ವಿಷಯಕ್ಕೆ ಹೋಗು

ಉಕ್ತಲೇಖನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಕ್ತಲೇಖನ ಎಂದರೆ ಮಾತನಾಡಿದ ಪಠ್ಯದ ಪ್ರತಿಲೇಖನ: ಒಬ್ಬ ವ್ಯಕ್ತಿಯು ಮಾತನಾಡುತ್ತಾನೆ ಮತ್ತು ಇನ್ನೊಬ್ಬನು ಮಾತನಾಡಿದ ಶಬ್ದಗಳನ್ನು ಬರೆದುಕೊಳ್ಳುತ್ತಾನೆ. ಹಲವು ಭಾಷೆಗಳ ವಕ್ತೃಗಳಲ್ಲಿ, ಉಕ್ತಲೇಖನವನ್ನು ಭಾಷಾ ಕೌಶಲದ ಪರೀಕ್ಷೆಯಾಗಿ ಬಳಸಲಾಗುತ್ತದೆ, ಮತ್ತು ಇದು ಆಂಗ್ಲ ಮಾತನಾಡುವ ವಿಶ್ವದಲ್ಲಿನ ಕಾಗುಣಿತ ಸ್ಪರ್ಧೆಗಳನ್ನು ಹೋಲುತ್ತದೆ. ಭಾಷಾ ಕೌಶಲಗಳನ್ನು ಕಲಿಸುವುದಕ್ಕೆ ಆನುಷಂಗಿಕವಾಗಿ, ಉಕ್ತಲೇಖನ ಅಭ್ಯಾಸವನ್ನು ಸಾಹಿತ್ಯಿಕ ಕೃತಿಗಳಿಗೆ ವಿಧ್ಯಾರ್ಥಿಗಳನ್ನು ಪರಿಚಯಿಸಲು, ಮತ್ತು ನೀತಿಗಳನ್ನು ನಾಟುವಂತೆ ತಿಳಿಸಲು ಕೂಡ ಬಳಸಲಾಗಿದೆ.[]

ಈ ಅಭ್ಯಾಸಕ್ಕೆ ಕನಿಷ್ಠಪಕ್ಷ ಇಬ್ಬರು ವ್ಯಕ್ತಿಗಳು ಬೇಕಾಗುತ್ತದೆ: ವಾಚಕ ಮತ್ತು ದಾಖಲೆದಾರ. ವಾಚಕನು ಆಯ್ದ ಪಠ್ಯವನ್ನು ಸಮವಾಗಿ ಮತ್ತು ಸ್ಪಷ್ಟವಾಗಿ ಕೇಳಿಸುವಷ್ಟು ಧ್ವನಿಶಕ್ತಿಯಲ್ಲಿ ಓದುತ್ತಾನೆ, (ಮೂರರಿಂದ ಹತ್ತು ಅಥವಾ ಅಗತ್ಯವಿದ್ದಷ್ಟು) ಬಹು ಶಬ್ದಗಳ ತುಣುಕಗಳಾಗಿ. ವಾಚಕನು ಮುಂದುವರಿದಂತೆ, ಪಠ್ಯವನ್ನು ದಾಖಲೆದಾರರು ನಕಲು ಮಾಡುತ್ತಾರೆ. ಮೊದಲಿಗೆ ವಾಚಕನು ನಿಧಾನವಾಗಿ ಪ್ರತಿ ತುಣುಕನ್ನು ಓದುತ್ತಾನೆ, ನಂತರ ಒಮ್ಮೆ ಅಥವಾ ಎರಡು ಬಾರಿ ಸಾಮಾನ್ಯ ವೇಗದಲ್ಲಿ ಪುನರಾವರ್ತಿಸುತ್ತಾನೆ. ಈ ರೀತಿಯಲ್ಲಿ ಒಮ್ಮೆ ಆಯ್ದ ಪಠ್ಯವನ್ನು ಕೊನೆವರೆಗೆ ಓದಲಾದ ನಂತರ, ವಾಚಕನು ಪಠ್ಯವನ್ನು ಸಾಮಾನ್ಯ ವೇಗದಲ್ಲಿ ಮತ್ತೊಮ್ಮೆ ಆರಂಭದಿಂದ ಅಂತ್ಯದವರೆಗೆ ಓದುತ್ತಾನೆ. ಆಮೇಲೆ ದಾಖಲೆದಾರರಿಗೆ ತಮ್ಮ ಕೆಲಸವನ್ನು ಮತ್ತೊಮೆ ಓದಲು ಹಾಗೂ ಎಲ್ಲೆಲ್ಲಿ ಅಗತ್ಯವಿರುತ್ತದೊ ಅಲ್ಲಿ ಸಂಪಾದಿಸಲು ಸಮಯವಿರುತ್ತದೆ. ಜ್ಞಾನ, ಗ್ರಹಿಕೆ ಮತ್ತು ಅನ್ವಯದ ಅಭ್ಯಾಸ ಕೊನೆಗೊಳ್ಳುತ್ತದೆ.

ಆಯ್ದ ಪಠ್ಯದ ಪ್ರಕಟನದ ನಂತರ, ಈಗ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಹಂತವು ಮುಂದೆ ತಿಳಿಸಿದಂತೆ ಶುರುವಾಗುತ್ತದೆ. ಈ ಪ್ರಕ್ರಿಯೆಗೆ ಕೆಂಪು ಲೇಖನಿ ಬೇಕಾಗುತ್ತದೆ, ಮತ್ತು ಇದನ್ನು ದಾಖಲೆದಾರರ ಪ್ರೌಢತೆಗೆ ಅನುಗುಣವಾಗಿ, ಅಥವಾ ಅಭಿರುಚಿಗೆ ತಕ್ಕಂತೆ ಬದಲಿಸಬಹುದು: ವಾಚಕನು ದಾಖಲೆದಾರರ ಲಿಖಿತ ಕಾರ್ಯವನ್ನು ಸಂಗ್ರಹಿಸಿ ಮೌಲ್ಯಮಾಪಿಸುತ್ತಾನೆ; ಆಯ್ಕೆಯನ್ನು ದಾಖಲೆದಾರರಿಗೆ ಕೊಡಲಾಗುತ್ತದೆ ಮತ್ತು ಅವರೇ ತಮ್ಮ ಶ್ರೇಣಿ ನೀಡಬೇಕೆಂದು ನಿರೀಕ್ಷಿಸಲಾಗುತ್ತದೆ.

ನಂತರದ ಸ್ವ ಮೌಲ್ಯಮಾಪನ ಪ್ರಕ್ರಿಯೆಯು ಕ್ಷಿಪ್ರವಾಗಿರುತ್ತದೆ, ಆದರೆ ಕೆಲವೊಮ್ಮೆ ಎರಡು ಕಾರಣಗಳಿಂದಾಗಿ ಹೆಚ್ಚು ಕ್ಲಿಷ್ಟವಾಗಿರುತ್ತದೆ: ಒಂದು, ದಾಖಲೆದಾರನ ಕೈಬರಹ ಮತ್ತು ಮೌಲ್ಯಮಾಪಕನ ಕೈಬರಹಕ್ಕೆ ವ್ಯತ್ಯಾಸವಿರುವುದಿಲ್ಲ; ಮತ್ತು ಎರಡು, ಮೌಲ್ಯಮಾಪಕನ ನಿಷ್ಠುರತೆಯು ಸಂದೇಹದಲ್ಲಿರುತ್ತದೆ ಏಕೆಂದರೆ ಅದೇ ವ್ಯಕ್ತಿಯನ್ನು (ಅಥವಾ ವ್ಯಕ್ತಿಗಳ ವರ್ಗವನ್ನು) ಮೌಲ್ಯಮಾಪನಕ್ಕೆ ಬಳಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Goldrich, Leon W.; Jones, Olivia Mary (1904). School Work. Editors of School Work. pp. 62–86.