ವಿಷಯಕ್ಕೆ ಹೋಗು

ತುಕ್ಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಬ್ಬಿಣದ ಸರಪಳಿಯ ಮೇಲೆ ತುಕ್ಕು
ತುಕ್ಕು ಕಬ್ಬಿಣವನ್ನು ಪೂರ್ಣವಾಗಿ ನಾಶಮಾಡುವುದು.

ತುಕ್ಕು ಕಬ್ಬಿಣದ ಹಲವು ಆಕ್ಸೈಡ್‌ಗಳಿಗೆ ಬಳಸಲಾಗುವ ಒಂದು ಸಾಮಾನ್ಯ ಪದ. ಕಬ್ಬಿಣವು ನೀರು ಅಥವಾ ತೇವಾಂಶವಿರುವ ಪರಿಸರಗಳಲ್ಲಿ ಆಮ್ಲಜನಕದೊಂದಿಗೆ ರಾಸಾಯನಿಕ ಕ್ರಿಯೆ ನಡೆಸುವುದರ ಫಲಸ್ವರೂಪವೇ ತುಕ್ಕು. ರಸಾಯನಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ ತುಕ್ಕು Fe2O3·nH2O ಮತ್ತು (FeO(OH), Fe(OH)3. ಕಬ್ಬಿಣ ಮತ್ತು ಅದರ ಮಿಶ್ರಲೋಹಗಳು ( ಉದಾ. ಉಕ್ಕು) ಈ ರಾಸಾಯನಿಕೆ ಕ್ರಿಯೆಗೆ ಒಳಪಟ್ಟು ನಶಿಸಿಹೋಗುತ್ತವೆ. ಇತರ ಕೆಲ ಲೋಹಗಳು ಸಹ ಇಂತಹ ಕ್ರಿಯೆಯ ಪರಿಣಾಮವನ್ನು ಅನುಭವಿಸಿದರೂ ಅದನ್ನು ತುಕ್ಕು ಎಂದು ಕರೆಯಲಾಗುವುದಿಲ್ಲ. ತೇವಾಂಶ ಮತ್ತು ಆಮ್ಲಜನಕವಿರುವ ಪರಿಸರದಲ್ಲಿ ಕಬ್ಬಿಣದ ಯಾವ ರಾಶಿಯಾದರೂ ತುಕ್ಕು ಹಿಡಿಯಲ್ಪಟ್ಟು ಪೂರ್ಣವಾಗಿ ನಾಶವಾಗುತ್ತದೆ. ನೀರಿನಲ್ಲಿ ಉಪ್ಪಿನ ಅಂಶವಿದ್ದರೆ (ಉದಾ. ಸಮುದ್ರದ ನೀರು) ತುಕ್ಕು ಹಿಡಿಯುವಿಕೆಯ ಕ್ರಿಯೆ ಇನ್ನಷ್ಟು ತೀವ್ರವಾಗಿರುತ್ತದೆ. ತುಕ್ಕು ಹಿಡಿತಯುವಿಕೆಯನ್ನು ತಡೆಯಲು ಹಲವು ವಿಧಾನಗಳಿವೆ. ಉಕ್ಕನ್ನು ಸ್ಟೈನ್‌ಲೆಸ್ ಸ್ಟೀಲ್ ಆಗಿ ಪರಿವರ್ತಿಸುವುದು ಒಂದು ಉಪಾಯ. ಉಳಿದಂತೆ ಸತುವಿನ ಲೇಪನ ( ಗ್ಯಾಲ್ವನೈಸೇಷನ್ ) ಕೂಡ ಕಬ್ಬಿಣವನ್ನು ತುಕ್ಕು ಹಿಡಿಯದಂತೆ ಕಾಪಾಡಿಕೊಳ್ಳುವ ಒಂದು ಮಾರ್ಗೋಪಾಯವಾಗಿದೆ.

ತುಕ್ಕಿನಿಂದಾಗಿ ಶಕ್ತಿಹೀನವಾಗಿ ಮುರಿದುಬಿದ್ದ ಒಂದು ಕಬ್ಬಿಣದ ಸೇತುವೆ


ಬಾಹ್ಯ ಸಂಪರ್ಕಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ತುಕ್ಕು&oldid=1055774" ಇಂದ ಪಡೆಯಲ್ಪಟ್ಟಿದೆ