ವಿಷಯಕ್ಕೆ ಹೋಗು

ಪಾರ್ಸೆಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖಗೋಳದ ಅಗಾಧ ದೂರಗಳಿಗೆ ಜ್ಯೋತಿರ್ವರ್ಷದ ಅಳತೆಯೂ ಚಿಕ್ಕದಾಗುತ್ತದೆ. ಇದಕ್ಕಾಗಿ ಪಾರ್ಸೆಕ್ ಎಂಬ ಮತ್ತೊಂದು ಮಾನವನ್ನು ಬಳಸಲಾಗುತ್ತದೆ. ಪ್ಯಾರಲಾಕ್ಸ್-ಸೆಕೆಂಡ್ ಸಂಯುಕ್ತ ಪದದ ಸಂಕ್ಷೇಪ ರೂಪವೇ ಪಾರ್ಸೆಕ್.

ಒಂದು ಖಗೋಳಮಾನ ಎಂದರೆ ಸೂರ್ಯ ಮತ್ತು ಭೂಮಿಯ ಸರಾಸರಿ ಅಂತರವು ದೂರದಲ್ಲಿನ ಒಂದು ನಕ್ಷತ್ರದಲ್ಲಿ 1" (ಒಂದು ಆರ್ಕ್‌ಸೆಕೆಂಡ್) ನಷ್ಟು ಕೋನವನ್ನು ರಚಿಸಿದರೆ ಆ ಅಂತರವನ್ನು ಒಂದು ಪಾರ್ಸೆಕ್ ಎನ್ನಲಾಗುತ್ತದೆ.[] ಭೂಕಕ್ಷೆಯ ತ್ರಿಜ್ಯ ಒಂದು ನಕ್ಷತ್ರದಲ್ಲಿ ಉಂಟುಮಾಡುವ ಕೋನಕ್ಕೆ ಆ ನಕ್ಷತ್ರದ ದಿಗ್ವ್ಯತ್ಯಾಸ ಎಂದು ಹೆಸರು. ಈ ಕೋನವು 0.5" ಗಳಾದರೆ ಆ ದೂರವು 2 ಪಾರ್ಸೆಕ್ ಆಗುತ್ತದೆ.

ಆದ್ದರಿಂದ ಕೇವಲ ಸಂಸ್ಕರಿಸದ ವೀಕ್ಷಣಾ ದತ್ತಾಂಶದೊಂದಿಗೆ ಖಗೋಳ ದೂರಗಳ ಖಗೋಳಶಾಸ್ತ್ರಜ್ಞರ ಲೆಕ್ಕಾಚಾರಗಳನ್ನು ಸುಲಭಗೊಳಿಸಲು ಇದನ್ನು ವ್ಯಾಖ್ಯಾನಿಸಲಾಗಿದೆ. ಇದು ಖಗೋಳಶಾಸ್ತ್ರ ಮತ್ತು ಖಭೌತ ಶಾಸ್ತ್ರದಲ್ಲಿ ಆಯ್ದುಕೊಳ್ಳಲಾದ ಏಕಮಾನವಾಗಿದೆ. ಬಾಹ್ಯಾಕಾಶದಲ್ಲಿ ದೀರ್ಘೀಕೃತ ಲಂಬಕೋನ ತ್ರಿಭುಜವನ್ನು ಕಲ್ಪಿಸಿಕೊಂಡು, ಚಿಕ್ಕ ಭುಜದ ಅಳತೆ ಒಂದು ಖ.ಮಾ ಆಗಿದ್ದರೆ, ಮತ್ತು ಆ ಭುಜಕ್ಕೆ ವಿರುದ್ಧವಾದ ಶೃಂಗವು ರೂಪಿಸುವ ಕೋನದ ಅಳತೆ ಒಂದು ಆರ್ಕ್‌ಸೆಕೆಂಡ್ ಆಗಿದ್ದರೆ, ಒಂದು ಪಾರ್ಸೆಕ್ ಪಕ್ಕದ ಭುಜದ ಉದ್ದವೆಂದು ವ್ಯಾಖ್ಯಾನಿಸಲ್ಪಡುತ್ತದೆ. ಖಭೌತಶಾಸ್ತ್ರದಲ್ಲಿ ದೂರದ ನಿರ್ಧಾರಕ್ಕೆ ಲಂಬನ ವಿಧಾನವು ಮೂಲಭೂತ ಮಾಪನಾಂಕ ಕ್ರಮವಾಗಿದೆ.

1 ಪಾರ್ಸೆಕ್ = 3.26 ಜ್ಯೋತಿರ್ವರ್ಷಗಳು

ಒಂದು ಆರ್ಕ್ ಸೆಕೆಂಡ್: ಒಂದು ವೃತ್ತದಲ್ಲಿ 360º (ಕೋನ ಅಥವಾ ಡಿಗ್ರಿ)ಗಳಿವೆ. ಒಂದು ಕೋನದ 1/60 ಭಾಗಕ್ಕೆ 1' (ಆರ್ಕ್ ಮಿನಿಟ್) ಎಂದು ಹೆಸರು. ಒಂದು ಆರ್ಕ್ ಮಿನಿಟಿನ 1/60 ಭಾಗಕ್ಕೆ 1" (ಆರ್ಕ್ ಸೆಕೆಂಡ್) ಎಂದು ಹೆಸರು. ಹೀಗಾಗಿ 1º=60'=3600". ಒಂದು ಆರ್ಕ್ ಸೆಕೆಂಡ್ ಎಂದರೆ 1ºಯ 3600 ನೇ ಒಂದು ಭಾಗ.

ಕೆಳಗಿನ ಕೋಷ್ಟಕ ದಿಗ್ವ್ಯತ್ಯಾಸ-ಪಾರ್ಸೆಕ್ ಸಂಬಂಧವನ್ನು ತೋರಿಸುತ್ತದೆ.

ಭೂಮಿಯಿಂದ ನಕ್ಷತ್ರದದೂರ (ಪಾರ್ಸೆಕ್) = 1/ದಿಗ್ವ್ಯತ್ಯಾಸ (ಕೋನ ಆರ್ಕ್ಸಕೆಂಡ್)

ನಕ್ಷತ್ರಗಳ ದೂರ ಏರಿದಂತೆ ಅವುಗಳ ದಿಗ್ವ್ಯತ್ಯಾಸ ತಗ್ಗುತ್ತದೆ ಮತ್ತು ಏರುತ್ತದೆ.

1 ಪಾರ್ಸೆಕ್ = (ಸುಮಾರು) 19.16 ದಶಲಕ್ಷ ದಶಲಕ್ಷ ಮೈಲಿಗಳು

     = (ಸುಮಾರು) 3.26 ಬೆ.ವ.

ಉಲ್ಲೇಖಗಳು

[ಬದಲಾಯಿಸಿ]
  1. "Cosmic Distance Scales – The Milky Way". Retrieved 24 September 2014.


ಹೊರಗಿನ ಕೊಂಡಿಗಳು

[ಬದಲಾಯಿಸಿ]