನು ಇರದಿದ್ದಲ್ಲಿ ಯಾವ ದೇಶ ಇಂತಹ ಪ್ರತಿಲೇಖನಗೊಳ್ಳಬೇಕಾದ ಮಾಹಿತಿಗಳನ್ನು ಕಳುಹಿಸುತ್ತದೋ (ಅಂದರೆ ಅಮೆರಿಕ) ಅಲ್ಲಿನ ರೋಗಿಗಳ ಮಾಹಿತಿ ಬಹಿರಂಗಗೊಳ್ಳಬಹುದೆಂಬ ಆತಂಕವನ್ನು HIPAA (ಹೆಲ್ತ್ ಕೇರ್ ಇನ್ಪಾರ್ಮೇಷನ್ ಪೋರ್ಟೆಬಲಿಟಯ ಎಂಡ್ ಅಕೌಂಟೆಬಲಿಟಿ ಅಕ್ಟ್ ಅರ್ಥಾತ್ ಆರೋಗ್ಯಸೌಲಭ್ಯ ಮಾಹಿತಿ ರವಾನೆ ಮತ್ತು ಜವಾಬ್ದಾರಿ ಸಂಹಿತೆ) ಮಸೂದೆಗೆ ಔಟ್ ಸೋರ್ಸಿಂಗ್ ಪಡೆಯುವ ದೇಶಗಳು ಸಹಿ ಹಾಕುವ ಮೂಲಕ ಉಪಶಮನಗೊಳಿಸಿದವು. ಹೊರದೇಶಗಳಿಗೆ ಪ್ರತಿಲೇಖನಕ್ರಿಯೆಯನ್ನು ಕಳುಹಿಸುತ್ತಿರುವ ಕೆಲವು ರಾಷ್ಟ್ರಗಳೆಂದರೆ ಯುನೈಟೆಡ್ ಸ್ಟೇಟ್ಸ್,ಬ್ರಿಟನ್ ಮತ್ತು ಆಸ್ಟ್ರೇಲಿಯಾ ಮತ್ತು ಆ ಕೆಲಸಗಳನ್ನು ಪಡೆಯುವವು ಭಾರತ, ಫಿಲಿಫೈನ್ಸ್ ಮತ್ತು ಬಾರ್ಬಡಾಸ್[೩]
- ಪ್ರತಿಲೇಖನಗೊಂಡ ಲೇಖನಗಳ ಗುಣಮಟ್ಟದ ಬಗ್ಗೆ ಕಾಳಜಿ ಇದ್ದೇ ಇತ್ತು. ಎಷ್ಟೋ ಔಟ್ ಸೋರ್ಸ್ ಪಡೆದ ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಗಳಿಗೆ ಅದಕ್ಕೆ ಬೇಕಾದ ಮೂಲ ವಿದ್ಯಾರ್ಹತೆಯೇ ಇರುತ್ತಿರಲಿಲ್ಲವಾದ್ದರಿಂದ ಸುಮಾರಾದ ಗುಣಮಟ್ಟ ನೀಡುವುದೂ ಅಸಾಧ್ಯವಾಗಿತ್ತು, ಇನ್ನು ಈ ಉದ್ಯೋಗಕ್ಕೆ ಬೇಕಾದ ಹೆಚ್ಚಿನ ತರಬೇತಿಯಂತೂ ಇರದಿರುವುದು ಪ್ರತಿಲೇಖನದ ಗುಣಮಟ್ಟ ಪಾತಾಳ ತಲುಪುವಂತೆ ಆಗಿತ್ತು. ಬಹಳಷ್ಟು ವಿದೇಶೀ MTಗಳು ಇಂಗ್ಲಿಷ್ ಮಾತನಾಡಬಲ್ಲರಾದರೂ ಅವರಿಗೆ ಅಮೆರಿಕನ್ ವೈದ್ಯರು ಉಪಯೋಗಿಸುವ ನುಡಿಗಟ್ಟುಗಳು ಮತ್ತು/ಅಥವಾ ರೂಢಿಗತ ಭಾಷೆಯ ಗಂಧವಿರುವುದಿಲ್ಲ ಹಾಗೂ ಅಮೆರಿಕದ ಜನರು ಇಟ್ಟುಕೊಳ್ಳುವ ಹೆಸರುಗಳು ಮತ್ತು ಸ್ಥಳಗಳ ಹೆಸರುಗಳು ಸಹ ತಿಳಿದಿರುವುದಿಲ್ಲ.
ಉತ್ತಮ ಗುಣಮಟ್ಟದ ಬೋಧಪ್ರದವಾದ ತರಬೇತಿ ಕ್ರಮಗಳನ್ನು ಕೈಗೊಂಡುದರ ಪರಿಣಾಮವಾಗಿ, ಕಳೆದ ಕೆಲವು ವರ್ಷಗಳಲ್ಲಿ, ಭಾರತದ MT ಉದ್ಯೋಗವು ಅಮೆರಿಕದ MT ಗಳ ಮಟ್ಟಕ್ಕೆ ಸರಿಸಮನಾಗಿ ನಿಲ್ಲುವ ಹಂತ ತಲುಪಿದೆ.[೪]
ಔಟ್ ಸೋರ್ಸಿಂಗ್ ಪಡೆಯುವ ದೇಶಗಳಲ್ಲಿ ಭಾರತವು ಮೊದಲ ಸ್ಥಾನದಲ್ಲಿದ್ದು ಫಿಲಿಫೈನ್ಸ್ ನಂತರ ಇದೆ. ಇದಕ್ಕೆ ಕಾರಣ ಇಲ್ಲಿನ ಎಲ್ಲಾ ಸರ್ಕಾರೀ ವ್ಯವಹಾರಗಳಲ್ಲೂ ಇಂಗ್ಲಿಷ್ ಸಹ ಒಂದು ಆಧಿಕೃತ ಭಾಷೆಯಾಗಿ ಉಪಯೋಗಿಸಲ್ಪಡುವುದು ಮತ್ತು ಆಂಗ್ಲಭಾಷೆಯರಿತ ಹೆಚ್ಚು ವಿದ್ಯಾವಂತರಿರುವುದು ಹಾಗೂ ವೈದ್ಯಕೀಯ ಪ್ರತಿಲೇಖನದಲ್ಲಿ ಬರುವ ಅಮೆರಿಕನ್ನರ ನುಡಿಗಟ್ಟುಗಳು, ಪ್ರಾಂತೀಯ ಭಾಷೆ ಮತ್ತು ರೂಢಿಗತ ಭಾಷೆಗಳನ್ನು ಅರಿಯುವ ಸಾಮರ್ಥ್ಯ ಎಂಬ ಬಲವಾದ ಅಭಿಪ್ರಾಯವಿದೆ. ಇದು ಅಮೆರಿಕದ MTಗಳಿಗೆ ತಲೆನೋವಾಗಿ ಪರಿಣಮಿಸಿದೆ. HIPAA[೫] (ಹೆಲ್ತ್ ಕೇರ್ ಇನ್ಪಾರ್ಮೇಷನ್ ಪೋರ್ಟೆಬಲಿಟಯ ಎಂಡ್ ಅಕೌಂಟೆಬಲಿಟಿ ಅಕ್ಟ್ ಅರ್ಥಾತ್ ಆರೋಗ್ಯಸೌಲಭ್ಯ ಮಾಹಿತಿ ರವಾನೆ ಮತ್ತು ಜವಾಬ್ದಾರಿ ಸಂಹಿತೆ) ವು MT ಕೆಲಸವನ್ನು ಔಟ್ ಸೋರ್ಸ್ ಮಾಡುವುದರ ಮೇಲ್ವಿಚಾರಣೆ ಹೊಂದಿದೆ. HIPAA ಕಾಯಿದೆಯನುಗುಣವಾಗಿ, ಕಾರ್ಯಸಂಬಂಧಿತ ರಕ್ಷಣೆ ಮತ್ತು ಗೋಪ್ಯತೆಯ ಮಟ್ಟವನ್ನು ಕಾಯ್ದುಕೊಳ್ಳಲು, ಈ ಕೆಲಸ ಪಡೆದ ಕಂಪನಿಗಳು ಬಿಗಿಯಾದ ನಿಯಮಗಳನ್ನು ಪಾಲಿಸಲು ಆದೇಶ ಹೊಂದಿವೆ.
ವೈದ್ಯಕೀಯ ಪ್ರತಿಲೇಖನ ಭವಿಷ್ಯದಲ್ಲಿ
[ಬದಲಾಯಿಸಿ]ವೈದ್ಯಕೀಯ ಪ್ರತಿಲೇಖನ ಉದ್ಯಮವು ನಿರಂತರವಾಗಿ ಬದಲಾವಣೆಗಳನ್ನು ಹೊಂದುತ್ತಲೇ ಸಾಗಬೇಕಾತ್ತದೆ. ನೂತನ ಹಾಗೂ ಮುಂದುವರೆದ ತಾಂತ್ರಿಕ ಆವಿಷ್ಕಾರಗಳು, ಹೆಚ್ಚಿದ ಅಥವಾ ಬದಲಾದ ಕೆಲಸದ ಹರಿವು, ನಿಯಮಗಳು ಮುಂತಾದವುಗಳು ಇವಕ್ಕೆ ಕಾರಣವೂ, ಪೂರಕವೂ ಆಗುತ್ತವೆ. ಎಲೆಕ್ಟ್ರಾನಿಕ್ ರೂಪದಲ್ಲಿ ರೋಗಿಗಳ ದಾಖಲೆಗಳನ್ನು ಸಂಗ್ರಹಿಸುವುದು ಕಾಲಕ್ರಮೇಣ ದಾಖಲೆಗಳನ್ನು ಶೇಖರಿಸುವ/ಸಂಗ್ರಹಿಸುವ ವಿಧಾನಗಳು ಕಾಯಿದೆ ಮತ್ತು ನಿಯಮಗಳಿಗೆ ಅನುಗುಣವಾಗಿಯೋ ಅಥವಾ ವೈಯುಕ್ತಿಕ ವಾಂಛೆಯ ಕಾರಣದಿಂದಲೋ ಬದಲಾಗುವುದರ ಸೂಚನೆ ನೀಡುತ್ತದೆ. ಇತ್ತೀಚಿನವರೆಗೆ MTಯವರು ಅನುಸರಿಸಬಾಕಾದ ಕಟ್ಟಲೆಗಳಾಗಲೀ, ಸೂತ್ರಗಳಾಗಲೀ ಇರಲಿಲ್ಲ. ಮೊದಲು HIPAA(ಹೆಲ್ತ್ ಕೇರ್ ಇನ್ಪಾರ್ಮೇಷನ್ ಪೋರ್ಟೆಬಲಿಟಯ ಎಂಡ್ ಅಕೌಂಟೆಬಲಿಟಿ ಅಕ್ಟ್ ಅರ್ಥಾತ್ ಆರೋಗ್ಯಸೌಲಭ್ಯ ಮಾಹಿತಿ ರವಾನೆ ಮತ್ತು ಜವಾಬ್ದಾರಿ ಸಂಹಿತೆ) ಜಾರಿಗೆ ಬಂದಿತು. ಮೊನ್ನೆಮೊನ್ನೆಯೂ ಸಹ "ಸರ್ವಜ್ಞರು" ಎಂದು ಕರೆಸಿಕೊಳ್ಳುವವರು HIPAA ಕಾಯಿದೆಯು ವೈದ್ಯಕೀಯ ಪ್ರತಿಲೇಖನಕ್ರಿಯೆಯ ಉದ್ಯೋಗದ ಮೇಲೆ ಯಾವುದೇ ಪರಿಣಾಮ ಬೀರದೆಂದು ಸಾರಿದ್ದರು. ಅದನ್ನು ನಿರಾಕರಿಸಿಯೋ ಅಥವಾ ಅದರ ಅರಿವೇ ಇಲ್ಲದೆಯೋ ಹಲವಾರು ಟ್ರ್ಯಾನ್ಸ್ ಕ್ರಿಪ್ಷನಿಸ್ಟ್ ಗಳು ಹಾಗೂ ಕಂಪನಿಗಳು ತಾವು ಹೇಗೆ ಕಾರ್ಯವೆಸಗುತ್ತಿದ್ದವೋ ಹಾಗೆಯೇ ಮುಂದುವರೆಸುತ್ತಿವೆ. ಹಲವಾರು ಇಂತಹ ಸೇವೆ ನೀಡುವವರು ಬಹುತೇಕ ಪ್ರತಿಲೇಖನ ನಿರತ ಉದ್ಯೋಗ ಕೇಂದ್ರಗಳಲ್ಲಿ ಬಹುಪಾಲು ಕೆಂದ್ರಗಳು ಈ ಕ್ಷೇತ್ರ ಬೇಡುವ ಹಲವಾರು ಅಧಿಸೂಚನೆಗಳನ್ನು ನಿಭಾಯಿಸಲು ಆಗದು;ಸಂಪರ್ಕ ಸಾಧನಗಳು, ನಿಯಮಗಳು, ಕ್ರಮಗಳು ಮತ್ತು ರೋಗಿಯ ಬಗ್ಗೆ ಇರುವ ಮಾಹಿತಿಯ ಪರೀಕ್ಷಣೆಗೊಂಡ ದಾಖಲೆಗಳನ್ನು ಹೊಂದಲು ಬೇಕಾದ ಸಂಪರ್ಕಸಾಧನಗಳಾಗಲೀ, ಪರಿಕರಗಳಾಗಲೀ ಇವರ ಅಳವಿಗೆ ಮೀರಿದ್ದಾಗಿರಬಹುದು. ತೆಗೆದುಕೊಳ್ಳಬೇಕಾದ ಭದ್ರತಾಕ್ರಮಗಳನ್ನು ತೆಗೆದುಕೊಳ್ಳದೆಯೇ ಹಾಗೂ ಪ್ರತಿಲೇಖನಕ್ರಿಯೆಗೆ ಬೇಕಾದ ಜ್ಞಾನಸಂಪತ್ತು ಹಾಗೂ ಮೂಲ ಸಾಧನಗಳಿಲ್ಲದಿದ್ದರೂ ಹಲವಾರು ಉದ್ಯೋಗನಿರತ ಕಂಪನಿಗಳು ತಾವು ಅದಕ್ಕೆ ಅರ್ಹರಾಗಿದ್ದೇವೆನ್ನುತ್ತಾ ಅವರ ವ್ಯವಹಾರ ಸಂಬಂಧಿಗಳೊಂದಿಗೆ ಒಪ್ಪಂದ-ಕರಾರು ಪತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಅವರಿಲ್ಲದೆ ವೈದ್ಯಕೀಯ ಪ್ರತಿಲೇಖನ ಪ್ರಪಂಚವು ಇತರೆ ವಿಧಿವಿಧಾನಗಳಿಗೆ ಹೊಂದಿಕೊಳ್ಳಲಾಗದೆಂಬ ಅಭಿಪ್ರಾಯದಲ್ಲಿ ಕೆಲವರು ತಮ್ಮ ತಿಳಿವಳಿಕೆ ಇಲ್ಲದ ಸ್ಥಿತಿಯಲ್ಲೂ ಮತ್ತು ಕೆಲವರು ಅರಿಯದವರಂತೆಯೇ ಸೋಗು ಹಾಕುತ್ತಲೂ ಮುಂದುವರಿದಿದ್ದಾರೆ. ವಾಸ್ತವವಾಗಿ ಈ ಉದ್ಯೋಗ ನೀಡುವವರು HIPAA ಕಾಯಿದೆಗೆ ಒಡಂಬಡದವರನ್ನು ತೆಗೆದುಹಾಕಿ ಬೇರೆ ಗುತ್ತಿಗೆದಾರರಿಗೆ ಕೆಲಸ ಒಪ್ಪಿಸುತ್ತಾರೆ. ರೋಗಿಯ ಕ್ಷೇಮದ ಬಗ್ಗೆ ಕಾಳಜಿ, ಕಾರ್ಯಕ್ಷಮತೆಯಲ್ಲಿ ವೃದ್ಧಿ ಮತ್ತು ದರದಲ್ಲಿ ಕಡಿತಗಳನ್ನೂ ಆಗಾಗ್ಗೆ ಉದ್ಯೋಗ ನೀಡಿದವರು ಆಗ್ರಹದಿಂದ HIPAA ನಿಯಮಾವಳಿಗಳಿಗೆ ಸೇವೆ ನೀಡುವವರೂ (ಗುತ್ತಿಗೆದಾರರೂ) ಹಾಗೂ ಆರೋಗ್ಯಸೌಕರ್ಯ ನೀಡಲು ನಿರತರಾದವರೂ ಬದ್ಧರಾಗಿರಲೇಬೇಕಾದುದು ಅತ್ಯವಶ್ಯ.
ಆಕರಗಳು
[ಬದಲಾಯಿಸಿ]- ↑ ಅಪ್ರೂವ್ಡ್ ಮೆಡಿಕಲ್ ಟ್ರ್ಯಾನ್ ಸ್ಕ್ರಿಪ್ಷನ್ ಎಜುಕೇಷನ್ ಪ್ರೋಗ್ರಾಮ್ಸ್ Archived 2009-07-18 ವೇಬ್ಯಾಕ್ ಮೆಷಿನ್ ನಲ್ಲಿ., ದ ಅಸೋಸಿಯೇಷನ್ ಫಾರ್ ಹೆಲ್ತ್ ಕೇರ್ ಡಾಕ್ಯುಮೆಂಟೇಷನ್ ಇಂಟೆಗ್ರಿಟಿ (AHDI)ಯಿಂದ.
- ↑ ದ MT ಸ್ಕೂಲ್ ವಾರ್ಸ್ Archived 2009-08-23 ವೇಬ್ಯಾಕ್ ಮೆಷಿನ್ ನಲ್ಲಿ., MT ಎಕ್ಸ್ ಚೇಂಜ್ ಯಿಂದ
- ↑ "Barbados Looks to Become Medical Transcription Capital". Caribbean Press Releases. 2009-01-28. Archived from the original on 2010-05-28. Retrieved 2010-02-11.
Government is repositioning Barbados to become the medical transcription capital of the Caribbean. This was disclosed yesterday by Prime Minister, David Thompson, as he revealed plans to boost training in this area and to woo more businesses desirous of setting up additional facilities here.
- ↑ "ವೈಟ್ ಕಾಲರ್ ಜಾಬ್ಸ್ ಒನ್ಸ್ ಔಟ್ ಸೈಡ್ ದ ಗ್ಲೋಬಲ್ ಎಕಾನಮಿ ಆರ್ ಹೆಡಿಂಗ್ ಓವರ್ ಸೀಸ್". Archived from the original on 2010-05-28. Retrieved 2010-02-11.
- ↑ "HIPAA.org --ದ ಹೆಲ್ತ್ ಕೇರ್ ಇನ್ಷುರೆನ್ಸ್ ಪೋರ್ಟಬಲಿಟಿ ಎಂಡ್ ಅಕೌಂಟೆಬಲಿಟಿ ಆಕ್ಟ್". Archived from the original on 2010-02-14. Retrieved 2010-02-11.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles needing expert attention with no reason or talk parameter
- Articles needing expert attention from November 2008
- All articles needing expert attention
- Articles lacking sources from December 2006
- Articles with invalid date parameter in template
- All articles lacking sources
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- ವೈದ್ಯಕೀಯ ವಿಷಯ-ವಿಚಾರಗಳು
- ಆರೋಗ್ಯಸೇವಾ ಉದ್ಯೋಗಗಳು
- ಮಾಹಿತಿ ಗೋಪ್ಯತೆ
- ವೈದ್ಯಕೀಯ